Skip to main content

ಐಕ್ಯತೆ ಯಾರೊಂದಿಗೆ

ಐಕ್ಯತೆ ಯಾರೊಂದಿಗೆ

ಅವರು ಹೇಳಿದ್ದರು. ಇಲ್ಲಿ ಮುಸ್ಲಿಂ ರಾಜರುಗಳ ಇತಿಹಾಸ ತಿರುಚಲ್ಪಡುತ್ತಿದೆ. ಮುಸ್ಲಿಮರ ಮೇಲೆ ದಬ್ಬಾಳಿಕೆ ದೌರ್ಜನ್ಯಗಳಾಗುತ್ತಿದೆ. ಹೊಡೆದೋಡಿಸುವ ಯತ್ನಗಳೂ ನಡೀತಿದೆ. ಆದ್ದರಿಂದ ಸಾಮುದಾಯಿಕವಾದ ಭಿನ್ನತೆಯನ್ನು ಬದಿಗಿಟ್ಟು ನೀವೂ ಎದ್ದೇಳಿ,ನಾವೆಲ್ಲರೂ ಹೋರಾಡೋಣ ಅಂತ. ಯುವತ್ವವನ್ನು ಜೊತೆಗೂಡಿಸುವ ಹುನ್ನಾರ ಅಂತ ಈಗ ಅರ್ಥವಾಗುತ್ತಿದೆ. ನೇರಾನೇರ ನೀವು ಬಿದ್ ಅತ್ತಿನ ಕಡೆ ಬನ್ನಿ ಎಂದರೆ ಪರಂಪರಾಗತವಾಗಿ ಬಂದ ಇಸ್ಲಾಮಿನ ನೈಜದಾರಿಯನ್ನು ಬಿಟ್ಟು ಮುಗ್ಧ ಯುವಕರ್ಯಾರೂ ತಮ್ಮೊಂದಿಗೆ ಸೇರಲಾರರು ಅಂತ ಗೊತ್ತಿದ್ದರಿಂದಲೇ ಈ ನಾಲಾಯಕರು ಇಂತಹ ಆಕರ್ಷಣೀಯ ಸಾಲುಗಳನ್ನು ರೆಡಿ ಮಾಡಿದ್ದರು.

ಇದೀಗ ಬಯಲಾಗುತ್ತಿದೆ. ಒಂದೊಂದಾಗಿಯೇ ಯುವಕರ ಮನಸ್ಸುಗಳಲ್ಲಿ ಸುನ್ನೀ ವಿರೋಧೀ ಆಶಯಗಳನ್ನು ಬಿತ್ತತೊಡಗಿದ್ದಾರೆ. ಸಲಫಿಗಳಾದಿ ನೂತನ ಸಿದ್ಧಾಂತವಾದಿಗಳೊಂದಿಗೆ ಸಂಪರ್ಕವನ್ನೇ ಬೆಳೆಸಬಾರದೆಂಬ ಪೂರ್ವಿಕ ಸಾತ್ವಿಕರ ನುಡಿಗಳು,ಆದೇಶಗಳು ಈಗಿನ ಪೀಳಿಗೆಗೆ ಹೊಂದಿಕೆಯಾಗಲ್ವಂತೆ!.

ಇತ್ತೀಚಿನ ಕೆಲವು ವರ್ಷಗಳವರೆಗೂ ಐಕ್ಯತೆಯಿಂದಿದ್ದ ಲೋಕಮುಸ್ಲಿಮರೆಡೆಯಲ್ಲಿ  ತೌಹೀದಿನ ಶಕ್ತಿ ಸಾಕಾಗದು ಅಂತ ಹೇಳಿ,ಪ್ರವಾದಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮರಿಂದ ಪ್ರಾರಂಭಗೊಂಡು ದೇಶದುದ್ದಗಲಕ್ಕೂ ತೌಹೀದ್ ಪ್ರಚುರಪಡಿಸಿದ,ವಿಶ್ವಾಸವಿರಿಸಿದ ಕೋಟ್ಯಾನುಗಟ್ಟಲೆ ಮುಸಲ್ಮಾನರನ್ನು ಬಹುದೈವಾರಾಧಕರಾಗಿಯೂ,ಶಿರ್ಕ್, ಕುಫ್ರ್ ನ ವಕ್ತಾರರಾಗಿಯೂ ಮುದ್ರೆಯೊತ್ತಿ,ಇಸ್ಲಾಮಿನ ಚಿಹ್ನೆಗಳಾಗಿದ್ದ ಮಸೀದಿ,ಮಿನಾರ,ಮಝಾರ್ ಗಳನ್ನು ಜಗತ್ತಿನಾದ್ಯಂತ ಹೊಡೆದುರುಳಿಸಿ, ಇಮಾಮರುಗಳನ್ನೂ,ಔಲಿಯಾ ಸಾತ್ವಿಕರನ್ನೂ ಕೊಂದು ದಹಿಸಿದ ಭೂಪರ ಜೊತೆ ಈಗೊಂದು ಐಕ್ಯತೆ ಬೇಕಂತೆ.

