ಮಂಕೂಸ್ ಮೌಲಿದ್
*ರಬೀವುಲ್ ಅವ್ವಲ್ ತಿಂಗಳಾದ್ದರಿಂದ ಎಲ್ಲಾ ಕಡೆಯೂ ಮಂಕೂಸ್ ಮೌಲಿದ್‌ನ ಪಾರಾಯಣ ಜೋರಾಗಿ ನಡೆಯುತ್ತಿದೆ.ಕಾರಣ ನಮ್ಮ ಹಿರಿಯ ತಲೆಮಾರಿನ ಔಲಿಯಾಗಳು,ಸಾದಾತ್‌ಗಳು,ಉಲಮಾಗಳ ಭವ್ಯ ಪರಂಪರೆ ಕೂಡ ಇದರೊಂದಿಗಿದೆ.*
*500 ವರ್ಷಗಳ ಹಿಂದೆ ವಲಿಯ್ಯ್ ಆಗಿದ್ದ ಪೊನ್ನಾನಿಯ ಒಂದನೇ ಝೈನುದ್ದೀನ್ ಮಖ್ದೂಮ್ (ರ) ಎಂಬ ಮಹಾ ವಿದ್ವಾಂಸರು ರಚಿಸಿದ ಕಿತಾಬ್ ಆಗಿದೆ ಮಂಕೂಸ್ ಮೌಲಿದ್.*
*ಕೇರಳದ ಇಸ್ಲಾಮೀ ನವೋತ್ಥಾನ ಪರಂಪರೆಗೆ ಮಖ್ದೂಮ್ ಕುಟುಂಬ ನೀಡಿದ ಕೊಡುಗೆ ಮಹತ್ತರವಾದುದು*.
ಅದರ ಫಲವಾಗಿ ಅವರ ಎಲ್ಲಾ ಗ್ರಂಥಗಳು ಜನಪ್ರಿಯವಾಯಿತು ಮಂಕೂಸ್ ಮೌಲಿದ್ ರಚಿಸಿದ ಝೈನುದ್ದೀನ್ ಮಖ್ದೂಮರ ಮೊಮ್ಮಗ ಎರಡನೇ ಝೈನುದ್ದೀನ್ ಮಖ್ದೂಮ್ ರವರು ರಚಿಸಿದ ಫತ್ಹುಲ್ ಮುಹೀನ್ ಗ್ರಂಥವು ಈಜಿಪ್ಟಿನ ಜಾಮಿಉಲ್ ಅಝ್ಹರ್ ಯುನಿವರ್ಸಿಟಿ, ಮಲೇಷ್ಯಾ ಇಸ್ಲಾಮೀ ಯುನಿವರ್ಸಿಟಿ ಸಹಿತ ಅನೇಕ ಕಡೆ ಪಠ್ಯ
ಗ್ರಂಥವಾಗಿ ಬಳಕೆಯಾಗಿದೆ.
*ನಂತರದ ಕಾಲದಲ್ಲಿ ಕೇರಳದ ಮಹಾತ್ಮರಾದ ಉಲಮಾಗಳು, ಸಾದಾತ್‌ಗಳು,ವಲಿಯ್ಯ್‌ಗಳ ಸಮೇತ ಮುಸ್ಲಿಂ ಪರಂಪರೆ ಮಂಕೂಸ್ ಮೌಲಿದನ್ನು ಓದುತ್ತಾ ಬಂತು.ಇತ್ತೀಚೆಗಿನ ಕೆಲವು ನೂತನವಾದಿಗಳನ್ನು ಹೊರತು ಪಡಿಸಿದರೆ ಕಳೆದ ಐನೂರು ವರ್ಷಗಳಲ್ಲಿ ಕೇರಳದಲ್ಲಿ ಬಂದಂತಹ ನೂರಾರು ಉಲಮಾಗಳು, ಸಾದಾತ್‌ಗಳು ಮಂಕೂಸ್ಮೌಲಿದನ್ನು ನಿತ್ಯ ರೂಢಿಯಾಗಿಸಿದ್ದಾರೆ.ಇವರ಼್ಯಾರು ಇದರ ಬಗ್ಗೆ ಆಕ್ಷೇಪವೆತ್ತಲಿಲ್ಲ.ಎಲ್ಲರೂ ಅದನ್ನು ಗೌರವಿಸಿ,ಪಾರಾಯಣ ಮಾಡುತ್ತಾ ಬಂದಿದ್ದಾರೆ.*
*ಇನ್ನೊಂದು ವಿಷೇಷವೇನೆಂದರೆ ಕೇರಳದ ಇಸ್ಲಾಮಿನ ನವೋತ್ಥಾನಕ್ಕೆ ಮಹತ್ತರವಾದ ಕೊಡುಗೆ ನೀಡಿದ ಸಾದಾತ್‌ಗಳು ಯಮನ್ ಮೂಲದವರಾಗಿದ್ದು,ಅವರ ಮೂಲಕ ಇಸ್ಲಾಂ ಕೇರಳ, ಕರ್ನಾಟಕದ ಮೂಲೆಮೂಲೆಗಳಿಗೆ ಹರಡಿತು.ಪ್ರವಾದಿ ﷺ ರವರು ವಿಶೇಷವಾಗಿ ಪ್ರಾರ್ಥಿಸಿದ್ದ ಯಮನ್‌ನ ಮೂಲವು ಕೇರಳದ ಇಸ್ಲಾಮೀ ಅಧ್ಯಾತ್ಮಿಕತೆಗೆ ಹೊಸ ಹುರುಪು ನೀಡಿತು.*
