ಖುತುಬಿಯ್ಯತ್ ರಚನಕಾರರು
ಖುತ್ ಬಿಯ್ಯತ್ ರಚಿಸಿದವರು ಹಿಜಿರಾ 1040 ರಲ್ಲಿ ಜನಿಸಿದ ಅಂದಿನ ದಕ್ಷಿಣ ಭಾರತದ ಉಲಮಾಗಳ ನಾಯಕರಾಗಿದ್ದ ಬಹು ಸ್ವದಖತುಲ್ಲಾಹಿಲ್ ಖಾಹ್ರಿ ರಹ್ಮತುಲ್ಲಾಹಿ ಅಲೈಹಿ ರವರಾಗಿದ್ದಾರೆ.ಮುಘಲ್ ರಾಜ್ಯವಂಶದ ಪ್ರಗಲ್ಪರಾದ ಚಕ್ರವರ್ತಿ ಔರಂಗಝೇಬ್ ರ ಅಧಿಕಾರ ಕಾಲದಲ್ಲಾಗಿತ್ತು ಸುಲೈಮಾನ್ ಖಾಹ್ರಿರ ಪುತ್ರರಾದ ಇವರು ಜೀವಿಸಿದ್ಧು.ಸಣ್ಣ ಪ್ರಾಯದಲ್ಲೇ ಕುರ್ ಆನ್ ಕಂಠಪಾಠ ಮಾಡಿ ಪ್ರಾಥಮಿಕ ವಿಧ್ಯೆಯನ್ನು ತನ್ನ ತಂದೆಯ ವರಿಂದ ನಿರ್ವಹಿಸಿ ದಸ್೯ ವಿಧ್ಯೆಯನ್ನು ಪ್ರಸಿದ್ಧ ಪಂಡಿತನಾದ ಮುಹಮ್ಮದ್ ಅಬ್ದುಲ್ ಖಾದ್ರಿಲ್ ಮಖ್ದೂಮಿ ರಹ್ಮತುಲ್ಲಾಹಿ ಅಲೈಹಿ ರವರಿಂದ ಕಲಿತರು.ನಂತರ ಮಕ್ಕಾ ಮದೀನಾಕ್ಕೆ ಪ್ರವಾಸ ಬೆಳೆಸಿ ಅಲ್ಲಿ ಎರಡು ವರ್ಷಗಳ ಕಾಲ ಧಾರ್ಮಿಕ ವಿಧ್ಯೆಯನ್ನು ಕರಗತ ಮಾಡಿದರು.ಪ್ರಗಲ್ಪ ಸಾಹಿತ್ಯ ಗಾರನೂ ಕವಿಯು ಆಗಿರುವ ಸ್ವದಖತುಲ್ಲಾಹಿಲ್ ಖಾಹ್ರಿ ರಹ್ಮತುಲ್ಲಾಹಿ ಅಲೈಹಿ ರವರು ಹಲವಾರು ಕವಿತೆಗಳನ್ನು ರಚಿಸಿದ್ದಾರೆ.
ಹಿಜಿರಾ 1112 ರಲ್ಲಿ ಮರಣ ಹೊಂದುವಾಗ ಅವರಿಗೆ 73 ವಯಸ್ಸಾಗಿತ್ತು. ಇವರನ್ನು ದಫನ್ ಗೈದದ್ದು ಕಿಳಕ್ಕರೆ ಜುಮಾ ಮಸ್ಜಿದ್ ನಲ್ಲಾಗಿದೆ.
*ಖುತುಬಿಯ್ಯತ್ ಎಂದರೇನು..?*
ಖುತುಬುಲ್ ಅಖ್ ತ್ವಾಬ್ ಶೈಖ್ ಮುಹ್ ಯಿದ್ದೀನ್ ಅಬ್ದುಲ್ ಖಾದ್ರಿಲ್ ಜೀಲಾನಿ ರಹ್ಮತುಲ್ಲಾಹಿ ಅಲೈಹಿ ರವರು ಗಳ ಹೆಸರಿನಲ್ಲಿ ರುವ ಕಾವ್ಯವಾಗಿದೆ ಖುತುಬಿಯ್ಯತ್.
