ನಬಿ ದಿನ ಕೊನೆಗೊಂಡಿದೆ
ನಬಿ ಸ್ನೇಹ ಕೊನೆಗೊಳ್ಳಲಿಲ್ಲ
1. *ಅಲೀ(ರ) ಹೇಳಿದರು*:
*ನಾವು ನಮ್ಮ ಸಂಪತ್ತಿಗಿಂತಲೂ ಮಕ್ಕಳಿಗಿಂತಲೂ ಮಾತಾ ಪಿತರಿಗಿಂತಲೂ ನಮಗೆ ತೀವ್ರ ಬಾಯಾರಿಗೆಯಾಗುವಾಗ ನಾವು ಇಷ್ಟಪಡುವ ತಂಪು ನೀರಿಗಿಂತಲೂ ಹೆಚ್ಚು ನಾವು ಪ್ರವಾದಿ ﷺ ರನ್ನು ಪ್ರೀತಿಸುತ್ತೇವೆ*
2. ಒಮ್ಮೆ ಉಮರ್(ರ)ರವರು ಪ್ರವಾದಿ ﷺ ರೊಡನೆ ಹೇಳಿದರು: ನನ್ನ ದೇಹವನ್ನು ಬಿಟ್ಟರೆ ನನಗೆ ಹೆಚ್ಚು ಪ್ರೀತಿ ನಿಮ್ಮೊಂದಿಗಾಗಿದೆ. ಆಗ ಪ್ರವಾದಿ ﷺ ರವರು ಹೇಳಿದರು: ನಿಮ್ಮ ಶರೀರಕ್ಕಿಂತಲೂ ಹೆಚ್ಚು ನಿಮಗೆ ನನ್ನ ಮೇಲೆ ಪ್ರೀತಿಯುಂಟಾಗುವವರೆಗೆ ನಿಮ್ಮ ಈಮಾನ್ ಪೂರ್ತಿಯಾಗಲ್ಲ. ತಕ್ಷಣ ಉಮರ್(ರ)ರವರು ಹೇಳಿದರು: ನನಗೆ ಈಗ ನನ್ನ ದೇಹಕ್ಕಿಂತ ಹೆಚ್ಚು ನಿಮ್ಮೊಂದಿಗೆ ಪ್ರೀತಿಯುಂಟಾಗಿದೆ. ಆಗ ಪ್ರವಾದಿ ﷺ ರವರು ಹೇಳಿದರು: ಈಗ ನಿಮ್ಮ ಈಮಾನ್ ಪೂರ್ತಿಯಾಯಿತು.
3. *ತ್ವಲಹತುಬ್ನು ಉಬೈದಿಲ್ಲಾಹ್(ರ)ರವರು ಉಹ್ದ್ ಯುದ್ಧದಲ್ಲಿ ಪ್ರವಾದಿ ﷺ ರವರ ಕಡೆಗೆ ಬರುತಿದ್ದ ಬಾಣಗಳನ್ನು ಮನುಷ್ಯ ಗೋಡೆಯಾಗಿ ನಿಂತು ತಡೆದರು. ಆ ಕಾರಣದಿಂದ ಅವರ ದೇಹದಲ್ಲಿ 70ಕ್ಕಿಂತ ಹೆಚ್ಚು ಗಾಯಗಳಿದ್ದವು.ರಕ್ತ ಧಾರಕಾರವಾಗಿ ಹರಿಯುತ್ತಿತ್ತು..* *ಒಮ್ಮೆ ಪ್ರವಾದಿ( ﷺ)ರವರು ಹೇಳಿದರು: ನೀವು ಭೂಮಿಯ ಮೇಲೆ ನಡೆದಾಡುತ್ತಿರುವ ಹುತಾತ್ಮನನ್ನು (ಶಹೀದನ್ನು) ನೋಡಲು ಇಚ್ಛೆಪಡುವುದಾದರೆ ತ್ವಲಹಃ(ರ)ರವರನ್ನು ನೋಡಿರಿ* .
4. ಅಬೂ ಉಬೈದ(ರ)ರವರು
ಉಹ್ದ್ ಯುದ್ಧದಲ್ಲಿ
ಪ್ರವಾದಿ ﷺ ರವರ ಮುಖಕ್ಕೆ ತಾಗಿದ ಮೊಳೆಯನ್ನು ಹಲ್ಲಿನಿಂತ ಕಚ್ಚಿ ತೆಗೆದ ಕಾರಣ ಅವರಿಗೆ ಮರಣದವರೆಗೆ ಎದುರು ಹಲ್ಲು ಇಲ್ಲದವರಾಗಿ ಜೀವಿಸಬೇಕಾಯಿತು.
