Skip to main content

ಇಸ್ಲಾಮಿನಲ್ಲಿ ಪೇಟ ಧರಿಸುವುದಕ್ಕಿರುವ ಮಹತ್ವ ವಹ್ಹಾಬಿಗಳಿಗೆ ತಿಳಿಯದಾಯಿತೇ



ಇಸ್ಲಾಮಿನಲ್ಲಿ ಪೇಟ ಧರಿಸುವುದಕ್ಕಿರುವ ಮಹತ್ವ ವಹ್ಹಾಬಿಗಳಿಗೆ ತಿಳಿಯದಾಯಿತೇ

🖋 *ಯೂಸುಫ್ ಸಖಾಫಿ ಬಪ್ಪಳಿಗೆ*

ನಮಾಜಿನಲ್ಲಿ ಹಾಗೂ ಅಲ್ಲದ ಸಮಯದಲ್ಲಿ ಪೇಟ ಧರಿಸುವುದಕ್ಕೆ ಪರಿಶುದ್ಧ ಇಸ್ಲಾಂ ಅತೀ ಹೆಚ್ಚು ಮಹತ್ವವನ್ನು ನೀಡಿದೆ. ಅದರಲ್ಲಿ ಕೆಲವೊಂದು ಹೀಗಿದೆ.

عن أبي الدرداء أن رسول الله صلى الله عليه وسلم قال: (("إن الله وملائكته يصلون على أصحاب العمائم يوم الجمعة"))
(مسند الشاميين للطبراني: ٣٤١٦)

ಅಬುದ್ದರ್ದಾಇ (ರ)ರಿಂದ ವರದಿ ಪ್ರವಾದಿ  ( صلى الله عليه وسلم) ಹೇಳಿದರು " ನಿಶ್ಚಯವಾಗಿಯೂ ಶುಕ್ರವಾರದಂದು ಪೇಟ ಧರಿಸುವವರ ಮೇಲೆ ಅಲ್ಲಾಹು ಮತ್ತು ಅವನ ಮಲಕುಗಳು ಸ್ವಲಾತ್ ಹೇಳುವರು (ತಬ್ರಾಣಿ:3416)

عن ابن عباس ,قال:  رسول الله صلى الله عليه وسلم : ((اعتموا تزدادوا حلما)) رواه البزار والطبراني (مجمع الزوائد: ٣٠٢/٢)

(2) ಇಬ್ನು ಅಬ್ಬಾಸ್(ರ) ರಿಂದ ವರದಿ; ಪ್ರವಾದಿ  ( صلى الله عليه وسلم)ಹೇಳಿದರು: "ನೀವು ಪೇಟ ಧರಿಸಿರಿ ಅವಾಗ ನಿಮಗೆ ವಿವೇಕವು ಅಧಿಕಗೊಳ್ಳುವುದು (ಮಜ್ಮಉ ಝವಾಇದ್ 2/302)

عن ابن عباس مرفوعا : ((عليكم بالعمائم ، فإنها سيما الملائكة ، فأرخوها خلف ظهوركم)) رواه البيهقي فى شعب الإيمان.

(3)ಇಬ್ನು ಅಬ್ಬಾಸ್ (ರ) ರಿಂದ ವರದಿ; ಪ್ರವಾದಿ ( صلى الله عليه وسلم) ಹೇಳಿದರು: "ನೀವು ಪೇಟ ಧರಿಸಿರಿ ಅದು ಮಲಕುಗಳ ಚಿಹ್ನೆಯಾಗಿದೆ. ಅದರ ಬಾಲವನ್ನು ಹಿಂದಕ್ಕೆ ಬಿಡಿರಿ (ಬೈಹಕಿ)

عن ركانة قال: سمعت النبي صلى الله عيه وسلم يقول: (( فرق ما بيننا وبين المشركين العمائم على القلانس.(سنن أبي داود: ٣٥٥٦، سنن الترمذي: ١٧٠٦)

