Skip to main content

ಸಂಚಾರಿಗಳಿಂದ ಮಾಣಿಕ್ಯವೆಂದು ಕರೆಸಿಕೊಂಡ ಸಮರ್‌ಖಂದ್ ಭಾಗ--2

ಸಂಚಾರಿಗಳಿಂದ ಮಾಣಿಕ್ಯವೆಂದು ಕರೆಸಿಕೊಂಡ ಸಮರ್‌ಖಂದ್

ಭಾಗ--2

ಮೂಲ:  ಇಸ್ಮಾಈಲ್ ಸಅದಿ ಮಾಚಾರ್ ರವರ ಇಫಾದ ಹದೀಸ್ ಕ್ಲಾಸ್ ನಂ--1494.

ಬರಹ ರೂಪಕ್ಕೆ --ಸಲೀಂ ಇರುವಂಬಳ್ಳ.
 (ಕೆ.ಜಿ.ಎನ್ ದಅವಾ ಕಾಲೇಜು ಮಿತ್ತೂರು)
--------------------------
ಸಮರ್'ಖಂದಿನಿಂದ ಬಂದ ಸೇವಕ ಡಮಸ್ಕಸ್ ತಲುಪುತ್ತಾನೆ. ಡಮಸ್ಕಸಿನ ರಾಜ್ಯ ಸೌಂದರ್ಯ, ಕೋಟೆಗಳನ್ನು ಕಂಡು ಚಿಂತಾ ಮಗ್ನನಾಗುತ್ತಾನೆ. 'ನಾನು ರಾಜರ ಆಸ್ಥಾನಕ್ಕೆ ಹೇಗೆ ತಲುಪಲಿ'.. ಎಂದು ಯೋಚಿಸತೊಡಗಿದ. ತಂಗಲು ಸ್ಥಳವನ್ನು ಹುಡುಕುತ್ತಾ ತನ್ನ ಹೆಜ್ಜೆ ಮುಂದಿಡತೊಡಗಿದ. ಯಾತ್ರಿಕರು ತಂಗುವ ಸ್ಥಳಕ್ಕಾಗಿ ನಡೆದು, ಒಂದು ಜಾಗಕ್ಕೆ ತಲುಪಿ ರಾತ್ರಿ ಅಲ್ಲಿಯೇ ತಂಗಿ ಬೆಳಗೆದ್ದು ಹೊಸ ವಸ್ತ್ರವ ಧರಿಸಿ ಅರಮನೆಯನ್ನು ಹುಡುಕುತ್ತಾ ನಡೆದ. ಪ್ರತಿ ಹೆಜ್ಜೆಯಿಡುವಾಗಲು 'ಜಗತ್ತಿನ ಅರ್ಧ ಭಾಗದಷ್ಟು ತನ್ನ ಕೈಯಲ್ಲಿರುವ ರಾಜನನ್ನಾಗಿದೆ ನಾನು ನೋಡಲು ಹೊರಟಿರುವುದು' ಎಂದು ಆಲೋಚಿಸುತ್ತಾ ಭಯದಿಂದ ಹೆಜ್ಜೆಯಿಡುತ್ತಾನೆ. ಅರಮನೆ ಯಾವುದೆಂದು ತಿಳಿಯದೆ ನನ್ನ ಮುಂದೆ ಯಾರು ಮೊದಲು ಕಣ್ಣಿಗೆ ಕಾಣುವನೋ ಅವನೊಂದಿಗೆ ಕೇಳಿಬಿಡೋಣವೆಂದು ನಿರ್ಧರಿಸಿ ಮುಂದೆ ಸಾಗುತ್ತಾನೆ. ಅಡಿಯಿಟ್ಟಂತೆ ವಿಶಾಲವಾದ ಬಾಗಿಲುಗಳುಳ್ಳ ಚೆಲುವಾದ ಕಟ್ಟಡವನ್ನು ಕಾಣುತ್ತದೆ. ಆ ಕಟ್ಟಡದ ಬಾಗಿಲಿನಿಂದ ಜನರು ಹೊರಗೆ ಬರುತ್ತಿದ್ದಾರೆ. ಕೆಲವರು ಒಳ ಹೋಗುತ್ತಿದ್ದಾರೆ. ಯಾರೂ ಕೇಳುವವರಿಲ್ಲ, ಭದ್ರತೆಯಾಳುಗಳಿಲ್ಲ. ಯಾರಿಗೂ ಹೇಗೂ ಹೋಗಿ ಬರಬಹುದಾದ ಕಟ್ಟಡವದು. ಸೇವಕ ಇದುವೇ ರಾಜರ ಅರಮನೆ ಆಗಿರಬಹುದೆಂದು ಭಾವಿಸಿ, ನನ್ನನ್ನು ನೋಡಿ ಜನರು ಬಂಧಿಸುವರೋ ಎಂಬ ಭಯದಿಂದ ಕಾಲನ್ನು ಹಿಂದಕ್ಕೂ ಮುಂದಕ್ಕೂ ಚಲಿಸುತ್ತಾನೆ. ಕಟ್ಟಡದ ಒಳಗೆ ಏನಿರಬಹುದೆಂಬ ಕುತೂಹಲದಿಂದ ಇಣುಕಿ ಸುತ್ತಲೂ ಕಣ್ಣಾಡಿಸುವನು. ಕಟ್ಟಡವನ್ನು ಅಮೃತ ಶಿಲೆಗಳಿಂದ ಕೆತ್ತಲ್ಪಟ್ಟಿದೆ. ಜನರೆ'ಲ್ಲರೂ ಸುತ್ತಲೂ ಕುಳಿತುಕೊಂಡಿದ್ದಾರೆ. ಕಾಣಲು ಸೌಂದರ್ಯವಾದ ಸುತ್ತಲೂ ಭವ್ಯವಾದ ಗೋಡೆಗಳಿಂದ ನಿರ್ಮಿತವಾದ ಇದುವರೆಗೂ ಕಾಣದ ಕಟ್ಟಡವದು. ಗೋಡೆಯ ಸುತ್ತಲೂ ಬರೆದಿಡಲಾಗಿದೆ. ಕಟ್ಟಡದ ಮಧ್ಯೆಯೊಂದು ಕೊಳವಿದೆ. ಆ ಕೊಳಕ್ಕೆ ಸೂರ್ಯನ ಕಿರಣಗಳು ಮುತ್ತಿಟ್ಟು ಅದು ಮತ್ತೂ ಸುಂದರವಾಗಿ ಕಾಣುತ್ತಿದೆ. ಬೆಳ್ಳಿಯಿಂದ ನಿರ್ಮಾಣವಾದ ದ್ವಾರಗಳು... ಎಲ್ಲವನ್ನೂ ಅವನು ಭ್ರಾಂತನಾಗಿ ನೋಡುತ್ತಾನೆ. ಜನರೆಡೆಯಲ್ಲಿ ಭಯಭೀತನಾಗಿ ಎಡ ಬಲಕ್ಕೆ ನೋಡುತ್ತಾ ಮುಂದೆ ಹೋಗುತ್ತಿದ್ದಾನೆ. ಅಲ್ಲಿಯ ಜನರೆಲ್ಲರೂ ಅಲ್ಲಾಹನ ನಾಮವನ್ನು ಉಚ್ಚರಿಸುತ್ತಿದ್ದಾರೆ. ಹೀಗೆ ನಡೆಯುವಾಗ ಒಬ್ಬ ವ್ಯಕ್ತಿ  ಸೇವಕನನ್ನು ನೋಡಿ ವಿದೇಶಿಗನಂತೆ ಕಂಡು "ಏನು ವಿಷಯ..?" ಎಂದು ಕೇಳಿದ.
ಸೇವಕ "ನಾನು ರಾಜರನ್ನು ಕಾಣಲು ಬಂದಿರುವೆನು" ಭಯದಿಂದ ಉದ್ಗರಿಸುತ್ತಾನೆ. ನಾನು ಯಾವುದೇ ಗೌರವ ನೀಡದೇ ಖಲೀಫರ ಹೆಸರು ಹೇಳಿದ್ದಕ್ಕೆ ನನ್ನನ್ನಿವರು ಪೋಲೀಸರಿಗೆ ಒಪ್ಪಿಸಿ ಜೈಲಿಗೆ ತಳ್ಳುವರೇ..! ಮತ್ತೂ ಭಯಗೊಳ್ಳುತ್ತಾನೆ.

