ಪ್ರವಾದೀ ﷺِ ತಂಙಳ ಮೇಲೆ ಪ್ರೀತಿ ಜಾಸ್ತಿಯಾಗಲು ಕೆಲವು ಮಾರ್ಗಗಳು
*الصلاه والسلام عليك يا سيدي يا رسول الله صلى الله عليه وسلم*
✒ಅಬ್ದುಲ್ ನಾಸಿರ್ ಕಾವೂರು🍇
*ಪುಣ್ಯ ಪ್ರವಾದೀ ﷺِ ಪ್ರೇಮವೆಂಬುವುದು ಅದೊಂದು ಮಹಾ ಪ್ರೇಮಲೋಕ ಅದರಲ್ಲಿ ವಿಹರಿಸಲು ನಮಗೆ ಸಾಧ್ಯವೇ ಇಲ್ಲ. (ಪ್ರವಾದೀ ﷺِ ಪ್ರೇಮವೆಂಬುವುದು ಸಮುದ್ರ ಅಂತ ಭಾವಿಸಿ. ಅದರಲ್ಲಿ ಸಂಪೂರ್ಣ ಈಜಲು ನಮಗೆ ಸಾಧ್ಯವಿಲ್ಲ ಆದರೆ ಅದರ ತೀರಕ್ಕೆ ಹೋಗಿ ಆಡಲು ನಮಗೆ ಸಾಧ್ಯವಿದೆ. ಅದಾಗಿದೆ ನಮ್ಮ ಪ್ರವಾದೀ ﷺِ ಪ್ರೇಮ. ಅದರಲ್ಲಿ ಪೂರ್ಣವಾಗಿ ವಿಹರಿಸಲು ಸಾಧ್ಯವಿಲ್ಲದಿದ್ದರೂ ಅದರ ಒಂದು ತೀರಕ್ಕೆ ಹೋಗಿ ಆ ಪ್ರೇಮವನ್ನು ಅನುಭವಿಸಲು ಶ್ರಮಿಸಬೇಕು. ಅದಕ್ಕಾಗಿದೆ ಈ ಕಿರು ಬರಹ*
ಅಲ್ಲಾಹು ಸ್ವೀಕರಿಸಲಿ.
*صَلَّى اللهُ عَلَيْكَ يَارَسُولَ الله ﷺ*
*ಆಮೀನ್*
ಪ್ರವಾದೀ ﷺ ಪ್ರೇಮದಲ್ಲಿ ಸಂಪೂರ್ಣವಾಗಿ ಈಜಾಡಿ ಪ್ರೇಮ ರಸವನ್ನು ಹೀರಿದ ಮಹಾನುಭಾವರಾಗಿದ್ದಾರೆ. ನಾನು ಅತೀ ಹೆಚ್ಚು ಇಷ್ಟ ಪಡುವ *ಇಮಾಮೇ ಇಷ್ಕೋ ಮುಹಬ್ಬತ್ ಇಮಾಂ ಅಹ್ಮದ್ ರಝಾ ಖಾನ್ ಅಲೈಹಿ ರಹ್ಮತಿ ವರ್ರಿಲ್ವಾನ್(ಬರೇಲ್ವಿ ಶರೀಫ್)* ಮಹಾನುಭಾವರಿಗೆ ಈ ಬರಹ ಸಮರ್ಪಿಸುತ್ತಿದ್ದೇನೆ.
