Skip to main content

ಸಂಚಾರಿಗಳಿಂದ 'ಮಾಣಿಕ್ಯ'ವೆಂದು ಕರೆಸಿಕೊಂಡ ಸಮರ್'ಖಂದ್. ಭಾಗ - 1



ಸಂಚಾರಿಗಳಿಂದ 'ಮಾಣಿಕ್ಯ'ವೆಂದು ಕರೆಸಿಕೊಂಡ ಸಮರ್'ಖಂದ್.

ಭಾಗ - 1

ಮೂಲ: ಇಸ್ಮಾಈಲ್ ಸಅದಿ ಮಾಚಾರ್ ರವರ ಇಫಾದ ಹದೀಸ್ ಕ್ಲಾಸ್ ನಂ 1493.
 --ಸಲೀಂ ಇರುವಂಬಳ್ಳ.
 (ಕೆ.ಜಿ.ಎನ್ ದಅವಾ ಕಾಲೇಜು ಮಿತ್ತೂರು)
--------------------------

ಸಮರ್ʼಖಂದ್ 'ಇಸ್ಲಾಮಿನ ಮಾಣಿಕ್ಯ' ಎಂಬ ಹೆಸರಿನಿಂದ ಪ್ರಖ್ಯಾತಿ ಹೊಂದಿದ ಊರು. ಪೂರ್ವ ಕಾಲವನ್ನು ನೋಡಿದಾಗ ನಮಗೆ ಆಶ್ಚರ್ಯಪಡುವಂತ ಊರುಗಳನ್ನು ಕಾಣಲು ಸಾಧ್ಯವಾಗುತ್ತದೆ. ಸ್ಪೈನ್, ಬಗ್ದಾದ್, ಸಮರ್ಖಂದ್, ಮಕ್ಕಾ, ಮದೀನಾ ಇವೆಲ್ಲವೂ ಜಗತ್ತಿಗೆ ಹಲವು ಇಸ್ಲಾಮಿಕ್ ಇತಿಹಾಸವನ್ನು ಕಲಿಸಿಕೊಟ್ಟ ಊರು.


ಈ ಊರಿಗೆಲ್ಲ ಕಣ್ಣು ಹಾಯಿಸಿ ನೋಡಿದಾಗ ಕಾಣಲು ಸಾಧ್ಯವಾಗುವುದು ಇಸ್ಲಾಮೀ ಸಂಸ್ಕೃತಿ, ಮುಸ್ಲಿಮ್ ರಾಜರುಗಳ, ವಿದ್ವಾಂಸರುಗಳ ಕೊಡುಗೆ, ಸೇವೆಯನ್ನಾಗಿದೆ. 
       ಚರಿತ್ರೆಯನ್ನು ಕಲಿಯುವುದರಿಂದಾಗುವ ದೊಡ್ಡ ಲಾಭವೇನೆಂದರೆ; ಉದಾಹರಣೆಗೆ ನಾವು ಐವತ್ತು ವರ್ಷ ಬದುಕಿದರೂ ಐನೂರು ವರ್ಷದ ಇತಿಹಾಸವನ್ನು ಕಲಿತರೆ ನಾವು ಐನೂರು ವರ್ಷ ಜೀವಿಸಿದಂತೆ. ಇನ್ನು ಸಾವಿರ ವರ್ಷದ ಇತಿಹಾಸವನ್ನು ಕಲಿತರೆ ಕೇವಲ ಐವತ್ತು ವರ್ಷ ಪ್ರಾಯದಲ್ಲಿ ಸಾವಿರ ವರ್ಷ ಬದುಕಿದ ಹಾಗೆ ಆಗುತ್ತದೆ. 
     ಪೂರ್ವ ಕಾಲದಲ್ಲಿ ಅದ್ಭುತವನ್ನು ಸೃಷ್ಟಿಸಿದ, ಪ್ರಕಾಶಮಯ ಊರುಗಳಿವೆ. 'ಅವೆಲ್ಲದರ ಚರಿತ್ರೆಯನ್ನು ಓದಿ, ಕಲಿತು ಹೊಸ ನವೋಥ್ಥಾನಕ್ಕೆ ನಾವು ತಯಾರಾಗಬೇಕಿದೆ.

