*KCF INC ಕೋಶಾಧಿಕಾ ಹಾಜಿ ಶೈಖ್ ಬಾವಾರವರ ಇಂಗ್ಲೀಷ್ ಲೇಖನದಿಂದ ಭಾಷಾಂತರಿಸಲಾಗಿದೆ.*
Nizzu4ever
ಉರುವಾಲು ಪದವು
niznam4ever@gmail.com
ಮಕ್ಕಳಿಗೆ ಪರಾನುಭೂತಿ ಕಲಿಸುವುದು ಹೇಗೆ
ಭಾಗ-2
*3 . ಸರ್ವಶಕ್ತನಾದ ಅಲ್ಲಾಹನಿಗೆ ಕೃತಜ್ಞತೆ ಸಲ್ಲಿಸುವಂತಾಗಲಿ.*
ನಮಾಜ್ ಇಸ್ಲಾಮಿನ ಐದು ಕಡ್ಡಾಯ ಸ್ಥಂಭಗಳಲ್ಲಿ ಒಂದಾಗಿದೆ. ಏಳು ವರ್ಷ ಆಗುವಾಗ ನಮಾಜ್ ಮಾಡಲು ಕಲಿಸಬೇಕೆಂದು ಹತ್ತು ವರ್ಷದ ನಂತರ ಬುದ್ದಿ ಮತ್ತು ಶುದ್ದಿ ಇರುವ ಪ್ರತಿಯೊಬ್ಬ ಮುಸ್ಲಿಮನಿಗೆ ಐದು ಹೊತ್ತಿನ ನಮಾಝ್ ಯಥಾವತ್ತಾಗಿ ನಿರ್ವಹಿಸುವಂತೆ ಕಡ್ಡಾಯಗೊಳಿಸಲಾಗಿದೆ. ಇದು ಅಲ್ಲಾಹನೊಂದಿಗೆ ನೇರವಾಗಿ ನಡೆಸುವ ಸಂಭಾಷಣೆಯಾಗಿದೆ. ನಮಾಝಿನ ಮೂಲಕ ಅಲ್ಲಾಹನ ಸಾಮೀಪ್ಯವನ್ನು ಪಡೆಯಬಹುದು. ನಮ್ಮ ಮಕ್ಕಳು ಅಲ್ಲಾಹನಿಗೆ ನಮಾಜ್ ಮಾಡಿ ಅವರು ಕೃತಜ್ಞರಾಗುವಂತೆ ತಿಳಿಸಬೇಕು. ನಮಾಝನ್ನು ತಿರಸ್ಕರಿಸಿದರೆ ಅದರ ಕುರಿತು ಎಚ್ಚರಿಕೆಯನ್ನು ನೀಡಿ ನಮಾಝ್ ಮಾಡಿಸಬೇಕು. ನಮಾಝ್ ಉಪೇಕ್ಷಿಸಲು ಸಾಧ್ಯತೆಯಿರುವ ಕುಟುಂಬ ಹಾಗೂ ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಮಕ್ಕಳನ್ನು ಗಮನಿಸುತ್ತಿರಬೇಕು.
*4.ನಿಮ್ಮ ಮಕ್ಕಳೊಂದಿಗೆ ಬಲವಾದ ಸಂಪರ್ಕವನ್ನು ಸ್ಥಾಪಿಸುವುದು*
ನಮ್ಮ ಮಕ್ಕಳ ಜೀವನದ ಪ್ರಯಾಣ ಪೋಷಕರಿಂದಲೇ ಆರಂಭಗೊಳ್ಳುತ್ತದೆ. ಅವರಿಗೆ ಇಸ್ಲಾಮನ್ನು ಕಲಿಸುವುದು ಮತ್ತು ಹೃದಯಾಂತರಾಳದಿಂದ ಇಸ್ಲಾಮನ್ನು ಪ್ರೀತಿಸುವುದನ್ನು ಕಲಿಸಬೇಕು. ಉಪದೇಶಗಳನ್ನು ಸುಲಭವಾಗಿ ಸ್ವೀಕರಿಸುವ ವಿಶಾಲ ಮನಸ್ಸನ್ನು ಹೊಂದಿರುವ ಮಕ್ಕಳಿಗೆ ನಿಮ್ಮ ಪ್ರೀತಿಯನ್ನು ತೋರ್ಪಡಿಸಿ ಶಾಂತಿಯಿಂದ ಕೂಡಿದ ವರ್ತನೆ, ವಿನಮ್ರತೆ, ಅಲ್ಲಾಹನೊಂದಿಗಿರುವ ಅಭೇದ್ಯ ಸಂಪರ್ಕ ಇವುಗಳನ್ನು ಬೆಳೆಸಿಕೊಳ್ಳಬೇಕು. ಮಕ್ಕಳಿಗೆ ಪರಾನುಭೂತಿ ಕಲಿಸಲು ನೀವು ಬಯಸಿದರೆ, ಮೊದಲ ಹೆಜ್ಜೆ ಅವರೊಂದಿಗೆ ನಿರ್ಭಯ ಮತ್ತು ಪ್ರೀತಿಯ ಒಡನಾಟ, ನಿಕಟ ಸಂಪರ್ಕ ಬೆಳೆಸಬೇಕು. ನಮ್ಮ ಗ್ರಹಿಕೆಗಳನ್ನು ಮಕ್ಕಳು ಅರ್ಥಮಾಡಿಕೊಳ್ಳಬೇಕಾದರೆ ಹಾಗೂ ಮಕ್ಕಳ ಭಾವನೆಗಳನ್ನು ಪೋಷಕರು ತಿಳಿದುಕೊಳ್ಳಬೇಕಾದರೆ ಅವರೊಂದಿಗೆ ಬಲವಾದ ಸಂಪರ್ಕವನ್ನಿಟ್ಟುಕೊಳ್ಳಬೇಕು.
