ಕಣ್ಣಾರೆ ಕಂಡು ಅನುಭವಿಸಿದ
ತಾಜುಲ್ ಉಲಮಾರ ಕರಾಮತು
✍ಪಿ.ಪಿ.ಎ.ಹಮೀದ್ ಕಾಶಿಪಟ್ಣ
ಕೆಸಿಎಫ್ ಕುವೈತ್
ತಾಜುಲ್ ಉಲಮಾರ ಶಿಷ್ಯಂದಿರ ಸಂಘಟನೆ ಮದನೀಸ್ ಎಸೋಶಿಯೇಶನ್. ನನ್ನ ಜ್ಞಾಪಕ ಸರಿಯಾಗಿದ್ದಲ್ಲಿ ಸುಮಾರು 18/19 ವರ್ಷಗಳ ಹಿಂದೆ ನಡೆದ ಉಳ್ಳಾಲ ದರ್ಗಾ ಮೈದಾನದಲ್ಲಿ ಮದನೀಸ್ ಸಂಘಟನೆಯ ಅಧೀನದಲ್ಲಿ ನಡೆದ ಅತಿರಥ ಮಹಾರಥರಾದ ಉಲಮಾ ,ಉಮರಾ,ಹಾಗು ರಾಜಕೀಯ ಮುಖಂಡರು ಭಾಗವಹಿಸಿದ ಸಮ್ಮೇಳನ. ಅದು ವೇದಿಕೆಯಲ್ಲಿ ಶೈಖುನಾ ಎಪಿ ಉಸ್ತಾದ್, ಶೈಖುನಾ ಎಮ್ ಎ ಉಸ್ತಾದ್ ಸೇರಿದಂತೆ ಗಣ್ಯಾತಿಗಣ್ಯರು ಬಂದು ಸೇರಿದ್ದರು ಇನ್ನೇನು ಕೆಲವೇ ಕ್ಷಣಗಳಲ್ಲಿ ಸಮ್ಮೇಳನ ಆರಂಭವಾಗುವ ಸಮಯ. ಮೈದಾನವು ಸುನ್ನಿ ಕಾರ್ಯಕರ್ತರಿಂದ ತುಂಬಿ ತುಳುಕುತ್ತಿದೆ. ತಾಜುಲ್ ಉಲಮಾರವರು ವೇದಿಕೆಗೆ ಆಗಮನವಾಗುತ್ತಿದ್ದಂತೆಯೇ ಮೈದಾನದಲ್ಲಿ ಸೇರಿದ ಸುನ್ನಿ ಮಕ್ಕಳ ಹರ್ಷೋದ್ಗಾರ ಮುಗಿಲು ಮುಟ್ಟುತ್ತಿತ್ತು. ಮದನೀಸ್ ಸಂಘದ ಅದ್ಯಕ್ಷರಾದ ಟಿ ಎಚ್ ಉಸ್ತಾದರು ಸ್ವಾಗತ ಭಾಷಣಕ್ಕೆ ಅನುವಾದಾಗ ಆಗ ತಾನೆ ಸಂಘಟಕರು ಸೇರಿದಂತೆ ನಾನಾ ದಿಕ್ಕುಗಳಿಂದ ಬಂದು ಸೇರಿದ ಸುನ್ನಿ ಕಾರ್ಯಕರ್ತರಿಗೆ ಆತಂಕ. ಕಾರಣ,ಸಿಡಿಲು ಮಿಂಚು. ಮಳೆರಾಯನ ಸ್ವಾಗತಕ್ಕೆ ಕತ್ತಲು ಕವಿದ ವಾತಾವರಣ. ನಾಯಕರ ಭಾಷಣ ಆಲಿಸಬೇಕೆಂಬ ಅತಿ ಆಸೆಯಿಂದ ಬಂದ ಕಾರ್ಯಕರ್ತರಿಗೆ ನಿರಾಶೆಯ ಮೌನ..
ಆಗ ತಾಜುಲ್ ಉಲಮಾರ ಪವಿತ್ರವಾದ ಬಾಯಿಯಿಂದ ಆ ಮಾತು ಹೊರಬಿತ್ತು.
*ಯಾರು ಇದ್ದಲ್ಲಿಂದ ಕದಲಬೇಡಿ. ಮಳೆಯ ವಿಷಯ ನಾನು ವಹಿಸಿಕೊಳ್ಳುವೆನು...ಅಲ್ಲಾಹವೇ ನಿನ್ನ ಅನುಗ್ರಹವಾದ ಮಳೆಯನ್ನು ನಮ್ಮ ಕಾರ್ಯಕ್ರಮ ಮುಗಿಯುವವರೆಗೆ ನೀಡಬೇಡ. ಆಸುಪಾಸಿಗೆ ಕೊಡು ರಬ್ಬೇ.*
ತೊಕ್ಕೋಟು, ತಲಪಾಡಿ ಮಂಗಳೂರು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮಳೆರಾಯನ ಆರ್ಭಟವಿರುವಾಗ
ಸರಿ ಸುಮಾರು ಸಂಜೆ 6 ರಿಂದ ರಾತ್ರಿ 10ಗಂಟೆಯವರೆಗೆ ಉಳ್ಳಾಲ ಮೈದಾನದಲ್ಲಿ ಕಾರ್ಯಕ್ರಮ ಯಾವುದೇ ತೊಡಕು ಇಲ್ಲದೇ, ಕೊನೇಯದಾಗಿ ಪೇರೋಡು ಉಸ್ತಾದರ ಭಾಷಣ ಮುಕ್ತಾಯ ಆಗುತ್ತಿದ್ದಂತೆ ಮಳೆರಾಯ ಬಂದೆ ಬಿಟ್ಟ..
ಇದನ್ನು ಪ್ರತ್ಯಕ್ಷ ಕಣ್ಣಾರೆ ಕಂಡು ಅನುಭವಿಸಿದ ಈ ವಿನೀತ..
ಮಾತ್ರವಲ್ಲದೇ ಕರ್ನಾಟಕ,ಕೇರಳದ ಹಲವಾರು ಪತ್ರಿಕಾ ಪ್ರತಿನಿಧಿಗಳು ಸಮ್ಮೇಳದಲ್ಲಿ ಭಾಗಿಯಿದ್ದು ಪ್ರತ್ಯಕ್ಷ ಕಂಡು ಬೆಳಗಿನ ಪತ್ರಿಕೆಯಲ್ಲಿ ಉಳ್ಳಾಲ ತಂಙಳ್'ರವರ ಕರಾಮತು ಎಂದು ಹೆಡ್'ಲೈನ್'ನಲ್ಲಿ ಪ್ರಕಟಿಸಿದ್ದರು.
*ಇದಾಗಿದೆ ಕಣ್ಮರೆಯಾದರೂ ಮನ್ಮರೆಯಾಗದ ತಾಜುಲ್ ಉಲಮಾ ( ಖ.ಸಿ)*
Comments