Skip to main content

ಝಿಯಾರತ್ತ್ ಕೇಂದ್ರ 🕌 4⃣3⃣🕌 ✍ ಗಫೂರ್ ಬಾಯಾರ್ ➖➖➖➖➖➖➖➖➖ ಹಝ್ರತ್ತ್ ಟಿಪ್ಪು ಸುಲ್ತಾನ್ (ರ). ಶ್ರೀರಂಗಪಟ್ಟಣ, ಮೈಸೂರು

ಝಿಯಾರತ್ತ್ ಕೇಂದ್ರ
   🕌 4⃣3⃣🕌
    
✍ ಗಫೂರ್ ಬಾಯಾರ್
➖➖➖➖➖➖➖➖➖
ಹಝ್ರತ್ತ್ ಟಿಪ್ಪು ಸುಲ್ತಾನ್ (ರ). ಶ್ರೀರಂಗಪಟ್ಟಣ, ಮೈಸೂರು

ಟಿಪ್ಪು ಸುಲ್ತಾನ್ (ರ) ರವರು ಎ.ಡಿ.1753ರಲ್ಲಿ ಮೈಸೂರಿನಲ್ಲಿ ಜನನ. ತಂದೆ ಹೈದರಾಲಿ (ರ).

ತಂದೆಯವರು  ತಮಿಳು ನಾಡಿನ ಆರ್ಕೊಟ್'ನಲ್ಲಿ ಅಂತ್ಯ ವಿಶ್ರಮಗೊಳ್ಳುತ್ತಿರುವ ಪ್ರಸಿದ್ದರಾದ ಅಧ್ಯಾತ್ಮಿಕ ಗುರು ಟಿಪ್ಪು ಸುಲ್ತಾನ್ ಆಲಿಯ್ಯ್ (ರ) ಎಂಬ ಶೈಖ್'ನ ಶಿಷ್ಯರಾಗಿದ್ದರು. ಆ ಕಾರಣದಿಂದಾಗಿ ತನ್ನ ಮಗನಿಗೆ ಗುರುವಿನ ಹೆಸರನ್ನೆ ನಾಮಕರಣ ಮಾಡದರು.

ಟಿಪ್ಪು ಸುಲ್ತಾನ್ (ರ)ರವರನ್ನು ಧರ್ಮ ಶಿಕ್ಷಣದಲ್ಲಿ ಬೆಳೆಸಿದರು.
ಐದು ಭಾಷೆಯನ್ನು, ರಾಜಕೀಯವನ್ನು ಹಾಗೂ ಯುದ್ಧ ತಂತ್ರಗಳನ್ನು ಯೌವನಕ್ಕೆ ತಲುಪುವ ಮೊದಲೇ ಟಿಪ್ಪು (ರ)ರವರಿಗೆ ತನ್ನ ತಂದೆ ಕಲಿಸಿದರು.

1782 ಡಿಸಂಬರ್ 12ಕ್ಕೆ ತಂದೆಯವರು ಮರಣ ಗೊಂಡಾಗ ಪಿತರವರ ರಾಜ ಪದವಿ ಮಗನಾದ ಟಿಪ್ಪು ರ.ಅ ಅಲಂಕರಿಸಿದರು.

