Skip to main content

ಮೃತರ ಮನೆಯಲ್ಲಿ ತಹ್ಲೀಲ್ ಕಾರ್ಯಕ್ರಮ: ಮನೆಯವರಿಗೆ ಹೊರೆಯೇ

ಮೃತರ ಮನೆಯಲ್ಲಿ ತಹ್ಲೀಲ್ ಕಾರ್ಯಕ್ರಮ:  ಮನೆಯವರಿಗೆ ಹೊರೆಯೇ

ಮರಣ ಹೊಂದಿದವರ ಹೆಸರಲ್ಲಿ ತಹ್ಲೀಲ್ ಸಮರ್ಪಣಾ ಕಾರ್ಯವನ್ನು ನಡೆಸುವ ಒಂದು  ಸಂಘಟನೆ ಇದ್ದರೆ, ಅದು SSF ಮಾತ್ರ ಎಂಬುದು ಎಲ್ಲರೂ ಅಂಗೀಕರಿಸುವ ಸತ್ಯವಾಗಿದೆ. SSF ಯಾಕೆ ಇಂತಹ ಒಂದು ಕಾರ್ಯವನ್ನು ಆಯೋಜಿಸುತ್ತದೆ ಎಂದರೆ, ಮೃತ ವ್ಯಕ್ತಿಯ ಹೆಸರಲ್ಲಿ 70 ಸಾವಿರ ತಹ್ಲೀಲ್ ಹೇಳಿ ಹದಿಯಾ ಮಾಡಿದರೆ, ಮರಣ ಹೊಂದಿದ ವ್ಯಕ್ತಿ ಸ್ವರ್ಗ ಪ್ರವೇಶಿಸುವರು ಎಂಬುದು ಚರಿತ್ರೆಯಿಂದ ಸಾಬೀತಾಗಿದೆ.

ಈ ಹದೀಸ್ ಅನುಸಾರ, ಮೃತ ವ್ಯಕ್ತಿಯ ಪಾರತ್ರಿಕ ಮೋಕ್ಷಕ್ಕಾಗಿ ತಹ್ಲೀಲ್ ಹೇಳುವ ಪರಿಪಾಠವನ್ನು SSF ಮಾಡುತ್ತಾ ಬರುತ್ತಿದೆ. ಮೃತರು ಸುನ್ನಿಯಾಗಿದ್ದರೆ ಸಾಕು. ಅದು ಪರ ವಾದಿಗಳು-ವಿರೋಧಿಗಳು ಎಂಬ ವ್ಯತ್ಯಾಸವೇನೂ SSF ಗೆ ಇಲ್ಲ.

SSF, ಮೃತ ವ್ಯಕ್ತಿಗಳ ಮೇಲೆ ತಹ್ಲೀಲ್ ಕಾರ್ಯಕ್ರಮವನ್ನು ವಿವಿಧ ರೀತಿಯಲ್ಲಿ ನಡೆಸುತ್ತದೆ. ಮೃತರ ಮನೆಯಲ್ಲಿ, ಕಚೇರಿಯಲ್ಲಿ, ಕ್ಲಾಸ್-ವಾಲ್ ನಡೆಯುವ ವೇದಿಕೆಯಲ್ಲಿ ಇತ್ಯಾದಿ. ಇನ್ನು ಮನೆಯಲ್ಲಿ ನಡೆಸುವುದಾದರೆ, ಆ ಬಗ್ಗೆ ಮೊದಲೇ ಮನೆಯವರಿಂದ ಅನುಮತಿಯನ್ನು ಪಡೆದು, ಅವರೇ ಸೂಚಿಸುವ ದಿನದಂದು, ಅವರಿಗೆ (ಕುಡಿಯುವ-ತಿನ್ನುವ ವ್ಯವಸ್ಥೆ ಮಾಡುವ) ಯಾವುದೇ ರೀತಿಯ ಹೊರೆಯಾಗದ ರೀತಿಯಲ್ಲಿ ನಡೆಸುತ್ತಾ ಬರುತ್ತಿದ್ದೆ. ಮೃತರ ಹೆಸರಲ್ಲಿ ಸ್ವದಖಾ ವಾಗಿ ಅನ್ನದಾನದ ವ್ಯವಸ್ಥೆ ಮಾಡುವ ಮನೆಯವರೂ ಇದ್ದಾರೆ.

