ಅಂದಿನ ಉಮರ್ (ರ) ಆಡಳಿತ ಇಂದಿಗೂ ವಿಶ್ವಕ್ಕೆ
ಮಾದರಿ.ವಿಶ್ವ ಮುಸ್ಲಿಂ ಸಮುದಾಯ ಕಂಡ
ಖಲೀಫ ಮಾದರಿಯುಕ್ತವಾದ ಆಡಳಿತ
ವ್ಯವಸ್ಥೆ ಅನ್ಯ ಸಮುದಾಯದವರು
ಪ್ರಶಂಸೆಗೆ ಪಾತ್ರರಾದ ನಮ್ಮ ಖಲೀಫ
ಮಹಿಳೆ ಕೇಳಿದಳು ಉಮರ್ ಯಾರು ಎಂದು ಅದಕ್ಕೆ
ಉಮರ್ (ರ) ನಾನೇ ಎಂದಾಗ...
ಉಮರ್(ರ) ಎಂದಿನಂತೆ ರಾತ್ರಿಯ ಸವಾರಿಗೆ
ಹೊರಟರು. ವಿಶಾಲವಾದ ಮರುಭೂಮಿಯಲ್ಲಿ
ಒಂದೊಂದೇ ಮನೆಯನ್ನು ದಿಟ್ಟಿಸುತ್ತಾ ಉಮರ್
(ರ)ರವರ ಕುದುರೆಯು ಮುಂದೆ ಸಾಗಿತ್ತು.
ಇದ್ದಕ್ಕಿದ್ದಂತೆ ಸಣ್ಣ ಮಗು ಅಳುವ ಶಬ್ದವು
ಉಮರ್(ರ) ರವರಿಗೆ ಕೇಳಿಸಿತು. ಕೂಡಲೆ ಉಮರ್
(ರ)ವೇಗವಾಗಿ ಓಡುತ್ತಿದ್ದ ಕುದುರೆಯನ್ನು
ನಿಲ್ಲಿಸಿ ಪುನಃ ಕಿವಿ ಆಲಿಸಿದರು. "ಹೌದು
ಮಗುವಿನದ್ದೆ ಅಳು. ಸ್ವಲ್ಪ ಸಮಯ ಅಲ್ಲೆ
ನಿಂತು ಗಮನವಿಟ್ಟು ಕೇಳಿದರು." ಉಮರ್(ರ)
ತಮ್ಮ ಕುದುರೆಯನ್ನು ನೇರ ಆ ಕಡೆಗೆ
ತಿರುಗಿಸಿದರು. ಮಕ್ಕಳ ಅಳುವಿನ ಶಬ್ದವನ್ನೇ
ಗುರಿಯಾಗಿರಿಸಿ ಕುದುರೆ ಆ ಕಡೆಗೆ ಹೆಜ್ಜೆ ಹಾಕಿತು.
ಒಂದೊಂದೇ ಹೆಜ್ಜೆ ಮುಂದಿಡುತ್ತಿದ್ದಂತೆ
ಮಕ್ಕಳ ಅಳುವಿನ ಶಬ್ದ ಅಧಿಕವಾಯಿತು.
ನೂರಾರು ಮನೆಗಳೆಡೆಯಲ್ಲಿ ಒಂದೊಂದೇ
ಮನೆಯನ್ನೇ ಗಮನಿಸುತ್ತಾ ಉಮರ್(ರ)
ಮೆಲ್ಲನೆ ಹೆಜ್ಜೆ ಹಾಕಿದರು. ಹತ್ತಾರು ಮನೆಗಳು
ಕಳೆದವು. ಆದರೆ ಅಳುವ ಶಬ್ದ ನಿಲ್ಲಲ್ಲಿಲ್ಲ.
