ಸಂಚಾರಿಗಳಿಂದ ಮಾಣಿಕ್ಯವೆಂದು ಕರೆಸಿಕೊಂಡ ಸಮರ್‌ಖಂದ್.
ಭಾಗ - 3
ಮೂಲ: ಇಸ್ಮಾಈಲ್ ಸಅದಿ ಮಾಚಾರ್ ರವರ ಇಫಾದ ಹದೀಸ್ ಕ್ಲಾಸ್ ನಂ -1495.
ಬರಹ ರೂಪಕ್ಕೆ --ಸಲೀಂ ಇರುವಂಬಳ್ಳ.
(ಕೆ.ಜಿ.ಎನ್ ದಅ್‌ವಾ ಕಾಲೇಜು ಮಿತ್ತೂರು)
--------------------------
ಸಮರ್'ಖಂದಿನಿಂದ ಬಂದ ಸೇವಕ ಖಲೀಫ ಉಮರ್'ಬಿನ್ ಅಬ್ದುಲ್ ಅಝೀಝರ ಮನೆ ಮುಂದೆ ತಲುಪಿದ್ದಾನೆ. ಆದರೆ ತನ್ನ ಸಂಶಯವಿನ್ನೂ ಆರಿಲ್ಲ. ಇದು ರಾಜರ ಮನೆಯಾಗಿರಬಹುದೇ..? ರಾಜರ ಮನೆಯೆಂದರೆ ಫ್ರೌಢಿಮೆಯಿಂದ ಕೂಡಿರಬೇಕಲ್ಲವೇ..! ಆದರೆ ಇದು ಹಾಗಲ್ಲವಲ್ಲಾ...
ತನ್ನ ಸಂಶಯವನ್ನು ನಿವಾರಿಸಲು ಇನ್ನೊಮ್ಮೆ ಡಮಸ್ಕಸಿನ ವ್ಯಕ್ತಿಯ ಬಳಿ ಓಡಿದ.
" ಹೌದು ಇದು ಉಮರ್'ಬಿನು ಅಬ್ದುಲ್ ಅಝೀಝ್ ರವರ ಮನೆಯಾಗಿದೆ. ಇಸ್ಲಾಮಿನ ಶರೀಅತ್ ಇವರಿಗೆ ಕಿಸ್ರಾ-ಖೈಸರ್, ಫಿರ್‌ಔನ್, ಖಾಕಾನ್ ರವರ ಕಿರೀಟವನ್ನು ನೀಡಿ ಗೌರವಿಸಿದೆ. ಆದರೆ ಅವರಿಗೆ ಇದಕ್ಕಿಂತ ಮಿಗಿಲಾದ ಕಿರೀಟವನ್ನಾಗಿದೆ ಕೊಡಬೇಕಾದದ್ದು. ಆದರೆ ಮಹಾನುಭಾವರು ಅರಬಿಗಳ ಕಿರೀಟವಾದ ರುಮಾಲು(ತಲೆಕಟ್ಟು)ವನ್ನಾಗಿದೆ ಧರಿಸುತ್ತಿರುವುದು. ಭೂ ಲೋಕದಲ್ಲೆಲ್ಲ ಸೌಂದರ್ಯವನ್ನು ಪ್ರಕಾಶಿಸಿದ ರಾಜರಾಗಿದ್ದಾರೆ ಇವರು. ತನ್ನ ಬಳಿ ಬಂದವರಿಗೆ ಕೈ ತುಂಬಾ ನೀಡಿ ಕಳುಹಿಸಿಕೊಡುವರು. ಬಡವರಿಗೆ ಮುತ್ತು-ರತ್ನವನ್ನು ದಯಪಾಲಿಸಿದ ಮಹಾನರಿವರು. ಆದರೆ ಇವರು ಮಾತ್ರ ಎಲ್ಲವನ್ನೂ ತ್ಯಜಿಸಿ ಸಣ್ಣ ಮನೆಯೊಂದರಲ್ಲಿ ಜೀವನ ಸಾಗಿಸುತ್ತಿದ್ದಾರೆ.