(4) ರುಕಾನ (ರ)ರಿಂದ ವರದಿ; ಪ್ರವಾದಿ  ( صلى الله عليه وسلم) ಹೇಳಿದರು: "ನಮ್ಮ ಹಾಗೂ ಮುಶ್ರಿಕುಗಳ ನಡುವೆ ಇರುವ ವ್ಯತ್ಯಾಸ ಟೋಪಿಯ ಮೇಲೆ ಧರಿಸುವ ಪೇಟವಾಗಿದೆ (ತುರ್ಮುದಿ 1706,ಅಬೂ ದಾವುದ್ 3556)

عن ابن عمر رفعه: (( صلاة بعمامة تعدل بخمس وعشرين صلاة ، وجمعة بعمامة تعدل سبعين جمعة)) رواه الديلمي فى المسند.

5)ಇಬ್ನು ಉಮರ್ (ರ) ರಿಂದ ವರದಿ ಪ್ರವಾದಿ  ( صلى الله عليه وسلم) ಹೇಳಿದರು :" ಪೇಟ ಧರಿಸಿದವನ ನಮಾಜು ಧರಿಸದವನ ನಮಾಜಿಗಿಂತ 25 ಪಟ್ಟು ಪುಣ್ಯದಾಯಕವಾಗಿದೆ. ಅದೇ ರೀತಿ ಅವನ ಜುಮುಅ 70 ಜುಮುಅಕ್ಕೆ ಸಮಾನವಾಗಿದೆ.(ದೈಲಮೀ)

. قال الإمام النووي في "روضة الطالبين" (1/ 288): [وَيُسْتَحَبُّ أَنْ يُصَلِّيَ الرَّجُلُ فِي أَحْسَنِ مَا يَجِدُهُ مِنْ ثِيَابِهِ، وَيَتَعَمَّم] اهـ.

ಎರಡನೇ ಶಾಫೀ ಎಂದು ಕರೆಯಲ್ಪಡುವ ಇಮಾಂ ನವವೀ (ರ) ಹೇಳುತ್ತಾರೆ " ನಮಾಜು ನಿರ್ವಹಿಸುವಾಗ ಉಡುವ ಉಡುಪುಗಳಲ್ಲಿ ಉತ್ತಮವಾದುದು ಹಾಗೂ ತಲೆಗೆ ಪೇಟ ಧರಿಸುವುದು ಸುನ್ನತ್ತಾಗಿದೆ. (ರೌಲತು ತ್ತಾಲಿಬೀನ್ 1/288)

ವಿಶ್ವ ವಿಖ್ಯಾತ ಪಂಡಿತರಾದ ಇಬ್ನು ಹಜರಿಲ್ ಹೈತಮೀ (ರ) ಹೇಳುತ್ತಾರೆ

وتسن العمامة للصلاة .........  وتحصل السنة بكونها على الرأس أو نحو قلنسوة تحتها. (تحفة المحتاج: ٣٢/٣)

ನಮಾಜು ಹಾಗೂ ಸೌಂದರ್ಯವನ್ನು ಉದ್ದೇಶಿಸಿ ಪೇಟ ಧರಿಸುವುದು ಸುನ್ನತ್ತಾಗಿದೆ......ಟೋಪಿ ಧರಿಸಿ ಪೇಟ ಧರಿಸುವುದರಿಂದ ಈ ಪುಣ್ಯವು ಲಭ್ಯವಾಗುವುದು(ತುಹ್ಫ 3/36)

*ಪೇಟದ ರೂಪ*

ಪೇಟದ ಉದ್ದ ಮತ್ತು ಅಗಲವು ಸ್ಥಳ, ಸಮಯ,ಸಂಪ್ರದಾಯ  ಮತ್ತು  ಧರಿಸುವವನನ್ನು ಪರಿಗಣಿಸಿಯಾಗಿದೆ.ಅದಕ್ಕಿಂತಲೂ ಅಧಿಕಗೊಳ್ಳುವುದು ಕರಾಹತ್ತಾಗಿದೆ.ವಿಧ್ವಾಂಸರು ಜನಸಾಮಾನ್ಯರಂತೆ ಹಾಗೂ ಜನಸಾಮಾನ್ಯರು ವಿದ್ವಾಂಸರಂತೆ ಪೇಟ ಧರಿಸಕೂಡದು.ಪೇಟಕ್ಕೆ ಬಾಲ ಬಿಡುವುದಾದರೆ ನಾಲ್ಕು ಬೆರಳಿಗಿಂತ ಕಮ್ಮಿಯಾಗದೆ ಒಂದು ಮೊಳ ಉದ್ದಕ್ಕಿಂತ ಜಾಸ್ತಿಯಾಗಲೂಕೂಡದು( ಫತ್ಹುಲ್ ಮುಈನ್/144)

