*ಮಂತ್ರ ಹಾಗೂ ತಾಯಿತ*
ಔಷಧಿಗಳಿಗೆ ಖಾಯಿಲೆ ಗುಣ ಪಡಿಸುವ ಸ್ವ ಶಕ್ತಿ ಇಲ್ಲವೆಂದೂ ಅವುಗಳೆಲ್ಲಾ ಕಾಯಿಲೆ ಗುಣಪಡಿಸುವುದಕ್ಕೆ ಅಲ್ಲಾಹು ತಆಲಾ ನಿಶ್ಚಯಿಸಿದ ಕಾರಣಗಳೆಂದು ಮುಸ್ಲಿಮರಾದ ನಮ್ಮ ವಿಶ್ವಾಸ ಅದೇರೀತಿ ಖಾಯಿಲೆ ಗುಣಪಡಿಸುವುದಕ್ಕೆ ಅಲ್ಲಾಹು ನಿಶ್ಚಯಿಸಿದ ಒಂದು ದಾರಿಯಾಗಿದೆ ಮಂತ್ರಿಸುವುದು. ಖುರ್ಆನ್ ಹಾಗೂ ಇನ್ನಿತರ ಝಿಕ್ರ ಸ್ವಲಾತ್ ಹೇಳಿ ಮಂತ್ರಿಸುವುದರಲ್ಲಿ ಯಾವ ತಪ್ಪೂ ಇಲ್ಲ ಮತ್ತು ಅದು ಸುನ್ನತ್ ಕೂಡ ಆಗಿದೆ ಎಂದು ಹದೀಸ್ನಲ್ಲಿದೆ. ( *عن عائشة رضي الله عنها قالت امرالنبي صلى الله عليه وسلم أن يسترقي من العين* ) *ಆಯಿಶಾ ( ರ) ರವರಿಂದ ವರದಿ ಅವರು ಹೇಳಿದರು ದ್ರಷ್ಟಿದೂಷಕ್ಕೆ ಮಂತ್ರಿಸಲು ಮುಹಮ್ಮದ್ ನಬಿ *صلي الله عليه وسلم* ಆಜ್ಞಾಪಿಸಿದ್ದರು *ಹದೀಸ್* *ಬುಖಾರಿ & ಮುಸ್ಲಿಂ*.
*عن عوف ابن مالك الاشجمي قال كنا نرقي في الجاهلية فقلنا يا رسول الله كيف ترا في ذالك فقال اعرضوا علي رقاكم لاباس برقي مالم يكن فيه شرك* *ಹದೀಸ್ ಮುಸ್ಲಿಂ*
*ಔಫಿಬ್ನು ಮಾಲಿಖ್ (ರ) ರಿಂದ ವರದಿ-ಅವರು ಹೇಳಿದರು ನಾವು ಜಾಹಿಲಿಯ್ಯಾ ಕಾಲದಲ್ಲಿ ಮಂತ್ರಿಸುತ್ತಿದ್ದೇವು. ಅಲ್ಲಾಹುವಿನ ರಸೋಲರೆ *صلى الله عليه وسلم* *ಆ ಬಗ್ಗೆ ತಮ್ಮ ಅಭಿಪ್ರಾಯವೇನು ಎಂದು ನಾವು ಕೇಳಿದೇವು. ಆಗ ಪ್ರವಾದಿ ಮಹಮ್ಮದ್ ನಬಿ *صلي الله عليه وسلم* *ಹೇಳಿದರು ನಿಮ್ಮ ಮಂತ್ರವನ್ನು ನನ್ನ ಮುಂದೆ ಸ್ಪಷ್ಟವಾಗಿ ಹೇಳಿರಿ ಶಿರ್ಕ್ ಇಲ್ಲದ ಮಂತ್ರದಿಂದ ಯಾವುದೇ ವಿರೋಧವೂ ಇಲ್ಲ* ( *ಹದೀಸ್ ಮುಸ್ಲಿಂ* )
