ಬಡತನ ಅಲ್ಲಾಹನ ಅನುಗ್ರಹ
__________________________
🎙 ಉಸ್ತಾದ್ ಶರೀಫ್ ಸಖಾಫಿ ಮಾಣಿ
✍ ಆಸಿಫ್ ಆಚಂಗಿ
__________________________
👁🗨 ಒಮ್ಮೆ ಉಮರ್ ರಲಿಯಲ್ಲಾಹು ಅನ್ಹುರವರು ನಬಿﷺಮರ ಬಳಿ ಬಂದರು. ನಬಿವರ್ಯﷺಮರು ಮೇಲು ಹೊದಿಕೆಯಿಲ್ಲದೆ ಕೇವಲ ಖರ್ಜೂರದ ಗರಿಯಲ್ಲಿ ಮಲಗಿದ್ದರಿಂದ ಅದರ ಕಡ್ಡಿಗಳು ಪ್ರವಾದಿವರ್ಯ ﷺರ ಮೈಮೇಲೆ ಗುರುತನ್ನು ಮಾಡಿದ್ದವು.
ಒಂದು ದಿಂಬು ಮಾತ್ರ ಅವರೊಂದಿಗಿತ್ತು. ಅದಕ್ಕೆ ಒರಗಿ ಕುಳಿತುಕೊಳ್ಳುತ್ತಿದ್ದರು. ಉಮರ್ ರಲಿಯಲ್ಲಾಹು ಅನ್ಹುರವರು ಕೇಳಿದರು. 'ಓ ಪ್ರವಾದಿﷺಮರೇ ರೋಮ್ ಹಾಗೂ ಫ್ರಾನ್ಸ್ ನವರು ಮುಸ್ಲಿಮರಲ್ಲ. ಅವರೆಲ್ಲರು ದೊಡ್ಡ ದೊಡ್ಡ ಶ್ರೀಮಂತರು. ಅದೇ ರೀತಿ ಈ ಸಮುದಾಯದವರು ದೊಡ್ಡ ದೊಡ್ಡ ಶ್ರೀಮಂತರಾಗಲು ಪ್ರಾರ್ಥಿಸಿ ಎಂದರು.
'ಉಮರ್ ರವರೇ ನೀವು ಅವರಂತಾಗಲು ಇಚ್ಚಿಸುವಿರಾ..!? ಅವರಿಗೆ ಭೂಲೋಕವು ನಮಗೆ ಪರಲೋಕವನ್ನು ನೀಡುವುದಾಗಿದೆ ಅಲ್ಲಾಹನ ತೀರ್ಮಾನ'. ಅದರಲ್ಲಿ ನಿಮಗೆ ತೃಪ್ತಿಯಿಲ್ಲವೇ..?' ಎಂದು ಪ್ರವಾದಿವರ್ಯ ﷺರು ಕೇಳಿದರು.
👁🗨 ಸತ್ಯವಿಶ್ವಾಸಿಗೆ ಸಂಪತ್ತು ಸೌಕರ್ಯಗಳು ದೊರೆಯುತ್ತಿಲ್ಲ ಎಂಬುವುದು ಅಲ್ಲಾಹನು ಆತನಿಗೆ ನೀಡಿದ ದೊಡ್ಡ ಅನುಗ್ರಹವಾಗಿದೆ.
👁🗨 ಮನುಷ್ಯನಿಗೆ ಸಂಪತ್ತು ಸೌಕರ್ಯಗಳು ಲಭಿಸುವುದರಿಂದ ಅಲ್ಲಾಹನನ್ನು ಮರೆತು ಅಕ್ರಮ ಮತ್ತು ಅನಗತ್ಯ ಕಾರ್ಯಗಳಲ್ಲಿ, ತಪ್ಪುಗಳಲ್ಲಿ ಭಾಗಿಯಾಗುತ್ತಾನೆ.
👁🗨 ಮನುಷ್ಯನು ಮಾಡಿದ ತಪ್ಪುಗಳಿಗೆ ಪಾಠ ಕಲಿಸಲು ಹಾಗೂ ಸಣ್ಣ ಖರ್ಚಿನಲ್ಲಿ ಜೀವನ ಸಾಗಿಸಬಹುದು ಎಂಬುದನ್ನು ಕಲಿಸಲಿಕ್ಕಾಗಿದೆ ಈ ಲಾಕ್ ಡೌನ್.
