Skip to main content

ವಿಮೋಚನೆಯ ಬರಾಅತ್ ರಾತ್ರಿ

✍ ಇಕ್ಬಾಲ್ ಜಿ.ಕೆ.ಗುಲ್ವಾಡಿ
============================
🔹ಶಅಬಾನ್ ತಿಂಗಳ ಬಹಳ ಪುಣ್ಯಕರವಾದ ಮತ್ತು ಗೌರವಿಸಬೇಕಾದ ರಾತ್ರಿಯಾಗಿದೆ ಶಅಬಾನ್ ಹದಿನೈದರ ರಾತ್ರಿ. ಬರಾಅತ್ ಎಂಬ ಹೆಸರಿನಲ್ಲಾಗಿದೆ ಈ ರಾತ್ರಿಯನ್ನು ಪರಿಚಯಿಸಲ್ಪಡುವುದು. ಅಲ್ಲಾಹನು ಹೇಳುತ್ತಾನೆ, "ಖಂಡಿತವಾಗಿಯೂ ನಾವು ಅದನ್ನು(ಕುರಾನ್) ಒಂದು ಅನುಗ್ರಹವಾದ ರಾತ್ರಿಯಲ್ಲಿ ಇಳಿಸಲ್ಪಟ್ಟಿದ್ದೇವೆ. ಖಂಡಿತವಾಗಿಯೂ ನಾವು ಎಚ್ಚರಿಕೆ ನೀಡವವನಾಗಿದ್ದೇನೆ. ಆ ರಾತ್ರಿಯಲ್ಲಿ ಯುಕ್ತಿಪೂರ್ಣವಾದ ಒಂದೊಂದು ಕಾರ್ಯವನ್ನೂ ಬೇರ್ಪಡಿಸಿ ವಿವರಿಸಿಕೊಡಲಾಗುವುದು"
(ಸೂರಾ: ದು:ಖಾನ್ - 2,3,4)

🔹ಈ ಸೂಕ್ತವನ್ನು ಪ್ರಮುಖ ಕುರಾನ್ ವ್ಯಾಖ್ಯಾನಕಾರರು ಈ ರೀತಿಯಾಗಿ ವ್ಯಾಖ್ಯಾನಿಸುವುದನ್ನು ಕಾಣಬಹುದು;
ಇಮಾಂ ರಾಝೀ(ರ) ಹೇಳುತ್ತಾರೆ,
"ಇಕ್'ರಿಮ(ರ) ಮತ್ತು ಇತರ ಪಂಡಿತರು ಹೇಳಿರುವರು, ಈ ಸೂಕ್ತದಲ್ಲಿ ಹೇಳಲ್ಪಟ್ಟ ಪುಣ್ಯವಿರುವ ರಾತ್ರಿ ಯಾಗಿದೆ. ಅದು ಶಅಬಾನ್ ಹದಿನೈದರ ರಾತ್ರಿ"
(ತಫ್ಸೀರುಲ್ ಖಬೀರ್ 22/239)

🔹ಇಸ್ಮಾಯೀಲುಲ್ ಹಿಕೀ(ರ) ಹೇಳುತ್ತಾರೆ;
"ಕುರಾನ್ ವ್ಯಾಖ್ಯಾನಗಾರರಲ್ಲಿ ಕೆಲವರು ಹೇಳುತ್ತಾರೆ.
ಪುಣ್ಯವಿರುವ ರಾತ್ರಿ ಎಂಬ ಉದ್ದೇಶ ಶಅಬಾನ್ ಹದಿನೈದರ ರಾತ್ರಿಯಾಗಿದೆ"
(ರೂಹುನ್ ಬಯಾನ್ 8/402, ಜಾಮಿಉನ್ ಬಯಾನ್ 25/109, 
ಮದಾರಿಕ್ 4/126)