ಮುಸ್ಲಿಮರು ಒಮ್ಮೆಯೂ ಕೂಡಾ ಒಂದೇ ಪ್ರದೇಶ,ಮಸೀದಿಯಲ್ಲಿ ಒಂದುಗೂಡಲಾಗದಂತೆ ಇಲ್ಲಿ ಅನೈಕ್ಯತೆ ಬಿತ್ತಿದವರ ಜೊತೆ ನಮಗೊಂದು ಐಕ್ಯತೆ ಸಾಧ್ಯವೇ?.ಸುನ್ನೀಗಳ ತೌಹೀದ್ ಸರಿಯಿಲ್ಲ.ಸುನ್ನಿಗಳು ಮುಶ್ರಿಕರು ಎನ್ನುವವರ ಜೊತೆ ಐಕ್ಯತೆಯಂತೆ!. ಸುನ್ನಿಗಳನ್ನವರು ಮುವಹ್ಹಿದ್ ಗಳು ಅಂತ ಒಪ್ಪಿಕೊಳ್ಳಲಿ.  ತವಸ್ಸುಲ್,ಇಸ್ತಿಗಾಸ,ಮರಣ ಹೊಂದಿದಾತನಿಗೆ ಖುರ್ಆನ್ ಪಾರಾಯಣ,ಖಬ್ರ್ ಝಿಯಾರತ್ ಮುಂತಾದ ಇದುವರೆಗೆ ಅಭಿಪ್ರಾಯಭಿನ್ನತೆಯಿಲ್ಲದೆ ಎಲ್ಲರೂ ಒಪ್ಪಿಕೊಂಡು ಬಂದಿದ್ದ ತೌಹೀದಿಗೆ ಒಂದರ್ಥದಲ್ಲೂ ವಿರುದ್ಧವಾಗದ ಕಾರ್ಯಗಳ ಬಗ್ಗೆ ಶಿರ್ಕ್ ಎನ್ನುವುದನ್ನು ನಿಲ್ಲಿಸಲಿ. ಆಗ ತನ್ನಿಂತಾನಾಗಿಯೇ ಐಕ್ಯತೆಯ ಮಧುರನಿನಾದಗಳು ಧ್ವನಿಸುತ್ತದೆ. ನಂತರ ಐಕ್ಯತೆ,,ಸಮುದಾಯವಾದವನ್ನು ಒಪ್ಪಿಕೊಳ್ಳೋಣ. ಹೆಸರಮಾತ್ರ ಸಮುದಾಯವಾದದ ಆವಶ್ಯಕತೆ ಇಸ್ಲಾಮಿನಲ್ಲಿಲ್ಲವಲ್ವಾ?.

ಈಗ ಮುಗಿಸುತ್ತೇನೆ.
ಅವರು ಈಗ ಮತ್ತೊಂದನ್ನೂ ಯುವಕರ ತಲೆಗೆ ತುರುಕಿಸಿ ಬಿಟ್ಟಿದ್ದಾರೆ. ಅದು ಮಹಿಳಾ ರಂಗಪ್ರವೇಶದ ವಿಚಾರ. ಸುಮುದಾಯವಾದದ ಬಲೆಗೆ ಬಿದ್ದ ಊರಿನ ಯುವಕರೆಲ್ಲರೂ  ಈ ನೂತನವಾದದ ಪರ ಬ್ಯಾಟಿಂಗ್ ಮಾಡತೊಡಗಿದ್ದಾರೆ. ಪಾಪ,ಅವರಿಗೇನು ಗೊತ್ತು?,ಇದು ಇಸ್ಲಾಮಿಕ್ ಚರಿತ್ರೆಯ ಹಸಿಹಸಿ ಅತ್ಯಾಚಾರವೆಂದು. ಪ್ರವಾದಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮರ ಕಾಲದಿಂದ ಪ್ರಾರಂಭಿಸಿ ಇದುವರೆಗಿನ ಖುರ್ ಆನ್ ಧರ್ಮಗ್ರಂಥವನ್ನಾಗಿ ಅವಲಂಬಿಸುವವರು ಯಾರೂ ಅದನ್ನೊಪ್ಪಿಕೊಳ್ಳಲಾರರೆಂಬುದು ದಿಟ. ಯುದ್ಧಗಳಲ್ಲಿ ಪ್ರವಾದಿಕಾಲದ ಮಹಿಳೆಯರು ದಂಡನಾಕಿಯಾಗಿದ್ದರಂತೆ!. ಆಯುಧಧಾರಿಗಳಾಗಿ ರಣಾಂಗಣಕ್ಕೆ ಧುಮುಕಿದ್ದರಂತೆ.

