ಪ್ರವಾದಿಯ ಮಹಿಮೆ 15
ಅಬೂ ಹುರೈರಾ(ರ) ರವರಿಂದ ವರದಿ; ನಬಿ ﷺರವರು ಅಲಿಯ್ಯ್(ರ) ರವರ ಮಡಿಲಲ್ಲಿ ತಲೆಯನ್ನಿಟ್ಟು ನಿದ್ರಿಸಿದ್ದರು. ಅಸರ್ ನಮಾಝ್ ನಿರ್ವಹಿಸಿರಲಿಲ್ಲ. ಎಚ್ಚರಗೊಂಡು ನೋಡುವಾಗ ಮಗ್ರಿಬ್ ನ ಟೈಮಾಗಿತ್ತು. ನಬಿ ﷺ ಕೂಡಲೇ ಅಲ್ಲಾಹನಲ್ಲಿ ಪ್ರಾರ್ಥಿಸಿದರು. ತಕ್ಷಣ ಅಸ್ತಮಿಸಿದ್ದ ಸೂರ್ಯ ಮರಳಿ ಬಂದ. ನಬಿ ﷺರವರು ನಮಾಝ್ ನಿರ್ವಹಿಸಿ ವಿರಮಿಸಿದಾಗ ಮತ್ತೆ ಸೂರ್ಯ ಮುಳುಗಿ ಹೋಯಿತು.
ಸೂರ್ಯನಿರುವುದೇ ನಬಿ ﷺರ ಕಾರಣದಿಂದಲ್ಲವೇ?. ಅದು ಉದಿಸುವುದೂ, ಅಸ್ತಮಿಸುವುದೂ ಪುಣ್ಯ ಹಬೀಬರಿಗಾಗಿ. ಮತ್ತೆ ಅದು ನಬಿ ﷺರ ಅಪೇಕ್ಷೆಗೆ ಮರಳಿ ಬಾರದಿರುತ್ತದಾ?.
*ಯಾ ರಸೂಲಲ್ಲಾಹ್ ﷺ ...ಖುಝ್ ಬಿ ಐದೀನಾ...*
*ಜುನೈದ್ ಸಖಾಫಿ ಜೀರ್ಮುಕ್ಕಿ*
Comments