Skip to main content

ಇಮಾಂ ಬುಖಾರಿ ರ.ಅ..ಭಾಗ -03

*ಇಮಾಮ್ ಬುಖಾರಿ (ರದಿಯಲ್ಲಾಹು ಅನ್ಹು) - ಭಾಗ-3*

✍ ರಿಯಾಝ್ ಮಲಾರ್
-----------------------------------------**

ಹಿಜಿರ 250ರಲ್ಲಿ ಇಮಾಮ್ ಬುಖಾರಿ ರದಿಯಲ್ಲಾಹು ಅನ್ಹು ನಿಶಾಪುರಕ್ಕೆ ಹೋಗಬೇಕೆಂದು ತೀರ್ಮಾನಿಸಿದರು. ಇಮಾಮ್ ಬುಖಾರಿ ರದಿಯಲ್ಲಾಹು ಅನ್ಹು ನಿಶಾಪುರಕ್ಕೆ ಬರುತ್ತಾರೆ ಎಂಬ ಸುದ್ದಿ ತಿಳಿದ ನಿಶಾಪುರದ ನಿವಾಸಿಗಳ ಸಂತೋಷಕ್ಕೆ ಪಾರವೇ ಇರಲಿಲ್ಲ. ನಿಶಾಪುರ ನಗರದ ಮಹಾ ವಿಧ್ವಾಂಸರಾದ ಮುಹಮ್ಮದ್ ಇಬ್ನ್ ಯಾಹ್ಯಾ ಅದ್- ದುಹುಹ್ಲಿ ರದಿಯಲ್ಲಾಹು ಅನ್ಹುರವರು ಇಮಾಮ್ ಬುಖಾರಿ ರದಿಯಲ್ಲಾಹು ಅನ್ಹುರವರನ್ನು ಸ್ವೀಕರಿಸಲು ಇಡೀ ನಗರವೇ  ಸಿದ್ಧರಾಗ ಬೇಕೆಂದು ಉಪದೇಶಿಸಿದರು. ನಗರದ ಹೊರ ವಲಯದ ವರೆಗೂ ಇಮಾಮ್ ಬುಖಾರಿ ರದಿಯಲ್ಲಾಹು ಅನ್ಹುರವರನ್ನು ಸ್ವೀಕರಿಸಲು  ದೊಡ್ಡ ಜನಸ್ತೋಮವೇ ನೆರೆದಿತ್ತು.
ಇಮಾಮ್ ಮುಸ್ಲಿಂ ಇಬ್ನ್ ಹಜ್ಜಾಜ್ ರದಿಯಲ್ಲಾಹು ಅನ್ಹು ಹೇಳುತ್ತಾರೆ, ನನ್ನ ಪೂರ್ತಿ ಜೀವನದಲ್ಲಿ ರಾಜ ಮಹಾರಾಜರಿಗೆ ಅಥವಾ ಇತರ ಯಾವುದೇ ವಿಧ್ವಾಂಸರಿಗೆ ಈ ರೀತಿಯ ಭವ್ಯ ಸ್ವಾಗತವನ್ನು ನೀಡಿರುವುದು ನಾನು ಎಲ್ಲಿಯೂ ಕಂಡಿಲ್ಲ.
ಇಮಾಮ್ ಬುಖಾರಿ ರದಿಯಲ್ಲಾಹು ಅನ್ಹು ನಿಶಾಪುರದಲ್ಲಿ ಪ್ರತೀ ದಿನ ಉಪನ್ಯಾಸ ನೀಡುತ್ತಿದ್ದರು. ಉಪನ್ಯಾಸ ಕೇಳಲು ಜನ ಜಂಗುಳಿಯೇ ಹರಿದು ಬರುತ್ತಿತ್ತು. ಹದೀಸ್ ಕಲಿಯಲು ದೂರ ದೂರದ ಪ್ರದೇಶಗಳಿಂದ ಜನರು ಬರುತ್ತಿದ್ದರು. ದಿನೇ ದಿನೇ ಉಪನ್ಯಾಸ ಕೇಳಲು ಬರುತ್ತಿದ್ದ ಜನರ ಸಂಖ್ಯೆಯಲ್ಲಿ ಏರಿಕೆಯಾಗುತ್ತಿತ್ತು. ಇದನ್ನು ಕಂಡು ಸಹಿಸಲಾಗದ ಕೆಲವೊಂದು ಜನರು ಹೇಗಾದರೂ ಮಾಡಿ ಇಮಾಮ್ ಬುಖಾರಿಯವರನ್ನು ಇಲ್ಲಿಂದ ಓಡಿಸಬೇಕು ಎಂದು ಸಂಚು ರೂಪಿಸುತ್ತಾರೆ.  