🔹ಮಹ್ಮೂದ್ ಆಲುಸೀ ಬರೆಯುತ್ತಾರೆ;
"ಇಕ್ರಿಮ(ರ) ರವರು, ಒಂದು ವಿಭಾಗ ಪಂಡಿತರುಗಳು ಹೇಳಿರುವರು. ಈ ಸೂಕ್ತದಲ್ಲಿ ಹೇಳಲ್ಪಟ್ಟ ಪಣ್ಯವಾದ ರಾತ್ರಿ ಶಅಬಾನ್ ಹದಿನೈದರ ರಾತ್ರಿಯಾಗಿದೆ. ಇದಕ್ಕೆ ಬರಾಅತ್ ರಾತ್ರಿಯೆಂದೂ ಹೆಸರಿದೆ."
(ರೂಹುನ್ ಮಆನಿ 25/110 ಇಬ್ನುಲ್ ಜೌಝಿಯ ಸಾದುನ್ ಮಸೀರ್ - ಇಮಾಂ ಸುಯೂತಿ(ರ) ರವರ ಅದುರ್ರುನ್ ಮನ್ಸುರ್ - ಶೌಕಾನಿಯವರ ಫತ್ಹುನ್ ಖದೀರ್ - ಇಮಾಂ ಖುರ್ತುಬಿ(ರ) ರವರ ಅನ್ ಜಾಮಿಅ ಲಿನ್ ಅಹ್'ಕಾಮಿನ್ ಕುರಾನ್ 17/166) ಮೊದಲಾದ ಕುರಾನ್ ವ್ಯಾಖ್ಯಾನಗಳಲ್ಲೂ ಈ ಅಭಿಪ್ರಾಯವನ್ನು ಕಾಣಬಹುದು.

🔹ಮೇಲೆ ವಿವರಿಸಿದ ಸೂಕ್ತದ ವ್ಯಾಖ್ಯಾನಗಾರರು ವ್ಯಾಖ್ಯಾನಿಸಿದ ವಿಷಯಗಳಾಗಿದೆ ಮೊದಲು ಸೂಚಿಸಿರುವುದು.
ಪ್ರಸ್ತುತ ಸೂಕ್ತದಲ್ಲಿ ಮೇಲೆ ವ್ಯಾಖ್ಯಾನ ನೀಡಿದ ಕೆಲ ಪಂಡಿತರು ಅದು ಲೈಲತುಲ್ ಖದ್ರ್ ನೊಂದಿಗೆ ಒಳಪಡುತ್ತದೆಂದು ವ್ಯಾಖ್ಯಾನಿಸಿದ್ದನ್ನು ಕಾಣಬಹುದು. ಆಗ ಈ ಸೂಕ್ತದ ವ್ಯಾಖ್ಯಾನದ ಪರಿಧಿಯಲ್ಲಿ ಲೈಲತುಲ್ ಖದ್ರ್ ಕೂಡಾ ಒಳಗೊಂಡಿರುತ್ತದೆ. ಎಂದಲ್ಲದೇ ಒಂದು ಇನ್ನೊಂದನ್ನು ನಿರಾಕರಿಸಲೋ ನಿಷೇಧಿಸಲೋ ಮಾಡುವುದಿಲ್ಲ.

🔹ಒಂದು ಸೂಕ್ತಕ್ಕೆ ಒಂದಕ್ಕಿಂತ ಅಧಿಕ ವ್ಯಾಖ್ಯಾನಗಳುಂಟಾದರೆ ವೈರುಧ್ಯವಾಗಿ ಕಡೆಗಣಿಸದೇ, ವೈವಿಧ್ಯಮಯವಾಗಿ ಪರಿಗಣಿಸಿ ಪ್ರಸ್ತುತ ಅಭಿಪ್ರಾಯಗಳನ್ನು ಒಳಪಡಿಸಿ ಅಂಗೀಕರಿಸಬೇಕಾಗಿರುವುದು. ಈ ನಿಯಮ ವ್ಯಾಖ್ಯಾನ ಶಾಸ್ತ್ರವನ್ನು ವಿವರಿಸುವ ಪಂಡಿತರು ಎಚ್ಚರಿಸಿರುವುದನ್ನು ಕಾಣಬಹುದು.
(ತಫ್ಸೀರುಲ್ ಕಬೀರ್)

