Skip to main content

ಇಮಾಂ ಅಹ್ಮದ್ ರಝಾ ಖಾನ್ ಮುಹದ್ದಿಸೇ ಬರೇಲ್ವಿ رحمۃ اللّٰہ علیہ

ಅಅ್'ಲಾ ಹಝ್ರತ್ ಇಮಾಮೇ ಅಹ್ಲೇ ಸುನ್ನತ್ ಇಮಾಮೇ ಇಷ್ಖೋ ಮುಹಬ್ಬತ್  ಶಾಹ್ ಇಮಾಂ ಅಹ್ಮದ್ ರಝಾ ಖಾನ್ ಮುಹದ್ದಿಸೇ ಬರೇಲ್ವಿ رحمۃ اللّٰہ علیہ
◻▪◻▪◻▪◽▪◻▪◻▪
✒ _*ಮುಹಮ್ಮದ್ ಹುಸೈನ್ ರಝಾ.*_

_*بسم اللّٰہ الرحمٰن الرحیم*_

*_اَلصَّلَاةُ وَالسَّلَامُ عَلَيْكَ يَا سَيَّدِ يَارَسُولُ اللّٰه ﷺ_*

💢  *ಹುಚ್ಚ ಆರೋಗ್ಯವಂತನಾಗಿ ಮರಳಿದ.!*

_8 ರಬೀಉಲ್ ಆಖಿರ್ ಹಿಜರಿ 1335 ರಲ್ಲಿ ಹಝ್ರತ್ ಮೌಲಾನಾ ಶಾಹ್ ವಸೀ ಅಹ್ಮದ್ ಸೂರತೀ رحمۃ اللّٰہ علیہ ರವರ ಆಸ್ಥಾನದಲ್ಲಿ ಉರೂಸ್ ಸಂಧರ್ಭ ಒಬ್ಬ ಹುಚ್ಚ ಯುವಕನನ್ನು ಹಗ್ಗದಲ್ಲಿ ಕಟ್ಟಲಾದ ಸ್ಥಿತಿಯಲ್ಲಿ  ಆಲಾ ಹಝ್ರತ್ رحمۃ اللّٰہ علیہ ರವರ ಬಳಿ ಕರೆತರಲಾಯಿತು ಆತನ ಮನೆಯವರು. ಈತ ಹುಚ್ಚನಾಗಿದ್ದು ಸಾವಿರಾರು ಚಿಕಿತ್ಸೆ ಮಾಡಿದರೂ ಯಾವುದೇ ಪ್ರಯೋಜನ ಕಂಡುಬಂದಿಲ್ಲ.!  ಮತ್ತು ಹುಚ್ಚಾಸ್ಪತ್ರೆಯಲ್ಲಿ ರೋಗಿಗಳಿಗೆ ತುಂಬಾ ಹೊಡೆಯುತ್ತಾರೆ ಹಿಂಸಿಸುತ್ತಾರೆ  ಎಂಬ ಕಾರಣಕ್ಕೆ ಅಲ್ಲಿ  ದಾಖಲಿಸಲಿಲ್ಲ. ಈತನಿಗೆ ಚಿಕ್ಕ ಪುಟ್ಟ ಮಕ್ಕಳಿದ್ದಾರೆ. ಮನೆಯವರೆಲ್ಲರೂ ತುಂಬಾ ಚಿಂತೆಯಲ್ಲಿದ್ದೇವೆ ನಾವು ತಮ್ಮ ಮೇಲೆ ತುಂಬಾ ವಿಶ್ವಾಸವಿಟ್ಟು ಬಂದಿದ್ದೇವೆ ಎಂದು ತಮ್ಮ ಅಹವಾಲು ವ್ಯಕ್ತ ಪಡಿಸುತ್ತಾರೆ. ಆಲಾ ಹಝ್ರತ್ رحمۃ اللّٰہ علیہ ರವರು ಎಲ್ಲಾ ಸಂಗತಿಯನ್ನು ತುಂಬಾ ಸಾವಧಾನವಾಗಿ ಆಲಿಸಿದರು. ಬಳಿಕ ಕೆಲವು ನಿಮಿಷಗಳ ಕಾಲ ಆ ಹುಚ್ಚನ ಕಡೆ ದೃಷ್ಟಿಇಟ್ಟು ನೋಡತೊಡಗಿದರು. ತನ್ನ ದೃಷ್ಟಿ ಮೂಲಕ ರೋಗವನ್ನು ಎಳೆದುಕೊಳ್ಳುತ್ತಿದ್ದಾರೆಂಬಂತೆ ಬಾಸವಾಗುತ್ತಿತ್ತು. ಮಹಾನುಭಾವರ ದೃಷ್ಟಿ ಹರಿಸುತ್ತಿದ್ದಂತೆ ಆ ಹುಚ್ಚ ಯುವಕನ ಹುಚ್ಚುತನ ನಿಧಾನವಾಗಿ ಇಳಿಮುಖವಾಗ ತೊಡಗಿತು ಅಲ್ಪ ಸಮಯದ ಬಳಿಕ ಆತನು ನಿಶ್ಚಲವಾಗಿ ಬಿದ್ದುಬಿಟ್ಟನು. ಆಲಾ ಹಝ್ರತ್ ಇಮಾಮೆ ಅಹ್ಲೇ ಸುನ್ನತ್ ಶಾಹ್ ಇಮಾಂ ಅಹ್ಮದ್ ರಝಾ ಖಾನ್ رحمۃ اللّٰہ علیہ ರವರು ಮನೆಯವರೊಡನೆ ಹೇಳುತ್ತಾರೆ. ಈಗ ಈತ ಸರಿಯಾಗಿದ್ದಾನೆ ಹಗ್ಗವನ್ನು ಬಿಡಿಸಿ ಮನೆಗೆ ಕರೆದೊಯ್ಯಿರಿ.! ಅಲ್ಲಾಹನ ಇಷ್ಟದಾಸರಾದ  ಆಲಾ ಹಝ್ರತ್ رحمۃ اللّٰہ علیہ ರವರ ಮೇಲೆ ನಂಬಿಕೆ ಇಟ್ಟು ಬಂದ ಅವರಿಗೆ ಅಲ್ಲಾಹನು  ಎಲ್ಲಾ ಪ್ರಯಾಸಗಳು ದೂರವಾಗಿಸಿದನು ಹಾಗೂ ಅವರೆಲ್ಲರೂ  ಸಂತೋಷದೊಂದಿಗೆ  ಹಿಂತಿರುಗಿದರು.!_

