Skip to main content

ಉಮ್ಮಾ..... ನನ್ನನ್ನು ಕ್ಷಮಿಸಿ ಬಿಡು ಉಮ್ಮಾ

ಉಮ್ಮಾ..
ನನ್ನನ್ನು ಕ್ಷಮಿಸು ಬಿಡು.

*ಉಸ್ತಾದರ ಪ್ರಭಾಷಣ ಕೇಳಿ ತಾನರಿಯದೇ ಕಣ್ಣುಗಳಿಂದ ನೀರಿನ ಹನಿಗಳು ನೆಲಕ್ಕೆ ಉದುರುತ್ತಿತ್ತು. ಈ ಭಾಷಣವು ಕೇಳದವರು ಇರಬಹುದು,ಕೇಳಿದವರು ತನ್ನ ಮುಗ್ಧ ತಾಯಿಯ ಮೇಲಿರುವ  ಪ್ರೀತಿಯು ಖಂಡಿತವಾಗಿಯೂ ಹೆಚ್ಚಿರಬಹುದು, ಕೇಳದವರಿಗೆ ಬೇಕಾಗಿ ಬರೆಯಬೇಕು ಅನ್ನಿಸಿತು.ಅಲ್ಲಾಹು ತಾಯಿಗೆ ಕೊಟ್ಟಿರುವ ಗೌರವ,ಸ್ಥಾನಮಾನ ಬರಹಕ್ಕೆ ನಿಲುಕದು*

ಕ್ರಿ.ಶ.7ನೇ ಶತಮಾನದಲ್ಲಿ ಜೀವಿಸಿದ್ದ ಇಮಾಮುಲ್ ಜೌಹರಿ ತನ್ನ ಗ್ರಂಥದಲ್ಲಿ ಉಲ್ಲೇಖಿಸಿದ ಒಂದು ಘಟನೆ.