ಖುರಾನಿನ ಬಗೆಗಿನ ಚರ್ಚೆ ಕೆಲವೊಂದು ಪ್ರದೇಶದಲ್ಲಿದ್ದ ಕಾರಣ ಉಪನ್ಯಾಸ ಕೇಳಲು ಬಂದ ಓರ್ವ ಸಭಿಕ ಇಮಾಮಾರಲ್ಲಿ ಖುರಾನ್ ಸೃಷ್ಟಿಯಾ(ಮಖ್ಲೂಖ್) ಅಥವಾ ಸೃಷ್ಟಿಯಲ್ವಾ(ಗೈರ್ ಮಖ್ಲೂಖ್) ? ಎಂದು ಕೇಳಿದನು. ಇಮಾಮ್ ಬುಖಾರಿ ಸ್ವಲ್ಪ ಹೊತ್ತು ಮೌನರಾಗಿ ನಂತರ ಹೇಳಿದರು, ಖುರಾನ್ ಅಲ್ಲಾಹನ ಸಂದೇಶವಾಗಿದೆ. ಅದು ಸೃಷ್ಟಿಯಲ್ಲಾ. ಎಂದಾಗ ಆ ಯುವಕ ಮತ್ತೆ ಮತ್ತೆ ಅದರ ಬಗ್ಗೆನೇ  ಪ್ರಶ್ನೆ ಕೇಳತೊಡಗಿದನು. ಅವತ್ತಿನ ಸಂಧರ್ಬದಲ್ಲಿದ್ದ ಗೊಂದಲಗಳನ್ನು ಮನಗಂಡು ಹೆಚ್ಚೇನೂ ಉತ್ತರಿಸಲು ಹೋಗದೆ ಹೀಗೆ ಹೇಳಿದರು. "ನಮ್ಮ ಕ್ರಿಯೆಯು ಸೃಷ್ಟಿಯಾಗಿದೆ ಮತ್ತು ನಮ್ಮ ಉಚ್ಚಾರವು ಒಂದು ಕ್ರಿಯೆ ಯಾಗಿದೆ.." ಅಲ್ಲಿನ ಕೆಲವೊಂದು ಅಸೂಯೆಗಾರಾರು ಉಚ್ಚಾರ ಕ್ರಿಯೆ ಆಗಿರುವುದರಿಂದ ಖುರಾನನ್ನು ಉಚ್ಚರಿಸುವಾಗ ಅದು ಕ್ರಿಯೆ ಆಗುತ್ತೆ ಮತ್ತು ಇಲ್ಲಿ ಕ್ರಿಯೆ ಎಂದು ಹೇಳಿರುವುದು ಕುರಾನನ್ನು ಎಂದಾಗಿ  ತಪ್ಪಾಗಿ ಅರ್ಥೈಸಿದರು. ಖುರಾನ್ ಅಲ್ಲಾಹನ ಸೃಷ್ಟಿಯಾಗಿದೆ ಅಥವಾ ಖುರಾನಿನ ಸಂದೇಶಗಳು ಸೃಷ್ಟಿಯಾಗಿದೆ ಎಂದು ಇಮಾಮ್ ಬುಖಾರಿಯವರು ಹೇಳಿರಲಿಲ್ಲ.  ಅಲ್ಲಿನ ಕೆಲವೊಂದು ಅಸೂಯೆಗಾರರು ಇಮಾಮ್ ಬುಖಾರಿ ರದಿಯಲ್ಲಾಹು ಅನ್ಹುರವರು ಖುರಾನನ್ನು ಸೃಷ್ಟಿಸಿರುವುದು ಎಂಬ ವಿಶ್ವಾಸವನ್ನು ಹೊಂದಿದ್ದಾರೆ ಎಂದು ಊರಿಡೀ ಸುಳ್ಳು ಪ್ರಚಾರ ಮಾಡಿದರು.  ನಗರದಲ್ಲಿ ತುಂಬಾ ಗೊಂದಲಗಳು ಸಂಭವಿಸಿದ ಕಾರಣದಿಂದ ಇಮಾಮ್ ಬುಖಾರಿ ನಿಶಾಪುರ್ ನಗರವನ್ನು ಬಿಟ್ಟು ತನ್ನ ತಾಯಿನಾಡದ ಬುಖಾರಕ್ಕೆ ಹಿಂದಿರುಗಿದರು.

