ಇವರಲ್ಲದೆ ಇನ್ಯಾರು ಈ ಕಾಲದ
ಸುಲ್ತಾನುಲ್ ಉಲಮಾ....
✍ಬಿ.ಎಂ. ನೌಫಲ್
॰॰॰॰॰॰॰॰॰॰॰॰॰॰॰॰॰॰॰॰॰॰॰॰॰॰॰॰॰॰॰॰॰॰॰
*ಸುಲ್ತಾನುಲ್ ಉಲಮಾ ಎ.ಪಿ. ಉಸ್ತಾದ್*
ಈ ಶಬ್ದ ಕೇಳದ ಕಿವಿಯಿರಲಿಕ್ಕಿಲ್ಲ.
ಉಚ್ಛರಿಸದ ನಾಲಗೆಯಿರಲಿಕ್ಕಿಲ್ಲ.
*ಹೌದು..* ಅಬ್ಬಾಸ್ ಮಾಲಿಕಿ ಮಕ್ಕ (ನ.ಮ)
ಹಾಗೂ ರಿಫಾಯಿ ಶೈಖ್ (ರ.ಅ)
ರವರ ಪೌತ್ರರಾದ ಸ್ವಬಾಹುದ್ದೀನ್ ರಿಫಾಯಿ ರವರಂತ ಅಗ್ರೇಸ್ಯರಾದ ವಿದ್ವಾಂಸರು *ಖಮರುಲ್ ಉಲಮಾ, ಸುಲ್ತಾನುಲ್ ಉಲಮಾ* ಎಂದು ನಾಮಕರಣಮಾಡುವುದರೊಂದಿಗೆ oಅಂಗೀಕರಿಸಿದ ಶ್ರೇಷ್ಟ ವಿಧ್ವಾಂಸರಾಗಿದ್ದಾರೆ *ಸುಲ್ತಾನುಲ್ ಉಲಮಾ ಕಾಂತಪುರಂ ಎ.ಪಿ. ಅಬೂಬಕರ್ ಮುಸ್ಲಿಯಾರ್*
ಇಂದು ಎಲ್ಲಿ ನೋಡಿದರೂ ಜಾತಿ ಮತ ಪಂಗಡ ಭೇದವಿಲ್ಲದೆ *ಸುಲ್ತಾನುಲ್ ಉಲಮಾ*ರ ಕುರಿತು ಚರ್ಚೆ ನಡೆಸುತ್ತಿದ್ದಾರೆ.
*ಸುಲ್ತಾನುಲ್ ಉಲಮಾ*ರ ಅನುಯಾಯಿಗಳು *ಸುಲ್ತಾನುಲ್ಉಲಮಾ*ರ
ಗುಣಗಾನ ಮಾಡುವುದರೊಂದಿಗೆ ಉಸ್ತಾದರ ಹೆಸರನ್ನು ಹೇಳುವುದು ಕೇಳುವುದು ಮಾಡುತ್ತಿದ್ದರೆ ಶತ್ರುಗಳು *ಸುಲ್ತಾನುಲ್ ಉಲಮಾ*ರ ಕುರಿತು ಇಲ್ಲಸಲ್ಲದ ಆರೋಪಗಳೊಂದಿಗೆ ಕಾಲ ಕಳೆಯುತ್ತಿದ್ದಾರೆ.....!
ಒಟ್ಟಿನಲ್ಲಿ ಎಲ್ಲರ ಬಾಯಲ್ಲೂ ಹೇಳಲ್ಪಡುವ ಒಂದು ಶಬ್ದವಾಗಿದೆ *ಸುಲ್ತಾನುಲ್ ಉಲಮಾ ಎ.ಪಿ. ಉಸ್ತಾದ್*
ಶತ್ರುಗಳಿಗೆ ಉಸ್ತಾದರ ಮೇಲೆ ಎಷ್ಟು ಶತ್ರುತ್ವವಿದೆಯೆಂದರೆ..
ಕಳೆದ ಕೆಲವು ದಿನಗಳ ಹಿಂದೆ ನನ್ನ ಬಂಧುಗಳಲ್ಲೊಬ್ಬರು ಸಿಕ್ಕಿದ್ದರು ನಾವು ಪರಸ್ಪರ ಮಾತನಾಡುವುದರೆಡೆಗೆ ನಾನು ಕಲಿಯುತ್ತಿರುವ ಸಂಸ್ಥೆಯಾದ *ಇಹ್ಯಾಉಸ್ಸುನ್ನಃ* ದ ವಿಷಯದೆಡೆಗೆ ಸಾಗಿತು ನಮ್ಮ ಮಾತು.
