Skip to main content

ಮಾತೆ ಆಯಿಶಾ ಬೀವಿ

ಮಾತೆ ಆಯಿಶಾ ಬೀವಿಯವರ ಕುರಿತು ಇನ್ನಷ್ಟು ಮಾಹಿತಿ ಕಲೆ ಹಾಕಲು ಅವಕಾಶ ಮಾಡಿಕೊಟ್ಟ ಅಜಿತ್ ಹನುಮಕ್ಕರ್ ಗೆ ಬಿಗ್ ಥ್ಯಾಂಕ್ಸ್

ದೈವ ವಿಧಿ ಅಂತಲೇ ಹೇಳಬೇಕು. ಇತರ ಸಮುದಾಯದವರಿಗೆ ಇಸ್ಲಾಮನ್ನು ಕಲಿಯಲು ಅಧಿಕ ಅವಕಾಶ ಮಾಡಿಕೊಟ್ಟವರು ಅಜಿತ್ ರಂತಹ ಮುಸ್ಲಿಂ ವಿರೋಧಿಗಳ ನಾಲಗೆ ಅಥವಾ ಬರಹಗಳು ಎಂಬುದನ್ನು ತಳ್ಳಿಹಾಕುವಂತಿಲ್ಲ.
2001 ಸೆಪ್ಟೆಂಬರ್18 ರ ಸೋಮವಾರ ಅಮೇರಿಕಾದ ಅಂದಿನ ಅಧ್ಯಕ್ಷ ಜಾರ್ಜ್ ಡಬ್ಲ್ಯೂ ಬುಶ್ ರಮ್ಜಾನ್ ಸಂದರ್ಭದಲ್ಲಿ ಅಲ್ಲಿನ ಹಾಗೂ ಇಡೀ ಜಗತ್ತಿನ ಮುಸ್ಲಿಮರಿಗೆ ಶುಭಕೋರಿ, ಅಮೇರಿಕಾದಲ್ಲಿ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಧರ್ಮ ಇಸ್ಲಾಂ ಆಗಿದೆ ಎಂದು ಹೇಳಿದ್ದರು!
ಅಂದಿನ ಮುಖ್ಯ ಪತ್ರಿಕೆಗಳು ಬಹಳ ಪ್ರಾಮುಖ್ಯತೆಯಿಂದ ಅದನ್ನು ವರದಿ ಮಾಡಿದ್ದವು.
ಅಮೇರಿಕಾ ಹಾಗೂ ಯೂರೋಪ್ ದೇಶಗಳಲ್ಲಿ ಇಸ್ಲಾಂ ಇಷ್ಟೊಂದು ಶರವೇಗದಲ್ಲಿ ಬೆಳೆಯಲು ಇಸ್ಲಾಮಿನ ವಿರೋಧಿಗಳು ಕಾರಣವೆಂಬುದನ್ನು ಮೆನ್ಶನ್ ಮಾಡದೆ ನಿರ್ವಾಹವಿಲ್ಲ.
ಯೂರೋಪ್ ದೇಶಗಳಲ್ಲಿ ಚರ್ಚ್'ಗಳು ವಿಶ್ವಾಸಿಗಳಿಲ್ಲದೆ ಬಿಕೋ ಅನ್ನುತ್ತಿದ್ದರಿಂದಲೇ ಅದನ್ನು ಮಸೀದಿಗಳಾಗಿ ಪರಿವರ್ತಿಸುವ ಘಟನೆಗಳನ್ನು ನಾವು ನೋಡುತ್ತಿದ್ದೇವೆ.
ಇದಕ್ಕೆಲ್ಲಾ ಕಾರಣ ಅಲ್ಲಿನ ಫ್ಯಾಸಿಸ್ಟ್ ಮನೋಭಾವದ ಜರ್ನಲಿಸ್ಟ್ ಗಳು ಎಂಬುದನ್ನು ಪದೇಪದೇ ಹೇಳಲೇಬೇಕಾಗುತ್ತದೆ.

