Skip to main content

ಎಸ್ಸೆಸ್ಸೆಫ್

*ಪರಲೋಕ ವಿಜಯಿಯಾಗಳು,  ಸಂಘಟನೆಯಲ್ಲಿ ಸೇರಿ ಕಾರ್ಯಾಚರಿಸಲೇಬೇಕೆಂಬ ನಿಬಂಧನೆ ಏನಾದರು ಇದೆಯಾ?.*

ಇದು ಎಲ್ಲರನ್ನೂ ಕಾಡುವ ಒಂದು ಸಹಜ ಪ್ರಶ್ನೆ. ಸಂಘಟನೆಯಲ್ಲಿ ಸೇರದಿದ್ದರೆ ಸ್ವರ್ಗಕ್ಕೆ ಹೋಗಲು ಸಾದ್ಯವಿಲ್ಲವೇ ಎಂದು. ಈ ಬಗ್ಗೆ ಖುರ್ಆನ್ ಏನನ್ನುತ್ತದೆ ನೋಡೋಣ..
*ಒಳಿತನ್ನು ಬೋಧಿಸುವ, ಕೆಡುಕನ್ನು ವಿರೋಧಿಸುವ ಒಂದು ವಿಭಾಗ ಜನರು ನಿಮ್ಮಲ್ಲಿ ಅಗತ್ಯವಾಗಿ ಇರಬೇಕು. ನಿಜವಾಗಿಯೂ ಅವರೇ ಜಯಶಾಲಿಗಳು* (ಖುರ್ಆನ್)
ಪರಲೋಕ ವಿಜಯಿಯಾಗಳು *ಒಳಿತನ್ನು ಬೋಧಿಸುವ, ಕೆಡುಕನ್ನು ವಿರೋಧಿಸುವ* ಒಂದು ಸಂಘಟನೆ ನಮಗೆ ಅಗತ್ಯವಾಗಿ ಬೇಕು ಎಂದು ಖುರ್ಆನ್ ಒತ್ತಿ ಹೇಳುತ್ತದೆ.
*ಖುರ್ಆನ್ ನನ್ನು ನಾವು ಅನುಸರಿಸುವವರಾದರೆ, ಆ ಖುರ್ಆನ್ ನಲ್ಲಿ ವಿವರಿಸಿದಂತಹ ಸಂಘಟನೆಯಲ್ಲಿ ಸೇರಿ ಕಾರ್ಯಾಚರಿಸಬೇಕು ತಾನೇ.*

*ಒಳಿತನ್ನು ಬೋಧಿಸುವುದು, ಕೆಡುಕನ್ನು ವಿರೋಧಿಸುವುದು* ಎಂದರೆ, ಇಸ್ಲಾಂ ಪ್ರೋತ್ಸಾಹಿಸಿದ ಕಾರ್ಯವನ್ನು ಬೋಧಿಸುವುದು, ಇಸ್ಲಾಂ ನಿಷೇಧಿಸಿದ ಕಾರ್ಯ ಗಳನ್ನೆಲ್ಲಾ ವಿರೋಧಿಸುವುದಾಗಿದೆ.
ಇಲ್ಲಿ ಅದೆಷ್ಟು ಸಂಘಟನೆ ಗಳಿದ್ದರೂ, ಇಸ್ಲಾಂ ಪ್ರೋತ್ಸಾಹಿಸಿದ ಕಾರ್ಯವನ್ನೆಲ್ಲಾ *ಬೋಧಿಸಿ*, ಇಸ್ಲಾಂ ನಿಷೇಧಿಸಿದ  ಕಾರ್ಯವನ್ನೆಲ್ಲಾ *ವಿರೋಧಿಸುವ* ಸಂಘಟನೆ ವಿರಳ.

