ಮನುಷ್ಯನ ಶರೀರದ ಬಗ್ಗೆ ಚಿಂತಿಸಿದ್ದೇವೆಯೇ..
*🤔ಚಿಂತಿಸುವವನಿಗೆ ದೃಷ್ಟಾಂತವಿದೆ🤔*
*ಅಲ್ಲಾಹು* ಮನುಷ್ಯನಿಗೆ ನೀಡಿದ ಶರೀರದ ಭಾಗಗಳ ಬಗ್ಗೆ ಚಿಂತಿಸಿದ್ದೇವೆಯೇ....? ಎಷ್ಟೊಂದು ಅದ್ಭುತವಾದ ರೀತಿಯಲ್ಲಾಗಿದೆ ಮನುಷ್ಯನನ್ನು ಸೃಷ್ಠಿಸಿದ್ದು.
*ಎರಡು ಕಣ್ಣುಗಳನ್ನು ಕೊಟ್ಟ*
*ಎರಡು ಕಿವಿಗಳನ್ನು ಕೊಟ್ಟ*
*ಎರಡು ಮೂಗಿನ ರಂಧ್ರಗಳು ಕೊಟ್ಟ*
*ಎರಡು ತುಟಿಗಳನ್ನು ಕೊಟ್ಟ*
*ಎರಡು ಕೈ ಗಳನ್ನು ಕೊಟ್ಟ*
*ಎರಡು ಕಾಲುಗಳನ್ನು ಕೊಟ್ಟ*
*ಎರಡು ಕಿಡ್ನಿಗಳನ್ನು ಕೊಟ್ಟ*
ಹೀಗೆ ಹಲವಾರು ಅಂಗಾಂಗಗಳನ್ನು ಎರಡೆರಡಾಗಿ *ಅಲ್ಲಾಹು* ಮನುಷ್ಯನಿಗೆ ನೀಡಿದ. ಅದರಲ್ಲಿ ಕೆಲವೂಂದು ಅಂಗಾಂಗಗಳು ಒಂದೊಂದು ಇದ್ದರೆ ಸಾಕಾಗುತ್ತಿತ್ತು. *ಕಣ್ಣು,ಕಿವಿ,ಮೂಗಿನ ರಂಧ್ರ,* ಮುಂತಾದವುಗಳು. ಆದರೂ ಅವುಗಳನ್ನೆಲ್ಲಾ ಎರಡೆರಡು ಕೊಟ್ಟು ಮನುಷ್ಯನ ರೂಪವನ್ನು ಇನ್ನಷ್ಟು ಸುಂದರಗೊಳಿಸಿದ. *"ಅಲ್ ಹಂದುಲಿಲ್ಲಾಹ್"*
*ಅಲ್ಲಾಹನು* ಮನುಷ್ಯನಿಗೆ ಎರಡು *ಕಿಡ್ನಿಗಳನ್ನು* ಕೊಟ್ಟ. ಬದುಕಲು ಒಂದು ಕಿಡ್ನಿ ಇದ್ದರೆ ಸಾಕಾಗುತ್ತದೆ, ಆದರೂ ಎರಡು ಕಿಡ್ನಿಗಳನ್ನು ಕೊಟ್ಟ. ಒಂದಕ್ಕೆ ಏನಾದರೂ ತೊಂದರೆ ಬಂದರೆ ಇನ್ನೊಂದು ಕಿಡ್ನಿಯನ್ನು ಅವಲಂಬಿಸಿ ಬದುಕಬಹುದು. ಇದೆಲ್ಲಾ ಸೃಷ್ಠಿಕರ್ತನಾದ *ಅಲ್ಲಾಹನ* ಅಪಾರವಾದ ಅನುಗ್ರವಾಗಿದೆ. *"ಅಲ್ ಹಂದುಲಿಲ್ಲಾಹ್"*
ಇನ್ನು ಒಂದೊಂದೇ ಕೊಟ್ಟ ಅಂಗಾಂಗವಾಗಿದೆ, *ನಾಲಗೆ ಮತ್ತು ಗುಪ್ತಾಂಗ.* ಈ ಎರಡು ಅಂಗಾಂಗಗಳಲ್ಲಾಗಿದೆ ಮನುಷ್ಯನು ಅತೀ ನೀಚವಾದ ಕಾರ್ಯಗಳಲ್ಲೇರ್ಪಡುವುದು. ಒಂದು ವೇಳೆ ಇವೆರಡನ್ನು ಎರಡೆರಡು ಕೊಟ್ಟಿದ್ದರೆ ಮನುಷ್ಯನ ಪಾಪವು ಇನ್ನಷ್ಟು ಅಧಿಕಗೊಳ್ಳುತ್ತಿತ್ತು. ಇದೂ *ಅಲ್ಲಾಹನ* ಒಂದು ಮಹಾ ಅನುಗ್ರಹವಾಗಿದೆ. *"ಅಲ್ ಹಂದುಲಿಲ್ಲಾಹ್".*
