*KCF INC ಕೋಶಾಧಿಕಾರಿ ಹಾಜಿ ಶೈಖ್ ಬಾವಾರವರ ಇಂಗ್ಲೀಷ್ ಲೇಖನದಿಂದ ಭಾಷಾಂತರಿಸಲಾಗಿದೆ.*
ಭಾಗ-3
✍🏻Nizzu4ever👁
ಉರುವಾಲು ಪದವು
niznam4ever@gmail.com
ಉರುವಾಲು ಪದವು
niznam4ever@gmail.com
ಮಕ್ಕಳಿಗೆ ಪರಾನುಭೂತಿ ಕಲಿಸಿವುದು ಹೇಗೆ?
*6 . ಬದುಕಿನ ಗುರಿ ಮತ್ತು ಅದಕ್ಕಿರುವ ಸುಗಮ ಹಾದಿಗಳನ್ನು ತಿಳಿಸಿಕೊಡಿ.*
ನಾವು ಯಾಕೆ ಬದುಕಬೇಕು ಮತ್ತು ಹೇಗೆ ಬದುಕಬೇಕು ಎಂಬುದನ್ನು ಮಕ್ಕಳಿಗೆ ಕಲಿಸಿಕೊಡಬೇಕು. ಇಸ್ಲಾಂ ಧರ್ಮದ ಪಥವು ನೈಜವಾಗಿದೆ, ಜೀವನದ ಗುರಿ ತಲುಪಲಿರುವ ಹಾದಿಗಳು ಬಲು ರೋಮಾಂಚಕ ಮತ್ತು ಅರ್ಥ ಪೂರ್ಣವಾಗಿರುತ್ತದೆ. ಅಲ್ಲಾಹನನ್ನು ಅರಿತು ಜೀವಿಸುವುದು ಎಂದರೆ ಅವನ ಅನುಗ್ರಹಕ್ಕೆ ಕೃತಜ್ಞತೆ ಸಲ್ಲಿಸುವುದು ಮತ್ತು ವಿನಯಾನ್ವಿತನಾಗಿ ಬೇಡಿಕೊಳ್ಳುವುದು. ಇತರ ಎಲ್ಲ ಸೃಷ್ಟಿಗಳಿಗಿಂತ ಅಲ್ಲಾಹನನ್ನು ಹೆಚ್ಚು ಅರಿತುಕೊಳ್ಳುವ ವಿಶೇಷ ಸಾಮರ್ಥ್ಯವನ್ನು ಹಾಗೂ ಅಲ್ಲಾಹನ ಕುರಿತು ಕಲಿತು ಅವನ ಸಾಮೀಪ್ಯವನ್ನು ಹಾಗೂ ಅಲ್ಲಾಹನನ್ನು ಅರಿತ ಸಜ್ಜನರಿಗೆ ಅವನು ಹತ್ತಿರವಾಗುವ ಸೌಭಾಗ್ಯವನ್ನು ಮನುಷ್ಯ ವರ್ಗಕ್ಕೆ ಅಲ್ಲಾಹು ನೀಡಿದ್ದಾನೆ. ಇಸ್ಲಾಂ ಧರ್ಮವು ಸಾಮರಸ್ಯ ಜೀವನದ ಪರಿಪೂರ್ಣತೆಯಾಗಿದೆ. ಸೃಷ್ಟಿಕರ್ತನಾದ ಅಲ್ಲಾಹನ ಪ್ರತಿಯೊಂದು ಸಂದೇಶಗಳು ಮನುಷ್ಯನ ಆರಂಭದಿಂದ ಅಂತ್ಯದವರೆಗೂ ಭಾದಕಧಾಗುತ್ತದೆ. ಅಲ್ಲಾಹು ಏಕನು, ಅವನಲ್ಲದೆ ಬೇರೆ ಆರಾಧ್ಯನಿಲ್ಲ, ಅವನೇ ಸೃಷ್ಟಿಕರ್ತನು, ಅವನ ರಸೂಲ್ ಸ.ರ ರವರನ್ನು ಅನುಸರಿಸಬೇಕು. ಈಗ, ನಾವು ಅನುಸರಿಸುತ್ತಿರುವ ಇಸ್ಲಾಂ ಧರ್ಮದ ಪ್ರತಿಯೊಂದು ವಿಷಯಗಳು ಜೀವನದಲ್ಲಿ ನಮ್ಮ ಉದ್ದೇಶವನ್ನು ವಾಸ್ತವಿಕವಾಗಿ ಅನುಕರಣೆ ಮಾಡುತ್ತದೆ.