Skip to main content

ಮುಸ್ಲಿಮನೆಂದೂ ವಂಚಿಸಲಾರ

ಮುಸ್ಲಿಮನೆಂದೂ ವಂಚಿಸಲಾರ!!!*

*ನ್ಯಾಯಾಲಯ ತುಂಬಿತುಳುಕುತ್ತಿತ್ತು , ಜನರು ಕುತೂಹಲದಿಂದ ಕಲಾಪವನ್ನು ವೀಕ್ಷಿಸುತ್ತಿದ್ದರು. ಇಬ್ಬರು ಯುವಕರು ಅವರ ತಂದೆಯ ಹತ್ಯೆಯ ಆರೋಪದಲ್ಲಿ  ಓರ್ವನನ್ನು ಹಿಡಿದು ತಂದಿದ್ದರು. ಖಲೀಫ ಹ.ಉಮರ್ (ರ) ನ್ಯಾಯಾಧೀಶರ ಕುರ್ಚಿಯಲ್ಲಿ ಕುಳಿತಿದ್ದರು.*

*ಖಲೀಫ:     ( ಇಬ್ಬರು ಯುವಕರಲ್ಲಿ ) ಏನು ನಿಮ್ಮ ದೂರು,  ಯಾಕೆ ನೀವು ಈ ವ್ಯಕ್ತಿಯನ್ನು ಇಲ್ಲಿಗೆ ಕರೆ ತಂದಿದ್ದೀರಿ.*
ಯುವಕರು :    ಈ ವ್ಯಕ್ತಿ ನಮ್ಮ ತಂದೆಯನ್ನು ಅಮಾನುಷಕವಾಗಿ ಕೊಂದಿದ್ದಾರೆ.
*ಖಲೀಫ:    (ಆರೋಪಿಯನ್ನು ನೋಡುತ್ತಾ)*
    ಇವರ ಆರೋಪದ ಬಗ್ಗೆ ಏನು ಹೇಳುತ್ತೀರಿ.
ಆರೋಪಿ:   ಇವರು ಹೇಳುತ್ತಿರುವುದನ್ನು ನಾನು ಒಪ್ಪುತ್ತೇನೆ.  ಹೌದು  ನಾನು ಇವರ ತಂದೆಯನ್ನು ಕೊಂದಿದ್ದೇನೆ.
*ಖಲೀಫ:    ಕೊಲೆ ಅಪರಾಧಕ್ಕೆ ನೀಡಲ್ಪಡುವ ಶಿಕ್ಷೆಯ ಬಗ್ಗೆ ನಿಮಗರಿವಿದೆಯೇ?*
ಆರೋಪಿ:   ಹೌದು , ನಾನು ಆ ಶಿಕ್ಷೆ ಸ್ವೀಕರಿಸಲು ಸಿದ್ಧನಿದ್ದೇನೆ.
*ಖಲೀಫ :    ಹಾಗಾದರೆ ನೀವು ಸಾಯಲು ಸಿಧ್ದರಿದ್ದೀರ?*
ಆರೋಪಿ:   ಹೌದು,  ಆದರೆ ಅದಕ್ಕಿಂತ ಮುಂಚೆ ನನ್ನ ಸಮಸ್ಯೆ ಯನ್ನು ಹೇಳಬಯಸುತ್ತೇನೆ. ಬಳಿಕ ನ್ಯಾಯಾಲಯ ವಿಧಿಸುವ ಶಿಕ್ಷೆ ಸ್ವೀಕರಿಸಲು ನಾನು ಸಿದ್ಧ. ನನಗೆ ಇಲ್ಲಿ ಅನ್ಯಾಯವಾಗದು ಎಂಬ ವಿಶ್ವಾಸ ವಿದೆ.