5. *ಬಿಲಾಲ್ ಇಬ್ನ್ ರಬಾಹ(ರ)ರವರು ಪ್ರವಾದಿ ﷺ ರವರ ವಫಾತಿನ ನಂತರ ದುಃಖದಿಂದ ಮದೀನಾದಲ್ಲಿ ಅದಾನ್ ಕರೆಯಲು ಸಾಧ್ಯವಾಗದೆ ಮದೀನಾ ಬಿಟ್ಟು ಹೊರಟು ಹೋದರು* *ಉಮರ್(ರ)ರವರ ಖಿಲಾಫತ್ ಕಾಲದಲ್ಲಿ ಅವರ ಒತ್ತಾಯದ ಮೇರೆಗೆ ಅದಾನ್ ಕೊಡಲು ತಯಾರಾದರಾದರೂ ಅದಾನ್ ಪೂರ್ತಿಗೊಳಿಸಲಿಕ್ಕೆ ಸಾಧ್ಯವಾಗಲಿಲ್ಲ*
7. ಫಾತಿಮಾ(ರ)ರವರು ಪ್ರವಾದಿ( ﷺ)ರವರ ವಫಾತಿನ ನಂತರ ದಫನ ಮಾಡಿ ಬಂದ ಬಳಿಕ ಅನಸ್(ರ)ರೊಡನೆ ಕೇಳಿದರು: ನಿಮಗೆ ಪ್ರವಾದಿ( ﷺ )ರವರ ಮೃತ ದೇಹವನ್ನು(ಮಯ್ಯತನ್ನು) ಕಬ್ರ್'ನಲ್ಲಿಟ್ಟು ಹೇಗೆ ಮಣ್ಣು ಹಾಕಲು ಮನಸ್ಸು ಬಂತು.
7. *ಝೈದ್ ಬಿನ್ ದಸಿರಾ(ರ)ರವರನ್ನು ಮುಶ್ರಿಕರು ಕೊಲ್ಲಲು ತಯಾರಾದ ಸಂದರ್ಭದಲ್ಲಿ ಅವರು ಕೇಳಿದರು: ನಿನ್ನ ಸ್ಥಾನದಲ್ಲಿ ಮುಹಮ್ಮದರನ್ನು ﷺ ನಿಲ್ಲಿಸಿ ನೀನು ನಿನ್ನ ಕುಟುಂಬಕ್ಕೆ ಹೋಗುವುದನ್ನು ಇಚ್ಛೆಪಡುವುದಿಲ್ಲವೇ?*
*ಆಗ ಅವರು ಹೇಳಿದರು: ನನ್ನ ಪ್ರಾಣ ಹೋದರೂ ಪರವಾಗಿಲ್ಲ.ಆದರೆ ಪ್ರವಾದಿ( ﷺ)ರವರ ಕಾಲಿಗೆ ಒಂದು ಮುಳ್ಳು ತಾಗುವುದನ್ನೂ ನಾನು ಇಷ್ಟಪಡುವುದಿಲ್ಲ.*
*ನಬಿ ﷺ ಸ್ನೇಹ*
*ಹೌದು ನಬಿ ﷺ ರವರ ಸ್ನೇಹ ಅಂದರೆ ಹಾಗೆ.*
*ಅದಕ್ಕೆ ಯಾವ ಕಟ್ಟುಪಾಡು ಇಲ್ಲ. ಅದು ಯಾವ ವಿಧ ಬಹಿರ್ಗಳಿಸುವುದೆಂದು ಹೇಳಲಾಗುವುದಿಲ್ಲ* . *ನಿಯಮದ ಮೇರೆ ಮೀರದಂತೆ ಅದು ಹೇಗೆ ಪ್ರಕಟವಾದರೂ ಅದು ನಬಿ ﷺ ರವರ ಸ್ನೇಹ*.
*ಅದು ಅದಮ್ಯ ಸ್ನೇಹ*.
*ಮನದಾಳದಲ್ಲಿ ಅಚ್ಚೊತ್ತಿದ ಪ್ರೇಮ.*
*ಈಮಾನ್ ಇರುವವನು ಪ್ರಾಣ ಬೇಕಾದರೆ ಬಿಟ್ಟಾನು, ನಬಿ ﷺ ಪ್ರೇಮ ಬಿಟ್ಟುಬಿಡಲಾರನು. ಯಾರೇ , ಏನೇ ಹೇಳಿದರೂ ಸರಿ.*
ನಬಿ ﷺ ರವರ ವಫಾತಾದ ಸುದ್ಧಿ ತಿಳಿದ ತಕ್ಷಣ ಓರ್ವ ಸ್ವಹಾಬಿ ; " ಅಲ್ಲಾಹ್ ! ಪರಲೋಕದಲ್ಲಿ ಮುತ್ತು ಹಬೀಬರನ್ನು ನಾನು ಕಾಣುವ ತನಕ ನನಗೆ ಕಣ್ಣುಗಳೇ ಬೇಡ " ಎಂದು ಪ್ರಾರ್ಥಿಸಿದರು . ಆಗಲೇ ಅವರ ದ್ರಷ್ಟಿ ಹೊರಟು ಹೋಯಿತು.