ಇದರಲ್ಲಿ ಒಳಗೊಂಡಿರುವ ಅಂಶ:
1-ಮುಹ್ ಯಿದ್ದೀನ್ ಶೈಖ್ ರವರ ಮದ್ಹ್.
2-ಮುಹ್ ಯಿದ್ದೀನ್ ಅಬ್ದುಲ್ ಖಾದ್ರಿಲ್ ಜೀಲಾನಿ ರಹ್ಮತುಲ್ಲಾಹಿ ಅಲೈಹಿ ರವರನ್ನು ತವಸ್ಸುಲ್ ಮಾಡೋದು.
ಒಂದನೇ ಪ್ರಶ್ನೆಗೆ ಕಣ್ಣಾಯಿಸುವುದಾದರೆ ಮರಣ ಹೊಂದಿದ ಉಮರ್ ಮೌಲವಿಯ ಮದ್ಹ್ ಗಳು (ಈ ಲಿಂಕ್ ಕ್ಲಿಕ್ ಮಾಡಿ
https://m.facebook.com/story.php?story_fbid=288658745031983&id=100016635783455)
ಹಲಾಲಾಗುವುದಾದರೆ ಖುತುಬುಲ್ ಅಖ್ತಾಬ್ ಆಗಿ ಚಿರ ಪರಿಚಿತರಾದ ಮುಹ್ ಯಿದ್ದೀನ್ ಶೈಖ್ ರಹ್ಮತುಲ್ಲಾಹಿ ಅಲೈಹಿ ರವರ ಮದ್ಹ್ ಹಲಾಲಾಗುವ ವಿಷಯದಲ್ಲಿ ನೂತನವಾದಿಗಳಾದ ವಹಾಬಿ ಅಥವಾ ಸಲಪಿ..ಜಮಾ..ತಬ್ಲೀಗ್ ರವರುಗಳಲ್ಲಿ ಎರಡು ಮಾತಿಲ್ಲ.
*ಮಹತ್ಮರುಗಳನ್ನು ತವಸ್ಸುಲ್ ಮಾಡೋದು..*:?
ಕುರ್ ಆನ್ ನಿಂದ:
وَلَوْ أَنَّهُمْ إِذ ظَّلَمُوا أَنفُسَهُمْ جَاءُوكَ فَاسْتَغْفَرُوا اللَّهَ وَاسْتَغْفَرَ لَهُمُ الرَّسُولُ لَوَجَدُوا اللَّهَ تَوَّابًا رَّحِيمًا
*"ನಿಶ್ಚಯವಾಗಿ ಯೂ ತಮ್ಮ ಮೇಲೆ ತಾವೇ ಅಕ್ರಮ ವೆಸಗಿದವರು ಅಲ್ಲಾಹನೊಂದಿಗೆ ಕ್ಷಮೆ ಯಾಚನೆ ಮಾಡಿದರೆ ಮತ್ತು ಸಂದೇಶ ವಾಹಕರು ಅವರಿಗಾಗಿ ಕ್ಷಮೆ ಬೇಡಿದರೆ ಅಲ್ಲಾಹನ ನ್ನು ಅವರು ಪಶ್ಚಾತ್ತಾಪ ಸ್ವೀಕರಿಸುವವನಾಗಿಯೂ ಕರುಣೆಯುಳ್ಳವನಾಗಿಯೂ ಕಾಣುತ್ತಿದ್ದರು."* (ಸೂರ ಅನ್ನಿಸಾಅ್)
ಈ ಸೂಕ್ತ ವನ್ನು ಇಮಾಂ ರಾಝೀ ರಹ್ಮತುಲ್ಲಾಹಿ ಅಲೈಹಿ ರವರು ವಿವರಿಸುವುದು ಹೀಗೆ:
وأنهم إذا جاؤه فقد جاؤا من خصه الله برسالته وأكرمه بوحيه وجعله سفيرا بينه وبين خلقه، ومن كان كذلك فان الله لا يرد شفاعته
