Skip to main content

ತವಸ್ಸುಲ್_ಇಸ್ತಿಗಾಸ ಇಮಾಂ ಇಬ್ನ್ ಹಿಬ್ಬಾನ್ ರ.ಅ ವಿಶ್ವಾಸ (ಅಖೀದ)

ತವಸ್ಸುಲ್_ಇಸ್ತಿಗಾಸ
ಇಮಾಂ ಇಬ್ನ್ ಹಿಬ್ಬಾನ್ ರ.ಅ ವಿಶ್ವಾಸ (ಅಖೀದ)

           🔹🔶🔹🔶🔹
ಸಜ್ಜನರ_ಖಬರ್_ಝಿಯಾರತ್ ನಿಂದ_ಸಿಗುವ_ಲಾಭ

ಹಿಜರಿ 270 ರಲ್ಲಿ ಜನಿಸಿದ ಮುಹಮ್ಮದ್_ಬಿನ್_ಹಿಬ್ಬಾನ್ (ರ.ಅ) ಧಾರಾಳ ಗ್ರಂಥಗಳನ್ನು ರಚಿಸಿದ,ವಿದ್ವತ್ ಜಗತ್ತು ಗೌರವಾದರಗಳಿಂದ ಕಂಡ ಮಹಾನ್ ವಿದ್ವಾಂಸರು. ಅವರ ವಫಾತ್ ಹಿಜರಿ 354 ರಲ್ಲಿ, ಅಂದರೆ ಶ್ರೇಷ್ಠ *ಸಲಫುಸ್ವಾಲಿಹೀನ್ಗಳಲ್ಲಿ* ಸೇರಿದ ಮಹಾನ್ ವ್ಯಕ್ತಿ ಯಿವರು.ಇವರ ​ *ಅಸ್ಸಿಖಾತ್​* ಎಂಬ ಗ್ರಂಥವು ಸುಪ್ರಸಿದ್ಧ. ಹದೀಸುಗಳ ಸನದುಗಳಲ್ಲಿರುವ ವ್ಯಕ್ತಿ ಗಳಲ್ಲಿ ಅಂಗೀಕಾರ ಅರ್ಹರನ್ನು ತಿಳಿಸುವ ಗ್ರಂಥವಿದು.ಈ ಗ್ರಂಥ ದಲ್ಲಿ *ಅಲಿಯ್ಯ್_ಬಿನ್_ಮೂಸಾ ಅರ್ರಿಳಾ* (ರ.ಅ) ರವರ ಪರಿಚಯ ವನ್ನು ಇಬ್ನು ಹಿಬ್ಬಾನ್ (ರ.ಅ) ನೀಡಿದ್ದಾರೆ. ಇವರು ಅಲಿಯ್ಯ್ ಬಿನ್ ಅಬೀತ್ವಾಲಿಬ್ (ರ.ಅ) ರವರ ಆರನೇ ಪೌತ್ರ.