ಎಲುಬು ಇಲ್ಲದ ಇವೆರಡು ಅಂಗಾಂಗಗಳ ಬಗ್ಗೆ *ಪ್ರವಾದಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮರು ಹೇಳಿದರು.👇*
أن النبي صلى الله عليه وسلم قال: من يضمن لي ما بين لحييه وما بين فخذيه، أضمن له الجنة
"ಯಾರಾದರು ಎರಡು ತುಟಿಗಳ ಮಧ್ಯೆ ಮತ್ತು ಎರಡು ತೊಡೆಯ ಮಧ್ಯೆ ಇರುವ ವಸ್ತುಗಳಿಂದ ನನಗೆ ಖಚಿತ ಪಡಿಸಿದಲ್ಲಿ ಅವನಿಗೆ ಸ್ವರ್ಗವನ್ನು ನಾನು ಖಚಿತಪಡಿಸುವೆನು." *(ಬುಖಾರಿ)*
*ಅರ್ಥಾತ್ :ನಾಲಗೆಯಿಂದ ಮತ್ತು ಗುಪ್ತಾಂಗಗಳಿಂದ ನೀವು ಯಾವುದೇ ಕೆಟ್ಟ ಕೆಲಸ ಕಾರ್ಯಗಳನ್ನು ಮಾಡದೆ ಅಲ್ಲಾಹನು ಅನುಮತಿಗೊಳಿಸಿದ ರೂಪದಲ್ಲಿ ಮಾತ್ರ ಅದನ್ನು ಉಪಯೋಗಿಸಿದಲ್ಲಿ ಸ್ವರ್ಗ ಖಚಿತವಾಗಿದೆ.*
ಮಲ ಮೂತ್ರ ವಿಸರ್ಜಿಸುವ ಸಂವಿಧಾನವನ್ನು *ಅಲ್ಲಾಹು* ಎಷ್ಟೊಂದು ಮೃದುವಾಗಿ ಮಾಡಿದ್ದಾನೆ. ಎಷ್ಟೇ ಗಟ್ಟಿಯಾದ ಆಹಾರ ಪದಾರ್ಥಗಳು ತಿಂದರೂ ಬೇಡದ ವಸ್ತುವನ್ನು ಮೃದುವಾದ ರೀತಿಯಲ್ಲಿ ಹೊರಹಾಕಲು ಸಾಧ್ಯವಾಗುತ್ತದೆ. ಮಲವಾಗಲಿ, ಮೂತ್ರವಾಗಲಿ ಅದು ಹೊರಬರುವಾಗ ಒಳಗಿದ್ದ ರಕ್ತ ಅಥವಾ ಬೇರೆ ಯಾವುದೇ ದೇಹದ ಒಳಗಿರುವ ವಸ್ತುಗಳು ಹೊರಗೆ ಬರುವುದಿಲ್ಲ. *"ಅಲ್ ಹಂದುಲಿಲ್ಲಾಹ್"*
ಒಂದು ಪಾತ್ರೆಯಲ್ಲಿ ಸಣ್ಣ ರಂಧ್ರ ಇದ್ದರೂ ಕೂಡಾ ಪಾತ್ರೆಯ ಒಳಗಿರುವ ನೀರು ಹನಿ ಹನಿಯಾಗಿ ಪಾತ್ರೆಯಿಂದ ಹೊರ ಬರುತ್ತಲೇ ಇರುತ್ತವೆ. ಆದರೆ ಮನುಷ್ಯನ ಶರೀರದಲ್ಲಿ ಎಷ್ಟೊಂದು ರಂಧ್ರಗಳಿವೆ, *"ಸುಬುಹಾನಲ್ಲಾಹ್"* ಇದು ವರೆಗೂ ಆ ರಂಧ್ರಗಳಲ್ಲಿ ಒಂದು ತೊಟ್ಟು ರಕ್ತ ಹೊರ ಬಂದಿಲ್ಲ. *"ಅಲ್ ಹಂದುಲಿಲ್ಲಾಹ್"*