*ಪುಣ್ಯ ಪ್ರವಾದೀ ﷺِ ತಂಙಳ ಪ್ರೇಮಕ್ಕೆ ಯಾವುದೇ ರೂಪ ಭಾವವಿಲ್ಲ (ಅದು ಹಾಗೆ ಮಾತ್ರ ಇರಬೇಕು. ಹೀಗೆ ಇರಬಾರದು ಎನ್ನುವ ನಿಬಂಧನೆಯಿಲ್ಲ.) ಅದು ಒಬ್ಬೊಬ್ಬರ ಮನಸ್ಸಲ್ಲಿ ಒಂದೊಂದು ರೂಪದಲ್ಲಿ ಪ್ರಕಟವಾಗುತ್ತದೆ. ಕೆಲವೊಬ್ಬರ ಪ್ರೇಮವು ನೋಡಿದಾಗ ನಮ್ಮ ಪ್ರೇಮಕ್ಕೆ ವಿರುದ್ಧದಂತೆ ಭಾಸವಾಗುತ್ತದೆ. ಆದರೂ ಕೂಡಾ ಅವೆರಡೂ ಪ್ರೇಮವಾಗಿರುತ್ತದೆ.*
ಉದಾಹರಣೆಗೆ ನೋಡಿ;
ಒಬ್ಬರು ಮದೀನಾಕ್ಕೆ ಹೋಗಬೇಕೆಂದು ಆಸೆಪಡುತ್ತಾರೆ. (ಆ ವಿಭಾಗದಲ್ಲಿ ನಾವೆಲ್ಲರೂ ಇದ್ದೇವೆ. ಮದೀನಾಕ್ಕೆ ಹೋಗಲು ಆಸೆಯಿರದ ಯಾರಿದ್ದಾರೆ ಅಲ್ವಾ....? )
ಇನ್ನು ಕೆಲವರು ಮದೀನಾಕ್ಕೆ ಹೋಗುವ ಎಲ್ಲಾ ರೀತಿಯ ಸಲವತ್ತುಗಳಿದ್ದರೂ ಆ ಪುಣ್ಯ ಭೂಮಿಗೆ ಹೋಗದೆ ಪ್ರೇಮವನ್ನು ಪ್ರಕಟಿಸುತ್ತಾರೆ. ಅದಕ್ಕೆ ಅವರು ಹೇಳುವ ಕಾರಣವೇನೆಂದರೆ ಆ ಪುಣ್ಯ ಭೂಮಿಗೆ ಈ ಪಾಪಿಯ ಕಾಲು ಸ್ಪರ್ಶವಾಗುವುದು ನನಗೆ ಇಷ್ಟವಿಲ್ಲ, ಅಲ್ಲಿಗೆ ಹೋಗಲು ಈ ಪಾಪಿಗೆ ಯೋಗ್ಯತೆಯಿಲ್ಲ, ನಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮರ ಪಾದಸ್ಪರ್ಶಗೊಂಡ ಪುಣ್ಯ ಮಣ್ಣಿಗೆ ನನ್ನ ಪಾದ ಸ್ಪರ್ಶವಾಗುವುದು ನನಗೆ ಇಷ್ಟವಿಲ್ಲ, ಆ ಪುಣ್ಯ ಭೂಮಿ ಕಾಲು ಇಟ್ಟು ನಡೆಯುವ ಸ್ಥಳವಲ್ಲ ಎನ್ನುವ ಹತ್ತಲವಾರು ಪ್ರೇಮದಿಂದ ಕೂಡಿದ ವಿನಯದ ಮಾತುಗಳಾಗಿದೆ ಮದೀನಾಕ್ಕೆ ಹೋಗದೆ ಮಹಾ ಪ್ರೇಮ ಪಕಟಿಸುವ ಆಶಿಖ್'ಗಳ ಮಾತು.
