Skip to main content

ಸೀನುವಿಕೆ ಶರೀರದ ರೀ ಫ್ರೆಶರ್

ಸೀನುವಿಕೆ ಶರೀರದ ರೀ ಫ್ರೆಶರ್

🎙ಉಸ್ತಾದ್ ಶರೀಫ್ ಸಖಾಫಿ ಮಾಣಿ
✍ ಆಸಿಫ್ ಆಚಂಗಿ
_______________________________

🍂 HIGHLIGHTS 🍂

👁‍🗨 ನಾವು ಸೀನುತ್ತೇವೆ. ಸೀನುವುದು ಆರೋಗ್ಯಕರ ವ್ಯಕ್ತಿಯ ಲಕ್ಷಣ.

👁‍🗨 ಇಮಾಮ್ ಬುಖಾರಿ ರಳಿಯಲ್ಲಾಹು ಅನ್ಹುರವರು ನಿವೇದಿಸುವ ಹದೀಸೊಂದರಲ್ಲಿ  'ಸೀನುವಿಕೆಯು ಅಲ್ಲಾಹನಿಗೆ ಇಷ್ಟಕರ ಸಂಗತಿ' ಎಂದಿದ್ದಾರೆ.

👁‍🗨 ಮನುಷ್ಯನ ಹೃದಯ ಮಿಡಿತ ಸಹಿತ ಶರೀರದ ಎಲ್ಲಾ ಅಂಗಾಂಗಗಳು ನಿಶ್ಚಲವಾಗುವುದು ಮರಣ ಬಿಟ್ಟರೆ ಆತ ಸೀನುವ ಸಂದರ್ಭದಲ್ಲಾಗಿದೆ.
ಸೀನುವಾಗ ಯಾವುದೇ ವಸ್ತುವನ್ನು ನೋಡವುದು ಕೇಳುವುದು ಅಸಾಧ್ಯ..!

👁‍🗨 'ಸೀನುವಿಕೆ' ಎಂಬುವುದು ಶರೀರವನ್ನು ಸಂಪೂರ್ಣವಾಗಿ ರಿಫ್ರೆಶ್ ಮಾಡುವ ಅದ್ಭುತ ಸಂಗತಿ. 

👁‍🗨 ಸೀನಿದ ಬಳಿಕ 'الحمد لله' ಹೇಳಲು ಪ್ರತ್ಯೇಕ ಸುನ್ನತ್ ಇದೆ. 

👁‍🗨  ಸೀನಿದ ಬಳಿಕ  الحمد لله ಹೇಳಿದರೆ 'ಕಿವಿನೋವು ಮತ್ತು ಹೊಟ್ಟೆ ನೋವು ಇಲ್ಲವಾಗುತ್ತದೆ' ಎಂದು ಹದೀಸಿನಲ್ಲಿ ಕಾಣಬಹುದು. 

 👁‍🗨 ಸೀನಿದವನು الحمد لله ಎಂದು ಮಾತ್ರ ಹೇಳದೆ ಅದರ ಬಳಿಕ على كل حال، الف مرة ಅಥವಾ رب العالمين ಎಂದೆಲ್ಲಾ ಹೇಳಲು ಪ್ರತ್ಯೇಕ ಸುನ್ನತ್ತಿದೆ.

👁‍🗨 ಒಂದು ದಿನ ಪ್ರವಾದಿವರ್ಯ ﷺರು ನಮಾಜ್ ಮಾಡುತ್ತಿರುವಾಗ ಓರ್ವ ಸ್ವಹಾಬಿಯು
'الحمد لله حمدا كثيرا طيبا مباركا كما يحب ربنا ويرضى' 
ಎಂದು ದೀರ್ಘವಾದ 'ಹಂದ'ನ್ನು ಹೇಳುತ್ತಾರೆ. ನೆಬಿಯವರು ನಮಾಜಿನಿಂದ ವಿರಮಿಸಿದಾಗ ತಿರುಗಿ 'ದೀರ್ಘವಾದ 'ಹಂದ್'ನ್ನು ಹೇಳಿದವರಾರು..?' ಎಂದು ಕೇಳುತ್ತಾರೆ.
ಸಹಾಬಿಗಳು ಹೇಳಲು ಹಿಂಜರಿದರು. ಕೊನೆಗೆ ಓರ್ವ ಸ್ವಹಾಬಿ;'ನಾನು' ಎಂದರು. ಆಗ ಪ್ರವಾದಿﷺಮರು ನೀವು ಹೇಳಿದ 'ಹಂದ್'ನ್ನು ಅಲ್ಲಾಹನ ಬಳಿ ಕೊಂಡೊಯ್ಯಲು 70 ಮಲಕುಗಳು ಓಡಿ ಬರುವುದನ್ನು ಕಂಡೆನು ಎಂದು ಹೇಳಿದರು. 

