ಪವಿತ್ರ ರಮಳಾನ್ (ಪ್ರಶ್ನೋತ್ತರ) ನೀಳವಾಗಿದೆಯೆಂದು ಓದದೇ ಇರದಿರಿ. ಓದಿರಿ, ಇತರರಿಗೂ ರವಾನಿಸಿರಿ _ಅಲ್ಲಾಹು ನಮ್ಮೆಲ್ಲರನ್ನೂ ದ್ವಿಲೋಕಗಳಲ್ಲೂ ವಿಜಯಿಗಳಾಗಲು ತೌಫೀಖ್ ನೀಡಲಿ, ಆಮೀನ್..._ ✍ ಇಕ್ಬಾಲ್ ಜಿ.ಕೆ.ಗುಲ್ವಾಡಿ ===========================
ಪವಿತ್ರ ರಮಳಾನ್ (ಪ್ರಶ್ನೋತ್ತರ)
ನೀಳವಾಗಿದೆಯೆಂದು ಓದದೇ ಇರದಿರಿ. ಓದಿರಿ, ಇತರರಿಗೂ ರವಾನಿಸಿರಿ
_ಅಲ್ಲಾಹು ನಮ್ಮೆಲ್ಲರನ್ನೂ ದ್ವಿಲೋಕಗಳಲ್ಲೂ ವಿಜಯಿಗಳಾಗಲು ತೌಫೀಖ್ ನೀಡಲಿ, ಆಮೀನ್..._
✍ *ಇಕ್ಬಾಲ್ ಜಿ.ಕೆ.ಗುಲ್ವಾಡಿ*
===========================
❓ಪ್ರಾಯ ಪೂರ್ತಿಯಾಗದ ಮಕ್ಕಳು ವೃತ ಅನುಷ್ಠಿಸುವ ವಿಧಿ ಏನು.?
✅ ಪ್ರಾಯ ಪೂರ್ತಿಯಾಗದ ಮಕ್ಕಳು ವೃತ ನಿರ್ಬಂಧ ಇಲ್ಲದಿದ್ದರೂ ಅವರು ವೃತ ಅನುಷ್ಠಿಸಿದರೆ ಅದು ಸಿಂಧುವಾಗುವುದು. ನಮಾಝ್, ಹಜ್ಜ್, ಉಮ್ರಾ ಮೊದಲಾದ ಆರಾಧನಾ ಕರ್ಮಗಳ ರೀತಿಯಲ್ಲೇ ಮಕ್ಕಳು ವೃತ ಅನುಷ್ಠಿಸಿದರೆ ಅದಕ್ಕೆ ಹೆತ್ತವರಿಗೆ ಪ್ರತಿಫಲ ಸಿಗುವುದು. ಸಣ್ಣ ವಯಸ್ಸಿನಲ್ಲೇ ಮಕ್ಕಳಿಗೆ ಒಳ್ಳೆಯ ಕಾರ್ಯಗಳನ್ನು ಕಲಿಸಿಕೊಡುವುದು ಹೆತ್ತವರ ಕರ್ತವ್ಯವಾಗಿದೆ. ನಬಿ(ಸ)ರವರ ಕಾಲದಲ್ಲಿ ವೃತಾನುಷ್ಠಿಸಲು ಮಕ್ಕಳನ್ನು ಪ್ರೇರೇಪಿಸುತ್ತಿದ್ದರು.
〰〰〰〰〰〰〰〰〰〰
❓ವೃತಾನುಷ್ಠಿಸಲು ಸಾಧ್ಯವಾಗದ ರೋಗಿಗಳು, ವೃದ್ಧರು ಮೊದಲಾದವರು ಏನು ಮಾಡಬೇಕು.?
