Skip to main content

ಲೋಕ ರಾಷ್ಟ್ರಗಳನ್ನು ಸುತ್ತಾಡುವ ಸುಲ್ತಾನುಲ್ ಉಲಮರ ರಹಸ್ಯವೇನು

🌎🌍🌏🌎🌍🌏🌎🌍
*ಲೋಕ ರಾಷ್ಟ್ರಗಳನ್ನು ಸುತ್ತಾಡುವ ಸುಲ್ತಾನುಲ್ ಉಲಮರ ರಹಸ್ಯವೇನು*
🌍🌎🌏🌍🌎🌏🌍🌎

ಅಂದೊಂದು ಕಾಲವಿತ್ತು, ಆ ಕಾಲದಲ್ಲಿ ಭಾರತದಿಂದ ಅತ್ಯಧಿಕ ಬಾರಿ ಮಕ್ಕ ಮತ್ತು ಮದೀನ ಸಂದರ್ಶಿಸುವ ಭಾಗ್ಯಗಳಿಸಿದ ಮಾಹಾ ವ್ಯಕ್ತಿ *ಸಯ್ಯಿದ್ ಅಬ್ದುರ್ರಹ್ಮಾನ್ ಬಾಫಕಿ ತಂಙಳಾಗಿದ್ದರು*.ಅವರು ಇಪ್ಪತ್ತೆರಡು ಬಾರಿ ಆ ಪುಣ್ಯ ಸ್ಥಳಗಳನ್ನು ಸಂದರ್ಶಿಸಿದ್ದರು. ಇಪ್ಪತ್ತೆರಡನೇ ಹಜ್ಜ್ ಕರ್ಮದ ನಂತರ ಅವರು ಅಲ್ಲಿ ವಫಾತಾದರು. ಆದ್ದರಿಂದಲೇ ಅವರನ್ನು *ಜನ್ನತುಲ್ ಮುಹಲ್ಲಾದಲ್ಲಿ* ದಫನ್ ಮಾಡಲಾಯಿತು.

  ಅವರ ನಂತರ  ಅತ್ಯಧಿಕ ಬಾರಿ ಆ ಪುಣ್ಯ ಸ್ಥಳಗಳನ್ನು ಕಾಣಲು ಭಾಗ್ಯಗಳಿಸಿದ ಮಹಾನ್ ವ್ಯಕ್ತಿ *ತಾಜುಲ್ ಉಲಮರಾಗಿದ್ದರು*. ಅವರು *ನಲವತ್ತು ಬಾರಿ*  ಆ ಪುಣ್ಯ ಸ್ಥಳಗಳನ್ನು ಸಂದರ್ಶಿಸಿದ್ದರು. 
    ಆದರೆ... ಇಂದು,  ಒಂದು ವರ್ಷದಲ್ಲಿ ಮೂರು ಅಥವಾ ನಾಲ್ಕು ಬಾರಿ ಮಕ್ಕ ಮತ್ತು ಮದೀನ ತಲುಪುವ ಮಹಾನ್ ಭಾರತದಲ್ಲಿದ್ದರೆ ಅವರು *ಶೈಖುನಾ ಸುಲ್ತಾನುಲ್ ಉಲಮರಾಗಿದ್ದಾರೆ*.
     ರಬೀವುಲ್ ಅವ್ವಲ್, ರಂಝಾನ್ ತಿಂಗಳಲ್ಲಿ ಮತ್ತು ಹಜ್ ಸಂದರ್ಭಗಳಲ್ಲಿ ಆ ಪುಣ್ಯ ಸ್ಥಳಗಳನ್ನು ಪ್ರತೀ ವರ್ಷವೂ ತಲುಪುವ ಓರ್ವ ಮಹಾನ್ ವ್ಯಕ್ತಿಯಾಗಿದ್ದಾರೆ ಅವರು.