🔹ತಪ್ಪುಗಳನ್ನು ಪಶ್ಚಾತಪಿಸಲು ಇಂದು ಬೇಡುವವನಿಲ್ಲವೋ,
ನಾನು ಸ್ವೀಕರಿಸುವೆನು.
ಆಹಾರ ಬೇಡುವವನಿಲ್ಲವೋ, ನಾನು ಆಹಾರವನ್ನು ನೀಡುವೆನು.
ಪ್ರಯಾಸವನ್ನು ಅನುಭವಿಸುವವನಿಲ್ಲವೋ,
ನಾನು ಸುಖವನ್ನು ನೀಡುವೆನು.
(ಬರಾಅತ್ ರಾತ್ರಿಯಂದು) ಪ್ರಭಾತದ ವರೆಗೆ ಅಲ್ಲಾಹು ಈ ರೀತಿ ಹೇಳುತ್ತಿರುವನು (ಇಬ್ನು ಮಾಜ)

🔹ಪ್ರಪಂಚದಲ್ಲಿ ಏನು ನಡೆಯಬೇಕು, ನಡೆಯಬಾರದು ಎನ್ನುವುದೆಲ್ಲವೂ ಅಲ್ಲಾಹನ ಅರಿವಿಗೂ ಉದ್ದೇಶಕ್ಕೂ ವಿಧೇಯವಾಗಿದೆ. ಆ ಕಾರ್ಯಗಳೆಲ್ಲಾ ಮೊದಲೇ ತೀರ್ಮಾನಿಸಿಯಾಗಿದೆ. ಆದರೆ ಒಬ್ಬೊಬ್ಬ ಮನುಷ್ಯ ಮತ್ತಿತರ ಜೀವಿಗಳೊಂದಿಗೆ ಸಂಬಂಧಿಸಿ ಅಲ್ಲಾಹನ ತೀರ್ಮಾನಗಳ ಕಾರ್ಯಗಳನ್ನು ವರ್ಷದಲ್ಲೊಂದು ಬಾರಿ ಮಲಕ್ ಗಳಿಗೆ ಹಸ್ತಾಂತರಿಸುವುದು ಪವಿತ್ರ ರಮಳಾನಿನ ಲೈಲತುಲ್ ಖದ್ರ್ ನಲ್ಲಾಗಿದೆ. ಇದನ್ನು ಕ್ರಮಪ್ರಕಾರವಾಗಿಸುವ ಕಾರ್ಯಗಳ ಆರಂಭವಾಗಿದೆ ಬರಾಅತ್ ರಾತ್ರಿ. ಆರಂಭ ದಿನವಾಗಿ ಬರಾಅತ್ ರಾತ್ರಿಯಾಗಿಯೂ, ಕೊನೆಯ ದಿನ ಲೈಲತುಲ್ ಖದ್ರ್ ರಾತ್ರಿಗಳೂ ಬಹಳ ಪುಣ್ಯಗಳ ರಾತ್ರಿಗಳಾಗಿದೆ.

🔹ಬರಾಅತ್ ಎನ್ನುವ ಪದದ ಅರ್ಥ ಮೋಚನೆ ಎಂದಾಗಿದೆ. ಈ ರಾತ್ರಿ ಪಾಪಿಗಳಿಗೆ ಮೋಕ್ಷಕ್ಕಾಗಿ ನಿಮಿತ್ತಗೊಳಿಸಿದ್ದಾಗಿದೆ ಎಂದು, ಹೀಗಾಗಿ ಈ ಹೆಸರು ಬರಲು ಕಾರಣವೆಂದು ಪಂಡಿತರಲ್ಲಿ ಕೆಲವರು ಹೇಳಿರುವರು.
ಬರಾಅತ್ ರಾತ್ರಿಯಲ್ಲಿ ಪ್ರತ್ಯೇಕವಾದ ಪಾಪ ವಿಮೋಚನೆ ಹದೀಸ್ ಗಳಲ್ಲಿ ಕಾಣಬಹುದು.
ಮಹತ್ವ ಹೊಂದಿದ ರಾತ್ರಿ ಬರಾಅತ್ ರಾತ್ರಿಯ ಮಹತ್ವವು ಸರ್ವಾಂಗೀಕೃತವಾಗಿದೆ. ಮುಸ್ಲಿಂ ಲೋಕ ಎಂದೆಂದೂ ಈ ರಾತ್ರಿಯ ಮಹತ್ವವನ್ನು ಒಳಗೊಂಡಾಗಿದೆ ಪ್ರವರ್ತರಾಗಿರುವುದು.