✅ ವೃತಾನುಷ್ಠಿಸಲು ಸಾಧ್ಯವಾಗದ ರೋಗಿಗಳಿಗೆ, ವೃದ್ಧರಿಗೆ ರಿಯಾಯಿತಿ ಲಭಿಸುವುದು. ಗುಣಮುಖವಾಗುವುದೆಂಬ ನಿರೀಕ್ಷೆ ಇಲ್ಲದೇ ಮಹಾರೋಗಿಗಳಿಗೆ, ಗುಣಮುಖವಾಗುವುದೆಂದು ನಿರೀಕ್ಷೆ ಇರುವ ರೋಗಿಗಳಿಗೂ ವೃತ ಉಪೇಕ್ಷಿಸಲು ತೊಂದರೆಯಿಲ್ಲ. ಗಣಮುಖವಾಗುವುದೆಂಬ ನಿರೀಕ್ಷೆ ಇಲ್ಲದೇ ಮಹಾರೋಗಿಗಳಿಗೆ ಉಪೇಕ್ಷಿಸುವ ಒಂದೊಂದು ದಿನದ ವೃತಗಳಿಗೆ ಬದಲಾಗಿ ಒಂದೊಂದು ಬಡವರಿಗೆ ಆಹಾರವನ್ನು ನೀಡಿದರೆ ಸಾಕಾಗುವುದು.
ಆದರೆ, ರೋಗ ಗುಣಮುಖವಾಗುವುದೆಂಬ ನಿರೀಕ್ಷೆ ಇರುವ ರೋಗಿಗಳು ಗುಣಮುಖವಾದ ನಂತರ ನಷ್ಟ ಹೊಂದಿದ ವೃತವನ್ನು ಅನುಷ್ಠಿಸಬೇಕು.
ವೃತಾನುಷ್ಠಿಸಲು ಸಾಧ್ಯವಿಲ್ಲದ ವೃದ್ಧರು ಒಂದೊಂದು ವೃತಕ್ಕೂ ಬದಲಾಗಿ ಒಂದೊಂದು ಬಡವರಿಗೆ ಆಹಾರವನ್ನು ನೀಡಬೇಕು.
〰〰〰〰〰〰〰〰〰〰
❓ಯಾತ್ರೆಯಲ್ಲಿ ಹಲವು ಬಾರಿ ವೃತಾನುಷ್ಠಿಸಲು ಪ್ರಯಾಸವಾಗಿರುತ್ತದೆ. ಆ ರೀತಿ ಇರುವವರಿಗೆ ವೃತದ ಕಾರ್ಯದಲ್ಲಿ ಏನಾದರೂ ರಿಯಾಯಿತಿ ಇದೆಯಾ.?
✅ ತೊಂದರೆಗಳನ್ನು ಪರಿಗಣಿಸಿ ಯಾತ್ರಿಕರಿಗೆ ವೃತದ ಕಾರ್ಯದಲ್ಲಿ ಅಲ್ಲಾಹನು ರಿಯಾಯಿತಿ ನೀಡಿದ್ದಾನೆ. ಉಪೇಕ್ಷಿಸಿದ ವೃತವನ್ನು ನಂತರ ಖಳಾ ನಿರ್ವಹಿಸಿದರೆ ಸಾಕು.
ಖುರಾನ್ ನಲ್ಲಿ ಅಲ್ಲಾಹನು ವಿವರಿಸುತ್ತಾನೆ: "ನಿಮ್ಮಲ್ಲಿ ಯಾರಾದರೂ ರೋಗಿಗಳೋ, ಯಾತ್ರಿಕರೋ ಆಗಿದ್ದರೆ ವೃತ ಉಪೇಕ್ಷಿಸಬಹುದಾಗಿದೆ. ಆದರೆ, ನಿಶ್ಚಿತ ಲೆಕ್ಕವನ್ನು ನಂತರ ಪೂರ್ಣಮಾಡಬೇಕಾಗುತ್ತದೆ."ವೃತಾನುಷ್ಠಿಸಲು ತೊಂದರೆಯಿಲ್ಲದ ಯಾತ್ರಿಕರಿಗೂ ವೃತ ಉಪೇಕ್ಷಿಸಲು ಅನುವದನೀಯವಾಗಿದೆ.
ನಬಿﷺ ರವರ ಶಿಷ್ಯರಾದ ಹಂಝತುಲ್ಹಸ್ಸಾಮೀ(ರ)ರವರು, ನಬಿﷺ ರೊಡನೆ ಕೇಳಿದರು: "ಯಾ ರಸೂಲಲ್ಲಾಹ್ ﷺ, ಯಾತ್ರೆಯಲ್ಲಿ ತಾನುಷ್ಠಿಸಲು ನನಗೆ ಸಾಧ್ಯವಿದೆ. ಅದ್ದರಿಂದ ನಾನು ವೃತಾನುಷ್ಠಿಸುವುದರಿಂದ ತೊಂದರೆಯಿದೆಯೇ?"