*"ಪ್ರವಾದಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮರನ್ನು ತನ್ನ ಮತ್ತು ಸೃಷಿಗಳ ನಡುವೆ ಮಧ್ಯವರ್ತಿ ಯನ್ನಾಗಿ ಮಾಡಿದ್ದಾನೆ.ಇಂತಹ ಒಬ್ಬ ವ್ಯಕ್ತಿ (ಅಲ್ಲಾಹ್ ಮತ್ತು ಸೃಷ್ಟಿ ಗಳ ನಡುವೆ) ಮಧ್ಯವರ್ತಿ ಯಾದರೆ ನಿಶ್ಚಯವಾಗಿ ಯೂ ಅಲ್ಲಾಹನು ಅಂಥವರ ಶಿಫಾರಸ್ಸನ್ನು ನಿರಾಕರಿಸುವುದಿಲ್ಲ."*
ಹದೀಸ್ ನ ಬೆಳಕಿನಲ್ಲಿ:
ಮಾಲಿಕ್ ರಳಿಯಲ್ಲಾಹು ಅನ್ಹು ರವರಿಂದ ನಿವೇದನೆ:ಅವರು ಹೇಳುತ್ತಾರೆ:
عن مالك الدار قال : أصاب الناسَ قحطٌ في زمن عمر بن الخطاب فجاء رجل إلى قبر النبي صلى الله عليه وسلم فقال : يا رسول الله ، استَسْقِ الله لأمّتك فإنهم قد هلكوا ، فأتاه رسول الله صلى الله عليه وسلم في المنام ، فقال : ائْتِ عُمَرَ فَأَقْرِئْهُ السَّلَامَ ، وَأَخْبِرْهُ أَنَّكُمْ مسْقِيُّونَ وَقُلْ لَهُ : عَلَيْكَ الْكَيْسُ، عَلَيْكَ الْكَيْسُ ، فأتى الرجل فأخبر عمر ، فقال : يا رب ما آلو إلا ما عجزت عنه.
*"ಉಮರ್ ರಳಿಯಲ್ಲಾಹು ಅನ್ಹು ರವರ ಆಡಳಿತದ ಕಾಲದಲ್ಲಿ ಒಮ್ಮೆ ಕಠಿಣವಾದ ಬರಗಾಲ ಬಂತು. ಆಗ ಒಬ್ಬ ವ್ಯಕ್ತಿಯು ಪ್ರವಾದಿ ಸ್ವಲ್ಲಲ್ಲಾಹು ಅಲೈಹಿವಸಲ್ಲಂ ರವರ ಪವಿತ್ರ ಕಬರಿನ ಬಳಿ ಬಂದು ಹೇಳಿದರು: ಓ ಅಲ್ಲಾಹನ ರಸೂಲರೇ (ಸ್ವಲ್ಲಲ್ಲಾಹು ಅಲೈಹಿವಸಲ್ಲಂ) ತಾವುಗಳು ತಮ್ಮ ಸಮುದಾಯಕ್ಕಾಗಿ ಅಲ್ಲಾಹನೊಂದಿಗೆ ಮಳೆಗಾಗಿ ಪ್ರಾರ್ಥಿಸಿರಿ.ಏಕೆಂದರೆ ಅವರು ನೀರಿಲ್ಲದೆ ಮರಣ ಹೊಂದುವ ಅವಸ್ಥೆಗೆ ತಲುಪಿದ್ದಾರೆ.
