Skip to main content

ಈ ಕೊಳದ ನೀರಿನಿಂದ ಮಕ್ಕಾದ ಬೆಂಕಿ ನಂದಿತು


ಅಳೇಕಲ ಮಸೀದಿ ಸನಿಹ ಕೊಳವೊಂದಿದೆ. ಸುಮಾರು ಆರುನೂರು ವರ್ಷಗಳ ಹಿಂದೆಯೇ ಅಂದರೆ ಉಳ್ಳಾಲದ ಮೊದಲ ಸೂಫಿ ಸಂತರಾದ ವಲಿಯುಲ್ಲಾಹಿ ಅಚ್ಚಿಸಾಹಿಬ್ ಖ.ಸಿ ರವರ ಕಾಲದಲ್ಲೇ ಕೊಳವಿತ್ತು ಎಂದೂ ಅಲ್ಲ ಅವರ ಕಾಲದ ನಂತರ ಕೊಳ ನಿರ್ಮಾಣವಾದದ್ದು ಎಂದು ಎರಡಭಿಪ್ರಾಯವಿದೆ. ಏನೇ ಆದರೂ ಸಯ್ಯಿದ್ ಮದನಿ ಖ.ಸಿ ರವರ ಕಾಲದಲ್ಲಿ ಅಳೇಕಲದ ಕೊಳ ಪ್ರಸಿದ್ಧಿ ಪಡೆಯಿತು. 
ಒಂದು ದಿನ ಸಯ್ಯಿದ್ ಮದನಿ ತಂಗಳ್ ಖ.ಸಿ ತನ್ನ ಪತ್ನಿಯ ಊರಾದ ಈ ಅಳೇಕಲದ ಮಸೀದಿ ಸಮೀಪದ ಇದೇ ಕೊಳದಲ್ಲಿ ನಮಾಝ್ ಗಾಗಿ ವುಲೂ ನಿರ್ವಹಿಸುತ್ತಿದ್ದರು.
ವುಲೂ ನಿರ್ವಹಿಸುತ್ತಿರುವುದರ ಮಧ್ಯೆ ಒಂದೇ ಸಮನೆ ತನ್ನ ಎರಡು ಕೈಗಳಿಂದ ನೀರನ್ನೆತ್ತಿ ಮೇಲಕ್ಕೆ ಚಿಮ್ಮುತ್ತಲಿದ್ದರು. ಸನಿಹವಿದ್ದವರು ಮೂಕ ಪ್ರೇಕ್ಷಕರಾಗಿ ಇದನ್ನೇ ನೋಡುತ್ತಿದ್ದರು. ನೀರು ಚಿಮ್ಮಿಸುವುದನ್ನು ನಿಲ್ಲಿಸಿದಾಗ ಸನಿಹವಿದ್ದವರು ಆಶ್ಚರ್ಯದಿಂದ ಕೇಳಿದರು. ಮದನಿ ತಂಗಳರೇ. ತಾವು ಯಾಕೆ ವುಲೂವಿನ ಮಧ್ಯೆ ನೀರನ್ನು ಮೇಲಕ್ಕೆ ಚಿಮ್ಮಿಸಿದಿರಿ. ಮದನಿ ತಂಗಳ್ ಹೇಳಿದರು.