ಉಝ್ಬಕಿಸ್ತಾನಿನ ಎರಡನೇ ಅತಿ ದೊಡ್ಡ ಊರು ಸಮರ್ʼಖಂದ್. ರಾಜಧಾನಿ ತಾಷ್ಕಂಟ್ ನಿಂದ ಮುನ್ನೂರು ಕಿಲೋಮೀಟರ್ ಸಂಚರಿಸಿದರೆ ಸಿಗುವ ಊರೇ ಸಮರ್ʼಖಂದ್.
ಸಮರ್ʼಖಂದಿನ ಕುರಿತು 'ಇಸ್ಲಾಮಿನ ಮಾಣಿಕ್ಯ' ಎಂದಾಗಿದೆ ಚರಿತ್ರೆಗಾರರು ಬಣ್ಣಿಸಿರುವುದು. ಅಲ್ಲಿಗೆ ಸಂಚಾರ ನಡೆಸಿದ ಸಂಚಾರಿಗಳೆಲ್ಲರೂ 'ಮಲಗಿ_ನಿದ್ರಿಸುವ_ಮಾಣಿಕ್ಯ' ಎಂದು ಅದರ ಸೌಂದರ್ಯದ ಬಗ್ಗೆ  ಬಣ್ಣಿಸಿದ್ದಾರೆ. ನದಿಯಾಚೆಗಿನ ಊರು (ಬಿಲಾದು ಮಾ ವರಾಹನ್ನಹ್'ರ್) ಎಂದು ಹೇಳುವಾಗ ಪ್ರಮುಖವಾಗಿ ಕಾಣುವ ಊರಾಗಿದೆ ಉಝ್ಬಕಿಸ್ತಾನ್. ಜೈಹೂನ್ ಸೈಹೂನ್, (ಆಮುದಾರಿಯಾ ಸರ್ದಾರಿಯಾ) ಎಂಬ ಎರಡು ನದಿ ತೀರದಾಚೆಗಿನ ಮಧ್ಯ ಏಷ್ಯಾದ ರಾಷ್ಟ್ರವಾಗಿದೆ ಉಝ್ಬಕಿಸ್ತಾನ್. ಅದರ ರಾಜಧಾನಿ ತಾಷ್ಕಂಟ್ ಅದೇ ರೀತಿ ಬುಖಾರದಂತೆ ಇನ್ನೊಂದು ಸೌಂದರ್ಯಯುತ ಊರಾಗಿದೆ ಸಮರ್ʼಖಂದ್. ವ್ಯತ್ಯಸ್ತ ವೈಭವ, ಹಾಗು ಚೆಲುವಿನಿಂದ ತುಂಬಿತುಳುಕುವ ಊರಾಗಿದೆ ಇದು. ವಿಶಾಲವಾದ ಪರ್ವತಗಳು, ರಾಜರುಗಳು ಕಟ್ಟಿಸಿದ ಸಂಯೋಜಕರ ಗೋಡೆಗಳು ಅತೀ ಆಕರ್ಷಣೀಯವಾದುದು. ಜಗತ್ತಿನಾದ್ಯಂತ ಸಂಚರಿಸಿದ ಲೋಕ ಸಂಜಾರಿ ಇಬ್ನು ಬತೂತರವರು ಸಮರ್ʼಖಂದ್  ತೆರಳಿ ಅದರ ಕುರಿತು . "ಈ ಊರು ಖಸ್ಸಾರಿನ್ ಎಂದು ಕರೆಯಲ್ಪಡುವ ಕಣಿವೆಯ ಬಳಿ ನಿರ್ಮಿಸಲ್ಪಟ್ಟ ಊರಾಗಿದೆ" ಎಂದು ವಿವರಿಸುತ್ತಾರೆ. 

