Skip to main content

ಆಧ್ಯಾತ್ಮ ಘಟನೆಗಳು

ಆಧ್ಯಾತ್ಮ ಘಟನೆಗಳು

*"ನಾನು ಶವಭಕ್ಷಕನೇ?"*

_ಮಹಾತ್ಮರಾದ ಹಝ್ರತ್ ಜುನೈದ್ (ರ)ರವರು ಒಮ್ಮೆ ಪೇಟೆಯತ್ತ ನಡೆದುಕೊಂಡು ಹೋಗುತ್ತಿದ್ದಾಗ ಆರೋಗ್ಯವಂತ ಫಕೀರರೊಬ್ಬರು ಜನರಲ್ಲಿ ಯಾಚಿಸುತ್ತಿರುವುದನ್ನು ಕಂಡರು. ನೋಡಲು ಎಷ್ಟು ಗಟ್ಟಿ ಮುಟ್ಟಾಗಿದ್ದಾರೆ; ಆದರೂ ಜನರ ಮುಂದೆ ಕೈ ಚಾಚುತ್ತಿದ್ದಾರಲ್ಲಾ? ಏನಾದರೂ ಕೆಲಸ ಮಾಡಿ ಸ್ವಾವಲಂಬಿಯಾಗಿ ಜೀವಿಸಬಾರದೇ? ಎಂದು ಮನದಲ್ಲೇ ಯೋಚಿಸುತ್ತಾ ಜುನೈದ್(ರ) ಪೇಟೆಯತ್ತ ಹೆಜ್ಜೆ ಹಾಕಿದರು._
_ಅಂದು ರಾತ್ರಿ ಅವರಿಗೊಂದು ಕನಸು ಬಿತ್ತು. ಕನಸಿನಲ್ಲಿ, ಬಟ್ಟೆಯಿಂದ ಮುಚ್ಚಿದ ದೊಡ್ಡ ಪಾತ್ರೆಯೊಂದನ್ನು ಅವರ ಮುಂದಿಡಲಾಯಿತು. ಸುತ್ತಮುತ್ತಲಿದ್ದ ಜನರು ಅವರೊಂದಿಗೆ *'ಇದನ್ನು ತಿನ್ನಿರಿ'* ಎಂದರು. ಜುನೈದ್ (ರ)ರವರು ಪಾತ್ರೆಗೆ ಹೊದಿಸಿದ್ದ ಬಟ್ಟೆಯನ್ನು ಸರಿಸಿದರು. ಆಗ ಆ ಪಾತ್ರೆಯಲ್ಲಿದ್ದ ವಸ್ತುವನ್ನು ಕಂಡು ಒಂದು ಕ್ಷಣ ಬೆಚ್ಚಿಬಿದ್ದರು. ದಾರಿಯಲ್ಲಿ ಸಾಗುವಾಗ ಕಂಡ ಫಕೀರರ ಶವವನ್ನು ಅದರಲ್ಲಿ ಇಡಲಾಗಿತ್ತು._
_ಜುನೈದ್ (ರ)ರವರು ತಳಮಳಗೊಳ್ಳುತ್ತಾ ಮುಂದೆ ನಿಂತ ಜನರಲ್ಲಿ ಕೇಳಿದರು, *"ಇದನ್ಯಾಕೆ ನನ್ನ ಮುಂದಿಟ್ಟಿರಿ? ನಾನು ಶವಭಕ್ಷಕನೆಂದು ಭಾವಿಸಿದ್ದೀರಾ?"*_
_ಆಗ ಜನರು ಕೇಳಿದರು; *"ಹಗಲು ವೇಳೆಯಲ್ಲಿ ಅವರ ಮಾಂಸವನ್ನು ತಿಂದು ಬಿಟ್ಟಿದ್ದೀರಲ್ಲ.ಈಗ ಯಾಕೆ ತಿನ್ನಬಾರದು?"*_
