Skip to main content

ಪುಣ್ಯ ಮದೀನಕ್ಕೊಂದು ಪತ್ರ.

الصلاه والسلام عليك يا سيدي يا رسول الله صلى الله عليه وسلم

ಪ್ರೇಮ ಭಾಜನರೇ..... ﷺ

ನನ್ನನ್ನು ಕ್ಷಮಿಸಿರಿ.... ನನ್ನ ಅತಿಯಾದ ಪಾಪದ ಕಾರಣ ತಮ್ಮಯ ﷺ ಉಮ್ಮತ್ತ್ ಎಂಬ ಮಹಾ ಪದವಿಗೆ ಕಳಂಕ ತಂದಿರುವೆ. ತಮ್ಮಯ ﷺ ಮೇಲಿರುವ ಪ್ರೇಮವು ಬಾಹ್ಯವಾಗಿ ಮಾತ್ರವಿದೆ. ಆದರೆ ಆಂತರಿಕವಾಗಿ ನನ್ನಲ್ಲಿಲ್ಲ.

ತಾವು ﷺ ನಮ್ಮನ್ನು ಅತಿಯಾಗಿ ಪ್ರೀತಿಸಿದ್ದೀರಿ. ಆದರೆ ಈ ಪಾಪಿಯಾದ ನಾನು ತಮ್ಮನ್ನು ﷺ ಸರಿಯಾಗಿ ಪ್ರೀತಿಸುತ್ತಿಲ್ಲ. ಮಾತ್ರವಲ್ಲ ನನ್ನ ಪ್ರೇಮವು ಟೊಳ್ಳಾದ ಕುರುಡು ಪ್ರೇಮವಾಗಿದೆ.

ಕಾಣುವವರಿಗೆ ಮಾತ್ರ ಏನೋ ಕಾಣುತ್ತದೆಯೇ ಹೊರತು ಬೇರೇನೂ ಇಲ್ಲ. ಹೊರಗಡೆ ಅಲಂಕಾರವಾಗಿ ಒಳಗಡೆ ಶೂನ್ಯದಿಂದ ಕೂಡಿರುವ ಕುರುಡು ಪ್ರೇಮವಾಗಿದೆ ನನ್ನ ಪ್ರೇಮ. ಆದರೆ ನಮ್ಮ ಮೇಲಿರುವ ತಮ್ಮಯ ﷺ ಪ್ರೇಮವು ತುಂಬಿ ಹರಿಯುತ್ತಿರುವ ನದಿಯಂತೆ, ಬೋರ್ಗರೆಯುವ ಸಮುದ್ರದಂತೆ, ಅಕಾಶದಲ್ಲಿರುವ ನಕ್ಷತ್ರದಂತೆ, ಆರ್ಶ್'ನ ವಿಶಾಲತೆಯಂತೆ, ಅಲ್ಲ ಅಲ್ಲ ಪ್ರೇಮ ಭಾಜನರೇ ﷺ ಅದಕ್ಕಿಂತಲೂ ಎಷ್ಟೋ ಪಟ್ಟು ಹೆಚ್ಚು. ನಮ್ಮ ಮೇಲಿರುವ ತಮ್ಮಯ ﷺ ಪ್ರೀತಿಯನ್ನು ವರ್ಣನೆ ಮಾಡುವಂತಹಾ, ಅದನ್ನು ಸಂಪೂರ್ಣ ಮಾಡುವಂತಹಾ ಯಾವುದೇ ವಸ್ತುಗಳು ಭೂಮಿಯಲ್ಲಾಗಲಿ, ಅಕಾಶದಲ್ಲಾಗಲಿ, ಸ್ವರ್ಗದಲ್ಲಾಗಲಿ ಇಲ್ಲ..... ಅದಕ್ಕಾಗಿ ಮೇಲಿನ ಉದಾಹರಣೆಗಳನ್ನು ಕೊಟ್ಟೆ.

ತಮ್ಮಯ ﷺ ವರ್ಣನೆಗೆ ಪದಗಳಾಗಲಿ, ವಸ್ತುಳಾಗಲಿ ಇಲ್ಲದಕ್ಕಾಗಿ ಕ್ಷಮೆಯನ್ನು ಕೇಳುತ್ತಿದ್ದೇನೆ. ತಮ್ಮಯ ﷺ ಸಂಪೂರ್ಣವಾದ ಮಹತ್ವವನ್ನು ಹೇಳಲು ಅಲ್ಲಾಹನಿಗಲ್ಲದೆ ಇನ್ಯಾರಿಗೂ ಸಾಧ್ಯವಿಲ್ಲ.

