ಸೂಫೀ ಸಾಮ್ರಾಜ್ಯದ ಅಧಿಪತಿ
ಶೈಖ್ ಜೀಲಾನೀ(ಖ ಸಿ)
_________________________
ರಬೀಉಲ್ ಆಖಿರ್ ತಿಂಗಳು ಶೈಖ್ ಜೀಲಾನೀ( ಖ ಸಿ) ರವರ ಪುಣ್ಯ ಸ್ಮರಣೆಯ ತಿಂಗಳಾಗಿದೆ.
ಆಧ್ಯಾತ್ಮಿಕ ಜಗತ್ತಿಗೆ ನವ ಚೈತನ್ಯ ನೀಡಿ ಸೂಫೀ ಜಗತ್ತನ್ನು ಬೆಳಗಿಸಿದ ಆತ್ಮೀಯಗುರು
ಖಾದಿರಿಯ್ಯಾ ತ್ವರೀಕತಿನ ಶಿಲ್ಪಿ' ಅಸಂಖ್ಯಾತ ಕರಾಮತ್ ಗಳ ಒಡೆಯ' ಮುಹ್ಯುದ್ದೀನ್ ಶೈಖ್ರವರ ವಫಾತಿಗೆ ಸಾಕ್ಶಿಯಾದ ರಬೀಉಲ್ ಆಖಿರ್' 11
ಹಿಜರಿ 561 ಶತಾಬ್ದಿಯಲ್ಲಾಗಿತ್ತು .
ಈ ತಿಂಗಳಲ್ಲಿ ವಿಶ್ವಾಸಿಗಳು ಅವರ ಹೆಸರಲ್ಲಿ'ಖುತ್ಬಿಯತ್,
ರಾತೀಬ್ಗಳನ್ನು ನಡೆಸಿ ಅವರ ಅನುಸ್ಮರಣೆ ಮಾಡುವ ಮೂಲಕ ಬರ್ಕತ್ ಪಡೆಯುತ್ತಾರೆ.
ಅವುಲಿಯಾ ಲೋಕಕ್ಕೇ ನಾಯಕರಾಗಿದ್ದ ಮಹಾನರು ಕುತುಬುಲ್ ಅಖ್ತಾಬ್ ಆಗಿದ್ದರು ತಾನೂಬ್ಬ ಕುತುಬ್ ಎಂದು ಜನರ ಮುಂದೆ ಘಂಟಾಘೋಷವಾಗಿ ಪ್ರಕ್ಯಾಪಿಸಲು ಅಲ್ಲಾಹು ದಿವ್ಯಾಜ್ಞೆ ನೀಡಿದ ಏಕೈಕ ಖುತ್ಬ್ ಕೂಡಾ ಆಗಿದ್ದಾರೆ. ಅವ್ಲಿಯಾಗಳ ಪೈಕಿ ಅತ್ಯಂತ ಹೆಚ್ಚು ಕರಾಮತ್ ಪ್ರಕಟಿಸಿದ ವಲಿಯ್ಯಾಗಿದ್ದರು ಮಹಾನರು.
ಇಡೀ ಪ್ರಪಂಚಕ್ಕೇ ಅವರ ಪ್ರಭಾವ ಪಸರಿಸಿತ್ತು. ಪ್ರಪಂಚದಾದ್ಯಂತ ಮುರೀದರೂ, ಶಿಷ್ಯಂದಿರೂ, ಮುಹಿಬ್ಬುಗಳೂ ಅವರಿಗಿದ್ದಾರೆ.
ಇರಾನಿನ ಅಥವಾ ಇರಾಕಿನ( ಎರಡು ಅಬಿಪ್ರಾಯ ಇದೆ) ಗೈಲಾನೀ ಎಂಬಲ್ಲಾಗಿತ್ತು ಜನನ.
ಅದು ಮತ್ತೆ ಕೈಲಾನೀ,ಜೀಲಾನೀ ಹೆಸರುಗಳಲ್ಲಿ ಪ್ರಸಿದ್ಧವಾದಾಗ ಆ ಹೆಸರುಗಳಲ್ಲೇ ಅದನ್ನು ಕರೆಯಲ್ಪಟ್ಟಿತು.ನೈಜ ನಾಮ ಅಬ್ದುಲ್ ಖಾದಿರ್
ತಂದೆಯ ಹೆಸರು ಅಬೂ ಸ್ವಾಲಿಹ್ ಮೂಸಾ.
