✍ ಹಸ ಗುಲ್ವಾಡಿ
ಹಿಜ್ರಾ ಕ್ಯಾಲಂಡರ್ ಪ್ರಕಾರ ಎಂಟನೇ ತಿಂಗಳಾದ ಶಅಬಾನಿನ 15ನೇ ರಾತ್ರಿಯಾಗಿದೆ ಪವಿತ್ರ ಬರಾಅತ್ ರಾತ್ರಿ. ಈ ರಾತ್ರಿಗೆ ಇತರೆ ರಾತ್ರಿಗಳಿಗಿಂತ ಪುಣ್ಯವೂ ಪ್ರತಿಫಲವಿದೆಯೆಂದು ಕುರ್-ಆನ್ ಹದೀಸುಗಳಲ್ಲಿ ಉಲ್ಲೇಖಿಸಲ್ಪಟ್ಟಿದೆ. ಸೂರತ್ ದುಖಾನಿನ 3ನೇ ಸೂಕ್ತದಲ್ಲಿ ಪರಾಮರ್ಶಿಸಿದ ಅನುಗ್ರಹಿತ ರಾತ್ರಿ ಬರಾಅತ್ ರಾತ್ರಿಯಾಗಿದೆಯೆಂದು ಅನೇಕ ಕುರ್-ಆನ್ ವ್ಯಾಖ್ಯಾನಕಾರರು ಅಭಿಪ್ರಾಯಪಟ್ಟಿದ್ದಾರೆ.
ಪ್ರಮುಖ ಕುರ್-ಆನ್ ವ್ಯಾಖ್ಯಾನಕಾರರಾದ ಇಕ್ರಿಮ (ರ) ಈ ಸೂಕ್ತವನ್ನು ವ್ಯಾಖ್ಯಾನಿಸಿ ಹೇಳುತ್ತಾರೆ: ಈ ಸೂಕ್ತದಲ್ಲಿ ಪರಾಮರ್ಶಿಸಿದ ಅನುಗ್ರಹಿತ ರಾತ್ರಿ ಶಅಬಾನ್ 15ರ ರಾತ್ರಿಯಾಗಿದೆ. ಆ ರಾತ್ರಿಯಲ್ಲಿ ಒಂದು ವರ್ಷಕ್ಕಿರುವ ಕಾರ್ಯಗಳನ್ನು ತೀರ್ಮಾನಿಸಲಾಗುವುದು.ಜೀವಿಸಿರುವವರನ್ನು ಮರಣ ಹೊಂದಿದವರಿಂದ ಬೇರ್ಪಡಿಸಿ ಪಟ್ಟಿ ತಯಾರಿಸಲಾಗುವುದು. ಈ ವರ್ಷದಲ್ಲಿ ಯಾರೆಲ್ಲಾ ಹಜ್ಜ್ ನಿರ್ವಹಿಸುವರೆಂದು ನಿಶ್ಚಯಿಸಲಾಗುವುದು.
ಬರಾಅತ್ ರಾತ್ರಿಯ ಶ್ರೇಷ್ಠತೆಯನ್ನು ವಿವರಿಸುತ್ತಾ ಇಮಾಂ ರಾಝಿ (ರ) ಉಲ್ಲೇಖಿಸುತ್ತಾರೆ, ಐದು ಸವಿಶೇಷತೆಗಳಾಗಿದೆ ಬರಾಅತ್ ರಾತ್ರಿಗಿರುವುದು.
1.ಯುಕ್ತಿ ಪೂರ್ಣವಾದ ಎಲ್ಲಾ ಕಾರ್ಯಗಳನ್ನು ಅದರಲ್ಲಿ ತೀರ್ಮಾನಿಸಲ್ಪಡುತ್ತದೆ.
2. ಬರಾಅತ್ ರಾತ್ರಿಯಲ್ಲಿ ಆರಾಧನೆ ಅತೀ ವಿಶಿಷ್ಠವಾಗಿದೆ. ನಬಿ ﷺ ಹೇಳುತ್ತಾರೆ: ಬರಾಅತ್ ರಾತ್ರಿಯಲ್ಲಿ ಯಥೇಚ್ಛವಾಗಿ ನಮಾಝ್ ನಿರ್ವಹಿಸುವವರಿಗೆ ಮಲಕುಗಳು ಪಾಪ ಮೋಚನೆ ಬೇಡುವರು.ಸ್ವರ್ಗವಿದೆಯೆಂಬ ವಾರ್ತೆ ತಿಳಿಸುವರು.ಆಪತ್ತು, ಅಪಘಡಗಳಿಂದ ರಕ್ಷಿಸಲ್ಪಡುವುದು. ಪಿಶಾಚಿಯ ತೊಂದರೆಗಳಿಂದ ದೂರಿಗರಿಸಲ್ಪಡುವುದು.