*ಖಲೀಫ:     ಹೇಳಿ,  ನೀವು ಏನು ಹೇಳಬಯಸುತ್ತೀರಿ.?*
ಆರೋಪಿ : ನಾನು ಯಮನ್ ನ ಓರ್ವ ಬಡ ಪ್ರಜೆ. ಉದ್ಯೋಗ ಅರಸುತ್ತಾ ಮದೀನಾಗೆ ಬಂದೆ. ಎರಡು ದಿನಗಳಿಂದ ಉದ್ಯೋಗಾನ್ವೇಷಣೆ ಯಲ್ಲಿ ಅಲ್ಲಿಲ್ಲಿ ಸುತ್ತಾಡಿ ಬೆಂಡಾಗಿ ಹೋಗಿದ್ದೆ, ಅನ್ನಾಹಾರ ಇಲ್ಲದೆ ಚಡಪಡಿಸುತ್ತಿದ್ದೆ. ಹೀಗೆ ನಿರಾಶೆಯಿಂದ ಮರಳುತ್ತಿದ್ದಾಗ ಹಸಿವು ಮತ್ತು ದಾಹ ದಿಂದ ಬಳಲುತ್ತಿದ್ದ ನನ್ನ ಒಂಟೆ ನನ್ಕಣ್ತಪ್ಪಿಸಿ ಇವರ ತೋಟದೊಳಗೆ ನುಗ್ಗಿತು, ಅದರಿಂದಾಗಿ ಅವರ ಬೆಳೆಗಳಿಗೆ ಹಾನಿಯಾದವು. ಇವರ ತಂದೆ ದೊಡ್ಡ ದೊಂದು ಕಲ್ಲು ಒಂಟೆಯ ನೇರಕ್ಕೆಸೆದರು. ಅದು ಒಂಟೆಯ ಕಣ್ಣಿಗೆ ಬಡಿಯಿತು. ತೀವ್ರ ಗಾಯಗೊಂಡ ಅದು ಮಿಲಮಿಲನೆ ಒದ್ದಾಡಿ ನನ್ನ ಕಣ್ಣಿದುರೇ ಪ್ರಾಣ ಬಿಟ್ಟಿತು. ನನಗೆ ಬಹಳ ದೂರ ಹೋಗಬೇಕಿತ್ತು .ಹಸಿವು , ದಾಹ ಮತ್ತು ನನ್ನ ಅಸಹಾಯಕತೆ ನನ್ನನ್ನು ಉದ್ರೇಕ ಗೊಳಿಸಿತು, ಈ ಪ್ರದೇಶದಲ್ಲಿ ಅಪರಿಚಿತ ನಾದ ನಾನು ಏನು ಮಾಡಬೇಕೆಂದು ತೋಚದೆ ಅದೇ ಕಲ್ಲನ್ನು ಇವರ ತಂದೆಯ ಕಡೆಗೆ ಎಸೆದೆ. ಅದವರ ತಲೆಗೆ ಬಿತ್ತು. ನನ್ನ ಉದ್ದೇಶ ಕೊಲೆ ಮಾಡುವುದಾಗಿರಲಿಲ್ಲ. ಆ ಕ್ಷಣದ ಹತಾಶೆ ನನ್ನನ್ನು ಆ ರೀತಿ ಮಾಡಿಸಿತು. ಆದರೆ ಆ ಏಟಿಗೆ ಅವರು ಪ್ರಾಣ ಬಿಟ್ಟರು.
*ಖಲೀಫ:   (ಆ ಯುವಕರೊಡನೆ) ನಿಮ್ಮ ಬೇಡಿಕೆಯೇನು?*
ಯುವಕರು :  ನಮ್ಮ ತಂದೆಯನ್ನು ಕೊಂದವನ "ಹತ್ಯೆಯೇ"  ನಮ್ಮ ಬೇಡಿಕೆ.
ಖಲೀಫ: (ಆರೋಪಿಯನ್ನು ನೋಡುತ್ತಾ) ನಿಮ್ಮ ಬಗ್ಗೆ ನನಗೆ ಅನುಕಂಪವಿದೆ. ನೀವು ಬೇಕಂತಲೆ ಹತ್ಯೆ ಮಾಡಿರವುದಲ್ಲ ಎಂಬುದು ನನಗೆ ಸ್ಪಷ್ಟವಾಗಿದೆ. ಆದರೆ ಹತ್ಯೆ ಗೀಡಾದವರ ಮನೆಯವರು ನಿಮ್ಮನ್ನು ಕ್ಷಮಿಸದಿದ್ದರೆ ಶಿಕ್ಷೆ ಜಾರಿಗೊಳಿಸದೆ ನನಗೆ ಬೇರೆ ದಾರಿಯಿಲ್ಲ. ಆದುದರಿಂದ ಓರ್ವ ವ್ಯಕ್ತಿಯ ಕೊಲೆಗಾಗಿ ನಿಮ್ಮನ್ನು ಕೊಲ್ಲುವ ತೀರ್ಪನ್ನು ನೀಡುತ್ತಿರುವೆ. ಕಾನೂನನ್ನು ಜಾರಿಗೊಳಿಸಲು ನೀವು ತಯಾರಾಗಿರಿ.