ಇಡೀ ವಿಶ್ವಾದ್ಯಾಂತ ಪ್ರಸಿದ್ಧಿ ಪಡೆದಂತಹ ಆತ್ಮೀಯ ಪಂಡಿತ ಮಾಲಿಕ್ ಇಬ್ನ್ ದಿನಾರ್ ರವರು ಹಜ್ಜ್ ನಿರ್ವಹಿಸಿದಂತಹ ಒಬ್ಬ ವ್ಯಕ್ತಿಯ ಬಳಿ ಹೇಳುತ್ತಾರೆ *ನಿನ್ನ ಈ ವರ್ಷದ ಹಜ್ಜ್ ಅಲ್ಲಾಹು ಸ್ವೀಕರಿಸಲಿಲ್ಲ,,ನೀನು ನಿನ್ನ ಜೀವನದಲ್ಲಿ ಅಂತಹ ತಪ್ಪು ಏನು ಮಾಡಿರುವೆ? ಕಾರಣವೇನು??*
ಅವಾಗ ಆ ವ್ಯಕ್ತಿಯ ಉತ್ತರ ಹೀಗಿತ್ತು:: *"ನಾನು ಒಂದು ದಿವಸ ಕಂಠಪೂರ್ತಿ ಕುಡಿದು;ಅಲೆದಾಡುತ್ತಾ ಮನೆಯ ಹತ್ತಿರಕ್ಕೆ ತಲುಪಿದೆ ತಕ್ಷಣ ನನ್ನನ್ನು ಕಂಡ ನನ್ನ ತಾಯಿಯು ಕೇಳಿದರು ನಾಳೆ ಊರಿಗೆಲ್ಲಾ ರಮ್ಝಾನ್ ಅಗಿರುವಾಗ ನೀನು ಕುಡಿದು ಯಾಕೆ ಅಲೆದಾಡುತ್ತಿದ್ಯ? ಎಂದು ಕೇಳಿದ್ದೆ ತಡ ನಾನು ತಾಯಿಯನ್ನು ಕೈಯಿಂದ ಹಿಡಿದು ಸರ್ರನೆ ನೂಕ್ಬಿಟ್ಟೆ ತಾಯಿಯು ಹೋಗಿ ಬೆಂಕಿಗೆ ಬಿದ್ದು ಬಿಟ್ಟರು ಇದನ್ನು ಕಂಡ ನನ್ನ ದೊಡ್ಡಪ್ಪನ ಮಗಳು ನನ್ನನ್ನು ಹಿಡಿದು ಒಂದು ರೂಮಿಗೆ ಕೂಡಿ ಹಾಕಿ ಚಿಲಕ ಹಾಕಿಬಿಟ್ಟಳು, ಸ್ವಲ್ಪ ಸಮಯ ಕಳೆದು ಮಧ್ಯರಾತ್ರಿಯಲ್ಲಿ ನನಗೆ ಕುಡಿತದ  ನಸೆ ಇಳಿಯಿತು ಆಗಲೇ ಕಿರುಚಾಡಿ ರೂಮಿನ ಬಾಗಿಲು ತರೆಯಲು ಹೇಳಿದರೂ ಬಾಗಿಲು ತೆರೆಯಲಿಲ್ಲ ದೊಡ್ಡಪ್ಪನ ಮಗಳನ್ನು ಬಳಿ ಕೇಳಿದೆ ಯಾವ ಕಾರಣಕ್ಕಾಗಿ ನನ್ನನ್ನು ರೂಮಿನಲ್ಲಿ ಕೂಡಿ ಹಾಕಿದಿಯಾ? ಅವಾಗಲೇ ಅವಳಿಂದ ಉತ್ತರ. ಏ ಧಿಕ್ಕಾರಿ ನೀನು ದಿಕ್ಕಾರಿ...ನೀನು ನಿನ್ನ ಬಡಪಾಯಿ ತಾಯಿಯನ್ನು ಬೆಂಕಿಗೆ  ಹಾಕಿ ಕೊಂದಿಯಲ್ವ ನಿನಗೆ ಹೇಗೆ ಮನಸ್ಸು ಬಂತು? ಕೇಳಿದ್ದೆ ತಡ ನಾನು ಬಾಗಿಲು ಮುರಿದು ಹೊರಗೆ ಬಂದು ನೋಡುವಾಗ ನನ್ನ ಪ್ರೀತಿಯ ತಾಯಿಯು ಬೆಂಕಿ ತಗುಲಿ ನಿಶ್ಚಲವಾಗಿ ಮಲಗಿದ್ದರು..ಕುಡಿದ ಅಮಲಿನಿಂದ ಗೊತ್ತಿಲ್ಲದೆ ತಪ್ಪು ಮಾಡಿದ್ದು, ಅದನ್ನರಿತು ನಾನು ನನ್ನ ತಾಯಿಯನ್ನು ನೂಕಿದ ನನ್ನ ಕೈಯನ್ನು ಬಾಗಿಲಿಗೆ ಸಿಲುಕಿಸಿ ತುಂಡರಿಸಿಕೊಂಡೆ, ನನ್ನ ಕಾಲಿಗೆ ಬಲೆ ಹಾಕೊಂಡೆ ಅದಲ್ಲದೆ ನನ್ನ ಕೈಯಲ್ಲಿ 70,000ದಿರ್ಹಮ್ ಇತ್ತು ಅದನ್ನೆಲ್ಲ ದಾನನೀಡಿದೆ,ಅದು ಕಳೆದು ನಾನು ಮನೆ ಬಿಟ್ಟು ಹೋದೆ,ಕಳೆದ 39 ವರ್ಷಗಳಿಂದ ನಾನು ಹಜ್ಜ್ ಕರ್ಮವನ್ನೂ ಮಾಡುತ್ತಿದ್ದೇನೆ ಹಾಗೂ 39 ವರ್ಷಗಳಿಂದ ಅಲ್ಲಾಹನಿಗೆ ಇಬಾದತ್ ಮಾಡುತ್ತಿದ್ದೇನೆ, ಅದಲ್ಲದೆ ಎಲ್ಲಾ ವರ್ಷವು ಹಜ್ಜ್ ಮುಗಿಸಿ ಬರುವಷ್ಟರಲ್ಲಿ ನಿಮ್ಮಂಥ ವಿಶ್ವ ಪ್ರಸಿದ್ದವಾದ ಆತ್ಮೀಯ ಪಂಡಿತರು ನನ್ನ ಹತ್ತಿರ ಬಂದು ಹೇಳುತ್ತಿದ್ದರು "ಓ ಸಹೋದರ ನಿನ್ನ ಈ ವರ್ಷದ ಹಜ್ಜ್ ಅಲ್ಲಾಹು ಸ್ವೀಕರಿಸಿಲ್ಲ" ಅಂತ, ಇದು ನನ್ನ 40ನೇ ವರ್ಷದ ಹಜ್ಜ್ ಅದು ಕೂಡ ನೀವು ಹೇಳುತ್ತಿದ್ದೀರಿ ಅಲ್ಲಾಹು ಸ್ವೀಕರಿಸಿಲ್ಲ ಅಂತ* ಇದು ಕೇಳಿದ ತಕ್ಷಣ ಮಾಲಿಕ್ ಇಬ್ನ್ ದಿನಾರಿಗೆ ಸಹಿಸಲು ಸಾಧ್ಯವಾಗುತ್ತಿರಲಿಲ್ಲ,. ಕೋಪದಿಂದ *"ಏ ದಿಕ್ಕಾರಿ.....