ಇಮಾಮ್ ಬುಖಾರಿ ರದಿಯಲ್ಲಾಹು ಅನ್ಹು ತಾಯಿನಾಡದ ಬುಖಾರಕ್ಕೆ ಹಿಂದಿರುಗುತ್ತಿದ್ದಾರೆ ಎಂಬ ಸುದ್ದಿ ತಿಳಿದ ಅಲ್ಲಿನ ಜನರು ಬಹಳ ಸಂತೋಷದಿಂದ ಇಮಾಮ್ ಬುಖಾರಿ ರವರನ್ನು ಸ್ವಾಗತಿಸಲು ಸನ್ನದ್ಧರಾದರು. ನಗರದ ಅನೇಕ ಮೈಲುಗಳ ದೂರದಲ್ಲಿ ಅವರನ್ನು ಸ್ವಾಗತಿಸಲು ಜನಸಮೂಹವೇ ಕೂಡಿತ್ತು. ಅಲ್ಲಿಯೂ ಕೂಡ ಅಸೂಯೆಯಿಂದ ಕೂಡಿದ ಜನರು ಅವರನ್ನು ಬಿಡಲಿಲ್ಲ.  ಇಮಾಮ್ ಬುಖಾರಿ ರದಿಯಲ್ಲಾಹು ಅನ್ಹುರವರ ಅಪಾರ ಪಾಂಡಿತ್ಯವನ್ನು ಅರಿತ ಅಲ್ಲಿನ ಕೆಲವೊಂದು ಅಸೂಯೆಗಾರರು ಅವರ ಪಾಂಡಿತ್ಯವನ್ನು ಕೇವಲ ಒಂದು ಕೋಣೆಯೊಳಗೆ ಕಟ್ಟಿಹಾಕಲು ಪ್ರಯತ್ನಿಸಿದರು.

ಅಬಷಿಯ್ಯದ ಆಡಳಿತಾಧಿಕಾರಿ ಖಾಲಿದ್ ಇಬ್ನ್ ಅಹ್ಮದ್'ನ ಪ್ರತಿನಿಧಿಯಾಗಿದ್ದ ಅಲ್ಲಿನ ಗವರ್ನರ್'ನ ಬಳಿಗೆ ತೆರಳಿ ಇಮಾಮ್ ಬುಖಾರಿ ರದಿಯಲ್ಲಾಹು ಅನ್ಹುರವರನ್ನು ತಮ್ಮ ಮಗನಿಗೆ ಮಾತ್ರ ವಿಧ್ಯೆ ಕಳುಹಿಸಿದಲ್ಲಿ ತಮ್ಮ ಮಗನು ದೊಡ್ಡ  ಪಂಡಿತನಾಗುವನು ಎಂದೆಲ್ಲಾ ಆಸೆ ಹುಟ್ಟಿಸಿ ಇಮಾಮ್ ಬುಖಾರಿ ರದಿಯಲ್ಲಾಹು ಅನ್ಹುರವರ ಅಮೂಲ್ಯವಾದ  ಸಮಯ ಗವರ್ನರನ ಮನೆಯಲ್ಲಿಯೇ ವ್ಯಯಿಸಲಿ ಎಂಬ ದುರುದ್ಧೇಶದಿಂದ ಈ ರೀತಿ ಹೇಳಿದ್ದರು. ಗವರ್ನರ್ ಇಮಾಮ್ ಬುಖಾರಿ ರದಿಯಲ್ಲಾಹು ಅನ್ಹುರವರಲ್ಲಿ ಈ ವಿಷಯವನ್ನು ಪ್ರಸ್ತಾಪಿಸಿಕೊಂಡಾಗ  ಇಮಾಮ್ ಬುಖಾರಿ ರದಿಯಲ್ಲಾಹು ಅನ್ಹು  "ಜ್ಞಾನವನ್ನು  ಪಡೆಯಬೇಕಾಗಿರುವುದು."  ಮತ್ತು ಆಡಳಿತಗಾರರ ಕಾಲಿನ ಬಳಿಗೆ ವಿದ್ಯೆಯನ್ನು ಕೊಂಡೊಯ್ಯಲು ನಾನು ಬಯಸುವುದಿಲ್ಲ. ಯಾರಾದರೂ ಕಲಿಯಲು ಬಯಸಿದ್ದಲ್ಲಿ ತನ್ನ ವಿಧ್ಯಾಲಯಕ್ಕೆ ಬರಲಿ ಎಂದು ಕಡಕ್ಕಾಗಿ ಉತ್ತರಿಸಿದರು. ಇವರ ಮುಂದೆ ತಮ್ಮ ಬೇಳೆ ಬೇಯುವುದಿಲ್ಲ ಎಂದು ಅರಿತ ಗವರ್ನರ್ ಮಗನನ್ನು ಇಮಾಮರ ವಿಧ್ಯಾಲಯಕ್ಕೆ ಕಳುಹಿಸಲು ಒಪ್ಪಿದನು ಆದರೆ ತನ್ನ ಮಗನನ್ನು ಬಡವರ ಮಕ್ಕಳ ಜೊತೆಗೆ ಕೂರಿಸದೆ ಅವನಿಗೆ ಪ್ರತ್ಯೇಕವಾಗಿ ಕಳುಹಿಸಬೇಕು ಎಂಬ ಕಂಡೀಷನ್ನು ಇಮಾಮರ ಮುಂದಿಟ್ಟನು. ಇಮಾಮ್ ಬುಖಾರಿ ರದಿಯಲ್ಲಾಹು ಅನ್ಹು ಅದನ್ನು ನಿರಾಕರಿಸಿದಾಗ  ಆ ಗವರ್ನರ್ ತನ್ನ ತಾಯಿನಾಡದ ಬುಖರದಿಂದಲೇ ಗಡೀಪಾರು ಮಾಡಲು ಆದೇಶ ಹೊರಡಿಸಿದನು. ಇಮಾಮ್ ಬುಖಾರಿ ರದಿಯಲ್ಲಾಹು ಅನ್ಹುರವರು ಬಹಳ ದುಖದಿಂದ ಅಲ್ಲಿಂದ  ಹೊರಡುತ್ತಾರೆ.