_ಹಗಲು ವೇಳೆಯಲ್ಲಿ ಯಾರ ಮಾಂಸ ಭಕ್ಷಿಸಿದ್ದೆಂದು ಈಗವರಿಗೆ ಮನವರಿಕೆಯಾಯಿತು. ಆರೋಗ್ಯವಂತರಾಗಿರುವ ಇವರು ಯಾಚಿಸುವುದಕ್ಕಿಂತ ದುಡಿದು ತಿನ್ನಬಾರದೇ? ಎಂದು ಮನದಲ್ಲಿ ಭಾವಿಸಿದ್ದನ್ನು ನೆನಪಿಗೆ ತಂದರು._
_ಕೂಡಲೇ ಅವರು ಭಯದಿಂದ ತತ್ತರಿಸಿ ನಿದ್ದೆಯಿಂದ ಎಚ್ಚೆತ್ತು ಕುಳಿತರು. ಭೀತಿಯಿಂದ ಅವರ ಹಣೆಯಲ್ಲಿ ನೀರು ಜಿನುಗುತ್ತಿತ್ತು. ಜುನೈದ್ (ರ)ರವರು ಎದ್ದು ಅಂಗಸ್ನಾನ ಮಾಡಿ, ಎರಡು ರಕ್ಅತ್ ನಮಾಜ್ ನಿರ್ವಹಿಸಿ, ಪ್ರಾರ್ಥಿಸಿ, ಅಲ್ಲಿಂದ ಆ ಫಕೀರರನ್ನು ಹುಡುಕುತ್ತಾ ಸಾಗಿದರು._
_ಸ್ವಲ್ಪ ಹೊತ್ತು ಹುಡುಕಾಡಿದ ಬಳಿಕ ನದಿಯ ದಡದಲ್ಲಿ ಆ ಫಕೀರರು ಒಂಟಿಯಾಗಿ ಕುಳಿತಿರುವುದು ಕಾಣಿಸಿತು.ಜುನೈದ್ (ರ)ರವರಿಗೆ ಪರಮಾನಂದವಾಯಿತು. ಅವರ ಹತ್ತಿರ ಹೋಗಿ ನಿಂತರು. ಫಕೀರರು ತಲೆಯೆತ್ತಿ ಅವರನ್ನೊಮ್ಮೆ ದಿಟ್ಟಿಸಿ ನೋಡಿ, *"ಜುನೈದ್!* ನನ್ನ ಬಗ್ಗೆ ತಾವು ಮನದಲ್ಲಿ ಭಾವಿಸಿದ್ದ ದುರಾಲೋಚನೆಯ ಬಗ್ಗೆ *ಅಲ್ಲಾಹನಲ್ಲಿ ಕ್ಷಮೆ ಯಾಚಿಸಿದ್ದೀರಾ?”* ಎಂದು ಕೇಳಿದರು. ಜುನೈದ್ (ರ)ರವರು 'ಹೌದು' ಎಂದರು._
_"ಹಾಗಾದರೆ ತಾವಿನ್ನು ಹೋಗಬಹುದು. *ಅಲ್ಲಾಹನು ತನ್ನ ದಾಸರ ತೌಬಾವನ್ನು ಸ್ವೀಕರಿಸುವನಾಗಿದ್ದಾನೆ. ನಾನೂ ತಮಗೆ ಕ್ಷಮಿಸಿದ್ದೇನೆ.* ನೀವು ಸದಾ ನಿಮ್ಮ ಹೃದಯದಲ್ಲಿ ಉದ್ಭವಿಸುವ ಕೆಟ್ಟ ಯೋಚನೆಗಳ ಬಗ್ಗೆ ಜಾಗೃತರಾಗಿರಿ" ಎಂದು ಹೇಳಿ ಮುಗುಳ್ನಗುತ್ತಾ ಅವರನ್ನು ಕಳುಹಿಸಿಕೊಟ್ಟರು._
*📗(ತದ್ಸ್_ಕಿರತುಲ್ ಔಲಿಯಾ)*