ಅದಿರಲಿ, ನಾವು ವಿಷಯಕ್ಕೆ ಬರೋಣ,
ಮುಹಮ್ಮದ್ ಪೈಗಂಬರ್ ಸ್ವಲ್ಲಲ್ಲಾಹು ಅಲೈಹಿವಸಲ್ಲಮರು ವರಿಸಿದ ಹನ್ನೊಂದು ಪತ್ನಿಯರಲ್ಲಿ ವಿಧವೆಯಲ್ಲದ ಏಕ ಪತ್ನಿ ಆಯಿಶಾ ಬೀವಿ ಮಾತ್ರವಾಗಿದ್ದರು!
ಮೊದಲನೇ ಪತ್ನಿ ಖದೀಜಾ ಬೀವಿಯರನ್ನು ವರಿಸುವಾಗ ಅವರಿಗೆ 40 ವರ್ಷ ಪ್ರಾಯ. ಸಾಲದ್ದಕ್ಕೆ ಅಬೂಹಾಲ ಮತ್ತು ಅತೀಖ್ ಎಂಬ ಎರಡು ಗಂಡಂದಿರ ಪತ್ನಿಯಾಗಿ ಬಾಳಿದ ವಿಧವೆ.
ಅಂತಹ ಖದೀಜಾರನ್ನು ಇಪ್ಪತ್ತೈದು ವರ್ಷದ ತರುಣ ಮುಹಮ್ಮದ್ ಸ್ವಲ್ಲಲ್ಲಾಹು ಅಲೈಹಿವಸಲ್ಲಮರು ವರಿಸಿದರೆಂದರೆ ಅದೊಂದು ತ್ಯಾಗವಾಗಿತ್ತು.
ಖದೀಜಾ ಬೀವಿಯೊಂದಿಗೆ ಇಪ್ಪತ್ತೈದು ವರ್ಷ ದಾಂಪತ್ಯ ಬದುಕು ಸವೆಸಿದ ಪುಣ್ಯ ಪ್ರವಾದಿಯವರು ಖದೀಜಾರ ಮರಣದವರೆಗೆ ಬೇರೊಂದು ವಿವಾಹವಾಗಲಿಲ್ಲ.
ಖದೀಜಾರ ನಿಧನದ ನಂತರ ಪ್ರವಾದಿ ಮುಹಮ್ಮದ್ ಸ್ವಲ್ಲಲ್ಲಾಹು ಅಲೈಹಿವಸಲ್ಲಮರು ವಿವಾಹವಾದದ್ದು, ಸಕರಾನ್ ಎಂಬವರೊಂದಿಗೆ ದಾಂಪತ್ಯ ಜೀವನ ನಡೆಸಿ ನಂತರ ವಿಧವೆ ಬದುಕು ನಡೆಸುತ್ತಿದ್ದ ಸೌದಾ ಬೀವಿಯವರನ್ನಾಗಿತ್ತು. ಆಗ ಸೌದಾ ಬೀವಿಯವರ ಪ್ರಾಯ ಐವತ್ತು!
ಅದು ಮತ್ತೊಂದು ಮಹಾ ತ್ಯಾಗವಾಗಿತ್ತು.