ತಾಯಿ.ಪ್ರಸಿದ್ಧ ಸೂಪೀ ವರ್ಯ ಶೈಕ್ ಅಬ್ದುಲ್ಲಾಹಿ ಸ್ಸವ್ ಮಈ ರವರ ಪುತ್ರಿ ಉಮ್ಮಲ್ ಖೈರ್ ಫಾತಿಮ' ಆಗಿದ್ದಾರೆ.
ಪಿತ್ರ್ ಪರಂಪರೆ ಹಸನ್ (ರ ಅ)ರವರಿಗೂ,ಮಾತ್ರ್ ಪರಂಪರೆ ಹುಸೈನ್(ರ ಅ)ರವರಿಗೂ ಸೇರುತ್ತದೆ.
ಒಂದು ದಿನ ತಂದೆ ಅಬೂಸಾಲಿಹ್ ಮೂಸಾ ನದೀ ತೀರದಲ್ಲಿ ನಡೆದುಕೂಂಡು ಹೋಗುವಾಗ ಹಸಿದ ಕಾರಣ ನದಿಯಲ್ಲಿ ತೇಲಿ ಬಂದ ಒಂದು ಹಣ್ಣನ್ನು ತಿಂದರು. ಆದರೆ ಅದರ ಮಾಲಕನನ್ನು ಕಂಡು ಕ್ಷಮಾಪಣೆ ಪಡೆಯದೆ ಅವರ ಮನಸ್ಸಿಗೆ
ಸಮಾಧಾನವಾಗಳಿಲ್ಲ.
ಹಣ್ನು ತೇಲಿ ಬಂದ ಕಡೆ ನಡೆದು ಸಾಗಿದರು ಸ್ವಲ್ಪ ದೂರ ಕ್ರಮಿಸಿದಾಗ ಒಂದು ತೋಟದಲ್ಲಿ ಆ ಹಣ್ಣಿನ ಮರ ಕಾಣಲು ಸಾಧ್ಯವಾಯಿತು.ಅಲ್ಲೇ ಸಮೀಪದ ಮನೆಯಲ್ಲಿ ಇದ್ದ ಅದರ ಮಾಲಕನನ್ನು ಕಂಡು ಕ್ಷಮೆ ಕೇಳಿದಾಗ ಅವರು ಕ್ಷಮೆ ನೀಡಲು ನಿರಾಕರಿಸಿದರು.
ಕ್ಷಮೆನೀಡ ಬೇಕಾದರೆ ತನ್ನ ಕುರುಡಿಯೂ,ಕಿವುಡಿಯೂ,ಮೂಗಿಯೂ ಆದ ಮಗಳನ್ನು ವಿವಾಹವಾಗಬೇಕೆಂಬ ನಿಬಂದನೆಯನ್ನು ವಿಧಿಸಿದರು ಅಲ್ಲಾಹನನ್ನು ಹೆಚ್ಚು ಭಯ ಪಡುತ್ತಿದ್ದ ಅಬೂಸಾಲಿಹರು ಕ್ಷಮೆಗಾಗಿ ಆ ಮಗಳನ್ನು ವಿವಾಹವಾಗಲು ಒಪ್ಪಿದರು.
ವಿವಾಹದ ನಂತರ ಪ್ರಥಮ ರಾತ್ರಿ ಅವರಿಗೂಂದು ಆಶ್ಚರ್ಯ ಕಾದಿತ್ತು. ಅದೇನೆಂದರೆ ಮದುಮಗನಿಗಾಗಿ ಶ್ರಂಗರಿಸಿದ ಕೋಣೆಯೂಳಗೆ ಅವರು ಪ್ರವೇಶಿಸಿದಾಗ ಅಲ್ಲಿ ಬದಿರಲೂ,ಮೂಗಿಯೂ,ಕುರುಡಿಯೂ ಆದ ಯುವತಿಗೆ ಬದಲಾಗಿ ಸುಂದರಿಯೂ,ಸುಶೀಲಲೂ ಯಾವ ಕೂರತೆಯೂ ಇರದ ಒಬ್ಬಲು ಯವತಿಯನ್ನು ಕಾಣಲು ಸಾಧ್ಯವಾಯಿತು.ಇದರ ಕಾರಣ ಅನ್ವೇಶಿಸಿದಾಗ ಅವರ ತಂದೆ ಅಬ್ದುಲ್ಲಾಹಿ ಸ್ಸವ್ ಮಈ ಹೀಗೆ ವಿವರಿಸಿದರು .ಓ ಅಬೂ ಸ್ವಾಲಿಹ್ ರವರೇ ನನ್ನ ಮಗಳು ಈವರೆಗೂ ಹರಾಂ ನೋಡಿಲ್ಲ ಅದನ್ನ ಕೇಳಿಯೂ ಇಲ್ಲ ಅದನ್ನ ಮಾತಾಡಿಕೂಡಾ ಇಲ್ಲ.ಆ ನೆಲೆಯಲ್ಲಿ ಅವಳು ಕಿವುಡಿಯೂ,ಮೂಗಿಯೂ,ಕುರುಡಿಯೂ ಆಗಿರುತ್ತಾಳೆ.ಅಂತಹಾ ನನ್ನ ಮಗಳಿಗೆ ತಕ್ಕುದಾದ ವರ ತಾವಗಿದ್ದೇರೆಂದು ತಿಳಿದು ಕ್ಷಮಾಪಣೆಗೆ ಈ ರೀತಿ ನಿಭಂದನೆಯನ್ನು ಇಟ್ಟೆ ಕ್ಷಮಿಸಿ ಎಂದರು.