ನಂತರ *ಇಹ್ಯಾಉಸ್ಸುನ್ನಃದ ಪ್ರಿನ್ಸಿಪಾಲರಾದ ಸಮಸ್ತ ಅದ್ಯಕ್ಷರೂ ಆದ ಉಸ್ತಾದ್ ರಈಸುಲ್ ಉಲಮಾ ಇ. ಸುಲೈಮಾನ್ ಮುಸ್ಲಿಯಾರ್* ರವರ ವಿಷಯಕ್ಕೆ ಬಂದು ಕೊನೆಗೆ ನಮ್ಮ ಮಾತು ಹೋಗಿ ತಲುಪಿದ್ದು *ಸುಲ್ತಾನುಲ್ ಉಲಮಾ* ರವರ ಕುರಿತಾಗಿತ್ತು. ಉಸ್ತಾದರ ಕುರಿತು ಮಾತನಾಡುತ್ತಾ ಆ ಮನುಷ್ಯ ಉಸ್ತಾದರ ಕುರಿತು ಆರೋಪಿಸಲು ಶುರು ಮಾಡಿದರು.
ಉಸ್ತಾದರು ಅನಾಥ ಮಕ್ಕಳ ಹೆಸರಲ್ಲಿ ಹಣ ಮಾಡುತ್ತಿದ್ದಾರೆ..!
ಪ್ರವಾದಿ ﷺ ರವರ ಕೇಶದ ಹೆಸರಲ್ಲಿ ಅಮಾಯಕರನ್ನು ಲೂಟಿ ಮಾಡುತ್ತಿದ್ದಾರೆ...! ಕೋಟ್ಯಾಂತರ ರುಪಾಯಿ ಹಲವು ಬ್ಯುಸಿನೆಸ್ ಮಾಡಿ ಗಳಿಸುತ್ತಿದ್ದಾರೆ ...!
ಇಂತಹ ಅನೇಕ ಆರೋಪಗಳು ಅವರ ಬಾಯಿಯಿಂದ ಬರತೊಡಗಿತು....
ಅದೇ ರೀತಿ ಕೆಲವು ದಿನಗಳ ನಂತರ ನನ್ನ ಬಾಲ್ಯ ಸ್ನೇಹಿತನೊಬ್ಬ ಸಿಕ್ಕಿದ್ದ.. ಅವನೂ ಕೂಡ ಮಾತು ಮಾತಿಗೆ ಎ.ಪಿ. ಹಾಗೆ ಮಾಡಿದರು. ಹೀಗೆ ಮಾಡಿದರು. ಎಂದು ಊಹಿಸಲೂ ಕೂಡ ಅಸಾಧ್ಯವಾದ ಆರೋಪಗಳನ್ನು ಮಾಡುತ್ತಿದ್ದ.
ಅವರೊಂದಿಗೆ ನಾನು ಬೇಕಾದ ರೀತಿಯಲ್ಲಿ ಉಸ್ತಾದರ ಕುರಿತು ಹೇಳುವಾಗ ಇವರಿಬ್ಬರೂ ಅದನ್ನೂ ಕೇಳುವ ಮನಸ್ಸು ಮಾಡುವುದರಿಂದ ಹಿಂಜರಿಯುತ್ತಿದ್ದರು....!
ಅಂದರೆ ಅವರ ಮನಸ್ಸಿನಲ್ಲಿ ಉಸ್ತಾದರ ಮೇಲಿರುವ ಶತ್ರುತ್ವವು ಎಷ್ಟು ಗಾಢವಾಗಿದೆಯೆಂದು ಊಹಿಸಬಹುದು....!
ಆದರೆ ಆ ಸಂಧರ್ಬದಲ್ಲಿ ನನ್ನ ಮನಸಲ್ಲಿ ಉದಿಸಿದ ಪ್ರಶ್ನೆಗಳು....