*ಶ್ರೇಷ್ಠತೆ*

ಟೋಪಿ ಧರಿಸಿ ಪೇಟ ಧರಿಸುವುದು ಪ್ರವಾದಿ(ಸ.ಅ) ಹಾಗೂ ಅನುಚರರ ಶೈಲಿಯಾದ್ದರಿಂದ ಅದು ಉತ್ತಮ.ಇನ್ನು ಕೇವಲ ಟೋಪಿ ಧರಿಸುವುದಕ್ಕೂ ವಿರೊಧವಿಲ್ಲ.ಕಾರಣ ಕೆಲವೊಮ್ಮೆ ಪ್ರವಾದಿ ಹಾಗೆ ಧರಿಸುತ್ತಿದ್ದರು (ತುಹ್ಫ:3/34)

*ಪೇಟದ ಬಣ್ಣ*
ಪೇಟ ಧರಿಸುವುದಾದರೆ ಬಿಳಿ ಬಣ್ಣವು ಅತ್ಯುತ್ತಮ. ಇತರ ಬಣ್ಣಕ್ಕೂ ವಿರೋಧವಿಲ್ಲ (ತುಹ್ಫ;3/36)

ನಾಲ್ಕು ಮಝ್ಹಬುಗಳಲ್ಲೂ ಪೇಟ ಧರಿಸುವುದು ಸುನ್ನತ್ತಾಗಿದೆ...

*ಆದ್ದರಿಂದ  ಪೇಟ ಧರಿಸುವುದು ಅರಬಿಗಳ ವೇಷವೆಂದೂ ಅದು ಸುನ್ನತ್ತಿಲ್ಲವೆಂದೂ ಹೇಳುವ ವಹ್ಹಾಬಿಗಳ ವಾದವು ಜಹಾಲತ್ತಿನ ಭಾಗವಾಗಿದೆ*

Comments

Popular posts from this blog

ಗ್ರಹಣ ನಮಾಜಿನ ರೂಪ

ಗ್ರಹಣ ನಮಾಜಿನ ರೂಪ *ಚಂದ್ರಗ್ರಹಣದ ಸುನ್ನತ್ ನಮಾಜು ಎರಡು ರಕಅತ್ ಅಲ್ಲಾಹನಿಗಾಗಿ ಜಮಾಅತ್ತಾಗಿ ನಾನು ನಿರ್ವಹಿಸುವೆನು* ಎಂದು ನಿಯ್ಯತ್ ಮಾಡಿ ಅಲ್ಲಾಹು ಅಕ್ಬರ್ ಎಂದು ಹೇಳಿ ನಮಾಜಿಗೆ ಪ್ರವೇಶಿಸುವು...

ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ. ಲೇ - ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಅಕ್ಕರೆಕೆರೆ.

ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ. ಲೇ - ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಅಕ್ಕರೆಕೆರೆ. ಆಮಿನ ಬೀವಿ ರ.ಅ ಗರ್ಭಿಣಿಯಾಗಿರುವಾಗ ವ್ಯಾಪಾರಕ್ಕಾಗಿ ಸಿರಿಯಾಕ್ಕೆ ಹೋಗಿದ್ದ ಅಬ್ದುಲ್ಲಾಹ್ (ರ.ಅ) ಮರಳಿ ಬರುವಾಗ ಮದೀನದಲ್ಲಿ ವಫಾತಾದರು.ತಂದೆಯ ಮಾವಂದಿರರಾದ ಬನುನ್ನಜ್ಜಾರ್ ಗೋತ್ರದವರ ಬಳಿ ದಫನ ಮಾಡಲಾಯಿತು.ರಬೀವುಲ್ ಹನ್ನೆರಡು ಸೋಮವಾರ ಸುಬಹಿಯ ಸ್ವಲ್ಪ ಮುಂಚೆ ಅಂತ್ಯ ಪ್ರವಾದಿ ಮುಹಮ್ಮದ್ ಮುಸ್ತಫ ಸ.ಅ ಮಕ್ಕಾದಲ್ಲಿ ಜನಿಸಿದರು.ಅಂದು ಕ್ರಿಸ್ತಶಕ 571 ಎಪ್ರಿಲ್ 21 ಆಗಿತ್ತು.ನೆಬಿ ಸ.ಅ ಜನಿಸಿದ ದಿನ ಅತ್ಯಂತ ಸಂತೋಷದಾಯಕವಾದ ದಿನವಾಗಿದೆ.ಮಾನವ ಶ್ರೇಷ್ಠರಾದ ಪ್ರವಾದಿ ಮುಹಮ್ಮದ್ ಸ.ಅ ರವರ ಮುಖಾಂತರ ಮಾನವ ಸಮೂಹವನ್ನು ಅಲ್ಲಾಹು ಅನುಗ್ರಹಿಸಿದ ಸುದಿನವಾಗಿದೆ ಅಂದು.ಮುಸಲ್ಮಾನರು ಈ ಅನುಗ್ರಹಕ್ಕೆ ಕ್ರತಜ್ಞತೆ ಸಲ್ಲಿಸಿ ಅಂದು ಮೀಲಾದುನ್ನಬಿ ಆಚರಣೆ ಮಾಡುತ್ತಾರೆ.ನೆಬಿ ಸ.ಅ ರವರ ಮದಹ್ ಕೀರ್ತನೆಗಳನ್ನು ಹೇಳಿ, ಹಾಡಿಹೊಗಳಿ ದಾನಧರ್ಮಗಳನ್ನು ನೀಡಿ ಸಂತೋಷ ಪ್ರಕಟಿಸುತ್ತಾರೆ.              ಭೂಮಿಯ ಮೇಲೆ ಜನ್ಮವೆತ್ತಿ ಬಂದ ಅತ್ಯಂತ ಉತ್ತಮನಾದ ಮನುಷ್ಯ ನೆಬಿ ಸ.ಅ ಆಗಿದ್ದಾರೆ.ಮುಂಜಿಕರ್ಮ ನಿರ್ವಹಿಸಲ್ಪಟ್ಟ,ಹೊಕ್ಕುಳ ಬಳ್ಳಿ ಕತ್ತರಿಸಲ್ಪಟ್ಟ,ಕಣ್ಣಿಗೆ ಸುರುಮ ಹಾಕಲ್ಪಟ್ಟ ಸ್ಥಿತಿಯಲ್ಲಿ ಸಂಪೂರ್ಣ ಸಂಶುದ್ಧವಾದ ರೀತಿಯಲ್ಲಾಗಿದೆ ಅವರು ಜನಿಸಿದ್ದು.ಅಬೂತಾಲಿಬರ ಮನೆಯಲ್ಲಾಗಿದೆ ಜನನ.ಹೆರಿಗೆ...

ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಕರ ಪಾತ್ರ

ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಕರ ಪಾತ್ರ _✍🏻ಜಹಫರ್ ಸಾಧಿಕ್ ಕಟ್ಟದಪಡ್ಪು_ _ನಮ್ಮ ಸಮಾಜವು ನಮಗೆ ಜನ್ಮ ಕೊಟ್ಟ ತಂದೆ ತಾಯಿಯ ನಂತರ ಮಹತ್ತರವಾದ ಸ್ಥಾನವನ್ನು ಶಿಕ್ಷಕರಿಗೆ ನೀಡಿ ಗೌರವಿಸಿದೆ.  ಶಿಲ್ಪಿ...