Skip to main content

ಇಮಾಂ ಬುಖಾರಿ ರ.ಅ..ಭಾಗ -02

ಇಮಾಮ್ ಬುಖಾರಿ (ರದಿಯಲ್ಲಾಹು ಅನ್ಹು) - ಭಾಗ-2

✍ ರಿಯಾಝ್ ಮಲಾರ್
-----------------------------------------**

ಹಾಫಿಝ್ ಅಹ್ಮದ್ ಇಬ್ನ್ ಆದಿ ರದಿಯಲ್ಲಾಹು ಅನ್ಹು ವಿವರಿಸುತ್ತಾರೆ: ಇಮಾಮ್ ಬುಖಾರಿ ರದಿಯಲ್ಲಾಹು ಅನ್ಹುರವರು ಭಾಗ್ಧಾದ್'ಗೆ ಆಗಮಿಸುತ್ತಿದ್ದಾರೆ ಎಂದು ತಿಳಿದ ಅಲ್ಲಿನ ಮತ ಪಂಡಿತರು ಇಮಾಮ್ ಬುಖಾರಿ ರವರನ್ಬು ಪರೀಕ್ಷಿಸಲು ತಿರ್ಮಾನಿಸುತ್ತಾರೆ. ಅವರು  ಆಯ್ದ 100 ಹದೀಸನ ಸನದು, ನಿವೇದನೆ ಮತ್ತು ರವಾನೆಯನ್ನು ಬೇರೆ ಹದೀಸ್'ಗೆ  ಬದಲಾಯಿಸುತ್ತಾರೆ. ಅವರು ಒಂದು  ಹದೀಸಿನ ಸನದನ್ನು ಬೇರೊಂದು ಹದೀಸಿಗೆ ಮತ್ತೊಂದು ಸನದನ್ನು ಬೇರೊಂದು ಹದೀಸಿಗೆ ಬದಲಾಯಿಸಿದ್ದರು. ಹೀಗೆ ಅವರು 100 ಹದೀಸನ್ನು ಬದಲಾಯಿಸಿದ್ದರು.
ಇಮಾಮ್ ಬುಖಾರಿ ರದಿಯಲ್ಲಾಹು ಅನ್ಹುರವರು ಆಗಮಿಸಿದಾಗ ಅಲ್ಲಿನ ಜನರು ಒಂದು ದೊಡ್ಡ ಸಮ್ಮೇಳನವನ್ನು ಆಯೋಜಿಸಿದ್ದರು. ಅದರಲ್ಲಿ  ಹೆಚ್ಚಿನವರು ಪ್ರಖ್ಯಾತ ಮತ ಪಂಡಿತರು ಮತ್ತು ಸಾಹಿತ್ಯಾಕಾರರಾಗಿದ್ದರು. ಇಮಾಮ್ ಬುಖಾರಿ ರದಿಯಲ್ಲಾಹು ಅನ್ಹುರವರನ್ನು ನೋಡಲು ಜನಸ್ತೋಮವೇ ನೆರೆದಿತ್ತು.
ಅದರಲ್ಲಿ ಓರ್ವ ವಿಧ್ವಾಂಸರು ಎದ್ದು ನಿಂತು ಇಮಾಮ್ ಬುಖಾರಿ ರದಿಯಲ್ಲಾಹು ಅನ್ಹುರವರಲ್ಲಿ ಹದೀಸ್'ನ ಸನದು ಮತ್ತು ನಿವೇದನೆ ಮಾಡಿದವರ ಹೆಸರಲ್ಲಿ ಬದಲಾವಣೆ ಗೊಳಿಸಿ ಪ್ರಶ್ನೆ ಕೇಳಿದರು.
ಇಮಾಮ್ ಬುಖಾರಿ ರದಿಯಲ್ಲಾಹು ಅನ್ಹುರವರರು ಈ ಹದಿಸನ್ನು ನಾನು ತಿಳಿದಿಲ್ಲ ಎಂದು ಹೇಳಿದರು. ಮತ್ತೋರ್ವ ವಿಧ್ವಾಂಸರು ಹೀಗೆ 100 ವಿಧ್ವಾಂಸರು ಪ್ರಶ್ನೆ ಕೇಳಿದಾಗ ಇಮಾಮ್ ಬುಖಾರಿ ರದಿಯಲ್ಲಾಹು ಅನ್ಹುರವರ ಉತ್ತರ  "ಈ ಹದೀಸ್ ನನಗೆ ತಿಳಿದಿಲ್ಲ" ಎಂದಾಗಿತ್ತು. ಇನ್ನೂ ಯಾರೂ ಪ್ರಶ್ನಿಸಲು ಬಾಕಿ ಉಳಿದಿಲ್ಲ ಎಂದು ತಿಳಿದ ಇಮಾಮ್ ಬುಖಾರಿ ರದಿಯಲ್ಲಾಹು ಅನ್ಹು ನಿಂತು ಮೊದಲು ಕೇಳಿದ ಪ್ರಶ್ನೆಯನ್ನು ಸ್ವತಃ ಅವರೇ  ಹೇಳಿ ಅದನ್ನು ನಿವೇದಿಸಿದವರ ಹೆಸರನ್ನು ಮತ್ತು ಸನದನ್ನು ಸರಿಪಡಿಸಿ ಅದು ಆ ರೀತಿಯಲ್ಲ ಈ ರೀತಿಯಾಗಬೇಕು  ಎಂದು ಹೀಗೆ 100 ಜನರು ಕೇಳಿದ ಹದೀಸನ್ನು ಇಮಾಮ್ ಬುಖಾರಿ ರದಿಯಲ್ಲಾಹು ಅನ್ಹುರವರೇ ಪುನರಾವರ್ತಿಸಿ ಸರಿಮಾಡಿ ವಿವರಿಸಿದರು.
ಇಮಾಮ್ ಬುಖಾರಿ ರದಿಯಲ್ಲಾಹು ಅನ್ಹುರವರು ಎಲ್ಲಾ ಪ್ರಶ್ನೆಗಳಿಗೆ ಉತ್ತರಿಸಿದಾಗ ಅಲ್ಲಿ ನೆರೆದ ಸಭಿಕರೂ, ಮತ ಪಂಡಿತರೂ ಮತ್ತು ಸಾಹಿತ್ಯಗಾರರು ಎದ್ದು ಇಮಾಮ್ ಬುಖಾರಿಯವರ ಜ್ಞಾಪಕ ಶಕ್ತಿಯನ್ನು ಹೋಗಲಿ ಪ್ರಶಂಸಿದರು.