    ಅವರು ಸಂಯಮದಿಂದ  "ನಾನು ತಮಗೆ ಖಲೀಫರನ್ನು ತೋರಿಸಬೇಕೇ..?" ಪ್ರಶ್ನಿಸುತ್ತಾರೆ.
ಸೇವಕ ಆಶ್ಚರ್ಯದಿಂದ "ಆದರೆ ಇದು ರಾಜರ ಅರಮನೆಯಲ್ಲವೇ...!?" 
"ಅಲ್ಲಾ...ಇದು ಅಲ್ಲಾಹನ ಭವನವಾದ ಮಸೀದಿ. ತಾವು ನಮಾಜ್ ನಿರ್ವಹಿಸಿದಿರಾ..?" 
ಸೇವಕ; ಸಮರ್'ಖಂದಿನ ಧರ್ಮದ ಮೇಲೆ ನೆಲೆಯೂರಿದವನು. ಮತ್ತೆ ಹೇಗೆ ನಮಾಜ್ ಮಾಡುವುದು..? ಆತನಿಗೆ ತನ್ನ ಧರ್ಮ ಮತ್ತು ಈ ಧರ್ಮದ ವ್ಯತ್ಯಾಸ ಮನದಟ್ಟಾಗುತ್ತದೆ. 
    ಅವರು ಸೇವಕನೊಂದಿಗೆ ಕೇಳುತ್ತಾರೆ "ತಾವು ನಮಾಝ್ ಮಾಡಿದ್ದೀರಾ..?
"ಇಲ್ಲ ನಾನು ನಮಾಝ್ ಮಾಡಲಿಲ್ಲ. ನಮಾಝೆಂದರೆ ಏನೂ ಅಂತ ಗೊತ್ತಿಲ್ಲ ನನಗೆ"
"ನಿನ್ನ ಧರ್ಮ ಯಾವುದು.?"
"ನಾನು ಸಮರ್'ಖಂದಿನ ಜ್ಯೋತಿಷ್ಯರ ಧರ್ಮದವನು"
"ಅವರ ಧರ್ಮ ಯಾವುದು..?"
"ನನಗೆ ಅದರ ಬಗ್ಗೆ ಅರಿವಿಲ್ಲ."
"ನಿನ್ನ ದೇವರು ಯಾರು..?"
"ನನ್ನ ದೇವ ಆರಾಧನಾಲಯದಲ್ಲಿ  ಮೂರ್ತಿಗಳಿರುತ್ತವೆ."
" ಆ ದೇವರು ನೀನೇನನ್ನಾದರು ಕೇಳಿದರೆ ಕೊಡುತ್ತದೆಯಾ...ನಿನ್ನ ರೋಗ ನಿವಾರಣೆ ಮಾಡುವ ಶಕ್ತಿ ಅದಕ್ಕಿದೆಯಾ..?
"ನನಗೆ ಗೊತ್ತಿಲ್ಲ." ಸೇವಕ ಉತ್ತರಿಸಿದ.
ಪ್ರಶ್ನೆ ಕೇಳಿದಾತ ಈತ ತನ್ನ ಧರ್ಮದ ಬಗ್ಗೆ ಅರಿವಿಲ್ಲದವನೆಂದು ತಿಳಿದುಕೊಂಡ. 
