Skip to main content

ಇಮಾಂ ಬುಖಾರಿ ರ.ಅ..ಭಾಗ -01

ಇಮಾಮ್ ಬುಖಾರಿ (ರದಿಯಲ್ಲಾಹು ಅನ್ಹು) - ಭಾಗ-1

✍ ರಿಯಾಝ್ ಮಲಾರ್
***--------------------****---------------------***

ಜಗತ್ ಪ್ರಸಿದ್ಧ ಹದೀಸ್ ವಿದ್ವಾಂಸರಾದ ಇಮಾಮ್ ಅಬೂ ಅಬ್ದುಲ್ಲಾಹ್ ಮುಹಮ್ಮದ್ ಬಿನ್ ಇಸ್ಮಾಈಲ್ ಬಿನ್ ಅಲ್ ಮುಘೀರ ಅಲ್ ಬುಖಾರಿ(ಇಮಾಮ್ ಬುಖಾರಿ) ರದಿಯಲ್ಲಾಹು ಅನ್ಹು ಹಿಜಿರ 194ರ ಶವ್ವಾಲ್ 13 ರಂದು ಉಝ್ಬೆಕಿಸ್ತಾನದ ಬುಖಾರದಲ್ಲಿ ಜನಿಸಿದರು. ತಂದೆ ಇಸ್ಮಾಈಲ್ ಇಬ್ನ್ ಇಬ್ರಾಹಿಂ ಇಬ್ನ್ ಮುಘಿರಾ ಅಲ್ ಜಾಫರಿ ರದಿಯಲ್ಲಾಹು ಅನ್ಹು ದೊಡ್ಡ ಮುಹದ್ದಿಸ್ ಆಗಿದ್ದರು. ಸಣ್ಣ ಪ್ರಾಯದಲ್ಲಿಯೇ ತಂದೆಯನ್ನು ಕಳೆದು ಕೊಂಡ ಇಮಾಮ್ ಬುಖಾರಿ ರದಿಯಲ್ಲಾಹು ಅನ್ಹು ತನ್ನ ತಾಯಿಯ ಹಾರೈಕೆಯಲ್ಲಿಯೇ ಬೆಳೆದರು.
ಇಮಾಮ್ ಬುಖಾರಿ ರದಿಯಲ್ಲಾಹು ಅನ್ಹು ಸಣ್ಣ ವಯಸ್ಸಿನಲ್ಲಿಯೇ ತನ್ನ ಕಣ್ಣಿನ ದೃಷ್ಟಿಯನ್ನು ಕಳೆದುಕೊಂಡಿದ್ದರು. ತನ್ನ ಮಗನ ಕಣ್ಣಿನ ದೃಷ್ಟಿ ಪುನರ್‌ಸ್ಥಾಪಿಸಲು ತಾಯಿಯು ಎಲ್ಲಾ ಪ್ರಸಿದ್ಧ ವೈದ್ಯರ ಬಳಿಗೆ ಕರೆದು ಕೊಂಡು ಹೋಗಿಯೂ ಪ್ರಯೋಜನವಾಗಿಲ್ಲ. ಆಕೆಯು ರಾತ್ರಿಯಲ್ಲಿ ನಮಾಝ್ ನಿರ್ವಹಿಸಿ ತನ್ನ ಎರಡು ಕೈಗಳನ್ನು  ಆಕಾಶಕ್ಕೆ ಚಾಚಿ, ಕಣ್ಣೀರಧಾರೆಯನ್ನು ಸುರಿಸುತ್ತಾ ಅಲ್ಲಾಹನಲ್ಲಿ ಪ್ರಾರ್ಥಿಸಿದರು. ಆಕೆಯ ಪ್ರಾರ್ಥನೆಯನ್ನು ಅಲ್ಲಾಹನು ಸ್ವೀಕರಿಸಿದನು. ಒಂದು ರಾತ್ರಿ ಕನಸಿನಲ್ಲಿ ಪ್ರವಾದಿ ಇಬ್ರಾಹಿಂ ಅಲೈಹಿಸ್ಸಲಾಂ ರವರು ಬಂದು "ಅಲ್ಲಾಹನು ನಿಮ್ಮ ಪ್ರಾರ್ಥನೆಯ ಫಲವಾಗಿ ಮಗುವಿನ ದೃಷ್ಟಿಯನ್ನು ಮರುಸ್ಥಾಪಿಸಿದ್ದಾನೆ" ಎಂದು ಹೇಳಿದರು. ಮಗನ ಕಣ್ಣಿನ ದೃಷ್ಟಿ ಬಂದಾಗ ತಾಯಿಯ ಸಂತೋಷಕ್ಕೆ ಪಾರವೇ ಇರಲಿಲ್ಲ.

ಇಮಾಮ್ ಬುಖಾರಿ ರದಿಯಲ್ಲಾಹು ಅನ್ಹು ರವರು ಇಮಾಮ್ ಅಹ್ಮದ್ ಬಿನ್ ಹಂಬಲ್ ರದಿಯಲ್ಲಾಹು ಅನ್ಹು, ಯಾಹ್ಯಾ ಇಬ್ನ್ ಮಈನ್ ರದಿಯಲ್ಲಾಹು ಅನ್ಹು, ಅಲೀ ಇಬ್ನ್ ಅಲ್ ಮದಿನಿ ರದಿಯಲ್ಲಾಹು ಅನ್ಹು, ಇಶಾಕ್ ಇಬ್ನ್ ರಹ್ವಯಹ್ ರದಿಯಲ್ಲಾಹು ಅನ್ಹು, ಇಮಾಮ್ ಶಾಫೀ ರದಿಯಲ್ಲಾಹು ಅನ್ಹು ರವರ ಶಿಷ್ಯರಾದ ಇಮಾಮ್ ಸ'ಆಫರಾನಿ ರದಿಯಲ್ಲಾಹು ಅನ್ಹು, ಇಮಾಮ್ ಅಬುಸೌರ್ ರದಿಯಲ್ಲಾಹು ಅನ್ಹು,  ಹೀಗೆ  ಸಾವಿರಕ್ಕಿಂತ ಅಧಿಕ ಇಮಾಮರುಗಳ  ಬಳಿ ತೆರಳಿ  ಹದೀಸ್ ಮತ್ತು ಕರ್ಮಶಾಸ್ತ್ರದ ವಿಧ್ಯೆಯನ್ನು ಕರಗತ ಮಾಡಿಕೊಂಡಿದ್ದಾರೆ.
ಇಮಾಮ್ ಬುಖಾರಿ ರದಿಯಲ್ಲಾಹು ಅನ್ಹು ಹದೀಸ್'ಗಳನ್ನು ಹುಡುಕಿಕೊಂಡು ಹಲವು ಬಾರಿ ದೂರದ ಪ್ರದೇಶಗಳಿಗೆ ಪ್ರಯಾಣ ಹೊರಟಿದ್ದರು. ಈಜಿಪ್ಟ್, ಸಿರಿಯ, ಸೌದಿ ಅರೇಬಿಯಾ, ಅಲ್ಜೇರಿಯ, ಇರಾಕ್, ಹಿಜಾಝ್ ಮೊದಲಾದ ಪ್ರದೇಶಗಳಿಗೆ ತೆರಳಿ ಹದೀಸ್ ಸಂಗ್ರಹಿಸಿದ್ದರು. ಒಂದು ಪ್ರದೇಶಗಳಿಗೆ ಒಂದೇ ಬಾರಿಯಾಗಿರಲಿಲ್ಲ ಅವರ ಯಾತ್ರೆ, ಒಂದು ಪ್ರದೇಶಕ್ಕೆ ಬೇಟಿ ನೀಡಿ  ತನ್ನ ಉರಿಗೆ ಮರಳಿದಾಗ ಯಾರಾದರೂ ಪುನಃ ಅದೇ ಪ್ರದೇಶದಲ್ಲಿ  ಇಂತಹ ಇಂತಹ ವೈಕ್ತಿಯ ಬಳಿ ಸ್ವಹೀಹಾದ ಹದೀಸ್ ಇದೆ ಎಂದು ಹೇಳಿದರೆ ಮತ್ತೊಮ್ಮೆ  ಆ ಸ್ಥಳಕ್ಕೆ ಹೋಗುತ್ತಿದ್ದರು.