👁‍🗨 ನಿಮಗೆ ಲಭಿಸಿದ ಐಶ್ವರ್ಯಕ್ಕೆ ಅಭಿನಂದಿಸುವುದಾದರೆ ನಾನು ಮತ್ತಷ್ಟು ಐಶ್ವರ್ಯವನ್ನು  ವೃದ್ಧಿಸುತ್ತೇನೆ. (ಕುರ್ ಆನ್)
👁‍🗨 ಸೀನಿದವನು الحمد لله ಎಂದು ಹೇಳಲು ಮರತರೆ ನೀವು الحمد لله ಎಂದು ಜೋರಾಗಿ ಹೇಳುವ ಮೂಲಕ ಆತನನ್ನು ನೆನಪಿಸಿರಿ.

👁‍🗨 ಸೀನಿದವನು الحمد لله ಹೇಳಿದರೆ, ಆ 'ಹಂದ್'ನ್ನು ಕೇಳಿದವನು يرحمك الله (ಅಲ್ಲಾಹನ ನಿನಗೆ ರಹ್ಮತನ್ನು ಕರುಣಿಸಲಿ) ಎಂದು ಸೀನಿದವನಿಗೆ ಪ್ರಾರ್ಥಿಸಲು ಸುನ್ನಿತ್ತಿದೆ. ಮಾತ್ರವಲ್ಲ ಯಾವುದೇ ಅಸೂಯೆ ದ್ವೇಷವಿಲ್ಲದೆ ಸೀನಿದವನಿಗೆ ಪ್ರಾರ್ಥಿಸಿದ ವ್ಯಕ್ತಿಗೆ ಸೀನಿದವನು
' يهديكم الله ويصلح بالكم'
(ಅಲ್ಲಾಹನು ನಿಮ್ಮನ್ನು ಸನ್ಮಾರ್ಗದಲ್ಲಿ ಭದ್ರವಾಗಿಸಲಿ, ನಿಮ್ಮ ಕಾರ್ಯಗಳನ್ನು...)  ಎಂದು ಪ್ರಾರ್ಥಿಸಲೂ ಸುನ್ನಿತ್ತಿದೆ. 

👁‍🗨 ಮೂರು ಬಾರಿ ಸೀನಿ ಮೂರು ಬಾರಿಯೂ الحمد لله ಎಂದು ಹೇಳಿದರೆ ಕೇಳಿದವನು ಮರುತ್ತರವಾಗಿ يرحمك الله ಎಂದೇ ಹೇಳಬೇಕು. ಮೂರಕ್ಕಿಂತ ಹೆಚ್ಚಾದರೆ
 'يرحمك الله'
 ಇದರ ಬದಲಾಗಿ 
'شفاك الله' 
ಎಂದು ಪ್ರಾರ್ಥಿಸಬೇಕು.

👁‍🗨 ಚಿಕ್ಕ ಮಕ್ಕಳು ಸೀನಿ
 'الحمد لله' 
  ಎಂದು ಹೇಳಿದರೆ
'اصلحك الله'
'ಅಲ್ಲಾಹನು ನಿನ್ನನ್ನು  ಗುಣವಂತನಾಗಿಸಲಿ' ಎಂದು ಪ್ರಾರ್ಥಿಸಲು ಸುನ್ನತ್ತಿದೆ. 

👁‍🗨 ಪರಸ್ಪರ ಒಳ್ಳೆಯ ವಿಷಯಗಳನ್ನು ಮಾತನಾಡುವಾಗ ಸೀನಿದರೆ ಅದು ಶುಭಲಕ್ಷಣ ಮತ್ತು ಆ ಕಾರ್ಯವು ಸತ್ಯವಾಗಿರುತ್ತದೆ ಎಂಬುದನ್ನು ಇಮಾಮ್ 'ಇಬ್ನುಸ್ಸಿನ್ನ' ಇಮಾಮರು 'ಅಮಲುಲ್ ಯೌಮಿ ವಲ್ಲೈಲಾ' ಎಂಬ ಗ್ರಂಥದಲ್ಲಿ ಉಲ್ಲೇಖಿಸಿದ್ದಾರೆ.
_______________________________

Comments

Popular posts from this blog

ಗ್ರಹಣ ನಮಾಜಿನ ರೂಪ

ಗ್ರಹಣ ನಮಾಜಿನ ರೂಪ *ಚಂದ್ರಗ್ರಹಣದ ಸುನ್ನತ್ ನಮಾಜು ಎರಡು ರಕಅತ್ ಅಲ್ಲಾಹನಿಗಾಗಿ ಜಮಾಅತ್ತಾಗಿ ನಾನು ನಿರ್ವಹಿಸುವೆನು* ಎಂದು ನಿಯ್ಯತ್ ಮಾಡಿ ಅಲ್ಲಾಹು ಅಕ್ಬರ್ ಎಂದು ಹೇಳಿ ನಮಾಜಿಗೆ ಪ್ರವೇಶಿಸುವು...

ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ. ಲೇ - ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಅಕ್ಕರೆಕೆರೆ.

ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ. ಲೇ - ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಅಕ್ಕರೆಕೆರೆ. ಆಮಿನ ಬೀವಿ ರ.ಅ ಗರ್ಭಿಣಿಯಾಗಿರುವಾಗ ವ್ಯಾಪಾರಕ್ಕಾಗಿ ಸಿರಿಯಾಕ್ಕೆ ಹೋಗಿದ್ದ ಅಬ್ದುಲ್ಲಾಹ್ (ರ.ಅ) ಮರಳಿ ಬರುವಾಗ ಮದೀನದಲ್ಲಿ ವಫಾತಾದರು.ತಂದೆಯ ಮಾವಂದಿರರಾದ ಬನುನ್ನಜ್ಜಾರ್ ಗೋತ್ರದವರ ಬಳಿ ದಫನ ಮಾಡಲಾಯಿತು.ರಬೀವುಲ್ ಹನ್ನೆರಡು ಸೋಮವಾರ ಸುಬಹಿಯ ಸ್ವಲ್ಪ ಮುಂಚೆ ಅಂತ್ಯ ಪ್ರವಾದಿ ಮುಹಮ್ಮದ್ ಮುಸ್ತಫ ಸ.ಅ ಮಕ್ಕಾದಲ್ಲಿ ಜನಿಸಿದರು.ಅಂದು ಕ್ರಿಸ್ತಶಕ 571 ಎಪ್ರಿಲ್ 21 ಆಗಿತ್ತು.ನೆಬಿ ಸ.ಅ ಜನಿಸಿದ ದಿನ ಅತ್ಯಂತ ಸಂತೋಷದಾಯಕವಾದ ದಿನವಾಗಿದೆ.ಮಾನವ ಶ್ರೇಷ್ಠರಾದ ಪ್ರವಾದಿ ಮುಹಮ್ಮದ್ ಸ.ಅ ರವರ ಮುಖಾಂತರ ಮಾನವ ಸಮೂಹವನ್ನು ಅಲ್ಲಾಹು ಅನುಗ್ರಹಿಸಿದ ಸುದಿನವಾಗಿದೆ ಅಂದು.ಮುಸಲ್ಮಾನರು ಈ ಅನುಗ್ರಹಕ್ಕೆ ಕ್ರತಜ್ಞತೆ ಸಲ್ಲಿಸಿ ಅಂದು ಮೀಲಾದುನ್ನಬಿ ಆಚರಣೆ ಮಾಡುತ್ತಾರೆ.ನೆಬಿ ಸ.ಅ ರವರ ಮದಹ್ ಕೀರ್ತನೆಗಳನ್ನು ಹೇಳಿ, ಹಾಡಿಹೊಗಳಿ ದಾನಧರ್ಮಗಳನ್ನು ನೀಡಿ ಸಂತೋಷ ಪ್ರಕಟಿಸುತ್ತಾರೆ.              ಭೂಮಿಯ ಮೇಲೆ ಜನ್ಮವೆತ್ತಿ ಬಂದ ಅತ್ಯಂತ ಉತ್ತಮನಾದ ಮನುಷ್ಯ ನೆಬಿ ಸ.ಅ ಆಗಿದ್ದಾರೆ.ಮುಂಜಿಕರ್ಮ ನಿರ್ವಹಿಸಲ್ಪಟ್ಟ,ಹೊಕ್ಕುಳ ಬಳ್ಳಿ ಕತ್ತರಿಸಲ್ಪಟ್ಟ,ಕಣ್ಣಿಗೆ ಸುರುಮ ಹಾಕಲ್ಪಟ್ಟ ಸ್ಥಿತಿಯಲ್ಲಿ ಸಂಪೂರ್ಣ ಸಂಶುದ್ಧವಾದ ರೀತಿಯಲ್ಲಾಗಿದೆ ಅವರು ಜನಿಸಿದ್ದು.ಅಬೂತಾಲಿಬರ ಮನೆಯಲ್ಲಾಗಿದೆ ಜನನ.ಹೆರಿಗೆ...

ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಕರ ಪಾತ್ರ

ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಕರ ಪಾತ್ರ _✍🏻ಜಹಫರ್ ಸಾಧಿಕ್ ಕಟ್ಟದಪಡ್ಪು_ _ನಮ್ಮ ಸಮಾಜವು ನಮಗೆ ಜನ್ಮ ಕೊಟ್ಟ ತಂದೆ ತಾಯಿಯ ನಂತರ ಮಹತ್ತರವಾದ ಸ್ಥಾನವನ್ನು ಶಿಕ್ಷಕರಿಗೆ ನೀಡಿ ಗೌರವಿಸಿದೆ.  ಶಿಲ್ಪಿ...