ರಮಳಾನ್ ಬಂತು,
ನಾವೆಷ್ಟು ರೆಡಿಯಾಗಿದ್ದೇವೆ ?
ಭಾಗ-2
✍ಅನ್ಸಾರ್ ಸೈದು
(ಭಾಗ-1 ನೀವೆಲ್ಲರೂ ಓದಿರಬಹುದೆಂದು ಭಾವಿಸುತ್ತೇನೆ)
*ಖುರ್'ಆನ್ ಪಾರಾಯಣ*
ಇದು ಅತ್ಯಂತ ಪುಣ್ಯದಾಯಕ ಕರ್ಮವಾಗಿದೆ. ಓದಿದರೂ, ಓದುವುದನ್ನು ಕೇಳಿದರೂ, ಬರಿಗಣ್ಣಿನಲ್ಲಿ ನೋಡಿದರೂ ಪ್ರತಿಫಲ ಸಿಗುತ್ತದೆ. ರಂಝಾನ್ ತಿಂಗಳಲ್ಲಿ ಇದರ ಮಹತ್ವ ಮತ್ತಷ್ಟು ಹೆಚ್ಚು. ರಂಝಾನ್ ತಿಂಗಳಿನಲ್ಲಿ ಒಂದು "ಖತಂ" ಪೂರ್ತಿಗೊಳಿಸುವುದು ಒಬ್ಬ ಸತ್ಯ ವಿಶ್ವಾಸಿ ಖರ್'ಆನಿ ನೊಂದಿಗೆ ಪಾಲಿಸಬೇಕಾದ ಗೌರವವಾಗಿದೆ.
*ಇಅ್'ತಿಕಾಫ್*
ಸಾಧಾರಣವಾಗಿ ನಾವು ಮಸೀದಿಗೆ ಹೋಗುತ್ತೇವೆ. ಮಸೀದಿಗೆ ಪ್ರವೇಶಿಸಿದ ತಕ್ಷಣ ಇಅ್'ತಿಕಾಫಿನ ನಿಯ್ಯತ್ ಮಾಡಿದರೆ, ಮಸೀದಿಯಿಂದ ನಿರ್ಗಮಿಸುವವರೆಗೂ ನಮಗೆ ಪ್ರತಿಫಲ ಸಿಗುತ್ತಲೇ ಇರುತ್ತದೆ. ರಂಝಾನ್ ತಿಂಗಳಲ್ಲಿ ಅದರ ಪ್ರತಿಫಲ ದುಪ್ಪಾಟ್ಟಾಗಲಿದೆ. ಇದಕ್ಕಾಗಿ ನಾವು ಪ್ರತ್ಯೇಕ ದ್ಸಿಕ್ರ್'ಗಳನ್ನು ಹೇಳಬೇಕಾಗಿಲ್ಲ. ಮಸೀದಿಗೆ ಪ್ರವೇಶಿಸಿದ ತಕ್ಷಣ ನಿಯ್ಯತ್ ಇಟ್ಟರೆ ಸಾಕು. ಇನ್ನು ಆ ಸಂದರ್ಭದಲ್ಲಿ ಮರೆತರೆ ನೆನಪಾದಾಗ ನಿಯ್ಯತ್ ಮಾಡಿದರಾಯಿತು.
*ಮಸೀದಿಗೆ ಪ್ರವೇಶಿಸುವಾಗ ಮೊದಲು ಈ ದ್ಸಿಕ್ರನ್ನು ಹೇಳಬೇಕು*
●اللَّهُمَّ افْتَحْ لِي أَبْوَابَ رَحْمَتِكَ●
ಆನಂತರ,
🔷 *ಇಅ್'ತಿಕಾಫ್ ನಿಯ್ಯತ್*
● نويت الاعتكاف في هذا المسجد لله تعالى●
(ಈ ಮಸೀದಿಯಲ್ಲಿ ನಾನು ಅಲ್ಲಾಹನಿಗಾಗಿ ಇಅ್'ತಿಕಾಫ್ ಕೂರುತ್ತೇನೆ).