          ನ್ಯಾಯಾಲಯದಲ್ಲಿ ಸೇರಿರುವ ಎಲ್ಲರೂ ಅನುಕಂಪದಿಂದ ಅಪರಾಧಿಯನ್ನು ನೋಡಲು ಆರಂಭಿಸಿದರು. ಎಲ್ಲರಿಗೂ ಆ ವ್ಯಕ್ತಿಯ ಮೇಲೆ ಕನಿಕರ ಹುಟ್ಟಿತ್ತು. ಆದರೆ ಯಾರಿಗೂ ಏನೂ ಮಾಡಲಾಗದ ಸ್ಥಿತಿ ಇತ್ತು.
             *ಕೂಡಲೆ ಆ ವ್ಯಕ್ತಿ ಖಲೀಫರನ್ನುದ್ದೇಶಿಸಿ ,ನನ್ನನ್ನು  ನನ್ನ ಮನೆಯವರು ಕಾಯುತ್ತಿರಬಹುದು. ಅವರಿಗೆ ಆಹಾರವನ್ನು ಕೊಂಡು ಹೋಗಲು ನಾನು ಬಂದಿದ್ದೆ. ನಾನು ಇಲ್ಲಿ ಸತ್ತರೆ ಮತ್ತು ಮನೆಯವರಿಗ ಅದು ತಿಳಿಯದೆ ಹೋದಲ್ಲಿ ಅವರು ಕಾದು ಕಾದು ಪ್ರಾಣ ಬಿಡುವರು. ನಾನು ಸಾಯಲು ಸಿದ್ಧನಿದ್ದೇನೆ , ಮೂರು ದಿನಗಳಿಗಾಗಿ ಅವಕಾಶ ನೀಡಿದರೆ ಮನೆಯವರಿಗೆ ವಿಷಯ ತಿಳಿಸಿ ಮರಳಿ ಬರುವೆನು , ಎಂದು ವಿನಂತಿಸಿದರು.*
   *ಖಲೀಫ:* ಮೂರು ದಿನಗಳ ಕಾಲ ಅವಕಾಶ ನೀಡಲು ನನ್ನ ಅಭ್ಯಂತರವಿಲ್ಲ. ಆದರೆ ಯಾರಾದರು ನಿಮ್ಮ ಪರವಾಗಿ ಜಾಮೀನು ನಿಲ್ಲಬೇಕು.  ಏಕೆಂದರೆ ನೀವು ಹೇಳಿದ ಸಮಯದಲ್ಲಿ ತಲುಪದಿದ್ದಲ್ಲಿ ನಿಮ್ಮ ಬದಲಿಗೆ ಅವರನ್ನು ಅಪರಾಧಿಯೆಂದು ಪರಿಗಣಿಸಲಾಗುವುದು.