*ಮಂಕೂಸ್ ಮೌಲಿದ್‌ನ ರಚನೆಕಾರರಾದ ಝೈನುದ್ದೀನ್ ಮಖ್ದೂಮ್ ರವರು ಯಮನ್ ಮೂಲದವರಾಗಿದ್ದು, ಅಬೂಬಕ್ಕರ್ ಸಿದ್ದೀಕ್ (ರ.ಅ)ರವರ ವಂಶಪರಂಪರೆಯವರು.*
*ಕೇರಳದ ಇಸ್ಲಾಮಿ ರಾಜಧಾನಿ ಪೊನ್ನಾನೀ ಯಿಂದ ,ಮಹಾತ್ಮರಿಂದ ಹೊರಬಂದ ಮಂಕೂಸ್ ಮೌಲಿದ್ ಹೆಚ್ಚು ಜನಪ್ರಿಯವಾಯಿತು*.
*ಮಂಕೂಸ್ ಮೌಲಿದ್‌ನ ಈ ಭವ್ಯ ಪರಂಪರೆ ನೂತನವಾದಿಗಳಿಗೆ ಸಹಿಸಲಾಗುತ್ತಿಲ್ಲ. ಆದ್ದರಿಂದಲೇ ಅದರ ವಿರುದ್ದ ಏನಾದರೊಂದು ಅಪವಾದ ಮಾಡುತ್ತಲೇ ಬಂದಿದ್ದಾರೆ*.
*ಮಂಕೂಸ್ ಮೌಲಿದ್‌ನಲ್ಲಿರುವ ಈ ಎರಡು ವಾಕ್ಯಗಳ ಬಗ್ಗೆ ನೂತನವಾದಿಗಳು ಅತೀ ಹೆಚ್ಚು ವಿಮರ್ಶಿಸುತ್ತಿದ್ದಾರೆ.*
واستغاث به نوح
توسل به ادم
*ನಿಜವಾಗಿಯೂ ಇದು ಕಟ್ಟು ಕಥೆಗಳಾ?,ಇಮಾಮುಗಳು ಈ ಬಗ್ಗೆ ಏನು ಹೇಳಿದ್ದಾರೆ ?*ಹದೀಸ್‌ಗಳಲ್ಲಿ ಏನಿವೆ ?*
*ನೂತನವಾದಿಗಳೇ ಅಂಗೀಕರಿಸುವ ಇಮಾಮುಗಳು ಇದರ ಬಗ್ಗೆ ಏನು ಬರೆದಿದ್ದಾರೆ*?
*ವೀಡಿಯೋ ಕ್ಲಿಪ್ ನೋಡಿ*
17:22,
〰〰〰〰〰〰
*ಮೌಲಿದ್ ಬಿದ್‌ಅತ್ತೇ.? ಅಥವಾ ಪುಣ್ಯ ಕಾರ್ಯವೇ ?ಪ್ರವಾದಿ ﷺ , ಸ್ವಹಾಬಿಗಳ, ಕಾಲದಲ್ಲಿ ಇಲ್ಲದ ಎಲ್ಲವೂ ನೂತನ ಆಚಾರವೇ.?*
*ಇಮಾಂ ಇಬ್ನು ಹಜರ್ ( ರ ) ಇಮಾಂ ಸುಯೂತೀ ( ರ ) ಇಮಾಂ ಕಸಾವೀ ( ರ ) ಇಮಾಂ ಅಬೂ ಶಾಮ ( ರ ) ಮೌಲಿದ್ ಬಗ್ಗೆ ಏನು ಹೇಳಿದ್ದಾರೆ..*
*ಉತ್ತರಿಸುತ್ತಾರೆ ಮೌಲಾನ ನಜೀಬ್ ಮೌಲವಿ*
https://youtu.be/HC6_WfOxU3Q
〰〰〰〰〰〰〰〰
*ಮಂಕೂಸ್ ಮೌಲಿದ್‌ನ ಸಂಶಯಗಳಿಗೆ ಉತ್ತರಿಸುತ್ತಾರೆ.*
*ಮೌಲಾನ ಅಲವೀ ಸಖಾಫಿ*
https://youtu.be/AcjK5WK_cjE
https://youtu.be/YFg12oCSJWU
〰〰〰〰〰〰〰〰
*ಎಂ.ಎಂ.ಸಖಾಫಿ*
Comments