      ಭಾರತದಲ್ಲಿರುವ ಸುನ್ನೀ ಮುಸ್ಲಿಂಗಳ ಸನ್ನತ್ ಜಮಾಅತಿನ ವಿಷಯಗಳನ್ನು ಹೇಳಿ *ರೌಳಾ ಶರೀಫಿನ* ಬಳಿ ಕಣ್ಣೀರಿಳಿಸಿ ಸುನ್ನತ್ ಜಮಾಅತಿನ ಕಾರ್ಯ ಚಟುವಟಿಕೆಗಳಿಗಾಗಿ ಆಶಿರ್ವಾದ ಪಡೆಯುವ ಓರ್ವ  ಮಹಾನ್ ಇಂದು ಭಾರತ ದೇಶದಲ್ಲಿದ್ದರೆ ಅವರು ಸುಲ್ತಾನುಲ್ ಉಲಮರಾಗಿದ್ದಾರೆ.
🌷🌷🌷🌷🌷🌷🌷🌷
        *ನಾಲ್ಕು ಖಲೀಫರ ಮಕ್ಬರಗಳ ಬಳಿ.*
      ಮುಸ್ಲಿಂ ಸಮೂಹ ಪ್ರವಾದಿಗಳ ನಂತರ ಅತ್ಯಧಿಕ ಗೌರವಿಸಬೇಕಾದದ್ದು ಮತ್ತು ಅಂಗೀಕರಿಸಬೇಕಾದದ್ಗು ನಾಲ್ಕು ಖಲೀಫರುಗಳಾನ್ನಾಗಿದೆ. *ಅಬೂಬಕ್ಕರ್ ಸಿದ್ದೀಕ್(ರ),  ಉಮರ್(ರ), ಉಸ್ಮಾನ್(ರ) ಅಲಿಯ್ಯ್(ರ)*ರಂತಹ ನಾಲ್ಕು ಖಲೀಫರನ್ನು ಒಂದು ವರ್ಷದಲ್ಲಿ ಒಮ್ಮೆಯಾದರೂ ಸಂದರ್ಶಿಸಿ ಭಾರತದ ಸುನ್ನತ್ ಜಮಾಅತಿನ ಕಾರ್ಯಗಳಿಗೆ ಆಶಿರ್ವಾದ ಪಡೆಯಲು ಭಾಗ್ಯ ಸಿಕ್ಕಿದ ಭಾರತದ ಅತ್ಯಂತ ಶ್ರೇಷ್ಠ ವ್ಯಕ್ತಿ ಕೂಡ ಸುಲ್ತಾನುಲ್ ಉಲಮರಾಗಿದ್ದಾರೆ.
🌹🌹🌹🌹🌹🌹🌹🌹
*ನಾಲ್ಕು ಇಮಾಂಗಳ ಬಳಿ.*
   ನಾಲ್ಕು ಖುಲಫಾಉರ್ರಾಶಿದ್ಗಳ ನಂತರ ಮುಸ್ಲಿಂ ಸಮೂಹ ಅತ್ಯಧಿಕ ಗೌರವದಿಂದ ಕಾಣುತ್ತಿರುವುದು ನಾಲ್ಕು ಇಮಾಂಗಳನ್ನಾಗಿದೆ. *ಇಮಾಂ ಮಾಲಿಕ್(ರ),ಇಮಾಂ ಅಹ್ಮದುಬ್ನು ಹಂಬಲ್(ರ),ಇಮಾಂ ಶಾಫೀ(ರ),ಮತ್ತು ಇಮಾಂ ಅಬೂಹನೀಫ(ರ)*. ಇವರ ಮಕ್ಬರಗಳ ಬಳಿ ಕೂಡ ಒಂದು ವರ್ಷದಲ್ಲಿ ಒಮ್ಮೆಯಾದರೂ ತಲುಪಿ ಭಾರತದ ಸುನ್ನೀ ಸಂಘಟನೆಗಳ ಕಾರ್ಯ ಚಟುವಟಿಕೆಗಳಿಗಾಗಿ ಆಶಿರ್ವಾದ ಬೇಡುವ ಭಾರತದ ಏಕೈಕ ಮುಸ್ಲಿಂ ಧೀಮಂತ ನಾಯಕ ಸುಲ್ತಾನುಲ್ ಉಲಮರಾಗಿದ್ದಾರೆ.
🌿🌿🌿🌿🌿🌿🌿🌿
       *ನಾಲ್ಕು ಕುತುಬುಗಳ ಮಕ್ಬರಗಳ ಬಳಿ.*
     ನಾಲ್ಕು ಇಮಾಂಗಳ ನಂತರ ಮುಸ್ಲಿಂ ಸಮುದಾಯ ಅತ್ಯಂತ ಗೌರವಿಸುತ್ತಿರುವುದು ನಾಲ್ಕು ಕುತುಬುಗಳನ್ನಾಗಿದೆ. ಆ ಕುತುಬುಗಳಾಗಿದ್ದಾರೆ *ಮುಹಿಯದ್ದೀನ್ ಶೈಖ್ (ಖ.ಸಿ), ಅಹ್ಮದುಲ್ ಕಬೀರ್ (ಖ.ಸಿ), ಅಹ್ಮದುಲ್ ಬದವಿ (ಖ.ಸಿ),ಇಬ್ರಾಹೀಮುದ್ದಸೂಕೀ (ಖ.ಸಿ)*. ಇವರ ಮಕ್ಬರಗಳ ಬಳಿ ಕೂಡ ಒಂದು ವರ್ಷದಲ್ಲಿ ಒಮ್ಮೆಯಾದರೂ ತಲುಪಿ ಭಾರತದ ಸುನ್ನೀ ಸಂಘಟನೆಗಳ ಕಾರ್ಯ ಚಟುವಟಿಕೆಗಳಿಗಾಗಿ ಆಶೀರ್ವಾದ ಬೇಡುವ ಭಾರತದ ಏಕೈಕ ಮುಸ್ಲಿಂ ಧೀಮಂತ ನಾಯಕ ಸುಲ್ತಾನುಲ್ ಉಲಮರಾಗಿದ್ದಾರೆ.
🌱🌱🌱🌱🌱🌱🌱🌱
      *ದಲಾಯಿಲುಲ್  ಖೈರಾತ್* ರಚಿಸಿದ *ಇಮಾಂ ಸುಲೈಮಾನುಲ್ ಜಝೂಲಿ(ರ)*ರವರ ಮಕ್ಬರವಿರುವುದು ಮೊರೋಕದಲ್ಲಿ.  *ಸುಲ್ತಾನುಲ್ ಉಲಮರು* ಮೊರೋಕ ರಾಜನಿಗೆ ಫೋನ್ ಮಾಡಿ *ಸುಲೈಮಾನುಲ್ ಜಝೂಲಿ(ರ)* ರವರ ಮಕ್ಬರ ಸಂದರ್ಶಿಸಲು ಅನುವು ಮಾಡಿಕೊಡಬೇಕೆಂದಾಗ ತಕ್ಷಣವೇ ಅಲ್ಲಿನ ರಾಜ ಎಲ್ಲಾ ವ್ಯವಸ್ಥೆಗಳನ್ನು ಮಾಡಿ ಕೊಟ್ಟರು ಮತ್ತು *ಸುಲ್ತಾನುಲ್ ಉಲಮರು* ಅಲ್ಲಿ ಹೋಗಿ ಝಿಯಾರತ್ ಮಾಡಿ ಬಂದರು.