*(ಮೇಲಿನ ಎರಡು ವಿಷಯಗಳು ಪರಸ್ಪರ ವಿರುದ್ಧವಾದವುಗಳಾದರೂ ಎರಡೂ ಪ್ರೇಮವೇ ಆಗಿದೆ.)*
ಅಂದು ಬಿಲಾಲ್ ರಲಿಯಲ್ಲಾಹು ಅನ್ಹು ರವರು ಪುಣ್ಯ ಮದೀನಾವನ್ನು ಬಿಟ್ಟು ಹೋಗಿದ್ದು ಯಾಕೆಂದು ಎಲ್ಲರಿಗೂ ಗೊತ್ತಿರುವ ವಿಷಯ. ಅವರು ಪುಣ್ಯ ಮದೀನಾವನ್ನು ತೊರೆದದ್ದು ಕೂಡಾ ಪ್ರೇಮದಿಂದಲೇ ಆಗಿದೆ. ಪ್ರೇಮ ಎಂದರೆ ಹಾಗೆಯೇ ಅದಕ್ಕೆ ಇಂತಹದ್ದೇ ರೂಪ ಅಂತ ಇರಲ್ಲ. ಅದು ಯಾವ ರೀತಿಯಲ್ಲಿ ಬೇಕಾದರೂ ಪ್ರಕಟವಾಗಬಹುದು. ಅದಕ್ಕೆ ಖುರ್ ಆನ್, ಹದೀಸ್ ಮೂಲಕ ಪುರಾವೆ ಹುಡುಕುವ ಅಗತ್ಯವಿಲ್ಲ. ಇಮಾಂ ಮಾಲಿಕ್ ರಲಿಯಲ್ಲಾಹು ಅನ್ಹು ರವರು ಮದೀನಾದಲ್ಲಿ ಹಲವಾರು ವರ್ಷ ದರ್ಸ್ ನಡೆಸಿದ ಮಹಾನುಭಾವರು. ಅವರು ಪುಣ್ಯ ಮದೀನಾದಲ್ಲಿ ವಾಹನದಲ್ಲಿ ಸಂಚರಿಸಿಲ್ಲ. ಇದು ಖುರ್ ಆನ್ ನೋಡಿಯೋ, ಹದೀಸ್ ನೋಡಿಯೋ ಅಲ್ಲ. ಬದಲಾಗಿ ಇದು ಮಹಾನುಭಾವರಿಗೆ ಮದೀನಾದ ಬಗ್ಗೆಯಿರುವ ಇರುವ ಪ್ರೇಮದಿಂದಾಗಿದೆ. ಹೀಗೆ ಅದೆಷ್ಟು ಸ್ವಹಾಬಿಗಳ, ಇಮಾಮರುಗಳ ಘಟನೆಗಳು ನಾವು ಕೇಳಿದ್ದೇವೆ.
ಸ್ವಹಾಬಿಗಳ ಪ್ರೇಮದ ಮುಂದೆ ನಮ್ದು ಏನೂ ಇಲ್ಲ. ನಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮ್ ತಂಙಳ ಪವಿತ್ರ ಶರೀರದ ರಕ್ತವನ್ನು ಕುಡಿದ ಸ್ವಹಾಬಿಗಳಿದ್ದಾರೆ. ಅದನ್ನು ಮಾಡುವಾಗ ಅವರು ಖುರ್ ಆನ್ ಹದೀಸ್ ನೋಡಲಿಲ್ಲ. ಪ್ರೇಮವೆಂಬುವುದು ಅದೊಂದು ಬೇರೆಯೇ ಸುಂದರ ಲೋಕ. ಅದರಲ್ಲಿ ವಿಹರಿಸುವವನಿಗೆ ಮಾತ್ರ ಅದರ ರುಚಿ ಅರಿಯುವುದು.
ಮುಂದೆ ಬರೆಯುವ ಕೆಲವೊಂದು ವಿಷಯಗಳಿಗೆ ಕೆಲವರಿಗೆ ಸಂಶಯ ಮೂಡಬಹುದು. ಹೀಗೆ ಮಾಡಲು ಖುರ್ ಆನ್ ಹೇಳಿದೆಯಾ...? ಕಿತಾಬಿನಲ್ಲಿ ಹೇಳಿದೆಯಾ...? ಹದೀಸ್ ನಲ್ಲಿದೆಯಾ...? ಎಂದೆಲ್ಲಾ ಕೆಲವರಿಗೆ ಪ್ರಶ್ನೆ ಮೂಡಬಹುದು, ಆದರೆ ಆಶಿಖ್'ಗಳಾದ ಒಬ್ಬರಿಗೂ ಅದರ ಬಗ್ಗೆ ಒಂದಿಂಚೂ ವಸ್ವಾಸಾಗಲು ಸಾಧ್ಯವಿಲ್ಲ.
