Skip to main content

*ಝಿಯಾರತ್ತ್ ಕೇಂದ್ರ* 👉👉👉27 〰〰〰〰〰〰〰 _ಶೈಖುಲ್ ಹದೀಸ್_ _ನೆಲ್ಲಿಕುತ್ತ್  ಇಸ್ಮಾಈಲ್ ಉಸ್ತಾದ್  ನೆಲ್ಲಿಕುತ್ತ್, ಮಂಜೇರಿ, ಮಲಪ್ಪುರಂ_ 〰〰〰〰〰〰〰 ✍ ಗಫೂರ್ ಬಾಯಾರು

*ಝಿಯಾರತ್ತ್ ಕೇಂದ್ರ*
👉👉👉27
〰〰〰〰〰〰〰
_ಶೈಖುಲ್ ಹದೀಸ್_
_ನೆಲ್ಲಿಕುತ್ತ್  ಇಸ್ಮಾಈಲ್ ಉಸ್ತಾದ್  ನೆಲ್ಲಿಕುತ್ತ್, ಮಂಜೇರಿ, ಮಲಪ್ಪುರಂ_
〰〰〰〰〰〰〰
✍ ಗಫೂರ್ ಬಾಯಾರು
〰〰〰〰〰〰〰
🕎 ಮುಸ್ಲಿಯಾರಗತ್ತ್ ಮುಹಮ್ಮದ್ ಮುಸ್ಲಿಯಾರ್ ಮತ್ತು ಮರಿಯಂ  ದಂಪತಿಗಳ ಏಕೈಕ ಸುಪುತ್ರನಾಗಿ 1939ರಲ್ಲಿ ಪೊನ್ನಾನಿ ಮಖ್ಡೂಮ್ ಕುಟುಂಬದ ಒಂದು ಶಾಖೆಯಾಗಿದ್ದ 'ಮುಸ್ಲಿಯಾರಗತ್ತ್' ಕುಟುಂಬದಲ್ಲಿ ಜನಿಸಿದರು.

ನೆಲ್ಲಿಕುತ್ತ್ ಕುಂಞಿ ಹಸನ್ ಹಾಜಿ (ಪತ್ನಿಯ ತಂದೆ), ಮಂಜೇರಿ ಮುಹಮ್ಮದ್ ಮುಸ್ಲಿಯಾರು, ಅಬ್ದು ರಹ್ಮಾನ್ ಫಳ್'ಫರಿ (ಕುಟ್ಟಿ) ಮುಸ್ಲಿಯಾರು, ಮೊದಲಾದವರು ಮಹಾನವರ ಪ್ರಧಾನ ಗುರುಗಳಾಗಿದ್ದರು.

ಆಲತ್ತೂರ್ ಪಡಿ, ಕಾವನೂರ್, ಅರಿಂಬ್ರ, ಪುಲ್ಲಾರ, ಎಂಬಿ ಸ್ಥಳಗಳಲ್ಲಿ ಮುದರಿಸರಾಗಿದ್ದರು.

ತದನಂತರ ನಂದಿ ದಾರುಸ್ಸಲಾಮ್ ಕಾಲೇಜಿನಲ್ಲಿ ವೈಸ್ ಪ್ರಿನ್ಸಿಪಾಲ್ ಆದರು.

ನಂತರ
1986ರಿಂದ ವಫಾತಿನ ವರೆಗೆ *ಕಾರಂದೂರ್ ಮರ್ಕಝ್  ಶರೀಅತ್ತ್ ಕಾಲೇಜಿನಲ್ಲಿ  ಖುರ್ಆನ್, ಹದೀಸ್, ಫಿಖ್ಹ್ ಮೊದಲಾದ ವಿಷಯಗಳಲ್ಲಿ ಪ್ರಮುಖ ಮುದರಿಸರಾಗಿದ್ದ ಅವರು ಅಪ್ರತಿಮ ಪಾಂಡಿತ್ಯದ ತೇಜಸ್ಸು ಕೂಡ ಆಗಿದ್ದರು.*

ಶೈಖುಲ್ ಹದೀಸ್ ಎಂಬ ಗೌರವ ನಾಮವು ಅವರ ಹದೀಸ್ ಪಾಂಡಿತ್ಯಕ್ಕೆ ಹಿಡಿದ ಕೈಗನ್ನಡಿಯಾಗಿತ್ತು.