ನಬಿﷺ ರವರು ಹೇಳಿದರು: "ಯಾತ್ರೆಯಲ್ಲಿ ವೃತ ಉಪೇಕ್ಷಿಸಲು ಅಲ್ಲಾಹನಿಂದ ಬಂದ ರಿಯಾಯಿತಿ ಯಾಗಿದೆ. ಯಾರಾದರೂ ಆ ರಿಯಾಯಿತಿ ಸ್ವೀಕರಿಸುವುದಾದರೆ ಅದು ಒಳ್ಳೆಯದು. ಹಾಗೇ ಒಬ್ಬರಿಗೆ ತಾನುಷ್ಠಿಸಲು ಇಷ್ಟವಿದ್ದರೆ ಅದರಿಂದ ತದರೆಯೇನೂ ಇಲ್ಲ." (ಮುಸ್ಲಿಂ)
〰〰〰〰〰〰〰〰〰〰
❓ಯಾತ್ರೆಯಲ್ಲಿ ವೃತಾನುಷ್ಠಿಸುವ ವ್ಯಕ್ತಿ ವೃತ ತೊರೆಯಲು ಹೊರಟ ಸ್ಥಳದ ಸಮಯ ನೋಡಿಯೋ ಅಥವಾ ಹೋಗಿ ತಲುಪುವ ಸ್ಥಳದ ಸಮಯ ನೋಡಿಯೋ.?
✅ ಎರಡೂ ಅಲ್ಲ. ತಾನು ಎಲ್ಲಿ ಇದ್ದರೂ ಸೂರ್ಯ ಅಸ್ತಮಿಸಿದ ನಂತರವಾಗಿದೆ ವೃತ ತೊರೆಯುವುದು. ವಿಮಾನದಲ್ಲಿ ಪ್ರಯಾಣಿಸುವ ವ್ಯಕ್ತಿ ಸೂರ್ಯ ಅಸ್ತಮಿಸಿದೆ ಎಂದು ಖಚಿತವಾದರೆ ವೃತ ತೊರೆಯಬೇಕು. ಕರ್ನಾಟಕದಿಂದ ವಿಮಾನದಲ್ಲಿ ಪ್ರಯಾಣಿಸುವ ಕೆಲವರು ಸೂರ್ಯಾಸ್ತಮಾನ ಪರಿಗಣಿಸದೇ ಊರಿನ ಸಮಯವನ್ನು ನೋಡಿ ವೃತ ತೊರೆಯುವರು. ಇದು ಖಂಡಿತಾ ತಪ್ಪು. ಆ ರೀತಿಯಲ್ಲಿ ವೃತ ತೊರೆಯುವವರು ಬದಲಾಗಿ ಇನ್ನೊಂದು ದಿನ ವೃತಾನುಷ್ಠಿಸಬೇಕು.
〰〰〰〰〰〰〰〰〰〰
❓ಗಲ್ಫ್ ದೇಶಗಳಲ್ಲಿ, ಕರ್ನಾಟಕದಲ್ಲಿ ವೃತ ಆರಂಭಿಸುವ ಕಾರ್ಯದಲ್ಲಿ ಕೆಲವು ಬಾರಿ ಒಂದು ದಿನದ ವ್ಯತ್ಯಾಸ ಉಂಟಾಗುವುದಿದೆ. ಗಲ್ಫ್ ನಾಡಿನಲ್ಲಿ ಒಂದು ದಿನ ಮೊದಲೇ ವೃತ ಆರಂಭವಾಗುವುದು ಮತ್ತು ಮುಗಿಯುವುದೂ ಇದೆ. ಇಂತಹ ಅವಸ್ಥೆಯಲ್ಲಿ ಗಲ್ಫ್ ನಾಡಿನಲ್ಲಿ ಮೂವತ್ತು ವೃತಾನುಷ್ಠಿಸುವ ವ್ಯಕ್ತಿ ಕರ್ಣಾಟಕ ಕ್ಕೆ ಯಾತ್ರೆ ಹೊರಡುತ್ತಾನೆ. ಅಲ್ಲಿ ತಲುಪಿದಾಗ ಮೂವತ್ತನೇ ವೃತದ ದಿನವಾಗಿರುತ್ತದೆ. ಅವರು ಮಾಡಬೇಕಾದದ್ದೇನು..?
