*بسم الله الرحمن الرحيم الحمد لله رب العالمين والصلاة والسلام على سيدنا محمد وعلى آله وصحبه أجمعين*
🌸🌸🌸🌸🌸🌸🌸🌸🌸
ಈದ್ ನಮಾಜಿನ ರೂಪ
*ಈದುಲ್ ಫಿತ್ರ್(ಚೆರಿಯಪೆರ್ನಾಲ್) ಸುನ್ನತ್ ನಮಾಜ್ ಎರಡು ರಕ್ಅತ್( ಇಮಾಮಾಗಿ- ಇಮಾಗಿದ್ದಲ್ಲಿ-ಅಥವಾ- ಇಮಾಮಿನೊಂದಿಗೆ-ಮಅ್ಮೂಮ್ ಆಗಿದ್ದಲ್ಲಿ) ಅಲ್ಲಾಹನಿಗಾಗಿ ನಾನು ನಿರ್ವಹಿಸುತ್ತೇನೆ ಎಂಬ ನಿಯತ್ತಿ ನೊಂದಿಗೆ ತಕ್ಬೀರ್ ಹೇಳಿ ನಮಾಝ್ ಪ್ರಾರಂಭಿಸಿ,ವಜ್ಜಹ್ತು...ಓದಿದ ಬಳಿಕ ಏಳು ತಕ್ಬೀರ್ ಹೇಳಬೇಕು.ಈ ತಕ್ಬೀರ್ ಗಳ ಎಡೆಯಲ್ಲಿ,*
*سُبْحَانَ اللَّهِ وَالْحَمْدُ لِلَّهِ ولا اله الا الله والله اكبر وَلاَ حَوْلَ وَلاَ قُوًّةَ اِلاَّ باِللَّهِ الْعَلِيِّ الْعَظِيمْ*
*ಎಂದು ನುಡಿಯಬೇಕು. ಏಳನೇ ತಕ್ಬೀರ್ ನಂತರ ಅಊದ್ಸು.. ಓದಿ ಫಾತಿಹಾ ಮತ್ತು ಸೂರಾವನ್ನು ಓದಬೇಕು. (ಸಬ್ಬಿಹಿಸ್ಮ.... ಓದಿದರೆ ಉತ್ತಮ). ಆಮೇಲೆ*
*ಎರಡನೇ ರಕ್ಅತ್ ಗೆ ಎದ್ದು ನಿಲ್ಲುವ ತಕ್ಬೀರ್ ಹೇಳಿದ ನಂತರ ಐದು ತಕ್ಬೀರ್ ಹೇಳಬೇಕು. ಪ್ರತಿ ತಕ್ಬೀರ್ ಗಳ ಎಡೆಯಲ್ಲಿ,*
*سُبْحَانَ اللَّهِ وَالْحَمْدُ لِلَّهِ ولا اله الا الله والله اكبر وَلاَ حَوْلَ وَلاَ قُوًّةَ اِلاَّ باِللَّهِ الْعَلِيِّ الْعَظِيمْ*
*ಎಂದು ನುಡಿಯಬೇಕು.*
*ಐದನೇ ತಕ್ಬೀರ್ ನಂತರ ಫಾತಿಹಾ ಮತ್ತು ಸೂರ ಓದುವುದು.(ಹಲ್ ಅತಾಕ ಓದಿದರೆ ಉತ್ತಮ.)*
*ಆಮೇಲೆ ರಕ್ಅತ್ ಪೂರ್ಣಗೊಳಿಸಿ ನಮಾಝ್ ನಿಂದ ವಿರಾಮ ಹೊಂದಿದ ನಂತರ ಎರಡು ಖುತ್ಬ ಓದುವುದು ಸುನ್ನತಿದೆ.*
*ಒಂದನೇ ಖುತ್ಬ:ದ ಪ್ರಾರಂಭದಲ್ಲಿ 9 ಹಾಗೂ ಎರಡನೇ ಖುತ್ಬ:ದ ಪ್ರಾರಂಭದಲ್ಲಿ 7 ತಕ್ಬೀರ್ ಗಳನ್ನು ಹೇಳುವುದು.*
*ತಕ್ಬೀರನ್ನು ಈ ಕೆಳಗಿನಂತೆ ಹೇಳಬೇಕು.*
*(الله أكبر ،الله أكبر ،الله أكبر الله أكبر، الله أكبر، الله أكبر، الله أكبر، الله أكبر، الله أكبر)*
*(الله أكبر الله أكبر الله أكبر الله أكبر الله أكبر الله أكبر الله أكبر)*
