Skip to main content

ಮಕ್ಕಳಿಗೆ ಪರಾನುಭೂತಿ ಕಲಿಸುವುದು ಹೇಗೆ

KCF INC ಕೋಶಾಧಿಕಾರಿ ಹಾಜಿ ಶೈಖ್ ಬಾವಾರವರ ಇಂಗ್ಲಿಷ್ ಲೇಖನದಿಂದ ಭಾಷಾಂತರಿಸಲಾಗಿದೆ

nizzu4ever
ಉರುವಾಲು ಪದವು
niznam4ever@gmail.com

ಮಕ್ಕಳಿಗೆ ಪರಾನುಭೂತಿ ಕಲಿಸುವುದು ಹೇಗೆ?

ಆಧುನಿಕ ತಂತ್ರಜ್ಞಾಗಳು ಮತ್ತು ಸೋಶಿಯಲ್ ಮೀಡಿಯಾಗಳ ಬಳಕೆಗಳು ಹೆಚ್ಚಾಗುತ್ತಿದ್ದಂತೆ ನಮ್ಮ ಮಕ್ಕಳು ವಾಸ್ತವ ಬದುಕಿನಿಂದ ದೂರ ಸರಿಯುತ್ತಿದ್ದಾರೆ. ಇಂದು ನಿಮ್ಮ ಪುಟ್ಟ ಮಕ್ಕಳನ್ನು ಸರಿಯಾಗಿ ಗಮನಿಸಿದರೆ ಅವರು ಹೆಚ್ಚಾಗಿ ಟ್ಯಾಬ್ಲೆಟ್ ಮತ್ತು ಸ್ಮಾರ್ಟ್ ಫೋನ್ ಗಳ ದಾಸರಾಗಿರುವುದನ್ನು ತಿಳಿಯಬಹುದು. ಅವರ ಅರಿವು ಕೇವಲ ಮನೋರಂಜನೆಗಾಗಿ ಮಾತ್ರ ಸೀಮಿತಗೊಳ್ಳುತ್ತಿದೆ,  ವಾಸ್ತವ ಬದುಕಿನ ಬಗ್ಗೆ ಚಿಂತಿಸುವುದಿಲ್ಲ. ತಂತ್ರಜ್ಞಾನ ಎಂಬುದು ಇಂದು ನಮ್ಮ ಬದುಕಿನ ಅವಿಭಾಜ್ಯ ಅಂಗವಾಗಿದೆ, ಅದನ್ನು ನಿರ್ಲಕ್ಷಿಸಲು ಸಾಧ್ಯವಿಲ್ಲ. ಆದರೂ ಅವುಗಳನ್ನು logout  ಮತ್ತು unplug ಮಾಡುವ ಆಯ್ಕೆಯನ್ನು ಹೊಂದಿರುತ್ತದೆ. ಪುಸ್ತಕದಲ್ಲಿ ಅಥವಾ ಓದಿನಲ್ಲಿ ತಲ್ಲೀನರಾಗಿರುವ ಮತ್ತು ಇತರರೊಂದಿಗೆ ಬೆರೆತು ಸಾಮಾಜಿಕ ಕಾರ್ಯಗಳಲ್ಲಿ ಬೆರೆತುಕೊಳ್ಳುವ ಮಕ್ಕಳನ್ನು ಇಂದು ಕಾಣಲು ಸಾಧ್ಯವಿಲ್ಲ. ಹೊರ ಜಗತ್ತಿನೊಂದಿಗೆ ಮತ್ತು ಅವರ ಸುತ್ತಮುತ್ತಲಿರುವ ಜನರೊಂದಿಗೆ ಹೇಗೆ  ವ್ಯವಹರಿಸಬೇಕು ಎಂಬುದನ್ನು ನಮ್ಮ ಮಕ್ಕಳು ಕಲಿಯುತ್ತಿಲ್ಲ. ಬದುಕಿನ ಗುರಿ ಮತ್ತು ಜೀವನದ ಪ್ರಾಮುಖ್ಯತೆಗಳನ್ನು ಅರ್ಥಮಾಡಿಕೊಂಡು ಇಂದಿನ ಮಕ್ಕಳು ಬೆಳೆದು ಬರುತ್ತಿಲ್ಲವೆಂಬುವುದೇ ಖೇದಕರ. ಬದುಕಿನ ಗುರಿ ಬಗ್ಗೆ ಆಲೋಚಿಸಲು ಮತ್ತು ಕ್ರಿಯಾತ್ಮಕವಾಗಿ ಮಕ್ಕಳು ಬೆಳೆದು ಬರಲು ಬೇಕಾದ ಸೂಕ್ತ ವಾತಾವರಣವನ್ನು ಮಕ್ಕಳಿಗೆ ಒದಗಿಸಿಕೊಡಬೇಕಾಗಿದೆ.

ಪೋಷಕರು ಮಕ್ಕಳ ಭವಿಷ್ಯಕ್ಕೆ ಉತ್ತಮವಾದುದನ್ನೇ ನೀಡಬೇಕು. ಮಕ್ಕಳಿಗೆ ಪ್ರಾಥಮಿಕ ಶಿಕ್ಷಣವನ್ನು ನೀಡುವುದರ ಮೂಲಕ ಮತ್ತು ಆಧುನಿಕ ತಂತ್ರಜ್ಞಾಗಳನ್ನು ಪರಿಮಿತಿಯೊಳಗೆ ಬಳಕೆ ಮಾಡುವುದನ್ನು ಕಲಿಸುವುದರ ಮೂಲಕ ಮಕ್ಕಳನ್ನು ಪ್ರಬುದ್ಧರಾಗಿಸಬಹುದು. ಚಿಕ್ಕಂದಿನಲ್ಲಿ ಮಕ್ಕಳಿಗೆ ನೀಡಿದ್ದನ್ನೇ ಭವಿಷ್ಯದಲ್ಲಿ ಕೊಯ್ಯಬಹುದು. ನಮ್ಮ ಮಕ್ಕಳು ಅಂಬೆಗಾಲಿಡುವ ಪ್ರಾಯದಲ್ಲಿ ಗಣಿತದ ಪ್ರಶ್ನೆಗಳನ್ನು ಬಗೆಹರಿಸುತ್ತವೆ ಮತ್ತು ವರ್ಣಮಾಲೆಗಳನ್ನು ಸರಿಯಾಗಿ ಜೋಡಿಸುತ್ತವೆ ಎಂದು ನಾವು ಸಂಭ್ರಮಪಡುತ್ತೇವೆ. ಆದರೆ ಬದುಕಿನ ನೈತಿಕ ಮೌಲ್ಯಗಳನ್ನು  ಕಲಿಸಿಕೊಡುವಲ್ಲಿ ನಾವು ಎಡವುತ್ತಿದ್ದೇವೆ. ಸ್ಪರ್ಧಾತ್ಮಕ ಜಗತ್ತಿನಲ್ಲಿ ಎಲ್ಲಕ್ಕಿಂತಲೂ ಮೊದಲು ನಾವು ಕಲಿಸಬೇಕಾಗಿರುವುದು ಜೀವನದ ನೈತಿಕ ಮೌಲ್ಯವನ್ನಾಗಿದೆ. ಇಂದಿನ ಜಗತ್ತಿನಲ್ಲಿ ಪೋಷಕರು ಎದುರಿಸುತ್ತಿರುವ ಪ್ರಮುಖ ಸವಾಲು ಮಕ್ಕಳಿಗೆ  "ಪರಾನುಭೂತಿ" ಕಲಿಸುವುದಾಗಿರುತ್ತದೆ. ಪರಾನುಭೂತಿ ಎಂಬುದು ಒಂದು ಕೌಶಲ್ಯವಾಗಿದ್ದು, ನಾವು ಇತರರ ದೃಷ್ಟಿಕೋನವನ್ನು ಪರಸ್ಪರ ಅರ್ಥಮಾಡಿಕೊಳ್ಳಲು ಪ್ರಯತ್ನಿಸುವುದು ಮತ್ತು ಸಹವರ್ತಿಗಳೊಂದಿಗಿನ ಜೀವನ, ಮತ್ತು ಪ್ರೀತಿ ವಿಶ್ವಾಸದೊಂದಿಗೆ ಸಂಬಂಧಗಳನ್ನು  ಭದ್ರಗೊಳಿಸುವುದಾಗಿರುತ್ತದೆ. ಒಂದು ನಿರ್ಧಿಷ್ಟ ಸನ್ನಿವೇಶದಲ್ಲಿ ಸಮಸ್ಯೆಗಳು ತಲೆದೋರಿದಾಗ ಜನರು ಹೇಗೆ ಪ್ರತಿಕ್ರಿಯಿಸುತ್ತಾರೆ ಮತ್ತು ಯಾವ ರೀತಿ ಬಗೆಹರಿಸುತ್ತಾರೆ ಎಂಬುದನ್ನು ತಿಳಿದುಕೊಳ್ಳಲಿರುವ ಪಕ್ವತೆಯಾಗಿರುತ್ತದೆ.