ಒಬ್ಬಾತ ಮರಣ ಹೊಂದಿದರೆ ಆತನ ಹೊಟ್ಟೆಯನ್ನು ಸವರಿದಾಗ ಮಲ ಮೂತ್ರ ಹೊರ ಬರುತ್ತದೆ. ಆದರೆ ಜೀವಂತ ಇರುವವನ ಹೊಟ್ಟೆಗೆ ಸವರಿದರೆ ಹಾಗೆ ಹೊರ ಬರುವುದಿಲ್ಲ. ಮನುಷ್ಯನಿಗೆ ಜೋರಾಗಿ ಮಲ ಮೂತ್ರ ಬಂದರೂ ಅವನು ತನ್ನ ಮನಸ್ಸಲ್ಲಿ ಇದು ಈಗ ಹೊರ ಹೋಗಲಿ ಎಂದು ಬಾವಿಸಿದರೆ ಮಾತ್ರ ಅದು ಹೊರ ಬರುತ್ತದೆ. ಅದಕ್ಕೆ ಯಾವುದೇ ಬಟನೋ ರಿಮೋಟೋ ಬೇಕಾಗಿಲ್ಲ ಕೇವಲ ಮನಸ್ಸಲ್ಲಿ ಅಂದು ಕೊಂಡರೆ ಸಾಕು ಅದು ಸಲೀಸಾಗಿ ಯಾವುದೇ ತೊಂದರೆಯಿಲ್ಲದೆ ಹೊರ ಬರುತ್ತದೆ. *"ಅಲ್ ಹಂದುಲಿಲ್ಲಾಹ್"*
ಮನುಷ್ಯನ ಬಾಯಿಯಲ್ಲಿರುವ *ಉಗುಳು* ಕೆಲವು ನಿಮಿಷಗಳ ಸಮಯ ನಿಂತು ಹೋದರೆ ಮನುಷ್ಯನ ಅವಸ್ಥೆ ಹೇಳಿತೀರದು. ಮನುಷ್ಯನು ಆಹಾರ ಪದಾರ್ಥ ಸೇವಿಸುವಾಗ *ಉಗುಳ್ನೊಂದಿಗೆ* ಬೆರೆಸಿ ಗಂಟಲಿಗೆ ಯಾವುದೇ ಅಪಾಯವಿಲ್ಲದ ರೀತಿಯಲ್ಲಿ ಸೇವಿಸುತ್ತಾನೆ. ಒಂದು ವೇಳೆ *ಉಗುಳು* ನಿಂತುಹೋದರೆ ಆಹಾರ ಪದಾರ್ಥ ಗಂಟಲಲ್ಲಿ ಸಿಕ್ಕಿ ಒದ್ದಾಡಿ ಪ್ರಾಣ ಹೋಗುವ ಪರಿಸ್ಥಿತಿ. ಇನ್ನು ಸಾಮಾನ್ಯವಾಗಿ *ಉಗುಳು* ಬರುವುದಕ್ಕಿಂತಾ ಸ್ವಲ್ಪ ಜಾಸ್ತಿ *ಉಗುಳು* ಬಂದರೂ ಕಷ್ಟ ಹಾಗೆ ಬಂದರೆ ಕ್ಷಣ ಕ್ಷಣಕ್ಕೂ ಉಗುಳುತ್ತನೇ ಇರಬೇಕು ಇಲ್ಲದಿದ್ದರೆ ಕ್ಷಣ ಕ್ಷಣಕ್ಕೂ ನುಂಗುತ್ತನೇ ಇರಬೇಕು. ಇವೆಲ್ಲವನ್ನೂ ಕ್ರಮಬದ್ಧವಾಗಿ ನಿಯಂತ್ರಿಸುವ ಲೋಕ ಸಂರಕ್ಷಕನಾದ *ಅಲ್ಲಾಹನಿಗೆ* ಎಷ್ಟು ಸ್ತುತಿ ಅರ್ಪಿಸಿದರೂ ಸಾಲದು. *"ಅಲ್ ಹಂದುಲಿಲ್ಲಾಹ್"*
ಮನುಷ್ಯನ *ಕೈಬೆರಳು* ನಾಲ್ಕೂ ಮೂರೋ ಅಥವಾ ಐದಕ್ಕಿಂತಾ ಜಾಸ್ತಿ ಇರುತ್ತಿದ್ದರೆ ಏನಾಗುತ್ತಿತ್ತು....? ಕೆಲವರಿಗೆ ಆರು ಬೆರಳು ಇದೆ ಆದರೆ, ಆರನೇಯ *ಬೆರಳಿನಿಂದ* ಯಾವುದೇ ಪ್ರಯೋಜನ ಅವರಿಗೆ ಸಿಗುವುದಿಲ್ಲ. *ಬೆರಳು* ಮುರಿಯಲ್ಪಟ್ಟವರೂ ಇದ್ದಾರೆ. ಮುರಿಯಲ್ಪಟ್ಟ *ಬೆರಳಿನ* ಮಹತ್ವ ಸಂಪೂರ್ಣವಾಗಿ ಅವರಿಗೆಯೇ ತಿಳಿದಿರುವುದು.