ಮದೀನಕ್ಕೆ ಅಪರಿಚಿತನಾಗಿದ್ದ ಆ ವ್ಯಕ್ತಿ ಸುತ್ತಲೂ ತಲೆಯಾಡಿಸಿದರು. ಯಾರೂ ಪರಿಚಿತರು ಅವರಿಗೆ ನ್ಯಾಯಾಲಯದೊಳಗೆ ಕಾಣಲಿಲ್ಲ , ನಿರಾಶರಾಗಿ ತಮ್ಮ ಊರಿಗೆ ಹೋಗುವ ಕನಸನ್ನೇ ಬಿಟ್ಟರು. ಮೆಲ್ಲನೆ ಕಟಕಟೆ ಯಿಂದ ಇಳಿದು ವದಾಗ್ರಹಕ್ಕೆ ಹೋಗಲು ಅನಿಯಾದರು. ಆಗ ಓರ್ವ ಮುಂದೆ ಬಂದು " ನಾನು ಈ ವ್ಯಕ್ತಿಗೆ ಜಾಮೀನು ನಿಲ್ಲುತ್ತೇನೆ,  ಅವರನ್ನು ಊರಿಗೆ ಕಳುಹಿಸಿ" ಎಂದರು. ಎಲ್ಲರೂ ಕುತೂಹಲದಿಂದ ಅತ್ತ ವ್ಯಕ್ತಿಯ ಕಡೆಗೆ ನೋಡಿದರು. ಜಾಮೀನು ನೀಡಿದ
ವ್ಯಕ್ತಿಯನ್ನು ನೋಡಿ ಎಲ್ಲರಿಗೂ ಆಶ್ಚರ್ಯವಾಯಿತು.
ಜಾಮೀನು ನಿಂತವರು ಖ್ಯಾತ ಸಹಾಬ ಹ.ಅಬ್ದುರ್ರಹ್ಮಾನ್ ಬಿನ್ ಔಫ್. ಖಲೀಫ ತಕ್ಷಣ ಅದನ್ನು ಅಂಗೀಕರಿಸಿದರು ಮತ್ತು ಅಪರಾಧಿಗೆ ತನ್ನ ಊರಿಗೆ  ಹೋಗಲು ಅನುಮತಿಸಿದರು.
ನ್ಯಾಯಲಯ ಕಿಕ್ಕಿರಿದು ತುಂಬಿತ್ತು. ಅಸರ್ ನಮಾಝ್ ಮುಗಿಸಿ ಜನರು ನೇರ ನ್ಯಾಯಾಲಯಕ್ಕೆ ಬಂದಿದ್ದರು. ಎಲ್ಲರೂ ಕುತೂಹಲ ಹಾಗು ಆತಂಕದಿಂದ ಯಮನ್ ನ ದಾರಿಯನ್ನು ಡಿಟ್ಟಿಸಿ ನೋಡುತ್ತಿದ್ದರು. ಇಂದು ಮೂರನೆಯ ದಿನ,  ಇಂದು ಸೂರ್ಯಸ್ಥಮಾನದೊಳಗೆ ಅಪರಾಧಿ ಆಗಮಿಸದಿದ್ದರೆ, ಓರ್ವ ವಿದೇಶಿಗಾಗಿ ನಿರಪರಾಧಿಯೂ ದೇವಭಕ್ತರೂ ಬಡವರ ಹಿತಕಾಂಕ್ಷಿಯೂ ದಾನಶೂರರೂ ಹಾಗು ಇಹಲೋಕದಲ್ಲೇ ಸ್ವರ್ಗ ಸುವಾರ್ತೆ ಲಭಿಸಿರುವ ಖ್ಯಾತ ಸಹಾಬರೋರ್ವರ ಬದುಕು ಕೊನೆಗೊಳ್ಲುವುದೆಂಬ ಭಯ ಪ್ರತಿಯೋರ್ವನ ಹ್ರದಯಬಡಿತ ಹೆಚ್ಚಿಸಿತ್ತು.