ಮಕ್ಕಳು ಸತ್ಯ ಮತ್ತು ನೈತಿಕತೆಯ ಹಾದಿಯಲ್ಲಿ ಬೆಳೆಯಕೆಂದು ಬಯಸುವವರ ಬಗ್ಗೆ ಅಲ್ಲಾಹು ಅವನ ಪವಿತ್ರ ಕುರಾನಿನಲ್ಲಿ ಹೇಗೆ ವಿವರಿಸುತ್ತಾನೆ ನೋಡಿ, ನಮ್ಮೊಡೆಯನಾದ ಅಲ್ಲಾಹುವೇ! ನಮ್ಮ ಮಡದಿಯರು ಮತ್ತು ಮಕ್ಕಳ ಮೂಲಕ ನಮ್ಮ ಕಣ್ಣುಗಳಿಗೆ ಒಳಿತನ್ನೇ ಕರುಣಿಸು ಮತ್ತು ನಮ್ಮನ್ನು ಧರ್ಮ ನಿಷ್ಠರ ನೇತಾರರಾಗಿಸು, ಎಂದು ಅವರು ಪ್ರಾರ್ಥಿಸುತ್ತಾರೆ.(ಖುರಾನ್ 25:74)

ನಿಮ್ಮ ಮಕ್ಕಳಿಗೆ ಉತ್ತಮ ನಡವಳಿಕೆಯನ್ನು ಬೆಳೆಸಿಕೊಳ್ಳುವ ಮತ್ತು ಪರಾನುಭೂತಿ ಕಲಿಸುವ ವಿಧಾನಗಳು ಈ ಕೆಳಗಿನವುಗಳಾಗಿವೆ.

1. *ಕುರಾನ್ ನಮ್ಮ ಮಕ್ಕಳ ಜೀವನದ ಭಾಗವಾಗಿರಲಿ*

ಕುರಾನನ್ನು ಆಳವಾಗಿ ಚಿಂತಿಸುವುದರ ಮೂಲಕ, ಓದುವುದರ ಮೂಲಕ, ಅವಲೋಕನ ನಡೆಸುವ ಮೂಲಕ ಜೀವನದಲ್ಲಿ ಪರಿವರ್ತನೆಯ ಅನುಭವವನ್ನು ಪಡೆಯಬಹುದು. ಯಾವುದೇ ಒಂದು ಜೀವಿಯ ಹೃದಯದಲ್ಲಿ ಕುರಾನ್ ಭದ್ರವಾಗಿದ್ದರೆ ಅಲ್ಲಿ  ಶಾಂತಿ, ತಾಜಾತನ, ಭರವಸೆ, ವಿಶ್ರಾಂತಿ, ಸ್ಥಿರತೆ, ಉತ್ಕೃಷ್ಟತೆ, ಯಶಸ್ಸು, ಪರಿಶ್ರಮ, ಹಂಬಲ ದೊರಕುತ್ತದೆ. ನಿಮ್ಮ ಮಕ್ಕಳೊಂದಿಗೆ ಸಂಭಾಷಣೆ ನಡೆಸುವ ವೇಳೆ ಅವರೊಂದಿಗೆ ಕುರಾನಿನ ಬಗ್ಗೆ ತಿಳಿಸಿಕೊಟ್ಟು ನೋಡಿ. ತಪ್ಪು ಮಾಡಿದಾಗ ಕುರಾನ್ ಮೂಲಕವೇ ಸರಿಪಡಿಸಿ ಕೊಡಿ. ಹೆಚ್ಚಿನ ಸಂಧರ್ಭಗಳಲ್ಲಿ ಕುರಾನಿನ ಬಗ್ಗೆ ತಿಳಿಸಿಕೊಡಿ. ಆಗ ಕುರಾನ್ ಮಕ್ಕಳ ಪುಟ್ಟ ಮನಸ್ಸಿನಲ್ಲಿ ಸ್ಥಾನ ಹಿಡಿಯುತ್ತದೆ. ಇನ್ನೊಮ್ಮೆ ತಪ್ಪು ಮಾಡಿದಾಗ ಕುರಾನ್ ನೆನಪಿಗೆ ಬರುತ್ತದೆ.