ಮನುಷ್ಯನಿಗೆ *ಅಲ್ಲಾಹು* ನೀಡಿದ ಅನುಗ್ರಹವಾಗಿದೆ ಸುಂದರವಾದ *ಸ್ವರ.* ಇದು ಒಂದೇ ರೀತಿಯಲ್ಲಿ ಕೊಡದೆ ಒಬ್ಬೊಬ್ಬ ಮನುಷ್ಯನಿಗೆ ಒಂದೊಂದು ರೀತಿಯಲ್ಲಿ ನೀಡಿದ್ದಾನೆ. ಒಮ್ಮೆ ಊಹಿಸಿ ನೋಡಿ ಲೋಕದಲ್ಲಿರುವ ಎಲ್ಲಾ ಮನುಷ್ಯರ *ಶಬ್ದ* ಒಂದೇ ರೀತಿಯಲ್ಲಿ ಇರುತ್ತಿದ್ದರೆ ಹೇಗಿರುತ್ತಿತ್ತು. ಇದೇ ರೀತಿಯಲ್ಲಾಗಿದೆ ಸುಂದರವಾದ *ಮುಖ.* *ಅಲ್ಲಾಹು* ಒಬ್ಬೊಬ್ಬರಿಗೆ ಒಂದೊಂದು *ರೂಪ* ನೀಡಿ ಅನುಗ್ರಹಿಸಿದ. ಒಂದು ವೇಳೆ ಲೋಕದಲ್ಲಿರುವ ಎಲ್ಲಾ ಮನುಷ್ಯರ *ಮುಖದ* ರೂಪವನ್ನು ಒಂದೇ ರೀತಿಯಲ್ಲಿ ಸೃಷ್ಠಿಸಿದ್ದರೆ ಹೇಗಿರುತ್ತಿತ್ತು ಮನುಷ್ಯನ ಸ್ಥಿತಿ😳 *"ಸುಬುಹಾನಲ್ಲಾಹ್"*
*ಅಲ್ಲಾಹು* ನೀಡಿದ ಮಹಾ ಅನುಗ್ರಹಗಳಲ್ಲಿ ಒಂದಾಗಿದೆ *ಕಣ್ಣು* ಇದನ್ನು ನೀಡಿದಕ್ಕೆ ಜೀವನ ಪೂರ್ತಿ ಸೃಷ್ಠಿಕರ್ತನಿಗೆ ಸ್ತುತಿ ಅರ್ಪಿಸಿದರೂ ಸಾಲದು *"ಅಲ್ ಹಂದುಲಿಲ್ಲಾಹ್".*
ಎಷ್ಟೇ ದೊಡ್ಡ ಮೆಗಾಫಿಕ್ಸಲ್ ಛಾಯಾಚಿತ್ರ ತಂತ್ರಜ್ಞಾನ ಇದ್ದರೂ *ಕಣ್ಣಿನಷ್ಟು* ಸ್ಪಷ್ಟತೆಯಿರುವ ಛಾಯಾಚಿತ್ರ ತಂತ್ರಜ್ಞಾನ ಕಾಣಲು ಸಾಧ್ಯವಿಲ್ಲ.