ಮಕ್ಕಳಿಗೆ ನೀವು ಬಯಸುವ ಉತ್ತಮ ಜೀವನದ ಮೌಲ್ಯಗಳನ್ನು ಮತ್ತು ತತ್ವಗಳನ್ನು ತಂತ್ರಗಾರಿಕೆಯಿಂದ ಕಲಿಸಿಕೊಡಬೇಕು. ಮಕ್ಕಳೊಂದಿಗೆ ಬೆರೆಯಲು ಬಿಡಿ ಮತ್ತು ಮಕ್ಕಳಿಗೆ ಸಿಗುವಂತಹ ಅನುಭವಗಳನ್ನು ಪಾಠ ಮಾಡಿ. ನೀವು ನಿಜವಾಗಿ ಭಯಭಕ್ತಿ ಉಳ್ಳವರಾಗಿದ್ದರೆ ಮತ್ತು ಅಲ್ಲಾಹನ ಪ್ರೀತಿ ಪಡೆಯಲು ಬಯಸುವವರಾಗಿದ್ದರೆ ನಿಮ್ಮ ಮಕ್ಕಳನ್ನು ಉತ್ತಮವಾಗಿ ಬೆಳೆಸಬೇಕು.
*5.ಸಾಮಾಜಿಕ ಸೇವೆಗಳಲ್ಲಿ ಪಾಲ್ಗೊಳ್ಳುವಂತೆ ಮಕ್ಕಳಿಗೆ ಪ್ರೇರಣೆ ನೀಡಬೇಕು.*
ಸಾಮಾಜಿಕ ಸಂವಹನ ಇದೊಂದು ಪ್ರಕ್ರಿಯೆಯಾಗಿದ್ದು ನಮ್ಮ ಸುತ್ತಮುತ್ತಲಿನ ಜನರ ಕಷ್ಟಗಳನ್ನು ಅರ್ಥಮಾಡಿಕೊಳ್ಳುವುದು ಮತ್ತು ಅವರ ಪ್ರತಿಕ್ರಿಯೆಗಳನ್ನು ತಿಳಿದುಕೊಳ್ಳುವುದಾಗಿರುತ್ತದೆ. ಆರು ವರ್ಷ ಪ್ರಾರಂಭ ಆಗುವಾಗಲೇ ಅವರಿಗೆ ಸಾಮಾಜಿಕ ಸಂವಹನವನ್ನು ಪ್ರಕ್ರಿಯೆಗಳನ್ನು ಕಲಿಸಿಕೊಡಬೇಕು. *ಇತರರ ನಡವಳಿಕೆಗಳನ್ನು ಗಮನಿಸಿ ಅವರು ಅನುಸರಿಸುತ್ತಾರೆ. ರೋಗಿಗಳಿಗೆ ಸಹಾಯ ಮಾಡುವುದು, ಕಷ್ಟದಲ್ಲಿರುವ ಕುಟುಂಬಗಳಿಗೆ ನೆರವಾಗುವುದು, ಭಿಕ್ಷುಕರಿಗೆ ಸಹಾಯ ಮಾಡುವುದು, ನೆರೆಮನೆಯವರ ಕಷ್ಟ ಸುಖಗಳಲ್ಲಿ ಭಾಗಿಯಾಗುವುದು* ಹೀಗೆ ಹಲವಾರು ಸಾಮಾಜಿಕ ಸಹಾಯ ಸಹಕಾರಗಳನ್ನು ಮಕ್ಕಳು ನೋಡಿ ಆಕರ್ಷಿತರಾಗಿ
ಅವುಗಳನ್ನು ಮೈಗೂಡಿಸಿಕೊಳ್ಳುತ್ತದೆ. ಇಂತಹ ವಿಷಯಗಳನ್ನು ಕ್ರಮಬದ್ಧವಾಗಿ ಉತ್ಸಾಹದಿಂದ ಪೋಷಕರು ಕಲಿಸಿಕೊಡದಿದ್ದರೆ ಶಾಲೆಯಲ್ಲಿ, ಕ್ಯಾಂಪ್ ಗಳಲ್ಲಿ ಕಲಿಯಲು ಆಸಕ್ತಿ ತೋರುವುದಿಲ್ಲ. ಈ ವಾತಾವರಣದಲ್ಲಿ ಮಕ್ಕಳು ಬೆಳೆದುಬರಬೇಕಾದ ಪೋಷಕರು ಸಹ ತಮ್ಮ ನಡವಳಿಕೆಗಳಲ್ಲಿ ಬದಲಾವಣೆ ತರಬೇಕಾಗುತ್ತದೆ, ಪ್ರತೀಯೊಂದು ಸಂಧರ್ಭಗಳಲ್ಲೂ ಉತ್ತಮವಾದ ಸಲಹೆಗಳನ್ನೇ ನೀಡಿ ಬೆಳೆಸಬೇಕು. ನಿಮ್ಮ ಮಕ್ಕಳ ನಡವಳಿಕೆಗಳನ್ನು ಸರಿಪಡಿಸಲು ಉತ್ತಮ ಸ್ವಭಾವ ಗುಣಗಳಿಂದ ಅವರೊಂದಿಗೆ ವರ್ತಿಸಿರಿ.
ಮುಂದುವರಿಯುವುದು......

Comments