*ಇವರು ಸುಲ್ತಾನುಲ್ ಉಲಮಾರನ್ನು ಇಷ್ಟೊಂದು ದ್ವೇಷಿಸಲು ಉಸ್ತಾದರಿಂದ ಇವರಿಗಾದ ಅನ್ಯಾಯವಾದರೂ ಏನು...?*
*ಉಸ್ತಾದರು ಮಾಡಿದ ತಪ್ಪಾದರೂ ಏನು...?*
*ಸಾವಿರಾರು ಅನಾಥ ಮಕ್ಕಳನ್ನು ಮರ್ಕಝ್ ನಂತಹ ಹಲವಾರು ಸಂಸ್ಥೆಗಳಲ್ಲಿ ಕೇರಳ ಹಾಗು ಹೊರ ರಾಜ್ಯಗಳಲ್ಲಿ ಊಟ ಬಟ್ಟೆ ವಿದ್ಯೆಗಳನ್ನು ನೀಡುತ್ತಾ ಸಂರಕ್ಷಿಸುವುದಾಗಿರಬಹುದೇ ಸುಲ್ತಾನುಲ್ ಉಲಮಾರು ಮಾಡುತ್ತಿರುವ ಅತಿದೊಡ್ಡ ತಪ್ಪು...?*
*ಭಾರತದಾದ್ಯಂತ ನಾಲ್ಕು ಸಾವಿರಕ್ಕೂ ಮಿಕ್ಕ ಮಸೀದಿಗಳನ್ನು ನಿರ್ಮಿಸಿ ಅದೆಷ್ಟೋ ವಿಶ್ವಾಸಿಗಳಿಗೆ ಅಲ್ಲಾಹನಿಗೆ ಸಾಷ್ಟಾಂಗವೆರಗಲು ಅನುವು ಮಾಡಿಕೊಟ್ಟದ್ದೇ... ಉಸ್ತಾದರು ಮಾಡಿದ ತಪ್ಪು...?*
*ಭಾರತದುದ್ದಕ್ಕೂ ಅದೆಷ್ಟೋ ಅನಾಥ ನಿರ್ಗತಿಕರಿಗೆ ಮನೆ ನಿರ್ಮಿಸಿ, ಬಾವಿ ತೋಡಿಸಿ, ಊಟ, ಬಟ್ಟೆಗಳನ್ನ ನೀಡುವುದರೊಂದಿಗೆ ಸಹಾಯ ಹಸ್ತ ಚಾಚುವುದಾಗಿರಬಹುದಲ್ಲವೇ ಉಸ್ತಾದ್ ಮಾಡುವ ಕ್ಷಮಿಸಲಸಾಧ್ಯವಾದ ತಪ್ಪು...?*
*ಇಸ್ಲಾಂ ಭಯೋತ್ಪಾದನೆಯ ಧರ್ಮ, ಮುಸ್ಲಿಮರು ಭಯೋತ್ಪಾದಕರು, ದೇಶ ಧ್ರೋಹಿಗಳೆಂದು ಗೊಣಗುವವರ ಬಾಯಿಯಿಂದ ಮುಸ್ಲಿಮರು ದೇಶಸ್ನೇಹಿಗಳೆಂದು ಹೇಳಿಸುವುದು ತಪ್ಪಾಗಿರಬಹುದೆ...?*
*ಸ್ತ್ರೀಗಳ ಕುರಿತ ಹಾಗು ಇತರ ಇಸ್ಲಾಮಿನ ನಿಲುವನ್ನು ನಿಷೇಧಿಸುವ ಅಬ್ಬಾಸ್ ನಕ್ವಿಯಂತಹವರನ್ನು ಕರೆತಂದು ಇಸ್ಲಾಮಿನ ಎಲ್ಲಾ ನಿಲುವುಗಳನ್ನು ತೋರಿಸಿಕೊಟ್ಟು ಇಸ್ಲಾಮೀ ಪಾಠವನ್ನು ಕಲಿಸಿಕೊಡುವುದು ತಪ್ಪೇ...?*
*ಭಾರತೀಯ ಮುಸ್ಲಿಮರಿಗೆ ಸಿಗಬೇಕಾದ ಹಕ್ಕುಗಳಿಗೋಸ್ಕರ ಶಬ್ಧವೆತ್ತುವುದನ್ನು ತಪ್ಪೆಂದು ಹೇಳಲು ಹೇಗೆತಾನೆ ಸಾಧ್ಯ..?*
*ಒಂದು ವೇಳೆ ಇದೆಲ್ಲಾ ಇವರ ದೃಷ್ಟಿಯಲ್ಲಿ ತಪ್ಪು ಎಂದಾದರೆ ಇದರಿಂದ ಇವರಿಗೇನು (ಶತ್ರುಗಳಿಗೆ ) ನಷ್ಟ...?*