👁🗨 ನಬಿﷺಮರು ಮುಆದ್ ಬಿನ್ ಜಬಲ್ ರಲಿಯಲ್ಲಾಹು ಅನ್ಹುರವರನ್ನು ಪ್ರಭೋಧನೆ ನಿಮಿತ್ತ ಯಮನಿಗೆ ಕಳುಹಿಸುವ ಸಂದರ್ಭದಲ್ಲಿ 'ಆಡಂಬರದ ಜೀವನ ಹಾಗೂ ಅಹಂಭಾವಧ ನಡತೆಯನ್ನು ಸೂಕ್ಷಿಸಬೇಕು' ಎಂದು ಉಪದೇಶಿಸಿದ್ದರು.
👁🗨 ಅಲ್ಲಾಹನು ಆಡಂಬರದಿಂದ ಜೀವಿಸುವವನನ್ನು ಇಷ್ಟಪಡುವವನಲ್ಲ. ಎಂದು ಇಬ್ನು ಮಾಜ ರಲಿಯಲ್ಲಾಹು ಅನ್ಹುರವರು ನಿವೇದಿಸಿದ ಹದೀಸಿನಲ್ಲಿದೆ.
👁🗨 ಆಡಂಬರವನ್ನು ಆಶಿಸದೆ ನಮ್ಮಲ್ಲಿರುವ ಸಂಪತ್ತಿನಿಂದ ತೃಪ್ತಿಪಟ್ಟು ಜೀವನ ನಡೆಸಬೇಕು.
👁🗨 ಪ್ರವಾದಿವರ್ಯ ﷺರು ಹೇಳುತ್ತಾರೆ.
من جاع أو احتاج فكتمه الناس كان حقا على الله عزَّ وجلَّ أن يرزقه رزق سنة من حلال
'ಒಬ್ಬಾತನಿಗೆ ಹಸಿವು ಹಾಗೂ ಮತ್ತಿತ್ತರ ಆವಶ್ಯಗಳಿದ್ದರೂ ಜನರೆಡೆಯಲ್ಲಿ ಗುಪ್ತವಾಗಿಸಿದರೆ, ಆತನಿಗೆ ಒಂದು ವರ್ಷದ ಹಲಾಲಾದ ಸಂಪತ್ತನ್ನು ನೀಡಲು ಅಲ್ಲಾಹನಿಗೆ ಕಡ್ಡಾಯವಾಗಿದೆ'.
👁🗨ಇಬ್ನು ಮಾಜ ರಲಿಯಲ್ಲಾಹು ಅನ್ಹುರವರು ನಿವೇದಿಸುತ್ತಾರೆ.
: قال رسول الله صلى الله عليه وسلم : " إن الله يحب عبده المؤمن الفقير المتعفف أبا العيال " . ( رواه ابن ماجه ) .
ಹೆಂಡತಿ-ಮಕ್ಕಳನ್ನು ಮತ್ತು ಕುಟುಂಬಿಕರನ್ನು ಪರಿಪಾಲಿಸಿ ಕಷ್ಟಗಳನ್ನು ಜನರೆಡೆಯಲ್ಲಿ ಗುಪ್ತವಾಗಿಸಿ ಸಾಂಪತ್ತಿಕ ಪರಿಶುದ್ಧತೆಯನ್ನು ಕಾಪಾಡುವವನನ್ನು ಅಲ್ಲಾಹನು ಇಷ್ಟಪಡುತ್ತಾನೆ.
👁🗨 ಚಾರಿತ್ರಶುದ್ಧಿಯೊಂದಿಗೆ ಉಳ್ಳದರಲ್ಲಿ ತೃಪ್ತಿಪಟ್ಟು ಜೀವಿಸುವ ದಂಪತಿಗಳು ಅಲ್ಲಾಹನು ಸಹಾಯ ಮಾಡಲು ಕಡ್ಡಾಯವಾದ ಮೂರು ಜನರಲ್ಲಿ ಒಬ್ಬರಾಗಿದ್ದಾರೆ.
Comments