ಇವರ ಮನಸ್ಸು ಇಹಕ್ಕಿಂತಲೂ ವಿಶಾಲವಾದುದು. ಇಹಲೋಕ ಇವರ ಮುಂದೆ ಏನೂ ಅಲ್ಲ. ಇಹಲೋಕಕ್ಕಿಂತ ವಿಶಾಲವಾದ ಸ್ವರ್ಗವನ್ನಾಗಿದೆ ಮಹಾನರು ಆಶಿಸುತ್ತಿರುವುದು. ಜೀವನದ ಎಲ್ಲಾ ಸುಖಗಳನ್ನು ಬಿಟ್ಟು ಯಾವುದೋ ಪರ್ವತದ ಬಳಿ, ಮಸೀದಿಗೆ ಹೋಗಿ ತಪಸ್ಸು ಕೂತ ವ್ಯಕ್ತಿಯಲ್ಲ ಇವರು. ಹಾಗೆ ಮಾಡುತ್ತಿದ್ದರೆ ಅಲ್ಲಾಹನಿಗೆ ಇಬಾದತ್ ಮಾಡುವವರಿಗೆ ಒಬ್ಬರು ಸೇರ್ಪಡೆಯಾಯಿತು ಎಂದಷ್ಟೇ ಹೇಳಬಹುದು. ಕೇವಲ ಅಲ್ಲಾಹನಿಗೆ ಇಬಾದತ್ ಮಾಡುತ್ತಾ ಕುಳಿತಿರುತ್ತಿದ್ದರೆ ಅವರ ಕುರಿತು ಅದ್ಭುತವನ್ನೇನು ನಮಗೆ ಕಾಣಲು ಸಾಧ್ಯವಾಗುತ್ತಿರಲಿಲ್ಲ. ಇಹಲೋಕದ ಸುಖಕ್ಕೆ ವಿರಾಮ ಹಾಕಿ ರಾತ್ರಿಯಿಡೀ ಸತ್ಕಾರ್ಯದಲ್ಲಿ,ನಮಾಝಿನಲ್ಲಿ ತೊಡಗಿಸಿಕೊಳ್ಳುತ್ತಿದ್ದರು. ಆದರೂ ಇವರು ಧೈರ್ಯವಂತರು, ರಾಜರು, ಜಡ್ಜ್, ಕುಶಾಗ್ರ ಬುದ್ದಿವಂತರಿವರು. ಎಲ್ಲಾ ಅಹಂಕಾರಿಗಳು ಇವರ ಮುಂದೆ ಮಂಡಿಯೂರಿದ್ದಾರೆ. ಶಾಂತಿ ಹಾಗೂ ಸಮಾಧಾನದ ವಾತಾವರಣವಾಗಿದೆ ಇವರ ಆಡಳಿತಾವಧಿಯಲ್ಲಿ ಕಾಣಲು ಸಾಧ್ಯವಾಗುವುದು."
ಉಮರ್‌ಬಿನು ಅಬ್ದುಲ್ ಅಝೀಝ್ ರವರನ್ನು ಒತ್ತಾಯ ಪೂರ್ವಕವಾಗಿಯಾಗಿದೆ ರಾಜನನ್ನಾಗಿ ನೇಮಿಸುವುದು. ಒಂದು ದಿವಸ 'ಅಮೀರುಲ್ ಮುಅ್‌ಮಿನೀನ್' ಸುಲೈಮಾನ್ ರಾಜರು ಮರಣ ಹೊಂದುತ್ತಾರೆ. ಅವರ ದಫನು ಕಾರ್ಯದಲ್ಲಿ ಒಂದುಗೂಡಿ ಹಿಂದಿರುಗುವ ವೇಳೆ ಖಿಲಾಫತಿನ ವಾಹನ ತಮ್ಮ ಬಳಿ ತೆಗೆದುಕೊಂಡು ಬರುತ್ತಾರೆ.