ಸದ್ರಿ ವ್ಯಕ್ತಿ ಅಲ್ಲಿಂದ ಮರಳಿದ ಬಳಿಕ ಅವರಿಗೆ ಪ್ರವಾದಿ ಸ್ವಲ್ಲಲ್ಲಾಹು ಅಲೈಹಿವಸಲ್ಲಂ ರವರು ಕನಸಿನಲ್ಲಿ ಬಂದು ಹೇಳಿದರು "ನೀವು ಉಮರ್ ರಳಿಯಲ್ಲಾಹು ಅನ್ಹು ರವರ ಬಳಿ ಹೋಗಿ ಅವರಿಗೆ ನನ್ನ ಸಲಾಂ ತಿಳಿಸಬೇಕು. ನಿಮಗೆ ಸದ್ಯದಲ್ಲೇ ಮಳೆ ದೊರಕಲಿದೆಯೆಂಬ ಶುಭಸುದ್ದಿಯನ್ನು ಅವರಿಗೆ ತಿಳಿಸಬೇಕು. ಹಾಗೂ ಜನರೊಂದಿಗೆ ಸ್ವಲ್ಪ ಮೃದುವಾಗಿ ವರ್ತಿಸಬೇಕೆಂದು ತಿಳಿಸಬೇಕು. " ಹಾಗೆ ಆ ವ್ಯಕ್ತಿ ಉಮರ್ ರಳಿಯಲ್ಲಾಹು ಅನ್ಹು ರವರ ಬಳಿ ಬಂದು ನಡೆದ ಘಟನೆಯನ್ನೆಲ್ಲಾ ವಿವರಿಸುತ್ತಾರೆ."*
*"ಇಬ್ನು ಕಸೀರ್ ಹೇಳುತ್ತಾರೆ:"*
وهذا إسناد صحيح
*"ಇದು ಸ್ವಹೀಹ್ ಆದ ಪರಂಪರೆಯಲ್ಲಿ ಅಂಗೀಕೃತವಾಗಿದೆ."*
ಈ ಘಟನೆಯನ್ನು ಈ ಕೆಳಗಿನ ಪೂರ್ವಿಕ ಇಮಾಮರುಗಳು ತಮ್ಮ ಕಿತಾಬುಗಳಲ್ಲಿ ದಾಖಲಿಸಿದ್ದಾರೆ.
1. ಹಿಜರಿ *774* ರಲ್ಲಿ ನಿಧನರಾದ *ಹಾಫಿಳ್ ಇಬ್ನು ಕಸೀರ್* (ಗ್ರಂಥ : ಮುಸ್ನದ್, ಪುಟ 223/1)
2. ಹಿಜರಿ *911* ರಲ್ಲಿ ವಫಾತಾದ *ಇಮಾಂ ಸುಯೂತ್ವಿ ರಳಿಯಲ್ಲಾಹು ಅನ್ಹು* , ಗ್ರಂಥ : *ಜಾಮಿಉಲ್ ಅಹಾದೀಸ್* ಪುಟ 388/25
3. ಹಿಜರಿ *975* ರಲ್ಲಿ ವಫಾತಾದ *ಇಮಾಂ ಅಲಾವುದ್ದೀನ್ ಅಲೀ ಬಿನ್ ಹುಸಾಮ್ ರಳಿಯಲ್ಲಾಹು ಅನ್ಹು* ಗ್ರಂಥ : *ಕಂಝುಲ್ ಉಮ್ಮಾಲ್* ಪುಟ:431/8
4.ಹಿಜರಿ *235* ರಲ್ಲಿ ನಿಧನರಾದ *ಇಬ್ನು ಅಬೀ ಶೈಬಾ ರಳಿಯಲ್ಲಾಹು ಅನ್ಹು,* ಗ್ರಂಥ :*ಮುಸನ್ನಫ್* ಪುಟ 32/12
5. ಹಿಜರಿ *458* ರಲ್ಲಿ ವಫಾತಾದ *ಇಮಾಂ ಬೈಹಖೀ ರಳಿಯಲ್ಲಾಹು ಅನ್ಹು* ಗ್ರಂಥ : *ದಲಾಇಲುನ್ನುಬುವ್ವ* ಪುಟ 47/7