ಸುಬ್ಹಾನಲ್ಲಾಹ್....
ಈ ಬರಹ ನೋಡಿದಾಗ ಒಮ್ಮೆ ದಿಗ್ಮೂಢನಾದೆ. ಎಂತಹ ತಿರುಚುವಿಕೆ ನೋಡಿ. ತಮ್ಮ ರಾಜಕೀಯದ ಬುಡ ಗಟ್ಟಿಮಾಡಲು ಇಸ್ಲಾಮಿನ ಚರಿತ್ರೆಯನ್ನೇ ಬುಡಮೇಲು ಮಾಡುತ್ತಿದ್ದಾರೆ.

ನಮಗಿಷ್ಟೇ ಹೇಳಲಿಕ್ಕಿರುವುದು.
"ಅವರ ಮನೆಗಳಾಗಿವೆ ಅವರಿಗೆ ಅತ್ಯುತ್ತಮ" ಎಂದು ಖುರ್ ಆನ್ ಹಸಿಯಾಗಿಯೇ ಅವತರಿಸಿರುವಾಗ ನೈಜ ಮುಸ್ಲಿಮರಿಗೆ ಮಹಿಳೆಯ ವಿಚಾರದಲ್ಲಿ ಮತ್ತೊಂದು ವಿವರಣೆಯ ಅಗತ್ಯವಿಲ್ಲ......

ಯುವಕರೇ, ಇಸ್ಲಾಮೀ ಇತಿಹಾಸದ ಪ್ರತಿಹಂತದ ಬಗ್ಗೆ ಯೂ ಕೂಲಂಕುಷವಾಗಿ ಕಲಿತ,ತಿಳುವಳಿಕೆಯಿರುವವರ ಜೊತೆ ಸೇರಿ.ಅರೆಬರೆ ತಿಳಿದವರ ಜೊತೆಯಲ್ಲ.
ನೂತನವಾದ ನಿಮ್ಮನ್ನು ಬಲಿಪಡೆಯುವ ಮುನ್ನ ಎಚ್ಚೆತ್ತುಕೊಳ್ಳಿ.

ಜುನೈದ್ ಸಖಾಫಿ ಜೀರ್ಮುಕ್ಕಿ

Comments

Popular posts from this blog

ಗ್ರಹಣ ನಮಾಜಿನ ರೂಪ

ಗ್ರಹಣ ನಮಾಜಿನ ರೂಪ *ಚಂದ್ರಗ್ರಹಣದ ಸುನ್ನತ್ ನಮಾಜು ಎರಡು ರಕಅತ್ ಅಲ್ಲಾಹನಿಗಾಗಿ ಜಮಾಅತ್ತಾಗಿ ನಾನು ನಿರ್ವಹಿಸುವೆನು* ಎಂದು ನಿಯ್ಯತ್ ಮಾಡಿ ಅಲ್ಲಾಹು ಅಕ್ಬರ್ ಎಂದು ಹೇಳಿ ನಮಾಜಿಗೆ ಪ್ರವೇಶಿಸುವು...

ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ. ಲೇ - ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಅಕ್ಕರೆಕೆರೆ.

ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ. ಲೇ - ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಅಕ್ಕರೆಕೆರೆ. ಆಮಿನ ಬೀವಿ ರ.ಅ ಗರ್ಭಿಣಿಯಾಗಿರುವಾಗ ವ್ಯಾಪಾರಕ್ಕಾಗಿ ಸಿರಿಯಾಕ್ಕೆ ಹೋಗಿದ್ದ ಅಬ್ದುಲ್ಲಾಹ್ (ರ.ಅ) ಮರಳಿ ಬರುವಾಗ ಮದೀನದಲ್ಲಿ ವಫಾತಾದರು.ತಂದೆಯ ಮಾವಂದಿರರಾದ ಬನುನ್ನಜ್ಜಾರ್ ಗೋತ್ರದವರ ಬಳಿ ದಫನ ಮಾಡಲಾಯಿತು.ರಬೀವುಲ್ ಹನ್ನೆರಡು ಸೋಮವಾರ ಸುಬಹಿಯ ಸ್ವಲ್ಪ ಮುಂಚೆ ಅಂತ್ಯ ಪ್ರವಾದಿ ಮುಹಮ್ಮದ್ ಮುಸ್ತಫ ಸ.ಅ ಮಕ್ಕಾದಲ್ಲಿ ಜನಿಸಿದರು.ಅಂದು ಕ್ರಿಸ್ತಶಕ 571 ಎಪ್ರಿಲ್ 21 ಆಗಿತ್ತು.ನೆಬಿ ಸ.ಅ ಜನಿಸಿದ ದಿನ ಅತ್ಯಂತ ಸಂತೋಷದಾಯಕವಾದ ದಿನವಾಗಿದೆ.ಮಾನವ ಶ್ರೇಷ್ಠರಾದ ಪ್ರವಾದಿ ಮುಹಮ್ಮದ್ ಸ.ಅ ರವರ ಮುಖಾಂತರ ಮಾನವ ಸಮೂಹವನ್ನು ಅಲ್ಲಾಹು ಅನುಗ್ರಹಿಸಿದ ಸುದಿನವಾಗಿದೆ ಅಂದು.ಮುಸಲ್ಮಾನರು ಈ ಅನುಗ್ರಹಕ್ಕೆ ಕ್ರತಜ್ಞತೆ ಸಲ್ಲಿಸಿ ಅಂದು ಮೀಲಾದುನ್ನಬಿ ಆಚರಣೆ ಮಾಡುತ್ತಾರೆ.ನೆಬಿ ಸ.ಅ ರವರ ಮದಹ್ ಕೀರ್ತನೆಗಳನ್ನು ಹೇಳಿ, ಹಾಡಿಹೊಗಳಿ ದಾನಧರ್ಮಗಳನ್ನು ನೀಡಿ ಸಂತೋಷ ಪ್ರಕಟಿಸುತ್ತಾರೆ.              ಭೂಮಿಯ ಮೇಲೆ ಜನ್ಮವೆತ್ತಿ ಬಂದ ಅತ್ಯಂತ ಉತ್ತಮನಾದ ಮನುಷ್ಯ ನೆಬಿ ಸ.ಅ ಆಗಿದ್ದಾರೆ.ಮುಂಜಿಕರ್ಮ ನಿರ್ವಹಿಸಲ್ಪಟ್ಟ,ಹೊಕ್ಕುಳ ಬಳ್ಳಿ ಕತ್ತರಿಸಲ್ಪಟ್ಟ,ಕಣ್ಣಿಗೆ ಸುರುಮ ಹಾಕಲ್ಪಟ್ಟ ಸ್ಥಿತಿಯಲ್ಲಿ ಸಂಪೂರ್ಣ ಸಂಶುದ್ಧವಾದ ರೀತಿಯಲ್ಲಾಗಿದೆ ಅವರು ಜನಿಸಿದ್ದು.ಅಬೂತಾಲಿಬರ ಮನೆಯಲ್ಲಾಗಿದೆ ಜನನ.ಹೆರಿಗೆ...

ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಕರ ಪಾತ್ರ

ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಕರ ಪಾತ್ರ _✍🏻ಜಹಫರ್ ಸಾಧಿಕ್ ಕಟ್ಟದಪಡ್ಪು_ _ನಮ್ಮ ಸಮಾಜವು ನಮಗೆ ಜನ್ಮ ಕೊಟ್ಟ ತಂದೆ ತಾಯಿಯ ನಂತರ ಮಹತ್ತರವಾದ ಸ್ಥಾನವನ್ನು ಶಿಕ್ಷಕರಿಗೆ ನೀಡಿ ಗೌರವಿಸಿದೆ.  ಶಿಲ್ಪಿ...