KCF INC ಕೋಶಾಧಿಕಾರಿ ಹಾಜಿ ಶೈಖ್ ಬಾವಾರವರ ಇಂಗ್ಲೀಷ್ ಲೇಖನದಿಂದ ಭಾಷಾಂತರಿಸಲಾಗಿದೆ
ಭಾಗ-4
✍🏻Nizzu4ever👁
ಉರುವಾಲು ಪದವು
niznam4ever@gmail.com
ಉರುವಾಲು ಪದವು
niznam4ever@gmail.com
ಮಕ್ಕಳಿಗೆ ಪರಾನುಭೂತಿ ಕಲಿಸುವುದು ಹೇಗೆ
*9.ಇತರರ ನೋವು ಮತ್ತು ಭಾವನೆಗಳನ್ನು ಮಕ್ಕಳೊಂದಿಗೆ ಹಂಚಿಕೊಳ್ಳಿ*
ನಿಮ್ಮ ಮಕ್ಕಳಿಗೆ ಪರಾನುಭೂತಿಯನ್ನು ಬೋಧಿಸುವ ಪರಿಣಾಮಕಾರಿ ವಿಧಾನಗಳಲ್ಲಿ ಒಂದಾಗಿದೆ ಅವರು ಇತರರ ನೋವಿನ ಅನುಭವಗಳನ್ನು ಅರ್ಥೈಸಿಕೊಳ್ಳುವುದು. ಉದಾಹರಣೆಗೆ ಅಮೀನ್ ಅರೋಗ್ಯ ಸರಿ ಇಲ್ಲ, ಅವನಿಗೆ ಈ ಔಷದಿ ಕೊಟ್ಟು ಸಹಾಯ ಮಾಡಿ ಬರ್ತಿಯಾ? ಝಿಯಾಳೊಂದಿಗೆ ಆಟವಾಡಲು ಯಾರು ಇಲ್ಲ ಅವಳು ತುಂಬಾ ದುಃಖಿತಳಾಗಿದ್ದಾಳೆ ನೀನು ಅವಳೊಂದಿಗೆ ಆಟವಾಡಿ ಸಮಾಧಾನ ಪಡಿಸುವೆಯಾ? ಈ ರೀತಿಯಾಗಿ ಸನ್ನಿವೇಶಗಳನ್ನು ಅರಿತು ಮಕ್ಕಳ ಮನಸ್ಸುಗಳನ್ನು ಸಂಪರ್ಕಿಸಿದರೆ ಅವರಿಂದ ಸಕಾರಾತ್ಮಕ ಫಲಿತಾಂಶಗಳನ್ನು ನಿರೀಕ್ಷೆ ಮಾಡಬಹುದು.
*10.ಮಕ್ಕಳೊಂದಿಗೆ ತಾಳ್ಮೆಯಿಂದ ವರ್ತಿಸುವುದನ್ನು ಕಲಿಯಿರಿ.*
ಪರಾನುಭೂತಿಯನ್ನು ಮಕ್ಕಳಿಗೆ ಕಲಿಸಿಕೊಡುವ ಸಂದರ್ಭಗಳಲ್ಲಿ ಮಕ್ಕಳು ಅದನ್ನು ಕರಗತ ಮಾಡಿಕೊಳ್ಳಲು ದೀರ್ಘ ಸಮಯ ಬೇಕಾಗುತ್ತದೆ. ಆ ಸಂದರ್ಭಗಳಲ್ಲಿ ಪೋಷಕರು ತಾಳ್ಮೆ ವಹಿಸಬೇಕು. ವಯಸ್ಕರು ಹದಿಹರೆಯದವರು ಪರಾನುಭೂತಿಯನ್ನು ಸಂಪೂರ್ಣವಾಗಿ ಅರ್ಥಮಾಡಿಕೊಂಡಿರುವುದಿಲ್ಲ, ಆದ್ದರಿಂದ ಮಕ್ಕಳೊಂದಿಗೆ ತಾಳ್ಮೆಯಿಂದ ಇರಬೇಕು.
*11. ನಾವು ಮಾಡುವ ಪ್ರತಿಯೊಂದಕ್ಕೂ ಅರ್ಥವಿದೆ.*
ತಾಯಿಯು ಪ್ರತೀಯೊಂದು ಗುಣಗಳನ್ನು ಮಕ್ಕಳಿಗೆ ಕಲಿಸಿಕೊಡಬೇಕು. ಉದಾಹರಣೆಗೆ; ಮಕ್ಕಳ ಸೌಂದರ್ಯದ ಬಗ್ಗೆ ತಿಳಿಸಿ ಈ ಸೌಂದರ್ಯವು ಹೊರಗಿನ ಗಲ್ಲಿಗಳಲ್ಲಿ ಪ್ರದರ್ಶಿಸಲು ಅಲ್ಲ, ಅನ್ಯ ಪುರುಷರು ನಿನ್ನ ಸೌಂದರ್ಯವನ್ನು ನೋಡದಂತೆ ನೀನು ಕಾಪಾಡಬೇಕು ಎಂದು ಎಚ್ಚರಿಕೆಯನ್ನು ನೀಡುತ್ತಿರಬೇಕು. ನಮ್ರತೆ, ಗೌರವ ಮತ್ತು ಲಜ್ಜಾಶೀಲತೆಯನ್ನು ಅವರಿಗೆ ಕಲಿಸಬೇಕು. ಕಾನೂನುಬದ್ಧ ಸುಸಂಕೃತ ಬದುಕನ್ನು ಬಯಸುವ ಪೋಷಕರ ನಡುವೆ ಶುದ್ಧ ಮತ್ತು ಸಂತೋಷಕರ ಜೀವನವನ್ನು ಅಂತಿಮವಾಗಿ ನೆರವೇರಿಸುವವನು ಸೃಷ್ಟಿಕರ್ತನಾಗಿರುತ್ತಾನೆ. ಪರಸಹಿಷ್ಣುತೆಯ ಉದಾತ್ತವಾದ ಅರ್ಥ ಮತ್ತು ಮೌಲ್ಯವನ್ನು ತಿಳಿಸಿಕೊಡದೆ ಅಂತಹಾ ಆದೇಶಗಳನ್ನು ಮಕ್ಕಳು ಪಾಲಿಸಬೇಕೆಂದು ಇದ್ದಕ್ಕಿದ್ದಂತೆ ಆಜ್ಞಾಪಿಸೋದರಲ್ಲಿ ಏನು ಸಹಕಾರಿಯಾಗಲಾರದು. ಪೋಷಕರು ಯಾವುದೇ ಸೂಚನೆಗಳನ್ನು ಆಜ್ಞೆಗಳನ್ನು ನೀಡುವಾಗ ಅದರ ಬಗ್ಗೆ ಇರುವ ಅನಾಹುತಗಳನ್ನು ಸರಿಯಾದ ರೀತಿಯಲ್ಲಿ ತಿಳಿಸಿಕೊಡಬೇಕು. ದೈಹಿಕವಾಗಿ ಮಕ್ಕಳ ತಪ್ಪುಗಳನ್ನು ಸರಿಪಡಿಸಿಕೊಂಡು ಹೋಗುವುದಕ್ಕಿಂತ ನೆನಪಿನಲ್ಲಿ ಅಳಿಯದೆ ಉಳಿಯುವ ರೀತಿಯಲ್ಲಿ ಪ್ರಾಯೋಗಿಕವಾಗಿ ಸರಿಪಡಿಸುವುದು ಉತ್ತಮವೆನಿಸುತ್ತದೆ.
ಮುಗಿಯಿತು.....

Comments