ಡೆಚ್ಚುಗರು, ಫ್ರಂಚರು ಹಾಗು ಬ್ರಿಟಿಷರು ಇವರು ಮೂರು ವಿದೇಶಿಗರು ಭಾರತದ ವಿವಿಧ ಭಾಗಗಳಲ್ಲಿರುವ ಆಡಳಿತಾಧಿಕಾರಿಯನ್ನು ತಮ್ಮಲ್ಲಿಗೆ ವಶೀಕರಿಸಿ  ಪದಭ್ರಷ್ಟಗೊಳಿಸಿ, ವಿದೇಶದ ಆಡಳಿತವನ್ನು ಭಾರತದ ನೆಲದಲ್ಲಿ ಸ್ಥಾಪಿಸಲು ಎಲ್ಲಾ ತಂತ್ರಗಳನ್ನು, ಯುದ್ದಗಳನ್ನು ನಡೆಸುತ್ತಿರುವ ಸಮಯದಲ್ಲಾಗಿತ್ತು ತಂದೆ ಹೈದರ್ ಆಲಿ (ರ) ಯವರ ಅಕಾಲಿಕ ಮರಣ.
ಈ ಸಂದರ್ಭದಲ್ಲಿ ಕೇರಳದ ಪೊನ್ನಾನಿಯಲ್ಲಿ ಸೈನಿಕ ಶಿಬಿರದಲ್ಲಿದ್ದ ಟಿಪ್ಪು (ರ) ರವರು ತನ್ನ ಊರಿಗೆ ಮರಳಿದಾಗ, ತಂದೆಯವರ ಮರಣ ವಸಿಯ್ಯತ್ತ್ ಕೈ ಸೇರಿತು.

ಅದರಲ್ಲಿ ಹೀಗಿತ್ತು; 👇

ನಾನು ನನ್ನ ರಾಷ್ಟ್ರವನ್ನು ಇದೋ ನಿನಗೆ ವಹಿಸಿರುತ್ತೇನೆ.... ಔರಂಗಝೇಬ್ (ರ) ರವರ ಮರಣದ ನಂತರ ಭಾರತಕ್ಕೆ ಏಷ್ಯಾದ ರಾಷ್ಟ್ರಗಳ ನಡುವೆ ಸ್ಥಾನ ಇಲ್ಲದಾಗಿದೆ. ವಿದೇಶಿಗಳ ಹೋರಾಟದ ನೃತರಂಗವಾಗಿದ್ದ ಈ ದೇಶವನ್ನು ಸಂರಕ್ಷಿಸಲು ಇನ್ನಿತರ ಧರ್ಮಕ್ಕೆ ಸಾಧ್ಯವಿಲ್ಲ. ಈ ನಾಡನ್ನು ವಿಪತ್ತಿನಿಂದ ರಕ್ಷಿಸಬೇಕಾದ ಕರ್ತವ್ಯ ನಿನಗಿದೆ. ನೀನು ಅತೀ ಮುಖ್ಯವಾಗಿ  ಎದುರಿಸಬೇಕಾಗಿರುವುದು ಪಾಶ್ಚಾತ್ಯರೊಂದಿಗೆಯಾಗಿರುತ್ತದೆ. ಇಂದಿನ ಪರಿಸ್ಥಿತಿಯಲ್ಲಿ ಈ ನಾಡಿನಲ್ಲಿ ಅವರಿಗೆ ಹೆಚ್ಚು ಶಕ್ತಿ ತುಂಬಿ ಬರುತ್ತಿದೆ...

ಮೈಸೂರು, ಕೋಯಂಪುತ್ತೂರು, ಪಾಲಕ್ಕಾಡ್, ಕೊಡುಂಗಲ್ಲೂರು, ಚೆಟ್ಟುವ, ಪೊನ್ನಾನಿ, ಮಲಬಾರ್, ಹಾಗೂ ಮಂಗಳೂರು ಕೇಂದ್ರೀಕರಿಸಿ ಹಲವಾರು ಹೋರಾಟಗಳನ್ನು ಬ್ರಿಟಿಷರೊಂದಿಗೂ,  ಅವರ ಆಶ್ರಿತರಾದ ಆಡಳಿತಾಧಿಕಾರಿಗಳೊಂದಿಗೂ ಬಹುಮಾನ್ಯರಾದ ಟಿಪ್ಪು (ರ)ರವರು ಯುದ್ಧ ಮಾಡಿದರು.

1784 ಮಾರ್ಚ್ 12ಕ್ಕೆ ಮಂಗಳೂರಿನಲ್ಲಿ ಬ್ರಿಟಿಷರೊಂದಿಗೆ ಮಾಡಿದ ಯುದ್ಧ ಈ ರಾಜ್ಯಕ್ಕೆ ದೊಡ್ಡ  ವಿಜಯವಾಗಿತ್ತು.