*ತಹ್ಲೀಲ್ ಮನೆಯವರಿಗೆ ಹೊರೆಯೇ?*
ಮೃತರ ಮನೆಯವರು, ತಮ್ಮವರನ್ನು ಕಳೆದುಕೊಂಡ ದುಃಖದಲ್ಲಿರುವಾಗ ಅವರ ಮನೆಗೆ ಐವತ್ತು-ನೂರರಷ್ಟು ಮಂದಿ ಹೋಗಿ ತಹ್ಲೀಲ್ ಹೇಳುವುದು, ಅವರನ್ನು ಇನ್ನಷ್ಟು ದುಃಖಿಸುವಂತೆ ಮಾಡುತ್ತದೆ ಎಂದು ಟೀಕಾಕಾರರು ಆರೋಪಿಸಿದ್ದಾರೆ.
*ಇದು ಶುದ್ಧ ಸುಳ್ಳು. ಇಂತಹ ಒಂದು ಆರೋಪವನ್ನು ಯಾವ ಮನೆಯವರೂ ಮಾಡಲು ಸಾದ್ಯವಿಲ್ಲ. ಯಾಕೆಂದರೆ, ಪ್ರತಿಯೊಂದು ಮನೆಯವರೂ, ಮರಣ ಹೊಂದಿದ ತಮ್ಮವರ ಪಾರತ್ರಿಕ ಮೋಕ್ಷವನ್ನೇ ಬಯಸುವವರಾಗಿರುತ್ತಾರೆ. ಅವರ ದುಃಖವನ್ನು ಇಲ್ಲದಾಗಿಸುವ, ಮತ್ತು ದುಃಖದಲ್ಲೂ ಸಮಾಧಾನಿಸುವ ಒಂದು ಪ್ರಮುಖ ಕಾರ್ಯವಾಗಿದೆ ಮೃತರ ಪಾರತ್ರಿಕ ಮೋಕ್ಷಕ್ಕಾಗಿ ದುಆ ಮಾಡುವಿಕೆ ಮತ್ತು ತಹ್ಲೀಲ್ ಹೇಳುವಿಕೆ.*

SSF ನ ತಹ್ಲೀಲ್ ಸಮರ್ಪಣಾ ಕಾರ್ಯಕ್ರಮದಿಂದ ಪ್ರಭಾವಿತರಾದ ಅದೆಷ್ಟೋ ಸಂಘಟನಾ ವಿರೋಧಿಗಳೂ, ನಂತರ SSF ನೊಂದಿಗೆ ಆತ್ಮೀಯವಾದ ಬಹಳಷ್ಟು ಉದಾಹರಣೆಗಳು ನಮ್ಮ ಮುಂದೆ ಇದೆ. ಸಂಘಟನಾ ವಿರೋಧವನ್ನು ಪರಿಗಣಿಸದೆ, ತಮ್ಮವರ ಮೇಲೆ ತಹ್ಲೀಲ್ ಹೇಳಲು ಬರುವಂತೆ ಪ್ರೀತಿ ಪೂರ್ವಕ ಆಹ್ವಾನಿಸುವವರೂ ಬಹಳಷ್ಟು ಮಂದಿ ಇದ್ದಾರೆ. ಇದುವರೆಗೆ ಯಾರೂ, ತಮ್ಮವರ ಮೇಲೆ ತಹ್ಲೀಲ್ ಹೇಳಲು ಬರುವುದನ್ನು ಹೊರೆಯಾಗಿ ಕಂಡ ಉದಾಹರಣೆಗಳೇ ಇಲ್ಲ.
*ಮೃತರ ಮನೆಯವರಿಗೆ ಸಾಂತ್ವನ ಅಂದರೆ ಲಕ್ಷ ಲಕ್ಷ ಪರಿಹಾರ ಸಿಗುವುದಲ್ಲ. ಬದಲಾಗಿ, ಮೃತ ವ್ಯಕ್ತಿಯ ಪಾರತ್ರಿಕ ಮೋಕ್ಷಕ್ಕಾಗಿ ದುಆ ಮಾಡುವುದು ಮತ್ತು ತಹ್ಲೀಲ್ ಹೇಳುವುದಾಗಿದೆ.* ಅದನ್ನು ಪ್ರೋತ್ಸಾಹಿಸಬೇಕಾದ ಸನ್ನಿವೇಶದಲ್ಲಿ, ನಿರುತ್ಸಾಹ ಪಡಿಸುವಂತಹ ಮೆಸೇಜ್ ಬಿಡುವವರ ಉದ್ದೇಶ, ತಹ್ಲೀಲ್ ಕಾರ್ಯಕ್ರಮವನ್ನು ತಡೆಯುವುದಲ್ಲದೆ ಇನ್ನೇನೂ ಅಲ್ಲ.