ಸೇವಕನ ಹೃದಯಕ್ಕೆ ಡಮಸ್ಕಸಿನ ವ್ಯಕ್ತಿ ಸೃಷ್ಟಿ‌ ಮತ್ತು ಸೃಷ್ಟಿಕರ್ತನ ಕುರಿತು ಬೋಧಿಸತೊಡಗಿದ. ಅಲ್ಲಾಹನ ಹಾಗು ಪ್ರವಾದಿ ಸ್ವಲ್ಲಲ್ಲಾಹು ಅಲೈಹಿವಸಲ್ಲಮರಲ್ಲಿ ವಿಶ್ವಾಸವಿರಿಸುವ ಹಂತಕ್ಕೆ ಸೇವಕ ಬದಲಾದ. 
" ಇದು ರಾಜರ ಅರಮನೆಯಲ್ಲ. ರಾಜರ ಮನೆಯನ್ನು ತೋರಿಸುವೆ ಬಾ ಹೊರಡೋಣ..." ಸೇವಕ ವ್ಯಕ್ತಿಯೊಂದಿಗೆ ರಾಜ ಸನ್ನಿಧಿಯತ್ತ ಹೆಜ್ಜೆಯಿಟ್ಟ. 
ಇಸ್ಲಾಮ್ ಧರ್ಮದ ಸೌಂದರ್ಯವನ್ನು ಆಲೋಚಿಸತೊಡಗಿದ. ಇದು ಪ್ರಕಾಶಿಸುವ ಧರ್ಮ. ಈ ಧರ್ಮವನ್ನು ಅನುಸರಿಸಿ ಜೀವಿಸುವವರು ಸತ್ಯ ಪಥದ ಹಾದಿಯಲ್ಲಿದ್ದಾರೆ. ಆದರೆ ನಾನು ನಂಬುವ ಧರ್ಮ ಯಾರಿಗೂ ತಿಳಿಯದ ಅವ್ಯಕ್ತ ಧರ್ಮ..! ಇಸ್ಲಾಮ್ ಧರ್ಮದ ಐಶ್ವರ್ಯವನ್ನ ಕಂಡು ಮನದಲ್ಲಿ ಇಸ್ಲಾಮ್ ಧರ್ಮದ 'ಹಿದಾಯತ್'ನ ಮುನ್ನುಡಿ ಬರೆಯಲು ಶುರುವಾಯಿತು. 
          ಒಂದೆಡೆ ಸಮರ್'ಖಂದಿನ ಜ್ಯೋತಿಷ್ಯರು, ಪ್ರಜೆಗಳು ಇವನ ಬರುವಿಕೆಗಾಗಿ, ತೀರ್ಪಿಗಾಗಿ ಕಾಯುತ್ತಾ ಕುಳಿತಿದ್ದಾರೆ. ಆದರೆ ಡಮಸ್ಕಸಿನ ವಾತಾವರಣ ಕಂಡು, ಮಸೀದಿಯನ್ನು ಸೇವಕನ ಕಂಡು ಹೃದಯ ಹಿದಾಯತಿನೆಡೆಗೆ ವಾಲುತ್ತಿದೆ. ಮಸೀದಿಯಿಂದ ಸೇವಕನನ್ನು ಕರೆದುಕೊಂಡು ರಾಜರ ಬಳಿ ಹೋಗುತ್ತಾರೆ. ರಾಜರ ಮನೆ ತಲುಪಿದಾಗ ಮಣ್ಣಿನಿಂದ ಆವೃತವಾದ ಮರದ ದಿಮ್ಮಿಯಿಂದ ಮಾಡಲ್ಪಟ್ಟ ಬಾಗಿಲನ್ನು ತೋರಿಸಿ "ಇದು ರಾಜರ ಮನೆ.." ಎಂದು ತೋರಿಸುತ್ತಾರೆ. 