ಆದ್ದರಿಂದ,ಆರಾಧಿಸುವುದು ಹೇಗೆ ಎಂದು ಮಕ್ಕಳಿಗೆ ಕಲಿಸುವುದು ಸರಳವಾಗಿಲ್ಲ. ನಮಾಜ್ ಅಲ್ಲಾಹನೊಂದಿಗೆ ನಡೆಸುವ ಸಂಭಾಷಣೆಯಾಗಿದೆ. ನಾವು "ಅಲ್ಲಾಹ್" ಎಂಬ ನಾಮವನ್ನು ಉಚ್ಛರಿಸುತ್ತೇವೆ, ಕುರ್ಆನ್ ಓದುತ್ತೇವೆ, ಝಿಕ್ರ್ ಹೇಳುತ್ತೇವೆ ನಂತರ ಪ್ರಾರ್ಥನೆಯ ಮೂಲಕ ಅಲ್ಲಾಹನೊಂದಿಗೆ ಮಾತನಾಡುತ್ತೇವೆ, ನಮ್ಮ ಹೃದಯದಲ್ಲಿರುವ ಕಷ್ಟ, ನಷ್ಟ, ದುಃಖ ದುಮ್ಮಾನಗಳನ್ನು ಕಣ್ಣೇರಿನ ಧಾರೆಯೊಂದಿಗೆ ಹೇಳಿ ಪ್ರಾರ್ಥಿಸುತ್ತ್ತೇವೆ. ಇದನ್ನು ಮಕ್ಕಳಿಗೆ ಕಲಿಸಿಕೊಟ್ಟು ಬದುಕಿನ ಗುರಿ ಅಲ್ಲಾಹು ಮಾತ್ರ ಅವನನ್ನು ತೃಪ್ತಿ ಪಡಿಸಬೇಕು, ಹೆಚ್ಚು ಪ್ರಾರ್ಥಿಸಬೇಕು ಹೀಗೆ ಉಪದೇಶಿಸುತ್ತ ಬದುಕಿನ ಗುರಿಯನ್ನು ಸುಗಮಗೊಳಿಸಬೇಕು.
*7.ಮಕ್ಕಳ ಪರಾನುಭೂತಿಯಲ್ಲಿ ಭಾಗಿಯಾಗಿ.*
ನಿಮ್ಮ ಮಕ್ಕಳ ಸಮಸ್ಯೆಗಳು, ಆತಂಕಗಳು ಮತ್ತು ಚಿಂತೆಗಳನ್ನು ಅರ್ಥಮಾಡಿಕೊಳ್ಳಿ ಮತ್ತು ಅವರೊಂದಿಗೆ ಅನುಭೂತಿಯನ್ನು ಪಡೆಯಲು ಪ್ರಯತ್ನಿಸಬೇಕು. ಅವರು ಸಮಸ್ಯೆಗಳಿಂದ ಕೊರಗುತ್ತಿರುವಾಗ ಸಮಾಧಾನ ಪಡಿಸಿ ನಿನ್ನೊಂದಿಗೆ ಸದಾ ನಾವಿದ್ದೇವೆ ಎಂದು ತಿಳಿಸಬೇಕು. ಉದಾಹರಣೆಗೆ; ನಿಮ್ಮ ಮಕ್ಕಳು ಸೈಕಲ್ ಓಡಿಸಲು ಭಯಪಟ್ಟು ಅದರಿಂದ ಹಿಂಜರಿಯುವಾಗ ಅವರ ಕೈ ಹಿಡಿದು ಕರೆದುಕೊಂಡು ಹೋಗಿ ನೀನು ಬೀಳದಂತೆ ನಾನು ಹಿಡಿದುಕೊಂಡಿದ್ದೇನೆ, ಧೈರ್ಯವಾಗಿ ಹೋಗು ಎಂದು ಹುರಿದುಂಬಿಸಬೇಕು. ಆಗ ಭಯವು ಮಾಯವಾಗಿ ಧೈರ್ಯದಿಂದ ಸೈಕಲ್ ತುಳಿಯುತ್ತಾರೆ. ಯಾವುದೇ ಸಂದರ್ಭದಲ್ಲೂ ನಿಮ್ಮ ಉಪಸ್ಥಿತಿಯ ಬಗ್ಗೆ ಭರವಸೆ ನೀಡಿ ಬೆಳೆಸಿ.