ಉಮರ್ ಬಿನು ಅಬ್ದುಲ್ ಅಝೀಝರು ಕೇಳುತ್ತಾರೆ
" ಏನಾಗಿದೆ ಇದು..? ನನಗೂ ಇದಕ್ಕೂ ಏನು ಸಂಬಂಧ...? ನನ್ನ ಬಳಿಯಿಂದ ಇದನ್ನು ದೂರವಿರಿಸಿ. ನನಗೊಂದು ಸಣ್ಣ ಕುದುರೆಯಿದೆ. ಅದನ್ನು ಕರೆದುಕೊಂಡು ಬನ್ನಿ."ರಾಜನಿಗಿರುವ ಆಡಂಬರ, ಆಸ್ತಿಯನ್ನು ಮಾರಿ, ಮುಸ್ಲಿಮರ ಸಾರ್ವಜನಿಕ ನಿಧಿಗೆ ಕೊಡುವಂತೆ ಸೂಚಿಸುತ್ತಾರೆ. ತಮ್ಮ ಬಳಿಯಿರುವ ಕುದುರೆಯನ್ನು ಹತ್ತಿ ಹೊರಡಲಣಿಯಾದಾಗ ಸೆಕ್ಯುರಿಟಿಯೊಬ್ಬರು ತಮ್ಮ ಕಾವಲುಗಾರರಾಗಿ ಹೋಗುತ್ತಾರೆ. ಮಹಾನುಭಾವರು ಕೇಳುತ್ತಾರೆ;
"ನನಗೂ ನಿನಗೂ ಏನು ಸಂಬಂಧ. ನಾನು ಮುಸ್ಲಿಮರಲ್ಲಿ ಒಬ್ಬನಾಗಿರುವೆನು." ಭೂಮಿಯ ಅರ್ಧ ಆಸ್ತಿಯುಳ್ಳ ರಾಜರ ವಿನಯವನ್ನಾಗಿದೆ ನಮಗೆ ಇವರ ಚರಿತ್ರೆ ಕಲಿಸುತ್ತಿರುವುದು.
ಮಹಾನುಭಾವರು
ಸ್ಪೈನ್, ಮರಾಖಿಸ್, ಜಝಾಯಿರ್, ಟುನೀಷಿಯಾ, ಮಿಸ್ರ್, ಹಿಜಾಝ್, ನಜ್ʼದ್, ಯಮನ್, ಸಿರಿಯಾ, ಫೆಲಸ್ತೀನ್, ಜೋರ್ಡಾನ್, ಲೆಬನಾನ್, ಇರಾಖ್ ಅದಲ್ಲದೆ ಅನರಬಿ ದೇಶಗಳಾದ ಅಫ್ಘಾನ್, ಅರ್ಮೀನಿಯಾ, ಸಿಂದ್, ಸಮರ್ʼಖಂದ್ ಮುಂತಾದ ಹಲವು ರಾಜ್ಯಗಳ ರಾಜರಿವರು. ಮಹಾನುಭಾವರು ಕುದುರೆಯ ಮೇಲೇರಿ ಮಸೀದಿಯತ್ತ ತೆರಳಿ ಮಿಂಬರ್ ಬಳಿ ನಿಂತು;
"ಓ ಜನರೇ..! ನನ್ನ ಬಳಿ ಏನನ್ನೂ ಹೇಳದೆ, ಕೇಳದೆ ರಾಜ ಪಟ್ಟ ಒದಗಿ ಬಂದಿದೆ. ಅದರಿಂದ ನೀವು ನನ್ನನ್ನು 'ಬೈಅತ್ ಮಾಡಬೇಕೆಂದಿಲ್ಲ. ನೀವು ಬೇರೆ ಯಾರನ್ನಾದರು ಆರಿಸಿರಿ" ಎಂದು ಹೇಳುತ್ತಾರೆ.
ಜನರೆಲ್ಲರೂ ಅಟ್ಟಹಾಸವಿಡುತ್ತಾ "ನಾವೆಲ್ಲರೂ ತಮ್ಮನ್ನು ಆಯ್ಕೆ ಮಾಡಿಕೊಂಡಿದ್ದೇವೆ. ನಮಗೆ ನೀವು ಸಾಕು. ನಿಮ್ಮ ವಿಷಯದಲ್ಲಿ ನಾವು ತೃಪ್ತಿ ಹೊಂದಿರುವವರಾಗಿದ್ದೇವೆ." ಎಂದು ಹೇಳಲು ಶುರುವಿಡುತ್ತಾರೆ. ಉಮರ್ ಬಿನು ಅಬ್ದುಲ್ ಅಝೀಝ್ ರವರು ನೇರವಾಗಿ ಭೂಮಿಯ ಸ್ವರ್ಗವಾದ ಅರಮನೆಯತ್ತ ನಡೆಯುತ್ತಾರೆ.
