ಸೂರತುಲ್ ಕಹ್ಫ್ ನ ಮಹತ್ವ
_ಶುಕ್ರವಾರ ದಿವಸ ಸೂರತುಲ್ ಕಹ್ಫ್ ಪಾರಾಯಣಗೈಯ್ಯುವುದರ ಪ್ರಾಮುಖ್ಯತೆಯ ಕುರಿತು ಪ್ರವಾದಿ ﷺ ತಿಳಿಸಿದ ಹದೀಸ್ ಗಳನ್ನು ಕಾಣಬಹುದು._
_*عن أبي سعيد الخدري ، قال عليه الصلاة والسلام: " من قرأ سورة الكهف ليلة الجمعة أضاء له من النور فيما بينه وبين البيت العتيق "*_
*_ಅಬೀ ಸಈದಲ್ ಖುದ್ರಿ (ರ) ನಿವೇದನೆ. ನಬಿ ﷺ ಹೇಳಿದರು: ಯಾರಾದರು ಶುಕ್ರವಾರ ರಾತ್ರಿ ಸೂರತುಲ್ ಕಹ್ಫ್ ಪಠಿಸುವುದಾದರೆ ಅವನ ಮತ್ತು ಬೈತುಲ್ ಅತೀಕ್(ಕ ಅಬಾ)ನ ನಡುವೆ ಇರುವ ಅಷ್ಟು ದೂರ ಪ್ರಕಾಶ ಲಭಿಸುವುದು.[ಸ್ವಹೀಹ್-ಅಲ್ಬಾನಿ (ರ)]_*
_ಇನ್ನೊಂದು ಹದೀಸಿನಲ್ಲಿ ಈ ರೀತಿ ಕಾಣಬಹುದು._
_*" من قرأ سورة الكهف في يوم الجمعة أضاء له من النور ما بين الجمعتين "*_
*_"ಯಾರಾದರು ಶುಕ್ರವಾರ ದಿವಸ ಸೂರತುಲ್ ಕಹ್ಫ್ ಪಠಿಸುವುದಾದರೆ ಆ ಎರಡು ಜುಮುಅಗಳ ನಡುವೆ ಇರುವಷ್ಟು ಪ್ರಕಾಶ ಲಭಿಸುವುದು."[ಸ್ವಹೀಹ್-ಅಲ್ಬಾನಿ]. ಜುಮುಅ ದಿವಸ ಸೂರತುಲ್ ಕಹ್ಫ್ ಪಾರಾಯಣದ ಸಂಬಂಧಿಸಿ ಬಂದ ಹದೀಸ್ಗಳಲ್ಲಿ ಅತ್ಯಂತ ಪ್ರಬಲವಾದ ಹದೀಸಾಗಿದೆ ಇದು._*
_ಅದೇ ರೀತಿ ಇಬ್ನು ಉಮರ್ (ರ) ರಿಪೋರ್ಟ್ ಮಾಡಿದ ಇನ್ನೊಂದು ಹದೀಸ್ ಈ ರೀತಿ ಕಾಣಬಹುದು:_
_*عن ابن عمر رضي الله عنهما قال : قال رسول الله صلى الله عليه وسلم : " من قرأ سورة الكهف في يوم الجمعة سطع له نور من تحت قدمه إلى عنان السماء يضيء له يوم القيامة ، وغفر له ما بين الجمعتين ".*_
*_ಯಾರಾದರು ಜುಮುಅ ದಿನ ಸೂರತುಲ್ ಕಹ್ಫ್ ಪಾರಾಯಣಗೈದರೆ ಅವನ ಪಾದದಿಂದ ಬಾನಲೋಕದವರೆಗೆ ಪ್ರಕಾಶ ಅಂತ್ಯ ದಿನದಲ್ಲಿ ಅವನಿಗೆ ಲಭಿಸುವುದು. ಅವನ ಎರಡು ಜುಮುಅಗಳ ನಡುವಿನ ಪಾಪಗಳನ್ನೂ ಮನ್ನಿಸಲ್ಪಡುವುದು.[ ಅತ್ತರ್ಗೀಬ್ ವತ್ತರ್ಹೀಬ್ 298/1]_*
_ಈ ಹದೀಸುಗಳಿಂದ ನಾವು ಮನಗಾಣಬಹುದಾದ ವಿಷಯ ಶುಕ್ರವಾರ ರಾತ್ರಿ, ಶುಕ್ರವಾರ ದಿವಸ, ಸೂರತುಲ್ ಕಹ್ಫ್ ಪಾರಾಯಣಕ್ಕೆ ಶ್ರೇಷ್ಠವಾದ ಸಮಯವಾಗಿದೆಯೆಂದು. ಗುರುವಾರ ಸೂರ್ಯಾಸ್ತಮಾನದಿಂದ ಶುಕ್ರವಾರ ಸೂರ್ಯಾಸ್ತಮಾನದವರೆಗೆ ಸೂರತುಲ್ ಕಹ್ಫ್ ಪಾರಾಯಣಕ್ಕೆ ಹದೀಸ್ ಗಳಲ್ಲಿ ಪರಾಮರ್ಶಿಸಿದ ಪ್ರತ್ಯೇಕ ಸಮಯವಾಗಿದೆ._
_"ಶುಕ್ರವಾರ ದಿವಸ, ಶುಕ್ರವಾರ ರಾತ್ರಿ ಸೂರತುಲ್ ಕಹ್ಫ್ ಪಾರಾಯಣ ಅತ್ಯಂತ ಪುಣ್ಯದಾಯಕ ಕರ್ಮವಾಗಿದೆಯೆಂದು ಇಮಾಂ ಶಾಫಿಈ (ರ) ರಂತಹ ಇಮಾಮ್ಗಳು ವಿವರಿಸಿದ್ದಾರೆ._
_ಅಲ್ಲಾಹು ಅನುಗ್ರಹಿಸಲಿ....ಆಮೀನ್._
_*تقبل الله منى*_
✍ 💐 _*ಹಸ ಗುಲ್ವಾಡಿ*_ 💐
Comments