6. ಹಿಜರಿ *279* ರಲ್ಲಿ ನಿಧನರಾದ *ಇಮಾಂ ಅಬೂಬಕರ್ ಅಹ್ಮದ್ ಬಿನ್ ಖೈಸಮಾ ರಳಿಯಲ್ಲಾಹು ಅನ್ಹು* ಗ್ರಂಥ : *ತಾರೀಖುಬ್ನಿ ಖೈಸಮಾ* ಪುಟ :80/4
7. ಹಿಜರಿ *852* ರಲ್ಲಿ ವಫಾತಾದ *ಇಮಾಂ ಇಬ್ನು ಹಜರಿಲ್ ಅಸ್ಖಲಾನಿ ರಳಿಯಲ್ಲಾಹು ಅನ್ಹು* ಗ್ರಂಥ : *ಫತ್ಹುಲ್ ಬಾರಿ* ಪುಟ:495/2
8. ಹಿಜರಿ *463* ರಲ್ಲಿ ನಿಧನರಾದ *ಇಮಾಂ ಇಬ್ನು ಅಬಿಲ್ ಬರ್ರ್* ಗ್ರಂಥ : *ಇಸ್ತಿಆಬ್* ಪುಟ 355/1
9. ಇಮಾಂ ಇಬ್ನು ಹಜರಿಲ್ ಅಸ್ಖಲಾನಿ ರಳಿಯಲ್ಲಾಹು ಅನ್ಹು ಗ್ರಂಥ :ಅಲ್ ಇಸ್ವಾಬ ಫೀ ತಮ್ಮೀಝಿ ಸ್ವಹಾಬಾ ಪುಟ :274/6
10. ಹಿಜರಿ 694 ರಲ್ಲಿ ನಿಧನರಾದ ಇಮಾಂ ಮುಹಿಬ್ಬುತಬರೀ ರಳಿಯಲ್ಲಾಹು ಅನ್ಹು ಗ್ರಂಥ :ಅರ್ರಿಯಾಳುನ್ನಳಿರಾ ಫೀ ಮನಾಖಿಬಿಲ್ ಅಶರಾ ಪುಟ: 152/1
11. ಹಿಜರಿ 571 ರಲ್ಲಿ ನಿಧನರಾದ ಇಮಾಂ ಇಬ್ನು ಅಸಾಕಿರ್ ಗ್ರಂಥ :ತಾರೀಖು ದಿಮಷ್ಕ್ ಪುಟ: 345/44
12. ಹಿಜರಿ 1111 ರಲ್ಲಿ ವಫಾತಾದ ಇಮಾಂ ಅಬ್ದುಲ್ ಮಲಿಕ್ ಬಿನ್ ಹುಸೇನ್ ಅಲ್ ಉಸಾಮಿ ರಳಿಯಲ್ಲಾಹು ಅನ್ಹು ಗ್ರಂಥ : ಸಮ್ತುನ್ನುಜೂಮಿಲ್ ಅವಾಲೀ ಫೀ ಅಂಬಾಯಿಲ್ ಅವಾಯಿಲಿ ವತ್ತವಾಲೀ ಪುಟ : 457/1
13. ಹಾಫಿಳ್ ಇಬ್ನು ಕಸೀರ್ ಗ್ರಂಥ : ಅಲ್ ಬಿದಾಯತು ವನ್ನಿಹಾಯ ಪುಟ :273/3
14. ಹಿಜರಿ 748 ರಲ್ಲಿ ನಿಧನರಾದ ದ್ಸಹಬೀ ಗ್ರಂಥ ತಾರೀಖುಲ್ ಇಸ್ಲಾಂ ವ ವಫಯಾತಿಲ್ ಮಶಾಹಿರಿ ವಲ್ ಅಅ್'ಲಾಂ ಪುಟ:273/3
15. ಹಿಜರಿ 911 ರಲ್ಲಿ ನಿಧನರಾದ ಇಮಾಂ ಅಲೀ ಬಿನ್ ಅಫೀಫ್ ಅಸ್ಸುಂಹೂದೀ ರಳಿಯಲ್ಲಾಹು ಅನ್ಹು ಗ್ರಂಥ : ಖುಲಾಸತುಲ್ ವಫಾ ಬಿ ಅಖ್ಬಾರಿ ದಾರಿಲ್ ಮುಸ್ತಫಾ ಪುಟ :49/1
16. ಹಿಜರಿ 1122 ರಲ್ಲಿ ನಿಧನರಾದ ಇಮಾಂ ಮುಹಮ್ಮದ್ ಇಬ್ನು ಅಬ್ದುಲ್ ಬಾಖೀ ಅಝ್ಝುರ್ಖಾನಿ ಗ್ರಂಥ : ಶರಹು ಝರ್ಖಾನಿ ಪುಟ : 150/11