ಆಯಿಶಾ ಬೀವಿಯವರನ್ನು ಸಣ್ಣ ಪ್ರಾಯದಲ್ಲಿ ವರಿಸಿದರು ಎಂಬುದನ್ನು ಮಾತ್ರ ಬಿಂಬಿಸುವ ಮೊದಲು ಅರಬ್ ರಾಜ್ಯದ ಉಷ್ಣತೆಯ ವಾತಾವರಣದಲ್ಲಿ ಬೆಳೆಯುವ ಹೆಣ್ಣು ಮಕ್ಕಳು ಬೇಗನೆ ದೊಡ್ಡವರಾಗುತ್ತಾರೆಂಬುದನ್ನು ಯಾಕೆ ಮೆನ್ಶನ್ ಮಾಡಲ್ಲ?
ಇಂದಿಗೂ ಸೌದಿಅರೇಬಿಯಾದ ಆರೇಳು ವಯಸ್ಸಿನ ಹೆಣ್ಣು ಮಕ್ಕಳು ನಮ್ಮೂರಿನ ಹದಿನೆಂಟು ವಯಸ್ಸಿನ ಹೆಣ್ಣು ಮಕ್ಕಳಷ್ಟು ಬೆಳೆದಿರುತ್ತಾರೆ!  ಊರಿನಲ್ಲಿರುವ ತನ್ನ ಏಳು ವಯಸ್ಸಿನ ಪುತ್ರಿಗಾಗಿ ಖರೀದಿಸಿದ ಡ್ರೆಸ್ ಹದಿನೆಂಟು ವಯಸ್ಸಿನ ಮತ್ತೊಂದು ಪುತ್ರಿಗೆ ಧರಿಸಬೇಕಾಯಿತು!
ಬೆಳವಣಿಗೆಯ ವ್ಯತ್ಯಾಸ.

1400 ವರ್ಷಗಳ ಮುಂಚಿನ ಸಂಪ್ರದಾಯಕ್ಕೂ ನಂತರದ ಸಂಪ್ರದಾಯಕ್ಕೂ ಅಜಗಜಾಂತರ ವ್ಯತ್ಯಾಸವಿರುತ್ತದೆ.
ಮುಹಮ್ಮದ್ ನೆಬಿಯವರು ಆಯಿಶಾ ಬೀವಿಯವರನ್ನು ವರಿಸುವ ವಿಷಯ ತಂದೆ ಅಬೂಬಕರ್ ಸಿದ್ದೀಕ್ (ರ) ಪತ್ನಿ ಉಮ್ಮುರೂಮಾನ್ ರ ಬಳಿ ಹೇಳಿದಾಗ, ಅವರ ಪ್ರತಿಕ್ರಿಯೆ ಹೀಗಿತ್ತು:
"ನಮ್ಮ ಸಂಬಂಧಿಕರಾದ ಝುಬೈರ್ ಬಿನ್ ಮುತ್ಇಮ್ ರವರ ಪುತ್ರನಿಗೆ ಆಯಿಶಾಳನ್ನು ವಿವಾಹ ಮಾಡಿಕೊಡುವಂತೆ ಅವರು ನಮ್ಮಲ್ಲಿ ಭಿನ್ನವಿಸಿದಾಗ ನಾವು ಅದಕ್ಕೆ ಒಪ್ಪಿಗೆ ಸೂಚಿಸಿದ್ದೇವೆ. ಹಾಗಾಗಿ ಅವರ ಅಭಿಪ್ರಾಯವನ್ನು ಕೇಳಬೇಕು"
ಅದರಂತೆ ಅಬೂಬಕರ್ ಸಿದ್ದೀಕ್ (ರ), ಝುಬೈರ್ ರವರ ಮನೆಗೆ ತೆರಳಿ ಅವರ ಅಭಿಪ್ರಾಯ ಕೇಳಿದಾಗ ಝುಬೈರ್ ರವರ ಪತ್ನಿ ಹೇಳಿದರು:
ಆಯಿಶಾ ಸಹಿತ ನೀವೆಲ್ಲರೂ ಮುಹಮ್ಮದೀಯ ಪಂಥ ಅಂಗೀಕರಿಸಿದವರಾಗಿದ್ದೀರಿ. ಆದ್ದರಿಂದ ನನ್ನ ಮಗನು ನಿಮ್ಮ ಪುತ್ರಿಯನ್ನು ವಿವಾಹ ಮಾಡುವಂತಿಲ್ಲ."
ಹರ್ಷವದನರಾದ ಅಬೂಬಕರ್ (ರ) ಕೂಡಲೇ ತನ್ನ ಪತ್ನಿಯೊಂದಿಗೆ ಸಂತಸ ಹಂಚಿಕೊಂಡು ಮುಹಮ್ಮದ್ ನೆಬಿಯವರ ಬಳಿ ಹೋಗಿ ಪುತ್ರಿ ಆಯಿಶಾಳನ್ನು ವರಿಸಲು ಪೂರ್ಣ ಸಮ್ಮತಿಯಿದೆ ಎಂದರು.
ಆವಾಗ ಆಯಿಶಾ ಬೀವಿಯವರ ವಯಸ್ಸು ಕೇವಲ ಆರು!
ಅಂದರೆ ಅಷ್ಟು ಸಣ್ಣ ಪ್ರಾಯದಲ್ಲೇ ಎರಡು ವಿವಾಹ ಆಲೋಚನೆ ನಡೆದಿದ್ದವು! ಅಂದಿನ ಕಾಲದಲ್ಲಿ ಅದು ಸರ್ವೇ ಸಾಮಾನ್ಯವಾಗಿತ್ತು. ಜೊತೆಗೆ ಸಂಪ್ರದಾಯದ ಭಾಗವಾಗಿತ್ತು. ರಾಮಕೃಷ್ಣ ಪರಮಹಂಸರು 5 ವರ್ಷ ಪ್ರಾಯದ ಶಾರದಾರನ್ನು ಮದುವೆಯಾದಂತೆ...
6 ವರ್ಷ ಪ್ರಾಯದ ಸೀತಾಳನ್ನು ರಾಮನು ಮದುವೆಯಾದಂತೆ...
(ಅರಣ್ಯ ಕಾಂಡ 3.47.3-5)