ಸಮರ್ʼಖಂದಿನ ಕುರಿತು ಬರೆಯುವಾಗ 'ಯಾಖೂತುಲ್ ಹಮವಿ' ಎಂಬ ಚರಿತ್ರೆಗಾರ ಬರೆಯುತ್ತಾರೆ "ಸಮರ್ʼಖಂದ್ ನಗರ ಜಗತ್ತಿಗೆ ಒಳ್ಳೆಯ ನಾಗರಿಕತೆಯನ್ನು ಅರ್ಪಿಸಿದ ಊರಾಗಿದೆ. ಊರಿನ ರಸ್ತೆಯ ಬದಿಯ ಗೋಡೆಗಳನ್ನು ಉತ್ತಮ ಸಂಯೋಜನೆಯೊಂದಿಗೆ ಪೋಣಿಸಿಟ್ಟಿದ್ದಾರೆ." ಈ ಊರಿಗೆ  ಹೆಜ್ಜೆಯಿಟ್ಟವರೆಲ್ಲರೂ ಒಳ್ಳೆಯ ಸಂದೇಶವನ್ನು ಬರೆದಿಟ್ಟು ಹೋಗಿದ್ದಾರೆ. 

ಸಮರ್ʼಖಂದಿನ ಕುರಿತು ಹೇಳುವಾಗ ಮುಹಮ್ಮದುಬ್ನು  ಇಸ್ಮಾಈಲುಲ್ ಬುಖಾರಿ(ಬುಖಾರಿ ಇಮಾಮ್)ರಳಿಯಲ್ಲಾಹು ಅನ್ಹುರನ್ನು ನೆನಪಿಸಲೇಬೇಕು. ಹಿಜಿರಾ 194ರಲ್ಲಿ ಜನಿಸಿ, 256 ರಲ್ಲಿ ಮರಣ ಹೊಂದಿದ ಶ್ರೇಷ್ಠ ಹದೀಸ್ ವಿದ್ವಾಂಸರಿವರು. ಅಲ್ಲಾಹುವಿನ ಖುರ್ಆನ್ ಗ್ರಂಥದ ಬಳಿಕ ಸ್ವಹೀಹಾದ ಗ್ರಂಥವೆಂದು ಮುಕ್ತಕಂಠದಿಂದ ವಿದ್ವಾಂಸರೆಡೆಯಲ್ಲಿ ಸ್ವೀಕರಿಸಿದ ಗ್ರಂಥವಾಗಿದೆ ಇಮಾಮರು ಬರೆದ ಸ್ವಹೀಹುಲ್ ಬುಖಾರಿ. 
ಇಮಾಮ್ ಬುಖಾರಿ ರಳಿಯಲ್ಲಾಹು ಅನ್ಹು ರವರು ಸಣ್ಣ ಪ್ರಾಯದಲ್ಲಿರುವಾಗ ಕಣ್ಣು ಕಾಣದ ವ್ಯಕ್ತಿಯಾಗಿದ್ದರು. ತನ್ನ ತಾಯಿಯು ನಿರಂತರ ಪ್ರಾರ್ಥನೆಯ ಫಲವಾಗಿ ಇಬ್ರಾಹೀಂ ನಬಿ ಅಲೈಹಿಸ್ಸಲಾಮರನ್ನು ಕನಸು ಕಾಣುತ್ತಾರೆ. ಈ ಘಟನೆಯ ನಂತರ ಇಮಾಮರಿಗೆ ಕಣ್ಣದೃಷ್ಟಿ ಮರಳಿ ದೊರೆಯುತ್ತದೆ. ತಾಯಿ ತನ್ನ  ಮಗುವನ್ನು ಎಲ್ಲಾ ರೀತಿಯಲ್ಲೂ ಪೋಷಿಸಿ ಜಗತ್ತಿನಾದ್ಯಂತ ಅರಿಯಲ್ಪಡುವ ಹದೀಸ್ ವಿದ್ವಾಂಸರನ್ನಾಗಿ ಮಾರ್ಪಡಿಸುತ್ತಾರೆ. ಇಮಾಮ್ ಬುಖಾರಿ ಯವರು ತಮ್ಮ ಸ್ವಂತ ಊರಾದ ಬುಖಾರದಿಂದ ಹೊರಗೆ ಹೋಗಬೇಕಾಗುತ್ತದೆ. ಇಮಾಮರು ಮರಣ ಹೊಂದುವಾಗ ಸಮರ್ʼಖಂದಿನ ಖರ್-ತಂಕ್ ನಲ್ಲಿರುತ್ತಾರೆ. ಹಿಜಿರಾ 256 ಶವ್ವಾಲ್ ಒಂದು ಈದುಲ್ ಫಿತ್ರಿನ ರಾತ್ರಿ ಇಶಾ ನಮಾಝಿನ ಬಳಿಕ ಮರಣ ಹೊಂದುತ್ತಾರೆ. ಅರವತ್ತೆರಡು ವರ್ಷಗಳಕಾಲ ಮಹಾನುಭಾವರು ಜೀವಿಸುತ್ತಾರೆ. ಇಮಾಮರನ್ನು ದಫನ್ ಮಾಡಿದ ನಂತರ ಅವರ ಖಬರ್(ಸಮಾಧಿ) ಸಮೀಪದಿಂದ ಕಸ್ತೂರಿಯ ಪರಿಮಳ ಹೊರಸೂಸುತ್ತಿತ್ತು ಎಂದು ಚರಿತ್ರೆಗಾರರು ಹಲವು ಗ್ರಂಥದಲ್ಲಿ ಉಲ್ಲೇಖಿಸಿದ್ದಾಗಿ ಕಾಣಬಹುದು. ಸಮರ್ʼಖಂದಿನ ಕುರಿತು ಅಧ್ಯಯನ ನಡೆಸುವಾಗ ಇಮಾಮ್ ಬುಖಾರಿಯವರಲ್ಲದೆ ಹಲವು ಮಹಾನುಭಾವರ ಚರಿತ್ರೆಯನ್ನು ಈ ಮಣ್ಣಿನಿಂದ ಹೆಕ್ಕಿ ತೆಗೆಯಬೇಕಾಗುತ್ತದೆ. ಅದಲ್ಲದೆ ಹಲವು ವಿದ್ವಾಂಸರು, ರಾಜರುಗಳ ಆಡಳಿತ ಕಾಲವು ಕೂಡ ಕಳೆದು ಹೋಗಿದೆ. 'ತೈಮೂರ್' ರಾಜರ ಅವಶೇಷಗಳು ಹಾಗು ಸಮಾಧಿಯನ್ನು ಅಲ್ಲಿ ಕಾಣಲು ಸಾಧ್ಯ. ಅಬ್ಬಾಸಿಯಾ ಖಿಲಾಫತಿಗೆ ಸಾಕ್ಷಿಯಾದ ನಗರವಾಗಿದೆಯಿದು. 