ವಹಾಬಿಗಳ ಅತೌಹೀದ್ ಎಂಬ ಪುಸ್ತಕಕ್ಕೆ *'ತೌಹೀದ್ ಸಮಗ್ರಪಡನಂ* ಎಂಬ ಮಲಯಾಳ ಖಂಡನಾ ಗ್ರಂಥವನ್ನು ಬರೆದರು.

*ಮತಞಲಿಲೂಡೆ ಒರು ಪಡಣ ಪರ್ಯಡನಂ, ಜುಮುಆ ಒರು ಪಡಣಂ, ತೌಹೀದ್ ಒರು ಸಮಗ್ರ ಪಡಣಂ, ತ್ಶರೀಖತ್, ಫತ್ವಾಗಳ ಸಮಾರವಾದ 3 ಗ್ರಂಥಗಳು* ಅಲ್ಲದೆ ಇನ್ನೂ ಹಲವಾರು ಗ್ರಂಥಗಳನ್ನು ರಚಿಸಿದರು.

*'ಮಿಶ್ಕಾತ್ತಿಗೆ ಬರೆದ ಚರಿತ್ರೆ ಪ್ರಸಿದ್ದವಾದ ಮಿರ್ಆತ್ತು ಫಿಕ್ಹುಸ್ಸುನ್ನ ಹಾಗೂ ಅಖಾಈದುಸುನ್ನ* ಮತ್ತು ಪ್ರಾಮಾಣಿಕ ದರ್ಸ್ ಕಿತ್ತಾಬುಗಳಿಗಿರುವ ವ್ಯಾಖ್ಯಾನಗಳು,  ಬರಹಗಳು ಮತಪಂಡಿತರ ಲೋಕಕ್ಕೆ ಅಮೂಲ್ಯನಿಧಿಯಾಗಿದೆ.

ಶೈಖುನಾ ಉಸ್ತಾದವರು (1432 ರಬೀಉಲ್ ಆಖಿರ್ 30) 2011 ಎಪ್ರಿಲ್ 3 ಆದಿತ್ಯವಾರ ವಫಾತ್ತಾದರು.

ತನ್ನ ಮನೆಯ ಸಮೀಪವಿರುವ ನೆಲ್ಲಿಕೂತ್ತ್ ಮಸೀದಿಯಲ್ಲಾಗಿದೆ ಮಹಾನರ ಮಖಾಂ ಇರುವುದು.

  ಮಕ್ಬರಕ್ಕೆ ಮಂಜೇರಿ-ಪಾಂಡಿಕಾಡ್
ದಾರಿಯಲ್ಲಿ 9 ಕಿ.ಮೀ. ಇದೆ.

ಮಹಾನವರ ದರಜವನ್ನು ಅಲ್ಲಾಹು ಉನ್ನತಿಗೇರಿಸಲಿ..
ಅವರೊಂದಿಗೆ ನಮ್ಮನ್ನು ಅಲ್ಲಾಹು ಸ್ವರ್ಗಲೋಕದಲ್ಲಿ ಒಂದುಗೂಡಿಸಲಿ ಆಮೀನ್.

✍ _ಗಫೂರ್ ಬಾಯಾರು_
🕎🕎🕎🕎🕎🕎🕎

Comments

assalamu alaikum... very good .. good information we got from this site. and i would like to tell add more information about IsTHIGHASA and tawassul, Ibadath, shirk and thouheed.

Popular posts from this blog

ಗ್ರಹಣ ನಮಾಜಿನ ರೂಪ

ಗ್ರಹಣ ನಮಾಜಿನ ರೂಪ *ಚಂದ್ರಗ್ರಹಣದ ಸುನ್ನತ್ ನಮಾಜು ಎರಡು ರಕಅತ್ ಅಲ್ಲಾಹನಿಗಾಗಿ ಜಮಾಅತ್ತಾಗಿ ನಾನು ನಿರ್ವಹಿಸುವೆನು* ಎಂದು ನಿಯ್ಯತ್ ಮಾಡಿ ಅಲ್ಲಾಹು ಅಕ್ಬರ್ ಎಂದು ಹೇಳಿ ನಮಾಜಿಗೆ ಪ್ರವೇಶಿಸುವು...

ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ. ಲೇ - ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಅಕ್ಕರೆಕೆರೆ.

ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ. ಲೇ - ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಅಕ್ಕರೆಕೆರೆ. ಆಮಿನ ಬೀವಿ ರ.ಅ ಗರ್ಭಿಣಿಯಾಗಿರುವಾಗ ವ್ಯಾಪಾರಕ್ಕಾಗಿ ಸಿರಿಯಾಕ್ಕೆ ಹೋಗಿದ್ದ ಅಬ್ದುಲ್ಲಾಹ್ (ರ.ಅ) ಮರಳಿ ಬರುವಾಗ ಮದೀನದಲ್ಲಿ ವಫಾತಾದರು.ತಂದೆಯ ಮಾವಂದಿರರಾದ ಬನುನ್ನಜ್ಜಾರ್ ಗೋತ್ರದವರ ಬಳಿ ದಫನ ಮಾಡಲಾಯಿತು.ರಬೀವುಲ್ ಹನ್ನೆರಡು ಸೋಮವಾರ ಸುಬಹಿಯ ಸ್ವಲ್ಪ ಮುಂಚೆ ಅಂತ್ಯ ಪ್ರವಾದಿ ಮುಹಮ್ಮದ್ ಮುಸ್ತಫ ಸ.ಅ ಮಕ್ಕಾದಲ್ಲಿ ಜನಿಸಿದರು.ಅಂದು ಕ್ರಿಸ್ತಶಕ 571 ಎಪ್ರಿಲ್ 21 ಆಗಿತ್ತು.ನೆಬಿ ಸ.ಅ ಜನಿಸಿದ ದಿನ ಅತ್ಯಂತ ಸಂತೋಷದಾಯಕವಾದ ದಿನವಾಗಿದೆ.ಮಾನವ ಶ್ರೇಷ್ಠರಾದ ಪ್ರವಾದಿ ಮುಹಮ್ಮದ್ ಸ.ಅ ರವರ ಮುಖಾಂತರ ಮಾನವ ಸಮೂಹವನ್ನು ಅಲ್ಲಾಹು ಅನುಗ್ರಹಿಸಿದ ಸುದಿನವಾಗಿದೆ ಅಂದು.ಮುಸಲ್ಮಾನರು ಈ ಅನುಗ್ರಹಕ್ಕೆ ಕ್ರತಜ್ಞತೆ ಸಲ್ಲಿಸಿ ಅಂದು ಮೀಲಾದುನ್ನಬಿ ಆಚರಣೆ ಮಾಡುತ್ತಾರೆ.ನೆಬಿ ಸ.ಅ ರವರ ಮದಹ್ ಕೀರ್ತನೆಗಳನ್ನು ಹೇಳಿ, ಹಾಡಿಹೊಗಳಿ ದಾನಧರ್ಮಗಳನ್ನು ನೀಡಿ ಸಂತೋಷ ಪ್ರಕಟಿಸುತ್ತಾರೆ.              ಭೂಮಿಯ ಮೇಲೆ ಜನ್ಮವೆತ್ತಿ ಬಂದ ಅತ್ಯಂತ ಉತ್ತಮನಾದ ಮನುಷ್ಯ ನೆಬಿ ಸ.ಅ ಆಗಿದ್ದಾರೆ.ಮುಂಜಿಕರ್ಮ ನಿರ್ವಹಿಸಲ್ಪಟ್ಟ,ಹೊಕ್ಕುಳ ಬಳ್ಳಿ ಕತ್ತರಿಸಲ್ಪಟ್ಟ,ಕಣ್ಣಿಗೆ ಸುರುಮ ಹಾಕಲ್ಪಟ್ಟ ಸ್ಥಿತಿಯಲ್ಲಿ ಸಂಪೂರ್ಣ ಸಂಶುದ್ಧವಾದ ರೀತಿಯಲ್ಲಾಗಿದೆ ಅವರು ಜನಿಸಿದ್ದು.ಅಬೂತಾಲಿಬರ ಮನೆಯಲ್ಲಾಗಿದೆ ಜನನ.ಹೆರಿಗೆ...

ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಕರ ಪಾತ್ರ

ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಕರ ಪಾತ್ರ _✍🏻ಜಹಫರ್ ಸಾಧಿಕ್ ಕಟ್ಟದಪಡ್ಪು_ _ನಮ್ಮ ಸಮಾಜವು ನಮಗೆ ಜನ್ಮ ಕೊಟ್ಟ ತಂದೆ ತಾಯಿಯ ನಂತರ ಮಹತ್ತರವಾದ ಸ್ಥಾನವನ್ನು ಶಿಕ್ಷಕರಿಗೆ ನೀಡಿ ಗೌರವಿಸಿದೆ.  ಶಿಲ್ಪಿ...