ಉಮರ್(ರ)ಅಲ್ಲೇ ನಿಂತು ಪುನಃ ಶಬ್ದ ಕೇಳಿ
ಬರುವ ದಿಕ್ಕನ್ನು ಗಮನಿಸಿದರು. ಉಮರ್
(ರ)ರವರಿಗೆ ಅಳು ಆ ದೂರದ ಪುಟ್ಟ
ಗುಡಿಸಲಿನಿಂದ ಕೇಳಿ ಬರುತ್ತಿದೆ ಎಂದು
ಮನವರಿಕೆಯಾಯಿತು. ಉಮರ್(ರ)ಮೆಲ್ಲನೆ ಆ
ಗುಡಿಸಲಿನ ಹತ್ತಿರ ಹೋಗಿ ಇಣುಕಿ ನೋಡಿದರು...
"ಇಬ್ಬರು ಮಕ್ಕಳು ಅಳುತ್ತಿದ್ದಾರೆ. ನೆಲದಲ್ಲಿ
ಬಿದ್ದು ಆಚೆ ಈಚೆ ಹೊರಳಾಡುತ್ತಿದ್ದಾರೆ"
ತಾಯಿಯು ಒಲೆಯಲ್ಲೊಂದು ಪಾತ್ರೆಯನ್ನು
ಇಟ್ಟು ಅದಕ್ಕೊಂದು ಸೌಟನ್ನು ಹಾಕಿ ಆಚೆ ಈಚೆ
ಅಲುಗಾಡಿಸುತ್ತಾ ಮಕ್ಕಳನ್ನು ಸಮಾಧಾನ
ಪಡಿಸುತ್ತಿದ್ದಾಳೆ. ಈಗ ಬೇಯುತ್ತದೆ
ಅಳಬೇಡಿ...!
ಉಮರ್(ರ) ರವರು ಎವೆಯಿಕ್ಕದೆ ಆ
ದೃಶ್ಯವನ್ನೇ ನೋಡಿದರು.
ಸಮಯ ತುಂಬಾ ಕಳೆದರೂ ಒಲೆಯಲ್ಲಿದ್ದದ್ದು
ಬೇಯಲಿಲ್ಲ. ಮಕ್ಕಳಾದರು ಅಳು ನಿಲ್ಲಿಸುವುದೂ
ಇಲ್ಲ!
ಉಮರ್(ರ)ಸಹನೆ ಕೆಟ್ಟು ಸ್ವತಃ ಚಿಂತಿಸಿದರು.
ಆಹಾರ ಬೇಯಲು ಇಷ್ಟೊಂದು ಸಮಯ ಬೇಕೆ?
ಇಷ್ಟು ದೀರ್ಘಾವದಿ ಬೇಯದೆ ಇರುವ
ವಸ್ತುವಾದರೂ ಏನು?
ಮಕ್ಕಳು ಕೂಗುವಾಗ ಪರಿವೆಯೇ ಇಲ್ಲದ ಹೆಣ್ಣು
ಎಂತವಳು, ಈಕೆ ಮನುಷ್ಯಳಲ್ಲವೇ? ಹೀಗೆ
ಹಲವಾರು ಪ್ರಶ್ನೆ ಗಳು ಉಮರ್(ರ)ಮನದಿಂದ
ಬರತೊಡಗಿದವು. ನಂತರ ತಡಮಾಡದೆ
ಬಾಗಿಲನ್ನು ತಟ್ಟುತ್ತಾ ಕೇಳಿದರು, ಮಕ್ಕಳು
ಕೂಗುವುದು ಯಾಕೆ?
"ಹಸಿವೆಯಿಂದ"
ಒಲೆಯಲ್ಲಿರುವುದನ್ನು ಅವರಿಗೆ
ಕೊಡಬಹುದಿತ್ತಲ್ಲವೇ?
ಅದರಲ್ಲಿ ನೀರಲ್ಲದೆ ಬೇರೇನೂ ಇಲ್ಲ!