ಯೂಸಫ್ ಇಬ್ನ್ ಮರೂಝಿ ರದಿಯಲ್ಲಾಹು ಅನ್ಹು ಹೇಳುತ್ತಾರೆ, ನಾನು ಬಸರಾದ ಕೇಂದ್ರ ಮಸೀದಿಯಲ್ಲಿ ಕುಳಿತಿರುವಾಗ ಒಂದು ದ್ವನಿಯನ್ನು ಕೇಳಿದೆ. "ಓ ಜ್ಞಾನವನ್ನು ಪಡೆಯಲು ಬಯಸುವವರೇ... ಇಮಾಮ್ ಮುಹಮ್ಮದ್ ಇಬ್ನ್ ಇಸ್ಮಾಈಲ್ ರದಿಯಲ್ಲಾಹು ಅನ್ಹು ತಲುಪಿದ್ದಾರೆ. ಹದೀಸ್ ಕಲಿಯಲು ಯಾರಿಗೆಲ್ಲಾ ತಾಲ್ಪರ್ಯವಿದೆ, ಆದಷ್ಟು ಬೇಗ ಬನ್ನಿ..." ಮರೂಝಿ ರದಿಯಲ್ಲಾಹು ಅನ್ಹು ಹೇಳುತ್ತಾರೆ, ತೆಳ್ಳನೆಯ ಓರ್ವ ಯುವಕ ಮಸೀದಿಯ ಕಂಬದ ಬಳಿ ನಮಾಜ್ ಮಾಡುದನ್ನು ನಾನು ನೋಡಿದೆ. ಅದು ಇಮಾಮ್ ಬುಖಾರಿ ರದಿಯಲ್ಲಾಹು ಅನ್ಹುರವರಾಗಿದ್ದರು. ನಮಾಜ್ ಮುಗಿಸಿ ಎದ್ದು ನಿಂತಾಗ ಎಲ್ಲಾ ದಿಕ್ಕುಗಳಿಂದ ಜನರು ಸುತ್ತುವರೆದಿದಿದ್ದರು.