3.ಬರಾಅತ್ ರಾತ್ರಿಯಲ್ಲಿ ಅನುಗ್ರಹ ಯಥೇಚ್ಛವಾಗಿ ವರ್ಷಿಸಲ್ಪಡುತ್ತದೆ. ನಬಿ ﷺ ಹೇಳುತ್ತಾರೆ: ಕಲ್ಬ್ ಗೋತ್ರದ ಆಡಿನ(ಕುರಿ) ರೋಮದ ಲೆಕ್ಕಾನುಸಾರ ಈ ರಾತ್ರಿಯಲ್ಲಿ (ಬರಾಅತ್ ರಾತ್ರಿ) ಅಲ್ಲಾಹನು ತನ್ನ ದಾಸರಿಗೆ ಅನುಗ್ರಹವನ್ನು ದಯಪಾಲಿಸುವನು.
4. ಪ್ರತ್ಯೇಕ ಪಾಪಮೋಚನೆ ನೀಡಲಾಗುವುದು. ನಬಿ ﷺ ಹೇಳುತ್ತಾರೆ: ಬರಾಅತ್ ರಾತ್ರಿಯಲ್ಲಿ ಎಲ್ಲಾ ಸತ್ಯವಿಶ್ವಾಸಿಗಳಿಗೆ ಅಲ್ಲಾಹನು ಪಾಪಗಳನ್ನು ಮನ್ನಿಸುವನು, ಐದು ವಿಭಾಗ ಹೊರತು.
೧.ಮಧ್ಯಪಾನ ರೂಢಿ ಮಾಡಿದವನು.
೨.ಪರಸ್ಪರ ಹಗೆ ಸಾಧಿಸುವವನು.
೩.ವ್ಯಭಿಚಾರ ರೂಢಿ ಮಾಡಿದವನು.
೪.ಮಾತಾ ಪಿತಾರನ್ನು ವ್ಯಥೆಗೊಳಪಡಿಸಿದವನು.
೫.ಜ್ಯೋತಿಷಿ.
5.ನಬಿ ﷺ ರಿಗೆ ತನ್ನ ಸಮುದಾಯಕ್ಕೆ ಶಿಫಾರಸು ನೀಡುವ ಪೂರ್ಣಾಧಿಕಾರ ನೀಡಿದ ದಿವಸವಾಗಿದೆ.ಶಅಬಾನ್ 13 ರಂದು ಮೂರರಲ್ಲಿ ಒಂದು ಅಧಿಕಾರವೂ, 14ರಂದು ಮೂರರಲ್ಲಿ ಎರಡು ಅಧಿಕಾರವೂ, 15 ರಂದು ಪೂರ್ಣಾಧಿಕಾರವೂ ಲಭಿಸಿದ್ದಾಗಿದೆ. ಈ ಕಾರಣದಿಂದ ಪ್ರಸ್ತುತ ಮೂರು ರಾತ್ರಿಯಲ್ಲೂ ನಬಿ ﷺ ಹೆಚ್ಚು ಸಮಯ ಪ್ರಾರ್ಥಿಸಿರುವುದಾಗಿ ಹದೀಸ್ ಗಳಲ್ಲಿ ಕಾಣಬಹುದು.
ಮುಆದುಬ್ನು ಜಬಲ್ (ರ) ರಿಂದ ನಿವೇದನೆ: ನಬಿ ﷺ ಹೇಳಿದರು: ಶಅಬಾನ್ 15ರ ರಾತ್ರಿಯಲ್ಲಿ ಬಹು ದೈವ ವಿಶ್ವಾಸಿಗಳು, ನೀತಿಗೆಟ್ಟವನು , ಹೊರತುಪಡಿಸಿ ಮತ್ತೆಲ್ಲರಿಗೂ ಅಲ್ಲಾಹನು ಕರುಣೆ ತೋರುವನು,ಪಾಪಗಳನ್ನು ಮನ್ನಿಸುವನು.(ತ್ವಬ್ರಾನಿ)
ಇಬ್ನು ಉಮರ್ (ರ) ನಿವೇದನೆ:
5 ರಾತ್ರಿಗಳಲ್ಲಿ ಪ್ರಾರ್ಥನೆಗೆ ಉತ್ತರ ಲಭಿಸದೆ ಇರಲಾರದು.
