*ಹಜರುಲ್ ಅಸ್ವದ್*
✍ _ಗಫೂರ್ ಬಾಯಾರ್_
*ಸ್ವರ್ಗದಿಂದ ತರಲಾದ ಮುತ್ತು ನಬಿ ﷺ ರವರು ಚುಂಬಿಸಿದ ಹಜರುಲ್ ಅಸ್ವದ್ ಹಲವಾರು ಸಲ ಚುಂಬಿಸಲು ನೀ ಭಾಗ್ಯವ ನೀಡು ಅಲ್ಲಾಹ್ ಆಮೀನ್*
ವಿಶುದ್ಧ ಕಅಬಾಲಯದ ಆರಂಭದಿಂದಲೇ ಕಅಬಾಲಯದ ಒಂದು ಮೂಲೆಯಲ್ಲಿ ಸಂರಕ್ಷಿಸಿಕೊಂಡು ಬರುತ್ತಿರುವ, ಅತೀ ಪುರಾತನವಾದ ಒಂದು ಕಪ್ಪು ಕಲ್ಲಾಗಿದೆ
_ಹಜರುಲ್ ಅಸ್ವದ್_.
ಮನುಷ್ಯರು ಅಲ್ಲಾಹುವನ್ನು ಆರಾಧಿಸಲಿಕ್ಕಾಗಿ ಭೂಮಿಯಲ್ಲಿ ಸ್ಥಾಪಿಸಿದ ಮೊದಲನೇ ಭವನ ಕಅಬಾಲಯ. ಇದರ ಆರಂಭದಿಂದಲೇ ಏಕ ಇಲಾಹಿ ಆರಾಧನೆಗೆ ಸಾಕ್ಷಿ ವಹಿಸಿದ ಒಂದು ಕಲ್ಲು, ಎಂಬಿ ಚರಿತ್ರೆ ಪ್ರಾಧಾನ್ಯವಿದೆ ಈ ಕಲ್ಲಿಗೆ.
ಇದಕ್ಕೆ ಆಧಾರವಾಗಿ ಹದೀಸ್ ಉಲ್ಲೇಖಿಸುವುದು ಹೀಗೆಯಾಗಿದೆ.....
*ಹಜರುಲ್ ಅಸ್ವದ್ ಸ್ವರ್ಗದ ಕಲ್ಲಾಗಿದೆ. ಇಬ್ನು ಅಬ್ಬಾಸ್ (ರ)ರವರ ಒಂದು ಹದೀಸಿನಲ್ಲಿ ಈ ಪ್ರಕಾರ ಕಾಣಬಹುದು. "ಹಜರುಲ್ ಅಸ್ವದ್ ಸ್ವರ್ಗದಿಂದ ತಂದಿರುದಾಗಿದೆ. (ತಿರ್ಮುದಿ, ನಸಾಈ (ರ))*
ಮುಹಮ್ಮದ್ ನಬಿ ﷺ ರವರು ಕಅಬಾಲಯ ಪ್ರದಕ್ಷಿಣೆ ಸಮಯ ಆರಂಭಿಸಲಿಕ್ಕಿರುವ ಗುರುತಾಗಿ ಇದನ್ನು ನಿಶ್ಚಯಿಸಿದ್ದರು.
ಅದನ್ನು ಚುಂಬಿಸುವುದು, ಮುಟ್ಟಿ ಚುಂಬಿಸುವುದು, ಅದಕ್ಕೂ ಸಾದ್ಯವಾಗದ ಅವಸ್ಥೆಯಾದರೆ ಕೈಯಿಂದ ಅದರ ನೇರಕ್ಕೆ ಆಂಗ್ಯ ತೋರಿಸಿ
ತವಾಫ್ (ಪ್ರದಕ್ಷಿಣೆ) ಮಾಡಬೇಕು. (ಆರಂಭಿಸಬೇಕು)
ಈ ವಿಷಯದಲ್ಲಿ 2ನೇ ಖಲೀಫರಾದ ಉಮರುಲ್ ಫಾರೂಖ್ (ರ)ರವರು ನಡೆಸಿದ ಮಾತು ಬಹಳ ಪ್ರಶಿದ್ದವಾಗಿದೆ.