ನಾನು ಹಲವಾರು ಪಾಪಗಳನ್ನು ಮಾಡಿದ್ದೇನೆ. ಮನಸ್ಸಿನಲ್ಲಿ ಕೆಲವೊಂದು ಆಸೆಗಳನ್ನೂ ಇಟ್ಟಿದ್ದೇನೆ.  ಹೇಳಲು ಅರ್ಹತೆಯೂ ಇಲ್ಲ. ತಮ್ಮಯ ﷺ ಕರುಣೆಯನ್ನು ನೆನಪಿಸಿ ಕೇಳುತ್ತಿರುವೆ.

*ಮರಣಹೊಂದುವ ಮುಂಚೆ ತಮ್ಮನ್ನು ﷺ ಅನೇಕಬಾರಿ ಕನಸಿನಲ್ಲಿ ದರ್ಶಿಸಬೇಕು....*

*ಒಂದು ಬಾರಿಯಾದರೂ ನೇರವಾಗಿ ನಗ್ನ ಕಣ್ಣಿನಲ್ಲಿ ದರ್ಶಿಸಬೇಕು....*

*ತಮಗೆ ﷺ ಸಲಾಂ ಹೇಳುವಾಗ ಒಂದೇ ಒಂದು ಬಾರಿಯಾದರೂ ಸಲಾಮಿಗೆ ಉತ್ತರಿಸುವುದನ್ನು ನಗ್ನ ಕಿವಿಯಲ್ಲಿ ಕೇಳಬೇಕು....*

*ಸೌಂದರ್ಯದಿಂದ ಸೂರ್ಯ ಚಲಿಸುತ್ತಿರುವಂತೆ ಕಾಣುವ ತಮ್ಮಯ ﷺ ಪ್ರಕಾಶಭರಿತ   ಪ್ರಶೋಭಿತ ಮಂದಹಾಸಾಬೀರಿದ ಪರಮ ಪಾವನ ವದನವನ್ನು ಮರಣ ಹೊಂದುವಾಗ ಕಾಣಬೇಕು....*

*ತಮ್ಮಯ ﷺ ಪ್ರಕಾಶದ ಒಂದಂಶ ನನಗೆ ಖಬರಿನಲ್ಲಿ ಸಿಗಬೇಕು....*

*ಖಬರಿನಡಿಯಲ್ಲಿ ಅಂತ್ಯದಿನದವರೆಗೆ ತಮ್ಮಯ ﷺ ಮೇಲಿರುವ ಪವಿತ್ರ ಸ್ವಲಾತ್'ಗಳನ್ನು ಹೇಳುತ್ತಾ ದಿನ ಕಳೆಯಬೇಕು....*

*ತಮ್ಮಯ ﷺ ಪವಿತ್ರ ಹೆಸರು ಕೇಳುವಾಗ ಕಣ್ಣೀರು ಬರಬೇಕು....*

*ಮಹ್'ಶರದಲ್ಲಿ ತಮಗೆ ﷺ ಪರಿಚಯವಿರುವ ಮುಖವಾಗಬೇಕು....*

*ಹೌಲುಲ್ ಕೌಸರ್ ಪಾನೀಯ ತಮ್ಮಯ ﷺ ಪವಿತ್ರ ಕೈಯಿಂದ ತೆಗೆದು ಕುಡಿದು ಮಹಾ ದಾಹವನ್ನು ತೀರಿಸಬೇಕು....*

*ತಮ್ಮಯ ﷺ ಶಫಾಅತ್ತಿನಲ್ಲಿ ಒಳಪಡಬೇಕು....*

*ಒಳಿತು ಕೆಡುಕು ಅಳೆಯುವಾಗ ಮತ್ತು ಸ್ವಿರಾತ್ ಸೇತುವೆ ದಾಟುವಾಗ ತಮ್ಮಯ ﷺ ಸಹಾಯ ದೊರಕಬೇಕು....*

*ತಾವು ﷺ ಲಿವಾವುಲ್ ಹಂದ್ ಅನ್ನುವ ಪತಾಕೆಯನ್ನು ಹಿಡಿದು ಸ್ವರ್ಗವನ್ನು ಉದ್ಘಾಟನೆ ಮಾಡುವಾಗ ಆ ಸುಂದರ ದೃಶ್ಯವನ್ನು ಕಣ್ಣಾರೆ ಕಾಣಬೇಕು....*

*ಸ್ವರ್ಗ ಲೋಕದಲ್ಲಿ ಅಲ್ಲಾಹನ ದರ್ಶನ ಬಿಟ್ಟರೆ ನಂತರದ ಅತೀ ಸುಂದರವಾದ ಒಂದು ಆನಂದವೆಂದರೆ ಅದು ತಮ್ಮಯ ﷺ ತಿರುಕಲ್ಯಾಣವಾಗಿದೆ. ಅದು ನಡೆಯುವ ಸಂಧರ್ಭ ಆ ಮಹಾ ವೇದಿಕೆಯ ಕೊನೆಯ ಸಾಲಿನಲ್ಲಾದರೂ ನೋಡಲು ಅನುಮತಿ ನೀಡಿರಿ, ಅದಕ್ಕಿರುವ ಆಮಂತ್ರಣ ನೀಡಿರಿ  ಪ್ರೇಮ ಭಾಜನರೇ ﷺ....*