ಮೂವತ್ತೊಂದನೇ ವೃತಾನುಷ್ಠಸಬಹುದೇ, ಅಥವಾ ಸ್ವಂತವಾಗಿ ಈದ್ ಆಚರಿಸಬಹುದೇ..?
✅ ಮೂವತ್ತು ದಿನ ಗಲ್ಫ್ ನಲ್ಲಿ ವೃತಾನುಷ್ಠಿಸಿದ ಒಬ್ಬ ವ್ಯಕ್ತಿ ಕರ್ನಾಟಕ ಕ್ಕೆ ತಲುಪಿದಾಗ ವೃತದ ಮತ್ತು ಈದ್ ನ ಕಾರ್ಯದಲ್ಲಿ ಕರ್ನಾಟಕದ ಮುಸ್ಲಿಮರನ್ನಾಗಿದೆ ಹಿಂಬಾಲಿಸುವುದು. ಅವರಿಗೆ ವೃತವಾದರೆ ಇವರೂ ವೃತಾನುಷ್ಠಿಸಬೇಕು. ಅವರು ಈದ್ ಆಚರಿಸವ ದಿನದಲ್ಲಾಗಿದೆ ಇವರೂ ಕೂಡ ಈದ್ ಆಚರಿಸುವುದು. ಕಾರಣ, ರಮಳಾನ್ ವೃತ ಮತ್ತು ಈದ್ ಆಚರಣೆ ಸಂಘಟಿತ ಸ್ವಭಾವವಿರುವ ಆರಾಧನೆಗಳಾಗಿದೆ.
ನಬಿﷺ ರವರು ಹೇಳಿದರು: "ನೀವು(ಸಮೂಹ) ವೃತಾನುಷ್ಠಿಸುವ ದಿವಸವಾಗಿದೆ ವೃತ. ಮುಗಿಸಬೇಕಾಗಿರುವುದು ನೀವು ಮುಗಿಸುವ ದಿನದಲ್ಲು."
ನಬಿﷺ ರವರು ಪ್ರಸ್ತಾಪಿಸಿದರು ಎಂದು ಆಯಿಶಾ(ರ)ರವರು ಹೇಳಿದ ಹದೀಸ್: "ಈದುಲ್ ಫಿತ್ರ್ ಆಚರಿಸಬೇಕಾಗಿರುವುದು ಜನರು ಈದುಲ್ ಫಿತ್ರ್ ಆಚರಿಸುವ ದಿನದಲ್ಲು. ಬಕ್ರೀದ್ ಆಚರಿಸಬೇಕಾಗಿರುವುದು ಜನರು ಬಕ್ರೀದ್ ಆಚರಿಸುವ ದಿನದಲ್ಲೂ."
(ತಿರ್'ಮಿದಿ)
ಈ ಅವಸ್ಥೆ ಯಲ್ಲಿ ಒಂದು ದಿನದ ವೃತ ಅಧಿಕವಾಗಿ ಅನುಷ್ಠಿಸಬೇಕಾಗಿ ಬರುವ ವ್ಯಕ್ತಿಗೆ ಅಲ್ಲಾಹನು ಅದರ ಕಾರಣದಿಂದ ಅಧಿಕ ಪ್ರತಿಫಲ ನೀಡುವನು.
〰〰〰〰〰〰〰〰〰〰
❓ಕರ್ನಾಟಕದಲ್ಲಿ ಇಪ್ಪತ್ತೆಂಟು ದಿನ ವೃತಾನುಷ್ಠಿಸಿದ ವ್ಯಕ್ತಿ ವಿದೇಶಕ್ಕೆ ತಲುಪುವನು. ಅದರ ಮರುದಿನ ಅಲ್ಲಿ ಈದ್ ಆಗಿದೆ. ಆ ವ್ಯಕ್ತಿ ಮಾಡಬೇಕಾದದ್ದೇನು..?
ಜನರೊಂದಿಗೆ ಈದ್ ಆಚರಿಸಬೇಕೋ ಅಥವಾ ವೃತಾನುಷ್ಠಿಸಬೇಕೋ..?