🍁 ಬರಾಅತ್ ವೃತ 🍁
♻ ನಬಿ ಹೇಳಿದರು "ಶಅಬಾನ್ ಅರ್ಧದ ರಾತ್ರಿಯಲ್ಲಿ ನೀವು ನಮಾಝ್ ನಿರ್ವಹಿಸಿ ಅದರ ಪ್ರಭಾತದಲ್ಲಿ ನೀವು ವೃತಾನುಷ್ಟಿಸಿರಿ"
(ಇಬ್ನು ಮಾಜ. ಮಿಶ್ಕಾತ್ 1/155) ಈ ಹದೀಸಿನ ಕುರಿತು ಇಮಾಂ ರಮ್'ಲಿ(ರ)ರವರೊಡನೆ ಕೇಳಿದಾಗ ಅವರು  ಹೇಳಿದರು "ಈ ಹದೀಸ್ ನಿಂದ ಲಕ್ಷ್ಯ ತಲುಪಬಹುದಾಗಿದೆ"
(ಫತಾವಾ ರಮ್'ಲಿ 2/79)
ಇಮಾಂ ರಮ್'ಲಿ(ರ) ಹೇಳುತ್ತಾರೆ
"ಶಅಬಾನ್ ಹದಿನೈದರ ವೃತ ಸುನ್ನತ್ತಾಗಿದೆ" (ಫತಾವಾ ರಮ್'ಲಿ 2/79)

🍁 ಪ್ರಾರ್ಥನೆ 🍁
♻ ಅದೇ ದಿನದಲ್ಲಿರುವ ಪ್ರಾರ್ಥನೆ ಸ್ವಹಾಬಿಗಳಿಂದ ಅಂದಿನ ಪಂಡಿತರುಗಳಿಂದ ಉಲ್ಲೇಖಿಸಲಾಗಿದೆ.
ಮುಲ್ಲಾ ಅಲಿಯ್ಯುಲ್'ಖಾರೀ(ರ) ಹೇಳುತ್ತಾರೆ,
"ಉಮರ್ ಬ್ನುಲ್ ಖತ್ತಾಬ್(ರ), ಇಬ್ನು ಮಸ್'ವೂದ್(ರ) ಮೊದಲಾದವರಿಂದ ಉಲ್ಲೇಖಿಸಲಾಗಿದೆ. ಅವರು ಈ ರೀತಿಯಾಗಿ ಪ್ರಾರ್ಥಿಸುತ್ತಿದ್ದರು.
(ಮಿರ್'ಖಾತ್ತ್ 2/178)

اَللّهُمَّ اِنْ كُنْتَ كَتَبْتَنَا اَشْقِيَاءَ فَامْحُهُ وَاكْتُبْنَا سُعَدَاءَ وَاِنْ كُنْتَ كَتَبْتَنَا سُعَدَاءَ فَاثْبِتْنَا فَاِنَّك تَمْحُو مَاتَشَاءُ وَعِنْدَكَ اُمُّ الِكتَاب
(ಅಲ್ಲಾಹನೇ ನೀನು ನಮ್ಮನ್ನು ಪರಾಜಿತರಲ್ಲಿ ಬರೆದಿಟ್ಟಿರುವುದಾದರೆ ನೀನು ಅದನ್ನು ಅಳಿಸಿಹಾಕಿ ವಿಜೇತರಲ್ಲಿ ಸೇರಿದವರಾಗಿ ನೀನು ನಮ್ಮೆಲ್ಲರನ್ನೂ ಬರೆದಿಡು ನಾದಾ. ನೀನು ನಮ್ಮನ್ನು ವಿಜೇತರಲ್ಲಿ ಬರೆದಿಟ್ಟಿರುವುದಾದರೆ ನೀನು ಅದನ್ನು ಸ್ಥಿರವಾಗಿಸಿಡು ನಾದಾ.
ಉದ್ದೇಶಿಸಿದ್ದನ್ನು ಸ್ಥಿರವಾಗಿಸುವವನು, ಅಳಿಸಿಹಾಕುವವನು ನೀನಾಗಿರುವೆನು. ನಿನ್ನೊಂದಿಗಾಗಿದೆ ಉಮ್ಮುಲ್ ಕಿತಾಬ್)