1.ಶುಕ್ರವಾರ ರಾತ್ರಿ
2.ರಜಬ್ ತಿಂಗಳ ಒಂದನೇ ರಾತ್ರಿ
3.ಲೈಲತುಲ್ ಖದರಿನ ರಾತ್ರಿ
4.ಈದ್ ದಿನದ ರಾತ್ರಿ
5.ಬರಾಅತ್ ರಾತ್ರಿ
ಬರಾಅತ್ ರಾತ್ರಿ ಒಳಗೊಂಡ ಶಅಬಾನ್ ತಿಂಗಳು "ನನ್ನ ತಿಂಗಳಾಗಿದೆ" ಎಂದು ನಬಿ ﷺ ವಿಶೇಷಿಸಿದ್ದಾರೆ. ನಬಿ ﷺ ಪವಾಡಗಳಲ್ಲಿ ಒಂದಾದ ಚಂದ್ರನನ್ನು ಇಬ್ಭಾಗ ಮಾಡಿದ್ದು, ನಬಿಯವರ ತೃಪ್ತಿಗಾಗಿ ಕಅಬವನ್ನು ಪುನಃ ಕಿಬ್ಲವಾಗಿ ನಿಶ್ಚಯಿಸಿದ್ದು ಶಅಬಾನ್ ತಿಂಗಳಲ್ಲಾಗಿದೆ.
ಬರಾಅತ್ ರಾತ್ರಿ ಹೇಳಬೇಕಾದ ದ್ಸಿಕ್ರ್ ಗಳು.
سُورة يسۤ
3 ಬಾರಿ
1.ತನ್ನ ಹಾಗು ತನ್ನ ಕುಟುಂಬದ ದೀರ್ಘಾಯುಷ್ಯಕ್ಕಾಗಿ.
2. ಆಹಾರ ಪಾನೀಯಗಳಲ್ಲಿ ವೃದ್ಧಿಗಾಗಿ.(ಬರಕತ್)
3. ಸಲ್ಮರಣ (ಹುಸ್ನುಲ್ ಖಾತಿಮ) ಲಭಿಸಲು, ವಿಜಯಿಗಳಲ್ಲಿ ಸಾಲಲ್ಲಿ ಸೇರಲು.
سورة الدخان
1 ಬಾರಿ
يَا حَيُّ يَا قَيُّومُ بِرَحْمْتِكَ اَسْتَغِيثْ.
100 ಬಾರಿ
اَللَّهُمَّ اِنَّكَ حَلِيمٌ ذُو أَنَاةٍ لَا طَاقَةَ لَنَا فَاعْفُ عَنَّا بَحِلْمِكَ يَا اللَّهُ بِرَحْمَتِكَ يَا اَرْحَمَ الرَّاحِمِينَ
70 ಬಾರಿ
حَسْبِيَ اللَّهُ نِعْمَ الْوَكِيلْ نِعْمَ الْمَوْلَى وَنِعْمَ النَّصِيرْ
100 ಸಲ
صَلَاةْ
100
ಅತ್ಯಂತ ಶ್ರೇಷ್ಠವಾದ ರಾತ್ರಿಯಾಗಿದೆ ಬರಾಅತ್ ಎನ್ನುವುದರಲ್ಲಿ ಯಾವುದೇ ಸಂಶಯವಿಲ್ಲ. ಆ ರಾತ್ರಿಯಲ್ಲಿ ಧಾರಾಳ ಸತ್ಕರ್ಮಗಳನ್ನು ನಿರ್ವಹಿಸಲು ಅಲ್ಲಾಹನು ಅನುಗ್ರಹಿಸಲಿ... ಆಮೀನ್.
ದುಆ ವಸಿಯ್ಯತಿನೊಂದಿಗೆ
تقبل الله مني
Comments