Skip to main content

ಉಳ್ ಹಿಯ್ಯತ್

⚫🌹📕 *ಹಝುಮ* 📕🌹⚫

🎋🎋🎋🎋🎋🎋🎋🎋🎋🎋

📘📗 *ಕರ್ಮಶಾಸ್ರ್ರ*📗📘

🎋🎋🎋🎋🎋🎋🎋🎋🎋🎋

📚📚 ಭಾಗ 1 📚📚
➖➖➖➖➖➖➖➖➖➖

🌳 *ಉಳ್ ಹಿಯ್ಯತ್*

📘 ಉಳ್ ಹಿಯ್ಯತ್ ಎಂದರೆ ಕೆಲವು ನಿಬಂಧನೆಗಳನ್ನು ಅನುಸರಿಸಿ ಬಲಿ ಪೆರ್ನಾಳ್ ದಿನ ನಿಗಧಿತ ಪ್ರಾಣಿಯನ್ನು ಬಲಿ ನೀಡುವುದಾಗಿದೆ. ಇದರ ಸಮಯ ಸೂರ್ಯೋದಯದ ಬಳಿಕ ಕನಿಷ್ಠ ಎರಡು ರಕಾ ಅತ್ ಮತ್ತು‌ ಖುತುಬಾದ ಸಮಯ ಕಳೆದರೆ ಉಳ್ ಹಿಯ್ಯತ್ ನ ಸಮಯ ಆರಂಭ ಗೊಳ್ಳುತ್ತದೆ.

📘 ಪೆರ್ನಾಳ್ ದಿನದ ಅವನ ಮತ್ತು ಅವನ ಆಶ್ರಿತರ ಆಹಾರ, ವಸ್ತ್ರ, ವಸತಿಯ ಖರ್ಚು ಬಿಟ್ಟು ಜಾಸ್ತಿ ಉಳಿದರೆ ಆತನಿಗೆ ಉಳ್ ಹಿಯ್ಯತ್ ನೀಡಲು ಪ್ರಬಲವಾದ ಸುನ್ನತ್ ಇದೆ.ಉಳ್ ಹಿಯ್ಯತ್ ಅತ್ಯಂತ ಪುಣ್ಯ ಇರುವ ಆರಾಧನೆ ಯಾಗಿದೆ. ಉಳ್ ಹಿಯ್ಯತ್ ನೀಡಲು ಸಾಧ್ಯವಿರುವವರಿಗೆ ಅದನ್ನು ಉಪೇಕ್ಷಿಸಲು ಕರಾ ಅತ್ ಆಗಿದೆ.

📘 ಉಳ್ ಹಿಯ್ಯತ್ ನೀಡಲು ಇಚ್ಚಿಸುವವರು ಅದರ ಕುರಿತು ಸರಿಯಾಗಿ ಅರಿತಿರಬೇಕು. ಉಳ್ ಹಿಯ್ಯತ್ ಸುನ್ನತ್ ಮತ್ತು ಕಡ್ಡಾಯವಾದ  ರೀತಿಯಲ್ಲಿ ನೀಡಬಹುದಾಗಿದೆ.

🌳 *ಉಳ್ ಹಿಯತ್ ನೀಡುವವರು ಗಮನಿಸಬೇಕಾದ ವಿಷಯ*

📘 ಉಳ್ ಹಿಯತ್ ನೀಡಲು ಉದ್ದೇಶಿಸಿದ ಮೃಗವನ್ನು ಇದು ಉಳ್ ಹಿಯ್ ಗಾಗಿ‌ ಇರುವ ಮೃಗ ಎಂದು ಹೇಳಿದರೆ ಅದು‌ ಕಡ್ಡಾಯ ಉಳ್ ಹಿಯತ್ ಆಗುತ್ತದೆ.ಇನ್ನು ಯಾರಾದರೂ ಇದೇನೆಂದು ಕೇಳಿದಾಗ ಇದು ಉಳ್ ಹಿಯತ್ ಗಾಗಿ ಎಂದು ಹೇಳಿದರೆ ಅದೂ ಕಡ್ಡಾಯ ಉಳ್ ಹಿಯತ್ ಆಗುತ್ತದೆ.