ಇಮಾಮ್ ಬುಖಾರಿ ರದಿಯಲ್ಲಾಹು ಅನ್ಹು ರವರು ಹಲವಾರು ಗ್ರಂಥಗಳನ್ನು ಬರೆದಿದ್ದಾರೆ ಅದರಲ್ಲಿ ಕೆಲವು ಗ್ರಂಥಗಳ ಹೆಸರು ಈ ರೀತಿಯಲ್ಲಿವೆ.
1. ಸಹೀಹ್ ಅಲ್ ಬುಖಾರಿ
2. ಅಲ್ ಅದಬುಲ್ ಮುಫರ್ರದ್
3. ಜೂಝ್ ರಫಾ-ಉಲ್-ಯದೈನ್
4. ಜೂಝ್ - ಖೀರಾತ್- ಕಲ್ಫ್ ಅಲ್ ಇಮಾಮ್
5. ಅತ್-ತಾರೀಖ್-ಅಲ್ ಕಬೀರ್
6. ಅಲ್-ತಾರಿಖ್ ಅಲ್-ಸಘೀರ್
7. ಆಫ್’ಆಳುಲ್ ಇಬಾದ್

ಸಹೀಹ್ ಅಲ್ ಬುಖಾರಿಯ ರಚನೆ:
--------------------------------
ಸಹೀಹ್ ಬುಖಾರಿ ಪವಿತ್ರ ಕುರ್'ಆನೀನ ನಂತರ ಇಸ್ಲಾಮಿನ ಅಧಿಕೃತ ದಾಖಲೆಯಾಗಿದೆ. ಸಹೀಹುಲ್ ಬುಖಾರಿ ಗ್ರಂಥದ ಪೂರ್ಣ ಹೆಸರು "ಅಲ್ ಜಾಮಿಅಲ್ ಮುಸ್ನದ್ ಅಸ್-ಸಹೀಹ್ ಅಲ್-ಮುಖ್ತಸರ್ ಮಿನ್ ಉಮೂರಿ ರಸುಲುಲ್ಲಾಹಿ ಸಲ್ಲಲ್ಲಾಹು ಅಲೈಹಿ ವಸಲ್ಲಮ್ ವ-ಸುನನಿಹೀ ವ-ಅಯ್ಯಾಮಿಹಿ" ಎಂದಾಗಿದೆ. 
ಇಮಾಮ್ ಬುಖಾರಿ ರದಿಯಲ್ಲಾಹು ಅನ್ಹುರವರ ಗುರುಗಳಾದ ಇಶ್ಹಾಕ್ ಬಿನ್ ರಾಹುಯಹ್ ರದಿಯಲ್ಲಾಹು ಅನ್ಹು ಒಮ್ಮೆ ತಮ್ಮ ಶಿಷ್ಯರನ್ನುದ್ದೇಶಿಸಿ ಪ್ರವಾದಿ ಸಲ್ಲಾಲ್ಲಾಹು ಅಲೈಹಿ ವಸಲ್ಲಮ್ ರವರ ಸುನ್ನತ್'ನಿಂದ ಸಹೀಹ್ ಆದುದನ್ನು ಮಾತ್ರ ಒಂದು ಗ್ರಂಥದಲ್ಲಿ ಕ್ರೂಢೀಕರಿಸಿದರೆ ಚೆನ್ನಾಗಿತ್ತು ಎಂದು ಹೇಳಿದರು. ಇದನ್ನು ಕೇಳಿದ ಇಮಾಮ್ ಬುಖಾರಿ ರದಿಯಲ್ಲಾಹು ಅನ್ಹು ಆ ಕುರಿತು ಯೋಚನಾ ಮಗ್ನರಾದರು. ಒಂದು ರಾತ್ರಿ ಅವರಿಗೆ ತಾನು ಪ್ರವಾದಿ ಸ್ವಲ್ಲಲಾಹು ಅಲೈಹಿ ವಸಲ್ಲಮ್ ರವರ ಬಳಿ ನಿಂತು ನೊಣಗಳನ್ನು ಓಡಿಸುತ್ತಿರುವ ಕನಸನ್ನು ಕಂಡರು.  ಆ ಕನಸಿನ ವ್ಯಾಖ್ಯಾನವನ್ನು ತಿಳಿಯುವ ಕುತೂಹಲದಿಂದ ಸ್ವಪ್ನ ವ್ಯಾಖ್ಯಾನಿಸುವ ವಿಧ್ವಾಂಸರ ಬಳಿ ತೆರಳಿ ಸ್ವಪ್ನದ ವ್ಯಾಖ್ಯಾನವನ್ನು ಅರಿತುಕೊಂಡು ಸಹೀಹ್ ಹದೀಸ್'ಗಳ ಸಂಗ್ರಹದಲ್ಲಿ ನಿರತರಾದರು.
ಹದೀಸ್ ಕ್ರೂಢೀಕರಣದಲ್ಲಿ ಅವರು ತುಂಬಾ ಸೂಕ್ಷ್ಮತೆ ಮತ್ತು ಜಗುರೂಕತೆಯನ್ನು ಪಾಲಿಸುತ್ತಿದ್ದರು. ಸಹೀಹ್ ಅಲ್ ಬುಖಾರಿಯ ವರದಿಗಾರರಾದ ಅಬ್ದುಲ್ಲಾಹ್ ಬಿನ್ ಫರಬ್'ರಿ ರದಿಯಲ್ಲಾಹು ಅನ್ಹು ಹೇಳುತ್ತಾರೆ, "ಇಸ್ತಿಖಾರತ್ ನಮಾಝ್ ನಿರ್ವಹಿಸಿ ಪ್ರಬಲತೆಯು ಸ್ಪಷ್ಟಪಡದ ಯಾವ ಹದಿಸನ್ನು ನಾನು ಸಹೀಹ್ ಅಲ್ ಬುಖಾರಿಯಲ್ಲಿ ಸೇರಿಸಿಲ್ಲ" ಎಂದು ಇಮಾಮ್ ಬುಖಾರಿ ರವರು ಹೇಳಿದ್ದಾರೆ.