*8. ತಪ್ಪನ್ನು ಒಪ್ಪಿಕೊಂಡು ಕ್ಷಮೆ ಕೇಳುವುದನ್ನು ಮಕ್ಕಳಿಗೆ ಕಲಿಸಿ ಕೊಡಿ*
ಮಕ್ಕಳು ಯಾವುದೇ ಚಿಕ್ಕ ತಪ್ಪು ಮಾಡಿದರೂ ಆ ತಪ್ಪನ್ನು ಒಪ್ಪಿಕೊಂಡು ಕ್ಷಮೆ ಕೇಳುವುದನ್ನು ಕಲಿಸಿಕೊಡಬೇಕು, ನಂತರ ಆ ತಪ್ಪಿನಿಂದ ಉಂಟಾಗುವ ಅನಾಹುತಗಳನ್ನು ಹಾಗೂ ಕ್ಷಮೆ ಕೇಳಿದ ನಂತರ ಉಂಟಾಗುವ ಸಂತೋಷವನ್ನು ಅವರ ಮನಸ್ಸಿಗೆ ನೋವಾಗದ ರೀತಿಯಲ್ಲಿ ತಿಳಿಸಿಕೊಟ್ಟು ಇನ್ನೊಬ್ಬರೊಂದಿಗೆ ನಮ್ಮ ವರ್ತನೆ ಹೇಗಿರಬೇಕು ಎಂದು ತಿಳಿಸಿಕೊಡಬೇಕು. "I am sorry" ಎಂದು ಹೇಳಿದಾಗ ಪೋಷಕರಿಗೆ ಸಮಾಧಾನವಾಗಬಹುದು. ಆದರಿಂದ ಮಕ್ಕಳಿಗೆ ಪಶ್ಚಾತ್ತಾಪದ ಅರಿವಾಗುವುದಿಲ್ಲ. ಅದಕ್ಕಾಗಿ ತಪ್ಪಿನಿಂದ ಇನ್ನೊಬ್ಬರಿಗೆ ಉಂಟಾದ ನೋವನ್ನು ನಿಮ್ಮ ಮಕ್ಕಳಿಗೆ ಕಲಿಸಿಕೊಡಬೇಕು. ಆಗಲೇ ಅವರಲ್ಲಿ ಪಶ್ಚಾತ್ತಾಪದ ಭಾವನೆ ಮನಸ್ಸಿನಲ್ಲಿ ಮೂಡಿ ಬರಲು ಸಾಧ್ಯ. ಪ್ರೀತಿಯಿಂದ ತಿಳಿಸಿಕೊಡಲು ಪ್ರಯತ್ನಿಸಿ. ಉದಾಹರಣೆಗೆ; "ಆ ಚಿಕ್ಕ ಆಟಿಕೆಯ ವಸ್ತುವಿಗಾಗಿ ಅವಳನ್ನು ನೀನು ತಳ್ಳಿ ಹಾಕಿದ ಕಾರಣ ಅವಳು ಅಳುತ್ತಿದ್ದಾಳೆ, ನಾವು ಹೋಗಿ ಅವಳನ್ನು ಸಮಾಧಾನ ಪಡಿಸಿ ಬರೋಣ, ನೀನು ಆಟಿಕೆಯ ವಸ್ತುವನ್ನು ಅವಳಿಗೆ ನೀಡಿದರೆ ಅವಳು ಚೆನ್ನಾಗಿರುತ್ತಾಳೆ" ಈ ರೀತಿಯಾಗಿ ಅವರೊಂದಿಗೆ ತಪ್ಪಿನ ಅರಿವನ್ನು ಮೂಡಿಸಿದರೆ ಮಕ್ಕಳ ಮನಸ್ಸು ಬೇಗನೆ ತಪ್ಪನ್ನು ಅರಿತುಕೊಳ್ಳುತ್ತದೆ. ಮತ್ತು ತಪ್ಪಿನ ಅರಿವಾಗುತ್ತದೆ. ನೋವುಂಡವರ ಮನಸ್ಸನ್ನು ಅರ್ಥಮಾಡಿಕೊಳ್ಳಲು ಇದು ಸಹಕಾರಿಯಾಗುತ್ತದೆ.
ಮುಂದುವರಿಯುವುದು....

Comments