*ಕಅಬಾಲಯ ಪ್ರದಿಕ್ಷಿಣೆ ಮಾಡುವ ಸಮಯ ಹಜರುಲ್ ಅಸ್ವದ್ ಚುಂಬಿಸಿಕೊಂಡು ಉಮರ್ (ರ)ರವರು ಹೇಳಿದರು, "ಕಲ್ಲೇ, ನೀನು ಒಂದು ಕಲ್ಲು ಮಾತ್ರವಾಗಿದೆ ಎಂದು ನನಗೆ ಗೊತ್ತು. ನಿನಗೆ ಏನಾದರೂ ಉಪಕಾರ ಮಾಡಿ ಕೊಡಲೋ, ಉಪದ್ರದಿಂದ ನನ್ನನ್ನು ಸಂರಕ್ಷಿಸಲೋ, ಸಾಧ್ಯವಿಲ್ಲ. ನಬಿ ﷺ ರವರು ನಿನ್ನನ್ನು ಚುಂಬಿಸುವುದು ನಾನು ಕಂಡಿಲ್ಲವಾದರೆ ನಾನು ಒಮ್ಮೆಯೂ ನಿನ್ನನ್ನು ಚುಂಬಿಸುತ್ತಿರಲಿಲ್ಲ."*
ಅದೇ ಸಮಯ ಸಾವಿರಾರು ಜನರು ಒಂದೇ ಸಮಯ ಕಅಬಾಲಯಕ್ಕೆ ಸುತ್ತಲೂ *ತವಾಫ್* ಮಾಡುವಾಗ ಹಜರುಲ್ ಅಸ್ವದನ್ನು ಚುಂಬಿಸಲು, ಮುಟ್ಟಿ ಚುಂಬಿಸಲು, ಎಲ್ಲರಿಗೂ
ಸಾಧ್ಯವಾಗುವುದಿಲ್ಲ.
ನೂಕುನುಗ್ಗಲನಲ್ಲಿ ತವಾಫ್ ಮಾಡುವವರಿಗೆ ಕಷ್ಟವಾಗದೆ ಈ ಕಾಲದಲ್ಲಿ ಹಜರುಲ್ ಅಸ್ವದಿನ ಹತ್ತಿರಕ್ಕೆ ಕೂಡ ತಲುಪಲು ಸಾಧ್ಯವಿಲ್ಲ. ಪ್ರತ್ಯೇಕಿಸಿ ರಮಳಾನ್ ಕಾಲದಲ್ಲಿ.
ಹಜರುಲ್ ಅಸ್ವದ್ ಚುಂಬಿಸುವುದೆಂದರೆ *ಸುನ್ನತ್ತ್* ಮಾತ್ರವಾಗಿದೆ. ಅದಕ್ಕಾಗಿ ಒಟ್ಟಿಗೆ ತವಾಫ್ ಮಾಡುವವರಿಗೆ ತೊಂದರೆ ಕೊಡುವುದು ನಿಷಿದ್ಧವಾಗಿದೆ. ನೂಕುನುಗ್ಗಲಿನೊಂದಿಗೆ ತವಾಫ್ ಮಾಡುವವರಿಗೆ ಕಷ್ಟಗಳನ್ನು ಕೊಟ್ಟು ಹಜರುಲ್ ಅಸ್ವದನ್ನು ಚುಂಬಿಸಲು ಶ್ರಮಿಸುವಾಗ ನಷ್ಟವಾಗುವುದು *ಉಮ್ರ* ಒಳಗೊಂಡ ನಮ್ಮ ಸತ್ಕರ್ಮಗಳಾಗಿದೆ.
ಚುಂಬಿಸುವುದು, ಮುಟ್ಟಿ ಚುಂಬಿಸುವುದು.. ಇದಕ್ಕೆ ಸಾಧ್ಯವಾಗದ ಅವಸ್ಥೆಯಾದರೆ ಕೈಯಿಂದ ಕಲ್ಲಿನ ನೇರ ಆಂಗ್ಯ ತೋರಿಸುವುದು.. ಇದಾಗಿದೆ ಪ್ರವಾದಿ ﷺ ನಿರ್ದೇಶಗಳು.
ನೂಕುನುಗ್ಗಲಿನಿಂದ ತವಾಫ್ ಮಾಡುವ ವೃದ್ದೆಯರು, ಅಬಲೆಯರು ಒಳಗೊಂಡ ಜನರಿಗೆ ಪ್ರಯಾಸ ಉಂಟು ಮಾಡಿ ಹಜರುಲ್ ಅಸ್ವದನ್ನು ಚುಂಬಿಸುವುದಕ್ಕಿಂತ ಒಳ್ಳೆಯದು ಕೈಯಿಂದ ಕಲ್ಲಿನ ನೇರಕ್ಕೆ ಆಂಗ್ಯ ತೋರಿಸುವುದಾಗಿದೆ ಉತ್ತಮ. ಪ್ರತ್ಯೇಕಿಸಿ ಸ್ತ್ರೀಯರಿಗಾಗಿ ಎಚ್ಚರಿಕೆ ವಹಿಸುವುದು ಒಳ್ಳೆಯದು.
✍ _ಗಫೂರ್ ಬಾಯಾರ್_
Comments