ಇಸ್ಲಾಮಿನಲ್ಲಿ ಪ್ರೋತ್ಸಾಹಕವಾದ, ಪೂರ್ವಿಕ ಉಲಮಾಗಳು ಮುನ್ನಡೆಸುತ್ತಾ ಬಂದಂತಹ ರಾತೀಬ್, ಝಿಕ್ರ್, ತಹ್ಲೀಲ್, ಸ್ವಲಾತ್ ಮಜ್ಲಿಸ್ ಗಳನ್ನು ವಿರೋಧಿಸುವ ನೂತನವಾದಿಗಳು ಮತ್ತು ಅವರಿಗೆ ಸಹಕಾರಿ ಯಾಗುವ, ಸುನ್ನೀ ವೇಷಧಾರಿಗಳಾದ ಇಂತಹ ತಹ್ಲೀಲ್ ವಿರೋಧಿಗಳನ್ನು ನೈಜ ಸುನ್ನಿಗಳು ಸೂಕ್ಷ್ಮಿಸಬೇಕಾದದ್ದು ಕಾಲದ ಅವಶ್ಯಕತೆಯಾಗಿದೆ. ಇಲ್ಲದಿದ್ದರೆ, ಮುಂದೊಂದು ದಿನ ಇಂತಹವರಿಂದಲೇ ಸುನ್ನೀ ಆಶಯಾದರ್ಶಗಳಿಗೆ ತೊಡಕುಂಟಾಗುವುದರಲ್ಲಿ ಯಾವುದೇ ಸಂದೇಹವಿಲ್ಲ.

ಇಂತಹವರ ಶರ್ರ್ ನಿಂದ, ಮುಸ್ಲಿಂ ಸಮೂಹವನ್ನು ಅಲ್ಲಾಹು ರಕ್ಷಿಸಲಿ, ಆಮೀನ್.

*ಮುಹಮ್ಮದ್ ಇಕ್ಬಾಲ್, ಮಂಗಳಪೇಟೆ.*

Comments

Popular posts from this blog

ಗ್ರಹಣ ನಮಾಜಿನ ರೂಪ

ಗ್ರಹಣ ನಮಾಜಿನ ರೂಪ *ಚಂದ್ರಗ್ರಹಣದ ಸುನ್ನತ್ ನಮಾಜು ಎರಡು ರಕಅತ್ ಅಲ್ಲಾಹನಿಗಾಗಿ ಜಮಾಅತ್ತಾಗಿ ನಾನು ನಿರ್ವಹಿಸುವೆನು* ಎಂದು ನಿಯ್ಯತ್ ಮಾಡಿ ಅಲ್ಲಾಹು ಅಕ್ಬರ್ ಎಂದು ಹೇಳಿ ನಮಾಜಿಗೆ ಪ್ರವೇಶಿಸುವು...

ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ. ಲೇ - ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಅಕ್ಕರೆಕೆರೆ.

ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ. ಲೇ - ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಅಕ್ಕರೆಕೆರೆ. ಆಮಿನ ಬೀವಿ ರ.ಅ ಗರ್ಭಿಣಿಯಾಗಿರುವಾಗ ವ್ಯಾಪಾರಕ್ಕಾಗಿ ಸಿರಿಯಾಕ್ಕೆ ಹೋಗಿದ್ದ ಅಬ್ದುಲ್ಲಾಹ್ (ರ.ಅ) ಮರಳಿ ಬರುವಾಗ ಮದೀನದಲ್ಲಿ ವಫಾತಾದರು.ತಂದೆಯ ಮಾವಂದಿರರಾದ ಬನುನ್ನಜ್ಜಾರ್ ಗೋತ್ರದವರ ಬಳಿ ದಫನ ಮಾಡಲಾಯಿತು.ರಬೀವುಲ್ ಹನ್ನೆರಡು ಸೋಮವಾರ ಸುಬಹಿಯ ಸ್ವಲ್ಪ ಮುಂಚೆ ಅಂತ್ಯ ಪ್ರವಾದಿ ಮುಹಮ್ಮದ್ ಮುಸ್ತಫ ಸ.ಅ ಮಕ್ಕಾದಲ್ಲಿ ಜನಿಸಿದರು.ಅಂದು ಕ್ರಿಸ್ತಶಕ 571 ಎಪ್ರಿಲ್ 21 ಆಗಿತ್ತು.ನೆಬಿ ಸ.ಅ ಜನಿಸಿದ ದಿನ ಅತ್ಯಂತ ಸಂತೋಷದಾಯಕವಾದ ದಿನವಾಗಿದೆ.ಮಾನವ ಶ್ರೇಷ್ಠರಾದ ಪ್ರವಾದಿ ಮುಹಮ್ಮದ್ ಸ.ಅ ರವರ ಮುಖಾಂತರ ಮಾನವ ಸಮೂಹವನ್ನು ಅಲ್ಲಾಹು ಅನುಗ್ರಹಿಸಿದ ಸುದಿನವಾಗಿದೆ ಅಂದು.ಮುಸಲ್ಮಾನರು ಈ ಅನುಗ್ರಹಕ್ಕೆ ಕ್ರತಜ್ಞತೆ ಸಲ್ಲಿಸಿ ಅಂದು ಮೀಲಾದುನ್ನಬಿ ಆಚರಣೆ ಮಾಡುತ್ತಾರೆ.ನೆಬಿ ಸ.ಅ ರವರ ಮದಹ್ ಕೀರ್ತನೆಗಳನ್ನು ಹೇಳಿ, ಹಾಡಿಹೊಗಳಿ ದಾನಧರ್ಮಗಳನ್ನು ನೀಡಿ ಸಂತೋಷ ಪ್ರಕಟಿಸುತ್ತಾರೆ.              ಭೂಮಿಯ ಮೇಲೆ ಜನ್ಮವೆತ್ತಿ ಬಂದ ಅತ್ಯಂತ ಉತ್ತಮನಾದ ಮನುಷ್ಯ ನೆಬಿ ಸ.ಅ ಆಗಿದ್ದಾರೆ.ಮುಂಜಿಕರ್ಮ ನಿರ್ವಹಿಸಲ್ಪಟ್ಟ,ಹೊಕ್ಕುಳ ಬಳ್ಳಿ ಕತ್ತರಿಸಲ್ಪಟ್ಟ,ಕಣ್ಣಿಗೆ ಸುರುಮ ಹಾಕಲ್ಪಟ್ಟ ಸ್ಥಿತಿಯಲ್ಲಿ ಸಂಪೂರ್ಣ ಸಂಶುದ್ಧವಾದ ರೀತಿಯಲ್ಲಾಗಿದೆ ಅವರು ಜನಿಸಿದ್ದು.ಅಬೂತಾಲಿಬರ ಮನೆಯಲ್ಲಾಗಿದೆ ಜನನ.ಹೆರಿಗೆ...

ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಕರ ಪಾತ್ರ

ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಕರ ಪಾತ್ರ _✍🏻ಜಹಫರ್ ಸಾಧಿಕ್ ಕಟ್ಟದಪಡ್ಪು_ _ನಮ್ಮ ಸಮಾಜವು ನಮಗೆ ಜನ್ಮ ಕೊಟ್ಟ ತಂದೆ ತಾಯಿಯ ನಂತರ ಮಹತ್ತರವಾದ ಸ್ಥಾನವನ್ನು ಶಿಕ್ಷಕರಿಗೆ ನೀಡಿ ಗೌರವಿಸಿದೆ.  ಶಿಲ್ಪಿ...