📘 ಉಳ್ ಹಿಯತ್ ಕಡ್ಡಾಯ ವಾದರೆ ಆತನಾಗಲಿ ಆತನ ಖರ್ಚಿನಲ್ಲಿ ಜೀವನ ಸಾಗಿಸುವ ಆತನ ಪತ್ನಿ , ಮಕ್ಕಳು ತಂದೆ ತಾಯಿ ಯಾರೂ ಅದರ ಒಂದಂಶ ಮಾಂಸವನ್ನೂ ತಿನ್ನಬಾರದು.ಅದನ್ನು ಸಂಪೂರ್ಣ ವಾಗಿ ಬಡವರಿಗೆ ದಾನ ನೀಡಬೇಕು.

📘 ಉಳ್ ಹಿಯತ್ ಕಡ್ಡಾಯ ವಾಗದಿರಲು ನಿಯ್ಯತ್ ಮಾಡುವಾಗ  " ಇದು ನನ್ನ ಸುನ್ನತ್ ಆದ ಉಳ್ ಹಿಯತ್ "ಎಂದು ಸುನ್ನತ್ ಅನ್ನು ಸೇರಿಸಿ ಹೇಳಿದರೆ ಕಡ್ಡಾಯ ವಾಗಲಾರದು. ಉಳ್ ಹಿಯತ್ ಮಾತ್ರ ಹೇಳಿದರೆ ಅದು ಕಡ್ಡಾಯ ವಾಗುತ್ತದೆ.

📘 ಉಳ್ ಹಿಯತ್ ಉದ್ದೇಶಿಸುವವರು ಈ ವಿಷಯವನ್ನು ಸರಿಯಾಗಿ ಅರಿತಿರಬೇಕು. ಉಳ್ ಹಿಯತ್ ಗಾಗಿ ಎಂದು ಹೇಳಿದ ಬಳಿಕ ಅದು ಸುನ್ನತ್ ಎಂದಾಗಿದೆ ನಾನು ಉದ್ದೇಶಿಸಿದ್ದು ಎಂದು  ಹೇಳಿದರೆ ಪ್ರಯೋಜನ ಇಲ್ಲ.

🌻🌻🌻🌻🌻🌻🌻🌻🌻🌻

📳 *ವಿ.ಸೂ: ಇದನ್ನು ಎಡಿಟ್ ಮಾಡಿ,ಹೆಸರು ಬದಲಿಸಿ ರವಾನಿಸುವುದು ಸಮ್ಮತಾರ್ಹವಲ್ಲ.*

🎋🎋🎋🎋🎋🎋🎋🎋🎋🎋

🔯 *ಅರಿವು ಧರ್ಮದ ಜೀವಾಳ*🔯

🌹🌹🌹🌹🌹🌹🌹🌹🌹🌹

➖➖➖➖➖➖➖➖➖➖
🌳🌳🌳🌳🌳🌳🌳🌳🌳🌳

Comments

Popular posts from this blog

ಗ್ರಹಣ ನಮಾಜಿನ ರೂಪ

ಗ್ರಹಣ ನಮಾಜಿನ ರೂಪ *ಚಂದ್ರಗ್ರಹಣದ ಸುನ್ನತ್ ನಮಾಜು ಎರಡು ರಕಅತ್ ಅಲ್ಲಾಹನಿಗಾಗಿ ಜಮಾಅತ್ತಾಗಿ ನಾನು ನಿರ್ವಹಿಸುವೆನು* ಎಂದು ನಿಯ್ಯತ್ ಮಾಡಿ ಅಲ್ಲಾಹು ಅಕ್ಬರ್ ಎಂದು ಹೇಳಿ ನಮಾಜಿಗೆ ಪ್ರವೇಶಿಸುವು...

ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ. ಲೇ - ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಅಕ್ಕರೆಕೆರೆ.

ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ. ಲೇ - ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಅಕ್ಕರೆಕೆರೆ. ಆಮಿನ ಬೀವಿ ರ.ಅ ಗರ್ಭಿಣಿಯಾಗಿರುವಾಗ ವ್ಯಾಪಾರಕ್ಕಾಗಿ ಸಿರಿಯಾಕ್ಕೆ ಹೋಗಿದ್ದ ಅಬ್ದುಲ್ಲಾಹ್ (ರ.ಅ) ಮರಳಿ ಬರುವಾಗ ಮದೀನದಲ್ಲಿ ವಫಾತಾದರು.ತಂದೆಯ ಮಾವಂದಿರರಾದ ಬನುನ್ನಜ್ಜಾರ್ ಗೋತ್ರದವರ ಬಳಿ ದಫನ ಮಾಡಲಾಯಿತು.ರಬೀವುಲ್ ಹನ್ನೆರಡು ಸೋಮವಾರ ಸುಬಹಿಯ ಸ್ವಲ್ಪ ಮುಂಚೆ ಅಂತ್ಯ ಪ್ರವಾದಿ ಮುಹಮ್ಮದ್ ಮುಸ್ತಫ ಸ.ಅ ಮಕ್ಕಾದಲ್ಲಿ ಜನಿಸಿದರು.ಅಂದು ಕ್ರಿಸ್ತಶಕ 571 ಎಪ್ರಿಲ್ 21 ಆಗಿತ್ತು.ನೆಬಿ ಸ.ಅ ಜನಿಸಿದ ದಿನ ಅತ್ಯಂತ ಸಂತೋಷದಾಯಕವಾದ ದಿನವಾಗಿದೆ.ಮಾನವ ಶ್ರೇಷ್ಠರಾದ ಪ್ರವಾದಿ ಮುಹಮ್ಮದ್ ಸ.ಅ ರವರ ಮುಖಾಂತರ ಮಾನವ ಸಮೂಹವನ್ನು ಅಲ್ಲಾಹು ಅನುಗ್ರಹಿಸಿದ ಸುದಿನವಾಗಿದೆ ಅಂದು.ಮುಸಲ್ಮಾನರು ಈ ಅನುಗ್ರಹಕ್ಕೆ ಕ್ರತಜ್ಞತೆ ಸಲ್ಲಿಸಿ ಅಂದು ಮೀಲಾದುನ್ನಬಿ ಆಚರಣೆ ಮಾಡುತ್ತಾರೆ.ನೆಬಿ ಸ.ಅ ರವರ ಮದಹ್ ಕೀರ್ತನೆಗಳನ್ನು ಹೇಳಿ, ಹಾಡಿಹೊಗಳಿ ದಾನಧರ್ಮಗಳನ್ನು ನೀಡಿ ಸಂತೋಷ ಪ್ರಕಟಿಸುತ್ತಾರೆ.              ಭೂಮಿಯ ಮೇಲೆ ಜನ್ಮವೆತ್ತಿ ಬಂದ ಅತ್ಯಂತ ಉತ್ತಮನಾದ ಮನುಷ್ಯ ನೆಬಿ ಸ.ಅ ಆಗಿದ್ದಾರೆ.ಮುಂಜಿಕರ್ಮ ನಿರ್ವಹಿಸಲ್ಪಟ್ಟ,ಹೊಕ್ಕುಳ ಬಳ್ಳಿ ಕತ್ತರಿಸಲ್ಪಟ್ಟ,ಕಣ್ಣಿಗೆ ಸುರುಮ ಹಾಕಲ್ಪಟ್ಟ ಸ್ಥಿತಿಯಲ್ಲಿ ಸಂಪೂರ್ಣ ಸಂಶುದ್ಧವಾದ ರೀತಿಯಲ್ಲಾಗಿದೆ ಅವರು ಜನಿಸಿದ್ದು.ಅಬೂತಾಲಿಬರ ಮನೆಯಲ್ಲಾಗಿದೆ ಜನನ.ಹೆರಿಗೆ...

ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಕರ ಪಾತ್ರ

ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಕರ ಪಾತ್ರ _✍🏻ಜಹಫರ್ ಸಾಧಿಕ್ ಕಟ್ಟದಪಡ್ಪು_ _ನಮ್ಮ ಸಮಾಜವು ನಮಗೆ ಜನ್ಮ ಕೊಟ್ಟ ತಂದೆ ತಾಯಿಯ ನಂತರ ಮಹತ್ತರವಾದ ಸ್ಥಾನವನ್ನು ಶಿಕ್ಷಕರಿಗೆ ನೀಡಿ ಗೌರವಿಸಿದೆ.  ಶಿಲ್ಪಿ...