ಸೇವಕ "ಇದುವಾ ರಾಜರ ಮನೆ.?  ಇದು ರಾಜರ ಮನೆಯಾಗಿರಲು ಸಾಧ್ಯವಿಲ್ಲ. ರಾಜರ ಮನೆಯೆಂದರೆ ಸುಂದರವಾದ ಕೋಟೆಗಳಿಂದ ನಿರ್ಮಿತವಾದ ಮನೆಯಲ್ಲವೇ..?" ಉದ್ಗರಿಸುತ್ತಾನೆ. 
ಮನೆ ಸುತ್ತ ಕಣ್ಣಾಡಿಸಿದಾಗ ಒಬ್ಬ ಮಧ್ಯ ವಯಸ್ಕನಾದ ವ್ಯಕ್ತಿ ಮನೆಯ ಗೋಡೆಯನ್ನು ಮಣ್ಣಿನಿಂದ ನವೀಕರಣ ಮಾಡುತ್ತಿದ್ದಾರೆ. ಹೆಂಗಸೊಬ್ಬಳು ಮಣ್ಣನ್ನು ಕಲಸಿ ಕೊಡುತ್ತಿದ್ದಾಳೆ. ಇದನ್ನು ಕಂಡ ಸೇವಕ ಮನೆ ಬಿಟ್ಟು ವ್ಯಕ್ತಿಯ ಬಳಿ ಕೋಪೋದ್ರಿಕ್ತನಾಗಿ ಓಡಿ ಬರುತ್ತಾನೆ. 
"ನೀವು ಸುಳ್ಳು  ಹೇಳುತ್ತಿದ್ದೀರಾ..? ನನ್ನನ್ನು ಪರಿಹಾಸ್ಯ ಮಾಡುತ್ತಿರವಿರಾ..? ಈ ಮಣ್ಣಿನ ಕೆಲಸ ಮಾಡುವವರ ಮನೆಯ ಬಳಿಯಾ ತಾವು ನನ್ನನ್ನು ಕರೆದುಕೊಂಡು ಬಂದಿರುವುದು..."
"ಇವರು ಮಣ್ಣಿನ ಕೆಲಸ ಮಾಡುವವರಲ್ಲ. ಇದು ಅಮೀರುಲ್ ಮುಅ್'ಮಿನೀನ್ ಆಗಿದ್ದಾರೆ. ಇವರು ಈ ಊರಿನ ರಾಜ. ಆ ಕಾಣುವ ಹೆಂಗಸು ರಾಜ ಉಮರ್ ಬಿನು ಅಬ್ದುಲ್ ಅಝೀಝರ ಪತ್ನಿಯಾಗಿದ್ದಾರೆ. ಖಲೀಫಾ ಅಬ್ದುಲ್ ಮಲಿಕ್ ಇಬ್ನು ಮರ್'ವಾನ್ ಅವರ ಮಗಳಾದ ಫಾತಿಮ ಅದು." 
ಅವರ ವಿಶೇಷತೆ ಕುರಿತು ಹೀಗೆ ಹೇಳುತ್ತಾರೆ " ಜಗತ್ತಿನಲ್ಲಿ ಈ ಮಹಿಳೆಗೆ ಲಭಿಸಿದಂತ ಭಾಗ್ಯ ಯಾರಿಗೂ ಲಭಿಸಿರಲಿಕ್ಕಿಲ್ಲ. ಉಮವಿಯ್ಯಾ ಆಡಳಿತಗಾರನಾದ ಅಬ್ದುಲ್ ಮಲಿಕ್'ರವರ ಮಗಳಾಗಿದ್ದಾಳೆ ಈ ಮಹಿಳೆ. ತನ್ನ ಅಜ್ಜ ಮರ್'ವಾನ್ ಖಲೀಫರಾಗಿದ್ದಾರೆ. ಸಹೋದರರು ಕೂಡಾ ಖಲೀಫರು. ಸ್ವಂತ ಗಂಡ ಉಮರ್ ಬಿನು ಅಬ್ದುಲ್ ಅಝೀಝ್ ರವರು ಕೂಡ ರಾಜರು. ವಲೀದ್ ಎಂಬ ರಾಜರ ಸಹೋದರಿಯಾಗಿದ್ದಾಳೆ ಈ ಮಹಿಳೆ. ಮುಂದೆ ರಾಜ ಪಟ್ಟವನ್ನು ಸ್ವೀಕರಿಸಲಿರುವ ಹಿಶಾಮ್ ಯಝೀದ್ ರವರ ಸಹೋದರಿಯೂ ಹೌದು. ಅರಬ್ ಲೋಕದಲ್ಲಿ ಇಷ್ಟು ಸ್ಥಾನವಿರುವ ಮಹಿಳೆ ಯಾರಿದ್ದಾರೆ...!?
ತನ್ನ ಗಂಡ ಉಮರ್ ಬಿನು ಅಬ್ದುಲ್ ಅಝೀಝ್ ಆಡಂಬರ ಜೀವನವನ್ನು ನಡೆಸುತ್ತಿದ್ದ ವ್ಯಕ್ತಿಯಾಗಿದ್ದರು. ಉಮರ್ ಬಿನು ಖತ್ತಾಬ್ ರಳಿಯಲ್ಲಾಹು ಅನ್ಹು ರವರ ಪರಂಪರೆಯಲ್ಲಿ ಬಂದ ಕಾರಣ ಅವರ ಸಣ್ಣದೊಂದು ಗುಣವು ಇವರಲ್ಲಿ ಅಡಕವಾಗಿತ್ತು. 
ಖಲೀಫರ ಮನೆ ಮುಂದೆ ತಲುಪಿ "ನೀನು ಭಯಪಡಬೇಕಾದ ಅವಶ್ಯಕತೆ ಇಲ್ಲ. ಇದು ಅಹಂಕಾರಿಯಾದ ರಾಜನಲ್ಲ. ಯಾರನ್ನೂ ಹೊಡೆದುರುಳಿಸುವ ದುಷ್ಟ ರಾಜನಲ್ಲ. ಎಲ್ಲರಿಗೂ ಕರುಣೆ, ಸ್ನೇಹವನ್ನು ತೋರುವ ಅಲ್ಲಾಹನ ಇಷ್ಟ ದಾಸರಾಗಿದ್ದಾರೆ ಇವರು."
ಸೇವಕ  ಖಲೀಫರ ಮನೆಯತ್ತ ಕಾಲನ್ನು ಹಿಂದುಮುಂದೆ ಊರುತ್ತಾ ನಡೆಯುತ್ತಾನೆ. ಆದರೂ ಅವನಿಗೆ ಸಂಶಯ. ಇದು ರಾಜರ ಮನೆಯಾಗಿರಬಹುದೇ..? ರಾಜನೆಂದರೆ ಅರಮನೆಯಲ್ಲಿ ಕುಳಿತು ಆಡಳಿತ ನಡೆಸ ಬೇಕಾದವರಲ್ಲವೇ... ಸೈನಿಕರು, ಭದ್ರತಾ ಪಡೆಗಳು, ಕಾವಲುಗಾರರು, ಪೋಲೀಸರು, ಸಹಾಯಕರು ಇರಬೇಕಲ್ಲವೇ..ಅದಲ್ಲವೇ ನಿಜವಾದ ರಾಜ..!
ಸಮರ್'ಖಂದಿನ ರಾಜರು ಕಾಣುವಾಗಲೇ ಭಯಪಡುವ, ಸರ್ವಾಧಿಕಾರದ ಆಡಳಿತಗಾರರು. ಆದರೆ ಇವರು...!

