ವಿಶ್ವ ಮುಸಲ್ಮಾನರು ನಮಾಜು ನಿರ್ವಹಿಸಲು ಅಭಿಮುಖವಾಗಿ ನಿಲ್ಲಲು ಉಪಯೋಗಿಸುವ ಕೇಂದ್ರವನ್ನಾಗಿದೆ ಖಿಬ್ಲಃ ಎಂದು ಹೇಳುವುದು.
ಪವಿತ್ರ ಮಕ್ಕಾದ ಮಸ್ಜಿದುಲ್ ಹರಾಮಿನ ಒಳ ಇರುವ ಪವಿತ್ರ ಕಅಬಾ ಆಗಿದೆ ಮುಸ್ಲಿಮರ ಖಿಬ್ಲಃ. ದಿಕ್ಕು ಎಂಬುದರ ಅರಬಿ ಪದವಾಗಿದೆ ಖಿಬ್ಲಃ ( قبلة ). ನಮಾಜು ಮಾತ್ರವಲ್ಲ ಮುಸ್ಲಿಮನ ದೈನಂದಿನ ಬದುಕಿನ ವಿವಿಧ ಕಾರ್ಯ ಚಟುವಟಿಕೆಯಲ್ಲಿ ಖಿಬ್ಲಕ್ಕೆ ಪ್ರಾಧಾನ್ಯತೆ ಇದೆ. ನಿದ್ರಿಸುವಾಗ ಖಿಬ್ಲಾಭಿಮುಖವಾಗಿ ಮಲಗುವುದು ಉತ್ತಮವಾಗಿದೆ. ಮುಸ್ಲಿಮರ ಮ್ರತ ಶರೀರ ದಫನ ಮಾಡುವುದು ಖಿಬ್ಲಃಕ್ಕೆ ನೇರ ಮುಖ ಬರುವ ರೀತಿಯಲ್ಲಾಗಿದೆ.
ಸೂರ್ಯನ ಉತ್ತರ, ದಕ್ಷಿಣ ಯಾನ ನಿಮಿತ್ತ ವರ್ಷದಲ್ಲಿ ಎರಡು ಬಾರಿಯಾಗಿದೆ ಸೂರ್ಯನು ಕಅಬಾದ ನೇರ ಮೇಲಿಂದ ಹಾದು ಹೋಗುವುದು. ಇದರ ಪ್ರಥಮ ಸಂಚಾರವಾಗಿದೆ ಮೇ 27 ಮಕ್ಕಾದ ಸಮಯ ಮಧ್ಯಾಹ್ನ 12 - 18 ಕ್ಕೆ ( ಭಾರತೀಯ ಕಾಲಮಾನ 2-48 Pm ಗೆ ) ಸಂಭವಿಸುವುದು. ಮಗದೊಂದು ಸಂಚಾರ ಜುಲೈ 16 ರಂದು ಮಕ್ಕಾದ ಸಮಯ ಮಧ್ಯಾಹ್ನ 12-27 ಕ್ಕೆ ( ಭಾರತೀಯ ಕಾಲಮಾನ 2-57 Pm ಗೆ ) ಸಂಭವಿಸುವುದು.
ಈ ಸಮಯದಲ್ಲಿ ಕಅಬಾ, ಸುತ್ತಮುತ್ತಳ ಯಾವುದೇ ವಸ್ತುವಿಗೂ ನೆರಳಿರುವುದಿಲ್ಲ. ಮಕ್ಕಾದ ಪೂರ್ವಜರು ಈ ಸಮಯದ ಕುರಿತು ಹೇಳುತ್ತಿದ್ದದ್ದು "ನೆರಳನ್ನು ಪಾದರಕ್ಷೆಯಾಗಿ ಧರಿಸುವ ದಿನ" ಎಂದಾಗಿದೆ.
ಪ್ರಸ್ತುತ ಸಮಯದಲ್ಲಿ ಸೂರ್ಯನು ಸಂಪೂರ್ಣವಾಗಿ ಕಅಬಾದ ನೇರ ಮೇಲೆ ನೆಲೆಗೊಳ್ಳುವನು.