✅ ಇಪ್ಪತ್ತೆಂಟು ದಿನ ಮಾತ್ರ ವೃತಾನುಷ್ಠಿಸಿ ವಿದೇಶಕ್ಕೆ ತಲುಪುವ ವ್ಯಕ್ತಿ ಅಲ್ಲಿರುವ ಜನಗಳ ಜೊತೆ ಈದ್ ಆಚರಣೆಯಲ್ಲಿ ಭಾಗಿಯಾಗಬೇಕು. ನಂತರ ಒಂದು ಖಳಾ ತೀರಿಸಬೇಕು. ಕಾರಣ, ರಮಳಾನ್ ತಿಂಗಳು ಯಾವತ್ತೂ ಇಪ್ಪತ್ತೊಂಬತ್ತಕ್ಕಿಂತ ಕಡಿಮೆಯಾಗಲಾರದು.
〰〰〰〰〰〰〰〰〰〰
❓ಗರ್ಭಿಣಿ ಗಳು, ಮಕ್ಕಳಿಗೆ ಮೊಲೆಯುಣಿಸುವ ಸ್ತ್ರೀಗಳೂ ವೃತಾನುಷ್ಠಿಸುವುದಾದರೆ ಕೆಲವು ಬಾರಿ ಅವರಿಗೆ ಅವರ ಮಕ್ಕಳಿಗೂ ಅದು ದೋಷವಾಗುವುದು. ಆ ರೀತಿಯ ಸಮಯಗಳಲ್ಲಿ ಅವರು ಮಾಡಬೇಕಾಗಿರುವುದೇನು.?
✅ ಗರ್ಭಿಣಿ ಗಳು, ಮಕ್ಕಳಿಗೆ ಮೊಲೆಯುಣಿಸುವ ಸ್ತ್ರೀಗಳೂ ವೃತ ಕಾರಣ ದಿಂದ ದೋಷವುಂಟಾಗಬಹುದು ಎಂಬ ಆತಂಕವಿದ್ದರೆ ವೃತ ಉಪೇಕ್ಷಿಸಬಹುದು. ಆತಂಕ ನೀಗಿದ ನಂತರ ಅವರು ಉಪೇಕ್ಷಿಸಿದ ವೃತ ಖಳಾ ತೀರಿಸಿದರೆ ಸಾಕು. ಆದರೆ, ವೃತದಿಂದ ಗರ್ಭಿಣಿ ಗಳಿಗೂ ಮೊಲೆಯುಣಿಸುವ ಸ್ತ್ರೀಯರಿಗೂ ದೋಷವುಂಟಾಗಬಹುದು ಎಂಬ ಆತಂಕವಿಲ್ಲ. ಆದರೆ, ಗರ್ಭಿಣಿ ವೃತಾನುಷ್ಠಿಸುವುದಾದಲ್ಲಿ ತನ್ನ ಗರ್ಭಸ್ಥ ಶಿಶುವಿಗೂ, ಮೊಲೆಯುಣಿಸುವ ಸ್ತ್ರೀ ವೃತಾನುಷ್ಠಿಸುವುದಾದಲ್ಲಿ ತನ್ನ ಮೊಲೆಹಾಲು ಕುಡಿಯುವ ಮಗುವಿಗೂ ದೋಷವುಂಟಾಗಬಹುದೆಂಬ ಆತಂಕವಿದ್ದರೆ ಆ ರೀತಿಯ ತಾಯಂದಿರು ವೃತವನ್ನು ಉಪೇಕ್ಷಿಸಬಹುದು. ಉಪೇಕ್ಷಿಸಿದ್ದನ್ನು ನಂತರ ಅವರು ಖಳಾ ತೀರಿಸುವುದು ಮತ್ತು ಒಂದೊಂದು ದಿನದ ವೃತಕ್ಕೆ ಬದಲಾಗಿ ಒಂದೊಂದು ಬಡವರಿಗೆ ಆಹಾರವನ್ನು ನೀಡಬೇಕು.
〰〰〰〰〰〰〰〰〰〰
❓ವೃತಾನುಷ್ಠನೆಯೊಂದಿಗೆ ಒಬ್ಬ ವ್ಯಕ್ತಿ ಚುಚ್ಚುಮದ್ದು ತೆಗೆದುಕೊಳ್ಳುವುದರ ಇಸ್ಲಾಮಿನ ವಿಧಿ ಏನು.?