-ಮುಂದುವರಿಯುವುದು...

Comments

Popular posts from this blog

ಗ್ರಹಣ ನಮಾಜಿನ ರೂಪ

ಗ್ರಹಣ ನಮಾಜಿನ ರೂಪ *ಚಂದ್ರಗ್ರಹಣದ ಸುನ್ನತ್ ನಮಾಜು ಎರಡು ರಕಅತ್ ಅಲ್ಲಾಹನಿಗಾಗಿ ಜಮಾಅತ್ತಾಗಿ ನಾನು ನಿರ್ವಹಿಸುವೆನು* ಎಂದು ನಿಯ್ಯತ್ ಮಾಡಿ ಅಲ್ಲಾಹು ಅಕ್ಬರ್ ಎಂದು ಹೇಳಿ ನಮಾಜಿಗೆ ಪ್ರವೇಶಿಸುವು...

ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ. ಲೇ - ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಅಕ್ಕರೆಕೆರೆ.

ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ. ಲೇ - ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಅಕ್ಕರೆಕೆರೆ. ಆಮಿನ ಬೀವಿ ರ.ಅ ಗರ್ಭಿಣಿಯಾಗಿರುವಾಗ ವ್ಯಾಪಾರಕ್ಕಾಗಿ ಸಿರಿಯಾಕ್ಕೆ ಹೋಗಿದ್ದ ಅಬ್ದುಲ್ಲಾಹ್ (ರ.ಅ) ಮರಳಿ ಬರುವಾಗ ಮದೀನದಲ್ಲಿ ವಫಾತಾದರು.ತಂದೆಯ ಮಾವಂದಿರರಾದ ಬನುನ್ನಜ್ಜಾರ್ ಗೋತ್ರದವರ ಬಳಿ ದಫನ ಮಾಡಲಾಯಿತು.ರಬೀವುಲ್ ಹನ್ನೆರಡು ಸೋಮವಾರ ಸುಬಹಿಯ ಸ್ವಲ್ಪ ಮುಂಚೆ ಅಂತ್ಯ ಪ್ರವಾದಿ ಮುಹಮ್ಮದ್ ಮುಸ್ತಫ ಸ.ಅ ಮಕ್ಕಾದಲ್ಲಿ ಜನಿಸಿದರು.ಅಂದು ಕ್ರಿಸ್ತಶಕ 571 ಎಪ್ರಿಲ್ 21 ಆಗಿತ್ತು.ನೆಬಿ ಸ.ಅ ಜನಿಸಿದ ದಿನ ಅತ್ಯಂತ ಸಂತೋಷದಾಯಕವಾದ ದಿನವಾಗಿದೆ.ಮಾನವ ಶ್ರೇಷ್ಠರಾದ ಪ್ರವಾದಿ ಮುಹಮ್ಮದ್ ಸ.ಅ ರವರ ಮುಖಾಂತರ ಮಾನವ ಸಮೂಹವನ್ನು ಅಲ್ಲಾಹು ಅನುಗ್ರಹಿಸಿದ ಸುದಿನವಾಗಿದೆ ಅಂದು.ಮುಸಲ್ಮಾನರು ಈ ಅನುಗ್ರಹಕ್ಕೆ ಕ್ರತಜ್ಞತೆ ಸಲ್ಲಿಸಿ ಅಂದು ಮೀಲಾದುನ್ನಬಿ ಆಚರಣೆ ಮಾಡುತ್ತಾರೆ.ನೆಬಿ ಸ.ಅ ರವರ ಮದಹ್ ಕೀರ್ತನೆಗಳನ್ನು ಹೇಳಿ, ಹಾಡಿಹೊಗಳಿ ದಾನಧರ್ಮಗಳನ್ನು ನೀಡಿ ಸಂತೋಷ ಪ್ರಕಟಿಸುತ್ತಾರೆ.              ಭೂಮಿಯ ಮೇಲೆ ಜನ್ಮವೆತ್ತಿ ಬಂದ ಅತ್ಯಂತ ಉತ್ತಮನಾದ ಮನುಷ್ಯ ನೆಬಿ ಸ.ಅ ಆಗಿದ್ದಾರೆ.ಮುಂಜಿಕರ್ಮ ನಿರ್ವಹಿಸಲ್ಪಟ್ಟ,ಹೊಕ್ಕುಳ ಬಳ್ಳಿ ಕತ್ತರಿಸಲ್ಪಟ್ಟ,ಕಣ್ಣಿಗೆ ಸುರುಮ ಹಾಕಲ್ಪಟ್ಟ ಸ್ಥಿತಿಯಲ್ಲಿ ಸಂಪೂರ್ಣ ಸಂಶುದ್ಧವಾದ ರೀತಿಯಲ್ಲಾಗಿದೆ ಅವರು ಜನಿಸಿದ್ದು.ಅಬೂತಾಲಿಬರ ಮನೆಯಲ್ಲಾಗಿದೆ ಜನನ.ಹೆರಿಗೆ...

ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಕರ ಪಾತ್ರ

ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಕರ ಪಾತ್ರ _✍🏻ಜಹಫರ್ ಸಾಧಿಕ್ ಕಟ್ಟದಪಡ್ಪು_ _ನಮ್ಮ ಸಮಾಜವು ನಮಗೆ ಜನ್ಮ ಕೊಟ್ಟ ತಂದೆ ತಾಯಿಯ ನಂತರ ಮಹತ್ತರವಾದ ಸ್ಥಾನವನ್ನು ಶಿಕ್ಷಕರಿಗೆ ನೀಡಿ ಗೌರವಿಸಿದೆ.  ಶಿಲ್ಪಿ...