Skip to main content

ಪೈಸಾಚಿಕ ಸಹಾಯ

ಪೈಸಾಚಿಕ ಸಹಾಯ


*✒ಯೂಸುಫ್ ನಬ್‌ಹಾನಿ ಕುಕ್ಕಾಜೆ*
📞00971553499119

   ▪ *ಒಮ್ಮೆ* ಹನಫೀ ಮದ್‌ಹಬಿನ ಇಮಾಮರಾದ ಜ್ಞಾನಸೂರ್ಯ ಇಮಾಮ್ ಅಬೂ ಹನೀಫ (ರ‌ಅ) ರವರ ಸನ್ನಿಧಿಗೆ ಒಬ್ಬನು ಬಂದು ಹೇಳಿದನು. *"ಇಮಾಮರೇ.., ನಾನೊಂದು ದೊಡ್ಡ ಸಮಸ್ಯೆಗೆ ಒಳಗಾಗಿದ್ದೇನೆ. ನಾನು ಒಂದೆರಡು ವರ್ಷಗಳ ಮೊದಲು ಕಳ್ಳರ ಹಾವಳಿ ಮತ್ತು ಇತರ ಕೆಲವು ಸಮಸ್ಯೆಗಳಿಂದಾಗಿ ನನ್ನಲ್ಲಿರುವ ಬಂಗಾರ, ಬೆಳ್ಳಿ, ಹಣ ಅಂತೆಯೇ ಹಲವಾರು ಬೆಲೆಬಾಳುವ ವಸ್ತುಗಳನ್ನು ಒಂದು ಪೆಟ್ಟಿಗೆಯಲ್ಲಿಟ್ಟು ಒಂದು ಕಡೆ ಹುಗಿದಿಟ್ಟಿದ್ದೆನು. ಆದರೆ ಈಗ ಅದರ ಅಗತ್ಯ ಬರುವಾಗ ಹುಗಿದಿಟ್ಟ ಜಾಗ ನೆನಪಿನಿಂದ ಮರೆತು ಹೋಗಿದೆ. ಏನು ಮಾಡಬೇಕೆಂದು ತಿಳಿಯದೆ ಕಂಗಾಲಾಗಿದ್ದೇನೆ. ತಲೆಬಿಸಿಯಿಂದ ಹಲವಾರು ದಿನಗಳಿಂದ ನಿದ್ದೆ ಬರುವುದಿಲ್ಲ. ಊಟ ಪಾನೀಯಗಳು ಕೂಡ ಬೇಡವೆಂದೆನಿಸುತ್ತದೆ. ಆದ್ದರಿಂದ ಅದನ್ನು ಸಿಗುವಂತೆ ಮಾಡಲು ನಿಮ್ಮಲ್ಲಿ ಏನಾದರೂ ಮಾರ್ಗವಿದೆಯಾ..? ದಯೆಮಾಡಿ ನನಗೆ ತಿಳಿಸುವಿರಾ..? ಅದಕ್ಕೋಸ್ಕರ ನಾನು ನಿಮ್ಮ ಈ ಮಹಾ ಸನ್ನಿಧಿಗೆ ಬಂದಿದ್ದೇನೆ."*