✅ ವೃತಾನುಷ್ಠನೆಯೊಂದಿಗೆ ಚುಚ್ಚುಮದ್ದು ತೆಗೆದುಕೊಳ್ಳಲು ವಿರೋಧವಿಲ್ಲ. ಕಾರಣ, ಶರೀರದ ಸಾಧಾರಣ ನರಗಳ ಮೂಲಕ ಏನಾದರೂ ಒಳಗೆ ಪ್ರವೇಶಿಸುವುದರಿಂದ ಮಾತ್ರವೇ ವೃತ ಮುರಿಯುವುದಾಗಿದೆ. ಚುಚ್ಚುಮದ್ದಿನ ರೀತಿಯಲ್ಲೇ ಆಗಿದೆ ಗಾಯಕ್ಕೆ ಮದ್ದನ್ನು ಹಚ್ಚುವುದು. ಆದರೆ, ಒಬ್ಬ ವ್ಯಕ್ತಿ ಹಸಿವು ದಾಹ ವೃತದ ಕ್ಷೀಣ ತಿಳಿಯಬಾರದೆಂದು ಏನಾದರೂ ಮದ್ದು ಚುಚ್ಚಿದಾಗ ಅದು ವೃತ ಶುದ್ಧಿಗೆ ಕಳಂಕ ತರುವಂತದ್ದಾಗಿದೆ. ಅದು ನಿಷಿದ್ಧವೂ ಕೂಡ.
〰〰〰〰〰〰〰〰〰〰
❓ವೃತಾನುಷ್ಠನೆಯೊಂದಿಗೆ ವಾಂತಿಯಾದರೆ ವೃತ ಸಿಂಧುವಾಗುವುದೋ.?
✅ ಒಬ್ಬರಿಗೆ ವಾಂತಿಯಾದರೆ ಅವರ ವೃತಕ್ಕೆ ತೊಂದರೆಯಿಲ್ಲ. ಅದು ಮನಪೂರ್ವಕವಾದರೆ ವೃತ ಅಸಿಂಧು. ನಬಿﷺ ರವರು ಹೇಳಿದರು: "ಯಾರಿಗಾದರೂ ವಾಂತಿ ಬಂದರೆ ಅವರು ಆ ವೃತವನ್ನು ನಂತರ ಖಳಾ ತೀರಿಸಬೇಕೆಂದಿಲ್ಲ. ಯಾರಾದರೂ ಮನಪೂರ್ವ ವಾಂತಿ ಬರುವಂತೆ ಮಾಡಿದರೆ ಆ ವೃತವನ್ನು ನಂತರ ಖಳಾ ನಿರ್ವಹಿಸಬೇಕು."
(ಅಹ್ಮದ್)
〰〰〰〰〰〰〰〰〰〰
❓ಸ್ವಪ್ನಸ್ಖಲನ, ಸಂಭೋಗ ಮೊದಲಾದ ಕಾರಣದಿಂದ ಒಬ್ಬರಿಗೆ ವೃತ ದಿನದ ರಾತ್ರಿಯಲ್ಲಿ ಸ್ನಾನ ಕಡ್ಡಾಯವಾದರೆ ಪ್ರಭಾತದ ಮೊದಲೇ ಸ್ನಾನ ಮುಗಿಸಿ ಶುದ್ಧಿಯಾಗಲು ಕಡ್ಡಾಯವಿದೆಯೇ..?
✅ ಕಡ್ಡಾಯವಿಲ್ಲ. ವೃತದಿನದ ರಾತ್ರಿಯಲ್ಲಿ ಸ್ನಾನ ಕಡ್ಡಾಯವಾದ ವ್ಯಕ್ತಿ ಅಶುದ್ಧಿಯೊಡನೆ ವೃತದಲ್ಲಿ ಪ್ರವೇಶಿಸಲು ವಿರೋಧವಿಲ್ಲ. ನಮಾಝಿನ ಮುಂಚಿತವಾಗಿ ಸ್ನಾನ ಮುಗಿಸಿದರೆ ಸಾಕಾಗುವುದು.
ಆಯಿಷಾ(ರ)ರವರು ಹೇಳಿದರು: "ನಬಿﷺ ವೃತದಲ್ಲಿರುವಾಗ ದೊಡ್ಡ ಅಶುದ್ಧಿಯೊಂದಿಗೆ ಪ್ರಭಾತಕ್ಕೆ ಪ್ರವೇಶಿಸುವರು. ನಂತರ ಸ್ನಾನ ಮಾಡುವರು."