ಇಮಾಮ್ ಬುಖಾರಿ ರದಿಯಲ್ಲಾಹು ಅನ್ಹು ರವರ ಜ್ಞಾಪಕ ಶಕ್ತಿಯು ಅಪಾರವಾದದ್ದು. ಅವರಿಗೆ ಒಂದು ಗ್ರಂಥವನ್ನು ಒಂದು ಸಾರಿ ನೋಡಿದರೆ ಅಥವಾ  ಒಂದು ಸಾರಿ ಹದೀಸ್ ಕೇಳಿದಲ್ಲಿ ಅದು ತನ್ನ ಮೆದುಳಿನಲ್ಲಿ ಶೇಕರಿಸಿಬಿಡುತ್ತಿತ್ತು. ಹದೀಸನ್ನು ನೆನಪಿಡಲು  ಪೆನ್ನು ಮತ್ತು ಪುಸ್ತಕದ ಅವಶ್ಯಕತೆಯೇ ಇರಲಿಲ್ಲ. ತನ್ನ ಸಣ್ಣ ಪ್ರಾಯದಲ್ಲಿಯೇ 70 ಸಾವಿರ ಹದೀಸನ್ನು ನೆನಪಿಟ್ಟುಕೊಂಡಿದ್ದರು. ನಂತರದಲ್ಲಿ 3 ಲಕ್ಷ ಹದೀಸ್ ಕಂಠಪಾಟ ಮಾಡಿದ್ದರು ಅದರಲ್ಲಿ 1 ಲಕ್ಷ ಹದೀಸ್ ಸಹೀಹ್ ಆಗಿತ್ತು 2 ಲಕ್ಷ ಹದೀಸ್ ಹಸನ್, ದಈಫ್ ಇತ್ಯಾದಿಗಳನ್ನು ಒಳಗೊಂಡಿತ್ತು.

