ಪ್ರವಾದಿ ನಿಂದನೆಗೆ ಇಷ್ಟೊಂದು ಆಕ್ರೋಶಗೊಳ್ಳಬೇಕೇ?
ಎಂ.ಎ.ಇಸ್ಮಾಈಲ್ ನಈಮಿ ಮಂಗಳಪೇಟೆ
ಸುವರ್ಣ ಟಿವಿಯ ಅಜಿತ್ ರವರು ವಿಶ್ವ ಪ್ರವಾದಿ ಮುಹಮ್ಮದ್ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮರ ಬಗ್ಗೆ ನಿಂದಿಸಿದಾಗ ಸೋಶಿಯಲ್ ಮೀಡಿಯಾಗಳಲ್ಲಿ ಅವ್ಯಾಹತ ಪ್ರತಿಕ್ರಿಯೆಗಳು ಬಂದವು. ನಾನಾ ಬಗೆಯ ಕಮೆಂಟ್ಸ್ಗಳು ಹರಿದಾಡಿದವು.ಹಲವರು ಕ್ಷಮೆ ಯಾಚಿಸಬೇಕೆಂದು ಒತ್ತಾಯಿಸಿದರು.ಕೆಲವರು ಕೇಸುಗಳನ್ನು ದಾಖಲಿಸಿದರೂ ಕೂಡಾ.
ಪ್ರವಾದಿ ಮುಹಮ್ಮದ್ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮರನ್ನು ನಿಂದಿಸಿದಾಗ ಮುಸ್ಲಿಮರು ಇಷ್ಷೊಂದು ಆಕ್ರೋಶಿತರಾಗುವುದಾದರೂ ಯಾಕೆ ಎಂದು ನಿಮಗೆ ತಿಳಿದಿದೆಯೇ?
2001ರಲ್ಲಿ ಚುಟುಕ ಎಂಬ ಪತ್ರಿಕೆ ಪ್ರವಾದಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮರವರ ಬಗ್ಗೆ ಹೀನವಾಗಿ ಬರೆದಾಗ ಸಹಿಸಲಾಗದೆ ಅದನ್ನು ಖಂಡಿಸುತ್ತಾ ಸಂಪಾದಕರಿಗೆ ಒಂದು ಪತ್ರ ಬರೆದೆ. ಪ್ರತಿಕ್ರಿಯೆಯಾಗಿ ಅವರು ನನ್ನ ವಿಳಾಸಕ್ಕೆ ಪತ್ರ ಬರೆದು "ನಮ್ಮ ಕಣ್ತಪ್ಪಿನಿಂದಾದ ಅಚಾತುರ್ಯಕ್ಕೆ.ವಿಷಾದಿಸುತ್ತೇವೆ.ನಮಗೆ ಯಾವ ಧರ್ಮವನ್ನೂ ನಿಂದಿಸುವ ಉದ್ದೇಶ ಖಂಡಿತಾ ಇಲ್ಲ. ಈ ಬಗ್ಗೆ ತಿದ್ದುಪಡಿಯನ್ನು ಮುಂದಿನ ಸಂಚಿಕೆಯಲ್ಲಿ ಪ್ರಕಟಿಸಲಾಗುವುದು" ಎಂದಿದ್ದರು.ಅವರು ಹಾಗೆ ಮಾಡಿದ್ದರು ಕೂಡಾ.
ಅದಾದ ಬಳಿಕ ನೈಜೀರಿಯಾದಲ್ಲಿ ಮಿಸ್ ವಲ್ಡ್ ಸೌಂದರ್ಯ ಸ್ಪರ್ಧೆಗಾಗಿ ಸಿದ್ಧತೆಗಳು ನಡೆಯುತ್ತಿದ್ದಾಗ ಅಲ್ಲಿನ ಪತ್ರಿಕೆಯೊಂದು ಪ್ರವಾದಿ ನಿಂದನೆಯ ಬರಹ ಪ್ರಕಟಿಸಿತ್ತು. ಆಗಲೂ ಮುಸ್ಲಿಮರು ರೊಚ್ಚಿಗೆದ್ದು, ಕೊನೆಗೆ ಸೌಂದರ್ಯ ಸ್ಪರ್ಧೆಯನ್ನು ಲಂಡನ್ಗೆ ಸ್ಥಳಾಂತರಿಸುವಂತೆ ಮಾಡಿದ್ದರು.