ಮುಹಮ್ಮದ್ ನೆಬಿಯವರು ಆಯಿಶಾ ಬೀವಿ ಸಹಿತ ಹನ್ನೊಂದು ಮಹಿಳೆಯರನ್ನು ವಿವಾಹವಾಗುವುದರ ಹಿಂದೆ ಹಲವಾರು ತ್ಯಾಗಗಳಿದ್ದವು. ಕೆಲವೊಂದು ಕುಟುಂಬಗಳನ್ನು ಸಂರಕ್ಷಿಸುವ ಹೊಣೆಗಾರಿಕೆ ಇತ್ತು. ದಾಸ್ಯತ್ವದಿಂದ ಮುಕ್ತಿ ಹೊಂದಿಸುವ ಇರಾದೆ ಇತ್ತು.
ಸ್ಯಾಂಪಲ್ ಗಾಗಿ ಒಂದು ಉದಾಹರಣೆ ನೀಡುತ್ತೇನೆ.
ಜುವೈರಿಯ್ಯ ಎಂಬ ವಿಧವೆಯನ್ನು ಪ್ರವಾದಿ ಮುಹಮ್ಮದ್ ಸ್ವಲ್ಲಲ್ಲಾಹು ಅಲೈಹಿವಸಲ್ಲಮರು ವರಿಸುವ ಮೂಲಕ 700 ದಾಸರಿಗೆ ಮುಕ್ತಿ ಲಭಿಸಿತ್ತು!
ಜುವೈರಿಯ ಮಾತೆಯನ್ನು ಪ್ರವಾದಿ ಸ್ವಲ್ಲಲ್ಲಾಹು ಅಲೈಹಿವಸಲ್ಲಮರು ವರಿಸಿದಾಗ ಜುವೈರಿಯಾ (ರ)ರವರ ಕುಟುಂಬಿಕರನ್ನು ತಮ್ಮ ದಾಸರನ್ನಾಗಿ ಇಟ್ಟುಕೊಳ್ಳಲು ಮದೀನಾ ನಿವಾಸಿಗಳು ಇಷ್ಟಪಡಲಿಲ್ಲ. ಹಾಗಾಗಿ ಬರೋಬ್ಬರಿ ಏಳುನೂರು ದಾಸರಿಗೆ ಮುಕ್ತಿಭಾಗ್ಯ ಲಭಿಸಿತು!