*ನಮಗೆ ಪುಣ್ಯ ಪ್ರವಾದೀ ﷺ ತಂಙಳ್ ಮೇಲೆ ಪ್ರೇಮ ಅಧಿಕವಾಗಲು ನನ್ನ ಮನಸ್ಸಿನಲ್ಲಿ ಬಂದ ಕೆಲವೊಂದು ಮಾರ್ಗಗಳು. (ಮೊದಲು ಸ್ವಂತ ನನ್ನ ಶರೀರಕ್ಕೆ ಹೇಳುತ್ತಾ....)*⬇⬇⬇
*💚ಪುಣ್ಯ ಪ್ರವಾದೀ ﷺ ತಂಙಳ ಮೇಲೆ ಅತೀ ಹೆಚ್ಚು ಸ್ವಲಾತ್ ಹೇಳುವುದು....*
*💚ಪುಣ್ಯ ಪ್ರವಾದೀ ﷺ ತಂಙಳ ಹೆಸರು ಕೇಳಿದ ತಕ್ಷಣ ಸ್ವಲಾತನ್ನು ಜೋರಾಗಿ ಹೇಳುವುದು....*
*💚ಪುಣ್ಯ ಪ್ರವಾದೀ ﷺ ತಂಙಳ ಮಧ್ಹ್ ಸದಾ ಹಾಡುತ್ತಿರುವುದು....*
*ಮತ್ತು ಕೇಳುತ್ತಿರುವುದು....*
*💚ಪುಣ್ಯ ಪ್ರವಾದೀ ﷺ ತಂಙಳ ಬಗ್ಗೆಯಿರುವ ಪ್ರಭಾಷಣಗಳು ಕೇಳುತ್ತಿರುವುದು....*
*ಮತ್ತು ಪುಸ್ತಕಗಳು ಓದುವುದು....*
*💚ಪುಣ್ಯ ಪ್ರವಾದೀ ﷺ ತಂಙಳನ್ನು ಪ್ರೀತಿಸಿ ಜೀವನವನ್ನು ಕಳೆದ ಮಹಾನುಭಾವರನ್ನು ಅತಿಯಾಗಿ ಪ್ರೀತಿಸುವುದು....*
*💚ಪುಣ್ಯ ಪ್ರವಾದೀ ﷺ ತಂಙಳನ್ನು ಪ್ರೀತಿಸುವ ಆಶಿಖ್'ಗಳಾದ ಸ್ನೇಹಿತರ ಜೊತೆ ಸ್ನೇಹ ಬೆಳೆಸುವುದು....*
*💚ಮಲಗುವಾಗ ವುಳೂ ನಿರ್ವಹಿಸಿ ಪುಣ್ಯ ಪ್ರವಾದೀ ﷺ ತಂಙಳ ಕನಸು ಕಾಣಲು ದುಆ ಮಾಡಿ ಸ್ವಲಾತ್ ಹೇಳುತ್ತಾ ಹೇಳುತ್ತಾ ಮಲಗುವುದು....*
*💚ಪುಣ್ಯ ಪ್ರವಾದೀ ﷺ ತಂಙಳ ಬಗ್ಗೆ ಎಷ್ಟು ಸಾಧ್ಯವೋ ಅಷ್ಟೂ ಅರಿಯುವುದು. ಮತ್ತು ಇನ್ನೂ ಇನ್ನೂ ಅರಿಯಲು ಆಗ್ರಹಿಸುವುದು....*
*💚ಯಾರಲ್ಲಾದರೂ ಮಾತನಾಡಲು ಪ್ರಾರಂಭಿಸುವಾಗ ಸಲಾಂ ಹೇಳಿದ ನಂತರ ಒಂದು ಸ್ವಲಾತ್ ಹೇಳಿ ಪ್ರಾರಂಭಿಸುವುದು. ಇದರಿಂದ ಮಾತಿನಲ್ಲಿ ಬರುವ ಅನಾವಶ್ಯ ವಿಷಯಗಳಿಗೆ ಮತ್ತು ಅಶ್ಲೀಲ ಪದಗಳಿಗೆ ಕಡಿವಾಣ ಹಾಕಲು ಸಾಧ್ಯವಿದೆ....*