ಅರಮನೆಯಲ್ಲಿದ್ದ ಎಲ್ಲಾ ಆಸ್ತಿ ಸಂಪತ್ತನ್ನು ಮಾರಿ ಮುಸ್ಲಿಮರ ಸಾರ್ವಜನಿಕ ಆಸ್ತಿಯಲ್ಲಿಡಲು ಹೇಳುತ್ತಾರೆ. ನಂತರ ಮಹಾನುಭಾವರು ಅರಮನೆ ಬಿಟ್ಟು ನೇರವಾಗಿ ಬಂದು ಸಣ್ಣ ಮನೆಯಲ್ಲಿ ನೆಲೆಸುತ್ತಾರೆ. ಹಲವು ಜನರು 'ಇನ್ನು ಮಹಾನುಭಾವರು ಇಬಾದತಿಲ್ಲಿ ತೊಡಗುವರು, ನಮಗಿನ್ನು ಏನೂ ಲಭಿಸಲ್ಲ' ಎಂದು ಅಭಿಪ್ರಾಯಿಸುತ್ತಾರೆ. ಆದರೆ ಅವರು ಭಾವಿಸಿದ ಹಾಗೆಯಾಗಲಿಲ್ಲ. ಖಲೀಫರು ಮನೆಯಲ್ಲೇ ಕೂತು ಎಲ್ಲವನ್ನೂ ನಿಯಂತ್ರಿಸುತ್ತಾರೆ. ಪೆನ್ನು ಮತ್ತು ಕಾಗದವನ್ನು ತೆಗೆದು ಕಳುಹಿಸಿ ಕೊಡಬೇಕಾದವರಿಗೆ ಪತ್ರವನ್ನು ಕಳುಹಿಸಿ ಕೊಡುತ್ತಾರೆ. ಸುಬುಹಿ ಸಮಯದಿಂದ ಳುಹಾದವರೆಗೆ ಕೆಲಸ ಮಾಡುತ್ತಾರೆ.
ಒಂದು ದಿವಸ ಕೆಲಸ ಮಾಡಿ ಆಯಾಸದಿಂದ ಸ್ವಲ್ಪ ನಿದ್ದೆ ಮಾಡೋಣವೆಂದು ಆಲೋಚಿಸಿ ನಿದ್ದೆ ಮಾಡಲು ಅಣಿಯಾಗುತ್ತಾರೆ. ಆಗ ಮಗ 'ಅಬ್ದುಲ್ ಮಲಿಕ್' ಹೇಳುತ್ತಾರೆ;
"ಯಾ ಅಮೀರಲ್ ಮುಅ್‌ಮಿನೀನ್
ತಾವು ಎಲ್ಲಿಗೆ ಹೋಗುತ್ತಿರುವುದು.? ನಿದ್ದೆ ಮಾಡಲು ಸಿದ್ಧವಾಗುತ್ತಿದ್ದೀರಾ..?"
"ಹೌದು ನಾನು ಸ್ವಲ್ಪ ನಿದ್ರಿಸುವೆನು."
"ನೀವು ಹೇಗೆ ನಿದ್ರಿಸುವಿರಿ..!ಎಷ್ಟೋ ಜನರು ನಿಮ್ಮನ್ನು ಕಾಯುತ್ತಿದ್ದಾರೆಯಲ್ವಾ.."
ಮಹಾನರು ಹೇಳುತ್ತಾರೆ;
"ನಾನು ಕಳೆದ ರಾತ್ರಿ ನಿದ್ದೆ ಬಿಟ್ಟು ಕೆಲಸ ಮಾಡಿರುವೆನು. ನನಗೆ ಸಾಧ್ಯವಿಲ್ಲ. ಳುಹ್ರ್ ನಮಾಝ್ ಮಾಡಿದ ನಂತರ ಬಂದು ಜನರ ಅಗತ್ಯತೆಯನ್ನು ನೆರವೇರಿಸು ಕೊಡುತ್ತೇನೆ."