ಆ ಬಳಿಕ ಹಲವು ಬಾರಿ ಪ್ರವಾದಿ ನಿಂದನೆಯ ಘಟನೆ ನಡೆದಿದೆ. ಮುಸ್ಲಿಮರು ಹಾಗೆಯೆ ರೊಚ್ಚಿಗೆದ್ದಿದ್ದಾರೆ.ಪ್ರತಿಭಟಿಸಿದ್ದಾರೆ. ಈಗ ಸುವರ್ಣ ಟಿವಿಯ ನಿರೂಪಕರು ನಿಂದಿಸಿದಾಗಲೂ ಮುಸ್ಲಿಮರು ಆಕ್ರೋಶಿತರಾಗಿದ್ದಾರೆ.
ಅಷ್ಟಕ್ಕೂ ಪ್ರವಾದಿ ಮುಹಮ್ಮದ್ ಪೈಗಂಬರರನ್ನು ನಿಂದಿಸಿದಾಗ ಮುಸ್ಲಿಮರೇಕೆ ಈ ಪರಿ ಆಕ್ರೋಶಿತರಾಗುತ್ತಾರೆ ಎಂದು ತಿಳಿಯಬೇಕಾದರೆ ಹದಿನೈದು ವರ್ಷಗಳ ಹಿಂದೆ ಅಂದರೆ 2003 ರಲ್ಲಿ ನಾನು( ದರ್ಸ್ ವಿದ್ಯಾರ್ಥಿಯಾಗಿ ಕಲಿಯುತ್ತಿದ್ದಾಗ) ಅಲ್ ಅನ್ಸಾರ್ ವಾರಪತ್ರಿಕೆಯ ಮೀಲಾದ್ ವಿಶೇಷಾಂಕಕ್ಕೆ ಬರೆದ ಲೇಖನವನ್ನು ಓದಿ ನೋಡಿ.
ಪ್ರವಾದಿ ಮುಹಮ್ಮದ್ ಪೈಗಂಬರರ ಸಂಶುದ್ಧ ಜೀವನದ ಬಗ್ಗೆ ಸಮಗ್ರ ಅಧ್ಯಯನ ಮಾಡದೆ, ಎಲ್ಲೋ ಕೇಳಿದ್ದನ್ನು, ಯಾರೋ ಗೀಚಿದ್ದನ್ನು ಸತ್ಯ ವೆಂದು ಭಾವಿಸಿ ನಿಂದಿಸ ಹೊರಟರೆ ಅದನ್ನು ಸಹಿಸಿಕೊಳ್ಳಲು ಮುಸ್ಲಿಮರಿಗೆ ಖಂಡಿತಾ ಸಾಧ್ಯವಿಲ್ಲ.
ಪ್ರವಾದಿ ಮುಹಮ್ಮದ್ ಸ್ವಲ್ಕಲ್ಲಾಹು ಅಲೈಹಿ ವಸಲ್ಲಮರನ್ನು ನಿಂದಿಸುವ ಘಟನೆ ಮುಂದೆ ಯಾವತ್ತೂ ಮರುಕಳಿಸದಿರಲಿ ಎಂಬ ಆಸೆಯಿಂದ ಕೆಳಗೆ ಆ ಲೇಖನವನ್ನು ಲಗತ್ತಿಸಿದ್ದೇನೆ.
ಓದಲು ಮರೆಯದಿರಿ....
Comments