*💚ಪುಣ್ಯ ಪ್ರವಾದೀ ﷺ ತಂಙಳ ಪವಿತ್ರ ಪಾದರಕ್ಷೆಯ ಆಕೃತಿಯನ್ನು ನೋಡುತ್ತಾ ಆನಂದ ಪಡುವುದು....*
*💚ಪುಣ್ಯ ಪ್ರವಾದೀ ﷺ ತಂಙಳ ಪವಿತ್ರ ನಅಲ್ ಮುಬಾರಕನ್ನು (ಅದರ ಗೌರವಕ್ಕೆ ಧಕ್ಕೆ ಬರುವುದಿಲ್ಲವಾದರೆ) ತಲೆಯ ಮೇಲೆ ಹೊತ್ತು ನಡೆಯುವುದು. ಅಂದರೆ ನಅಲ್ ಮುಬಾರಕ್ ಇರುವ ಟೊಪ್ಪಿಯನ್ನು ಧರಿಸುವುದು. ಅಥವಾ ಟೊಪ್ಪಿಯ ಒಳಗಡೆ ತಲೆಯ ಮೇಲೆ ಪವಿತ್ರ ನಅಲ್ ಮುಬಾರಕ್ ನಕ್ಷೆ ಮಾಡಿ ಇಡುವುದು. (ಇದರ ಗೌರವಕ್ಕೆ ಧಕ್ಕೆ ಬರುವುದದಿಂದ ಹಲವಾರು ಮಂದಿ ಹೀಗೆ ಮಾಡಲ್ಲ. ಮೇಲೆ ಹೇಳಿದಂತೆ ಇದೂ ಕೂಡಾ ಪರಸ್ಪರ ವಿರುದ್ಧವಾದರೂ ಎರಡೂ ಪ್ರೇಮವೇ....*
*💚ಪುಣ್ಯ ಪ್ರವಾದೀ ﷺ ತಂಙಳ ಆಸಾರ್ ಗಳ ಚಿತ್ರಗಳನ್ನು, ತನ್ನ ಮನೆಯಲ್ಲಿ ಒಳ್ಳೆಯ ಫ್ರೇಮ್ ಮಾಡಿಸಿ ಇಡುವುದು. ಪುಣ್ಯ ಖುಬ್ಬದ ಚಿತ್ರ, ಪುಣ್ಯ ನಅಲ್ ಮುಬಾರಕ್ ಚಿತ್ರ, ಮದೀನಾ ಚಿತ್ರ, ಪುಣ್ಯ ಪ್ರವಾದೀ ﷺ ತಂಙಳ್ ಉಪಯೋಗಿಸಿದ ಹಲವಾರು ವಸ್ತುಗಳು ಇಂದೂ ಸೂಕ್ಷಿಸಲ್ಪಟ್ಟಿದೆ. ಅದರ ಚಿತ್ರಗಳನ್ನು ಮನೆಯಲ್ಲಿ ಬರ್ಕತ್ಗಾಗಿ ಇಡುವುದು ಮತ್ತು ಅದನ್ನು ನಿತ್ಯವೋ ನೋಡುತ್ತಾ ಆನಂದಿಸುವುದು....*
*💚ಪುಣ್ಯ ಪ್ರವಾದೀ ﷺ ತಂಙಳ ಬಗ್ಗೆ ಇಮಾಂ ಬೂಸೂರಿ ರಲಿಯಲ್ಲಾಹು ಅನ್ಹು ರವರು ರಚಿಸಿದ ಬುರ್ದಾ ಹಾಡುವುದು. ಮತ್ತು ಆಲಿಸುವುದು. ಬುರ್ದಾದ ಒಂದೆರೆಡು ಗೆರೆಗಳನ್ನು ಬರೆದು ಮನೆಯ ಗೋಡೆಯ ಮೇಲೆ ಇಡುವುದು....*