*_ಲೇಖಕ:ಎಂ.ಎ ಇಸ್ಮಾಯಿಲ್ ನ'ಈಮಿ,ಮಂಗಳಪೇಟೆ._*
🌼🌼🌼🌼🌼🌼🌼🌼🌼🌼

Comments

Popular posts from this blog

ಗ್ರಹಣ ನಮಾಜಿನ ರೂಪ

ಗ್ರಹಣ ನಮಾಜಿನ ರೂಪ *ಚಂದ್ರಗ್ರಹಣದ ಸುನ್ನತ್ ನಮಾಜು ಎರಡು ರಕಅತ್ ಅಲ್ಲಾಹನಿಗಾಗಿ ಜಮಾಅತ್ತಾಗಿ ನಾನು ನಿರ್ವಹಿಸುವೆನು* ಎಂದು ನಿಯ್ಯತ್ ಮಾಡಿ ಅಲ್ಲಾಹು ಅಕ್ಬರ್ ಎಂದು ಹೇಳಿ ನಮಾಜಿಗೆ ಪ್ರವೇಶಿಸುವು...

ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ. ಲೇ - ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಅಕ್ಕರೆಕೆರೆ.

ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ. ಲೇ - ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಅಕ್ಕರೆಕೆರೆ. ಆಮಿನ ಬೀವಿ ರ.ಅ ಗರ್ಭಿಣಿಯಾಗಿರುವಾಗ ವ್ಯಾಪಾರಕ್ಕಾಗಿ ಸಿರಿಯಾಕ್ಕೆ ಹೋಗಿದ್ದ ಅಬ್ದುಲ್ಲಾಹ್ (ರ.ಅ) ಮರಳಿ ಬರುವಾಗ ಮದೀನದಲ್ಲಿ ವಫಾತಾದರು.ತಂದೆಯ ಮಾವಂದಿರರಾದ ಬನುನ್ನಜ್ಜಾರ್ ಗೋತ್ರದವರ ಬಳಿ ದಫನ ಮಾಡಲಾಯಿತು.ರಬೀವುಲ್ ಹನ್ನೆರಡು ಸೋಮವಾರ ಸುಬಹಿಯ ಸ್ವಲ್ಪ ಮುಂಚೆ ಅಂತ್ಯ ಪ್ರವಾದಿ ಮುಹಮ್ಮದ್ ಮುಸ್ತಫ ಸ.ಅ ಮಕ್ಕಾದಲ್ಲಿ ಜನಿಸಿದರು.ಅಂದು ಕ್ರಿಸ್ತಶಕ 571 ಎಪ್ರಿಲ್ 21 ಆಗಿತ್ತು.ನೆಬಿ ಸ.ಅ ಜನಿಸಿದ ದಿನ ಅತ್ಯಂತ ಸಂತೋಷದಾಯಕವಾದ ದಿನವಾಗಿದೆ.ಮಾನವ ಶ್ರೇಷ್ಠರಾದ ಪ್ರವಾದಿ ಮುಹಮ್ಮದ್ ಸ.ಅ ರವರ ಮುಖಾಂತರ ಮಾನವ ಸಮೂಹವನ್ನು ಅಲ್ಲಾಹು ಅನುಗ್ರಹಿಸಿದ ಸುದಿನವಾಗಿದೆ ಅಂದು.ಮುಸಲ್ಮಾನರು ಈ ಅನುಗ್ರಹಕ್ಕೆ ಕ್ರತಜ್ಞತೆ ಸಲ್ಲಿಸಿ ಅಂದು ಮೀಲಾದುನ್ನಬಿ ಆಚರಣೆ ಮಾಡುತ್ತಾರೆ.ನೆಬಿ ಸ.ಅ ರವರ ಮದಹ್ ಕೀರ್ತನೆಗಳನ್ನು ಹೇಳಿ, ಹಾಡಿಹೊಗಳಿ ದಾನಧರ್ಮಗಳನ್ನು ನೀಡಿ ಸಂತೋಷ ಪ್ರಕಟಿಸುತ್ತಾರೆ.              ಭೂಮಿಯ ಮೇಲೆ ಜನ್ಮವೆತ್ತಿ ಬಂದ ಅತ್ಯಂತ ಉತ್ತಮನಾದ ಮನುಷ್ಯ ನೆಬಿ ಸ.ಅ ಆಗಿದ್ದಾರೆ.ಮುಂಜಿಕರ್ಮ ನಿರ್ವಹಿಸಲ್ಪಟ್ಟ,ಹೊಕ್ಕುಳ ಬಳ್ಳಿ ಕತ್ತರಿಸಲ್ಪಟ್ಟ,ಕಣ್ಣಿಗೆ ಸುರುಮ ಹಾಕಲ್ಪಟ್ಟ ಸ್ಥಿತಿಯಲ್ಲಿ ಸಂಪೂರ್ಣ ಸಂಶುದ್ಧವಾದ ರೀತಿಯಲ್ಲಾಗಿದೆ ಅವರು ಜನಿಸಿದ್ದು.ಅಬೂತಾಲಿಬರ ಮನೆಯಲ್ಲಾಗಿದೆ ಜನನ.ಹೆರಿಗೆ...

ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಕರ ಪಾತ್ರ

ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಕರ ಪಾತ್ರ _✍🏻ಜಹಫರ್ ಸಾಧಿಕ್ ಕಟ್ಟದಪಡ್ಪು_ _ನಮ್ಮ ಸಮಾಜವು ನಮಗೆ ಜನ್ಮ ಕೊಟ್ಟ ತಂದೆ ತಾಯಿಯ ನಂತರ ಮಹತ್ತರವಾದ ಸ್ಥಾನವನ್ನು ಶಿಕ್ಷಕರಿಗೆ ನೀಡಿ ಗೌರವಿಸಿದೆ.  ಶಿಲ್ಪಿ...