ಆಯಿಶಾ (ರ) ಪ್ರಾಯವನ್ನು ಮೀರಿದ ಬುದ್ದಿ ವೈಭವದ ಶಿಖರವಾಗಿದ್ದರು. ಪುಣ್ಯ ಪ್ರವಾದಿಯವರ ಖಾಸಗಿ ಬದುಕಿನ ಚಿತ್ರಣವನ್ನು ನವಿರಾಗಿ ಪರಿಚಯಿಸಿದ ಗೈಡಾಗಿದ್ದರು. ಮಹಾಮೈಲಿಗಲ್ಲಾದ ಹಿಜರಿಯ ಸಂಪೂರ್ಣ ಪಾಠವನ್ನು ಲಯ ತಪ್ಪದೆ ಸಮರ್ಪಿಸಿದ ಮಹಾ ಪಂಡಿತೆಯಾಗಿದ್ದರು.
"ಧರ್ಮದ ಅರ್ಧದಷ್ಟು ಜ್ಞಾನವನ್ನು ಕೆಂಪುಬಣ್ಣದ ಈ ಸಣ್ಣ ಯುವತಿಯಿಂದ ನೀವು ಕಲಿತುಕೊಳ್ಳಿರಿ" (ಸುನನ್)
ಎಂದು ಪ್ರವಾದಿಯವರು ಖುದ್ದು ಘೋಷಿಸುವಷ್ಟು ಎತ್ತರಕ್ಕೆ ಆಯಿಶಾ(ರ)ರವರ ಜ್ಞಾನ ಬೆಳೆದಿತ್ತು!
ಅಂದರೆ ಆಯಿಶಾ(ರ)ರವರನ್ನು ವರಿಸುವ ಮೂಲಕ ನಂತರದ ತಲೆಮಾರಿಗೆ ಇಸ್ಲಾಮನ್ನು ಸಮರ್ಪಕವಾಗಿ ತಲುಪಿಸುವ ವಿದ್ವಾಂಸ ಮಹಿಳೆಯೊಬ್ಬರನ್ನು ಪ್ರವಾದಿ ಸ್ವಲ್ಲಲ್ಲಾಹು ಅಲೈಹಿವಸಲ್ಲಮರು ಆಯಿಶಾ ಬೀವಿಯಲ್ಲಿ ಕಂಡಿದ್ದರು.

ಹದಿನಾಲ್ಕು ವರ್ಷ ಪ್ರವಾದಿಯವರ ಜತೆ ಬದುಕು ಸವೆಸಿದ ಸೌದಾ ಬೀವಿ ವರದಿ ಮಾಡಿದ ಹದೀಸ್ ಕೇವಲ ಐದು!
ಜುವೈರಿಯಾ ರವರದ್ದು ಎಂಟು ಹದೀಸ್!
ಸಫಿಯ ಬೀವಿ ಹತ್ತು ಹದೀಸ್.
ಹಫ್ಸ(ರ)  ಅರುವತ್ತು ಹದೀಸ್.
ಈ ರೀತಿಯಾಗಿ ಅಲ್ಪ ಮೊತ್ತದ ಹದೀಸ್ ಗಳನ್ನು ಮಾತ್ರ ಅವರೆಲ್ಲಾ ವರದಿ ಮಾಡಿರುವಾಗ ಕೇವಲ ಒಂಬತ್ತು ವರ್ಷ ಮಾತ್ರ ನೆಬಿಯವರೊಂದಿಗೆ ಬಾಳಿದ ಆಯಿಶಾ(ರ) ಬರೋಬ್ಬರಿ ಎರಡು ಸಾವಿರದ ಇನ್ನೂರ ಹತ್ತು ಹದೀಸುಗಳನ್ನು ವರದಿ ಮಾಡಿದ್ದಾರೆ!
ಅಂದರೆ ಹ್ರಸ್ವ ಅವಧಿಯಲ್ಲಿ ಧಾರಾಳ ನೆಬಿವಚನಗಳನ್ನು ವಿಶ್ವಾಸಿಗಳ ಮುಂದೆ ತೆರೆದಿಟ್ಟ ಮಹಾ ವಿದ್ವಾಂಸ ಮಹಿಳೆಯಾಗಿದ್ದರು.