ಹಾಶೀದ್ ಇಬ್ನ್ ಇಸ್ಮಾಈಲ್ ರದಿಯಲ್ಲಾಹು ಅನ್ಹು ಹೇಳುತ್ತಾರೆ, ತಮ್ಮ ಬಾಲ್ಯದ ದಿವಸಗಳಲ್ಲಿ ಇಮಾಮ್ ಬುಖಾರಿಯವರ ಜೊತೆಗೆ ನಾವು ಬಸ್ರಾದ ವಿದ್ವಾಂಸರೊಂದಿಗೆ ಹದೀಸ್ ಕಲಿಯಲು ಹೋಗುತ್ತಿದ್ದೆವು.  ನಾವೆಲ್ಲರೂ ಹದೀಸನ್ನು ವಿದ್ವಾಂಸರು ಹೇಳಿದ ಕೂಡಲೇ ಬರೆಯುತ್ತಿದ್ದೆವು ಆದರೆ ಇಮಾಮ್ ಬುಖಾರಿ ರವರು ಬರೆಯುತ್ತಿರಲಿಲ್ಲ. 16 ದಿವಸಗಳ ಹದೀಸ್ ಪಠನದ ಬಳಿಕ ನಾವು ಅವರನ್ನು ಹದೀಸ್ ಬರೆಯದೆ ಇರುವುದ್ಕ್ಕಾಗಿ ದೂಷಿಸುತ್ತಿರುವುದು ಅವರಿಗೆ ತಿಳಿಯಿತು. ನೀವು ನಿಮ್ಮ 16 ದಿವಸಗಳನ್ನು ಹದೀಸ್ ಬರೆಯದೆ ವ್ಯರ್ಥ ಮಾಡಿದಿರಲ್ಲಾ ಎಂದಾಗ ಇಮಾಮ್ ಬುಖಾರಿ ರವರು ನಮ್ಮಲಿ ನೀವು ಬರೆದ ಹದಿಸನ್ನು ತರಲು ಹೇಳಿದರು. ನಾವೆಲ್ಲರೂ ಹದಿಸನ್ನು ಬರೆದ ಪುಸ್ತಕವನ್ನು ತಂದೆವು. ಅವರು ನಮ್ಮಲ್ಲಿ ಪುಸ್ತಕ ನೋಡಲು ಹೇಳಿ, ಇಮಾಮ್ ಬುಖಾರಿ  ರದಿಯಲ್ಲಾಹು ಅನ್ಹು  ರವರು ಯಾವುದೇ ಪುಸ್ತಕವನ್ನು ನೋಡದೆ ಒಂದಾದ ಬಳಿಕ ಒಂದು ಹೀಗೆ  15ಸಾವಿರ ಹದೀಸನ್ನು ನಿವೇದನೆ ಮಾಡಿದವರ ಸಹಿತ ನಮಗೆ ಹೇಳಿ ಕೊಟ್ಟರು. ಇಮಾಮ್ ಬುಖಾರಿ ರದಿಯಲ್ಲಾಹು ಅನ್ಹುರವರು ನಮಗೆ ವಿಧ್ವಾಂಸರು ಹೇಳಿದ ಹದೀಸನ್ನು  ಮತ್ತೊಮ್ಮೆ ಕಲಿಸುತ್ತಿದ್ದಾರೇನೋ ಎಂದೆನಿಸಿತು.

ಮುಹಮ್ಮದ್ ಇಬ್ನ್ ಅಝ್ಹರ್ ಸಾಜಿಸ್ತಾನಿ ರದಿಯಲ್ಲಾಹು ಅನ್ಹು  ಹೇಳಿದರು, ನಾನು ಇಮಾಮ್ ಬುಖಾರಿ ರದಿಯಲ್ಲಾಹು ಅನ್ಹುರವರ ಜೊತೆಗೂಡಿ ಸುಲೈಮಾನ್ ಇಬ್ನ್ ಹರಬ್ ರದಿಯಲ್ಲಾಹು ಅನ್ಹುರವರ ಬಳಿ ಹದೀಸ್ ಕಲಿಯಲು ಹೊರಟೆವು. ನಾನು ಹದೀಸನ್ನು ಬರೆದಿಡುತ್ತಿದ್ದೇನು ಆದರೆ ಇಮಾಮ್ ಬುಖಾರಿ ರದಿಯಲ್ಲಾಹು ಅನ್ಹುರವರು ಬರೆಯುತ್ತಿರಲಿಲ್ಲ. ಇಮಾಮ್ ಬುಖಾರಿ  ರದಿಯಲ್ಲಾಹು ಅನ್ಹು ಯಾಕೆ ಹದೀಸ್ ಬರೆಯುತ್ತಿಲ್ಲ ಎಂದು ನನ್ನಲಿ ಒಬ್ಬ ಕೇಳಿದನು, ನಾನು ಅವನಲ್ಲಿ,  ನೀವು ಯಾವುದೇ ಹದೀಸನ್ನು ಬರೆಯಲು ಬಿಟ್ಟುಹೋಗಿದ್ದಲ್ಲಿ ಇಮಾಮ್ ಬುಖಾರಿಯವರಲ್ಲಿ ಕೇಳಿದರೆ ನಿಮಗೆ ಬಿಟ್ಟು ಹೋದ ಹದೀಸ್ ದೊರಕುವುದರಲ್ಲಿ ಸಂಶಯವೇ ಇಲ್ಲ ಎಂದು ಹೇಳಿದೆನು,