ಆಗ ಮಗ ಅಬ್ದುಲ್ ಮಲಿಕ್ ಕೇಳುತ್ತಾನೆ; "ಓ...ಅಮೀರುಲ್ ಮುಅ್‌ಮಿನೀನ್ ನೀವು ಳುಹ್‌ರ್ ವರೆಗೆ ಜೀವಿಸುವಿರೆಂಬ ಯಾವ ಗ್ಯಾರಂಟಿಯಾಗಿದೆ ತಮಗಿರುವುದು..?"
ತಂದೆ ಉಮರಿಬ್ನು ಅಬ್ದುಲ್ ಅಝೀಝ್ ಮಗನನ್ನು ತಬ್ಬಿ ಹಿಡಿದು " ನನ್ನ ದೀನಿನ ಮೇಲೆ ಸಹಾಯ ಮಾಡುವ ಮಗುವನ್ನು ಅಲ್ಲಾಹನು ನನಗೆ ಕರುಣಿಸಿದ್ದಾನೆ." ಎಂದು ಆಲೋಚಿಸುತ್ತಾ ಆಹ್ಲಾದಿಸುತ್ತಾರೆ. ಪ್ರಜೆಗಳ ಹಕ್ಕಿನಲ್ಲಿ ಕೊರತೆಯನ್ನು ಮಾಡದೆ ವಿಶಾಲತೆಯನ್ನು ತೋರಿದ ರಾಜರ ಮನೆಯಾಗಿದೆ ಇದು.
ಸಮರ್‌ಖಂದಿನಿಂದ ಬಂದ ಸೇವಕ ನೇರ ರಾಜರ ಬಳಿ ಬರುತ್ತಾನೆ. ಬರುವಾಗ ಶಬ್ದವೊಂದನ್ನು ಕೇಳುತ್ತದೆ. ಎರಡು ಸಣ್ಣ ಮಕ್ಕಳೊಂದಿಗೆ ಮಹಿಳೆಯೊಬ್ಬಳು ರಾಜರ ಬಳಿ ವಿಧಿಯನ್ನರುಸುತ್ತಾ ನಿಂತಿದ್ದಾರೆ. ಆಟಾಡುವಾಗ ತಲೆಗೆ ಸಣ್ಣಪುಟ್ಟ ಏಟಾದ ಕಾರಣ ಹೆಂಗಸು ರಾಜರ ಬಳಿ ನ್ಯಾಯಕ್ಕಾಗಿ ನಿಂತಿದ್ದಾಳೆ.
"ನನ್ನ ಮಗನಿಗೆ ನಿಮ್ಮ ಮಗನು ಹೊಡೆದಿದ್ದಾನೆ, ನನಗೆ ನ್ಯಾಯ ಬೇಕು' ಎಂದು ಹೇಳುತ್ತಾಳೆ.
ಸೇವಕ ಭಾವಿಸುತ್ತಾನೆ 'ರಾಜರ ಮಗನ ಕಾರಣದಿಂದ ಏಟಾಗಿದ್ದರೂ ಕೇಸನ್ನು ಅವರ ಮೇಲೆಯೇ ಕಟ್ಟಿ ಹಾಕುವರು' ಅವತ್ತಿನ ರಾಜರ ವಿಧಿಯೂ ಕೂಡ ಈ ತರಹದ್ದಾಗಿತ್ತು. ಇದರೆ ಇಲ್ಲಿ ಉಮರ್ ಬಿನು ಅಬ್ದುಲ್ ಅಝೀಝರ ಮಗನಿಂದ ನೋವುಂಟಾದದ್ದಾಗಿದ್ದರೂ ಒಂದು ತಪ್ಪು ಮಾಡದ ಆ ಮಗುವಿನ ವಿರುಧ್ಧವಾಗಿ ತೀರ್ಪು ಬರಬಹುದೆಂದು, ಅವರನ್ನು ಕೊಲ್ಲುವರೆಂದು
ಭಾವಿಸಿಕೊಂಡೆ.' ಆದರೆ ತೀರ್ಪು ನಾನು ಭಾವಿಸಿದ್ದಕ್ಕಿಂತ ವಿರುದ್ಧವಾಗಿತ್ತು.