*ತರಾವೀಅ್*
ಇದು ರಮಳಾನಿನಲ್ಲಿರುವ ಒಂದು ವಿಶೇಷವಾದ ಸುನ್ನತ್ ನಮಾಝ್ ಆಗಿದೆ. ತರಾ'ವೀಹ್ ಇಪ್ಪತ್ತು ರಕ್'ಅತ್ ಆಗಿದೆ. ಅದು ಎಂಟು ರಕ್'ಅತೆಂದು ವಾದಿಸುವವರು ನಮ್ಮೆಡೆಯಲ್ಲ ಇದ್ದಾರೆ. ಸೌದಿ ಅರೆಬಿಯಾದ ಮಕ್ಕಾ ಮದೀನಾ ಸೇರಿದಂತೆ ಇತರ ದೇಶಗಳಲ್ಲೂ ತರಾ'ವೀಹ್ ಇಪ್ಪತ್ತು ರಕ್'ಅತ್ ಆಗಿದೆ.
*ವಿತ್'ರ್ ನಮಾಝ್*
ಇಶಾ ನಮಾಝಿನ ಬಳಿಕ ನಿರ್ವಹಿಸಬೇಕಾದ ನಮಾಝ್ ಆಗಿದೆ ಇದು. ರಮಳಾನಿನಲ್ಲಿ ಜಮಾಅತಾಗಿ ನಿರ್ವಹಿಸುವುದು ಸುನ್ನತ್ತಾಗಿದೆ. ಇದು ಗರಿಷ್ಠ ಹನ್ನೊಂದು ರಕ'ಅತ್, ಸಾಧಾರಣವಾಗಿ ಮೂರು, ಕಡಿಮೆ ಅಂದರೆ ಒಂದು ರಕ'ಅತಾಗಿದೆ. ರಮಳಾನ್ ಹದಿನೈದರ ನಂತರ ವಿತ್ರ್ ನಮಾಝಿನಲ್ಲಿ ಕುನೂತ್ ಓದುವುದು ಸುನ್ನತ್ ಆಗಿದೆ.
*ನಿಯ್ಯತ್ (Intention)*
● نَوَيْتُ صَوْمَ غـَدٍ عَـنْ ا َدَاءِ فـَرْضِ شـَهْرِ رَمـَضَانَ هـَذِهِ السَّـنـَةِ لِلـّهِ تـَعَالىَ ●
[Nawaitu sauma ghadin an adayi farli ramalana hazihi sanati lillahi ta-ala]
"ರಂಝಾನ್ ತಿಂಗಳ ನಾಳಿನ ಫರ್ಲ್ ವೃತವನ್ನು ನಾನು ಅಲ್ಲಾಹನಿಗಾಗಿ ಕೈಗೊಳ್ಳುತ್ತೇನೆ".
(I intend to fast tomorrow for the month of Ramadan for Allah)
*ವೃತ ತೊರೆಯುವ ಸಂದರ್ಭದಲ್ಲಿ*
Du'a at the time of Iftaar
●اللَّهُمَّ لَكَ صُمْتُ وَعَلَى رِزْقِكَ أَفْطَرْتُ ●
(ALLAAHUMMA LAKA SUMTU WA ALAA RIZQIKA AFTARTU).
*ರಮಳಾನಿನಲ್ಲಿ ಹೇಳಬೇಕಾದ ದ್ಸಿಕ್ರ್'ಗಳು*
*ರಂಝಾನಿನಲ್ಲಿ ಪ್ರತಿ ದಿನ ಹೇಳಬೇಕಾದ ದ್ಸಿಕ್ರ್;*
●اَشـــــْـهـــَدُ أَنْ لَا الهَ إلاّاللهُ أَســــْتـــَغْـفــِرُ اللهََ اللهم اني أَســـْأَلُكَ الجـــَنَّــــة َوَأَعــــوذُ بِكَ مــِنَ النَـّــار ●
(Ash'hadu An'laahilaha illallahu Asthagfirullaha Allahumma innee As'alukal jannatha Va Avoozu bika mina'nnar)
*ರಂಝಾನಿನ ಮೊದಲಹತ್ತರಲ್ಲಿ,*
First ten days (1-10) of Ramadhan:
●اللهم ارحمني يا ارحم الراحمين ●
(Allahumma arhamnee Ya Arhama-Rahimeen).