ಹಲವು ದಿನಗಳಿಂದ ನಾವು ಹಸಿವೆಯಿಂದ
ಬಳಲುತ್ತಿದ್ದೇವೆ. ಮಕ್ಕಳನ್ನು ಸಮಾಧಾನ
ಪಡಿಸಲು ಅವರು ನಿದ್ದೆ ಮಾಡುವ ತನಕ ನನ್ನ
ಒಲೆಯಲ್ಲಿರುವ ಪಾತ್ರೆಯ ನೀರು ಕುದಿಯುತ್ತಾ
ಇರುತ್ತದೆ. ಮಕ್ಕಳಾದರೆ ತುಂಬಾ ಹೊತ್ತು
ಕೂಗುತ್ತಾ ಕೊನೆಗೆ ಅಲ್ಲೇ ನಿದ್ದೆ
ಮಾಡುತ್ತಾರೆ. ನಂತರ ನಾವು ಒಲೆಯಲ್ಲಿರುವ
ನೀರನ್ನು ಕುಡಿದು ಮಲಗುತ್ತೇವೆ. ತಾಯಿಯ
ಮನ ಕಲಕುವ ಘಟನೆಯನ್ನು ಕೇಳಿ ಉಮರ್
(ರ)ರವರ ಕಣ್ಣು ಕಣ್ಣೀರಿನಿಂದ ತುಂಬಿಕೊಂಡವು.
ಎಲ್ಲಾ ದುಃಖವನ್ನು ಅದುಮಿ ಹಿಡಿಯುತ್ತಾ
ಪುನಃ ಅವಳಲ್ಲಿ ಕೇಳಿದರು.ಈ ವಿಷಯ ಖಲೀಫರಿಗೆ
ತಿಳಿಸಬಹುದಿತ್ತಲ್ಲವೇ?
ಅಳುತ್ತಾ ಅವಳು ಹೇಳಿದಳು: "ಖಲೀಫರೆಂದರೆ
ದೊಡ್ಡವರು. ಅವರ ಬಳಿಗೆ ಹೋಗುವುದು ಹೇಗೆ?.
ಖಲೀಫರಾದವರು ನಿಜವಾಗಿಯೂ ಬಡವರನ್ನು
ಹುಡುಕಿ ಅವರ ದುಃಖವನ್ನು
ನೀಗಿಸಬೇಕಾದವರಲ್ಲವೇ?
ಇದು ಕೇಳಿ ದುಃಖ ಸಹಿಸಲಾಗದೆ ಉಮರ್(ರ) ನೇರ
ಕುದುರೆಯನ್ನೇರಿ ಹೊರಟೇ ಬಿಟ್ಟರು. ಏನೂ
ತಿಳಿಯದ ತಾಯಿ ಆಶ್ಚರ್ಯ ಚಕಿತರಾಗಿ
ಹೀಗಾದರೂ ಒಬ್ಬರು ಈ ರೀತಿ
ವಿಚಾರಿಸಿದರಲ್ಲವೇ? ಆದರೆ ಉಮರ್(ರ)ರವರಿಗೆ
ಇಲ್ಲಿಗೆ ಸಹಾಯ ಮಾಡುವುದು ಬಿಟ್ಟು ಇಲ್ಲಿಗೆ
ಬರಲೂ ಕೂಡಾ ದಾರಿ ಸಿಗಲಿಲ್ಲ! ಅವರೂ ಒಬ್ಬ
ಖಲೀಫರೇ...
ಅವರಿಗಿಂತ ಬದಲು ಇಂಥವರೊಬ್ಬರು
ಖಲೀಫರಾದರೆ ಚೆನ್ನಾಗಿತ್ತು ಎಂದು
ಗೊಣಗುತ್ತಾ ಬಾಗಿಲು ಹಾಕಿ ಮಲಗಿದರು.