ನಾನು ಮರಣಹೊಂದಿದರೆ ನೀನು ಹೀಗೆ ಪ್ರಾರ್ಥಿಸಬೇಕು ಎಂದು ನಬಿ ﷺ ರವರು ಸ್ವಹಾಬಿಯೊಡನೆ ಹೇಳಿರಲಿಲ್ಲ. ಆದರೂ ಸ್ವಹಾಬಿ ಹಾಗೆ ಪ್ರಾರ್ಥಿಸಿದರು. ಮಾತ್ರವಲ್ಲ , ಅಲ್ಲಾಹು ಆ ಪ್ರಾರ್ಥನೆಯನ್ನು ಸ್ವೀಕರಿಸಿದನು. .ಆದ್ದರಿಂದಲೇ ಅವರ ದೃಷ್ಟಿಯನ್ನು ಅಲ್ಲಾಹು ಆಗಲೇ ತೆಗೆದು ಹಾಕಿದ್ದು.
ಇದು ನಬಿ ﷺ ರವರ ಸ್ನೇಹವಾಗಿತ್ತು.ಭಾವುಕತೆಯಾಗಿತ್ತು. ಅದಕ್ಕೆ ಪ್ರವಾದಿ ﷺ ರವರಿಂದ ಮಾದರಿ ಇಲ್ಲದಿದ್ದರೂ ಅಲ್ಲಾಹು ಅಂಗೀಕರಿಸಿದನು.
*ಪ್ರವಾದಿ ﷺ ರವರ ಸ್ನೇಹ ಪ್ರವಾದಿ ಪ್ರೇಮಿಗಳಿಗೆ ಗೊತ್ತೇ ಹೊರತು ಹ್ರದಯ ಸತ್ತವರಿಗೆ ಹೇಗೆ ಗೊತ್ತಾದೀತು..?*
ಆದ್ದರಿಂದ
*اللَّهُمَّ صَلِّ عَلَى سَيِّدِنَا مُحَمَّدٍ عَدَدَ مَا فِي عِلْمِ الله صَلاَةً دَائِمَةً بِدَوَامِ مُلْكِ الله*
*ಬನ್ನಿ , ಸ್ರಷ್ಟಿ ಶ್ರೇಷ್ಠ ವಿಶ್ವಾನುಗ್ರಹಿಯನ್ನು ನಾವು ಪ್ರೀತಿಸುವ. ಪ್ರೇಮಿಸುವ.*
*ಅವರ ಸ್ನೇಹ ಸಾಗರದಲ್ಲಿ ಮಿಂದು ಅನುರಾಗದ ಅನನ್ಯ ಸವಿಯನ್ನು ಪಡೆಯುವ.*
ಈ ಸುಸಂದರ್ಭದಲ್ಲಿ ಪ್ರವಾದಿ ﷺ ರವರ ಈ ಕೆಳಗಿನ ವಚನಗಳನ್ನು ಮರೆಯದಿರೋಣ
*ಮನುಷ್ಯನು ತಾನು ಯಾರನ್ನು ಪ್ರೀತಿಸುವನೋ ಅವನೊಂದಿಗೆ ಪರಲೋಕದಲ್ಲಿರುವನು.( ಹದೀಸ್ ).*
*ಇತರೆಲ್ಲಾ ವಸ್ತುವಿಗಿಂತಲೂ ಅಲ್ಲಾಹು ಮತ್ತು ರಸೂಲರನ್ನು ಪ್ರೀತಿಸುವವನು ಈಮಾನಿನ ಸವಿ ಲಭಿಸಿದವನಾಗಿರುವನು.( ಹದೀಸ್ )*
*ತನ್ಬ ತಂದೆ, ತಾಯಿ, ಪತ್ನಿ ಮಕ್ಕಳು, ಹಾಗೂ ಇತರೆಲ್ಲಾ ಮನುಷ್ಯರಿಗಿಂತ ಹೆಚ್ಚಾಗಿ ನನ್ನನ್ನು ಪ್ರೀತಿಸುವವರೆಗೆ ನಿಮ್ಮ ಪೈಕಿ ಯಾರು ಸಂಪೂರ್ಣ ಸತ್ಯವಿಶ್ವಾಸಿಯಾಗಲಾರರು. ( ಹದೀಸ್ )*
*ಎಂ.ಎಂ. ಸಖಾಫಿ*
Comments