ಹಲವಾರು ಸಜ್ಜನ,ಸಾತ್ವಿಕರಿಗೆ ಜನ್ಮ ನೀಡಲು ಭಾಗ್ಯ ದೊರೆತ ಊರಿದು. ಮುಹಮ್ಮದಿಬ್ನು ಅಲಿಯ್ಯುಬುನು ಫಳ್ʼಲ್, ಅಹ್ಮದ್ಬಿನು ಉಮರುಲ್ ಅಶ್ಹಸ್, ಅಬೂ ಮನ್ಸೂರ್ ಮುಹಮ್ಮದ್ಬಿನು ಅಹ್ಮದ್, ಮುಹಮ್ಮದ್ ಮಹ್ಮೂದುಲ್ ಮಾತುರಿದೀ, ಅಖೀದಾ ಗ್ರಂಥ ಕತೃ ಇಮಾಮ್ ಅಬೂ ಮನ್ಸೂರುಲ್ ಮಾತುರಿದೀ , ತಂಬೀಹುಲ್ ಗಾಫಿಲೀನ್ ಬರೆದ ಅಬುಲ್ಲೈಸುಸ್ಸಮರ್ʼಖಂದೀ, ಅಲಾವುದ್ದೀನ್ ರ್ʼಖಂದೀ ರಳಿಯಲ್ಲಾಹು ಅನ್ಹುಅಂ ಹೀಗೆ ಧಾರಾಳ ವಿದ್ವಾಂಸರುಗಳ ಸೌಂದರ್ಯವನ್ನು ಹೊಂದಿದ ಊರಾಗಿದೆ ಸಮರ್ʼಖಂದ್. 