(ಬುಖಾರಿ,ಮುಸ್ಲಿಂ)
〰〰〰〰〰〰〰〰〰〰
❓ಒಬ್ಬ ವ್ಯಕ್ತಿ ವೃತ ಸಮಯದಲ್ಲಿ ಮರೆತು ಏನಾದರೂ ತಿನ್ನುವುದೋ ಕುಡಿಯುವುದೋ ಮಾಡಿದರೆ ವೃತ ಭಂಗವಾಗುವುದೋ.?
✅ ತಾನು ವೃತದಲ್ಲಿರುವ ಕಾರ್ಯ ಮರೆತು ಏನಾದರೂ ತಿನ್ನುವುದೋ ಕುಡಿಯುವುದೋ ಮಾಡಿದರೆ ಅದರಿಂದ ವೃತಕ್ಕೆ ತೊಂದರಯಿಲ್ಲ. ನಬಿﷺ ಪಸ್ತಾಪಿಸಿದ್ದಾಗಿ ಅಬುಹುರೈರಾ(ರ)ರವರು ಹೇಳಿದರು: "ಯಾರಾದರೂ ವೃತದಲ್ಲಿರುವಾಗಲೇ ಮರೆತು ತಿನ್ನುವುದೋ ಕುಡಿಯುವುದೋ ಮಾಡಿದರೆ ಅವನು ತನ್ನ ವೃತವನ್ನು ಪೂರ್ಣಗೊಳಿಸಲಿ. ಕಾರಣ, ಅಲ್ಲಾಹನಾಗಿದ್ದಾನೆ ಅವನಿಗೆ ತಿನ್ನಲು ಕುಡಿಯಲು ನೀಡಿದ್ದು."
(ಬುಖಾರಿ,ಮುಸ್ಲಿಂ)
ಇನ್ನೊಂದು ನಬಿﷺ ವಚನ ಹೀಗಿದೆ: "ಮರೆತು ಯಾರಾದರೂ ರಮಳಾನಿನಲ್ಲಿ ವೃತವನ್ನು ಮುರಿಯುವುದಾದರೆ ಆ ವೃತ ನಂತರ ಖಳಾ ನಿರ್ವಹಿಸಲೋ ಪ್ರಾಯಶ್ಚಿತ್ತ ನೀಡಲೋ ಬೇಕಾಗಿಲ್ಲ."
"ಅಲ್ಲಾಹನು ನನ್ನ ಸಮುದಾಯಕ್ಕೆ
ತಿಳಿಯದೇ, ಮರೆತೋ, ಒತ್ತಾಯಕ್ಕೆ ಮಣಿದೋ ಮಾಡುವುದನ್ನು ಬಿಟ್ಟುಕೊಟ್ಟಿರುವನು"
ಎಂಬ ನಬಿﷺ ವಚನ ಈ ರೀತಿಯ ಎಲ್ಲಾ ಕಾರ್ಯಗಳಿಗೂ ಭಾದಿಸಿದ್ದಾಗಿದೆ.
〰〰〰〰〰〰〰〰〰〰
❓ರಕ್ತದಾನದ ಉದ್ದೇಶದಿಂದಲೋ ಪರಿಶೀಲನೆಗಾಗಿಯೋ ಶರೀರದಿಂದ ರಕ್ತ ತೆಗೆಯುವುದರಿಂದ ವೃತ ಭಂಗವಾಗುವುದೋ.?
✅ ಶರೀರದಿಂದ ರಕ್ತವನ್ನು ತೆಗೆಯುವುದರಿಂದ ವೃತ ಮುರಿಯಲಾರದು. ಆದರೆ ರಕ್ತ ತೆಗೆಯುವ ಕಾರಣದಿಂದ ವೃತವಿರುವ ವ್ಯಕ್ತಿಗೆ ಕ್ಷೀಣ ಸಂಭವಿಸಬಹುದು ಎಂದಾದರೆ ಆ ರೀತಿ ಮಾಡದಿರುವುದೇ ಉತ್ತಮ.
〰〰〰〰〰〰〰〰〰〰
❓ಕಣ್ಣಿಗೋ ಮೂಗಿಗೋ ಕಿವಿಯಲ್ಲೋ ಹನಿ ಮದ್ದು ಹಾಕುವುದರಿಂದ ವೃತಕ್ಕೆ ತೊಂದರೆ ಇದೆಯೇ.?