*ಖುತ್ಬ: ಓದುವಾಗ ಮಿಂಬರ್ ಅಥವಾ ಎತ್ತರದ ವಸ್ತುವಿನ ಮೇಲೆ ನಿಂತು ಕೊಂಡಾಗಿರುವುದು ಖುತ್ಬಾದ ಸುನ್ನತ್.*
•••••••••••••••••••••••••••••••••••••••
*ಫಿತ್ರ್ ಝಕಾತ್*
°°°°°°°°°°°°°°°°°°°°°°°°°
*ಈದುಲ್ ಫಿತ್ರ್ ದಿನ ಮತ್ತು ಅದರ ರಾತ್ರಿ (ಹಿಂದಿನ ರಾತ್ರಿ), ತನಗೆ ಮತ್ತು ತಾನು ಖರ್ಚು ನೋಡಿ ಕೊಳ್ಳಲು ಜವಾಬ್ದಾರಿ ಯಿರುವ ಪತ್ನಿ ಮಕ್ಕಳು ತಂದೆ ತಾಯಿ ಇವರೆಲ್ಲರ ಆಹಾರ, ವಸ್ತ್ರ, ಮತ್ತು ವಾಸ ಸ್ಥಳದ ಖರ್ಚು ಹಾಗೂ ಸಾಲವಿಲ್ಲದೆ ಮಿಕ್ಕಿ ಉಳಿದರೆ ಫಿತ್ರ್ ಝಕಾತ್ ನೀಡುವುದು ಖಡ್ಡಾಯ.*
*ಮನೆಯ ಯಜಮಾನ ಮೇಲೆ ವಿವರಿಸಿದ,ತನ್ನೆಲ್ಲ ಆಶ್ರಿತರ -ತಲೆಯೊಂದಕ್ಕೆ ಒಂದೊಂದು *صاع* *(ಸ್ವಾಅ್) 3ಲೀಟರ್ 200 ಮಿ.ಲೀ- ಎಂಬಂತೆ ಊರಿನ ಮುಖ್ಯ ಆಹಾರ ಧಾನ್ಯ ನೀಡಬೇಕು.ಉದಾ:- ಹತ್ತು ಜನರಿದ್ದರೆ 32 ಲೀ.*
*ಇಲ್ಲಿ ಸ್ವಾಅ್, ಅಳತೆ ಪಾತ್ರೆಯಾಗಿದ್ದು,ಅದರ ತೂಕವು ನಿಖರವಾಗಿ ಹೇಳುವಂತಿಲ್ಲ.ವಿವಿಧ ಆಹಾರ ಧಾನ್ಯಗಳ ಭಾರಕ್ಕನುಸಾರವಾಗಿ ತೂಕದಲ್ಲಿ ವ್ಯತ್ಯಾಸ ಬರಬಹುದು.*
*ಆದ್ದರಿಂದ ಫಿತ್ರ್ ಝಕಾತ್ ಒಂದು ಸ್ವಾಅ್ 2 ಕಿಲೋ 600 ಗ್ರಾಂ ಎಂದು ನಿಗದಿಪಡಿಸದೆ 3 ಲೀ 200 ಮಿ.ಲೀ ಎಂಬ ಅಳತೆಯನ್ನು ಅನುಸರಿಸುವುದು ಉತ್ತಮ.*
*ಝಕಾತ್ ನ ಹಕ್ಕುದಾರರಾದ ಎಂಟು ವಿಭಾಗ ಗಳಲ್ಲಿ ನಮ್ಮ ನಾಡುಗಳನಲ್ಲಿ ಕಂಡು ಬರುವ ಐದು ಪಂಗಡಗಳಿಗೆ ಝಕಾತ್ ನೀಡಬೇಕು.*
*1.ಅತೀ ಬಡವರು.*
*2.ಬಡವರು.*
*3.ಹೊಸದಾಗಿ ದೀನಿಗೆ ಬಂದವರು.*
*4.ಸಾಲಗಾರರು.*
*5.ಯಾತ್ರಿಕರು.*
*ಮೇಲೆ ವಿವರಿಸಿದ ಪ್ರತೀ ಪಂಗಡದಲ್ಲಿರುವ ಮೂರುಜನರಿಗಗಾದರೂ ನೀಡ ಬೇಕೆಂದು ನಿಯಮ. ಆದರೆ, ಇವರೆಲ್ಲರಿಗೂ ನೀಡಲು ಆಹಾರ ಧಾನ್ಯಗಳು ಸಾಕಾಗದಿದ್ದರೆ, ಒಂದೇ ಪಂಗಡದಲ್ಲಿರುವ ಮೂರು ಜನರಿಗಾದರೂ ನೀಡಬೇಕು.*
*ಈದುಲ್ ಫಿತ್ರ್ ನ ರಾತ್ರಿ(ಹಿಂದಿನ ರಾತ್ರಿ ) ಸೂರ್ಯಾಸ್ತದ ಹೊತ್ತಿಗೆ ಝಕಾತುಲ್ ಫಿತ್ರ್ ಖಡ್ಡಾಯವಾಗುತ್ತದೆ. ಆ ವೇಳೆಯಲ್ಲಿ ಬದುಕಿರುವ ಎಲ್ಲರ ಫಿತ್ರ್ ಝಕಾತನ್ನು ನೀಡಬೇಕು.