2. *ಶಾಂತಿ ಮತ್ತು ಸಮಾಧಾನವನ್ನು ಮಕ್ಕಳ ಮೆದುಳಿಗೆ ಸಂಪರ್ಕಿಸಿ*

ಅಲ್ಲಾಹ್ ಎನ್ನುವುದು ಶಾಂತಿಯ ಅಂತಿಮ ರೂಪವಾಗಿದೆ., ಅಲ್-ಸಲಾಮ್ ಇದು ಅವನ ಹೆಸರುಗಳಲ್ಲಿ ಒಂದಾಗಿದೆ: . ಅವರ ಎಲ್ಲಾ ವಿಷಯಗಳನ್ನು ಅಲ್ಲಾಹುವಿನೊಂದಿಗೆ ಸಂಬಂಧಿಸಿ ಮಾತನಾಡಿ. ಪ್ರಾರ್ಥನೆಗಳ ಮೂಲಕ ಮಾತ್ರ  ಅಲ್ಲಾಹುವಿನೊಂದಿಗೆ ಸಂಪರ್ಕವಿಡುವುದಲ್ಲ, ಹೊರತು, ನಾವು ಕುಡಿಯುವ ಅನ್ನ ಪಾನೀಯಗಳು, ರುಚಿ ರುಚಿಯಾದ ಹಣ್ಣು ಹಂಪಲುಗಳು , ತಂದೆ ತಾಯಿ ಮಕ್ಕಳೊಂದಿಗೆ ತೋರಿಸುತ್ತಿರುವ ಪ್ರೀತಿ ಕಾಳಜಿ ಮಮತೆ, ಮತ್ತು ಉತ್ತಮ ಆರೋಗ್ಯ ಹಾಗೂ ಸೌಂದರ್ಯ ರೂಪಗಳನ್ನು ನೀಡಿದವನು ಯಾರು?, ನಮ್ಮ ಸುತ್ತಮುತ್ತಲಿನ ಪ್ರಕೃತಿ ಸೌಂದರ್ಯವನ್ನು ಸೃಷ್ಟಿಸಿದವನು ಹಾಗೂ ನಾವು ಕಾಣುತ್ತಿರುವ ಜಗತ್ತಿನ ವಿಸ್ಮಯಗಳನ್ನು ಸೃಷ್ಟಿಸಿದವನು ಯಾರು? ಈ ಎಲ್ಲಾ ಪ್ರಶ್ನೆಗಳಿಗೆ ಅಲ್ಲಾಹು ಮಾತ್ರ ಸೃಷ್ಟಿಕರ್ತ ಅವನೊಂದಿಗೆ ಪ್ರೀತಿಯಿಂದ ಉತ್ತಮ ಸಂಪರ್ಕವನ್ನಿಟ್ಟುಕೊಂಡರೆ ನೀನು ಎಲ್ಲೇ ಇದ್ದರೂ ನಿನ್ನ ಸಹಾಯಕ್ಕೆ ಧಾವಿಸುತ್ತಾನೆ ಎಂದು ತಿಳಿಸಿಕೊಡಬೇಕು.

ಮುಂದುವರಿಯುವುದು......

Comments

Popular posts from this blog

ಗ್ರಹಣ ನಮಾಜಿನ ರೂಪ

ಗ್ರಹಣ ನಮಾಜಿನ ರೂಪ *ಚಂದ್ರಗ್ರಹಣದ ಸುನ್ನತ್ ನಮಾಜು ಎರಡು ರಕಅತ್ ಅಲ್ಲಾಹನಿಗಾಗಿ ಜಮಾಅತ್ತಾಗಿ ನಾನು ನಿರ್ವಹಿಸುವೆನು* ಎಂದು ನಿಯ್ಯತ್ ಮಾಡಿ ಅಲ್ಲಾಹು ಅಕ್ಬರ್ ಎಂದು ಹೇಳಿ ನಮಾಜಿಗೆ ಪ್ರವೇಶಿಸುವು...

ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ. ಲೇ - ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಅಕ್ಕರೆಕೆರೆ.

ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ. ಲೇ - ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಅಕ್ಕರೆಕೆರೆ. ಆಮಿನ ಬೀವಿ ರ.ಅ ಗರ್ಭಿಣಿಯಾಗಿರುವಾಗ ವ್ಯಾಪಾರಕ್ಕಾಗಿ ಸಿರಿಯಾಕ್ಕೆ ಹೋಗಿದ್ದ ಅಬ್ದುಲ್ಲಾಹ್ (ರ.ಅ) ಮರಳಿ ಬರುವಾಗ ಮದೀನದಲ್ಲಿ ವಫಾತಾದರು.ತಂದೆಯ ಮಾವಂದಿರರಾದ ಬನುನ್ನಜ್ಜಾರ್ ಗೋತ್ರದವರ ಬಳಿ ದಫನ ಮಾಡಲಾಯಿತು.ರಬೀವುಲ್ ಹನ್ನೆರಡು ಸೋಮವಾರ ಸುಬಹಿಯ ಸ್ವಲ್ಪ ಮುಂಚೆ ಅಂತ್ಯ ಪ್ರವಾದಿ ಮುಹಮ್ಮದ್ ಮುಸ್ತಫ ಸ.ಅ ಮಕ್ಕಾದಲ್ಲಿ ಜನಿಸಿದರು.ಅಂದು ಕ್ರಿಸ್ತಶಕ 571 ಎಪ್ರಿಲ್ 21 ಆಗಿತ್ತು.ನೆಬಿ ಸ.ಅ ಜನಿಸಿದ ದಿನ ಅತ್ಯಂತ ಸಂತೋಷದಾಯಕವಾದ ದಿನವಾಗಿದೆ.ಮಾನವ ಶ್ರೇಷ್ಠರಾದ ಪ್ರವಾದಿ ಮುಹಮ್ಮದ್ ಸ.ಅ ರವರ ಮುಖಾಂತರ ಮಾನವ ಸಮೂಹವನ್ನು ಅಲ್ಲಾಹು ಅನುಗ್ರಹಿಸಿದ ಸುದಿನವಾಗಿದೆ ಅಂದು.ಮುಸಲ್ಮಾನರು ಈ ಅನುಗ್ರಹಕ್ಕೆ ಕ್ರತಜ್ಞತೆ ಸಲ್ಲಿಸಿ ಅಂದು ಮೀಲಾದುನ್ನಬಿ ಆಚರಣೆ ಮಾಡುತ್ತಾರೆ.ನೆಬಿ ಸ.ಅ ರವರ ಮದಹ್ ಕೀರ್ತನೆಗಳನ್ನು ಹೇಳಿ, ಹಾಡಿಹೊಗಳಿ ದಾನಧರ್ಮಗಳನ್ನು ನೀಡಿ ಸಂತೋಷ ಪ್ರಕಟಿಸುತ್ತಾರೆ.              ಭೂಮಿಯ ಮೇಲೆ ಜನ್ಮವೆತ್ತಿ ಬಂದ ಅತ್ಯಂತ ಉತ್ತಮನಾದ ಮನುಷ್ಯ ನೆಬಿ ಸ.ಅ ಆಗಿದ್ದಾರೆ.ಮುಂಜಿಕರ್ಮ ನಿರ್ವಹಿಸಲ್ಪಟ್ಟ,ಹೊಕ್ಕುಳ ಬಳ್ಳಿ ಕತ್ತರಿಸಲ್ಪಟ್ಟ,ಕಣ್ಣಿಗೆ ಸುರುಮ ಹಾಕಲ್ಪಟ್ಟ ಸ್ಥಿತಿಯಲ್ಲಿ ಸಂಪೂರ್ಣ ಸಂಶುದ್ಧವಾದ ರೀತಿಯಲ್ಲಾಗಿದೆ ಅವರು ಜನಿಸಿದ್ದು.ಅಬೂತಾಲಿಬರ ಮನೆಯಲ್ಲಾಗಿದೆ ಜನನ.ಹೆರಿಗೆ...

ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಕರ ಪಾತ್ರ

ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಕರ ಪಾತ್ರ _✍🏻ಜಹಫರ್ ಸಾಧಿಕ್ ಕಟ್ಟದಪಡ್ಪು_ _ನಮ್ಮ ಸಮಾಜವು ನಮಗೆ ಜನ್ಮ ಕೊಟ್ಟ ತಂದೆ ತಾಯಿಯ ನಂತರ ಮಹತ್ತರವಾದ ಸ್ಥಾನವನ್ನು ಶಿಕ್ಷಕರಿಗೆ ನೀಡಿ ಗೌರವಿಸಿದೆ.  ಶಿಲ್ಪಿ...