💐💐💐💐💐💐💐💐
*ಬುಖಾರಿ ಇಮಾಮರ ಸನ್ನಿಧಾನದಲ್ಲಿ.*
      ಲೋಕದಲ್ಲಿ ಅತ್ಯಧಿಕ ಬಾರಿ ಎಲ್ಲಾ ಆಲಿಂಗಳ ಬಾಯಿಂದಲೂ, ಮುತಅಲ್ಲಿಂಗಳ ಬಾಯಿಂದಲೂ ಮತ್ತು ಸಾಮಾನ್ಯ ಜನರಿಂದಲೂ ಹೇಳಲಾಗತ್ತಿರುವ ಹೆಸರು *ಇಮಾಂ ಬುಖಾರಿ(ರ) ರವರದ್ದು*. ಕುರ್ಆನಿನ ನಂತರ ಅತ್ಯಧಿಕ ಸ್ಥಾನವಿರುವ ಗ್ರಂಥ ಅವರು ರಚಿಸಿದ *ಸ್ವಹೀಹುಲ್ ಬುಖಾರಿ* ಎಂಬೂದರಲ್ಲಿ ಯಾವುದೇ ಸಂಶಯವಿಲ್ಲ. ಅಂತಹ *ಇಮಾಂ ಬುಖಾರಿ(ರ)* ರವರ *ಉಝ್ಬಕಿಸ್ಥನ್*ನಲ್ಲಿರುವ ಮಕ್ಬರ ಸಂದರ್ಶಿಸಿ ಅಲ್ಲಿ ಸೇರಿದ ಅಲ್ಲಿನ ವಿದ್ವಾಂಸರಿಗೆ *ಬುಖಾರಿ ಇಮಾಮರ* ಮಕ್ಬರದ ಬಳಿ *ಸ್ವಹೀಹುಲ್ ಬುಖಾರಿ*ದರ್ಸ್ ನಡೆಸಿ *ಬುಖಾರಿ ಇಮಾಮರ* ಆಶಿರ್ವಾದ ಪಡೆದರು.
🌺🌺🌺🌺🌺🌺🌺🌺
  ಇಂತಹ ಹಲವು ಭಾಗ್ಯಗಳು ಒಳಿದು ಬಂದ ಸುಲ್ತಾನುಲ್ ಉಲಮರ ರಹಸ್ಯವೇನಾಗಿರಬಹುದು?  ಒಂದೆಡೆ *ಸುಲ್ತಾನುಲ್ ಉಲಮ*ರು ಭಾಷಣದ ಮಧ್ಯೆ ಹೇಳಿದರು *"ನನಗೆ ಅಂದು, ಅಂದಿನ ಅಬುಸ್ಸಆದಾತ್ ಶಾಲಿಯಾತಿ ತಂಙಳ್ ಮತ್ತು ಶಂಸುಲ್ ಉಲಮ ಕುತುಬಿ ಮುಸ್ಲಿಯಾರ್ ದುಆಮಾಡಿದ್ದರು"*
🌙🌙🌙🌙🌙🌙🌙🌙
✍ *ಮುಹಮ್ಮದ್ ಮುನೀರ್. ಎ ಕಬಕ 9048254879 ಮುಹಿಮ್ಮಾತ್ ದಅವ ಕಾಲೇಜ್*
🌎🌍🌏🌎🌍🌎🌍🌏