   ▪ *ಇಮಾಮ್* ಅಬೂಹನೀಫ (ರ‌ಅ) ಹೇಳಿದರು. *"ನನ್ನಲ್ಲಿ ಇದಕ್ಕೆ ಏನು ಪರಿಹಾರ..? ನಾನೊಬ್ಬ  ಇಸ್ಲಾಮಿನ ಕರ್ಮಶಾಸ್ತ್ರ ಪಂಡಿತ. ಆ ವಿಷಯದಲ್ಲಿ ಏನಾದರು ಸಮಸ್ಯೆಯಿದ್ದಲ್ಲಿ ಪರಿಹಾರ ಹುಡುಕಬಹುದಿತ್ತು. ಆದರೆ ಇದಕ್ಕೆ ನನ್ನಲ್ಲಿ ಪರಿಹಾರವಿಲ್ಲ."*
   ▪ *ಸಮಸ್ಯೆಗೊಳಗಾದ* ಬಡಪಾಯಿಯು, ಇಮಾಮ್ ಅಬೂಹನೀಫರಿಂದ ಈ ನಿರಾಶಾದಾಯಕ ಉತ್ತರ ದೊರೆತಾಗ ಬಹಳ ಚಿಂತೆಗೊಳಗಾದನು. ಏನು ಮಾಡಬೇಕೆಂದು ತಿಳಿಯದೆ ಬಹಳ ಬೇಸರದಿಂದ ಮನೆಯಿಂದ ಹೊರಡಲು ರೆಡಿಯಾಗುವಾಗ ಬುದ್ದಿವಂತನಾದ ಇಮಾಮರಿಗೆ ಒಂದು ಉಪಾಯ ಹೊಳೆಯಿತು. ಸಮಸ್ಯೆಗೆ ಪರಿಹಾರ ಹುಡುಕಲು ತನ್ನ ಮನೆಬಾಗಿಲಿಗೆ ಬಂದ ವ್ಯಕ್ತಿಯಲ್ಲಿ ಇಮಾಮರು ಹೇಳಿದರು. *"ಗಾಬರಿಪಡಬೇಡ. ಒಂದು ಉಪಾಯವಿದೆ.  ನೀನಿವತ್ತು ರಾತ್ರಿ ಇಶಾ ನಮಾಝು ಮುಗಿದು ಬೆಳಗಿನ ತನಕ ಬಹಳ ಭಕ್ತಿಯಿಂದ ಸುನ್ನತ್ ನಮಾಝು ಮಾಡಬೇಕು. ಇಂಶಾ ಅಲ್ಲಾಹ್.. ಅದರೆಡೆಯಲ್ಲಿ ನಿನ್ನ ಹೂತಿಟ್ಟ ಹಣ ಎಲ್ಲಿದೆಯೆಂದು ತಿಳಿಯಬಹುದು."*
   ▪ *ಇಮಾಮರ* ಮಾತು ಯಾವತ್ತೂ ಸುಳ್ಳಾಗದು ಎಂಬ ದೃಡವಾದ ನಂಬಿಕೆಯಲ್ಲಿ ಈತನು ರಾತ್ರಿ ಇಶಾ ನಮಾಝು ಮುಗಿದು ಸುನ್ನತ್ ನಮಾಝ್ ಮಾಡಲು ಶುರು ಮಾಡಿದನು. ಸುಬ್‌ಹಾನಲ್ಲಾಹ್ ಬೆಳಗಾಗುವುವುದು ಬಿಟ್ಟು ನಾಲ್ಕು ರಕ‌ಅತ್ ಪೂರ್ತಿಯಾಗುದಕ್ಕೆ ಮೊದಲೇ ಹಣ ಹುಗಿದಿಟ್ಡ ಸ್ಥಳ ಎಲ್ಲಿಯೆಂದು ನೆನಪಿಗೆ ಬಂತು.