ನಮಾಝ್, ಉಪವಾಸ, ಹಜ್, ಝಕಾತ್ ಬಗ್ಗೆ ವಿವರಿಸಲು ಇಲ್ಲಿ ಬಹಳಷ್ಟು ಸಂಘಟನೆ ಇರಬಹುದು. 
ಆದರೆ, ಅದರೊಂದಿಗೆ ಪ್ರವಾದಿ ﷺ ರ ಮೇಲೆ ಮದ್'ಹ್ ಹೇಳಲು, ಮೌಲಿದ್ ಓದಲು,ಮೃತರ ಹೆಸರಲ್ಲಿ ಖುರ್ಆನ್ ಓದಲು ತಹ್ಲೀಲ್ ಹೇಳಲು, ಉಲಮಾಗಳನ್ನು ತಂಙಳ್ ಗಳನ್ನು ಗೌರವಿಸಲು, ಧಾರ್ಮಿಕ ವಾಲ್ ಕಾರ್ಯಕ್ರಮವನ್ನು ಉತ್ತೇಜಿಸುವಂತಹ ಸಂಘಟನೆಯೊಂದು ಇದ್ದರೆ ಅದು *SSF* ಮಾತ್ರ. ‌

*ಕೆಡುಕನ್ನು ವಿರೋಧಿಸುವುದೆಂದರೆ,*
ಇಸ್ಲಾಂ ನಿಷಿದ್ಧ ಗೊಳಿಸಿದಂತಹ ಕಾರ್ಯಗಳನ್ನೆಲ್ಲಾ ವಿರೋಧಿಸುವುದಾಗಿದೆ.
ಮದ್ಯಪಾನ, ವ್ಯಭಿಚಾರ, ಕೊಲೆ, ಹಲ್ಲೆ ಮುಂತಾದವುಗಳನ್ನು ವಿರೋಧಿಸಲು ಇಲ್ಲಿ ಹಲವಾರು ಸಂಘಟನೆ ಇರಬಹುದು.
ಆದರೆ, ಮದ್ಯಪಾನ, ಕೊಲೆ, ಹಲ್ಲೆ ಗಳನ್ನು ವಿರೋಧಿಸುವುದರೊಂದಿಗೆ,  ಅದಕ್ಕಿಂತಲೂ ಮಹಾ ಪಾಪವಾದ ನೂತನವಾದವನ್ನು, ನೂತನವಾದಿಗಳನ್ನು, ನೂತನವಾದಿಗಳ ಸಹವಾಸವನ್ನೂ ವಿರೋಧಿಸುತ್ತಾ ಬಂದಂತಹ  ಸಂಘಟನೆಯೊಂದಿದ್ದರೆ,  ಅದು *SSF* ಮಾತ್ರ.

ನೂತನವಾದ ಪ್ರತ್ಯಕ್ಷವಾದಾಗ, ಅದರ ಬಗ್ಗೆ ಅರಿತೂ ಮೌನ ವಹಿಸುವವರ ಮೇಲೆ ಮತ್ತು ಆ ನೂತನವಾದಿಗಳ ಸಹವಾಸ ಮಾಡುವವರ ಮೇಲೆ ಅಲ್ಲಾಹನ ಶಾಪವಿದೆ ಎಂದು ಪ್ರವಾದಿ ﷺ ರು ಹೇಳಿದ್ದಾರೆ. ‌
ಅಂದರೆ, ನೂತನವಾದಿಯಾಗುವುದು ಮತ್ತು ಅವರ ಸಹವಾಸ ಬೆಳೆಸುವುದೂ ಇಸ್ಲಾಂ ವಿರೋಧಿಸಿದ ಕಾರ್ಯವಾಗಿದೆ.
ಅಂದಮೇಲೆ, ನೂತನವಾದಿಗಳ ಸಹವಾಸ ಮಾಡುವುದು, ಮತ್ತು ನೂತನವಾದಿಗಳನ್ನು ಸೇರಿಸಿ ಸಂಘ ಕಟ್ಟಿದರೆ, ಅದು  *ಕೆಡುಕನ್ನು ವಿರೋಧಿಸುವ* ಸಂಘವಾಗಲು ಸಾದ್ಯವಿಲ್ಲ.