*ಅದಲ್ಲದಿದ್ದರೆ ಉಸ್ತಾದರು ಮಾಡುವ ಅನೇಕಾರು ಕಾರ್ಯಪ್ರವೃತ್ತಿಗಳು ನಮ್ಮಿಂದ ಸಾಧ್ಯವಾಗಲಿಲ್ಲವಲ್ಲ ಎಂಬ ಅಸೂಯೆಯಾಗಿರಬಹುದೇ...?*
*ಆದರೆ ಇಷ್ಟು ಕಾಲ ಇವರು ಉಸ್ತಾದರನ್ನು ವಿಮರ್ಶಿಸಲು ವ್ಯಯಿಸಿದ ಸಮಯಗಳನ್ನು ಸುಲ್ತಾನುಲ್ ಉಲಮಾ ಮಾಡಿದಂತ ಕಾರ್ಯಗಳನ್ನು ಮಾಡಲು ಉಪಯೋಗಿಸಿದ್ದರೆ ಈ ಅಸೂಯೆಗಳಿಗೆ ಸಮಯವಿರುತ್ತಿರಲಿಲ್ಲವೇನೋ...?*
✳ಇಂತಹ ಅನೇಕಾರು ಪ್ರಶ್ನೆಗಳು ನನ್ನ ಮನದಲ್ಲಿ ಮಾತ್ರವಲ್ಲ *ಸುಲ್ತಾನುಲ್ ಉಲಮಾ*ರ ಎಲ್ಲಾ ಶತ್ರುಗಳ ಮುಂದೆ ಉತ್ತರ ಸಿಗದೆ ಉಳಿದಿದೆ....!
✅ *ಪ್ರವಾದಿ ﷺ ರವರ ಹದೀಸಿನೊಂದಿಗೆ ಸುಲ್ತಾನುಲ್ ಉಲಮಾ ರವರ ಕಾರ್ಯ ಪ್ರವರ್ತನಗಳಿಗೊಂದು ಇಣುಕು ನೋಟ...*
♻ *ಪ್ರವಾದಿ ﷺ*ರವರು ಅನಾಥರನ್ನು ಸಂರಕ್ಷಿಸುವವನು ಮತ್ತು ನಾನು ಸ್ವರ್ಗದಲ್ಲಿ ಹೀಗೆ ಎಂದು ತನ್ನ ತೋರುಬೆರಳು ಹಾಗು ನಡುಬೆರಳನ್ನು ✌ ತೋರಿಸಿ ಹೇಳಿದ್ದರೆ ಸಾವಿರಾರು ಅನಾಥರನ್ನು ಸಂರಕ್ಷಿಸುತ್ತಿರುವ *ಸುಲ್ತಾನುಲ್ ಉಲಮಾ...!*
♻ *ಪ್ರವಾದಿ ﷺ* ರವರು ಯಾರಾದರು ಅಲ್ಲಾಹನಿಗೋಸ್ಕರ ಒಂದು ಭವನವನ್ನು ನಿರ್ಮಿಸಿದರೆ ಅಂತವರಿಗೆ ಅಲ್ಲಾಹು ಸ್ವರ್ಗದಲ್ಲಿ ಭವನವನ್ನು ನಿರ್ಮಿಸುತ್ತಾನೆಂದು ಹೇಳಿದ್ದರೆ ಇಂದಿಗೆ ನಾಲ್ಕು ಸಾವಿರಕ್ಕೂ ಮಿಕ್ಕ ಅಲ್ಲಾಹನ ಭವನವನ್ನು ನಿರ್ಮಿಸಿದ *ಸುಲ್ತಾನುಲ್ ಉಲಮಾ...!*
♻ *ಪ್ರವಾದಿﷺ* ರವರು ನಿಮ್ಮಲ್ಲಿ ಇಲ್ಮ್ ಕಲಿತು ಅದನ್ನು ಕಲಿಸುವವರಾಗಿದ್ದಾರೆ ಅತ್ಯುತ್ತಮರೆಂದು ಹೇಳಿದ್ದರೆ *ಉಸ್ತಾದುಲ್ ಅಸಾತೀದ್ ಬಹ್ರುಲ್ ಉಲೂಂ ಒ.ಕೆ. ಉಸ್ತಾದ್* ರಂತಹ ಉಲಮಾ ಶಿರೋಮಣಿಗಳಿಂದ ಇಲ್ಮ್ ಕಲಿತು ಆ ಇಲ್ಮನ್ನು ಕಲಿಸಿ ಸಾವಿರಾರು ಸಖಾಫಿಗಳನ್ನು ನಾಡಿಗೆ ಸಮರ್ಪಿಸಿದ *ಸುಲ್ತಾನುಲ್ ಉಲಮಾ...!*