1788 ಎಪ್ರಿಲ್'ನಲ್ಲಿ ಸಣ್ಣ ತುಕಡಿ ಸೇನೆಯೊಂದಿಗೆ ಟಿಪ್ಪು (ರ) ವಯನಾಡ್, ತಾಮರಶ್ಯೇರಿ "ಚುರಂ" ಘಾಟಿ ಮೂಲಕ ಮಲಬಾರ್'ಗೆ ತಲುಪಿದರು. ಕಲ್ಲಿಕೋಟೆ ಸಾಮೂತಿರಿಯವರು, ಟಿಪ್ಪು (ರ) ರವರ ಜೊತೆ ರಾಜಕೀಯ ಮಾತುಕತೆ ನಡೆಸಿದರು.
ಟಿಪ್ಪು (ರ) ಮತ್ತು ಸೈನಿಕರು ತಂಗಿದ ಪಾಳಯವು ಇಂದು ಕಲ್ಲಿಕೋಟೆಯಲ್ಲಿ "ಪಾಳಯಂ" ಎಂಬ ಹೆಸರಿನಲ್ಲಿ ಅರಿಯಲ್ಪಡುತ್ತದೆ.
ಮಲಬಾರಿನಲ್ಲಿ ತನ್ನ ಆಡಳಿತದ ರಾಜಧಾನಿಯನ್ನು ಬೆಪ್ಪೂರ್, ಕಡಲುಂಡಿ, ಚಾಲಿಯಾರ್ ಪುಝ, ಎಂಬ ಸ್ಥಳಗಳ ಮದ್ಯದಲ್ಲಿ  "ಫಾರೂಖಾಬಾದ್" ಎಂಬ ಹೆಸರಿನಲ್ಲಿ ಸ್ಥಾಪಿಸಿದರು. ಅದುವೇ
ಇಂದಿನ "ಫರೊಖ್" ಎಂಬ ಸ್ಥಳ.
ಅಂದಿನ ಕೋಟೆಗಳು ಈಗಲೂ ಅಲ್ಲಿ ಇದೆ.
ಕೋಟೆಯಿಂದ ನದಿಗೆ ಭೂಗರ್ಭ ದಾರಿಯು ಕೂಡಾ ಇದೆ.

ಟಿಪ್ಪು (ರ)ರವರು 1787ರಲ್ಲಿ ಶೈಖ್ ಜಿಫ್ರಿ ಕುಟ್ಟಿಚಿರ (ರ)ರವರನ್ನು ಸಂದರ್ಶಿಸಿ ಶಿಷ್ಯತ್ವವನ್ನು ಸ್ವೀಕರಿಸಿದರು. ಶೈಖವರಿಗೆ ನೀಡಿದ ಹದ್'ಯ್ಯ ಆಗಿದೆ ಪ್ರಸಿದ್ಧವಾದ ಕಲ್ಲಿಕೋಟೆಯ ಮಾನಾಂಜಿರ ಕೊಳಂ (ಕೊಳ)
ಕಲ್ಲಿಕೋಟೆಯಿಂದ ಕೋಯಂಪುತ್ತೂರಿಗಿರುವ ಯಾತ್ರೆ ಮದ್ಯೆ ಇರುವ ಸ್ಥಳಗಳಿಗೆಲ್ಲ ಹಲವಾರು ಸಹಾಯಗಳನ್ನು ಮಾಡಿದ್ದರು.
ಅದರ ಜೊತೆಯಲ್ಲಿ ಕೊಂಡೊಟ್ಟಿ ಎಂಬ ಸ್ಥಳಕ್ಕೆ ಆಗಮಿಸಿದ ಕಳ್ಳ ತ್ವರೀಖತ್ತ್'ನ ಮುಖಂಡ ಮುಹಮ್ಮದ್ ಶಾಹ್'ನಿಗೂ ಒಂದು ಮಾಲಿಖಾನ್ ಲಭಿಸಿತ್ತು. ಟಿಪ್ಪು (ರ) ರವರು ಇವನ ಸತ್ಯಾಂಶ ತಿಳಿಯದೆ ಕೊಟ್ಟಿರುವುದು. ನಂತರ ಟಿಪ್ಪು ಸುಲ್ತಾನ್ (ರ) ರವರ ಗುರುವಾದ ಶೈಖ್ ಜಿಫ್ರಿ (ರ) ರವರು ಈ ವ್ಯಾಜನ ವಿರುದ್ಧ ಗ್ರಂಥ ಬರೆದಿರುತ್ತಾರೆ.