ಭೂಲೋಕದ ಲಾಭಕ್ಕಾಗಿ ನೂತನವಾದಿಗಳೊಂದಿಗೆ ಐಕ್ಯತೆ ಮಾಡಬೇಕು ಎಂದು ಕೆಲವರು ವಾದಿಸುವಾಗ, ಅದೇರೀತಿ ಪೂರ್ವಿಕ ಇಮಾಮರುಗಳ ಚರ್ಯೆಗೆ ವಿರುದ್ಧವಾಗಿ ಮುಸ್ಲಿಂ ಮಹಿಳೆಯರನ್ನು ಪ್ರತಿಭಟನೆಯ ಕಾರಣ ಹೇಳಿ ಬೀದಿಗೆ ಇಳಿಸಿದಾಗ, ಅನ್ಯ ಪುರುಷರಿರುವ ವೇದಿಕೆಯಲ್ಲಿ ಭಾಷಣ ಮಾಡಿಸಿದಾಗ,  ಅದು ಅಲ್ಲಾಹು ಮತ್ತು ಪ್ರವಾದಿ ﷺ ರ ಚರ್ಯೆಗೆ ವಿರುದ್ಧ ಎಂದು ಹೇಳಿ,  ಅಂತಹ ಕೆಡುಕಿನ ವಿರುದ್ಧ ಶಬ್ದ ವೆತ್ತುತ್ತಿರುವ ಏಕೈಕ ಸಂಘಟನೆ *SSF* ಮಾತ್ರವಾಗಿದೆ.
ಅಂದರೆ, ಖುರ್ಆನ್ ವಿಷೇಶಿಸಿದ *ಒಳಿತನ್ನು ಬೋಧಿಸುವ, ಕೆಡುಕನ್ನು ವಿರೋಧಿಸುವ ಒಂದು ಸಂಘಟನೆ* ಎಂಬ ವಿಶೇಷತೆಗೆ ಅರ್ಹವಾದ ಒಂದು ಸಂಘಟನೆ ಇದ್ದರೆ ಅದು *SSF* ಮಾತ್ರ ಎಂದು ಇದಕ್ಕಿಂತ ಹೆಚ್ಚು ವಿವರಿಸಬೇಕಾಗಿಲ್ಲ.

ಪರಲೋಕ ವಿಜಯವನ್ನು ಬಯಸುವ ಪ್ರತಿಯೊಬ್ಬ ಸತ್ಯ ವಿಶ್ವಾಸಿಗೂ *ಒಳಿತನ್ನು ಬೋಧಿಸುವ, ಕೆಡುಕನ್ನು ವಿರೋಧಿಸುವ* ಒಂದು ಸಂಘಟನೆ ಬೇಕೇಬೇಕು.
ಆ ಸಂಘಟನೆ, ಅಲ್ಲಾಹನ ಇಷ್ಟದಾಸರಾದ ಉಲಮಾಗಳು, ತಂಙಳ್ ಗಳು, ಅವುಲಿಯಾಗಳು, ಸಾದಾತುಗಳು, ಪುಣ್ಯ ಪುರುಷರು, ನೇತೃತ್ವಕೊಡುವಂತಹ ಸಂಘಟನೆ ಆಗಿರಬೇಕು.
ಈ ವಿಶೇಷತೆಯೆಲ್ಲಾ ಇರುವ *SSF* ಎಂಬ ಅದ್ವಿತೀಯ ಸಂಘಟನೆಯಲ್ಲಿ ಸೇರಿ ಕಾರ್ಯಾಚರಿಸುವ ಸೌಭಾಗ್ಯವನ್ನು ಅಲ್ಲಾಹು ನಮಗೆಲ್ಲರಿಗೂ ಕರುಣಿಸಲಿ, ಆಮೀನ್.

*ಮುಹಮ್ಮದ್ ಇಕ್ಬಾಲ್, ಮಂಗಳಪೇಟೆ.*

Comments

Popular posts from this blog

ಗ್ರಹಣ ನಮಾಜಿನ ರೂಪ

ಗ್ರಹಣ ನಮಾಜಿನ ರೂಪ *ಚಂದ್ರಗ್ರಹಣದ ಸುನ್ನತ್ ನಮಾಜು ಎರಡು ರಕಅತ್ ಅಲ್ಲಾಹನಿಗಾಗಿ ಜಮಾಅತ್ತಾಗಿ ನಾನು ನಿರ್ವಹಿಸುವೆನು* ಎಂದು ನಿಯ್ಯತ್ ಮಾಡಿ ಅಲ್ಲಾಹು ಅಕ್ಬರ್ ಎಂದು ಹೇಳಿ ನಮಾಜಿಗೆ ಪ್ರವೇಶಿಸುವು...

ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ. ಲೇ - ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಅಕ್ಕರೆಕೆರೆ.

ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ. ಲೇ - ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಅಕ್ಕರೆಕೆರೆ. ಆಮಿನ ಬೀವಿ ರ.ಅ ಗರ್ಭಿಣಿಯಾಗಿರುವಾಗ ವ್ಯಾಪಾರಕ್ಕಾಗಿ ಸಿರಿಯಾಕ್ಕೆ ಹೋಗಿದ್ದ ಅಬ್ದುಲ್ಲಾಹ್ (ರ.ಅ) ಮರಳಿ ಬರುವಾಗ ಮದೀನದಲ್ಲಿ ವಫಾತಾದರು.ತಂದೆಯ ಮಾವಂದಿರರಾದ ಬನುನ್ನಜ್ಜಾರ್ ಗೋತ್ರದವರ ಬಳಿ ದಫನ ಮಾಡಲಾಯಿತು.ರಬೀವುಲ್ ಹನ್ನೆರಡು ಸೋಮವಾರ ಸುಬಹಿಯ ಸ್ವಲ್ಪ ಮುಂಚೆ ಅಂತ್ಯ ಪ್ರವಾದಿ ಮುಹಮ್ಮದ್ ಮುಸ್ತಫ ಸ.ಅ ಮಕ್ಕಾದಲ್ಲಿ ಜನಿಸಿದರು.ಅಂದು ಕ್ರಿಸ್ತಶಕ 571 ಎಪ್ರಿಲ್ 21 ಆಗಿತ್ತು.ನೆಬಿ ಸ.ಅ ಜನಿಸಿದ ದಿನ ಅತ್ಯಂತ ಸಂತೋಷದಾಯಕವಾದ ದಿನವಾಗಿದೆ.ಮಾನವ ಶ್ರೇಷ್ಠರಾದ ಪ್ರವಾದಿ ಮುಹಮ್ಮದ್ ಸ.ಅ ರವರ ಮುಖಾಂತರ ಮಾನವ ಸಮೂಹವನ್ನು ಅಲ್ಲಾಹು ಅನುಗ್ರಹಿಸಿದ ಸುದಿನವಾಗಿದೆ ಅಂದು.ಮುಸಲ್ಮಾನರು ಈ ಅನುಗ್ರಹಕ್ಕೆ ಕ್ರತಜ್ಞತೆ ಸಲ್ಲಿಸಿ ಅಂದು ಮೀಲಾದುನ್ನಬಿ ಆಚರಣೆ ಮಾಡುತ್ತಾರೆ.ನೆಬಿ ಸ.ಅ ರವರ ಮದಹ್ ಕೀರ್ತನೆಗಳನ್ನು ಹೇಳಿ, ಹಾಡಿಹೊಗಳಿ ದಾನಧರ್ಮಗಳನ್ನು ನೀಡಿ ಸಂತೋಷ ಪ್ರಕಟಿಸುತ್ತಾರೆ.              ಭೂಮಿಯ ಮೇಲೆ ಜನ್ಮವೆತ್ತಿ ಬಂದ ಅತ್ಯಂತ ಉತ್ತಮನಾದ ಮನುಷ್ಯ ನೆಬಿ ಸ.ಅ ಆಗಿದ್ದಾರೆ.ಮುಂಜಿಕರ್ಮ ನಿರ್ವಹಿಸಲ್ಪಟ್ಟ,ಹೊಕ್ಕುಳ ಬಳ್ಳಿ ಕತ್ತರಿಸಲ್ಪಟ್ಟ,ಕಣ್ಣಿಗೆ ಸುರುಮ ಹಾಕಲ್ಪಟ್ಟ ಸ್ಥಿತಿಯಲ್ಲಿ ಸಂಪೂರ್ಣ ಸಂಶುದ್ಧವಾದ ರೀತಿಯಲ್ಲಾಗಿದೆ ಅವರು ಜನಿಸಿದ್ದು.ಅಬೂತಾಲಿಬರ ಮನೆಯಲ್ಲಾಗಿದೆ ಜನನ.ಹೆರಿಗೆ...

ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಕರ ಪಾತ್ರ

ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಕರ ಪಾತ್ರ _✍🏻ಜಹಫರ್ ಸಾಧಿಕ್ ಕಟ್ಟದಪಡ್ಪು_ _ನಮ್ಮ ಸಮಾಜವು ನಮಗೆ ಜನ್ಮ ಕೊಟ್ಟ ತಂದೆ ತಾಯಿಯ ನಂತರ ಮಹತ್ತರವಾದ ಸ್ಥಾನವನ್ನು ಶಿಕ್ಷಕರಿಗೆ ನೀಡಿ ಗೌರವಿಸಿದೆ.  ಶಿಲ್ಪಿ...