*عن جابر رضي الله عنه قال نهي رسول الله صلى الله عليه وسلم عن الرقي فجاء ال عمر بن حزم فقالوايارسول الله انه كانت عندنا رقية نرقي بها من العقرب وانت نهيت عن الرقي فعرضواعليه فقال مااري بها بأسا من استطاع منكم أن ينفع أخاه فلينفع*
*ಜಾಬಿರ್ (ರ) ರವರಿಂದ ವರದಿ ಅವರು ಹೇಳಿದರು ಮಂತ್ರವನ್ನು ರಸೂಲ್ *صلى الله عليه وسلم* *ವಿರೋದಿಸಿದರು ಆಗ ಅಂರುಬ್ನು ಹಝ್ಮ್ (ರ) ರವರ ಕುಟುಂಬದವರು ಬಂದು ಹೇಳುತ್ತಾರೆ ಆಲ್ಲಾಹುವಿನ ರಸೋಲರೆ ನಮ್ಮ ಬಳಿ ಒಂದು ರೀತಿಯ ಮಂತ್ರವಿತ್ತು. ಚೇಳು ಕಡಿದರೆ ನಾವು ಅದನ್ನು ಮಂತ್ರಿಸುತ್ತಿದ್ದೇವು ತಾವು ಮಂತ್ರವನ್ನು ವಿರೋಧಿಸಿದ್ದೀರಲ್ಲಾ ? ಮತ್ತು ಅವರ ಆ ಮಂತ್ರವನ್ನು ಪ್ರವಾದಿ ಮಹಮ್ಮದ್ *صلى الله عليه وسلم* *ರವರ ಮುಂದೆ ಸ್ಪಷ್ಟಪಡಿಸಿದರು.ಆಗ ಪ್ರವಾದಿ ಮಹಮ್ಮದ್ *صلى الله عليه وسلم* *ರವರು ಹೇಳಿದರು ಈ ಮಂತ್ರದಲ್ಲಿ ನಾನು ಯಾವ ವಿರೋಧವನ್ನೂ ಕಾನುವುದಿಲ್ಲ ನಿಮ್ಮಲ್ಲಿ ಯಾರಿಗಾದರೂ ತನ್ನ ಸಹೋದರನಿಗೆ ಏನಾದರೂ ಉಪಕಾರ ಮಾಡಲು ಸಾಧ್ಯವಾದರೆ ಅದನ್ನಾತ ಮಾಡಲಿ* (ಹದೀಸ್ ಮುಸ್ಲಿಂ)
ಒಟ್ಟಿನಲ್ಲಿ ಮಂತ್ರಿಸುವುದು ಅನುವದನಿಯವಾಗಿದೆ ಎಂಬುದನ್ನು .ಸಹೀಹುಲ್ ಬಖಾರೀ *2*/ 854 ,856, ಸ್ವಹೀಹ್ ಮುಸ್ಲಿಂ *2*/222, 224, ತುರ್ಮುದಿ *2*/27-28 ಅಬೂದಾವೂದ್ *2*/186-189, ನಸಾಈ *2*/ 317 ,ಇಬ್ನುಮಾಜಾ *251*- *254* ಮುಂತಾದ ಹದೀಸ್ ಕಿತಾಬುಗಳ ಪುಟಗಳಲ್ಲಿ ಕಾಣಬಹುದು . *ಸಲಪಿಎಂಬ ನೂತನವಾದಿಗಳ ನೇತಾರ ಇಬ್ನುಖಯ್ಯಿಮ್ ಹೇರುವುದು ಹೀಗೆ* فإن الرقية تخرج من قلب الرقي وفمه فإذا صاحبه شيء من أجزاء بطنه من الريق والهواء وا لنفس كانت أتم تأثير ا
واقوي فعلاونفوذا.