ಏರನಾಡ್ ಹಾಗು ವಳ್ಳುವನಾಡ್ ಎಂಬ ಊರಿನ ಕೆಲವು ಪ್ರದೇಶಗಳಲ್ಲಿ ತೆರಿಗೆ ವಸೂಲಿ ಮಾಡಲು ಈ ಕಳ್ಳ ತ್ವರೀಕತ್ತ್'ಗಾರನಿಗೆ "ಪಾರ್ಶಿ" ಭಾಷೆಯಲ್ಲಿ ಬರೆದ ಅನುಮತಿ ಪತ್ರವನ್ನು ಕೊಟ್ಟಿದ್ದರು.

ಈ ಕಳ್ಳ ಶೈಖ್ ಹಾಗೂ ಟಿಪ್ಪು (ರ) ರವರ ಮರಣದ ನಂತರ ಈತನ ಅನುಯಾಯಿಗಳು ತೆರಿಗೆ ವಸೂಲು ಮಾಡುತ್ತಿದ್ದರು.
ಈ ತೆರಿಗೆ ವಸೂಲಿಯು ಹಲವು ವರ್ಷಗಳವರೆಗೆ ಮುಂದುವರಿಯಿತು.

1788 ಮೇ 26ಕ್ಕೆ ಪಾಲಕ್ಕಾಡ್ ಆಸ್ಥಾನದಲ್ಲಿ ಕೊಚ್ಚಿ ರಾಜನೊಂದಿಗೆ ರಾಜಕೀಯ ಚರ್ಚೆ ನಡೆಸಿದ ಟಿಪ್ಪು (ರ) ರವರು, ತಿರುವಿತಾಂಕೂರ್ ರಾಜನಿಗೆ ಬ್ರಿಟಿಷರ ವಂಚನೆಯ ಕುರಿತು ತಾಕೀತು ನೀಡಿದ್ದರು. ಅವರಿಗೆ ರಾಜಕೀಯವಾಗಿ  ಸಹಾಯ ನೀಡುವುದನ್ನು ತಡೆದರು.
ಆದರೂ ತಿರುವಿತಾಂಕೂರ್ ರಾಜನು ಟಿಪ್ಪು (ರ)ರವರ ಮಾತನ್ನು ಅನುಸರಿಸಲಿಲ್ಲ.

1789 ಫೆಬ್ರವರಿಯಲ್ಲಿ ಟಿಪ್ಪು (ರ) ರವರು ಪುನಃ ತಾಮರಶ್ಯೇರಿ ದಾರಿಯಾಗಿ ಮಲಬಾರಿಗೆ ತಲುಪಿದರು.
ತನ್ನ ಆಡಳಿತವನ್ನು ಜನರ ಜೀವನ ಶೈಲಿಯನ್ನು ಸಂಪೂರ್ಣವಾಗಿ ಪರಿಷ್ಕರಿಸಿದರು.
ಒಬ್ಬ ಮಹಿಳೆ ಹತ್ತು ಪುರುಷರ ಪತ್ನಿಯಾಗುವುದು ಹಾಗು ಕೀಲು ಜಾತಿಯ ಹೆಂಗಸರು ಎದೆಯ ಭಾಗವನ್ನು ಮುಚ್ಚದೆ ತೆರೆದು ನಡೆಯುವಂತಹ ಕೆಲವು ಆಚಾರಗಳನ್ನು  ನಿಷೇದಿಸಿಕೊಂಡು ವಿಜ್ಞಾಪನೆ ಹೊರಡಿಸಿದರು.