  ಖಲೀಫ ಹ.ಉಮರ್ (ರ) ನ್ಯಾಯಾಧೀಶರ ಕುರ್ಚಿಯಲ್ಲಿ ಕುಳಿತು ಆ ವ್ಯಕ್ತಿಯ ಆಗಮನವನ್ನು ಎದುರು ನೋಡುತ್ತಿದ್ದರು. ಹತ್ಯೆಯಾದ ವ್ಯಕ್ತಿಯ ಮಕ್ಕಳಿಬ್ಬರು ನ್ಯಾಯ ನಿರೀಕ್ಷೆಯಲ್ಲಿ "ಕೊಲೆಗಾರ" ನನ್ನು ಕಾಯುತ್ತಿದ್ದರು. ಆದರೆ ದೂರದ ತನಕ ಆ ವ್ಯಕ್ತಿಯ ಬರುವಿಕೆಯ ಎಳ್ಳಷ್ಟೂ ಕುರುಹು ಕಾಣುತ್ತಿರಲಿಲ್ಲ. ಸಹಾನುಭೂತಿಯ ಕಣ್ಣುಗಳು ಅಬ್ದುರ್ರಹ್ಮಾನ್ ಬಿನ್ ಔಫ್ (ರ)  ರ ಕಡೆಗೆ ನೋಡುತ್ತಿತ್ತು. ಉಪಕಾರ ಮಾಡಿದ ತಪ್ಪಿಗೆ ಜೀವ ಕಳೆದುಕೊಳ್ಳುವ ಅವಸ್ಥೆಗಾಗಿ ಸೇರಿದ ಎಲ್ಲರೂ ಅಪರಾಧಿಯನ್ನು ಶಪಿಸಲು ಆರಂಭಿಸಿದರು.
   *ಖಲೀಫ ಹ.ಉಮರ್ ಸ್ವತಃ ಚಿಂತಿತರಾಗಿದ್ದರು. ಒಂದು ಕಡೆ ನ್ಯಾಯ ನೀತಿ ಮತ್ತೊಂದು ಕಡೆ ದೇವಭಕ್ತ ಸಹಾಬ, ಅಪರಾಧಿ ಬರದಿದ್ದಲ್ಲಿ ಅಬ್ದುರ್ರಹ್ಮಾನ್(ರ) ರನ್ನು ಶಿಕ್ಷಿಸದೆ ಬಿಟ್ಟರೆ ಜನರು ಇದೊಂದು ಅಪರಾಧಿಯನ್ನು ರಕ್ಷಿಸುವ ತಂತ್ರ ಎಂದು ಜನರು ಭಾವಿಸುವ ಭಯವೂ ಇತ್ತು. ನಿಯಮ ದ ಅನುಷ್ಠಾನದಲ್ಲಿ ಖಲೀಫ ಉಮರ್ (ರ) ಕಠೋರ ನಿಲುವು ಹೊಂದಿದ್ದರು ಆದುದರಿಂದಲೇ ಅಬ್ದುರ್ರಹ್ಮಾನ್ (ರ) ರ ಬಗ್ಗೆ ಸೇರಿದವರಿಗೆ ಭಯವಾಗುತ್ತಿತ್ತು.*
      ಸಮಯ ಮೀರುತ್ತಿರುವುದನ್ನು ಮನಗಂಡ ಖಲೀಫ ನ್ಯಾಯಾಲಯದ ಕಲಾಪವನ್ನು ಮುಂದುವರಿಸಿದರು. ಎಲ್ಲರೂ ಅವರವರ ಸ್ಥಾನದಲ್ಲಿ ಆಸೀನರಾದರು.
ಖಲೀಫ:   (ಅಬ್ದುರ್ರಹ್ಮಾನ್(ರ) ರನ್ನು ಉದ್ದೇಶಿಸಿ) ಸೂರ್ಯಸ್ಥಮಾನಕ್ಕೆ ಇನ್ನು ಕೆಲವೇ ನಿಮಿಷಗಳು ಬಾಕಿವುಳಿದಿವೆ.ಅಪರಾಧಿ ಬರದಿದ್ದರೆ ಅವರ ಶಿಕ್ಷೆಯನ್ನು ನೀವು ಅನುಭವಿಸಬೇಕೆಂಬ ವಿಚಾರ ನಿಮಗೆ ತಿಳಿದಿದೆಯೇ ?
*ಅಬ್ದುರ್ರಹ್ಮಾನ್ :*  ಹೌದು ನನಗೆ ತಿಳಿದಿದೆ. ನಾನು ಪ್ರಜ್ಞಾಪೂರ್ವಕವಾಗಿಯೇ ಜಾಮೀನು ನಿಂತಿದ್ದೇನೆ. ಒಂದು ವೇಳೆ ಅವರು ಬರದಿದ್ದಲ್ಲಿ ನನಗೆ ಯಾವ ಚಿಂತೆಯೂ ಇಲ್ಲ. ಅಲ್ಲಾಹನಿಗಾಗಿ ನಾನೋರ್ವನನ್ನು ಸಹಾಯ ಮಾಡಿದ್ದೇನೆ.