*ಮಂತ್ರವು ಮಂತ್ರಿಸುವವನ ಹ್ರದಯ ಹಾಗೂ ಬಾಯಿಯಿಂದ ಹೊರಡುತ್ತದೆ ಅವನ ಒಳಗಿನಿಂದ ಉಗುಳು ವಾಯು ಸ್ವಾಸ ಅದರಲ್ಲೂಂದು ಸೇರಿದಾಗ ಅದು ಪೂರ್ಣ ಫಲ ನೀಡುತ್ತದೆ ಅಥವಾ ಶಕ್ತಿಯುತವಾಗಿರುತ್ತದೆ (ಝಾದುಲ್ ಮಆದ್)*
ಮಂತ್ರಕ್ಕೆ ಸಜ್ಜನರಾದ ಸ್ವಹಾಬಿಗಳು ಅನೇಕ ಆಡುಗಳನ್ನು ಪ್ರತಿಫಲವಾಗಿ ಪಡೆದುದನ್ನೂ ಅದನ್ನು ಪ್ರವಾದಿ ಮೊಹಮ್ಮದ್ ನಬಿ *صلي الله عليه وسلم* ರವರು ಅಂಗೀಕರಿಸಿದ್ದನ್ನೂ.
ಸ್ವಹೀಹುಲ್ ಬಖಾರೀ *2*/885 ಕಾಣಬಹುದು ಅವು ಮುವ್ವತ್ತು ( *30*) ಆಡುಗಳು ಎಂದು ನಸಾಈ ವರದಿ ಮಾಡಿದ್ದಾರೆ. ತುರ್ಮುದಿ *2*/27 ಅಬೂದಾವೂದ್ *2*/ 188 ಮುಂತಾದ ಕಡೆಗಳಲ್ಲೂ ಈ ವಿಷಯ ಪ್ರಸ್ತಾಪಿಸಿಧ್ಧಾರೆ
ಅಬ್ದುಲ್ಲಾಹಿಬ್ನು ಅಂರ್ (ರ) ಎಂಬ ಸ್ವಹಾಬಿ ತಮ್ಮ ಮಕ್ಕಳಿಗೆ ತಾಯಿತ (ಉರ್ಕು) ಬರೆದು ಕಟ್ಟುತ್ತಿದ್ದರು ಎಂದು ತುರ್ಮುದಿ, ಅಬೂದಾವೂದ್, ನಸಾಈ,ಅಹ್ಮದ್, ಹಾಕಿಂ ಮುಂತಾದ ಗ್ರಂಥಗಳಲ್ಲಿ ಕಾಣಬಹುದು.
*ಈಗಿನ ಕೆಲವು ನಾಮದಾರಿ ಮುಸ್ಲಿಮರು ಕಾಪಿರ್ಗಲಾದ* *ದೇವಾಲಯಗಳಲ್ಲಿ ಪೂಜೆ ಮಾಡುವ ಬಟ್ಟನವರ ಹತ್ತಿರ ಹೂಗಿ ಅವರಿಂದ ಶಿರ್ಕಿನ ಮಂತ್ರವನ್ನು ಪಠಣ ಮಾಡಿಸಿ ಅದನ್ನು ಉಪಯೋಗಿಸುತ್ತಾರೆ ಇದನ್ನಾಗಿದೆ ಹದೀಸ್ನಲ್ಲಿ ವಿಮರ್ಶೆನೆ ಮಾಡಿದ್ದು* *ಹೊರತು ಖುರ್ಆನ್ ಅಥವಾ ಝಿಕ್ರ್ ಸ್ವಲಾತ್ ಹೇಳಿ ಮಂತ್ರಿಸುವುದನ್ನಲ್ಲ* ಆದೂದರಿಂದ ನಾವು ತಜ್ಞಲರಿಂದ ಹಾಗೂ ಉಲಮಾಗಳನ್ನು ಸಂದರ್ಶನ ಮಾಡಿ ಅವರಿಂದ ಮಂತ್ರಿಸುವುದು ಹದೀಸಿನ ಆದಾರದಲ್ಲಿ ಸರ್ವಸಮ್ಮತ ವಾಗಿದೆ.
ಟಿ ಕೆ ಇಬ್ರಾಹೀಂ ಮದನಿ ಮರ್ದಾಳ ಕಡಬ
Comments