ಇಂತಹ ಶುದ್ಧ ದಂಪತಿಗಳಿಗೆ ಹುಟ್ಟಿದ ಮಗುವಾಗಿದೆ ಮಹಾನರಾದ ಶೈಖ್ ಜೀಲಾನಿರವರು. ಹುಟ್ಟಿದ್ದು ಹಿಜ್ರಾ 470 ರಮಳಾನ್ ಒಂದರಂದಾಗಿತ್ತು ಆ ಒಂದು ತಿಂಗಳು ಪೂರ್ತಿ ಹಗಲು ಹೂತ್ತು ಮೂಲೆಹಾಲು ಕುಡಿಯಲು ಮಗು ಕೇಳದಿದ್ದುದು ಮಗು ಸಾಮಾನ್ಯ ವ್ಯಕ್ತಿಯಲ್ಲ ಎನ್ನುವುದಕ್ಕೆ ಸಾಕ್ಷಿಯಾಗಿತ್ತು.. ಪ್ರಾಥಮಿಕ ವಿಧ್ಯೆ ತನ್ನ ಅಜ್ಜ ಅಬ್ದುಲ್ಲಾಹಿ ಸ್ಸವ್ ಮಈ ರವರಿಂದಲೇ ಕಲಿತರು ಹೆಚ್ಚಿನ ವಿಧ್ಯೆ ಕಲಿಯಲು ಬಗ್ದಾದಿಗೆ ಪಯಣ ಬೆಳೆಸಿದರು
ಹಿಜ್ರಾ488 ,ತನ್ನ 18 ನೇ ಪ್ರಾಯದಲ್ಲಾಗಿತ್ತು ಬಗ್ದಾದ್ ಯಾತ್ರೆ . ಅಲ್ಲಿ ಅಬೂ ಸಈದಿಲ್ ಮುಖ್ರಿಮೀ ರವರ ಮದ್ರಸಕ್ಕೆ ಸೇರಿ ಅಧ್ಯಾಪನೆಯಲ್ಲಿ ತೂಡಗಿಕೂಂಡರು. ಹುಜ್ಜತುಲ್ ಇಸ್ಲಾಂ ಇಮಾಂ ಗಝ್ಝಾಲಿ ಬಗ್ದಾದಿನಲ್ಲಿರುವ ನಿಳಾಮೀ ಮದ್ರಸವನ್ನು ತೂರೆದು ಝುಹ್ದಿಗೆ ಪ್ರವೇಶಿಸಿದ ವರ್ಷವಾಗಿತ್ತು ಅದು.
ವಿಧ್ವತ್ ಜಗತ್ತಿನಲ್ಲಿ ಪಳಗಿ ನಿಂತ ಇಮಾಂ ಫಕ್ರುದ್ದೀನ್ ರಾಝಿ ಸಹಿತ ಹಲವಾರು ವಿಧ್ವತ್ ಕೇಸರಿಗಳೂ ,ಸಾಹಿತಿಗಳೂ,
ಕವಿಗಳೂ,ಸೂಫೀ ಸಂತರೂ ತುಂಬಿದ ಪ್ರವಿಷ್ಯವಾಗಿತ್ತು ಅಂದು ಬಗ್ದಾದ್.
ಅಬ್ಬಾಸೀ ಖಲೀಫ'ಮುಸ್ತಳ್ಹರ್ ಬಿಲ್ಲಾಹ್ ಆಡಳಿತ ನಡೆಸುತ್ತಿದ್ದರು.ಯುದ್ಧ,ದೂಂಬಿ ಕಲಹ,ಎಲ್ಲವೂ ಬುಗಿಲೆದ್ದ ಕಾಲವಾಗಿತ್ತು..