   ▪ *ಕೂಡಲೇ* ನಮಾಝು ಪೂರ್ತಿಮಾಡದೆ ಅಲ್ಲಿಂದಲೇ ಕೈಬಿಟ್ಟು ನಮಾಝು ನಾಳೆ ಮಾಡುವ ಎಂದು ಮನದಲ್ಲಿ ಹೇಳಿ ಹೂತಿಟ್ಟ ಹಣದ ಪೆಟ್ಟಿಗೆ ತೆಗೆಯಲು ಹೋದನು. ನಂತರ ಪೆಟ್ಟಿಗೆಯನ್ನು ಹೊರ ತೆಗೆದು ಮನೆಗೆ ತಂದು ಆರಾಮವಾಗಿ ಮಲಗಿದನು.
   ▪ *ಮಾರನೆಯ* ದಿನ ಬೆಳಿಗ್ಗೆ ಈತನು ಇಮಾಮ್ ಅಬೂಹನೀಫರ ಸನ್ನಿಧಿಗೆ ಕೃತಜ್ಞತೆ ಹೇಳಲು ಬಂದಾಗ ಅವರಲ್ಲಿ ಕೇಳಿದ. *"ಇಮಾಮರೇ.., ನೀವು ನನ್ನ ಹಣದ ಪೆಟ್ಟಿಗೆ ಹುಗಿದಿಟ್ಟ ಜಾಗ ತಿಳಿಯದೆ ಹೋದಾಗ ನಮಾಝು ಮಾಡಲು ಹೇಳಿದಿರಿ. ಅಂತೆಯೇ ನಾನು ನಮಾಝಿಗೆ ಪ್ರವೇಶಿಸಿ ಒಂದೆರಡು ರಕ‌ಅತ್ ಪೂರ್ತಿಯಾಗುವುದಕ್ಕೆ ಮೊದಲೇ ಜಾಗ ತಿಳಿಯಿತು. ಏನಿದರ ರಹಸ್ಯ...? ನನಗದನ್ನು ತಿಳಿಯುವ ಕುತೂಹಲವಿದೆ."*
   ▪ *ಇಮಾಮ್* ಅಬೂಹನೀಫ (ರ‌ಅ) ಹೇಳಿದರು. *"ನಾನು ಬಹಳ ಆಲೋಚನೆ ಮಾಡಿದಾಗ ಮನಸಿಗೆ ಹೊಳೆದ ಒಂದು ಉಪಾಯವಾಗಿದೆ ಅದು. ನೀನು ಹುಗಿದಿಟ್ಟ ಜಾಗವನ್ನು ನಿನ್ನ ನೆನಪಿನಿಂದ ತೆಗೆದದ್ದು ಶೈತಾನನು. ನೀನಿನ್ನು ಅದಕ್ಕೆ ಬೇಕಾಗಿ ರಾತ್ರಿಯಿಂದ ಬೆಳಗಿನ ತನಕ ನಮಾಝು ಮಾಡುವುದು ಅದು ಅವನಿಗೆ ಬಹಳ ಕಹಿಯಾದ ವಿಷಯ. ಅದನ್ನು ಅವನಿಗೆ ಯಾವತ್ತೂ ಸಹಿಸಲು ಸಾಧ್ಯವಿಲ್ಲ. ಆದ್ದರಿಂದಲೇ ಅವನು ನಿನ್ನ ಮನಸ್ಸಿಗೆ ಹುಗಿದಿಟ್ಟ ಜಾಗವನ್ನು ನೆನಪಿಗೆ ತಂದನು. ಆಗ ನೀನು ನಮಾಝು ಬಿಟ್ಟು ಓಡಿದೆ."*