*ಬುದ್ಧಿಶಕ್ತಿ* ಇದು *ಅಲ್ಲಾಹು* ಮನುಷ್ಯನಿಗೆ ಮಾತ್ರ ನೀಡಿದ ವಿಶೇಷವಾದ ಅನುಗ್ರಹ. ಮನುಷ್ಯನಿಗೂ ಇತರ ಜೀವಿಗಳಿಗೂ ಇರುವ ಪ್ರಮುಖವಾದ ವ್ಯತ್ಯಾಸವಾಗಿದೆ *ಬುದ್ಧಿಶಕ್ತಿ.* ಲೋಕದಲ್ಲಿರುವ ಸರ್ವ *ವಿಜ್ಞಾನ, ತಂತ್ರಜ್ಞಾನ*ದ ಹಿಂದೆ ಇರುವುದು ಮನುಷ್ಯನ ಅಪಾರವಾದ *ಬುದ್ಧಿಶಕ್ತಿಯಾಗಿದೆ.* ಇದರಿಂದ ಮನುಷ್ಯನು *ಚಂದ್ರನ* ಮೇಲೆ ಕಾಲು ಇಟ್ಟಿದ್ದರೆ ಎಷ್ಟೊಂದು ಮಹತ್ತರವಾದ ಅನುಗ್ರಹವಾಗಿದೆ *"ಸುಬುಹಾನಲ್ಲಾಹ್"*
*ಇದೆಲ್ಲಾ ಅಲ್ಲಾಹು ಮನುಷ್ಯನಿಗೆ ನೀಡಿದ ಅನುಗ್ರಹಗಳ ಪೈಕಿ ಕೆಲವೂಂದು ಸ್ಯಾಂಪಲ್ ಮಾತ್ರ ....ಇನ್ನೂ ಎಣಿಸಲು ಸಾಧ್ಯವಿಲ್ಲದಷ್ಟು ನಿಅಮತ್ ಅಲ್ಲಾಹು ನೀಡಿದರೂ ಅದರ ಬಗ್ಗೆ ಚಿಂತಿಸುವಷ್ಟು, ಸೃಷ್ಠಿಕರ್ತನಿಗೆ ಸ್ತುತಿ ಅರ್ಪಿಸುವಷ್ಟು ಸಮಯ ಮನುಷ್ಯನಿಗಿಲ್ಲ.*
ಅಲ್ಲಾಹು ಖುರ್ ಆನಿನ ಹಲವು ಕಡೆಗಳಲ್ಲಿ ಹೇಳುತ್ತಾನೆ;👇
*_"ನಿಮ್ಮನ್ನು ಸೃಷ್ಠಿಸಿದವನೂ ನಿಮಗೆ ಶ್ರವಣ ಮತ್ತು ದೃಷ್ಠಿಗಳನ್ನು ಹಾಗೂ ಹೃದಯಗಳನ್ನು ನೀಡಿದವನೂ ಅವನೇ ಆಗಿರುವನು. ಆದರೆ, ನೀವು ಸ್ವಲ್ಪವೇ ಕೃತಜ್ಞತೆ ಸಲ್ಲಿಸುತ್ತೀರಿ"_*
_ಅಲ್ಲಾಹುವಿನ ಅನುಗ್ರಹಗಳನ್ನು ಚಿಂತಿಸಿ ಅವನಿಗೆ ಹೆಚ್ಚೆಚ್ಚು ಕೃತಜ್ಞತೆ ಸಲ್ಲಿಸುವವರಲ್ಲಿ ನಮ್ಮನ್ನು ಒಳಪಡಿಸಲಿ._ *ಆಮೀನ್ ಯಾ ರಬ್ಬಲ್ ಆಲಮೀನ್*
💎💎💎💎💎💎💎💎💎💎
*ಪ್ರೇಮ ಬಾಜನರ ಮೇಲೆ ಪ್ರೀತಿಯಿಂದ ಒಂದು ಸ್ವಲಾತ್ ಹೇಳಿರಿ.*
💚💚💚💚💚💚💚💚💚
*_ಅಲ್ಲಾಹುಮ್ಮ ಸ್ವಲ್ಲಿ ಅಲಾ ಸಯ್ಯಿದಿನಾ ಮುಹಮ್ಮದಿನ್ ವಅಲಾ ಆಲಿಹೀ ವಸ್ವಹ್'ಬಿಹೀ ವಸಲ್ಲಿಮ್_*
💚💚💚💚💚💚💚💚💚
*✍ನಾಸಿರ್ ಕಾವೂರು🍇*
➖➖➖➖➖➖➖➖➖
Comments