ಬೆಳಿಗ್ಗೆ ಸೂರ್ಯೋದಯವಾಗುತ್ತಿದ್ದಂತೆ
ಬಾಗಿಲು ತೆರೆದು ಹೊರಗೆ ನೋಡುವಾಗ ತನ್ನ
ಮನೆಯ ಹತ್ತಿರಕ್ಕೆ ಕುದುರೆ ವೇಗವಾಗಿ
ಬರುವುದು ಕಾಣಿಸಿತು. ಅದನ್ನು ದಿಟ್ಟಿಸುತ್ತಿರುವ
ಂತೆ ವೇಗವಾಗಿ ಬರುವ ಆ ಕುದುರೆಯು ಗುಡಿಸಲ
ಬಾಗಿಲಲ್ಲೇ ಬಂದು ನಿಂತುಕೊಂಡಿತು. ಕುದುರೆಯ
ಮೇಲೆ ದೊಡ್ಡ ಮೂಟೆ ಒಂದಿದೆ. ಅದನ್ನು ಅಲ್ಲೇ
ಕೆಳಗಿಳಿಸಿ ಕುದುರೆಯಲ್ಲಿ ಬಂದವರು ಹೇಳಿದರು.
ಇದರಲ್ಲಿ ಗೋಧಿ ಮತ್ತು ಮಾಂಸವಿದೆ.
ಇನ್ನಾದರೂ ಮಕ್ಕಳಿಗೆ ಒಳ್ಳೆಯದನ್ನು ನೀಡಿರಿ!
ಸಂತೋಷವನ್ನು ತಡೆಯಲಾಗದ ತಾಯಿಯು
ಹೋಗಲು ಹೊರಟುನಿಂತ ಅವರಲ್ಲಿ ಹೇಳಿದರು:
ನಿಮ್ಮಂಥವರು ಖಲೀಫರಾಗಬೇಕು. ಇದನ್ನು
ಕೇಳಿ ಕುದುರೆಯಲ್ಲಿ ಕುಳಿತುಕೊಂಡವರು
ಮುಗುಳ್ನಗುತ್ತಾ ಹೇಳಿದರು: " ತಾಯಿ ಖಲೀಫ
ಉಮರೆಂದರೆ ನಾನೇ. ನನ್ನಿಂದಾದ ತಪ್ಪಿಗೆ
ಕ್ಷಮಿಸಿರಿ" ಎಂದು ಹೇಳುತ್ತಾ ಕುದುರೆಯನ್ನು
ಓಡಿಸಿದರು. ಕುದುರೆಯು ಕಣ್ಣಿನಿಂದ ಮರೆಯಾಗುವ
ವರೆಗೂ ಅವರನ್ನೇ ನೋಡುತ್ತಾ
ಸಂತೋಷದಿಂದ ಮೂಟೆ ಬಿಚ್ಚಿ ಅದರಿಂದ ಗೋಧಿ
ಮತ್ತು ಮಾಂಸ ತೆಗೆದು ಆಹಾರ ಸಿದ್ದಪಡಿಸಿ
ಮಕ್ಕಳಿಗೆ ನೀಡಿದರು.
ಇವತ್ತೀನ ಭ್ರಷ್ಟಾ ರಾಜಕರಣೀಗಳಿಗೆ
ಪಾಠವಾಗಲಿ ಇವರ ಆಡಳಿತ
ಗ್ರಹಣ ನಮಾಜಿನ ರೂಪ *ಚಂದ್ರಗ್ರಹಣದ ಸುನ್ನತ್ ನಮಾಜು ಎರಡು ರಕಅತ್ ಅಲ್ಲಾಹನಿಗಾಗಿ ಜಮಾಅತ್ತಾಗಿ ನಾನು ನಿರ್ವಹಿಸುವೆನು* ಎಂದು ನಿಯ್ಯತ್ ಮಾಡಿ ಅಲ್ಲಾಹು ಅಕ್ಬರ್ ಎಂದು ಹೇಳಿ ನಮಾಜಿಗೆ ಪ್ರವೇಶಿಸುವು...
Comments