ಸುಲೈಮಾನ್ ಇಬ್ನ್ ಮುಜಾಹಿದ್ ರದಿಯಲ್ಲಾಹು ಅನ್ಹು  ಹೇಳುತ್ತಾರೆ,
ಒಂದು ದಿವಸ ನಾನು ಮುಹಮ್ಮದ್ ಇಬ್ನ್ ಸಲಾಮ್ ಬೈಖಂಡಿ ರದಿಯಲ್ಲಾಹು ಅನ್ಹುರವರ ಸಮಕ್ಷದಲ್ಲಿದ್ದೆ. ಇಮಾಮ್ ಸಲಾಮ್ ಹೇಳಿದರು ನೀವು ಸ್ವಲ್ಪ ಮುಂಚೆ ಬಂದಿರುತ್ತಿದ್ದರೆ ನಿಮಗೆ 70 ಸಾವಿರ ಹದೀಸ್ ಕಂಠಪಾಟ ಮಾಡಿದ  ಹುಡುಗನನ್ನು ತೋರಿಸುತ್ತಿದ್ದೇನು. ನಂತರ ಅಲ್ಲಿಂದ ತೆರಳಿದ ಇಮಾಮ್ ಸುಲೈಮಾನ್ ಇಮಾಮ್ ಬುಖಾರಿಯವರ ಹುಡುಕಾಟದಲ್ಲಿ ತೊಡಗಿದರು.ಶೀಗ್ರದಲ್ಲೇ ಅವರನ್ನು ಕಂಡು ಹಿಡಿದು, 70 ಸಾವಿರ ಹದೀಸನ್ನು ಕಂಠಪಾಟ ಮಾಡಿದ ಹುಡುಗ ನೀನಲ್ವಾ ಎಂದು ಕೇಳಿದಾಗ. ಹೌದು, ಅಲ್ಲಾಹನ ಅಪಾರ ದಯೆಯಿಂದ ಹದೀಸನ್ನು ನಿವೇದಿಸಿದವರ ಜನಿಸಿದ ಸ್ಥಳ, ಮರಣಹೊಂದಿದ ಸ್ಥಳ ಎಲ್ಲವೂ ತಿಳಿದಿದೆ ಎಂದರು.

ಮುಂದುವರಿಯುವುದು.....

Comments

Popular posts from this blog

ಗ್ರಹಣ ನಮಾಜಿನ ರೂಪ

ಗ್ರಹಣ ನಮಾಜಿನ ರೂಪ *ಚಂದ್ರಗ್ರಹಣದ ಸುನ್ನತ್ ನಮಾಜು ಎರಡು ರಕಅತ್ ಅಲ್ಲಾಹನಿಗಾಗಿ ಜಮಾಅತ್ತಾಗಿ ನಾನು ನಿರ್ವಹಿಸುವೆನು* ಎಂದು ನಿಯ್ಯತ್ ಮಾಡಿ ಅಲ್ಲಾಹು ಅಕ್ಬರ್ ಎಂದು ಹೇಳಿ ನಮಾಜಿಗೆ ಪ್ರವೇಶಿಸುವು...

ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ. ಲೇ - ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಅಕ್ಕರೆಕೆರೆ.

ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ. ಲೇ - ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಅಕ್ಕರೆಕೆರೆ. ಆಮಿನ ಬೀವಿ ರ.ಅ ಗರ್ಭಿಣಿಯಾಗಿರುವಾಗ ವ್ಯಾಪಾರಕ್ಕಾಗಿ ಸಿರಿಯಾಕ್ಕೆ ಹೋಗಿದ್ದ ಅಬ್ದುಲ್ಲಾಹ್ (ರ.ಅ) ಮರಳಿ ಬರುವಾಗ ಮದೀನದಲ್ಲಿ ವಫಾತಾದರು.ತಂದೆಯ ಮಾವಂದಿರರಾದ ಬನುನ್ನಜ್ಜಾರ್ ಗೋತ್ರದವರ ಬಳಿ ದಫನ ಮಾಡಲಾಯಿತು.ರಬೀವುಲ್ ಹನ್ನೆರಡು ಸೋಮವಾರ ಸುಬಹಿಯ ಸ್ವಲ್ಪ ಮುಂಚೆ ಅಂತ್ಯ ಪ್ರವಾದಿ ಮುಹಮ್ಮದ್ ಮುಸ್ತಫ ಸ.ಅ ಮಕ್ಕಾದಲ್ಲಿ ಜನಿಸಿದರು.ಅಂದು ಕ್ರಿಸ್ತಶಕ 571 ಎಪ್ರಿಲ್ 21 ಆಗಿತ್ತು.ನೆಬಿ ಸ.ಅ ಜನಿಸಿದ ದಿನ ಅತ್ಯಂತ ಸಂತೋಷದಾಯಕವಾದ ದಿನವಾಗಿದೆ.ಮಾನವ ಶ್ರೇಷ್ಠರಾದ ಪ್ರವಾದಿ ಮುಹಮ್ಮದ್ ಸ.ಅ ರವರ ಮುಖಾಂತರ ಮಾನವ ಸಮೂಹವನ್ನು ಅಲ್ಲಾಹು ಅನುಗ್ರಹಿಸಿದ ಸುದಿನವಾಗಿದೆ ಅಂದು.ಮುಸಲ್ಮಾನರು ಈ ಅನುಗ್ರಹಕ್ಕೆ ಕ್ರತಜ್ಞತೆ ಸಲ್ಲಿಸಿ ಅಂದು ಮೀಲಾದುನ್ನಬಿ ಆಚರಣೆ ಮಾಡುತ್ತಾರೆ.ನೆಬಿ ಸ.ಅ ರವರ ಮದಹ್ ಕೀರ್ತನೆಗಳನ್ನು ಹೇಳಿ, ಹಾಡಿಹೊಗಳಿ ದಾನಧರ್ಮಗಳನ್ನು ನೀಡಿ ಸಂತೋಷ ಪ್ರಕಟಿಸುತ್ತಾರೆ.              ಭೂಮಿಯ ಮೇಲೆ ಜನ್ಮವೆತ್ತಿ ಬಂದ ಅತ್ಯಂತ ಉತ್ತಮನಾದ ಮನುಷ್ಯ ನೆಬಿ ಸ.ಅ ಆಗಿದ್ದಾರೆ.ಮುಂಜಿಕರ್ಮ ನಿರ್ವಹಿಸಲ್ಪಟ್ಟ,ಹೊಕ್ಕುಳ ಬಳ್ಳಿ ಕತ್ತರಿಸಲ್ಪಟ್ಟ,ಕಣ್ಣಿಗೆ ಸುರುಮ ಹಾಕಲ್ಪಟ್ಟ ಸ್ಥಿತಿಯಲ್ಲಿ ಸಂಪೂರ್ಣ ಸಂಶುದ್ಧವಾದ ರೀತಿಯಲ್ಲಾಗಿದೆ ಅವರು ಜನಿಸಿದ್ದು.ಅಬೂತಾಲಿಬರ ಮನೆಯಲ್ಲಾಗಿದೆ ಜನನ.ಹೆರಿಗೆ...

ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಕರ ಪಾತ್ರ

ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಕರ ಪಾತ್ರ _✍🏻ಜಹಫರ್ ಸಾಧಿಕ್ ಕಟ್ಟದಪಡ್ಪು_ _ನಮ್ಮ ಸಮಾಜವು ನಮಗೆ ಜನ್ಮ ಕೊಟ್ಟ ತಂದೆ ತಾಯಿಯ ನಂತರ ಮಹತ್ತರವಾದ ಸ್ಥಾನವನ್ನು ಶಿಕ್ಷಕರಿಗೆ ನೀಡಿ ಗೌರವಿಸಿದೆ.  ಶಿಲ್ಪಿ...