ಇಮಾಮ್ ಬುಖಾರಿ ರದಿಯಲ್ಲಾಹು ಅನ್ಹುರನ್ನು ತಾಯ್ನಾಡಿನಿಂದ ಬಹಿಷ್ಕರಿಸಿ ಒಂದು ತಿಂಗಳು ಕಳೆಯುವುದಕ್ಕಿಂತ ಮುಂಚಿತವಾಗಿ ಭಾಗ್ಧಾದಿನ ಖಲೀಫ ಬುಖಾರದ ಗವರ್ನರನ್ನು ವಜಾ ಮಾಡಿ ಜೈಲಿಗೆ ಎಸೆಯಲಾಯಿತು. ಕೆಲವು ದಿನಗಳಲ್ಲಿಯೇ ಅವನು ಜೈಲಿನಲ್ಲಿ ಸಾವನ್ನಪ್ಪಿದನು, ಹಾಗೇನೇ ಗವರ್ನರ ಎಲ್ಲಾ ಬೆಂಬಲಿಗರು ಅಪಮಾನಕರ ರೀತಿಯಲ್ಲಿ ಸಾವನ್ನಪ್ಪಿದರು.

ಇಮಾಮ್ ಬುಖಾರಿ ರದಿಯಲ್ಲಾಹು ಅನ್ಹುರವರು ಬುಖರದಿಂದ ಸಮರ್‌ಖಂಡ್ ನಗರಕ್ಕೆ ಪ್ರಯಾಣ ಬೆಳೆಸಲು ತೀರ್ಮಾನಿಸುತ್ತಾರೆ. ದಾರಿ ಮಧ್ಯೆಯಲ್ಲಿ ಅಲ್ಲಿನ ಜನರು ತನ್ನ ಬಗ್ಗೆ ಎರಡು ಅಭಿಪ್ರಾಯವನ್ನು ಹೊಂದಿದ್ದಾರೆ ಎಂಬ ವಿಷಯವನ್ನು ತಿಳಿದ ಇಮಾಮರು "ಖರ್ಥೆಂಗ್" ಎಂಬ ಹಳ್ಳಿಯಲ್ಲಿ ವಾಸ್ತವ್ಯ ಹೂಡಿದರು. ಒಂದು ರಾತ್ರಿ ತಹಜ್ಜುದ್ ನಮಾಜ್ ಮಾಡಿ ತನ್ನ ಎರಡು ಕೈಗಳನ್ನು ಆಕಾಶಕ್ಕೆ ಚಾಚಿ  "ಈ ಭೂಮಿಯು ಹೊಟ್ಟೆಕಿಚ್ಚಿನಿಂದ ಕೂಡಿದ ಜನರಿಂದ ಇಕ್ಕಟ್ಟಾಗಿದೆ, ಇದು ನನಗೆ ಬಹಳ ತೊಂದರೆ ಕೊಡ್ತಾ ಇದೆ. ಯಾ ಅಲ್ಲಾಹ್ ನನ್ನನ್ನು ನಿನ್ನ ಬಳಿಗೆ ಕರೆಸಿಕೊ..." ಎಂದು ಕಣ್ಣೀರು ಸುರಿಸುತ್ತಾ ಅಲ್ಲಾಹನಲ್ಲಿ ಪ್ರಾರ್ಥಿಸಿದರು.  ಆ ಪ್ರಾರ್ಥನೆಯ ನಂತರ ಅವರು ಅನಾರೋಗ್ಯ ಪೀಡಿತರಾದರು. ಈದ್ ಉಲ್ ಫಿತ್ರ್'ನ ರಾತ್ರಿ ಹಿಜಿರ್ 256ರ ಶವ್ವಾಲ್ ಒಂದನೇ ರಾತ್ರಿ  ಅಲ್ಲಾಹನ ಕರೆಗೆ ಓಗೊಟ್ಟು ಅಲ್ಲಾಹನ ಬಳಿಗೆ ತೆರಳಿದರು. ಮರಣ ಹೊಂದುವಾಗ ಇಮಾಮ್ ಬುಖಾರಿಯವರಿಗೆ ಕೇವಲ 62 (ಹಿಜಿರಿ ಪ್ರಕಾರ) ವರ್ಷ ಪ್ರಾಯ.

ಇಮಾಮ್ ಬುಖಾರಿ ರದಿಯಲ್ಲಾಹು ಅನ್ಹುರವರ ಆ ಪವಿತ್ರ ಶರೀರವನ್ನು ಅಲ್ಲಿಯೇ ಧಫನ ಮಾಡಲಾಯಿತು. ಹಲವಾರು ದಿವಸಗಳ ಕಾಲ ಅವರ ಸಮಾಧಿಯಿಂದ ಕಸ್ತೂರಿಯ ಪರಿಮಳವು ಹೊರಬರುತ್ತಿತ್ತು. ಇದನ್ನು ವೀಕ್ಷಿಸಲು ದೂರ ದೂರದಿಂದ ಜನರು ಬರುತ್ತಿದ್ದರು, ಬಂದವರು ಬರಖತ್'ಗಾಗಿ ಸಮಾದಿಯಿಂದ  ಮಣ್ಣು ಕೊಂಡುಹೋಗುತ್ತಿದ್ದರು.