ಅದೇ ರೀತಿ ಚಾಲಿಯಂ'ನಿಂದ ತಾನೂರ್ ವರೆಗೂ
"ಸುಲ್ತಾನ್ ಎಂಬ ಹೆಸರಿನಲ್ಲಿ ರಸ್ತೆಯನ್ನು ನಿರ್ಮಿಸಿದರು.
ಕುಟ್ಟನಾಡ್'ನಲ್ಲಿ ನಾಯರ್ ಜಾತಿಗೊಳಪಟ್ಟ ಸೈನಿಕರೊಂದಿಗೆ ನ್ಯಾಯಕ್ಕಾಗಿ ಹೋರಾಡಿದರು.
ಪಯಂಗಾಡಿ ಎಂಬ ಸ್ಥಳದಲ್ಲಿ ಸುಲ್ತಾನ್ ಕಾಲುವೆಯನ್ನು ನಿರ್ಮಿಸಿದರು.

ದಕ್ಷಿಣ ಮಲಬಾರ್ ಯಾತ್ರೆಗೈದು ತಲಸ್ಸೇರಿ, ಧರ್ಮಡಂ, ಕಣ್ಣೂರು, ಕುಟ್ಟಿಯಾಡಿ, ವಯನಾಡ್ ಎಂಬಿತ್ಯಾದಿ ಸ್ಥಳಗಳಲ್ಲಿ ಹೊಸ ಆಡಳಿತದೊಂದಿಗೆ ಪರಿಷ್ಕರಣೆ ತಂದರು. ವಯನಾಡಿನಲ್ಲಿ
ಬತ್ತೇರಿ ನಗರವನ್ನು ನಿರ್ಮಿಸಿ ಅದನ್ನು  ಸುಲ್ತಾನ್ ಬತ್ತೇರಿ ಎಂದು ಹೆಸರಿಟ್ಟರು.

ಕಣ್ಣೂರಿನ ಮುಸ್ಲಿಂ ರಾಜ ಕುಟುಂಬ ಸದಸ್ಯರಾದ ಅರಕಲ್ ಬೀವಿಯವರ ಮಗಳನ್ನು ಟಿಪ್ಪು (ರ) ರವರ ಮಗನಾದ ಅಬ್ದುಲ್ ಖಾಲಿದ್ ವಿವಾಹವಾದರು.

ಚಾವಕ್ಕಾಡ್'ನಲ್ಲಿ ಕೆಲವು ಮುಸ್ಲಿಂ ನಾಮಧಾರಿಗಳು ಟಿಪ್ಪು (ರ) ರವರನ್ನು ವಿರೋಧಿಸಿ ರಂಗಪ್ರವೇಶಗೈದಾಗ ಅವರ ಜೊತೆಗೆ ಸಂಘರ್ಷಗಳು ಪ್ರಾರಂಭಗೊಂಡವು.
ಆ ಸಂಘರ್ಷದಲ್ಲಿ ಸೋತವರು ಹೆದರಿ ಹಾರಿದ ಕೊಳವನ್ನು "ಚಾಟ್ಟುಕುಳಂ" ಎಂದೂ ಹೋರಾಟದಲ್ಲಿ ಮಡಿದು ಶಿರಸ್ಸು ಬಿದ್ದ ಸ್ಥಳವನ್ನು "ಮಣತ್ತಲ" ಎಂಬ ಹೆಸರಿನಲ್ಲಿ ಇಂದು ತಿಳಿಯಲ್ಪಡುತ್ತದೆ.