*💚ಪುಣ್ಯ ಪ್ರವಾದೀ ﷺ ತಂಙಳ್'ರಿಗೆ ಇಷ್ಟವಾದದ್ದವುಗಳನ್ನು ನಾವೂ ಇಷ್ಟಪಡುವುದು. ಉದಾ; ಅಜ್ವಾ ಖರ್ಜೂರವೆಂದರೆ ನಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮರಿಗೆ ತುಂಬಾ ಇಷ್ಟ ಅದು ನಮಗೆ ಸಿಕ್ಕರೆ ಅದನ್ನು ತಿಂದು ಅದರ ಬೀಜವನ್ನು ಜೋಪಾನವಾಗಿ ಇಡುವುದು. ಇಂದಿಗೂ ಪ್ರೇಮದಿಂದ ಆ ಖರ್ಜೂರವನ್ನು ತಿನ್ನದೆ ಇರುವ ಅದೆಷ್ಟೋ ಆಶಿಖ್ ಗಳಿದ್ದಾರೆ. ಅದರ ಬೀಜವನ್ನು ಎಸೆಯದೆ ಜೋಪಾನವಾಗಿಡುವ ಅದೆಷ್ಟೋ ಮಂದಿ ನಮ್ಮೆಡೆಯಲ್ಲಿದ್ದಾರೆ. ಇದೆಲ್ಲಾ ಪ್ರೇಮವಾಗಿದೆ. ಪ್ರೇಮವೆಂದರೆ ಹಾಗೆಯೇ ಅದು ಸಾಮಾನ್ಯ ಜನರಿಗೆ ವಿಚಿತ್ರವೆನಿಸಬಹುದು, ಆದರೆ ಆಶಿಖ್'ಗಳಿಗೆ ಅದು ತುಂಬಾ ಪವಿತ್ರವಾದವುಗಳಾಗಿರುತ್ತದೆ....*
*💚ಪುಣ್ಯ ಪ್ರವಾದೀ ﷺ ತಂಙಳರು ಹೇಗೆ ಆಹಾರ ತಿಂದಿದ್ದಾರೆ..? ಹೇಗೆ ನೀರು ಕುಡಿದಿದ್ದಾರೆ..? ಹೇಗೆ ಹಲ್ಲುಜ್ಜಿದ್ದಾರೆ..? ಎಂದೆಲ್ಲಾ ಅರಿತು ಅದೇ ರೀತಿ ಮಾಡಲು ಶ್ರಮಿಸುವುದು....*
*💚ಪುಣ್ಯ ಪ್ರವಾದೀ ﷺ ತಂಙಳ ಏನೇ ಆಸಾರ್ ಗಳ ಫೋಟೋ ಕಂಡರೂ ತುಂಬಾ ಆನಂದ ಪಡುವುದು....*
*💚ಪುಣ್ಯ ಪ್ರವಾದೀ ﷺ ತಂಙಳ ಕನಸು ಕಂಡ ಮಹಾತ್ಮರ ಬಗ್ಗೆ ಅರಿಯುವುದು. ನನಗೂ ಪುಣ್ಯ ಪ್ರವಾದೀ ﷺ ತಂಙಳ ಕನಸು ಕಾಣಬೇಕೆಂದು ಅತಿಯಾದ ಆಗ್ರಹದಿಂದ ದಿನ ಕಳೆಯುವುದು....*
*💚ಪುಣ್ಯ ಪ್ರವಾದೀ ﷺ ತಂಙಳರ ಸುನ್ನತ್ ಗಳನ್ನು ಪಾಲಿಸುವುದು....*