ಅಬುಲ್ ಫತಹ್ ಅಲ್ ಸಮರ್‌ಖಂಡಿ ರದಿಯಲ್ಲಾಹು ಅನ್ಹು ಹೇಳುತ್ತಾರೆ, ಇಮಾಮ್ ಬುಖಾರಿ ರದಿಯಲ್ಲಾಹು ಅನ್ಹುರವರು ಮರಣಹೊಂದಿ 2 ವರ್ಷದ ಬಳಿಕ ಸಮರ್‌ಖಂಡ್ ನಗರವು ಬರಗಾಲಕ್ಕೆ ತುತ್ತಾಯಿತು. ಅಲ್ಲಿನ ಜನರು ಇಸ್ತಿಸ್ಖಾ ನಮಾಝ್ ಮಾಡಿ ಪ್ರಾರ್ಥಿಸಿದರು. ಆದರೂ ಮಳೆ ಬಂದಿಲ್ಲ. ಓರ್ವ ಸಂತ ಪುರುಷ ಅಲ್ಲಿನ ಖಾಝಿಯವರ ಬಳಿಗೆ ತೆರಳಿ  ಅವರಲ್ಲಿ ನೀವು ಸಮರ್‌ಖಂಡ್ ನಿವಾಸಿಗಳ ಜೊತೆಗೂಡಿ ಇಮಾಮ್ ಬುಖಾರಿ ರದಿಯಲ್ಲಾಹು ಅನ್ಹುರವರ ಸಮಾಧಿಯ ಬಳಿ ಹೋಗಿರಿ ಮತ್ತು ಇಮಾಮ್ ಬುಖಾರಿಯವರನ್ನು ಮದ್ಯವರ್ತಿಯನ್ನಾಗಿಸಿ ಅಲ್ಲಾಹನಲ್ಲಿ ಪ್ರಾರ್ಥಿಸಿರಿ. ಖಂಡಿತವಾಗಿಯೂ ಅಲ್ಲಾಹನು ಸ್ವೀಕರಿಸುವನು. ಖಾಝಿಯವರು ತನ್ನ ಸಮರ್‌ಖಂಡ್ ನಿವಾಸಿಗಳ ಜೊತೆ ಇಮಾಮ್ ಬುಖಾರಿ ರದಿಯಲ್ಲಾಹು ಅನ್ಹುರವರ ಸಮಾಧಿಯ ಬಳಿ ತೆರಳಿ ಇಮಾಮ್ ಬುಖಾರಿ ರದಿಯಲ್ಲಾಹು ಅನ್ಹುರವರನ್ನು ಮಧ್ಯವರ್ತಿಯನ್ನಾಗಿಸಿ ಕಣ್ಣೀರು ಸುರಿಸುತ್ತಾ ಪ್ರಾರ್ಥಿಸಿದರು. ಮೋಡಗಳು ಇಲ್ಲದ ಆಕಾಶದಲ್ಲಿ ಥಟ್ಟನೆ ಮೋಡಗಳು ಆವರಿಸಿ ಭಾರೀ ಪ್ರಮಾಣದ ಮಳೆಯಾಯಿತು. ಭಾರೀ ಮಳೆಯ ಕಾರಣದಿಂದ ಅವರು ಖರ್ಥಂಗ್ ಪ್ರದೇಶದಿಂದ ಸಮರ್‌ಖಂಡ್ ಪ್ರದೇಶಕ್ಕೆ ತಲುಪಲು 7 ದಿವಸಗಳು ಬೇಕಾಯಿತು.

*ಇಮಾಮ್ ಬುಖಾರಿಯವರ ಬಗ್ಗೆ ಪ್ರವಾದಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮ್'ರವರ ಅಂಗೀಕಾರ:*

ವರ್ರಾಖ್ ರದಿಯಲ್ಲಾಹು ಅನ್ಹು ಹೇಳುತ್ತಾರೆ, ಒಂದು ದಿವಸ ನಾನು ಪ್ರವಾದಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮ್'ರವರನ್ನು ಕನಸಿನಲ್ಲಿ ಕಂಡೆನು. ಇಮಾಮ್ ಬುಖಾರಿ ರದಿಯಲ್ಲಾಹು ಅನ್ಹು ಪ್ರವಾದಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮ್'ರವರ ಹಿಂದೆಯೇ ನಡೆಯುತ್ತಿದ್ದರು ಮತ್ತು ಎಲ್ಲೆಲ್ಲಿ  ಪ್ರವಾದಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮ್'ರವರು ಹೆಜ್ಜೆ ಇಡುತ್ತಿದ್ದರು, ಇಮಾಮ್ ಬುಖಾರಿ ರವರು ಅವರ ಹೆಜ್ಜೆಯನ್ನು ಸ್ವಲ್ಪವೂ ತಪ್ಪದೆ ಹಿಂಬಾಲಿಸುತ್ತಾ ನಡೆಯುತ್ತಿದ್ದರು. 

ಫರ್'ಬರೀ ರದಿಯಲ್ಲಾಹು ಅನ್ಹು ಹೇಳುತ್ತಾರೆ,  ನಾನು ಪ್ರವಾದಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮ್'ರವರನ್ನು ಸ್ವಪ್ನದಲ್ಲಿ ದರ್ಶಿಸಿದೆ, ಪ್ರವಾದಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮ್'ರವರು ನನ್ನಲ್ಲಿ ತಾವು ಯಾವ ಕಡೆಗೆ ಹೊರಟಿದ್ದೀರಿ ಎಂದು ಕೇಳಿದರು. ಆವಾಗ ನಾನು ಇಮಾಮ್ ಬುಖಾರಿ ರದಿಯಲ್ಲಾಹು ಅನ್ಹುರವರ ಸನಿಹಕ್ಕೆ ತೆರಳಿದ್ದೇನೆ ಎಂದಾಗ ಅವರು (ಸ್ವಲ್ಲಲ್ಲಾಹು ಅಲೈಹಿ ವಸಲ್ಲಮ್) ಹೋಗಿ ನನ್ನ ಸಲಾಮ್ ತಿಳಿಸಿರಿ ಎಂದು ಹೇಳಿದರು.