ಹೌದು, ಆಯಿಶಾರನ್ನು ಮುಹಮ್ಮದ್ ನೆಬಿಯವರು ವಿವಾಹವಾಗುವ ಮೂಲಕ ಅಂತ್ಯದಿನದವರೆಗೂ ಜ್ಞಾನ ಹರಡುವ ದೂರದೃಷ್ಟಿಯನ್ನು ಹೊಂದಿದ್ದರು.
ವಿವಾಹದಲ್ಲಿ ಕಾಮತೃಷೆಯನ್ನು ಮಾತ್ರ ಕಾಣುವ ಕಾಮಪಿಪಾಸುಗಳಿಗೆ ಅದು ಅರ್ಥವಾಗಲ್ಲ.

"ಆಯಿಶಾ ಬೀವಿಯವರ ವಿಷಯದಲ್ಲಿ ನೀವು ಅಲ್ಲಾಹನನ್ನು ಭಯಪಡಿರಿ, ನನ್ನ ಪತ್ನಿಯಂದಿರ ಪೈಕಿ ಆಯಿಶಾಳ ಬಳಿ ಇರುವಾಗ ಮಾತ್ರ ನನಗೆ ದಿವ್ಯಸಂದೇಶ(ವಹ್ಯ್) ಬರುತ್ತಿತ್ತು" ಎಂದು ಪ್ರವಾದಿ(ಸ್ವ ಹೇಳಿದ್ದರು.

ಅರಬಿಗಳ ನಡುವೆ ಚಾಲ್ತಿಯಲ್ಲಿದ್ದ ಮಿತ್ರನ ಪುತ್ರಿಯನ್ನು ವರಿಸಬಾರದೆಂಬ ಮೂಢನಂಬಿಕೆಯನ್ನು ಅಳಿಸುವ ಉದ್ದೇಶವೂ ಈ ವಿವಾಹದ ಮೂಲಕ ನೆಬಿಯವರಿಗಿತ್ತು. ಎಲ್ಲಕ್ಕಿಂತ ಮಿಗಿಲಾಗಿ ಅಲ್ಲಾಹನ ಆಜ್ಞಾಪಾಲನೆಯಾಗಿತ್ತು.

ಅಬೂಶಝ

Comments

Popular posts from this blog

ಗ್ರಹಣ ನಮಾಜಿನ ರೂಪ

ಗ್ರಹಣ ನಮಾಜಿನ ರೂಪ *ಚಂದ್ರಗ್ರಹಣದ ಸುನ್ನತ್ ನಮಾಜು ಎರಡು ರಕಅತ್ ಅಲ್ಲಾಹನಿಗಾಗಿ ಜಮಾಅತ್ತಾಗಿ ನಾನು ನಿರ್ವಹಿಸುವೆನು* ಎಂದು ನಿಯ್ಯತ್ ಮಾಡಿ ಅಲ್ಲಾಹು ಅಕ್ಬರ್ ಎಂದು ಹೇಳಿ ನಮಾಜಿಗೆ ಪ್ರವೇಶಿಸುವು...

ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ. ಲೇ - ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಅಕ್ಕರೆಕೆರೆ.

ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ. ಲೇ - ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಅಕ್ಕರೆಕೆರೆ. ಆಮಿನ ಬೀವಿ ರ.ಅ ಗರ್ಭಿಣಿಯಾಗಿರುವಾಗ ವ್ಯಾಪಾರಕ್ಕಾಗಿ ಸಿರಿಯಾಕ್ಕೆ ಹೋಗಿದ್ದ ಅಬ್ದುಲ್ಲಾಹ್ (ರ.ಅ) ಮರಳಿ ಬರುವಾಗ ಮದೀನದಲ್ಲಿ ವಫಾತಾದರು.ತಂದೆಯ ಮಾವಂದಿರರಾದ ಬನುನ್ನಜ್ಜಾರ್ ಗೋತ್ರದವರ ಬಳಿ ದಫನ ಮಾಡಲಾಯಿತು.ರಬೀವುಲ್ ಹನ್ನೆರಡು ಸೋಮವಾರ ಸುಬಹಿಯ ಸ್ವಲ್ಪ ಮುಂಚೆ ಅಂತ್ಯ ಪ್ರವಾದಿ ಮುಹಮ್ಮದ್ ಮುಸ್ತಫ ಸ.ಅ ಮಕ್ಕಾದಲ್ಲಿ ಜನಿಸಿದರು.ಅಂದು ಕ್ರಿಸ್ತಶಕ 571 ಎಪ್ರಿಲ್ 21 ಆಗಿತ್ತು.ನೆಬಿ ಸ.ಅ ಜನಿಸಿದ ದಿನ ಅತ್ಯಂತ ಸಂತೋಷದಾಯಕವಾದ ದಿನವಾಗಿದೆ.ಮಾನವ ಶ್ರೇಷ್ಠರಾದ ಪ್ರವಾದಿ ಮುಹಮ್ಮದ್ ಸ.ಅ ರವರ ಮುಖಾಂತರ ಮಾನವ ಸಮೂಹವನ್ನು ಅಲ್ಲಾಹು ಅನುಗ್ರಹಿಸಿದ ಸುದಿನವಾಗಿದೆ ಅಂದು.ಮುಸಲ್ಮಾನರು ಈ ಅನುಗ್ರಹಕ್ಕೆ ಕ್ರತಜ್ಞತೆ ಸಲ್ಲಿಸಿ ಅಂದು ಮೀಲಾದುನ್ನಬಿ ಆಚರಣೆ ಮಾಡುತ್ತಾರೆ.ನೆಬಿ ಸ.ಅ ರವರ ಮದಹ್ ಕೀರ್ತನೆಗಳನ್ನು ಹೇಳಿ, ಹಾಡಿಹೊಗಳಿ ದಾನಧರ್ಮಗಳನ್ನು ನೀಡಿ ಸಂತೋಷ ಪ್ರಕಟಿಸುತ್ತಾರೆ.              ಭೂಮಿಯ ಮೇಲೆ ಜನ್ಮವೆತ್ತಿ ಬಂದ ಅತ್ಯಂತ ಉತ್ತಮನಾದ ಮನುಷ್ಯ ನೆಬಿ ಸ.ಅ ಆಗಿದ್ದಾರೆ.ಮುಂಜಿಕರ್ಮ ನಿರ್ವಹಿಸಲ್ಪಟ್ಟ,ಹೊಕ್ಕುಳ ಬಳ್ಳಿ ಕತ್ತರಿಸಲ್ಪಟ್ಟ,ಕಣ್ಣಿಗೆ ಸುರುಮ ಹಾಕಲ್ಪಟ್ಟ ಸ್ಥಿತಿಯಲ್ಲಿ ಸಂಪೂರ್ಣ ಸಂಶುದ್ಧವಾದ ರೀತಿಯಲ್ಲಾಗಿದೆ ಅವರು ಜನಿಸಿದ್ದು.ಅಬೂತಾಲಿಬರ ಮನೆಯಲ್ಲಾಗಿದೆ ಜನನ.ಹೆರಿಗೆ...

ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಕರ ಪಾತ್ರ

ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಕರ ಪಾತ್ರ _✍🏻ಜಹಫರ್ ಸಾಧಿಕ್ ಕಟ್ಟದಪಡ್ಪು_ _ನಮ್ಮ ಸಮಾಜವು ನಮಗೆ ಜನ್ಮ ಕೊಟ್ಟ ತಂದೆ ತಾಯಿಯ ನಂತರ ಮಹತ್ತರವಾದ ಸ್ಥಾನವನ್ನು ಶಿಕ್ಷಕರಿಗೆ ನೀಡಿ ಗೌರವಿಸಿದೆ.  ಶಿಲ್ಪಿ...