ಖುತೈಬತ್ʼಬಿನು ಮುಸ್ಲಿಮ್ ಎಂಬ ಸೇನಾನಿ ಮುಸ್ಲಿಮರಲ್ಲಿ ಪ್ರಶಸ್ತ ರಾಜರಾಗಿದ್ದರು. ಇಸ್ಲಾಮಿನೆದುರು ಧರ್ಮ ಸಮರವನ್ನು ಸಾರಿ ಬರುವವರ ವಿರುದ್ಧ ಮುಂದೆ ನಿಂತು ಹೋರಾಡಿದ ಸೇನಾನಿಯಾಗಿದ್ದಾರೆ ಖುತೈಬತ್ʼಬತಿಬ್ನು ಮುಸ್ಲಿಮ್. ಇವರು ಇಸ್ಲಾಮಿನ ಪ್ರಬೋಧಯನ್ನು ನಡೆಸುತ್ತಾ ಸಮರ್'ಖಂದಿಗೆ ತಲುಪುತ್ತಾರೆ. ಸಾಧಾರಣವಾಗಿ ಮುಸ್ಲಿಮ್ ರಾಜರುಗಳು ಒಂದು ಊರನ್ನು ವಶಪಡಿಸುವಾಗ ಮೊದಲು ಆ ಊರಿನ ಜನರನ್ನು ಇಸ್ಲಾಮಿಗೆ ಆಹ್ವಾನಿಸುತ್ತಾರೆ, ಇಲ್ಲದಿದ್ದರೆ ತೆರಿಗೆ ಕಟ್ಟಿ ಜೀವಿಸುವಂತೆ ಸೂಚಿಸುತ್ತಾರೆ. ಇದು ಯಾವುದನ್ನೂ ಅನುಸರಿಸದೆ ಇದ್ದಾಗ  ಯುದ್ಧ ಸಾರುವುದು. ಆದರೆ ಖುತೈಬತ್ʼಬಿನು ಮುಸ್ಲಿಮ್ ಸಮರ್ʼಖಂದ್ ತಲುಪಿ ನೇರವಾಗಿ ಊರನ್ನು ವಶಪಡಿಸಿಕೊಳ್ಳುತ್ತಾರೆ. ಈ ಕ್ರಮ ಅಲ್ಲಿನ ಜನರಿಗೆ ಒಪ್ಪಿಗೆಯಾಗುವುದಿಲ್ಲ. ಇದಕ್ಕೊಂದು ಪರಿಹಾರ ಕಾಣಬೇಕೆಂದು ಜನರು  ಸಭೆ ಕರೆದು ಚರ್ಚಿಸಿ ಡಮಸ್ಕಸಿನ ರಾಜ ಸನ್ನಿಧಿಗೆ ತೆರಳಲು ಒಬ್ಬರನ್ನು ಆಯ್ಕೆ ಮಾಡುತ್ತಾರೆ. ಕಳುಹಿಸಿಕೊಡುವ ವ್ಯಕ್ತಿಯೊಂದಿಗೆ ಹೇಳುತ್ತಾರೆ; ಇವರಿಗೆ ಡಮಸ್ಕಸಿನಲ್ಲಿ ನೀತಿವಂತರಾದ ರಾಜನೊಬ್ಬರು ಇದ್ದಾರೆ. ನೀನು ಅರಬಿ ಬಲ್ಲವನಾಗಿರುವೆಯಲ್ವಾ...ನೀನು ರಾಜ ಸನ್ನಿಧಿಗೆ ತೆರಳಲು ತೃಪ್ತಿವಂತನೇ..?" ಆ ವ್ಯಕ್ತಿ ಸಂತೋಷದಿಂದ "ಹಾ...ನಾನು ತಯಾರಾಗಿರುವೆನು." ಎನ್ನುತ್ತಾ ಸಂತೋಷಭರಿತನಾಗಿ ಭೂಮಿಯೆಲ್ಲವೂ ತನ್ನ ಅಧೀನಕ್ಕೆ ಸಿಕ್ಕ ಖುಷಿಯಂತೆ, ತನಗೆ ದೊರಕಿರುವುದು ದೊಡ್ಡ ಅನುಗ್ರಹವೆಂದಿನಿಸುತ್ತಾ ಜ್ಯೋತಿಷ್ಯರ ಬಳಿ ಹೋಗಿ "ನಾನು ಈ ಕರ್ತವ್ಯವನ್ನು ಸರಿಯಾಗಿ ನಿರ್ವಹಿಸುವೆನು" ಎಂದು ಹೇಳಿ ಸಮರ್ʼಖಂದ್ ಊರ ಬಿಟ್ಟು ಯಾತ್ರೆಯಾಗುತ್ತಾನೆ. ಡಮಸ್ಕಸಿನ ರಾಜ ಉಮರ್ʼಬಿನ್ ಅಬ್ದಿಲ್ ಅಝೀಝರಿಗೆ ಕೊಡಲು 
ಪತ್ರ ಬರೆದು ಕೊಡುತ್ತಾರೆ. ಪತ್ರದಲ್ಲಿ 'ಸಮರ್ʼಖಂದನ್ನು ಮುಸ್ಲಿಮರು ವಶಪಡಿಸಿಕೊಂಡಿದ್ದಾರೆ. ನಮಗೆ ನ್ಯಾಯ ದೊರಕಬೇಕು' ಎಂದು ಬರೆದಿಡುತ್ತಾರೆ. ಆ ವ್ಯಕ್ತಿ ಪತ್ರವ
ಹಿಡಿದು ರಾತ್ರಿ-ಹಗಲೆನ್ನದೆ ನಿದ್ದೆಗೆಟ್ಟು ಹೆಜ್ಜೆಯಿಡುತ್ತಾರೆ. ವಾರಗಳು ತಿಂಗಳುಗಳು ಕಳೆದಂತೆ ಇಸ್ಲಾಮಿನ ವಿಶಾಲವಾದ ಸಾಮ್ರಾಜ್ಯಕ್ಕೆ ಪ್ರವೇಶವಾಗುತ್ತಾರೆ. ಸಮರ್ʼಖಂದಿನಿಂದ ಬುಖಾರಾ,ಬಲ್ಖ್,ಅಫ್ಘಾನಿಸ್ತಾನ್, ಹರ್ರಾತ್, ಖಝ್ವೀನ್, ಮೌಸಿಲ್, ಹಲಬ್ ಈ ಊರ ದಾಟಿಯಾಗಿದೆ  ಡಮಸ್ಕಸ್ ತಲುಪಬೇಕಾದದ್ದು.