✅ ವಿದ್ವಾಂಸರುಗಳೆಡೆಯಲ್ಲಿ ಅಭಿಪ್ರಾಯ ವ್ಯತ್ಯಾಸವಿರುವ ಒಂದು ವಿಷಯವಾಗಿದೆ ಇದು. ನಬಿﷺ ರಿಂದ ವ್ಯಕ್ತವಾದ ವಿಧಿ ಈ ಕಾರ್ಯದಲ್ಲಿ ಉದ್ದರಿಸಲಾಗಿಲ್ಲ. ಕೆಲ ಪಂಡಿತರು, ಕಣ್ಣಿಗೆ ಮದ್ದು ಹಾಕುವುದರಿಂದ ವೃತಕ್ಕೆ ಭಂಗವಿಲ್ಲವೆಂದೂ, ಮೂಗಿಗೂ ಕಿವಿಗಳಿಗೂ ಮದ್ದು ಹಾಕುವುದರಿಂದ ವೃತ ಮುರಿಯುವುದೆಂಬ ಅಭಿಪ್ರಾಯದವರಾಗಿದ್ದಾರೆ. ಮತ್ತು ಕೆಲ ಪಂಡಿತರು ಕಣ್ಣಗೂ ಕಿವಿಗಳಿಗೂ ಮದ್ದು ಹಾಕುವುದರಿಂದ ವೃತಕ್ಕೆ ತೊಂದರೆ ಇಲ್ಲ ಎಂದೂ, ಮೂಗಿಗೆ ಮದ್ದು ಹಾಕುವುದರಿಂದ ಅದು ಗಂಟಲಿಗೋ, ಅದರ ಕೆಳಗೋ ಹೋಗುವುದಾದರೆ ವೃತ ಮುರಿಯುವುದಾಗಿ ಅಭಿಪ್ರಾಯ ಪಟ್ಟಿದ್ದಾರೆ. ಇದರಲ್ಲಿ ಅಂತಿಮ ಅಭಿಪ್ರಾಯವಾಗಿದೆ ಬಹಳ ಪ್ರಬಲವಾಗಿ ಕಾಣುವುದು. ಕಾರಣ, ವೃತದೊಂದಿಗಿರುವಾಗ ಅಂಗಶುದ್ಧಿ ಮಾಡುವ ಸಮಯದಲ್ಲಿ ಮೂಗಿನಲ್ಲಿ ಅಧಿಕ ನೀರನ್ನು ಎಳೆಯಬಾರದೆಂದು ಸೂಚಿಸುವ ನಬಿﷺ ವಚನ ಬಂದಿದೆ. ಮೂಗಿನ ಮೂಲಕ ಅಧಿಕ ನೀರು ಸೇರಿ ಗಂಟಲಿಗೋ ಅದರ ಕೆಳಗೋ ಇಳಿದರೆ ವೃತ ಮುರಿಯುವುದು ಎಂದಲ್ಲವೇ ನಾವು ಅದರಿಂದ ತಿಳಿಯಬೇಕಾಗಿರುವುದು. ಕಣ್ಣು ಮತ್ತು ಕಿವಿಗೆ ಹಾಕಿದ ಮದ್ದು ಗಂಟಲಿನ ಮೂಲಕ ಒಳಸೇರುವ ಮಾರ್ಗ ಅಲ್ಲವಾದ್ದರಿಂದ ಅದರಿಂದ ವೃತಕ್ಕೆ ಭಂಗವಾಗದು ಎಂದು ಹೇಳುವುದು.
ಅನುವಾದ; _ಇಕ್ಬಾಲ್ ಜಿ.ಕೆ.ಗುಲ್ವಾಡಿ_
ದೀನಿಗಾಗಿ ತಿಳಿಯಪಡಿಸಿದ ಈ ಸಣ್ಣ ಪ್ರಯತ್ನವನ್ನು ಅಲ್ಲಾಹನು ಸ್ವೀಕರಿಸಲಿ, ಆಮೀನ್...
🍁🍁🍁🍁🍁🍁🍁🍁🍁
🔹ನಬಿ ﷺ ರವರ ಮೇಲೆ ಸ್ವಲಾತ್
💫اللَّهُمَّ صَلِّ عَلَى سَيِّدِنَا مُحَمَّدٍ عَدَدَ مَا فِي عِلْمِ الله صَلاَةً دَائِمَةً بِدَوَامِ مُلْكِ الله🌹
〰〰〰〰〰〰〰〰〰
Comments