*ಎರಡನೇ ಹತ್ತರಲ್ಲಿ,*
The second ten days (11-20) of Ramadan
●اللهم اغفرلي ذنوبي يا رب العالمين ●
(Allahuma-gfirlee Zunoobi Ya Rabbal Alameen)
*ಕೊನೇಯ ಹತ್ತರಲ್ಲಿ,*
The last ten days (21-30) of Ramadan
●اللهم اعتقني من النار وأدخلنا الجنة يا رب العالمين ●
(Allahumma'ethiqnee mina-nar va adkhilnal jannatha yaa rabbal Alameen)
●اللهم انك عفو تحب العفو فاعف عني ●
(Allahumma Innaka Afvan Thu-ibbul Afva fa'fu Annee)
*ಸಹರಿಯ (ಅತ್ತಾಳದ) ನಂತರ,*
●الله لا إله إلا هو الحي القيوم القائم على كل نفس بما كسبت ●
(Allahu laa ilaha illa huval (ح)Ayyul Qayyoomal Qaa'imu Ala kulli nafsin bima kasabat).
🌴 *ರಮಳಾನ್ ತಿಂಗಳಿನಲ್ಲಿ ನಾವು ಏನೇ ಒಳ್ಳೆಯ ಕಾರ್ಯಗಳನ್ನು ಮಾಡಿದರೂ ಅದರ ಪ್ರತಿಫಲ ದುಪ್ಪಟ್ಟಾಗಲಿದೆ. ನಮ್ಮ ನಿಯ್ಯತ್ ಸರಿ ಇರಬೇಕಷ್ಟೇ*🌴
ಈ ಸಂದೇಶವನ್ನು ನಿಮ್ಮ ಗೆಳೆಯರಿಗೂ, ನಿಮ್ಮ ಕಟುಂಬದವರಿಗೂ ತಲುಪಿಸಿ, Share ಮಾಡಿ. ನಿಮ್ಮ ಕಾರಣದಿಂದ ಅವರಿಗೆ ಏನಾದರೂ ಅರಿವು ಸಿಕ್ಕಿದರೆ ಅದರ ಪುಣ್ಯ ನನಗೂ-ನಿಮಗೂ ಸಿಗಲಿದೆ ಎಂಬದುದರಲ್ಲಿ ಸಂಶಯವಿಲ್ಲ. ಪೂರ್ಣ ಆಫಿಯ್ಯತ್'ನೊಂದಿಗೆ ಉಪವಾಸವನ್ನು ಹಿಡಿಯಲು, ಸತ್ಕರ್ಮಗಳನ್ನು ಮಾಡಲು ಅಲ್ಲಾಹು ನಮಗೆ ತೌಫೀಕ್ ನೀಡಲಿ. ಅಮೀನ್.
🔷ನಿಮ್ಮ ದುಆ'ಗಳಲ್ಲಿ ನನ್ನನ್ನೂ, ನನ್ನ ಕುಟುಂಬದವರನ್ನೂ ಸೇರಿಸಿ. ನಮ್ಮ ನಿಮ್ಮೆಲ್ಲರ ಸತ್ಕರ್ಮಗಳನ್ನು ಅಲ್ಲಾಹು ಸ್ವೀಕರಿಸಲಿ . *ಆಮೀನ್ (Ameen)*
✍ *ಅನ್ಸಾರ್ ಸೈದು*
Comments