17. ಹಿಜರಿ 748 ರಲ್ಲಿ ನಿಧನರಾದ ದ್ಸಹಬೀ ಗ್ರಂಥ :ಸಿಯರು ಅಅ್'ಲಾಮಿನ್ನುಬಲಾಅ್ ಪುಟ :412/2
18. ಹಿಜರಿ 446 ರಲ್ಲಿ ನಿಧನರಾದ ಇಮಾಂ ಖಲೀಲ್ ಬಿನ್ ಅಬ್ದುಲ್ಲಾಹಿ ಅಲ್ ಖುಝ್'ವೈನಿ ರಳಿಯಲ್ಲಾಹು ಅನ್ಹು ಗ್ರಂಥ : ಅಲ್ ಇರ್ಶಾದು ಫೀ ಮಅ್'ರಿಫತುಲ್ ಹದೀಸ್ ಪುಟ :314/1
19. ಹಿಜರಿ 711 ರಲ್ಲಿ ನಿಧನರಾದ ಇಮಾಂ ಮುಹಮ್ಮದ್ ಬಿನ್ ಮುಕರ್ರಮ್ ಗ್ರಂಥ : ಮುಖ್ತಸರು ತಾರೀಖ್ ದಿಮಷ್ಕ್ ಪುಟ :9/19
20. ಹಿಜರಿ 974 ರಲ್ಲಿ ನಿಧನರಾದ ಇಮಾಂ ಇಬ್ನು ಹಜರಿಲ್ ಹೈತಮಿ ರಳಿಯಲ್ಲಾಹು ಅನ್ಹು ಗ್ರಂಥ :ಅಲ್ ಜೌಹರುಲ್ ಮುನಳ್ಳಂ ಪುಟ : 78
21.ಹಿಜರಿ 756 ರಲ್ಲಿ ನಿಧನರಾದ ಇಮಾಂ ಸುಬ್'ಕೀ ಗ್ರಂಥ : ಶಿಫಾಉಸ್ಸಖಾಂ ಪುಟ :78.
*ಇನ್ನೂ ಮುಹಿದ್ದೀನ್ ಶೈಖ್ ರವರು ತನ್ನೊಂದಿಗೆ ಸಹಾಯಭ್ಯರ್ಥನೆ ಗೈಯ್ಯಲು ಕಲಿಸಿ ಕೊಟ್ಟಿದ್ದಾರೆಯೇ:*?
ಶೈಖ್ ಅಬುಲ್ ಖಾಸಿಂ ಬಝ್ಝಾರ್ ರಹ್ಮತುಲ್ಲಾಹಿ ಅಲೈಹಿ ರವರು ಶೈಖ್ ಜೀಲಾನಿ ರಹ್ಮತುಲ್ಲಾಹಿ ಅಲೈಹಿ ರವರಿಂದ ಕೇಳಿದಾಗಿ ಹೇಳುತ್ತಾರೆ:
من استغاث بي في كربة كشفت عنه ومن ناداني باسمي في شدة فرجت عنه
*"ಶೈಖ್ ಜೀಲಾನಿ ರಹ್ಮತುಲ್ಲಾಹಿ ಅಲೈಹಿ ರವರು ಈ ಪ್ರಕಾರ ಹೇಳುವುದನ್ನು ನಾನು ಕೇಳಿದ್ಧೇನೆ .ಸಂಕಷ್ಟ ಸಂದರ್ಭದಲ್ಲಿ ಯಾರಾದರೂ ನನ್ನೊಂದಿಗೆ ಸಹಾಯಭ್ಯರ್ಥನೆ ನಡೆಸಿದರೆ ಅವರ ಸಂಕಷ್ಟ ವನ್ನು ನಾನು ನೀಗಿಸುತ್ತೇನೆ.ಸಂಕಷ್ಟ ಸಂದರ್ಭದಲ್ಲಿ ನನ್ನ ನಾಮದೊಂದಿಗೆ ನನನ್ನು ಸ್ಮರಿಸಿದರೆ ಅವನ ಸಂಕಷ್ಟ ನಾನು ನೀಗಿಸುತ್ತೇನೆ."* (ಬಹ್ಜತ್ತುಲ್ ಅಸ್ರಾರ್)