 ವ್ಯಕ್ತಿ 
ಹೀಗೆ ಅಡಿಯಿಡುತ್ತಾ ಒಂದೊಂದು ಊರನ್ನು ದಾಟಿ ಸಾಗುತ್ತಾರೆ. ಒಂದು ಊರನ್ನು ದಾಟಿ ಇನ್ನೊಂದು ಊರಿಗೆ ಪ್ರವೇಶವಾಗ ಸಮರ್ʼಖಂದಿಗಿಂತ ಹಸಿರ ಹೊತ್ತ ಪರಿಸರವನ್ನು, ಸಂಸ್ಕಾರಯುತವಾದ, ಸೌಂದರ್ಯಪೂರಿತ ಊರನ್ನು ಅನುಭವಿಸುತ್ತಾ ನಡೆಯುತ್ತಾನೆ. ಹೀಗೆ ತಿಂಗಳುಗಟ್ಟಲೆ ಯಾತ್ರೆಗೈದು 'ಭೂಲೋಕದ ಕಿರೀಟ'ವೆಂದು ಕರೆಯಲ್ಪಡುವ ಡಮಸ್ಕಸಿಗೆ ತಲುಪುತ್ತಾರೆ. ಐಶ್ವರ್ಯಯುತವಾದ, ಹಸಿರುಮಯವಾದ ಊರನ್ನು ಕಂಡು ತನ್ನ ಊರು ಏನೂ ಅಲ್ಲವೆಂದು ಭಾವಿಸುತ್ತಾನೆ. ಸಮರ್ʼಖಂದಿಗೆ ಹೋಲಿಸಿ ನೋಡುವಾಗ ಎಷ್ಟು ಸೌಂದರ್ಯಯುತ ಊರಾಗಿದೆ ಇದು. ಎಲ್ಲವೂ ತನ್ನ ಕೈಯ್ಯಲ್ಲಿರಿಸಿರುವ ರಾಜರಾಗಿದ್ದಾರೆ ಇಲ್ಲಿರುವುದು. ಚೈನಾದಿಂದ ಸ್ಪೈನ್ ವರೆಗೆ ಆಡಳಿತ ನಡೆಸುವ ರಾಜನ ಸನ್ನಿಧಿಗೆಯಾಗಿದೆ ಈ ದೂತನು ತಲುಪಿರುವುದು...

-ಮುಂದುವರಿಯುವುದು...

Comments

Popular posts from this blog

ಗ್ರಹಣ ನಮಾಜಿನ ರೂಪ

ಗ್ರಹಣ ನಮಾಜಿನ ರೂಪ *ಚಂದ್ರಗ್ರಹಣದ ಸುನ್ನತ್ ನಮಾಜು ಎರಡು ರಕಅತ್ ಅಲ್ಲಾಹನಿಗಾಗಿ ಜಮಾಅತ್ತಾಗಿ ನಾನು ನಿರ್ವಹಿಸುವೆನು* ಎಂದು ನಿಯ್ಯತ್ ಮಾಡಿ ಅಲ್ಲಾಹು ಅಕ್ಬರ್ ಎಂದು ಹೇಳಿ ನಮಾಜಿಗೆ ಪ್ರವೇಶಿಸುವು...

ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ. ಲೇ - ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಅಕ್ಕರೆಕೆರೆ.

ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ. ಲೇ - ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಅಕ್ಕರೆಕೆರೆ. ಆಮಿನ ಬೀವಿ ರ.ಅ ಗರ್ಭಿಣಿಯಾಗಿರುವಾಗ ವ್ಯಾಪಾರಕ್ಕಾಗಿ ಸಿರಿಯಾಕ್ಕೆ ಹೋಗಿದ್ದ ಅಬ್ದುಲ್ಲಾಹ್ (ರ.ಅ) ಮರಳಿ ಬರುವಾಗ ಮದೀನದಲ್ಲಿ ವಫಾತಾದರು.ತಂದೆಯ ಮಾವಂದಿರರಾದ ಬನುನ್ನಜ್ಜಾರ್ ಗೋತ್ರದವರ ಬಳಿ ದಫನ ಮಾಡಲಾಯಿತು.ರಬೀವುಲ್ ಹನ್ನೆರಡು ಸೋಮವಾರ ಸುಬಹಿಯ ಸ್ವಲ್ಪ ಮುಂಚೆ ಅಂತ್ಯ ಪ್ರವಾದಿ ಮುಹಮ್ಮದ್ ಮುಸ್ತಫ ಸ.ಅ ಮಕ್ಕಾದಲ್ಲಿ ಜನಿಸಿದರು.ಅಂದು ಕ್ರಿಸ್ತಶಕ 571 ಎಪ್ರಿಲ್ 21 ಆಗಿತ್ತು.ನೆಬಿ ಸ.ಅ ಜನಿಸಿದ ದಿನ ಅತ್ಯಂತ ಸಂತೋಷದಾಯಕವಾದ ದಿನವಾಗಿದೆ.ಮಾನವ ಶ್ರೇಷ್ಠರಾದ ಪ್ರವಾದಿ ಮುಹಮ್ಮದ್ ಸ.ಅ ರವರ ಮುಖಾಂತರ ಮಾನವ ಸಮೂಹವನ್ನು ಅಲ್ಲಾಹು ಅನುಗ್ರಹಿಸಿದ ಸುದಿನವಾಗಿದೆ ಅಂದು.ಮುಸಲ್ಮಾನರು ಈ ಅನುಗ್ರಹಕ್ಕೆ ಕ್ರತಜ್ಞತೆ ಸಲ್ಲಿಸಿ ಅಂದು ಮೀಲಾದುನ್ನಬಿ ಆಚರಣೆ ಮಾಡುತ್ತಾರೆ.ನೆಬಿ ಸ.ಅ ರವರ ಮದಹ್ ಕೀರ್ತನೆಗಳನ್ನು ಹೇಳಿ, ಹಾಡಿಹೊಗಳಿ ದಾನಧರ್ಮಗಳನ್ನು ನೀಡಿ ಸಂತೋಷ ಪ್ರಕಟಿಸುತ್ತಾರೆ.              ಭೂಮಿಯ ಮೇಲೆ ಜನ್ಮವೆತ್ತಿ ಬಂದ ಅತ್ಯಂತ ಉತ್ತಮನಾದ ಮನುಷ್ಯ ನೆಬಿ ಸ.ಅ ಆಗಿದ್ದಾರೆ.ಮುಂಜಿಕರ್ಮ ನಿರ್ವಹಿಸಲ್ಪಟ್ಟ,ಹೊಕ್ಕುಳ ಬಳ್ಳಿ ಕತ್ತರಿಸಲ್ಪಟ್ಟ,ಕಣ್ಣಿಗೆ ಸುರುಮ ಹಾಕಲ್ಪಟ್ಟ ಸ್ಥಿತಿಯಲ್ಲಿ ಸಂಪೂರ್ಣ ಸಂಶುದ್ಧವಾದ ರೀತಿಯಲ್ಲಾಗಿದೆ ಅವರು ಜನಿಸಿದ್ದು.ಅಬೂತಾಲಿಬರ ಮನೆಯಲ್ಲಾಗಿದೆ ಜನನ.ಹೆರಿಗೆ...

ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಕರ ಪಾತ್ರ

ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಕರ ಪಾತ್ರ _✍🏻ಜಹಫರ್ ಸಾಧಿಕ್ ಕಟ್ಟದಪಡ್ಪು_ _ನಮ್ಮ ಸಮಾಜವು ನಮಗೆ ಜನ್ಮ ಕೊಟ್ಟ ತಂದೆ ತಾಯಿಯ ನಂತರ ಮಹತ್ತರವಾದ ಸ್ಥಾನವನ್ನು ಶಿಕ್ಷಕರಿಗೆ ನೀಡಿ ಗೌರವಿಸಿದೆ.  ಶಿಲ್ಪಿ...