16 ವರ್ಷಗಳ ನಿರಂತರ ಪರಿಶ್ರಮದಿಂದ ಸಹೀಹುಲ್ ಬುಖಾರಿ ರಚಿತವಾಯಿತು. ಇಮಾಮ್ ಬುಖಾರಿ ರವರು ಬಸ್ರಾ, ಮಕ್ಕಾ, ಮದೀನ ಹಾಗೂ ತಮ್ಮ ಹುಟ್ಟೂರಾರ ಬುಖಾರದಲ್ಲಿ ಇದರ ರಚನೆಯನ್ನು ಪೂರ್ತಿ ಗೊಳಿಸಿದರು. ಬರೆಯುವ ಮುನ್ನ ಅವರು ಪ್ರವಾದಿ ರವರ ಮಸೀದಿಗೆ ತೆರಳಿ 2 ರಕ್ಅತ್ ನಮಾಝ್ ನಿರ್ವಹಿಸುತ್ತಿದ್ದರು.
ಸಹೀಹುಲ್ ಬುಖಾರಿ 1800 ವಿದ್ವಾಂಸರಿಂದ ಸಂಗ್ರಹಿಸಿದ 6 ಲಕ್ಷಕ್ಕೂ ಮಿಕ್ಕಿದ ಹದೀಸ್'ಗಳ ಪೈಕಿ 7275 ಹದೀಸ್'ಗಳ ಸಮಾಹಾರವಾಗಿದೆ.  ಸಹೀಹ್ ಬುಖಾರಿಯಲ್ಲಿ ಸಹೀಹ್ ಆದ ಎಲ್ಲಾ ಹದೀಸ್'ಗಳಿಲ್ಲ ಆದರೆ ಇರುವ ಎಲ್ಲಾ ಹದೀಸ್'ಗಳು ಸಹೀಹ್ ಆಗಿದೆ.

ಮುಂದುವರಿಯುವುದು...

Comments

Popular posts from this blog

ಗ್ರಹಣ ನಮಾಜಿನ ರೂಪ

ಗ್ರಹಣ ನಮಾಜಿನ ರೂಪ *ಚಂದ್ರಗ್ರಹಣದ ಸುನ್ನತ್ ನಮಾಜು ಎರಡು ರಕಅತ್ ಅಲ್ಲಾಹನಿಗಾಗಿ ಜಮಾಅತ್ತಾಗಿ ನಾನು ನಿರ್ವಹಿಸುವೆನು* ಎಂದು ನಿಯ್ಯತ್ ಮಾಡಿ ಅಲ್ಲಾಹು ಅಕ್ಬರ್ ಎಂದು ಹೇಳಿ ನಮಾಜಿಗೆ ಪ್ರವೇಶಿಸುವು...

ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ. ಲೇ - ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಅಕ್ಕರೆಕೆರೆ.

ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ. ಲೇ - ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಅಕ್ಕರೆಕೆರೆ. ಆಮಿನ ಬೀವಿ ರ.ಅ ಗರ್ಭಿಣಿಯಾಗಿರುವಾಗ ವ್ಯಾಪಾರಕ್ಕಾಗಿ ಸಿರಿಯಾಕ್ಕೆ ಹೋಗಿದ್ದ ಅಬ್ದುಲ್ಲಾಹ್ (ರ.ಅ) ಮರಳಿ ಬರುವಾಗ ಮದೀನದಲ್ಲಿ ವಫಾತಾದರು.ತಂದೆಯ ಮಾವಂದಿರರಾದ ಬನುನ್ನಜ್ಜಾರ್ ಗೋತ್ರದವರ ಬಳಿ ದಫನ ಮಾಡಲಾಯಿತು.ರಬೀವುಲ್ ಹನ್ನೆರಡು ಸೋಮವಾರ ಸುಬಹಿಯ ಸ್ವಲ್ಪ ಮುಂಚೆ ಅಂತ್ಯ ಪ್ರವಾದಿ ಮುಹಮ್ಮದ್ ಮುಸ್ತಫ ಸ.ಅ ಮಕ್ಕಾದಲ್ಲಿ ಜನಿಸಿದರು.ಅಂದು ಕ್ರಿಸ್ತಶಕ 571 ಎಪ್ರಿಲ್ 21 ಆಗಿತ್ತು.ನೆಬಿ ಸ.ಅ ಜನಿಸಿದ ದಿನ ಅತ್ಯಂತ ಸಂತೋಷದಾಯಕವಾದ ದಿನವಾಗಿದೆ.ಮಾನವ ಶ್ರೇಷ್ಠರಾದ ಪ್ರವಾದಿ ಮುಹಮ್ಮದ್ ಸ.ಅ ರವರ ಮುಖಾಂತರ ಮಾನವ ಸಮೂಹವನ್ನು ಅಲ್ಲಾಹು ಅನುಗ್ರಹಿಸಿದ ಸುದಿನವಾಗಿದೆ ಅಂದು.ಮುಸಲ್ಮಾನರು ಈ ಅನುಗ್ರಹಕ್ಕೆ ಕ್ರತಜ್ಞತೆ ಸಲ್ಲಿಸಿ ಅಂದು ಮೀಲಾದುನ್ನಬಿ ಆಚರಣೆ ಮಾಡುತ್ತಾರೆ.ನೆಬಿ ಸ.ಅ ರವರ ಮದಹ್ ಕೀರ್ತನೆಗಳನ್ನು ಹೇಳಿ, ಹಾಡಿಹೊಗಳಿ ದಾನಧರ್ಮಗಳನ್ನು ನೀಡಿ ಸಂತೋಷ ಪ್ರಕಟಿಸುತ್ತಾರೆ.              ಭೂಮಿಯ ಮೇಲೆ ಜನ್ಮವೆತ್ತಿ ಬಂದ ಅತ್ಯಂತ ಉತ್ತಮನಾದ ಮನುಷ್ಯ ನೆಬಿ ಸ.ಅ ಆಗಿದ್ದಾರೆ.ಮುಂಜಿಕರ್ಮ ನಿರ್ವಹಿಸಲ್ಪಟ್ಟ,ಹೊಕ್ಕುಳ ಬಳ್ಳಿ ಕತ್ತರಿಸಲ್ಪಟ್ಟ,ಕಣ್ಣಿಗೆ ಸುರುಮ ಹಾಕಲ್ಪಟ್ಟ ಸ್ಥಿತಿಯಲ್ಲಿ ಸಂಪೂರ್ಣ ಸಂಶುದ್ಧವಾದ ರೀತಿಯಲ್ಲಾಗಿದೆ ಅವರು ಜನಿಸಿದ್ದು.ಅಬೂತಾಲಿಬರ ಮನೆಯಲ್ಲಾಗಿದೆ ಜನನ.ಹೆರಿಗೆ...

ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಕರ ಪಾತ್ರ

ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಕರ ಪಾತ್ರ _✍🏻ಜಹಫರ್ ಸಾಧಿಕ್ ಕಟ್ಟದಪಡ್ಪು_ _ನಮ್ಮ ಸಮಾಜವು ನಮಗೆ ಜನ್ಮ ಕೊಟ್ಟ ತಂದೆ ತಾಯಿಯ ನಂತರ ಮಹತ್ತರವಾದ ಸ್ಥಾನವನ್ನು ಶಿಕ್ಷಕರಿಗೆ ನೀಡಿ ಗೌರವಿಸಿದೆ.  ಶಿಲ್ಪಿ...