ಶೈಖ್ ಜೀಲಾನಿ ರಹ್ಮತುಲ್ಲಾಹಿ ಅಲೈಹಿ ರವರು ತನ್ನ ಗ್ರಂಥ ವಾದ "ಫುತುಹುಲ್ ಗೈಬ್" ಬರೆದದ್ದಾಗಿ ಹೀಗೆ ಕಾಣ ಬಹುದು:
أنا قطب أقطاب الوجود حقيقــة = على سائر الأقطاب عزي وحرمتي
توسل بنا في كل هــولٍ وشـدةٍ = أغيثك في الأشياء طرا بهمــتي
أنا لمريـدي حافــظٌ ما يخافـه = وأحرسه من كل شـر وفتنــة
مريدي إذا ما كان شـرقا ومغـربا = أغثه إذا ما صار في أي بلــدة
*"ನಾನು ಪ್ರಪಂಚದಲ್ಲಿ ರುವ ಎಲ್ಲಾ ಖುತುಬು ಗಳ ಖುತುಬ್ ಆಗಿರುವೆನು.ನನ್ನ ಮಾತೂ ಹಾಗೂ ಆಧರತೆಯನ್ನು ಎಲ್ಲಾ ಖುತುಬುಗಳು ಅಂಗೀಕರಿಸುತ್ತಾರೆ.ಎಲ್ಲಾ ಸಂಕಷ್ಟ ಗಳಲ್ಲಿಯೂ ನನ್ನನ್ನೂ ತವಸ್ಸುಲ್ ಗೈಯ್ಯಿರಿ.ಎಂದಾದರೆ ಎಲ್ಲಾ ವಿಷಯಗಳಲ್ಲೂ ನಾನು ನಿನಗೆ ಸಹಾಯ ಮಾಡುವೆನು.ನನ್ನ ಮುರೀದ್ ಬಯ ಪಡುವ ಕಾರ್ಯಗಳಲ್ಲೆಲ್ಲವೂ ನಾನು ಅವನಿಗೆ ಸಂರಕ್ಷಣೆ ನೀಡುವುದೂ ಎಲ್ಲಾ ವಿಧದ ಫಿತ್ನಗಳಿಂದಲೂ ನಾಶದಿಂದಲೂ ನಾನು ಅವನನ್ನು ರಕ್ಷಿಸುವೆನು.ನನ್ನ ಮುರೀದ್ ಎಲ್ಲಿ ಇದ್ದರೂ ಆತನಿಗೂ ನಾನು ಸಹಾಯ ಮಾಡುವೆನು."*
(ಪುತುಹುಲ್ ಗೈಬ್)
ಈ ಮೇಲಿನ ಪದ ಪ್ರಯೋಗ ಗಳು "ನಾನು ಸಂರಕ್ಷಣೆ ನೀಡೋದು ನಾನು ರಕ್ಷಿಸೊದು" ಎಂಬಿತ್ಯಾದಿಗಳು "ಮಜಾಝ್" ಆಗಿದೆ ಅಲಂಕೃತ ಪದಗಳಷ್ಟೇ.
ಇದೇ ರೀತಿ ಯಾಗಿದೆ ಅ ಮೇಲಿನ ಶೈಖ್ ಜೀಲಾನಿ ರಹ್ಮತುಲ್ಲಾಹಿ ಅಲೈಹಿ ರವರ ಇಬಾರತ್ ನಲ್ಲಿ ರೊದು ತಾನು ಸಂರಕ್ಷಿಸುವೆ ಅಂದರೆ ತನಗೆ ಸ್ವತಹಃ ಕಾರ್ಯ ಸಿದ್ಧಿಯಿಂದ ಅಲ್ಲಾಹನ ಸಹಾಯವಿಲ್ಲದೆ ಸಾಧ್ಯ ವಿದೆ ಎಂದಲ್ಲ ಬದಲಾಗಿ ಅಲ್ಲಾಹನು ತನಗೆ ಸಹಾಯಸ್ತ ಚಾಚದೆ ಇರಲಾರ ಎಂಬ ದೃಢ ನಿಶ್ಚಯವಾಗಿದೆ...