ಅಮೀರುಲ್ ಮುಅ್‌ಮಿನೀನ್
ತಾಯಿಯೊಂದಿಗೆ ಕೇಳುತ್ತಾರೆ;
"ಈ ಮಗುವಿಗೆ ಏನಾದರು ಅಗತ್ಯವಿದೆಯೇ..?
ಮಹಿಳೆ "ಹಾ..ನಾವು ಬಡವರು. ನಮಗೆ ಏನಾದರು ಕೊಡುವಿರಾ..?"
ಹಾಗೆ ಮಗುವಿಗೆ ನಿಶ್ಚಿತವಾದ ಹಣವನ್ನು ಕೊಟ್ಟು ಸಂತೋಷಿಸಿ ಆಕೆಯನ್ನೂ ಮಗುವನ್ನೂ ರಾಜರು ಕಳುಹಿಸಿ ಕೊಡುತ್ತಾರೆ.
ಮಹಿಳೆ ಅಲ್ಲಿಂದ ತೆರಳುವಾಗ ಅವರಿಗಾಗಿ ಪ್ರಾರ್ಥಿಸುತ್ತಾಳೆ. ಸಮರ್‌ಖಂದಿನಿಂದ ಬಂದ
ಸೇವಕ ಈ ಸನ್ನಿವೇಷವನ್ನು ಕಂಡು ಆಶ್ಚರ್ಯನಾಗುತ್ತಾನೆ.
ಖಲೀಫಾ ಈ ಸೇವಕನನ್ನು ನೋಡಿ ಹತ್ತಿರ ಕರೆದು ವಿಷಯವೇನೆಂದು ಕೇಳುತ್ತಾರೆ.
ಸೇವಕ ಹೇಳುತ್ತಾನೆ "ಸಮರ್‌ಖಂದಿಗೆ ಖುತೈಬತ್ ಬಿನು ಮುಸ್ಲಿಂ ಮತ್ತು ಸಂಘ ಇಸ್ಲಾಮಿಗೆ ಕರೆಯದೆ ನೇರವಾಗಿ ದಬ್ಬಾಳಿಕೆ ಮಾಡಿ ಆಡಳಿತ ನಡೆಸುತ್ತಿದ್ದಾರೆ." ಇದಾಗಿದೆ ನಮ್ಮ ಸಮಸ್ಯೆ.
ಖಲೀಫರು ಹೇಳುತ್ತಾರೆ;"ನಮ್ಮ ನಬಿ ಪ್ರವಾದಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮರು ಅಕ್ರಮವನ್ನು ನಮಗೆ ಕಲಿಸಿಕೊಡಲಿಲ್ಲ. ಮುಸ್ಲಿಮರಿಗೂ ಅಮುಸ್ಲಿಮರಿಗೂ ನೀತಿಯನ್ನು ತೋರಬೇಕು." ಎಂದು ಹೇಳಿ ಪೆನ್ನು, ಕಾಗದ ತೆಗೆದು ಪತ್ರವನ್ನು ಬರೆದು ಸೇವಕನ ಕೈಗಿಟ್ಟು ಸೇನಾನಿ ಖುತೈಬತ್ ಬಿನು ಮುಸ್ಲಿಂರವರಿಗೆ ಕೊಡುವಂತೆ ಸೂಚಿಸುತ್ತಾರೆ. ಸಮರ್‌ಖಂದಿನ ಸೇವಕ ಮರಳಿ ತನ್ನ ಊರಿಗೆ ಹೆಜ್ಜೆ ಹಾಕುತ್ತಾನೆ. ಮರಳಿ ಬರುವಾಗ ಹೋದ ಸೇವಕ ಅಲ್ಲಿಯ ನೀತಿಯುತ ಆಡಳಿತ, ಇಸ್ಲಾಮಿನ ಸೌಂದರ್ಯವನ್ನು ಕಂಡು ಸಂಪೂರ್ಣ ಬದಲಾಗಿದ್ದ.
-ಮುಂದುವರಿಯುವುದು...
Comments