ಅಂದರೆ ಸೂರ್ಯಾಸ್ತದ ನಂತರ ಹುಟ್ಟಿದ ಮಗುವಿನ ಮತ್ತು ಸೂರ್ಯಾಸ್ತದ ಮೊದಲು ಮರಣ ಹೊಂದಿದವರ ಫಿತ್ರ್ ಝಕಾತ್ ನೀಡಬೇಕೆಂದಿಲ್ಲ. ರಮಳಾನ್ ತಿಂಗಳ ಪ್ರಥಮ ದಿನದಿಂದಲೇ ಫಿತ್ರ್ ಝಕಾತ್ ನೀಡಬಹುದು ಎಂದು ಶಾಫಿಈ ಮಝ್ಹಬ್. ಈದ್ ನ ಎರಡು ದಿನ ಮುಂಚೆ ನೀಡಬಹುದು ಎಂಬುದು ಹೆಚ್ಚಿನ ವಿದ್ವಾಂಸರ ಒಮ್ಮತಾಭಿಪ್ರಾಯ. ಆದರೆ, ಈದ್ ನ ದಿನ ಬೆಳಿಗ್ಗೆ ಈದ್ ನಮಾಝ್ ಗೆ ಮುಂಚಿತವಾಗಿ ನೀಡುವುದು ಅತ್ಯುತ್ತಮ.*
*ಈದ್ ದಿನ ರಾತ್ರಿ ಮತ್ತು ಹಗಲು ಇಮಾಮ್, ಪೆರ್ನಾಲ್ ನಮಾಝ್ ಪ್ರಾರಂಭಿಸುವ ತನಕ ನಿರಂತರವಾಗಿ ತಕ್ಬೀರ್ ಮೊಳಗಿಸುವುದು ಸುನ್ನತಿದೆ.*
*ತಕ್ಬೀರ್ ನ ಪದಗಳು ಈ ಕೆಳಗಿನಂತಿವೆ.*
*الله أكبر الله أكبر الله أكبر*
*لا إله إلا الله والله أكبر. الله أكبر ولله الحمد.*
*الله أكبر كبيرا والحمد لله كثيرا وسبحان الله بكرة وأصيلا*
*لا إله إلا الله ولا نعبد إلا إياه مخلصين له الدين ولو كره الكافرون*
*لا إله إلا الله وحده صدق وعده ونصر عبده[وأعز جنده] وهزم الأحزاب وحده لا إله إلا الله والله أكبر*
*ತಕ್ಬೀರ್ ಗಳ ನಂತರ ಪ್ರವಾದಿ ﷺ ರ ಮೇಲೆ ಸ್ವಲಾತ್ ಹೇಳುವುದು ಉತ್ತಮ. ಅದು ಈ ರೀತಿ ಹೇಳಬಹುದು*
*اللهم صل على سيدنا محمد*
*وعلى آل سيدنا محمد*
*وعلى أصحاب سيدنا محمد*
*وعلى انصار سيدنا محمد*
*وعلى أزواج سيدنا محمد*
*وعلى ذرية سيدنا محمد*
*وسلم تسليما كثيرا*
*تحفة مع الشرواني ٣-٥٤*
••••••••••••••••••••••••••••••••••••
🌙🌙🌙🌙🌙🌙🌙🌙🌙🌙
*ಈ ಈದುಲ್ ಫಿತ್ರ್ ಹಬ್ಬವು, ನಮ್ಮೂರಿಗೆ ಮತ್ತು ಪ್ರಪಂಚದ ಉದ್ದಗಲಕ್ಕೂ ಸಮೃದ್ಧಿ, ಐಶ್ವರ್ಯ, ಶಾಂತಿ ಸಮಾಧಾನ ಮತ್ತು ಜಗತ್ತನ್ನು ಕಾಡುತ್ತಿರುವ ಮಾರಕ ರೋಗದಿಂದ ವಿಮುಕ್ತಿಗೆ ನಾಂದಿ ಯಾಗಲೆಂದು ಪ್ರಾರ್ಥಿಸುತ್ತಾ ಹಾರೈಸುತ್ತಾ, ಸರ್ವರಿಗೂ ಮನದುಂಬಿದ ಈದುಲ್ ಫಿತ್ರ್ ಶುಭಾಶಯಗಳು*
°°°°°°°°°°°°°°°°°°°°°°°°°°°°°°
🌹🌹🌹🌹🌹🌹🌹🌹🌹
◻️◻️◻️◻️◻️◻️◻️◻️◻️
🖊️ *Muhammd Shihabuddeen Ashrfi Kamil Saqafi Ullal*
🌳Ahlul Haq🌳
23-5-2020
Comments