ನಿನಗೆ ಆ ತಾಯಿಯನ್ನು ಬೆಂಕಿಗೆ ಹಾಕಿ ಕೊಲ್ಲುದಕ್ಕಿಂತ ಇಡೀ ಪ್ರಪಂಚಕ್ಕೆ ಬೆಂಕಿ ಕೊಡುಬಹುದಿತ್ತಲ್ವ"* ಎಂದು ಹೇಳಿ ಅಲ್ಲಿಂದ ಹೋಗಿಯೇ ಬಿಟ್ಟರು..ಇದನ್ನು ಕಂಡ ವ್ಯಕ್ತಿಯೂ ತನ್ನ ಎರಡು ಕೈಗಳನ್ನು ಉದ್ಗರಿಸಿ ಬಿಕ್ಕಿ ಬಿಕ್ಕಿ ಅಳಲಾರಂಭಿಸಿದರು *"ಅಲ್ಲಾಹುವೇ ನೀನು ಕೈಬಿಟ್ಟರೆ ನನ್ನನ್ನು ಯಾರು ಕೈಹಿಡಿಯುವವರಿಲ್ಲ ಅಲ್ಲಾಹ್.ಮಾಲಿಕ್ ಇಬ್ನ್ ದಿನಾರ್ ಕೂಡ ನನ್ನನ್ನು ಏಕಾಂಗಿಯಾಗಿ ಮಾಡಿ ಬಿಟ್ಟು ಹೋದರು ಅಲ್ಲಾಹ್..ನನ್ನನ್ನು ಕ್ಷಮಿಸು ಅಲ್ಲಾಹ್.."* ಎಂಬ ದುಹಾಃ ಮುಗಿಯುವಷ್ಟರಲ್ಲಿ ಆ ವ್ಯಕ್ತಿಯು ಇಹಲೋಕ ತ್ಯಜಿಸಿಯಾಗಿತ್ತು.. ತದನಂತರ ಮಾಲಿಕ್ ಇಬ್ನ್ ದಿನಾರ್ ನಿದ್ರೆಯಲ್ಲಿ ಇದ್ದ ಸಮಯ ಅಲ್ಲಾಹನ ರಸೂಲ್(ಸ.ಅ.)ರವರು ಸ್ವಪ್ನದಲ್ಲಿ ಬಂದು *"ಓ ಮಾಲಿಕ್ ತಂಗಳೇ ಆ ವ್ಯಕ್ತಿಗೆ ಅಲ್ಲಾಹು ಕ್ಷಮೆ(ಮಾಫ್) ನೀಡಿದ್ದಾನೆ, ನೀವು ಎದ್ದು ಆ ವ್ಯಕ್ತಿಯ ಮೇಲೆ ಮಯ್ಯತ್ ನಮಾಝ್ ನಿರ್ವಹಿಸಿ.ಆದರೇ ತಾಯಿಯನ್ನು ಹೊಡೆದ ಕಾರಣಕ್ಕೆ ಅಲ್ಲಾಹು ಅವನಿಗೆ ಕ್ಷಮೆ (ಮಾಫ್) ನೀಡಿಲ್ಲ...40 ವರ್ಷ ಪೂರ್ಣವಾಗಿ ಹಜ್ಜ್, ಇಬಾದತ್,ವ್ರತ ಮತ್ತು ದಾನಧರ್ಮ ನೀಡಿದರೂ ತಾಯಿಗೆ ಹೊಡೆದ ಕಾರಣಕ್ಕಾಗಿ ಅಲ್ಲಾಹು ಪೂರ್ಣವಾಗಿ ಕ್ಷಮೆ ನೀಡಿಲ್ಲ,ಮೂರು ದಿವಸ ಆ ವ್ಯಕಿಯನ್ನು ನರಕದಲ್ಲಿ ಹಾಕಿ ಮೂರನೇ ದಿವಸ ತಾಯಿಯ ಮನಸ್ಸಿನಲ್ಲಿ ಅಲ್ಲಾಹು ಕಾರುಣ್ಯದ ಒಂದಂಶವನ್ನು ಹಾಕಿ ಆ ವ್ಯಕ್ತಿಯನ್ನು ನರಕದಿಂದ ಮೇಲೆತ್ತುವನು,ಆದ್ದರಿಂದ ನೀವು ಎದ್ದು ಆ ವ್ಯಕ್ತಿಯ ಮೇಲೆ ನಮಾಝ್ ನಿರ್ವಹಿಸಿ"* ಎಂದು ರಸೂಲ್(ಸ.ಅ.) ರವರು ಹೇಳುವಾಗ ಇಹಲೋಕದಲ್ಲಿರುವ ಬೆಂಕಿಯು ನರಕದ ಬೆಂಕಿಯನ್ನು ನೆನಪಿಸಿ ಅಳಲಾರಂಭಿಸಿತ್ತು..😢😢
ಅಷ್ಟೊಂದು ಘೋರವಾದ ಶಿಕ್ಷೆಗೆ ಬಲಿಯಾಗುವ ಮುನ್ನವೇ ಎಚ್ಚರ ವಹಿಸಿ..ತನ್ನ ಜೀವಕ್ಕಿಂತ ಅತಿಯಾಗಿ ಪ್ರೀತಿಸಿ ಸಲಹಿದ ತಾಯಿಗೆ ನಿಂದಿಸುವುದದಾರೂ ಹೇಗೆ ಮನಸ್ಸು ಬರುತ್ತೆ???ಅಲ್ಲಾಹು ನಮಗೂ ನಮ್ಮ ತಂದೆ ತಾಯಿಗೂ ಅಫಿಯ್ಯತ್ತನ್ನು ದೀರ್ಘಾಯಸ್ಸನ್ನು ನೀಡಿ ಅನುಗ್ರಹಿಸಲಿ..ಆಮೀನ್ಭಾಷಣವು *ಮೂಲ::ಫಾರೂಕ್ ನಹೀಮಿ ಉಸ್ತಾದರ ಪ್ರಬಾಷಣದಿಂದ*