*💚ಪುಣ್ಯ ಪ್ರವಾದೀ ﷺ ತಂಙಳ ಜೊತೆ ಸ್ವರ್ಗದಲ್ಲಿ ಒಗ್ಗೂಡಲು ಮತ್ತು ಸ್ವರ್ಗಲೋಕದಲ್ಲಿ ನಡೆಯುವ ದೀರ್ಘವಾದ ಅಲ್ಲಿಯ ﷺ ಎರಡು ಮದುವೆ ಕಾರ್ಯದಲ್ಲಿ ಭಾಗವಹಿಸಲು ಮನಸ್ಸಿನಲ್ಲಿ ಸದಾ ಆಗ್ರಹಿಸಿ ದುಆ ಮಾಡುವುದು....*
*💚ಪುಣ್ಯ ಪ್ರವಾದೀ ﷺ ತಂಙಳರಿಗೆ ಇಷ್ಟವಾದ ಹಣ್ಣು ತರಕಾರಿ ಮತ್ತು ಏನೆಲ್ಲಾ ಇದೆಯೋ ಅದನ್ನೆಲ್ಲಾ ಇಷ್ಟಪಡುವುದು....*
*💚ಪುಣ್ಯ ಪ್ರವಾದೀ ﷺ ತಂಙಳ ಶಫಾಅತ್ ಲಭಿಸಲು, ಹೌಲುಲ್ ಕೌಸರ್ ಲಭಿಸಲು, ಮೀಝಾನ್ ನಲ್ಲಿ ಅಲೆಯುವಾಗ ಪುಣ್ಯ ಪ್ರವಾದೀ ﷺ ತಂಙಳ ಸಹಾಯ ಲಭಿಸಲು, ಮರಣ ಹೊಂದುವಾಗ ಪುಣ್ಯ ಪ್ರವಾದೀ ﷺ ತಂಙಳ ಪ್ರಜ್ವಲಭರಿತ ಪ್ರಶೋಭಿತ ಮಂದಹಾಸಬೀರಿದ ಪವಿತ್ರ ಮುಖವನ್ನು ಕಂಡು ಮರಣ ಹೊಂದಲು, ಖಬರಿನಲ್ಲಿ ಪುಣ್ಯ ಪ್ರವಾದೀ ﷺ ತಂಙಳ ಪ್ರಕಾಶ ಲಭಿಸಲು, ಸ್ವಿರಾತ್ ಸೇತುವೆ ದಾಟುವಾಗ ಪುಣ್ಯ ಪ್ರವಾದೀ ﷺ ತಂಙಳ ಕೈ ಹಿಡಿದು ರಕ್ಷೆ ಹೊಂದಲು, ಪುಣ್ಯ ಪ್ರವಾದೀ ﷺ ತಂಙಳರು ಲಿವಾವುಲ್ ಹಂದ್ ಪತಾಕೆ ಹಿಡಿದು ಸ್ವರ್ಗ ಉಧ್ವಾಟನೆ ಮಾಡುವಾಗ ಅದನ್ನು ಕಣ್ತುಂಬಿ ಕಾಣಲು, ಮುಂತಾದ ಹಲವಾರು ಭಾಗ್ಯಗಳು ಲಭಿಸಲು ಆಸೆ ಪಡುವುದು. ಯೋಗ್ಯತೆಯಿಲ್ಲದಿದ್ದರೂ ಅದೆಲ್ಲಾ ಲಭಿಸಲು ಬೇಕಾಗಿ ದುಆ ಮಾಡುವುದು....*
*💚ಪುಣ್ಯ ಪ್ರವಾದೀ ﷺ ತಂಙಳ ಬಗ್ಗೆ ಏನೆಲ್ಲಾ ಆಸೆಯಿದೆಯೂ ಅದನ್ನೆಲ್ಲಾ ಮನಸ್ಸಲ್ಲಿ ತಂದು ಸದಾ ಅದರ ಬಗ್ಗೆಯೇ ಅಲೋಚಿಸುತ್ತಾ ದುಆ ಮಾಡುತ್ತಾ ಜೀವನವನ್ನು ಸಾಗಿಸಿದರೆ ಪುಣ್ಯ ಪ್ರವಾದೀ ﷺ ತಂಙಳ ಪ್ರೇಮವನ್ನು ಅನುಭವಿಸಬಹುದು....*