        ಹೀಗೆ ಮಾತುಕತೆ ನಡೆಯುತ್ತಿರುವಾಗಲೇ  ದೂರದಿಂದ ಧೂಳೇಲುವುದು ಕಂಡು ಬಂತು.  ಓರ್ವ ಪ್ರಯಾಣಿಕ ಕುದುರೆಯೇರಿ ಬಹಳ ವೇಗವಾಗಿ ಇತ್ತ ಕಡೆ ಬರುತ್ತಿದ್ದರು. ಅವರು ಹತ್ತಿರವಾಗುತ್ತಿದ್ದಂತೆ , ಜನರು ಕಾಯುತ್ತಿರುವ ಅದೇ ವ್ಯಕ್ತಿಯೆಂದು ಸ್ಪಷ್ಟವಾಯಿತು. ಎಲ್ಲರ ಮುಖದಲ್ಲಿ ಆನಂದದ ಗೆರೆಗಳು ಮೂಡಿತು.
ಆ ವ್ಯಕ್ತಿ ತುರಾತುರಿಯಲ್ಲೇ ನೇರವಾಗಿ ಕಟಕಟೆಯಲ್ಲಿ ಬಂದು ನಿಂತರು.
ಅಪರಾಧಿ :   ಅಮೀರುಲ್ ಮುಅ್ ಮಿನೀನ್,  ಬರಲು ಸ್ವಲ್ಪ ತಡವಾಯಿತು ಇದಕ್ಕಾಗಿ ನಾನು ಕ್ಷಮೆ ಯಾಚಿಸುತ್ತೇನೆ.
ಖಲೀಫ : ಏಕೆ ನೀವು ಬರುವಾಗ ತಡ ಮಾಡಿದಿರಿ.  ನಿಮ್ಮ ಈ ನಡವಳಿಕೆಯಿಂದ ಓರ್ವ ನಿರಪರಾಧಿಯ ಜೀವ ಅಪಾಯದಲ್ಲಿತ್ತು ಎಂಬುದು ನಿಮಗೆ ನೆನಪಿತ್ತೇ?
*ಅಪರಾಧಿ :* ಹೌದು,  ನಾನು ಬೇಗ ಮರಳಿ ಬರಲಿಕ್ಕಾಗಿ  ವೇಗದೂತ ಕುದುರೆಯೇರಿ ಹೋಗಿದ್ದೆ . ಮನೆ ತಲುಪಿದಾಕ್ಷಣ ಮನೆಯವರೆಲ್ಲರು ನನ್ನನ್ನು ಸುತ್ತುವರೆದರು. ನಾನು ಯಾತ್ರೆಯಲ್ಲಿ ನಡೆಡ ಘಟನೆ ಗಳನ್ನೆಲ್ಲ ವಿವರಿಸಿದೆ. ಮತ್ತು ಮೂರು ದಿನಗಳೊಳಗೆ ಮದೀನಾ ತಲುಪಬೇಕೆಂದೂ ಹೇಳಿದೆ. ಮನೆಯ. ಹಿರಿಯರು ಕಿರಿಯರು ಪುಟಾಣಿಗಳು ಎಲ್ಲರೂ ಮರಳಿ ಬರದಂತೆ ನನ್ನನ್ನು ತಡೆದರು. ನನ್ನ ಮನಸ್ಸೂ ಅದೇ ರೀತಿ ಪ್ರತಿಧ್ವನಿಸಿತು, ಆದರೆ  ನನಗೆ ಪರಿಚಯವಿಲ್ಲದ ಮತ್ತು ನನ್ನ ಪರಿಸ್ಥಿತಿ ಯನ್ನು ಮನಗಂಡು ಸಹಾನುಭೂತಿಯಿಂದ ನನಗೆ  ಜಾಮೀನು ನಿಂತ ಈ ವ್ಯಕ್ತಿಗಾಗಿ ನಾನು ಬಂದೆ. ಉಪಕಾರ ಮಾಡಿದವನಿಗೆ ಮೋಸ ಮಾಡುವವನು ಮುಸ್ಲಿಂ ಆಗಲಾರ
ಖಲೀಫ : (ಆಶ್ಚರ್ಯದಿಂದ ಅಬ್ದುರ್ರಹ್ಮಾನ್ (ರ) ರನ್ನು ನೋಡುತ್ತಾ)
ನೀವೋರ್ವ ಅಪರಿಚಿತನಿಗೆ ಜಾಮೀನು ನಿಂತದ್ದೇ. ಅವರು ಬರದೆ ಅವರ ಊರಲ್ಲೇ ಉಳಿಯುತ್ತಿದ್ದರೆ ? ಯಾವ ಪರಿಚಯದ ಆದಾರದ ಮೇಲೆ ನೀವು ಜಾಮೀನು ನೀಡಿದಿರಿ.