ನಾನು ವುಲೂ ನಿರ್ವಹಿಸುತ್ತಿರುವುದರ ಮಧ್ಯೆ ಪವಿತ್ರ ಮಕ್ಕಾದ ಹರಂ ಶರೀಫ್ ನಲ್ಲಿ ಬೆಂಕಿ ಅನಾಹುತ ಸಂಭವಿಸುವುದನ್ನು ಕಂಡೆನು. ಅಲ್ಲಾಹನ ಆಜ್ಞೆಯಂತೆ ಆ ಬೆಂಕಿಯನ್ನು ನಂದಿಸಲು ನೀರನ್ನು  ಚಿಮ್ಮಿಸಿದೆ. ಅಲ್ಲಾಹನ ಅನುಗ್ರಹದಿಂದ ಬೆಂಕಿ ನಂದಿತು ಎಂದರು. ಸಯ್ಯಿದ್ ಮದನಿ ತಂಗಳ್ ರವರ ಈ ಅದ್ಬುತದಿಂದ  ಜನರು ಭಾರೀ ಅನಾಹುತದಿಂದ ರಕ್ಷೆ ಪಡೆದರು. ಆ ವರ್ಷ ಪವಿತ್ರ ಹಜ್ ಗೆ ಹೋದ ಸ್ಥಳೀಯ ಕೆಲ ಹಜ್ಜಾಜ್ ಗಳು ಹಜ್ ಕರ್ಮ ನಿರ್ವಹಿಸಿ ಮರಳಿ ಬಂದಾಗ ಈ ಘಟನೆಯ ಬಗ್ಗೆ ಅವರೊಂದಿಗೆ ಕೇಳಲಾಯಿತು.ಅವರು ಅಲ್ಲಿಯ ಘಟನೆಯನ್ನು ವಿವರಿಸಿದ್ದು ಹೀಗೆ. ಮಕ್ಕಾದಲ್ಲಿ ಭಾರೀ ಬೆಂಕಿ ಅನಾಹುತ ಸಂಭವಿಸಿತು. ನಾವು ಸಯ್ಯಿದ್ ಮದನಿ ತಂಗಳ್ ರವರನ್ನು ತವಸ್ಸುಲ್ ಮಾಡಿ, ಅವರನ್ನು ನೆನೆದು ಅಲ್ಲಾಹನಲ್ಲಿ ಪ್ರಾರ್ಥಿಸಿದೆವು. ಏನದ್ಭುತ,‌ ಮೇಲಿನಿಂದ ಎಲ್ಲಿಂದಲೋ ನೀರು ಎಸೆಯಲ್ಪಟ್ಟು ಬೆಂಕಿ ನಂದಿತು. ಭಾರೀ ಅನಾಹುತ ಸಂಭವಿಸುವುದು ತಪ್ಪಿತು ಎಂದರು.
ಈ ಘಟನೆಯ ಬಳಿಕ ಅಳೇಕಲದ ಕೊಳ ಮುನ್ನೆಲೆಗೆ ಬಂತು ಮತ್ತು ಪ್ರಸಿದ್ಧಿಯಾಯಿತು. ಈ ಕೊಳದ ಮಹತ್ವ ತಿಳಿದ ಅನೇಕರು ಈಗಲೂ ಈ ಪ್ರಸಿದ್ಧ ಕೊಳ ವೀಕ್ಷಣೆಗೆಂದು ಅಳೇಕಲಕ್ಕೆ ಬರುತ್ತಾರೆ.