*ಅನುವಾದ. : ಅಶ್ರಫ್ ಕೆ.ಎಸ್.ಕಟ್ಟದಪಡ್ಪು*

Comments

Anonymous said…
ಆಮೀನ್ ಯಾರಬ್ಬಲ್ ಆಲಮೀನ್
Anonymous said…
ಆಮೀನ್ ಯಾರಬ್ಬಲ್ ಆಲಮೀನ್

Popular posts from this blog

ಗ್ರಹಣ ನಮಾಜಿನ ರೂಪ

ಗ್ರಹಣ ನಮಾಜಿನ ರೂಪ *ಚಂದ್ರಗ್ರಹಣದ ಸುನ್ನತ್ ನಮಾಜು ಎರಡು ರಕಅತ್ ಅಲ್ಲಾಹನಿಗಾಗಿ ಜಮಾಅತ್ತಾಗಿ ನಾನು ನಿರ್ವಹಿಸುವೆನು* ಎಂದು ನಿಯ್ಯತ್ ಮಾಡಿ ಅಲ್ಲಾಹು ಅಕ್ಬರ್ ಎಂದು ಹೇಳಿ ನಮಾಜಿಗೆ ಪ್ರವೇಶಿಸುವು...

ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ. ಲೇ - ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಅಕ್ಕರೆಕೆರೆ.

ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ. ಲೇ - ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಅಕ್ಕರೆಕೆರೆ. ಆಮಿನ ಬೀವಿ ರ.ಅ ಗರ್ಭಿಣಿಯಾಗಿರುವಾಗ ವ್ಯಾಪಾರಕ್ಕಾಗಿ ಸಿರಿಯಾಕ್ಕೆ ಹೋಗಿದ್ದ ಅಬ್ದುಲ್ಲಾಹ್ (ರ.ಅ) ಮರಳಿ ಬರುವಾಗ ಮದೀನದಲ್ಲಿ ವಫಾತಾದರು.ತಂದೆಯ ಮಾವಂದಿರರಾದ ಬನುನ್ನಜ್ಜಾರ್ ಗೋತ್ರದವರ ಬಳಿ ದಫನ ಮಾಡಲಾಯಿತು.ರಬೀವುಲ್ ಹನ್ನೆರಡು ಸೋಮವಾರ ಸುಬಹಿಯ ಸ್ವಲ್ಪ ಮುಂಚೆ ಅಂತ್ಯ ಪ್ರವಾದಿ ಮುಹಮ್ಮದ್ ಮುಸ್ತಫ ಸ.ಅ ಮಕ್ಕಾದಲ್ಲಿ ಜನಿಸಿದರು.ಅಂದು ಕ್ರಿಸ್ತಶಕ 571 ಎಪ್ರಿಲ್ 21 ಆಗಿತ್ತು.ನೆಬಿ ಸ.ಅ ಜನಿಸಿದ ದಿನ ಅತ್ಯಂತ ಸಂತೋಷದಾಯಕವಾದ ದಿನವಾಗಿದೆ.ಮಾನವ ಶ್ರೇಷ್ಠರಾದ ಪ್ರವಾದಿ ಮುಹಮ್ಮದ್ ಸ.ಅ ರವರ ಮುಖಾಂತರ ಮಾನವ ಸಮೂಹವನ್ನು ಅಲ್ಲಾಹು ಅನುಗ್ರಹಿಸಿದ ಸುದಿನವಾಗಿದೆ ಅಂದು.ಮುಸಲ್ಮಾನರು ಈ ಅನುಗ್ರಹಕ್ಕೆ ಕ್ರತಜ್ಞತೆ ಸಲ್ಲಿಸಿ ಅಂದು ಮೀಲಾದುನ್ನಬಿ ಆಚರಣೆ ಮಾಡುತ್ತಾರೆ.ನೆಬಿ ಸ.ಅ ರವರ ಮದಹ್ ಕೀರ್ತನೆಗಳನ್ನು ಹೇಳಿ, ಹಾಡಿಹೊಗಳಿ ದಾನಧರ್ಮಗಳನ್ನು ನೀಡಿ ಸಂತೋಷ ಪ್ರಕಟಿಸುತ್ತಾರೆ.              ಭೂಮಿಯ ಮೇಲೆ ಜನ್ಮವೆತ್ತಿ ಬಂದ ಅತ್ಯಂತ ಉತ್ತಮನಾದ ಮನುಷ್ಯ ನೆಬಿ ಸ.ಅ ಆಗಿದ್ದಾರೆ.ಮುಂಜಿಕರ್ಮ ನಿರ್ವಹಿಸಲ್ಪಟ್ಟ,ಹೊಕ್ಕುಳ ಬಳ್ಳಿ ಕತ್ತರಿಸಲ್ಪಟ್ಟ,ಕಣ್ಣಿಗೆ ಸುರುಮ ಹಾಕಲ್ಪಟ್ಟ ಸ್ಥಿತಿಯಲ್ಲಿ ಸಂಪೂರ್ಣ ಸಂಶುದ್ಧವಾದ ರೀತಿಯಲ್ಲಾಗಿದೆ ಅವರು ಜನಿಸಿದ್ದು.ಅಬೂತಾಲಿಬರ ಮನೆಯಲ್ಲಾಗಿದೆ ಜನನ.ಹೆರಿಗೆ...

ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಕರ ಪಾತ್ರ

ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಕರ ಪಾತ್ರ _✍🏻ಜಹಫರ್ ಸಾಧಿಕ್ ಕಟ್ಟದಪಡ್ಪು_ _ನಮ್ಮ ಸಮಾಜವು ನಮಗೆ ಜನ್ಮ ಕೊಟ್ಟ ತಂದೆ ತಾಯಿಯ ನಂತರ ಮಹತ್ತರವಾದ ಸ್ಥಾನವನ್ನು ಶಿಕ್ಷಕರಿಗೆ ನೀಡಿ ಗೌರವಿಸಿದೆ.  ಶಿಲ್ಪಿ...