🍁 ಬರಾಅತ್ ರಾತ್ರಿಯಲ್ಲಿ ಪಠಿಸಬೇಕಾದ ದ್ಸಿಕ್ರ್ ಗಳು ಮತ್ತು ದುಆ ಗಳು 🍁
اَللّهُمَّ اِنَّكَ حَلِيمٌ ذُو اِنَائَةٍ لَا طَاقَةَ لَنَا فَاعْفُ عَنَا بِحِلْمِكَ يَا اَلله بِرَحْمَتِكَ يَا اَرْحَمَ الرَحِمِين
(ಎಪ್ಪತ್ತು ಬಾರಿ ಹೇಳಬೇಕು)

يَا حَيُّ يَاقَيَومُ بِرَحْمَتِكَ اَسْتَغِيث
(ನೂರು ಬಾರಿ ಹೇಳಬೇಕು)

🔸 ಸೂರಾಃ ಯಾಸೀನ್ ಮೂರು ಬಾರಿ ಪಾರಾಯಣ ಮಾಡಬೇಕು
🔸- ದೀರ್ಘಾಯುಷ್ಯಕ್ಕಾಗಿ
      - ಆಹಾರಗಳಲ್ಲಿ ವಿಶಾಲತೆ (ಬರ್ಕತ್)ಲಭಿಸಲು
       - ಈಮಾನ್ ನೊಂದಿಗೆ ಮರಣ ಹೊಂದಲು
🔸 ಸೂರಾಃ ದುಖಾನ್ ಪಾರಾಯಣ ಮಾಡಬೇಕು
             -ಇಕ್ಬಾಲ್ ಜಿ.ಕೆ.ಗುಲ್ವಾಡಿ ತಿಳಿಯದವರಿಗೆ ಅರಿವು ಮೂಡಿಸುವುದು ಅತಿ ದೊಡ್ಡ ದಾನವಾಗಿದೆ. ಓದಿರಿ ಮತ್ತು ಎಲ್ಲರಿಗೂ ರವಾನಿಸಿರಿ
ಅಲ್ಲಾಹು ನಮ್ಮೆಲ್ಲರನ್ನೂ ಸ್ವರ್ಗ ದಲ್ಲಿ ಒಂದುಗೂಡಿಸಲಿ, ಆಮೀನ್
🍁🍁🍁🍁🍁🍁🍁🍁🍁🍁
🔹ನಬಿ ﷺ ರವರ ಮೇಲೆ ಸ್ವಲಾತ್.
اللَّهُمَّ صَلِّ عَلَى سَيِّدِنَا مُحَمَّدٍ عَدَدَ مَا فِي عِلْمِ الله صَلاَةً دَائِمَةً بِدَوَامِ مُلْكِ الله

Comments

Popular posts from this blog

ಗ್ರಹಣ ನಮಾಜಿನ ರೂಪ

ಗ್ರಹಣ ನಮಾಜಿನ ರೂಪ *ಚಂದ್ರಗ್ರಹಣದ ಸುನ್ನತ್ ನಮಾಜು ಎರಡು ರಕಅತ್ ಅಲ್ಲಾಹನಿಗಾಗಿ ಜಮಾಅತ್ತಾಗಿ ನಾನು ನಿರ್ವಹಿಸುವೆನು* ಎಂದು ನಿಯ್ಯತ್ ಮಾಡಿ ಅಲ್ಲಾಹು ಅಕ್ಬರ್ ಎಂದು ಹೇಳಿ ನಮಾಜಿಗೆ ಪ್ರವೇಶಿಸುವು...

ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ. ಲೇ - ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಅಕ್ಕರೆಕೆರೆ.

ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ. ಲೇ - ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಅಕ್ಕರೆಕೆರೆ. ಆಮಿನ ಬೀವಿ ರ.ಅ ಗರ್ಭಿಣಿಯಾಗಿರುವಾಗ ವ್ಯಾಪಾರಕ್ಕಾಗಿ ಸಿರಿಯಾಕ್ಕೆ ಹೋಗಿದ್ದ ಅಬ್ದುಲ್ಲಾಹ್ (ರ.ಅ) ಮರಳಿ ಬರುವಾಗ ಮದೀನದಲ್ಲಿ ವಫಾತಾದರು.ತಂದೆಯ ಮಾವಂದಿರರಾದ ಬನುನ್ನಜ್ಜಾರ್ ಗೋತ್ರದವರ ಬಳಿ ದಫನ ಮಾಡಲಾಯಿತು.ರಬೀವುಲ್ ಹನ್ನೆರಡು ಸೋಮವಾರ ಸುಬಹಿಯ ಸ್ವಲ್ಪ ಮುಂಚೆ ಅಂತ್ಯ ಪ್ರವಾದಿ ಮುಹಮ್ಮದ್ ಮುಸ್ತಫ ಸ.ಅ ಮಕ್ಕಾದಲ್ಲಿ ಜನಿಸಿದರು.ಅಂದು ಕ್ರಿಸ್ತಶಕ 571 ಎಪ್ರಿಲ್ 21 ಆಗಿತ್ತು.ನೆಬಿ ಸ.ಅ ಜನಿಸಿದ ದಿನ ಅತ್ಯಂತ ಸಂತೋಷದಾಯಕವಾದ ದಿನವಾಗಿದೆ.ಮಾನವ ಶ್ರೇಷ್ಠರಾದ ಪ್ರವಾದಿ ಮುಹಮ್ಮದ್ ಸ.ಅ ರವರ ಮುಖಾಂತರ ಮಾನವ ಸಮೂಹವನ್ನು ಅಲ್ಲಾಹು ಅನುಗ್ರಹಿಸಿದ ಸುದಿನವಾಗಿದೆ ಅಂದು.ಮುಸಲ್ಮಾನರು ಈ ಅನುಗ್ರಹಕ್ಕೆ ಕ್ರತಜ್ಞತೆ ಸಲ್ಲಿಸಿ ಅಂದು ಮೀಲಾದುನ್ನಬಿ ಆಚರಣೆ ಮಾಡುತ್ತಾರೆ.ನೆಬಿ ಸ.ಅ ರವರ ಮದಹ್ ಕೀರ್ತನೆಗಳನ್ನು ಹೇಳಿ, ಹಾಡಿಹೊಗಳಿ ದಾನಧರ್ಮಗಳನ್ನು ನೀಡಿ ಸಂತೋಷ ಪ್ರಕಟಿಸುತ್ತಾರೆ.              ಭೂಮಿಯ ಮೇಲೆ ಜನ್ಮವೆತ್ತಿ ಬಂದ ಅತ್ಯಂತ ಉತ್ತಮನಾದ ಮನುಷ್ಯ ನೆಬಿ ಸ.ಅ ಆಗಿದ್ದಾರೆ.ಮುಂಜಿಕರ್ಮ ನಿರ್ವಹಿಸಲ್ಪಟ್ಟ,ಹೊಕ್ಕುಳ ಬಳ್ಳಿ ಕತ್ತರಿಸಲ್ಪಟ್ಟ,ಕಣ್ಣಿಗೆ ಸುರುಮ ಹಾಕಲ್ಪಟ್ಟ ಸ್ಥಿತಿಯಲ್ಲಿ ಸಂಪೂರ್ಣ ಸಂಶುದ್ಧವಾದ ರೀತಿಯಲ್ಲಾಗಿದೆ ಅವರು ಜನಿಸಿದ್ದು.ಅಬೂತಾಲಿಬರ ಮನೆಯಲ್ಲಾಗಿದೆ ಜನನ.ಹೆರಿಗೆ...

ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಕರ ಪಾತ್ರ

ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಕರ ಪಾತ್ರ _✍🏻ಜಹಫರ್ ಸಾಧಿಕ್ ಕಟ್ಟದಪಡ್ಪು_ _ನಮ್ಮ ಸಮಾಜವು ನಮಗೆ ಜನ್ಮ ಕೊಟ್ಟ ತಂದೆ ತಾಯಿಯ ನಂತರ ಮಹತ್ತರವಾದ ಸ್ಥಾನವನ್ನು ಶಿಕ್ಷಕರಿಗೆ ನೀಡಿ ಗೌರವಿಸಿದೆ.  ಶಿಲ್ಪಿ...