Comments

Popular posts from this blog

ಗ್ರಹಣ ನಮಾಜಿನ ರೂಪ

ಗ್ರಹಣ ನಮಾಜಿನ ರೂಪ *ಚಂದ್ರಗ್ರಹಣದ ಸುನ್ನತ್ ನಮಾಜು ಎರಡು ರಕಅತ್ ಅಲ್ಲಾಹನಿಗಾಗಿ ಜಮಾಅತ್ತಾಗಿ ನಾನು ನಿರ್ವಹಿಸುವೆನು* ಎಂದು ನಿಯ್ಯತ್ ಮಾಡಿ ಅಲ್ಲಾಹು ಅಕ್ಬರ್ ಎಂದು ಹೇಳಿ ನಮಾಜಿಗೆ ಪ್ರವೇಶಿಸುವು...

ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ. ಲೇ - ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಅಕ್ಕರೆಕೆರೆ.

ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ. ಲೇ - ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಅಕ್ಕರೆಕೆರೆ. ಆಮಿನ ಬೀವಿ ರ.ಅ ಗರ್ಭಿಣಿಯಾಗಿರುವಾಗ ವ್ಯಾಪಾರಕ್ಕಾಗಿ ಸಿರಿಯಾಕ್ಕೆ ಹೋಗಿದ್ದ ಅಬ್ದುಲ್ಲಾಹ್ (ರ.ಅ) ಮರಳಿ ಬರುವಾಗ ಮದೀನದಲ್ಲಿ ವಫಾತಾದರು.ತಂದೆಯ ಮಾವಂದಿರರಾದ ಬನುನ್ನಜ್ಜಾರ್ ಗೋತ್ರದವರ ಬಳಿ ದಫನ ಮಾಡಲಾಯಿತು.ರಬೀವುಲ್ ಹನ್ನೆರಡು ಸೋಮವಾರ ಸುಬಹಿಯ ಸ್ವಲ್ಪ ಮುಂಚೆ ಅಂತ್ಯ ಪ್ರವಾದಿ ಮುಹಮ್ಮದ್ ಮುಸ್ತಫ ಸ.ಅ ಮಕ್ಕಾದಲ್ಲಿ ಜನಿಸಿದರು.ಅಂದು ಕ್ರಿಸ್ತಶಕ 571 ಎಪ್ರಿಲ್ 21 ಆಗಿತ್ತು.ನೆಬಿ ಸ.ಅ ಜನಿಸಿದ ದಿನ ಅತ್ಯಂತ ಸಂತೋಷದಾಯಕವಾದ ದಿನವಾಗಿದೆ.ಮಾನವ ಶ್ರೇಷ್ಠರಾದ ಪ್ರವಾದಿ ಮುಹಮ್ಮದ್ ಸ.ಅ ರವರ ಮುಖಾಂತರ ಮಾನವ ಸಮೂಹವನ್ನು ಅಲ್ಲಾಹು ಅನುಗ್ರಹಿಸಿದ ಸುದಿನವಾಗಿದೆ ಅಂದು.ಮುಸಲ್ಮಾನರು ಈ ಅನುಗ್ರಹಕ್ಕೆ ಕ್ರತಜ್ಞತೆ ಸಲ್ಲಿಸಿ ಅಂದು ಮೀಲಾದುನ್ನಬಿ ಆಚರಣೆ ಮಾಡುತ್ತಾರೆ.ನೆಬಿ ಸ.ಅ ರವರ ಮದಹ್ ಕೀರ್ತನೆಗಳನ್ನು ಹೇಳಿ, ಹಾಡಿಹೊಗಳಿ ದಾನಧರ್ಮಗಳನ್ನು ನೀಡಿ ಸಂತೋಷ ಪ್ರಕಟಿಸುತ್ತಾರೆ.              ಭೂಮಿಯ ಮೇಲೆ ಜನ್ಮವೆತ್ತಿ ಬಂದ ಅತ್ಯಂತ ಉತ್ತಮನಾದ ಮನುಷ್ಯ ನೆಬಿ ಸ.ಅ ಆಗಿದ್ದಾರೆ.ಮುಂಜಿಕರ್ಮ ನಿರ್ವಹಿಸಲ್ಪಟ್ಟ,ಹೊಕ್ಕುಳ ಬಳ್ಳಿ ಕತ್ತರಿಸಲ್ಪಟ್ಟ,ಕಣ್ಣಿಗೆ ಸುರುಮ ಹಾಕಲ್ಪಟ್ಟ ಸ್ಥಿತಿಯಲ್ಲಿ ಸಂಪೂರ್ಣ ಸಂಶುದ್ಧವಾದ ರೀತಿಯಲ್ಲಾಗಿದೆ ಅವರು ಜನಿಸಿದ್ದು.ಅಬೂತಾಲಿಬರ ಮನೆಯಲ್ಲಾಗಿದೆ ಜನನ.ಹೆರಿಗೆ...

ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಕರ ಪಾತ್ರ

ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಕರ ಪಾತ್ರ _✍🏻ಜಹಫರ್ ಸಾಧಿಕ್ ಕಟ್ಟದಪಡ್ಪು_ _ನಮ್ಮ ಸಮಾಜವು ನಮಗೆ ಜನ್ಮ ಕೊಟ್ಟ ತಂದೆ ತಾಯಿಯ ನಂತರ ಮಹತ್ತರವಾದ ಸ್ಥಾನವನ್ನು ಶಿಕ್ಷಕರಿಗೆ ನೀಡಿ ಗೌರವಿಸಿದೆ.  ಶಿಲ್ಪಿ...