   ಸಂಗ್ರಹ; *ಖತಾಯಿಫ್ ಅಲ್ ಲತಾಯಿಫ್* ಎಂಬ ಗ್ರಂಥ.

Comments

Popular posts from this blog

ಗ್ರಹಣ ನಮಾಜಿನ ರೂಪ

ಗ್ರಹಣ ನಮಾಜಿನ ರೂಪ *ಚಂದ್ರಗ್ರಹಣದ ಸುನ್ನತ್ ನಮಾಜು ಎರಡು ರಕಅತ್ ಅಲ್ಲಾಹನಿಗಾಗಿ ಜಮಾಅತ್ತಾಗಿ ನಾನು ನಿರ್ವಹಿಸುವೆನು* ಎಂದು ನಿಯ್ಯತ್ ಮಾಡಿ ಅಲ್ಲಾಹು ಅಕ್ಬರ್ ಎಂದು ಹೇಳಿ ನಮಾಜಿಗೆ ಪ್ರವೇಶಿಸುವು...

ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ. ಲೇ - ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಅಕ್ಕರೆಕೆರೆ.

ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ. ಲೇ - ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಅಕ್ಕರೆಕೆರೆ. ಆಮಿನ ಬೀವಿ ರ.ಅ ಗರ್ಭಿಣಿಯಾಗಿರುವಾಗ ವ್ಯಾಪಾರಕ್ಕಾಗಿ ಸಿರಿಯಾಕ್ಕೆ ಹೋಗಿದ್ದ ಅಬ್ದುಲ್ಲಾಹ್ (ರ.ಅ) ಮರಳಿ ಬರುವಾಗ ಮದೀನದಲ್ಲಿ ವಫಾತಾದರು.ತಂದೆಯ ಮಾವಂದಿರರಾದ ಬನುನ್ನಜ್ಜಾರ್ ಗೋತ್ರದವರ ಬಳಿ ದಫನ ಮಾಡಲಾಯಿತು.ರಬೀವುಲ್ ಹನ್ನೆರಡು ಸೋಮವಾರ ಸುಬಹಿಯ ಸ್ವಲ್ಪ ಮುಂಚೆ ಅಂತ್ಯ ಪ್ರವಾದಿ ಮುಹಮ್ಮದ್ ಮುಸ್ತಫ ಸ.ಅ ಮಕ್ಕಾದಲ್ಲಿ ಜನಿಸಿದರು.ಅಂದು ಕ್ರಿಸ್ತಶಕ 571 ಎಪ್ರಿಲ್ 21 ಆಗಿತ್ತು.ನೆಬಿ ಸ.ಅ ಜನಿಸಿದ ದಿನ ಅತ್ಯಂತ ಸಂತೋಷದಾಯಕವಾದ ದಿನವಾಗಿದೆ.ಮಾನವ ಶ್ರೇಷ್ಠರಾದ ಪ್ರವಾದಿ ಮುಹಮ್ಮದ್ ಸ.ಅ ರವರ ಮುಖಾಂತರ ಮಾನವ ಸಮೂಹವನ್ನು ಅಲ್ಲಾಹು ಅನುಗ್ರಹಿಸಿದ ಸುದಿನವಾಗಿದೆ ಅಂದು.ಮುಸಲ್ಮಾನರು ಈ ಅನುಗ್ರಹಕ್ಕೆ ಕ್ರತಜ್ಞತೆ ಸಲ್ಲಿಸಿ ಅಂದು ಮೀಲಾದುನ್ನಬಿ ಆಚರಣೆ ಮಾಡುತ್ತಾರೆ.ನೆಬಿ ಸ.ಅ ರವರ ಮದಹ್ ಕೀರ್ತನೆಗಳನ್ನು ಹೇಳಿ, ಹಾಡಿಹೊಗಳಿ ದಾನಧರ್ಮಗಳನ್ನು ನೀಡಿ ಸಂತೋಷ ಪ್ರಕಟಿಸುತ್ತಾರೆ.              ಭೂಮಿಯ ಮೇಲೆ ಜನ್ಮವೆತ್ತಿ ಬಂದ ಅತ್ಯಂತ ಉತ್ತಮನಾದ ಮನುಷ್ಯ ನೆಬಿ ಸ.ಅ ಆಗಿದ್ದಾರೆ.ಮುಂಜಿಕರ್ಮ ನಿರ್ವಹಿಸಲ್ಪಟ್ಟ,ಹೊಕ್ಕುಳ ಬಳ್ಳಿ ಕತ್ತರಿಸಲ್ಪಟ್ಟ,ಕಣ್ಣಿಗೆ ಸುರುಮ ಹಾಕಲ್ಪಟ್ಟ ಸ್ಥಿತಿಯಲ್ಲಿ ಸಂಪೂರ್ಣ ಸಂಶುದ್ಧವಾದ ರೀತಿಯಲ್ಲಾಗಿದೆ ಅವರು ಜನಿಸಿದ್ದು.ಅಬೂತಾಲಿಬರ ಮನೆಯಲ್ಲಾಗಿದೆ ಜನನ.ಹೆರಿಗೆ...

ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಕರ ಪಾತ್ರ

ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಕರ ಪಾತ್ರ _✍🏻ಜಹಫರ್ ಸಾಧಿಕ್ ಕಟ್ಟದಪಡ್ಪು_ _ನಮ್ಮ ಸಮಾಜವು ನಮಗೆ ಜನ್ಮ ಕೊಟ್ಟ ತಂದೆ ತಾಯಿಯ ನಂತರ ಮಹತ್ತರವಾದ ಸ್ಥಾನವನ್ನು ಶಿಕ್ಷಕರಿಗೆ ನೀಡಿ ಗೌರವಿಸಿದೆ.  ಶಿಲ್ಪಿ...