ಒಂದು ಕಡೆಯಲ್ಲಿ ಅಧಿಕಾರಕ್ಕಾಗಿ ಕಾದಾಟ ನಡೆಯುತ್ತಿದ್ದರೆ ಮತ್ತೂಂದು ಕಡೆಯಲ್ಲಿ ಮುಸ್ಲಿಂ ಮತ್ತು ಕ್ರಸ್ತಿಯಾನಿಗಳೆಡೆಯಲ್ಲಿ ಕುರಿಶ್ ಯುಧ್ಧ ಪ್ರಾರಂಭವಾಗುತ್ತು.
ಮತ್ತೂಂದು ಕಡೆಯಲ್ಲಿ ನೂತನವಾದಿ ಪಂಗಡದವರಾದ ಶಿಯಾ ಮತ್ತು ಮುಅ್ತಝಿಲಿಗಳ ರಂಗಪ್ರವೇಶವಾಗಿತ್ತು
ಶಾಫಿಈ ಮಝ್ಹಬಿನ ಪ್ರಸಿದ್ಧ ವಿಧ್ವಾಂಸ ಇಮಾಂ ರುವ್ಯಾನೀ ಸೇರಿ ಹಲವರು ದಂಗೆಕೋರರ ಆಕ್ರಮಣಕ್ಕೆ ಬಲಿಯಾಗಿ ಪ್ರಾಣ ತ್ಯಜಿಸಬೇಕಾಯಿತು.
ಹಿಜ್ರಾ 521 ರಲ್ಲಿ ತನ್ನ ಗುರು ಅಬೂ ಸಈದಿಲ್ ಮುಖ್ರಿಮೀ ತನ್ನ ಸದನದಲ್ಲಿ ಜನರಿಗೆ ಧಾರ್ಮಿಕ ಉಪದೇಶ ನೀಡುವಂತೆ ಶೈಖ್ ಜೀಲಾನಿ ತಂಗಳಿಗೆ ನಿರ್ದೇಶನ ನೀಡಿದರು ಅದರಂತೆ ಮಹಾನರು ವಾರದ ಮೂರು ದಿನ ಸೋಮವಾರ,ಶುಖ್ರವಾರ,
ಮಂಗಳವಾರ ದಂದು ಜನರಿಗೆ ಹಿತೋಪದೇಶ ನೀಡಲು ಪ್ರಾಂಬಿಸಿದರು.ಉಪದೇಶ ಕೇಳಲು ನಾನಾ ಕಡೆಗಳಿಂದ ಜನರ ದಂಡೇ ಪ್ರವಹಿಸಿತು. ಮಂತ್ರಿಗಳೂ,ಅಧಿಕಾರಿಗಳೂ,ಊರ ನಾಯಕರೂ ಹಾಜರಾದರು. ಉಪದೇಶ ಬಿರುಗಾಳಿಯಂತೆ ಕ್ಷಣಾರ್ಧದಲ್ಲಿ ಜನ ಮನಸ್ಸುಗಳಲ್ಲಿ ಪ್ರತಿಫಲನೆಯ ಸಂಚಲನ ಮೂಡಿಸಿತು.
ಊರಲ್ಲೆಲ್ಲಾ ಬದಲಾವಣೆಯ ತರಂಗ ಸ್ರಷ್ಟಿಯಾಯಿತು.ಜನರು ಒಳಿತಿನ ಕಡೆ ಧಾವಿಸಿ ಬಂದರು.ಎಷ್ಟೇ ದೂಡ್ಡ ಅಕ್ರಮಿಯಾದರೂ ಕ್ಷಣಮಾತ್ರದಲ್ಲಿ ವಿಲಾಯತಿನ ಪಟ್ಟಕ್ಕೆ ಏರುವಂತಾಯಿತು. ಶೈಕ್ ಜೀಲಾನಿಯವರ ಉಪದೇಶದಲ್ಲಿ ಅದೇನೋ ಒಂದು ಮಾಂತ್ರಿಕ ಶಕ್ತಿ ಅಡಗಿತ್ತು ಅಕ್ರಮೀ ಆಡಳಿತಗಾರರು ಅಕ್ರಮದಿಂದ ಹಿಂದೆ ಸರಿದು ಉತ್ತಮ ಆಡಳಿತ ನಡೆಸಲು ಪ್ರಾರಂಬಿಸಿದರು.