1786-87 ಕಾಲದಲ್ಲಿ ಶ್ರಿರಂಗಪಟ್ಟಣದಲ್ಲಿ ಟಿಪ್ಪು ರ.ರವರು ಮಸ್ಜಿದ್ ಅಹ್'ಲಾ ಕಟ್ಟಿಸಿದರು ಆ ಮಸ್ಜಿದ್'ನಲ್ಲಿ ಮುದರ್ರಿಸ್, ಖಾಝಿ ಹಾಗೂ ಮುಫ್ತಿಯಾಗಿ ಪುತ್ತನಂಗಾಡಿ (ಪೆರಿಂದಲ್'ಮಣ್ಣ್) ಯ ವಿಕಲಾಂಕರಾದ (ಕಾಲು ಇಲ್ಲದ) ಅಬ್ದುಲ್ಲ ಮುಸ್ಲಿಯಾರ್ (ಖ:ಸಿ) ಎಂಬ ಮಹಾನರನ್ನು ನೇಮಿಸಿದರು.

ಹತ್ತು ವರ್ಷಗಳಷ್ಟು ಕಾಲ ಅಲ್ಲಿ ಸೇವೆಗೈದ ಅವರು ನಂತರ ಆ ಊರಿಗೆ ವಿದಾಯ ಹೇಳಿದರು.

1799 ಮೇ 14ಕ್ಕೆ ಟಿಪ್ಪು ಸುಲ್ತಾನ್ (ರ) ರವರು ಶಹೀದ್ ಅದರು.
( 1808ರಲ್ಲಿ ಜಿಫ್ರಿ (ರ) ರವರ ವಫಾತ್ತ್ ಹಾಗೂ 1830 ರಲ್ಲಿ ಅಬ್ದುಲ್ಲಾ ಮುಸ್ಲಿಯಾರ್. ಖ:ಸಿ ರವರೂ ವಫಾತ್ತ್ ಆದರು.

ಟಿಪ್ಪು ಸುಲ್ತಾನ್ (ರ) ರವರು ತನ್ನ ಕುಟುಂಬದವರೊಂದಿಗೆ ರಾಜ(ಸುಲ್ತಾನ್) ಪ್ರೌಢಿಯೊಂದಿಗೆ   ಶ್ರೀರಂಗಪಟ್ಟಣದ "ಟಿಪ್ಪು ಗುಂಬಝ್" ಎಂಬ ಮಖಾಮಿನಲ್ಲಿ ಅಂತ್ಯ ವಿಶ್ರಮಗೊಳ್ಳುತ್ತಾರೆ.

ಮುಗಿಯಿತು

✍ಗಫೂರ್ ಬಾಯಾರ್

Comments

Popular posts from this blog

ಗ್ರಹಣ ನಮಾಜಿನ ರೂಪ

ಗ್ರಹಣ ನಮಾಜಿನ ರೂಪ *ಚಂದ್ರಗ್ರಹಣದ ಸುನ್ನತ್ ನಮಾಜು ಎರಡು ರಕಅತ್ ಅಲ್ಲಾಹನಿಗಾಗಿ ಜಮಾಅತ್ತಾಗಿ ನಾನು ನಿರ್ವಹಿಸುವೆನು* ಎಂದು ನಿಯ್ಯತ್ ಮಾಡಿ ಅಲ್ಲಾಹು ಅಕ್ಬರ್ ಎಂದು ಹೇಳಿ ನಮಾಜಿಗೆ ಪ್ರವೇಶಿಸುವು...

ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ. ಲೇ - ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಅಕ್ಕರೆಕೆರೆ.

ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ. ಲೇ - ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಅಕ್ಕರೆಕೆರೆ. ಆಮಿನ ಬೀವಿ ರ.ಅ ಗರ್ಭಿಣಿಯಾಗಿರುವಾಗ ವ್ಯಾಪಾರಕ್ಕಾಗಿ ಸಿರಿಯಾಕ್ಕೆ ಹೋಗಿದ್ದ ಅಬ್ದುಲ್ಲಾಹ್ (ರ.ಅ) ಮರಳಿ ಬರುವಾಗ ಮದೀನದಲ್ಲಿ ವಫಾತಾದರು.ತಂದೆಯ ಮಾವಂದಿರರಾದ ಬನುನ್ನಜ್ಜಾರ್ ಗೋತ್ರದವರ ಬಳಿ ದಫನ ಮಾಡಲಾಯಿತು.ರಬೀವುಲ್ ಹನ್ನೆರಡು ಸೋಮವಾರ ಸುಬಹಿಯ ಸ್ವಲ್ಪ ಮುಂಚೆ ಅಂತ್ಯ ಪ್ರವಾದಿ ಮುಹಮ್ಮದ್ ಮುಸ್ತಫ ಸ.ಅ ಮಕ್ಕಾದಲ್ಲಿ ಜನಿಸಿದರು.ಅಂದು ಕ್ರಿಸ್ತಶಕ 571 ಎಪ್ರಿಲ್ 21 ಆಗಿತ್ತು.ನೆಬಿ ಸ.ಅ ಜನಿಸಿದ ದಿನ ಅತ್ಯಂತ ಸಂತೋಷದಾಯಕವಾದ ದಿನವಾಗಿದೆ.ಮಾನವ ಶ್ರೇಷ್ಠರಾದ ಪ್ರವಾದಿ ಮುಹಮ್ಮದ್ ಸ.ಅ ರವರ ಮುಖಾಂತರ ಮಾನವ ಸಮೂಹವನ್ನು ಅಲ್ಲಾಹು ಅನುಗ್ರಹಿಸಿದ ಸುದಿನವಾಗಿದೆ ಅಂದು.ಮುಸಲ್ಮಾನರು ಈ ಅನುಗ್ರಹಕ್ಕೆ ಕ್ರತಜ್ಞತೆ ಸಲ್ಲಿಸಿ ಅಂದು ಮೀಲಾದುನ್ನಬಿ ಆಚರಣೆ ಮಾಡುತ್ತಾರೆ.ನೆಬಿ ಸ.ಅ ರವರ ಮದಹ್ ಕೀರ್ತನೆಗಳನ್ನು ಹೇಳಿ, ಹಾಡಿಹೊಗಳಿ ದಾನಧರ್ಮಗಳನ್ನು ನೀಡಿ ಸಂತೋಷ ಪ್ರಕಟಿಸುತ್ತಾರೆ.              ಭೂಮಿಯ ಮೇಲೆ ಜನ್ಮವೆತ್ತಿ ಬಂದ ಅತ್ಯಂತ ಉತ್ತಮನಾದ ಮನುಷ್ಯ ನೆಬಿ ಸ.ಅ ಆಗಿದ್ದಾರೆ.ಮುಂಜಿಕರ್ಮ ನಿರ್ವಹಿಸಲ್ಪಟ್ಟ,ಹೊಕ್ಕುಳ ಬಳ್ಳಿ ಕತ್ತರಿಸಲ್ಪಟ್ಟ,ಕಣ್ಣಿಗೆ ಸುರುಮ ಹಾಕಲ್ಪಟ್ಟ ಸ್ಥಿತಿಯಲ್ಲಿ ಸಂಪೂರ್ಣ ಸಂಶುದ್ಧವಾದ ರೀತಿಯಲ್ಲಾಗಿದೆ ಅವರು ಜನಿಸಿದ್ದು.ಅಬೂತಾಲಿಬರ ಮನೆಯಲ್ಲಾಗಿದೆ ಜನನ.ಹೆರಿಗೆ...

ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಕರ ಪಾತ್ರ

ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಕರ ಪಾತ್ರ _✍🏻ಜಹಫರ್ ಸಾಧಿಕ್ ಕಟ್ಟದಪಡ್ಪು_ _ನಮ್ಮ ಸಮಾಜವು ನಮಗೆ ಜನ್ಮ ಕೊಟ್ಟ ತಂದೆ ತಾಯಿಯ ನಂತರ ಮಹತ್ತರವಾದ ಸ್ಥಾನವನ್ನು ಶಿಕ್ಷಕರಿಗೆ ನೀಡಿ ಗೌರವಿಸಿದೆ.  ಶಿಲ್ಪಿ...