*ಇಬ್ನು ಹಿಬ್ಬಾನ್ (ರ.ಅ) ಇವರ  ಪರಿಚಯಿಸುತ್ತಾ ಹೇಳುತ್ತಾರೆ ನೋಡಿ..* 👇

مات على بن موسى الرضا بطوس من شربة سقاه إياها المأمون فمات من ساعته وذلك في يوم السبت آخر يوم سنة ثلاث ومائتين وقبره بسناباذ خارج النوقان مشهور يزار بجنب قبر الرشيد، قد زرته مرارا كثيرة وما حلت بي شدة في وقت مقامى بطوس فزرت قبر على بن موسى الرضا صلوات الله على جده وعليه ودعوت الله إزالتها عنى إلا أستجيب لي وزالت عنى تلك الشدة وهذا شيء جربته مرارا فوجدته كذلك أماتنا الله على محبة المصطفى وأهل بيته صلى الله عليه وعليهم أجمعين)
*"ಇವರ ಖಬರ್ ನೂಖಾನ್ ಹೊರ ಪ್ರದೇಶ ಸಾನಾಬಾಝ್ ನಲ್ಲಿದ್ದು ಝಿಯಾರತ್ ನಡೆಯುವಂತದ್ದೂ ಸುಪ್ರಸಿದ್ಧ ವೂ ಆಗಿದೆ. ಹಾರೂನ್ ರಶೀದ್ ರವರ ಖಬರಿನ ಪಕ್ಕಕ್ಕಿದೆ. ಇವರ ಖಬರನ್ನು ನಾನು ಅನೇಕ ಬಾರಿ ಸಂದರ್ಶಿಸಿ ರುವೆನು.ನಾನು'ತ್ವೂಸ್'ನಲ್ಲಿ ವಾಸವಾಗಿದ್ದ ವೇಳೆ ನನಗೇನಾದರು ಸಂಕಷ್ಟ ಗಳಿದ್ದಾಗ ಅಲಿಯ್ಯ್ ಬಿನ್ ಮೂಸಾ ಅರ್ರಿಳಾ (ರ.ಅ) ರವರ ಖಬರ್ ಝಿಯಾರತ್ ಮಾಡಿ,ನನ್ನ ಸಂಕಷ್ಟ ವು ನಿವಾರಣೆ ಯಾಗಲು ಅಲ್ಲಾಹನಲ್ಲಿ ಪ್ರಾರ್ಥಿಸಿ ದಾಗೆಲ್ಲಾ ನನ್ನ ಸಂಕಷ್ಟ ಗಳು ನಿವಾರಣೆ ಆಗದೇ ಹೋಗಿಲ್ಲ,ಇದು ನಾನು ಅನೇಕ ಬಾರಿ ಅನುಭವಿಸಿ ನೋಡಿದ ವಿಷಯವಾಗಿದೆ. ಆಗೆಲ್ಲ ನಾನು ಇದೇ ರೀತಿ ಸಂಕಷ್ಟ ಮುಕ್ತನಾಗಿದ್ದೇನೆ."*

📔 *{ಸಹಿಹ್ ಇಬ್ನ್ ಹಿಬ್ಬಾನ್,ಕಿತಾಬುಲ್ ಸಿಖಾತ್ ಸಂಪುಟ-8, ಪುಟ-456,457, ಹದೀಸ್ - 14411}*

✍🏻 *Straight Path Ahlu Sunnah*

Comments

Popular posts from this blog

ಗ್ರಹಣ ನಮಾಜಿನ ರೂಪ

ಗ್ರಹಣ ನಮಾಜಿನ ರೂಪ *ಚಂದ್ರಗ್ರಹಣದ ಸುನ್ನತ್ ನಮಾಜು ಎರಡು ರಕಅತ್ ಅಲ್ಲಾಹನಿಗಾಗಿ ಜಮಾಅತ್ತಾಗಿ ನಾನು ನಿರ್ವಹಿಸುವೆನು* ಎಂದು ನಿಯ್ಯತ್ ಮಾಡಿ ಅಲ್ಲಾಹು ಅಕ್ಬರ್ ಎಂದು ಹೇಳಿ ನಮಾಜಿಗೆ ಪ್ರವೇಶಿಸುವು...

ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ. ಲೇ - ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಅಕ್ಕರೆಕೆರೆ.

ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ. ಲೇ - ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಅಕ್ಕರೆಕೆರೆ. ಆಮಿನ ಬೀವಿ ರ.ಅ ಗರ್ಭಿಣಿಯಾಗಿರುವಾಗ ವ್ಯಾಪಾರಕ್ಕಾಗಿ ಸಿರಿಯಾಕ್ಕೆ ಹೋಗಿದ್ದ ಅಬ್ದುಲ್ಲಾಹ್ (ರ.ಅ) ಮರಳಿ ಬರುವಾಗ ಮದೀನದಲ್ಲಿ ವಫಾತಾದರು.ತಂದೆಯ ಮಾವಂದಿರರಾದ ಬನುನ್ನಜ್ಜಾರ್ ಗೋತ್ರದವರ ಬಳಿ ದಫನ ಮಾಡಲಾಯಿತು.ರಬೀವುಲ್ ಹನ್ನೆರಡು ಸೋಮವಾರ ಸುಬಹಿಯ ಸ್ವಲ್ಪ ಮುಂಚೆ ಅಂತ್ಯ ಪ್ರವಾದಿ ಮುಹಮ್ಮದ್ ಮುಸ್ತಫ ಸ.ಅ ಮಕ್ಕಾದಲ್ಲಿ ಜನಿಸಿದರು.ಅಂದು ಕ್ರಿಸ್ತಶಕ 571 ಎಪ್ರಿಲ್ 21 ಆಗಿತ್ತು.ನೆಬಿ ಸ.ಅ ಜನಿಸಿದ ದಿನ ಅತ್ಯಂತ ಸಂತೋಷದಾಯಕವಾದ ದಿನವಾಗಿದೆ.ಮಾನವ ಶ್ರೇಷ್ಠರಾದ ಪ್ರವಾದಿ ಮುಹಮ್ಮದ್ ಸ.ಅ ರವರ ಮುಖಾಂತರ ಮಾನವ ಸಮೂಹವನ್ನು ಅಲ್ಲಾಹು ಅನುಗ್ರಹಿಸಿದ ಸುದಿನವಾಗಿದೆ ಅಂದು.ಮುಸಲ್ಮಾನರು ಈ ಅನುಗ್ರಹಕ್ಕೆ ಕ್ರತಜ್ಞತೆ ಸಲ್ಲಿಸಿ ಅಂದು ಮೀಲಾದುನ್ನಬಿ ಆಚರಣೆ ಮಾಡುತ್ತಾರೆ.ನೆಬಿ ಸ.ಅ ರವರ ಮದಹ್ ಕೀರ್ತನೆಗಳನ್ನು ಹೇಳಿ, ಹಾಡಿಹೊಗಳಿ ದಾನಧರ್ಮಗಳನ್ನು ನೀಡಿ ಸಂತೋಷ ಪ್ರಕಟಿಸುತ್ತಾರೆ.              ಭೂಮಿಯ ಮೇಲೆ ಜನ್ಮವೆತ್ತಿ ಬಂದ ಅತ್ಯಂತ ಉತ್ತಮನಾದ ಮನುಷ್ಯ ನೆಬಿ ಸ.ಅ ಆಗಿದ್ದಾರೆ.ಮುಂಜಿಕರ್ಮ ನಿರ್ವಹಿಸಲ್ಪಟ್ಟ,ಹೊಕ್ಕುಳ ಬಳ್ಳಿ ಕತ್ತರಿಸಲ್ಪಟ್ಟ,ಕಣ್ಣಿಗೆ ಸುರುಮ ಹಾಕಲ್ಪಟ್ಟ ಸ್ಥಿತಿಯಲ್ಲಿ ಸಂಪೂರ್ಣ ಸಂಶುದ್ಧವಾದ ರೀತಿಯಲ್ಲಾಗಿದೆ ಅವರು ಜನಿಸಿದ್ದು.ಅಬೂತಾಲಿಬರ ಮನೆಯಲ್ಲಾಗಿದೆ ಜನನ.ಹೆರಿಗೆ...

ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಕರ ಪಾತ್ರ

ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಕರ ಪಾತ್ರ _✍🏻ಜಹಫರ್ ಸಾಧಿಕ್ ಕಟ್ಟದಪಡ್ಪು_ _ನಮ್ಮ ಸಮಾಜವು ನಮಗೆ ಜನ್ಮ ಕೊಟ್ಟ ತಂದೆ ತಾಯಿಯ ನಂತರ ಮಹತ್ತರವಾದ ಸ್ಥಾನವನ್ನು ಶಿಕ್ಷಕರಿಗೆ ನೀಡಿ ಗೌರವಿಸಿದೆ.  ಶಿಲ್ಪಿ...