ಸುಲೈಮಾನ್ ನೆಬಿ ಅಲೈಹಿ ಸಲಾಮ್ ರಿಗೆ ಬಲ್ಕಿಸ್ ರಾಣಿಯ ಸಿಂಹಾಸನವನ್ನು ಕಣ್ಣು ಚಿಮ್ಮಿಸಿ ತೆರೆಯುವಷ್ಟರಲ್ಲಿ ತಂದು ಕೊಟ್ಟ ಅವರ ಅನುಯಾಯಿಯನ್ನು ಮರೆಯದಿರಿ ಅವರು ಕೂಡಾ ಮನುಷ್ಯರೇ ಅದರೆ ಸಾಧರಣರಲ್ಲ.
ಇಮಾಂ ರಾಝಿ ರಹ್ಮತುಲ್ಲಾಹಿ ಅಲೈಹಿ ರವರು ಬರೆಯುತ್ತಾರೆ:
وكذلك العبد إذا واظب على الطاعات بلغ إلى المقام الذي يقول الله : كنت له سمعا وبصرا ، فإذا صار نور جلال الله سمعا له سمع القريب والبعيد ، وإذا صار ذلك النور بصرا له رأى القريب والبعيد ، وإذا صار ذلك النور يدا له قدر على التصرف في الصعب والسهل والبعيد والقريب
*"ಅಲ್ಲಾಹನ ದಾಸರು ಆರಾಧನೆಯಲ್ಲಿ ನಿರತರಾಗುವಾಗ ನಾನು ಅವರ ಕಣ್ಣಾಗುತ್ತೇನೆ,ಕಿವಿಯಾಗುತ್ತೇನೆ ಎಂದು ಅಲ್ಲಾಹನು ಹೇಳಿದ ಪದವಿಗೆ ಅವರು ತಲುಪುತ್ತಾರೆ.ಅಲ್ಲಾಹನು ಅವನ ಕಿವಿಯಾದಾಗ ಅವನು ಸಮೀಪ ಹಾಗೂ ದೂರದಲ್ಲಿರುವುದನ್ನು ಒಂದೇ ರೀತಿಯಾಗಿ ಆಲಿಸುತ್ತಾನೆ.ಅಲ್ಲಾಹನು ಅವನ ಕಣ್ಣಾದರೆ ಅವನು ಸಮೀಪ ಹಾಗೂ ದೂರದಲ್ಲಿ ರುವುದನ್ನು ವೀಕ್ಷಿಸುತ್ತಾನೆ ಅಲ್ಲಾಹನು ಅವನ ಕೈಯಾದಾಗ ಕಷ್ಟ ಸುಲಭ ಸಮೀಪ ದೂರದ ಎಲ್ಲಾ ಸಂಗತಿಗಳಲ್ಲಿ ಸಮಾನವಾಗಿ ವ್ಯವಹರಿಸಬಲ್ಲ."* (ರಾಝೀ)
ಇಬ್ಬು ತೈಮಿಯ್ಯರ ಉದ್ಧರಣೆಯೊಂದು ಹೀಗಿದೆ.
ومما ينبغي أن يعرف أن الكرامات قد تكون بحسب حاجة
*" ವಲಿಯ್ಯ್ ನ ಅವಶ್ಯ ಕ್ಕನುಸಾರ ಕರಾಮತ್ ಗಳು ಸಂಭವಿಸುವುದೆಂದು ಅರಿತು ಕೊಂಡಿರುವುದು ಅನಿವಾರ್ಯ ವಾಗಿದೆ."*
(ಫತಾವ ಇಬ್ನು ತೈಮಿಯ್ಯ)
ಮುಂದುವರೆಯುವುದು...
✒ *ನಿಸಾರ್ ಮುಕಚ್ಚೇರಿ*
ullalnisar@gmail.com
Comments