*ಪ್ರೇಮ ಭಾಜನರೇ ﷺ ಮೇಲೆ ನಾನು ಕೇಳಿರುವ ಅನುಗ್ರಹಗಳಿಗೆ ಬೇಕಾದ ಯಾವುದೇ ಪರವಾಣಿಗೆಯನ್ನು ನಾನು ತಯ್ಯಾರು ಮಾಡಲಿಲ್ಲ. ತಾವು ﷺ ಕರುಣೆಯ ಅರುಣ ವರ್ಷ ಸುರಿಯುವ ಸುಲ್ತಾನರಾಗಿದ್ದೀರಿ.... ﷺ*

*ತಾವು ﷺ ಉನ್ನತ ಸ್ವಭಾವದ ಒಡೆಯರಾಗಿದ್ದೀರಿ....ﷺ*

*ತಾವು ﷺ ಕೇಳಿದವರ ಅಗ್ರಹಗಳನ್ನು ಈಡೇರಿಸುವವ ವಿಶಾಲ ಮನಸ್ಸಿನ ಧನಿಕರಾಗಿದ್ದೀರಿ.... ﷺ*

*ಸಾಸಿವೆ ಕಲಿನಷ್ಟು ಕೂಡಾ ಯೋಗ್ಯತೆಯಿಲ್ಲದಿದ್ದರೂ ಹಲವು ಸೌಭಾಗ್ಯಗಳನ್ನು ಕೇಳಿದೆನು ನನಗೂ ಮತ್ತು ನಾನು ಇಷ್ಟಪಡುವ ಎಲ್ಲರಿಗೂ ಈ ಎಲ್ಲಾ ಅನುಗ್ರಹಗಳನ್ನು ನೀಡಿರಿ ನನ್ನ ಪ್ರೇಮ ಭಾಜನರೇ.... ﷺ*

_ಪ್ರೇಮ ಭಾಜನರೇ ﷺ ನನ್ನ ಕೇಳುವಿಕೆ ನನ್ನ ಯೋಗ್ಯತೆಗೆ ಅರ್ಹವಲ್ಲವೆಂದು ಗೊತ್ತಿದೆ.  ಆದರೆ ತಮ್ಮಯ ﷺ ಕರುಣೆಯ ವಿಶಾಲತೆಯನ್ನು ನೆನಸಿದರೆ ಎಲ್ಲರೂ ಎಲ್ಲವನ್ನೂ ಕೇಳಿ ಬಿಡುತ್ತಾರೆ. ಅದಕ್ಕಾಗಿ ನಾನೂ ಕೇಳಿದೆನು_

ನಮ್ಮೆಲ್ಲರನ್ನೂ ಸ್ವೀಕರಿಸಿರಿ ಪ್ರೇಮ ಭಾಜನರೇ.... ﷺ

الصلاه والسلام عليك يا سيدي يا رسول الله صلى الله عليه وسلم

ಹತ್ತು ಬಾರಿ ಸ್ವಲಾತ್ ಹೇಳಿರಿ⬇⬇⬇

*اللهم صل على سيدنا محمد وعلى اله وصحبه وسلم* (10)

ಎಲ್ಲರಿಗೂ ಅಲ್ಲಾಹು ತೌಫಿಖ್ ನೀಡಲಿ.
صلى الله عليك يا رسول الله صلى الله عليه وسلم
امين امين امين يا رب العالمين

✒ಆಬ್ದುಲ್ ನಾಸಿರ್ ಕಾವೂರು🍇
➖➖➖➖➖➖➖

Comments

Popular posts from this blog

ಗ್ರಹಣ ನಮಾಜಿನ ರೂಪ

ಗ್ರಹಣ ನಮಾಜಿನ ರೂಪ *ಚಂದ್ರಗ್ರಹಣದ ಸುನ್ನತ್ ನಮಾಜು ಎರಡು ರಕಅತ್ ಅಲ್ಲಾಹನಿಗಾಗಿ ಜಮಾಅತ್ತಾಗಿ ನಾನು ನಿರ್ವಹಿಸುವೆನು* ಎಂದು ನಿಯ್ಯತ್ ಮಾಡಿ ಅಲ್ಲಾಹು ಅಕ್ಬರ್ ಎಂದು ಹೇಳಿ ನಮಾಜಿಗೆ ಪ್ರವೇಶಿಸುವು...

ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ. ಲೇ - ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಅಕ್ಕರೆಕೆರೆ.

ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ. ಲೇ - ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಅಕ್ಕರೆಕೆರೆ. ಆಮಿನ ಬೀವಿ ರ.ಅ ಗರ್ಭಿಣಿಯಾಗಿರುವಾಗ ವ್ಯಾಪಾರಕ್ಕಾಗಿ ಸಿರಿಯಾಕ್ಕೆ ಹೋಗಿದ್ದ ಅಬ್ದುಲ್ಲಾಹ್ (ರ.ಅ) ಮರಳಿ ಬರುವಾಗ ಮದೀನದಲ್ಲಿ ವಫಾತಾದರು.ತಂದೆಯ ಮಾವಂದಿರರಾದ ಬನುನ್ನಜ್ಜಾರ್ ಗೋತ್ರದವರ ಬಳಿ ದಫನ ಮಾಡಲಾಯಿತು.ರಬೀವುಲ್ ಹನ್ನೆರಡು ಸೋಮವಾರ ಸುಬಹಿಯ ಸ್ವಲ್ಪ ಮುಂಚೆ ಅಂತ್ಯ ಪ್ರವಾದಿ ಮುಹಮ್ಮದ್ ಮುಸ್ತಫ ಸ.ಅ ಮಕ್ಕಾದಲ್ಲಿ ಜನಿಸಿದರು.ಅಂದು ಕ್ರಿಸ್ತಶಕ 571 ಎಪ್ರಿಲ್ 21 ಆಗಿತ್ತು.ನೆಬಿ ಸ.ಅ ಜನಿಸಿದ ದಿನ ಅತ್ಯಂತ ಸಂತೋಷದಾಯಕವಾದ ದಿನವಾಗಿದೆ.ಮಾನವ ಶ್ರೇಷ್ಠರಾದ ಪ್ರವಾದಿ ಮುಹಮ್ಮದ್ ಸ.ಅ ರವರ ಮುಖಾಂತರ ಮಾನವ ಸಮೂಹವನ್ನು ಅಲ್ಲಾಹು ಅನುಗ್ರಹಿಸಿದ ಸುದಿನವಾಗಿದೆ ಅಂದು.ಮುಸಲ್ಮಾನರು ಈ ಅನುಗ್ರಹಕ್ಕೆ ಕ್ರತಜ್ಞತೆ ಸಲ್ಲಿಸಿ ಅಂದು ಮೀಲಾದುನ್ನಬಿ ಆಚರಣೆ ಮಾಡುತ್ತಾರೆ.ನೆಬಿ ಸ.ಅ ರವರ ಮದಹ್ ಕೀರ್ತನೆಗಳನ್ನು ಹೇಳಿ, ಹಾಡಿಹೊಗಳಿ ದಾನಧರ್ಮಗಳನ್ನು ನೀಡಿ ಸಂತೋಷ ಪ್ರಕಟಿಸುತ್ತಾರೆ.              ಭೂಮಿಯ ಮೇಲೆ ಜನ್ಮವೆತ್ತಿ ಬಂದ ಅತ್ಯಂತ ಉತ್ತಮನಾದ ಮನುಷ್ಯ ನೆಬಿ ಸ.ಅ ಆಗಿದ್ದಾರೆ.ಮುಂಜಿಕರ್ಮ ನಿರ್ವಹಿಸಲ್ಪಟ್ಟ,ಹೊಕ್ಕುಳ ಬಳ್ಳಿ ಕತ್ತರಿಸಲ್ಪಟ್ಟ,ಕಣ್ಣಿಗೆ ಸುರುಮ ಹಾಕಲ್ಪಟ್ಟ ಸ್ಥಿತಿಯಲ್ಲಿ ಸಂಪೂರ್ಣ ಸಂಶುದ್ಧವಾದ ರೀತಿಯಲ್ಲಾಗಿದೆ ಅವರು ಜನಿಸಿದ್ದು.ಅಬೂತಾಲಿಬರ ಮನೆಯಲ್ಲಾಗಿದೆ ಜನನ.ಹೆರಿಗೆ...

ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಕರ ಪಾತ್ರ

ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಕರ ಪಾತ್ರ _✍🏻ಜಹಫರ್ ಸಾಧಿಕ್ ಕಟ್ಟದಪಡ್ಪು_ _ನಮ್ಮ ಸಮಾಜವು ನಮಗೆ ಜನ್ಮ ಕೊಟ್ಟ ತಂದೆ ತಾಯಿಯ ನಂತರ ಮಹತ್ತರವಾದ ಸ್ಥಾನವನ್ನು ಶಿಕ್ಷಕರಿಗೆ ನೀಡಿ ಗೌರವಿಸಿದೆ.  ಶಿಲ್ಪಿ...