ದುರ್ಜನರು ತೌಭಾ ಮಾಡಿ ಸತ್ಯದಾರಿಗೆ ಮರಳಿದರು ಲಕ್ಷಕ್ಕಿಂತಲೂ ಜನರು ಒಳಿತಿನ ವಾಹಕರಾಗಿ ಬದಲಾದರು.,5,000 ಕ್ಕಿಂತಲೂ ಅಧಿಕ ಮಂದಿ ಇಸ್ಲಾಂಧರ್ಮ ಸ್ವೀಕರಿಸಿದರು.
ಶೈಖ್ ಜೀಲಾನಿಯವರ ಆಗಮನದಿಂದ ಊರಲ್ಲೆಲ್ಲಾ ಶಾಂತಿಯ ವಾತಾವರಣ ನೆಲೆಸಿತು ಪ್ರಾರಂಬದಲ್ಲಿ ಶಾಫಿಈ ಮದ್ಹಬ್ ಅವಲಂಬಿಸಿದ್ದರೂ ನಂತರ ಹಂಬಲೀ ಮದ್ಹಬ್ ಅನುಸರಿಸಿದರು.ಹಲವು ಶೈಖ್ಗಳಿಂದ ಬೇರೆ ಬೇರೆ ವಿಷಯದಲ್ಲಿ ಇಲ್ಮ್ ಕಲಿತರು ಹಮ್ಮಾದುಬುನು ಮುಸ್ಲಿಮುದ್ದಬ್ಬಾಸ್ ರವರಾಗಿದ್ದಾರೆ ತನ್ನ ಆಧ್ಯಾತ್ಮಿಕ ಗುರು.
73 ವರ್ಷಗಳ ಕಾಲ ಬಗ್ದಾದಿನಲ್ಲಿ ವಾಸಿಸಿದ ಶೈಖರಿಗೆ ಕನಿಷ್ಟ 05 ರಷ್ಟು ಅಬ್ಬಾಸಿಯಾ ಖಲೀಫರ ಆಡಳಿತವನ್ನು ಧರ್ಷಿಸಲು ಸಾಧ್ಯವಾಯಿತು.
ಸಲ್ಜೂಖೀ ರಾಜರುಗಳು ಶಕ್ತವಾಗಿದ್ದರಿಂದ ಅಂದು ಬಗ್ದಾದಿನಲ್ಲಿ ಸಲ್ಜೂಕಿಗಳದ್ದೇ ಕಾರುಬಾರಾಗಿತ್ತು ಅಬ್ಬಾಸಿಗಳು ಕೇವಲ ಹೆಸರಿಗೆ ಮಾತ್ರ ಖಲೀಫರಾಗಿದ್ದರು. ಅಸಂಖ್ಯಾತ ಕರಾಮತ್ ಗಳು ಮಹಾನರಿಂದ ಪ್ರತ್ಯಕ್ಷವಾಗಿದೆ.ಸತ್ತ ಶವಗಳಿಗೂ ಜೀವ ನೀಡುವಂತಹ ಕರಾಮತ್ ಗಳನ್ನು ಅಲ್ಲಾಹು ಅವರಿಗೆ ನೀಡಿದ್ದನು.
ಅವರ ದಾರಿ ತುಳಿದು ಸಜ್ಜನರಲ್ಲಿ ಸೇರಲು ಅಲ್ಲಾಹು ನಮಗೆ ತೌಫೀಕ್ ನೀಡಲಿ.ಮಸೀದಿಗಳಲ್ಲದೆ
ಪ್ರತೀಯೂಂದು ಮನೆಯಲ್ಲೂ ಅವರ ಹೆಸರಲ್ಲಿ'ಖುತ್ಬಿಯತ್ ,ರಾತೀಬ್ ನಡೆಸುವಂತಾಗಬೇಕು. ಅವರ ಸ್ಮರಣೆ ಅಂತ್ಯ ದಿನದ ವರೆಗೂ ಇಲ್ಲಿ ನೆಲೆನಿಲ್ಲಲಿದೆ.
ಕೋಝಿಕ್ಕೋಡಿನ ಕಾಳಿ ಮುಹಮ್ಮದ್ ಎಂಬವರು ಅರಬೀ ಮಲಯಾಳದಲ್ಲಿ ಶೈಖರನ್ನು ವರ್ಣಿಸಿ ಮುಹ್ಯುದ್ದೀನ್ ಮಾಲೆ ಎಂಬ ಕಾವ್ಯವನ್ನು ರಚಿಸಿದ್ದಾರೆ.
✒D.P. panemangloore
Comments