Skip to main content

ಕ್ಯಾಂಡಲ್ ನ ಪ್ರತಿಭೆ



🎓🎓 ಮಾಸ್ಟರ್ ಮೈಂಡ್ 🎓🎓

 ಕ್ಯಾಂಡಲ್ ನ ಪ್ರತಿಭೆ

      ಅಂದು ಮನೆಯಲ್ಲಿ ಕತ್ತಲೆಯನ್ನು ನೀಗಿಸಲು ಕ್ಯಾಂಡಲ್ ದೀಪವನ್ನು ಬಳಸುತ್ತಿದ್ದರು.
ಕಾಲವು ಉರುಳುತ್ತಿದ್ದಂತೆ ವಿದ್ಯುತ್ ದೀಪದ ಬಳಕೆ,ಇನ್ವರ್ಟರ್ ಬಳಕೆಯು
ಕ್ಯಾಂಡಲ್ ದೀಪವನ್ನು ಬದಿಗಿರಿಸುವಂತೆ ಮಾಡಿದ್ದು ಸುಳ್ಳಲ್ಲ.
ಆದರೆ, ಕ್ಯಾಂಡಲ್ ತನ್ನ ಮೇಲೆ ಇಟ್ಟಿರುವ ಕಾನ್ಫಿಡೆನ್ಸ್  ಮತ್ತು ಪೇಶೆನ್ಸ್ ಅಪಾರ.

ಕ್ಯಾಂಡಲ್ ತನ್ನ ಪ್ರತಿಭಾ ಪ್ರದರ್ಶನಕ್ಕೆ ಸೂಕ್ತ ವೇದಿಕೆ ಕಾಯುತ್ತಿತ್ತೇೂ ಏನೇೂ....

ಮೊನ್ನೆ ನೆರೆ ಹಾವಳಿಯಿಂದ ಉಳ್ಳಾಲದ ಕೆಲವು ಮನೆಗಳಿಗೂ ನೀರು ನುಗ್ಗಿತ್ತು. ಸರಿಸುಮಾರು 300 ರಷ್ಟು ಕುಟುಂಬ ವಿದ್ಯುತ್ ಇಲ್ಲದೆ ಕುಡಿಯಲು ನೀರೂ ಇಲ್ಲದೆ ಕತ್ತಲೆಯಲ್ಲಿ ರಾತ್ರಿ ಕಳೆಯುತ್ತಿತ್ತು.

ವಿಷಯ ತಿಳಿದ ಊರಿನ SYS, SSF ಕಾರ್ಯಕರ್ತರು ಪ್ರತಿ ಮನೆಗೂ 20 ಲೀಟರ್ ಕುಡಿಯುವ ನೀರಿನ ಬಾಟಲ್ ನೊಂದಿಗೆ ಕ್ಯಾಂಡಲನ್ನೂ ವಿತರಿಸಿದ್ದರು.
ಮನೆಯವರಿಗೆಲ್ಲಾ ಕತ್ತಲೆಯಿಂದ ಬೆಳಕಿನೆಡೆಗೆ ಬಂದ ನೆಮ್ಮದಿಯಾದರೆ ಇತ್ತ ಕ್ಯಾಂಡಲ್ ಗೂ ಪ್ರತಿಭೇೂತ್ಸವದ ಅನುಭವ.
ಕಾರಣ ಅಂದು ರಾತ್ರಿ ವಿತರಣೆ ಮಾಡಿದ ಕ್ಯಾಂಡಲ್ ನ ಸಂಖ್ಯೆ ಸುಮಾರು 1000 ಆಗಿತ್ತು.
ಮತ್ತೆ ಕ್ಯಾಂಡಲ್ ಸಂತಸ ಪಡುವುದರಲ್ಲಿ ಸಂದೇಹವಿಲ್ಲ !

ಎಲ್ಲದಕ್ಕೂ ಒಂದೊಂದು ಕಾಲವಿದೆ ಎಂಬುವುದು ಸತ್ಯ.
ಎಲ್ಲವೂ ಇದೇ ರೀತಿಯಾಗಿರಬಹುದು.

'ಚಿಂತೆಯೇತಕೆ ಪ್ರತಿಭೆಗೆ
ಬಂದೆ ಬರುವುದು ಬೆಳಕಿಗೆ,
ಮರೆಯಲಿದ್ದರು ಮಲ್ಲಿಗೆ
ಕಂಪ ಸೂಸುತ ಮೆಲ್ಲಗೆ
ಗಮನ ಸೆಳೆವುದಲ್ಲಿಗೆ
ತಾನಿರುವಲ್ಲಿಗೆ'.

✍ *Musthafa Master Ullal*
*======================*

Comments

Popular posts from this blog

ಗ್ರಹಣ ನಮಾಜಿನ ರೂಪ

ಗ್ರಹಣ ನಮಾಜಿನ ರೂಪ *ಚಂದ್ರಗ್ರಹಣದ ಸುನ್ನತ್ ನಮಾಜು ಎರಡು ರಕಅತ್ ಅಲ್ಲಾಹನಿಗಾಗಿ ಜಮಾಅತ್ತಾಗಿ ನಾನು ನಿರ್ವಹಿಸುವೆನು* ಎಂದು ನಿಯ್ಯತ್ ಮಾಡಿ ಅಲ್ಲಾಹು ಅಕ್ಬರ್ ಎಂದು ಹೇಳಿ ನಮಾಜಿಗೆ ಪ್ರವೇಶಿಸುವು...

ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ. ಲೇ - ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಅಕ್ಕರೆಕೆರೆ.

ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ. ಲೇ - ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಅಕ್ಕರೆಕೆರೆ. ಆಮಿನ ಬೀವಿ ರ.ಅ ಗರ್ಭಿಣಿಯಾಗಿರುವಾಗ ವ್ಯಾಪಾರಕ್ಕಾಗಿ ಸಿರಿಯಾಕ್ಕೆ ಹೋಗಿದ್ದ ಅಬ್ದುಲ್ಲಾಹ್ (ರ.ಅ) ಮರಳಿ ಬರುವಾಗ ಮದೀನದಲ್ಲಿ ವಫಾತಾದರು.ತಂದೆಯ ಮಾವಂದಿರರಾದ ಬನುನ್ನಜ್ಜಾರ್ ಗೋತ್ರದವರ ಬಳಿ ದಫನ ಮಾಡಲಾಯಿತು.ರಬೀವುಲ್ ಹನ್ನೆರಡು ಸೋಮವಾರ ಸುಬಹಿಯ ಸ್ವಲ್ಪ ಮುಂಚೆ ಅಂತ್ಯ ಪ್ರವಾದಿ ಮುಹಮ್ಮದ್ ಮುಸ್ತಫ ಸ.ಅ ಮಕ್ಕಾದಲ್ಲಿ ಜನಿಸಿದರು.ಅಂದು ಕ್ರಿಸ್ತಶಕ 571 ಎಪ್ರಿಲ್ 21 ಆಗಿತ್ತು.ನೆಬಿ ಸ.ಅ ಜನಿಸಿದ ದಿನ ಅತ್ಯಂತ ಸಂತೋಷದಾಯಕವಾದ ದಿನವಾಗಿದೆ.ಮಾನವ ಶ್ರೇಷ್ಠರಾದ ಪ್ರವಾದಿ ಮುಹಮ್ಮದ್ ಸ.ಅ ರವರ ಮುಖಾಂತರ ಮಾನವ ಸಮೂಹವನ್ನು ಅಲ್ಲಾಹು ಅನುಗ್ರಹಿಸಿದ ಸುದಿನವಾಗಿದೆ ಅಂದು.ಮುಸಲ್ಮಾನರು ಈ ಅನುಗ್ರಹಕ್ಕೆ ಕ್ರತಜ್ಞತೆ ಸಲ್ಲಿಸಿ ಅಂದು ಮೀಲಾದುನ್ನಬಿ ಆಚರಣೆ ಮಾಡುತ್ತಾರೆ.ನೆಬಿ ಸ.ಅ ರವರ ಮದಹ್ ಕೀರ್ತನೆಗಳನ್ನು ಹೇಳಿ, ಹಾಡಿಹೊಗಳಿ ದಾನಧರ್ಮಗಳನ್ನು ನೀಡಿ ಸಂತೋಷ ಪ್ರಕಟಿಸುತ್ತಾರೆ.              ಭೂಮಿಯ ಮೇಲೆ ಜನ್ಮವೆತ್ತಿ ಬಂದ ಅತ್ಯಂತ ಉತ್ತಮನಾದ ಮನುಷ್ಯ ನೆಬಿ ಸ.ಅ ಆಗಿದ್ದಾರೆ.ಮುಂಜಿಕರ್ಮ ನಿರ್ವಹಿಸಲ್ಪಟ್ಟ,ಹೊಕ್ಕುಳ ಬಳ್ಳಿ ಕತ್ತರಿಸಲ್ಪಟ್ಟ,ಕಣ್ಣಿಗೆ ಸುರುಮ ಹಾಕಲ್ಪಟ್ಟ ಸ್ಥಿತಿಯಲ್ಲಿ ಸಂಪೂರ್ಣ ಸಂಶುದ್ಧವಾದ ರೀತಿಯಲ್ಲಾಗಿದೆ ಅವರು ಜನಿಸಿದ್ದು.ಅಬೂತಾಲಿಬರ ಮನೆಯಲ್ಲಾಗಿದೆ ಜನನ.ಹೆರಿಗೆ...

ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಕರ ಪಾತ್ರ

ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಕರ ಪಾತ್ರ _✍🏻ಜಹಫರ್ ಸಾಧಿಕ್ ಕಟ್ಟದಪಡ್ಪು_ _ನಮ್ಮ ಸಮಾಜವು ನಮಗೆ ಜನ್ಮ ಕೊಟ್ಟ ತಂದೆ ತಾಯಿಯ ನಂತರ ಮಹತ್ತರವಾದ ಸ್ಥಾನವನ್ನು ಶಿಕ್ಷಕರಿಗೆ ನೀಡಿ ಗೌರವಿಸಿದೆ.  ಶಿಲ್ಪಿ...