ಇಂತಹ ಸಂದರ್ಭಗಳಲ್ಲಿ ನಮಗೆ ಆಧುನಿಕ ತಂತ್ರಜ್ಞಾನಗಳು ಯಾವುದನ್ನೂ ಬಳಸದೆ ಕಅಬಾದ ದಿಕ್ಕು ಗ್ರಹಿಸಲು ಸಾಧ್ಯ. ನಮ್ಮ ಮನೆ, ಕಛೇರಿ, ಮಸೀದಿಗಳಲ್ಲಿ ಇದನ್ನುಪಯೋಗಿಸಿ ಖಿಬ್ಲಃದ ದಿಕ್ಕು ಸಂಬಂಧವಾದ ಸಂಶಯ ನಿವಾರಣೆ ನಡೆಸಲು ಇದು ಫಲಪ್ರದವಾಗಬಹುದು.
( ನಾವು ಮಾಡಬೇಕಾದುದಿಷ್ಟೇ )
ನಮಗೆ ನೇರವಾಗಿ ಸೂರ್ಯನನ್ನು ವೀಕ್ಷಿಸಿ ಖಿಬ್ಲ ನೋಡುವುದು ಪ್ರಯಾಸಕರವಾದುದರಿಂದ ಓರೆಕೋರೆಯಿಲ್ಲದ ನೇರವಾದ ಒಂದು ಚಿಕ್ಕ ಕೋಲನ್ನು ತೆಗೆದು ಸೂರ್ಯನ ಪ್ರಕಾಶ ಬೀಳುವ ಜಾಗದಲ್ಲಿ ನೇರ ಕುತ್ತವಾಗಿ ನಾಟಬೇಕು. ಮೇಲೆ ತಿಳಿಸಿದ ಸಮಯ ಆಗುವಾಗ ಆ ಕೋಲಿನ ನೆರಳು ಯಾವ ಭಾಗಕ್ಕೆ ಬೀಳುತ್ತದೋ, ಅದರ ನೇರ ವಿರುದ್ಧವಾಗಿರುತ್ತದೆ ಖಿಬ್ಲಃದ ದಿಕ್ಕು.
ಹಿದಾಯತುಲ್ ಅವ್ಖಾತ್ ವಸಮೂತುಲ್ ಖಿಬ್ಲ ಎಂಬ ಗ್ರಂಥದ 60,61 ನೇ ಪುಟಗಳಲ್ಲಿ ಮೇ 28, ಜುಲೈ 17 ರಂದಾಗಿದೆ ಎಂದೂ ಇದೆ.
ಏನೇ ಆದರೂ ಪ್ರಸ್ತುತ ದಿನಕ್ಕಿಂತ ಒಂದು ದಿನ ಆಚೀಚೆಯಾದರೂ ಪ್ರಾಬ್ಲಂ ಇಲ್ಲ.
*ಕನ್ನಡಕ್ಕೆ : ನವಾಝ್ ಸಖಾಫಿ ಅಲ್ ಅಮ್ಜದಿ, ಅಕ್ಕರೆಕೆರೆ ಉಳ್ಳಾಲ*
ಸೌದಿಯ ಜಿದ್ದಃ ಕೇಂದ್ರವಾಗಿ ಕಾರ್ಯಾಚರಿಸುತ್ತಿರುವ ಖಗೋಳ ಶಾಸ್ತ್ರ ವಿಭಾಗ ಇದಕ್ಕೆ ಸಂಬಂಧಿಸಿ ಟ್ವೀಟ್ ಮಾಡಿದ್ದನ್ನು ಕಾಣಬಹುದು.
الشمس تتعامد غداً على الكعبة المشرفة
المصدر: البيان الإلكتروني التاريخ: 26 مايو 2020
الشمس تتعامد غداً على الكعبة المشرفة
,
كشفت الجمعية الفلكية بجدة أن الشمس ستتعامد غدا على الكعبة المشرفة وقت الظهر، وسيختفي ظل الكعبة تماماً ويصبح ظل الزوال صفراً، وهو التعامد الأول من اثنين هذه السنة.
وقال الجمعية الفلكية عبر حسابها على تويتر: "تشهد سماء مكة المكرمة يوم الأربعاء 4 شوال 1441 الموافق 27 مايو 2020 تعامد الشمس على الكعبة المشرفة وقت الظهر بالمسجد الحرام الساعة 12:18 ظهراً وتكون الشمس على ارتفاع 90 درجة وسيختفي ظل الكعبة تماماً ويصبح ظل الزوال صفراً وهو التعامد الأول من اثنين هذه السنة".

Comments