*ಅವರ ಮೇಲೆ ಅಲ್ಲಾಹನ ಕಾರುಣ್ಯವೂ ಸದಾ ಕಾಲ ಉಂಟಾಗಲಿ ಅವರ ಬರಕತ್ ನಿಂದ ನಮ್ಮೆಲ್ಲರ ಪಾಪಗಳು ಮಣ್ಣಿಸಲ್ಪಡಲಿ..*
*آمین یارب العالمین بجاہ النبی الامین الکریم الرؤف الرحیم صلی اللّٰہ تعالیٰ علیہ واٰلہٖ وصحبہ وبارک وسلّم اجمعین*

_*صَلُّوا عَلَى الْحَبِيب ...*_ 

_*صَلَّى اللهُ تعالى عَلَى مُحَمَّدٍﷺ*_

▪▫▪▫▪▫▪▫▪▫▪▫

Comments

Popular posts from this blog

ಗ್ರಹಣ ನಮಾಜಿನ ರೂಪ

ಗ್ರಹಣ ನಮಾಜಿನ ರೂಪ *ಚಂದ್ರಗ್ರಹಣದ ಸುನ್ನತ್ ನಮಾಜು ಎರಡು ರಕಅತ್ ಅಲ್ಲಾಹನಿಗಾಗಿ ಜಮಾಅತ್ತಾಗಿ ನಾನು ನಿರ್ವಹಿಸುವೆನು* ಎಂದು ನಿಯ್ಯತ್ ಮಾಡಿ ಅಲ್ಲಾಹು ಅಕ್ಬರ್ ಎಂದು ಹೇಳಿ ನಮಾಜಿಗೆ ಪ್ರವೇಶಿಸುವು...

ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ. ಲೇ - ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಅಕ್ಕರೆಕೆರೆ.

ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ. ಲೇ - ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಅಕ್ಕರೆಕೆರೆ. ಆಮಿನ ಬೀವಿ ರ.ಅ ಗರ್ಭಿಣಿಯಾಗಿರುವಾಗ ವ್ಯಾಪಾರಕ್ಕಾಗಿ ಸಿರಿಯಾಕ್ಕೆ ಹೋಗಿದ್ದ ಅಬ್ದುಲ್ಲಾಹ್ (ರ.ಅ) ಮರಳಿ ಬರುವಾಗ ಮದೀನದಲ್ಲಿ ವಫಾತಾದರು.ತಂದೆಯ ಮಾವಂದಿರರಾದ ಬನುನ್ನಜ್ಜಾರ್ ಗೋತ್ರದವರ ಬಳಿ ದಫನ ಮಾಡಲಾಯಿತು.ರಬೀವುಲ್ ಹನ್ನೆರಡು ಸೋಮವಾರ ಸುಬಹಿಯ ಸ್ವಲ್ಪ ಮುಂಚೆ ಅಂತ್ಯ ಪ್ರವಾದಿ ಮುಹಮ್ಮದ್ ಮುಸ್ತಫ ಸ.ಅ ಮಕ್ಕಾದಲ್ಲಿ ಜನಿಸಿದರು.ಅಂದು ಕ್ರಿಸ್ತಶಕ 571 ಎಪ್ರಿಲ್ 21 ಆಗಿತ್ತು.ನೆಬಿ ಸ.ಅ ಜನಿಸಿದ ದಿನ ಅತ್ಯಂತ ಸಂತೋಷದಾಯಕವಾದ ದಿನವಾಗಿದೆ.ಮಾನವ ಶ್ರೇಷ್ಠರಾದ ಪ್ರವಾದಿ ಮುಹಮ್ಮದ್ ಸ.ಅ ರವರ ಮುಖಾಂತರ ಮಾನವ ಸಮೂಹವನ್ನು ಅಲ್ಲಾಹು ಅನುಗ್ರಹಿಸಿದ ಸುದಿನವಾಗಿದೆ ಅಂದು.ಮುಸಲ್ಮಾನರು ಈ ಅನುಗ್ರಹಕ್ಕೆ ಕ್ರತಜ್ಞತೆ ಸಲ್ಲಿಸಿ ಅಂದು ಮೀಲಾದುನ್ನಬಿ ಆಚರಣೆ ಮಾಡುತ್ತಾರೆ.ನೆಬಿ ಸ.ಅ ರವರ ಮದಹ್ ಕೀರ್ತನೆಗಳನ್ನು ಹೇಳಿ, ಹಾಡಿಹೊಗಳಿ ದಾನಧರ್ಮಗಳನ್ನು ನೀಡಿ ಸಂತೋಷ ಪ್ರಕಟಿಸುತ್ತಾರೆ.              ಭೂಮಿಯ ಮೇಲೆ ಜನ್ಮವೆತ್ತಿ ಬಂದ ಅತ್ಯಂತ ಉತ್ತಮನಾದ ಮನುಷ್ಯ ನೆಬಿ ಸ.ಅ ಆಗಿದ್ದಾರೆ.ಮುಂಜಿಕರ್ಮ ನಿರ್ವಹಿಸಲ್ಪಟ್ಟ,ಹೊಕ್ಕುಳ ಬಳ್ಳಿ ಕತ್ತರಿಸಲ್ಪಟ್ಟ,ಕಣ್ಣಿಗೆ ಸುರುಮ ಹಾಕಲ್ಪಟ್ಟ ಸ್ಥಿತಿಯಲ್ಲಿ ಸಂಪೂರ್ಣ ಸಂಶುದ್ಧವಾದ ರೀತಿಯಲ್ಲಾಗಿದೆ ಅವರು ಜನಿಸಿದ್ದು.ಅಬೂತಾಲಿಬರ ಮನೆಯಲ್ಲಾಗಿದೆ ಜನನ.ಹೆರಿಗೆ...

ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಕರ ಪಾತ್ರ

ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಕರ ಪಾತ್ರ _✍🏻ಜಹಫರ್ ಸಾಧಿಕ್ ಕಟ್ಟದಪಡ್ಪು_ _ನಮ್ಮ ಸಮಾಜವು ನಮಗೆ ಜನ್ಮ ಕೊಟ್ಟ ತಂದೆ ತಾಯಿಯ ನಂತರ ಮಹತ್ತರವಾದ ಸ್ಥಾನವನ್ನು ಶಿಕ್ಷಕರಿಗೆ ನೀಡಿ ಗೌರವಿಸಿದೆ.  ಶಿಲ್ಪಿ...