ಅಬ್ದುರ್ರಹ್ಮಾನ್ (ರ) : ಇಲ್ಲ ನನಗೆ ಅವರ ಪರಿಚಯ ವಿರಲಿಲ್ಲ ಅವರೋರ್ವ ಮುಸ್ಲಿಂ ಎಂಬುದು ಮಾತ್ರ ನನಗೆ ಗೊತ್ತು ಮತ್ತು "ಮುಸ್ಲಿಮನೆಂದೂ ವಂಚಿಸಲಾರ"
     ಈ ಸಂಭಾಷಣೆಯನ್ನು ಆಲಿಸುತ್ತಿದ್ದ ಇಬ್ಬರು ಯುವಕರು ಮುಂದೆ ಬಂದು ಮುಸ್ಲಿಂ ಎಂಬ ನೆಲೆಯಲ್ಲಿ ಇಬ್ಬರು ಪರಸ್ಪರ ತ್ಯಾಗ ಮಾಡಬಹುದಾದರೆ ಅಂತಹ ಮುಸ್ಲಿಮನನ್ನು ಅಲ್ಲಾಹನಿಗಾಗಿ ನಾವು ಕ್ಷಮಿಸಿದೆವು. ನಮಗೆ ನಮ್ಮ ತಂದೆಯ ಪ್ರತೀಕಾರ ಅಗತ್ಯ ವಿಲ್ಲ ಎಂದು ಹೇಳಿದರು.
ನಾಲ್ದೆಸೆಯಿಂದಲೂ ತಕ್ಬೀರ್ ಘೋಷ ಮೊಳಗಿತು ಪ್ರಕರಣ ಸುಖಾಂತ್ಯವಾಯಿತು.

*ಮುಸ್ಲಿಮನೆಂದೂ ವಂಚಿಸಲಾರ........!!!*

Comments

Popular posts from this blog

ಗ್ರಹಣ ನಮಾಜಿನ ರೂಪ

ಗ್ರಹಣ ನಮಾಜಿನ ರೂಪ *ಚಂದ್ರಗ್ರಹಣದ ಸುನ್ನತ್ ನಮಾಜು ಎರಡು ರಕಅತ್ ಅಲ್ಲಾಹನಿಗಾಗಿ ಜಮಾಅತ್ತಾಗಿ ನಾನು ನಿರ್ವಹಿಸುವೆನು* ಎಂದು ನಿಯ್ಯತ್ ಮಾಡಿ ಅಲ್ಲಾಹು ಅಕ್ಬರ್ ಎಂದು ಹೇಳಿ ನಮಾಜಿಗೆ ಪ್ರವೇಶಿಸುವು...

ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ. ಲೇ - ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಅಕ್ಕರೆಕೆರೆ.

ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ. ಲೇ - ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಅಕ್ಕರೆಕೆರೆ. ಆಮಿನ ಬೀವಿ ರ.ಅ ಗರ್ಭಿಣಿಯಾಗಿರುವಾಗ ವ್ಯಾಪಾರಕ್ಕಾಗಿ ಸಿರಿಯಾಕ್ಕೆ ಹೋಗಿದ್ದ ಅಬ್ದುಲ್ಲಾಹ್ (ರ.ಅ) ಮರಳಿ ಬರುವಾಗ ಮದೀನದಲ್ಲಿ ವಫಾತಾದರು.ತಂದೆಯ ಮಾವಂದಿರರಾದ ಬನುನ್ನಜ್ಜಾರ್ ಗೋತ್ರದವರ ಬಳಿ ದಫನ ಮಾಡಲಾಯಿತು.ರಬೀವುಲ್ ಹನ್ನೆರಡು ಸೋಮವಾರ ಸುಬಹಿಯ ಸ್ವಲ್ಪ ಮುಂಚೆ ಅಂತ್ಯ ಪ್ರವಾದಿ ಮುಹಮ್ಮದ್ ಮುಸ್ತಫ ಸ.ಅ ಮಕ್ಕಾದಲ್ಲಿ ಜನಿಸಿದರು.ಅಂದು ಕ್ರಿಸ್ತಶಕ 571 ಎಪ್ರಿಲ್ 21 ಆಗಿತ್ತು.ನೆಬಿ ಸ.ಅ ಜನಿಸಿದ ದಿನ ಅತ್ಯಂತ ಸಂತೋಷದಾಯಕವಾದ ದಿನವಾಗಿದೆ.ಮಾನವ ಶ್ರೇಷ್ಠರಾದ ಪ್ರವಾದಿ ಮುಹಮ್ಮದ್ ಸ.ಅ ರವರ ಮುಖಾಂತರ ಮಾನವ ಸಮೂಹವನ್ನು ಅಲ್ಲಾಹು ಅನುಗ್ರಹಿಸಿದ ಸುದಿನವಾಗಿದೆ ಅಂದು.ಮುಸಲ್ಮಾನರು ಈ ಅನುಗ್ರಹಕ್ಕೆ ಕ್ರತಜ್ಞತೆ ಸಲ್ಲಿಸಿ ಅಂದು ಮೀಲಾದುನ್ನಬಿ ಆಚರಣೆ ಮಾಡುತ್ತಾರೆ.ನೆಬಿ ಸ.ಅ ರವರ ಮದಹ್ ಕೀರ್ತನೆಗಳನ್ನು ಹೇಳಿ, ಹಾಡಿಹೊಗಳಿ ದಾನಧರ್ಮಗಳನ್ನು ನೀಡಿ ಸಂತೋಷ ಪ್ರಕಟಿಸುತ್ತಾರೆ.              ಭೂಮಿಯ ಮೇಲೆ ಜನ್ಮವೆತ್ತಿ ಬಂದ ಅತ್ಯಂತ ಉತ್ತಮನಾದ ಮನುಷ್ಯ ನೆಬಿ ಸ.ಅ ಆಗಿದ್ದಾರೆ.ಮುಂಜಿಕರ್ಮ ನಿರ್ವಹಿಸಲ್ಪಟ್ಟ,ಹೊಕ್ಕುಳ ಬಳ್ಳಿ ಕತ್ತರಿಸಲ್ಪಟ್ಟ,ಕಣ್ಣಿಗೆ ಸುರುಮ ಹಾಕಲ್ಪಟ್ಟ ಸ್ಥಿತಿಯಲ್ಲಿ ಸಂಪೂರ್ಣ ಸಂಶುದ್ಧವಾದ ರೀತಿಯಲ್ಲಾಗಿದೆ ಅವರು ಜನಿಸಿದ್ದು.ಅಬೂತಾಲಿಬರ ಮನೆಯಲ್ಲಾಗಿದೆ ಜನನ.ಹೆರಿಗೆ...

ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಕರ ಪಾತ್ರ

ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಕರ ಪಾತ್ರ _✍🏻ಜಹಫರ್ ಸಾಧಿಕ್ ಕಟ್ಟದಪಡ್ಪು_ _ನಮ್ಮ ಸಮಾಜವು ನಮಗೆ ಜನ್ಮ ಕೊಟ್ಟ ತಂದೆ ತಾಯಿಯ ನಂತರ ಮಹತ್ತರವಾದ ಸ್ಥಾನವನ್ನು ಶಿಕ್ಷಕರಿಗೆ ನೀಡಿ ಗೌರವಿಸಿದೆ.  ಶಿಲ್ಪಿ...