Comments

Popular posts from this blog

ಗ್ರಹಣ ನಮಾಜಿನ ರೂಪ

ಗ್ರಹಣ ನಮಾಜಿನ ರೂಪ *ಚಂದ್ರಗ್ರಹಣದ ಸುನ್ನತ್ ನಮಾಜು ಎರಡು ರಕಅತ್ ಅಲ್ಲಾಹನಿಗಾಗಿ ಜಮಾಅತ್ತಾಗಿ ನಾನು ನಿರ್ವಹಿಸುವೆನು* ಎಂದು ನಿಯ್ಯತ್ ಮಾಡಿ ಅಲ್ಲಾಹು ಅಕ್ಬರ್ ಎಂದು ಹೇಳಿ ನಮಾಜಿಗೆ ಪ್ರವೇಶಿಸುವು...

ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ. ಲೇ - ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಅಕ್ಕರೆಕೆರೆ.

ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ. ಲೇ - ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಅಕ್ಕರೆಕೆರೆ. ಆಮಿನ ಬೀವಿ ರ.ಅ ಗರ್ಭಿಣಿಯಾಗಿರುವಾಗ ವ್ಯಾಪಾರಕ್ಕಾಗಿ ಸಿರಿಯಾಕ್ಕೆ ಹೋಗಿದ್ದ ಅಬ್ದುಲ್ಲಾಹ್ (ರ.ಅ) ಮರಳಿ ಬರುವಾಗ ಮದೀನದಲ್ಲಿ ವಫಾತಾದರು.ತಂದೆಯ ಮಾವಂದಿರರಾದ ಬನುನ್ನಜ್ಜಾರ್ ಗೋತ್ರದವರ ಬಳಿ ದಫನ ಮಾಡಲಾಯಿತು.ರಬೀವುಲ್ ಹನ್ನೆರಡು ಸೋಮವಾರ ಸುಬಹಿಯ ಸ್ವಲ್ಪ ಮುಂಚೆ ಅಂತ್ಯ ಪ್ರವಾದಿ ಮುಹಮ್ಮದ್ ಮುಸ್ತಫ ಸ.ಅ ಮಕ್ಕಾದಲ್ಲಿ ಜನಿಸಿದರು.ಅಂದು ಕ್ರಿಸ್ತಶಕ 571 ಎಪ್ರಿಲ್ 21 ಆಗಿತ್ತು.ನೆಬಿ ಸ.ಅ ಜನಿಸಿದ ದಿನ ಅತ್ಯಂತ ಸಂತೋಷದಾಯಕವಾದ ದಿನವಾಗಿದೆ.ಮಾನವ ಶ್ರೇಷ್ಠರಾದ ಪ್ರವಾದಿ ಮುಹಮ್ಮದ್ ಸ.ಅ ರವರ ಮುಖಾಂತರ ಮಾನವ ಸಮೂಹವನ್ನು ಅಲ್ಲಾಹು ಅನುಗ್ರಹಿಸಿದ ಸುದಿನವಾಗಿದೆ ಅಂದು.ಮುಸಲ್ಮಾನರು ಈ ಅನುಗ್ರಹಕ್ಕೆ ಕ್ರತಜ್ಞತೆ ಸಲ್ಲಿಸಿ ಅಂದು ಮೀಲಾದುನ್ನಬಿ ಆಚರಣೆ ಮಾಡುತ್ತಾರೆ.ನೆಬಿ ಸ.ಅ ರವರ ಮದಹ್ ಕೀರ್ತನೆಗಳನ್ನು ಹೇಳಿ, ಹಾಡಿಹೊಗಳಿ ದಾನಧರ್ಮಗಳನ್ನು ನೀಡಿ ಸಂತೋಷ ಪ್ರಕಟಿಸುತ್ತಾರೆ.              ಭೂಮಿಯ ಮೇಲೆ ಜನ್ಮವೆತ್ತಿ ಬಂದ ಅತ್ಯಂತ ಉತ್ತಮನಾದ ಮನುಷ್ಯ ನೆಬಿ ಸ.ಅ ಆಗಿದ್ದಾರೆ.ಮುಂಜಿಕರ್ಮ ನಿರ್ವಹಿಸಲ್ಪಟ್ಟ,ಹೊಕ್ಕುಳ ಬಳ್ಳಿ ಕತ್ತರಿಸಲ್ಪಟ್ಟ,ಕಣ್ಣಿಗೆ ಸುರುಮ ಹಾಕಲ್ಪಟ್ಟ ಸ್ಥಿತಿಯಲ್ಲಿ ಸಂಪೂರ್ಣ ಸಂಶುದ್ಧವಾದ ರೀತಿಯಲ್ಲಾಗಿದೆ ಅವರು ಜನಿಸಿದ್ದು.ಅಬೂತಾಲಿಬರ ಮನೆಯಲ್ಲಾಗಿದೆ ಜನನ.ಹೆರಿಗೆ...

ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಕರ ಪಾತ್ರ

ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಕರ ಪಾತ್ರ _✍🏻ಜಹಫರ್ ಸಾಧಿಕ್ ಕಟ್ಟದಪಡ್ಪು_ _ನಮ್ಮ ಸಮಾಜವು ನಮಗೆ ಜನ್ಮ ಕೊಟ್ಟ ತಂದೆ ತಾಯಿಯ ನಂತರ ಮಹತ್ತರವಾದ ಸ್ಥಾನವನ್ನು ಶಿಕ್ಷಕರಿಗೆ ನೀಡಿ ಗೌರವಿಸಿದೆ.  ಶಿಲ್ಪಿ...