ಅಬ್ದ್ ಅಲ್ ವಾಹಿದ್ ಇಬ್ನ್ ಆದಮ್ ಒವೈಸಿ ರದಿಯಲ್ಲಾಹು ಅನ್ಹು ಹೇಳಿದರು: ನಾನು ಪ್ರವಾದಿ ಸಲ್ಲಲ್ಲಾಹು ಅಲೈಹಿ ವಸಲ್ಲಮ್'ರವರ ಸ್ವಪ್ನದಲ್ಲಿ ಕಂಡೆನು. ಪ್ರವಾದಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮ್'ರವರು ತಮ್ಮ ಸಹಚರರೊಂದಿಗೆ ನಿಂತು ಯಾರನ್ನೂ ಕಾಯುತ್ತಿರುವ ಹಾಗೆ ಕಂಡಿತು ಆವಾಗ ನಾನು ಅವರಲ್ಲಿ ' ಓ ಅಲ್ಲಾಹನ ಸಂದೇಶವಾಹಕರೇ. ತಾವು ಯಾರಾ ಆಗಮನವನ್ನು ನಿರೀಕ್ಷಿಸುತ್ತಿರುವುದು? ಎಂದು ಕೇಳಿದೆ. ಅದಕ್ಕೆ ಅವರು(ಸಲ್ಲಲ್ಲಾಹು ಅಲೈಹಿ ವಸಲ್ಲಮ್)  "ಇಮಾಮ್ ಬುಖಾರಿಯವರನ್ನಾಗಿದೆ" ಎಂದು ಹೇಳಿದರು. ಕೆಲವು ದಿನಗಳ ನಂತರ ಇಮಾಮ್ ಬುಖಾರಿ ರದಿಯಲ್ಲಾಹು ಅನ್ಹುರವರ ಮರಣದ ವಾರ್ತೆಯನ್ನು ಕೇಳಿದೆನು. ಇಮಾಮ್ ಬುಖಾರಿ ರದಿಯಲ್ಲಾಹು ಅನ್ಹುರವರ ಮರಣದ ಸಮಯವನ್ನು ತುಲನೆ ಮಾಡಿ ನೋಡಿದಾಗ ಪ್ರವಾದಿ ಸ್ವಲ್ಲಾಹು ಅಲೈಹಿ ವಸಲ್ಲಮ್'ರವರ ಸ್ವಪ್ನದಲ್ಲಿ ಕಂಡ ಅದೇ ಸಂದರ್ಭದಲ್ಲಾಗಿತ್ತು.

ಅಲ್ಲಾಹನು ನಮೆಗೆಲ್ಲರಿಗೂ ಉತ್ತಮ ರೀತಿಯಲ್ಲಿ ವಿಧ್ಯೆ ಕಲಿಯಲು ಮತ್ತು ಅದನ್ನು ಅನುಸರಿಸಿ ಜೀವಿಸಲು ಭಾಗ್ಯವನ್ನು ನೀಡಲಿ... ಆಮೀನ್.

Comments

Popular posts from this blog

ಗ್ರಹಣ ನಮಾಜಿನ ರೂಪ

ಗ್ರಹಣ ನಮಾಜಿನ ರೂಪ *ಚಂದ್ರಗ್ರಹಣದ ಸುನ್ನತ್ ನಮಾಜು ಎರಡು ರಕಅತ್ ಅಲ್ಲಾಹನಿಗಾಗಿ ಜಮಾಅತ್ತಾಗಿ ನಾನು ನಿರ್ವಹಿಸುವೆನು* ಎಂದು ನಿಯ್ಯತ್ ಮಾಡಿ ಅಲ್ಲಾಹು ಅಕ್ಬರ್ ಎಂದು ಹೇಳಿ ನಮಾಜಿಗೆ ಪ್ರವೇಶಿಸುವು...

ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ. ಲೇ - ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಅಕ್ಕರೆಕೆರೆ.

ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ. ಲೇ - ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಅಕ್ಕರೆಕೆರೆ. ಆಮಿನ ಬೀವಿ ರ.ಅ ಗರ್ಭಿಣಿಯಾಗಿರುವಾಗ ವ್ಯಾಪಾರಕ್ಕಾಗಿ ಸಿರಿಯಾಕ್ಕೆ ಹೋಗಿದ್ದ ಅಬ್ದುಲ್ಲಾಹ್ (ರ.ಅ) ಮರಳಿ ಬರುವಾಗ ಮದೀನದಲ್ಲಿ ವಫಾತಾದರು.ತಂದೆಯ ಮಾವಂದಿರರಾದ ಬನುನ್ನಜ್ಜಾರ್ ಗೋತ್ರದವರ ಬಳಿ ದಫನ ಮಾಡಲಾಯಿತು.ರಬೀವುಲ್ ಹನ್ನೆರಡು ಸೋಮವಾರ ಸುಬಹಿಯ ಸ್ವಲ್ಪ ಮುಂಚೆ ಅಂತ್ಯ ಪ್ರವಾದಿ ಮುಹಮ್ಮದ್ ಮುಸ್ತಫ ಸ.ಅ ಮಕ್ಕಾದಲ್ಲಿ ಜನಿಸಿದರು.ಅಂದು ಕ್ರಿಸ್ತಶಕ 571 ಎಪ್ರಿಲ್ 21 ಆಗಿತ್ತು.ನೆಬಿ ಸ.ಅ ಜನಿಸಿದ ದಿನ ಅತ್ಯಂತ ಸಂತೋಷದಾಯಕವಾದ ದಿನವಾಗಿದೆ.ಮಾನವ ಶ್ರೇಷ್ಠರಾದ ಪ್ರವಾದಿ ಮುಹಮ್ಮದ್ ಸ.ಅ ರವರ ಮುಖಾಂತರ ಮಾನವ ಸಮೂಹವನ್ನು ಅಲ್ಲಾಹು ಅನುಗ್ರಹಿಸಿದ ಸುದಿನವಾಗಿದೆ ಅಂದು.ಮುಸಲ್ಮಾನರು ಈ ಅನುಗ್ರಹಕ್ಕೆ ಕ್ರತಜ್ಞತೆ ಸಲ್ಲಿಸಿ ಅಂದು ಮೀಲಾದುನ್ನಬಿ ಆಚರಣೆ ಮಾಡುತ್ತಾರೆ.ನೆಬಿ ಸ.ಅ ರವರ ಮದಹ್ ಕೀರ್ತನೆಗಳನ್ನು ಹೇಳಿ, ಹಾಡಿಹೊಗಳಿ ದಾನಧರ್ಮಗಳನ್ನು ನೀಡಿ ಸಂತೋಷ ಪ್ರಕಟಿಸುತ್ತಾರೆ.              ಭೂಮಿಯ ಮೇಲೆ ಜನ್ಮವೆತ್ತಿ ಬಂದ ಅತ್ಯಂತ ಉತ್ತಮನಾದ ಮನುಷ್ಯ ನೆಬಿ ಸ.ಅ ಆಗಿದ್ದಾರೆ.ಮುಂಜಿಕರ್ಮ ನಿರ್ವಹಿಸಲ್ಪಟ್ಟ,ಹೊಕ್ಕುಳ ಬಳ್ಳಿ ಕತ್ತರಿಸಲ್ಪಟ್ಟ,ಕಣ್ಣಿಗೆ ಸುರುಮ ಹಾಕಲ್ಪಟ್ಟ ಸ್ಥಿತಿಯಲ್ಲಿ ಸಂಪೂರ್ಣ ಸಂಶುದ್ಧವಾದ ರೀತಿಯಲ್ಲಾಗಿದೆ ಅವರು ಜನಿಸಿದ್ದು.ಅಬೂತಾಲಿಬರ ಮನೆಯಲ್ಲಾಗಿದೆ ಜನನ.ಹೆರಿಗೆ...

ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಕರ ಪಾತ್ರ

ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಕರ ಪಾತ್ರ _✍🏻ಜಹಫರ್ ಸಾಧಿಕ್ ಕಟ್ಟದಪಡ್ಪು_ _ನಮ್ಮ ಸಮಾಜವು ನಮಗೆ ಜನ್ಮ ಕೊಟ್ಟ ತಂದೆ ತಾಯಿಯ ನಂತರ ಮಹತ್ತರವಾದ ಸ್ಥಾನವನ್ನು ಶಿಕ್ಷಕರಿಗೆ ನೀಡಿ ಗೌರವಿಸಿದೆ.  ಶಿಲ್ಪಿ...