*💚ಪುಣ್ಯ ಪ್ರವಾದೀ ﷺ ತಂಙಳನ್ನು ಪ್ರೇಮಿಸಿ ಸೋತು ಹೋದವರು ಒಬ್ಬರೂ ಇಲ್ಲ....*
*💚ಪುಣ್ಯ ಪ್ರವಾದೀ ﷺ ತಂಙಳ ಮೇಲಿರುವ ಪ್ರೇಮವು....*
*ಬೇಸರ ನೀಡದ....*
*ಸಿಹಿ ಸಿಹಿಯಾದ....*
*ಮುರಿಯಲ್ಪಡದ....*
*ಶಾಶ್ವತವಾದ....*
*ವಂಚನೆಯಿಲ್ಲದ....*
*ಎಲ್ಲಾ ದುಃಖವನ್ನೂ ಅಳಿಸಿ ಹಾಕುವ....*
*ಸದಾ ನೆಮ್ಮದಿ ಸಿಗುವ ಪರಿಶುದ್ಧವಾದ ಪ್ರೇಮವಾಗಿದೆ....*
*ಆದ್ದರಿಂದ ಪುಣ್ಯ ಪ್ರವಾದೀ ﷺ ತಂಙಳ ಪ್ರೇಮದಲ್ಲಿ ಸಂಪೂರ್ಣವಾಗಿ ವಿಹರಿಸಲು ಸಾಧ್ಯವಿಲ್ಲದಿದ್ದರೂ ನಮ್ಮಿಂದ ಸಾಧ್ಯವಾಗುವ ಮಟ್ಟಕ್ಕೆ ತಲುಪಲು ಸದಾ ಶ್ರಮ ಪಡಬೇಕಾಗಿದೆ....*
*ಅಲ್ಲಾಹು ನಮ್ಮೆಲ್ಲರನ್ನೂ ಪುಣ್ಯ ಪ್ರವಾದೀ ﷺ ತಂಙಳ ಪ್ರೇಮಿಗಳ ಸಾಲಿನಲ್ಲಿ ಸೇರಿಸಲಿ. ಮತ್ತು ಆ ﷺ ಪುಣ್ಯ ಪ್ರೇಮ ರಸವನ್ನು ಸಾಧ್ಯವಾಗುವ ಮಟ್ಟದಲ್ಲಿ ಹೀರಿ ಜೀವನ ಸಾಗಿಸಲು ಅಲ್ಲಾಹು ತೌಫಿಖ್ ನೀಡಲಿ.*
*صَلَّى اللهُ عَلَيْكَ يَارَسُولَ الله ﷺ*
*ಆಮೀನ್ ಯಾ ರಬ್ಬಲ್ ಆಲಮೀನ್*
💎💎💎💎💎💎💎💎💎
*💚ಪುಣ್ಯ ಪ್ರವಾದೀ ﷺ ತಂಙಳ ಮೇಲೆ ಪ್ರೀತಿಯಿಂದ 3 ಸ್ವಲಾತನ್ನು ಹೇಳಿ (ಹೇಳಿರಿ) ಬರಹಕ್ಕೆ ವಿರಾಮ.*
💚💚💚💚💚💚💚💚💚
*اللهم صلي على سيدنا محمد وعلى اله وصحبه وسلم*
*اللهم صلي على سيدنا محمد وعلى اله وصحبه وسلم*
*اللهم صلي على سيدنا محمد وعلى اله وصحبه وسلم*
💚💚💚💚💚💚💚💚💚
*ದುಆ ವಸಿಯ್ಯತ್ ನೊಂದಿಗೆ...*
*✒ಅಬ್ದುಲ್ ನಾಸಿರ್ ಕಾವೂರು🍇*
➖➖➖➖➖➖➖➖➖
Comments