♻ *ಪ್ರವಾದಿﷺ* ರವರು ಯಾರಾದರೂ ಒಬ್ಬ ನಿನ್ನಿಂದಾಗಿ ಸನ್ಮಾರ್ಗಿಯಾಗುವುದು ಈ ಭೂಲೋಕ ಹಾಗು ಅದರಲ್ಲಿರುವ ಎಲ್ಲಾ ವಸ್ತುಗಳಿಗಿಂತ ನಿನಗೆ ಉತ್ತಮವಾಗಿದೆಯೆಂದು ಹೇಳಿದ್ದರೆ ತನ್ನ ಪ್ರಭಾಷಣ, ಪ್ರಭೋದನೆ, ಮುಂತಾದ ಕಾರ್ಯಗಳಿಂದ ಅದೆಷ್ಟೋ ಜನರು ಸನ್ಮಾರ್ಗಿಯಾಗಲು ಕಾರಣಕರ್ತರಾದ *ಸುಲ್ತಾನುಲ್ ಉಲಮಾ...!*
♻ *ಪ್ರವಾದಿﷺ* ರವರು ಯಾರಾದರೊಬ್ಬರು ಅವನ ಸಹೋದರನ ಅಗತ್ಯಗಳನ್ನು ತೀರಿಸಿದರೆ ಅವನ ಅಗತ್ಯಗಳನ್ನು ಅಲ್ಲಾಹು ತೀರಿಸುವನು ಹಾಗೂ ಯಾರಾದರೂ ಅವನ ಸಹೋದರನ ಕಷ್ಟಕಾರ್ಪಣ್ಯವನ್ನು ನೀಗಿಸಿದರೆ ಅವನ ಪರಲೋಕದ ಕಷ್ಟಕಾರ್ಪಣ್ಯವನ್ನು ಅಲ್ಲಾಹು ನೀಗಿಸುವನೆಂದು ಹೇಳಿದ್ದರೆ ಈ ದೇಶದಲ್ಲೂ ಇತರ ದೇಶಗಳಲ್ಲಿ ಅದೆಷ್ಟೋ ಸಹೋದರ ಸಹೋದರಿಯರ ಕಷ್ಟ,ಪ್ರಯಾಸಗಳನ್ನು ನೀಗಿಸಿ ಅವರ ಅಗತ್ಯಗಳನ್ನು ಪೂರೈಸುತ್ತಿರುವ *ಸುಲ್ತಾನುಲ್ ಉಲಮಾ...!*
ಇಷ್ಟು ಮಾತ್ರವಲ್ಲ ಇದಕ್ಕಿಂತ ಅದೆಷ್ಟೊ ಪಟ್ಟು ಪಾಂಡಿತ್ಯ, ಅನುಯಾಯಿಗಳು, ಸಂಚಲನ,
ಪ್ರತಿಫಲ, ಮುಂತಾದವುಗಳು ಹೊಂದಿದ *ಎ.ಪಿ. ಉಸ್ತಾದರಲ್ಲದೆ ಇನ್ಯಾರು ಈ ಕಾಲದ ಸುಲ್ತಾನುಲ್ ಉಲಮಾ...?*
ಇಂತಹ ಒಂದು ವಿಧ್ವಾಂಸರನ್ನು *ಸುಲ್ತಾನುಲ್ ಉಲಮಾ* ಎಂಬ ಗೌರವ ನಾಮದಿಂದ ಕರೆಯದಿರುವುದಾಗಿದೆ ವಾಸ್ತವದಲ್ಲಿ ಅಪಮರ್ಯಾದೆ (ಅದಬ್ ಕೇಡು)....!
*ಚಿಂತಿಸಿರಿ...!*
*ಚಿಂತಿಸುವವರಿಗೆ ದೃಷ್ಟಾಂತವಿದೆ...!*
*ಅಲ್ಲಾಹು ಸುಲ್ತಾನುಲ್ ಉಲಮಾ ಹಾಗು ರಈಸುಲ್ ಉಲಮಾ ರಂತಹ ಅಹ್ಲುಸ್ಸುನ್ನದ ಎಲ್ಲಾ ವಿಧ್ವಾಂಸರಿಗೆ ಪೂರ್ಣ ಆಫಿಯತ್ನೊಂದಿಗೆ ಧೀರ್ಘಾಯುಶ್ಯವನ್ನು ನೀಡಿ ಅನುಗ್ರಹಿಸಲಿ... ಆಮೀನ್*
⚜ಬಿ.ಎಂ. ನೌಫಲ್⚜
muhammadnoufal408@gmail.com
Comments